Category Archives: Blog

Your blog category

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ಎಎಪಿಯ ರಾಜ್ಯಸಭಾ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ವಜಾ

ನವದೆಹಲಿ ಏಪ್ರಿಲ್ 2: ರಾಜ್ಯಸಭಾ ಸಂಸದ ರಾಘವ್ ಚಡ್ಡಾ (Raghav Chadha) ಅವರನ್ನು ರಾಜ್ಯಸಭಾ ಉಪನಾಯಕನ ಸ್ಥಾನದಿಂದ ವಜಾಗೊಳಿಸಲಾಗಿದೆ. ಈ ಬಗ್ಗೆ ಆಮ್ ಆದ್ಮಿ ಪಕ್ಷ (ಎಎಪಿ) ಇಂದು ರಾಜ್ಯಸಭಾ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ರಾಘವ್ ಚಡ್ಡಾ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಸಮಯ ನೀಡಬಾರದು ಎಂದು ಹೇಳಿದೆ. “ಅಶೋಕ್ ಕುಮಾರ್ ಮಿತ್ತಲ್ ಅವರನ್ನು ರಾಜ್ಯಸಭಾ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ. ಈ ಕುರಿತು ಎಎಪಿ ರಾಜ್ಯಸಭಾ ಕಾರ್ಯದರ್ಶಿಗೆ ಅಧಿಕೃತ ಪತ್ರವನ್ನು ಕಳುಹಿಸಿದೆ” ಎಂದು ಆಮ್ ಆದ್ಮಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ.

ಆಮ್ ಆದ್ಮಿ ಪಕ್ಷದ ಜನಪ್ರಿಯ ನಾಯಕ ರಾಘವ್ ಚಡ್ಡಾ ಈ ಹಿಂದೆ ಭಾರತದಲ್ಲಿ ಪಿತೃತ್ವ ರಜೆಯನ್ನು ಕಾನೂನುಬದ್ಧ ಹಕ್ಕನ್ನಾಗಿ ಮಾಡಬೇಕೆಂದು ಪ್ರತಿಪಾದಿಸುವ ಮೂಲಕ ಸುದ್ದಿಗಳಲ್ಲಿದ್ದರು. ಆರೈಕೆ ಮಾಡುವುದು ಇಬ್ಬರೂ ಪೋಷಕರ ನಡುವೆ ಹಂಚಿಕೆಯ ಜವಾಬ್ದಾರಿಯಾಗಿರಬೇಕು ಎಂದು ಅವರು ವಾದಿಸಿದ್ದರು.

ಇದನ್ನೂ ಓದಿ: MP Raghav Chadha: ರಾಜ್ಯಸಭೆಯಲ್ಲಿ ಎಎಪಿ ಪಕ್ಷದ ನಾಯಕನಾಗಿ ಸಂಸದ ರಾಘವ್ ಚಡ್ಡಾ ನೇಮಕ

ಪ್ರಸ್ತುತ, ಎಎಪಿ ರಾಜ್ಯಸಭೆಯಲ್ಲಿ 10 ಸದಸ್ಯರನ್ನು ಹೊಂದಿದೆ. ಇದರಲ್ಲಿ ಪಂಜಾಬ್‌ನಿಂದ 7 ಮತ್ತು ದೆಹಲಿಯಿಂದ ಮೂವರು ಸೇರಿದ್ದಾರೆ. ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ರಾಘವ್ ಚಡ್ಡಾ 2012ರಲ್ಲಿ ಎಎಪಿ ಸ್ಥಾಪನೆಯಾದಾಗಿನಿಂದ ಪಕ್ಷದಲ್ಲಿದ್ದಾರೆ. ಅವರು ಅರವಿಂದ್ ಕೇಜ್ರಿವಾಲ್ ಅವರ ಆಪ್ತ ವಲಯದಲ್ಲೂ ಗುರುತಿಸಿಕೊಂಡಿದ್ದಾರೆ. ಇದಲ್ಲದೆ, ಅವರು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿಯೂ ಸೇವೆ ಸಲ್ಲಿಸಿದ್ದರು.

ರಾಘವ್ ಚಡ್ಡಾ ಮೇಲ್ಮನೆಯ ಅತ್ಯಂತ ಕಿರಿಯ ಸದಸ್ಯರಲ್ಲಿ ಒಬ್ಬರು. ಅವರು ದೆಹಲಿ ಜಲ ಮಂಡಳಿಯ ಉಪಾಧ್ಯಕ್ಷರಾಗಿ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ತಟ್ಟೆ ತೊಳೆದ ಪ್ರಿಯಾಂಕಾ ಚೋಪ್ರಾ’, ‘ಕಸ ಗುಡಿಸಿದ ಜಗ್ಗೇಶ್’ ಒಂದೇ ಅಲ್ಲವೇನು?

ಭಾರತ ಮೂಲದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಇತ್ತೀಚೆಗೆ ಅಮೃತಸರ ಗೋಲ್ಡನ್ ಟೆಂಪಲ್​​ನಲ್ಲಿ ಭಕ್ತರು ತಿಂದುಂಡ ತಟ್ಟೆ, ಲೋಟ ತೊಳೆದಿದ್ದು ದೊಡ್ಡ ಸುದ್ದಿಯಾಯ್ತು. ಇದೀಗ ಆ ಸುದ್ದಿಯನ್ನು ಕನ್ನಡದ ಜನಪ್ರಿಯ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಪ್ರಶ್ನೆಯೊಂದನ್ನು ಎತ್ತಿದ್ದಾರೆ. ತಟ್ಟೆ ಲೋಟ ತೊಳೆದ ಪ್ರಿಯಾಂಕಾ ಚೋಪ್ರಾಗೆ ಭೇಷ್ ಎಂದ ರಾಯರ ಮಠದಲ್ಲಿ ಜನ ಕಸ ಗುಡಿಸಿದ ತಮ್ಮನ್ನು ಅಣಕಿಸಿದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಎರಡು ಅಪಘಾತದ ವಿಷಯವನ್ನೂ ಸಹ ಹಂಚಿಕೊಂಡಿದ್ದಾರೆ.

ರಾಯರ ಭಕ್ತರಾಗಿರುವ ಜಗ್ಗೇಶ್ ಅವರು ರಾಯರ ಮಠದಲ್ಲಿ ಕಸ ಗುಡಿಸುತ್ತಿರುವ ವಿಡಿಯೋಕ್ಕೆ ಸಾಕಷ್ಟು ಟೀಕೆ ಹಿಂದೆ ವ್ಯಕ್ತವಾಗಿತ್ತು, ಆದರೆ ಈಗ ಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದಿದ್ದನ್ನು ಹೊಗಳಲಾಗುತ್ತಿದೆ ಎಂದಿರುವ ಜಗ್ಗೇಶ್ ಅವರು, ತಮಗೆ ಆದ ಎರಡು ಅಪಘಾತಗಳ ಮಾಹಿತಿಯನ್ನು ಹಂಚಿಕೊಂಡಿರುವ ಜೊತೆಗೆ ತಾವೇಕೆ ರಾಯರ ಮಠದಲ್ಲಿ ಕಸ ಗುಡಿಸಿದೆ ಎಂಬುದನ್ನು ಸಹ ಹೇಳಿದ್ದಾರೆ.

ಜ್ಯೋತಿಷ್ಯದಲ್ಲಿ ನಂಬಿಕೆ ಇರಿಸುವ ಜಗ್ಗೇಶ್ ಅವರು ಗ್ರಹಗಳ ಕಾರಣದಿಂದಾಗಿ ತಮಗೆ ಅಪಘಾತ ಸಂಭವಿಸಲಿದೆ ಎಂಬುದನ್ನು ಅರಿತು ದೋಷ ನಿವೃತ್ತಿಗೆ ಆಲಯ ಗುಡಿಸುವ ಸೇವೆ ಮಾಡಬೇಕೆಂದು, ಇದೇ ಶ್ರೇಷ್ಠ ಪರಿಹಾರ ಎಂದು ರಾಯರ ಮಠದ ಕಸಗುಡಿಸುವ ಸೇವೆ ಮಾಡಿದರಂತೆ. ಇದರಿಂದ ದೋಷಕ್ಕೆ ಪರಿಹಾರವಾಯ್ತು, ಅಪಘಾತ ಆದರೂ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಭಕ್ತರು ತಿಂದುಂಡ ತಟ್ಟೆ-ಲೋಟ ತೊಳೆದ ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ

ದೆಹಲಿಯಲ್ಲಿ ತಮ್ಮ ಕಾರಿಗೆ ಮುಂದೆ ಮತ್ತು ಹಿಂದೆಯಿಂದಲೂ ಕೆಲವು ಕಾರುಗಳ ಢಿಕ್ಕಿ ಆದವೆಂದು ಆದರೆ ತಮಗಾಗಲಿ, ಕಾರಿನಲ್ಲಿದ್ದ ತಮ್ಮ ಸಿಬ್ಬಂದಿಗಾಗಲಿ ಏನೂ ಅಪಾಯ ಆಗಲಿಲ್ಲ ಎಂದಿದ್ದಾರೆ ಜಗ್ಗೇಶ್. ಚಾಲಕನ ಅಚಾತುರ್ಯದಿಂದ ತಮ್ಮ ಕಾರು ಮರಕ್ಕೆ ಢಿಕ್ಕಿ ಆಗಿ ಅಪಘಾತವಾಯ್ತು, ಹಾಗೂ ಕಾರಿನ ರಿಪೇರಿಗೆ ಲಕ್ಷ ರೂಪಾಯಿಗಳು ಖರ್ಚಾದುವೆಂದು ಆದರೆ ತಮಗೆ ಏನೂ ಆಗಲಿಲ್ಲ ಎಂದು ಜಗ್ಗೇಶ್ ಮಾಹಿತಿ ಹಂಚಿಕೊಂಡಿದ್ದಾರೆ.

ಯಾರೇ ಆಗಲಿ ದೇವರ ನಂಬಿಕೆ ಇದ್ದವರ ಸೇವೆಯ ಕಾರಣ ಅರಿಯಬೇಕೆ ಹೊರತು, ಅವರ ಕಾರ್ಯ(ವಿಶೇಷವಾಗಿ ಸೆಲಿಬ್ರಿಟಿಗಳ ವೈಯಕ್ತಿಕ ವಿಷಯ) ಕದ್ದು ಚಿತ್ರೀಕರಿಸಿ ಜಾಲತಾಣಕ್ಕೆ ಹಾಕಿ ಬರುವ ಕೆಟ್ಟ ಸಂದೇಶ ನೋಡಿ ವಿಕೃತ ಆನಂದ ಚರ್ಚೆ ಮಾಡಬಾರದು. ಅಣಕ, ಅಪಹಾಸ್ಯ, ದೇವರ ಸೇವೆ ಮಾಡುವ ಮನುಷ್ಯನಿಗೆ ಮಾಡಿದಾಗ ಅವನ ದೋಷ ಅಣಕ ಮಾಡಿದವನಿಗೆ ಸುತ್ತಿಕೊಂಡು ಅವನ ಯಶಸ್ಸು ಕುಂಟಿತವಾಗುತ್ತದೆ ಎಂದು ಜಗ್ಗೇಶ್ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಏಪ್ರಿಲ್ 10ರಿಂದ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆ 2026: ಭವಿಷ್ಯದ ಹೆಜ್ಜೆಗಳನ್ನು ಗುರುತಿಸಿ

ಬೆಂಗಳೂರು, ಏಪ್ರಿಲ್ 2: ವಿದ್ಯಾರ್ಥಿ ಜೀವನದಲ್ಲೇ ಸರಿಯಾದ ಕರಿಯರ್ ಆಯ್ಕೆ ಮಾಡಿಕೊಳ್ಳುವುದು ಬಹಳ ಮುಖ್ಯ, ಹಾಗು ಬಹಳ ಕಷ್ಟಕರ ಕೆಲಸವೂ ಹೌದು. ಈ ಕಾರ್ಯವನ್ನು ಸುಲಭವಾಗಿಸಬಲ್ಲುದು ಟಿವಿ9 ಕನ್ನಡ ಎಜುಕೇಶ್ ಸಮಿಟ್ 2026 (TV9 Kannada Education Summit). ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಏಪ್ರಿಲ್ 10ರಿಂದ 12ರವರೆಗೆ ಮೂರು ದಿನಗಳ ಕಾಲ ನಡೆಯುವ ಮಹಾ ಕಾರ್ಯಕ್ರಮ ಶಿಕ್ಷಣದ ಭವಿಷ್ಯ ಹೆಜ್ಜೆಗಳನ್ನು ಗುರುತಿಸಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಅದ್ಭುತವಾದ ವೇದಿಕೆ ಇದಾಗಿದೆ.

ನಿಮ್ಮ ಕನಸುಗಳು ತೆರೆಯಲು ಅನುವಾಗಿಸಿ…

ನೀವು ಉನ್ನತ ಶಿಕ್ಷಣ ಮಾಡಬೇಕೆಂದು ಆಲೋಚಿಸುತ್ತಿದ್ದು, ಯಾವ ಕೋರ್ಸ್ ಆಯ್ದುಕೊಳ್ಳಬೇಕು, ಎಲ್ಲಿ ಅವಕಾಶಗಳಿವೆ ಎಂದು ಅರಸುತ್ತಿರುವ ವಿದ್ಯಾರ್ಥಿಯಾಗಿದ್ದರೆ ಇಗೋ ನಿಮಗಾಗಿ ಇದೆ ಟಿವಿ9 ಕನ್ನಡ ಎಜುಕೇಶ್ ಸಮಿಟ್. ಹಾಗೆಯೇ, ನಿಮ್ಮ ಮಗ ಅಥವಾ ಮಗಳ ಶಿಕ್ಷಣದ ದಿಕ್ಕುದೆಸೆ ನಿರ್ಧರಿಸಬೇಕೆಂದಿರುವ ಪೋಷಕರು ನೀವಾಗಿದ್ದರೆ ನಿಮಗೂ ಒಳ್ಳೆಯ ಪ್ಲಾಟ್​ಫಾರ್ಮ್ ಇದು. ಈ ಎಜುಕೇಶನ್ ಸಮಿಟ್​ನಲ್ಲಿ ಅಗ್ರಮಾನ್ಯ ಕಾಲೇಜುಗಳು, ಯೂನಿವರ್ಸಿಟಿಗಳು ಒಂದೇ ವೇದಿಕೆಯಲ್ಲಿ ಕಾಣಸಿಗುತ್ತವೆ. ಪೋಷಕರು ಮತ್ತು ವಿದ್ಯಾರ್ಥಿಗಳು ಒಂದೇ ಕಡೆ ಎಲ್ಲವನ್ನೂ ಅವಲೋಕಿಸಿ ಮಾಹಿತಿ ತಿಳಿದುಕೊಳ್ಳಬಹುದು.

ವಿವಿಧ ಕೋರ್ಸ್​ಗಳ ಪ್ರಪಂಚವೇ ಅನಾವರಣ

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಟಿವಿ9 ಕನ್ನಡ ಶಿಕ್ಷಣ ಶೃಂಗಸಭೆಯಲ್ಲಿ ಅನೇಕ ವಿಭಾಗಗಳಲ್ಲಿ ಯಾವ್ಯಾವ ಕೋರ್ಸ್​ಗಳು ಲಭ್ಯ ಇವೆ ಎಂಬುದನ್ನು ತಿಳಿಯಬಹುದು. ಈ ಕೆಳಕಾಣಿಸಿದ ವಿಭಾಗಗಳ ಕೋರ್ಸ್​ಗಳ ಮಾಹಿತಿ ಅಲ್ಲಿ ಸಿಗುತ್ತದೆ:

  • ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ
  • ಔಷಧ ಮತ್ತು ಹೆಲ್ತ್​ಕೇರ್
  • ಫಾರ್ಮಸಿ
  • ಮ್ಯಾನೇಜ್ಮೆಂಟ್ ಮತ್ತು ಬ್ಯುಸಿನೆಸ್ ಸ್ಟಡೀಸ್
  • ಕಲೆ ಮತ್ತು ವಿಜ್ಞಾನ
  • ಕಾಮರ್ಸ್ ಮತ್ತು ಫೈನಾನ್ಸ್
  • ಹೋಟೆಲ್ ಮ್ಯಾನೇಜ್ಮೆಂಟ್
  • ಅನಿಮೇಶನ್ ಮತ್ತು ಕ್ರಿಯೇಟಿವ್ ಕ್ಷೇತ್ರ
  • ಅಗ್ನಿ ಶಾಮಕ ಹಾಗೂ ತಜ್ಞ ಕೋರ್ಸ್

ಇವಲ್ಲದೆ ಇನ್ನೂ ಹಲವು ವಿಭಾಗಗಳಲ್ಲಿ ಕೋರ್ಸ್​ಗಳಿದ್ದು, ಅವೆಲ್ಲವನ್ನೂ ಅವಲೋಕಿಸಬಹುದು. ಎಐ ಕಲಿಯಲು ಇರುವ ಕೋರ್ಸ್​ಗಳ ಬಗ್ಗೆ ಮಾರ್ಗದರ್ಶನ ಪಡೆಯಬಹುದು.

ತಜ್ಞರಿಂದ ನೇರವಾಗಿ ಮಾಹಿತಿ ಪಡೆಯಿರಿ…

ಟಿವಿ9 ಕನ್ನಡ ಎಜುಕೇಶನ್ ಸಮಿಟ್​ನಲ್ಲಿ ಕಾಣುವ ಬಹಳ ಮುಖ್ಯ ಸಂಗತಿ ಎಂದರೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಮಾರ್ಗದರ್ಶನ ಕೊಡಲು ಅಪ್ಪಟ ವೃತ್ತಿಪರರು ಉಪಸ್ಥಿತರಿರುತ್ತಾರೆ. ಶಿಕ್ಷಣ ಸಂಸ್ಥೆಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ ನಿಮ್ಮ ಸಂದೇಹ, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಕೋರ್ಸ್​ಗಳ ಆಳ ಅಗಲ; ಅಡ್ಮಿಶನ್ ಆಗುವುದು ಹೇಗೆ; ಕೋರ್ಸ್ ಸೇರಲು ಅರ್ಹತಾ ಮಾನದಂಡ; ಪ್ರವೇಶ ಪರೀಕ್ಷೆ; ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಅವಕಾಶ ಇರುತ್ತದೆ.

ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2026 ವಿವರ

  • ಸಮಿಟ್ ದಿನಾಂಕ: 2026ರ ಏಪ್ರಿಲ್ 10, 11 ಮತ್ತು 12, ಶುಕ್ರವಾರದಿಂದ ಭಾನುವಾರದವರೆಗೆ
  • ಸಮಯ: ಬೆಳಗ್ಗೆ 10ರಿಂದ ಸಂಜೆ 7ರವರೆಗೆ
  • ಸ್ಥಳ: ಬೆಂಗಳೂರಿನ ಅರಮನೆ ಮೈದಾನ, ತ್ರಿಪುರ ವಾಸಿನಿ.

ಗಮನಿಸಿ: ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶ ಉಚಿತ ಇರುತ್ತದೆ. ಸಾಕಷ್ಟು ಪಾರ್ಕಿಂಗ್ ಸ್ಥಳಾವಕಾಶ ಇರುತ್ತದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ಬುದ್ಧಿವಂತರಿಗೊಂದು ಸವಾಲ್;‌ ಜಸ್ಟ್ 9 ಸೆಕೆಂಡುಗಳಲ್ಲಿ ಈ ಗಾರ್ಡನ್‌ನಲ್ಲಿರುವ ಚಿಟ್ಟೆಯನ್ನು ಗುರುತಿಸಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (Optical Illusion) ಬ್ರೈನ್ ಟೀಸರ್ ಸೇರಿದಂತೆ ಪಝಲ್‌ಗಳನ್ನು ಬಿಡಿಸುವುದು ಹೇಳಿದ್ದಷ್ಟು ಸುಲಭವಲ್ಲ. ಇಂತಹ ಒಗಟಿನ ಆಟಗಳು ನಿಮ್ಮ ದೃಷ್ಟಿ ಹಾಗೂ ಬುದ್ಧಿವಂತಿಕೆಗೆ ಸವಾಲು ಎಸೆದು ತಾಳ್ಮೆಯನ್ನು ಪರೀಕ್ಷಿಸುತ್ತವೆ. ಇದೀಗ ನಿಮ್ಮ ವೀಕ್ಷಣಾ ಕೌಶಲ್ಯವನ್ನು ಪರೀಕ್ಷಿಸುವ ಸಮಯ. ಈ ಇಲ್ಯೂಷನ್ ಚಿತ್ರದಲ್ಲಿ ಬಣ್ಣದ ಚಿಟ್ಟೆಯೊಂದಿದೆ. ನೀವು ಒಂಬತ್ತು ಸೆಕೆಂಡುಗಳೊಳಗೆ ಚಿಟ್ಟೆಯನ್ನು ಗುರುತಿಸಬೇಕು. ನೀವು ಈ ಒಗಟು ಬಿಡಿಸಲು ರೆಡಿ ಇದ್ರೆ, ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ.

ಈ ಚಿತ್ರ ನೋಡಿದಾಗ ಏನು ಕಾಣಿಸಿತು ?

ಇದೀಗ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಉದ್ಯಾನವನವನ್ನು ಕಾಣಬಹುದು. ಇಲ್ಲಿ ಹಚ್ಚಹಸಿರಿನಿಂದ ಕೂಡಿದ ಮರಗಳು ಸಸ್ಯಗಳು ಹಾಗೂ ಬಣ್ಣ ಬಣ್ಣದ ಹೂವುಗಳು ಗೋಚರಿಸುತ್ತವೆ. ಆದರೆ ಈ ಗಾರ್ಡನ್‌ನಲ್ಲಿ ಬಣ್ಣದ ಚಿಟ್ಟೆಯಿದೆ. ನೀವು ಹತ್ತಿರದಿಂದ ನೋಡಿದರೆ ಮಾತ್ರ ಆ ಚಿಟ್ಟೆಯನ್ನು ಗುರುತಿಸಲು ಸಾಧ್ಯ. ನಿರ್ದಿಷ್ಟ ಸಮಯದೊಳಗೆ ಈ ಒಗಟು ಬಿಡಿಸಿ. ನೀವೀಗ ಈ ಸವಾಲನ್ನು ಸ್ವೀಕರಿಸಿದ್ದೀರಾ ಎಂದು ಭಾವಿಸುತ್ತೇವೆ.

ಇದನ್ನೂ ಓದಿ: ಈ ಚಿತ್ರದಲ್ಲಿ ಹುಲಿಗಳ ನಡುವೆ ಅಡಗಿರುವ ಜೀಬ್ರಾವನ್ನು ಕಂಡು ಹಿಡಿಯಬಲ್ಲಿರಾ

ಬಣ್ಣದ ಚಿಟ್ಟೆಯನ್ನು ಗುರುತಿಸಲು ಸಾಧ್ಯವಾಯಿತೇ?

ಇಲ್ಯೂಷನ್ ಚಿತ್ರಗಳನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ನಿಮ್ಮ ಕಣ್ಣನ್ನು ಮೋಸಗೊಳಿಸಿ ನಿಮ್ಮ ಏಕಾಗ್ರತೆಯನ್ನು ಬೇರೆಡೆ ಸೆಳೆಯುತ್ತದೆ. ಈ ಚಿತ್ರ ನೋಡಿದಾಗ ನಿಮಗೂ ಕೂಡ ಹಾಗೆಯೇ ಆಗಿದ್ದೀರಬಹುದು. ಎಷ್ಟೇ ಪ್ರಯತ್ನಿಸಿದರೂ ಚಿಟ್ಟೆ ಕಣ್ಣಿಗೆ ಬಿದ್ದಿಲ್ಲವೇ, ನಿಮ್ಮ ಕಣ್ಣಿಗೆ ಒತ್ತಡ ಹಾಕಬೇಡಿ. ನಿಧಾನವಾಗಿ ಪ್ರತಿಯೊಂದು ಮೂಲೆಯತ್ತ ಕಣ್ಣುಹಾಯಿಸಿ. ಒಂದು ವೇಳೆ ಚಿಟ್ಟೆ ಕಾಣಿಸಿಲ್ಲ ಎಂದಾದರೆ ಚಿಂತಿಸಬೇಡಿ. ನಾವೇ ನಿಮಗೆ ಈ ಕೆಳಗಿನ ಚಿತ್ರದಲ್ಲಿ ಚಿಟ್ಟೆ ಎಲ್ಲಿದೆ ಎಂದು ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಪ್ರಯಾಣಿಕರ ಗಮನಕ್ಕೆ: ಏ 5ರಂದು ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು, ಏಪ್ರಿಲ್​ 02: ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​​) ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್​ 5ರಂದು ಅಂದರೆ ಭಾನುವಾರ ಬೆಳಿಗ್ಗೆ 2 ಗಂಟೆ ನೆರಳೆ ಮಾರ್ಗದಲ್ಲಿ ಮೆಟ್ರೋ ಸೇವೆ (Namma Metro) ತಾತ್ಕಾಲಿಕ ಸ್ಥಗಿತವಾಗಲಿದೆ. ವಿಜಯನಗರ ಮತ್ತು ಅತ್ತಿಗುಪ್ಪೆ ನಿಲ್ದಾಣಗಳಲ್ಲಿ ಅಗತ್ಯ ನಿರ್ವಹಣೆ ಕಾಮಗಾರಿ ಹಿನ್ನೆಲೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್​ಸಿಎಲ್​​ ತಿಳಿಸಿದೆ.

ಭಾನುವಾರದಂದು ಮೆಟ್ರೋ ರೈಲು ಸೇವೆ ತಾತ್ಕಾಲಿಕ ಸ್ಥಗಿತ

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಎಂಆರ್​ಸಿಎಲ್, ನೇರಳೆ ಮಾರ್ಗದ ವಿಜಯನಗರ ಮತ್ತು ಅತ್ತಿಗುಪ್ಪೆ ಮೆಟ್ರೋ ನಿಲ್ದಾಣಗಳ ನಡುವೆ ಏಪ್ರಿಲ್ 5ರಂದು (ಭಾನುವಾರ) ಅಗತ್ಯ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಕಾಮಗಾರಿಯನ್ನು ನೆರವೇರಿಸಲು ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 07ರಿಂದ 09 ಗಂಟೆಯವರೆಗೆ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ರೈಲು ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ನಮ್ಮ ಮೆಟ್ರೋ ಟ್ವೀಟ್​

ಇತರೆ ಎಲ್ಲಾ ವಿಭಾಗಗಳಲ್ಲಿ ಅಂದರೆ, ಚಲ್ಲಘಟ್ಟ ದಿಂದ ಮೈಸೂರು ರಸ್ತೆ, ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ನಿಂದ ವೈಟೀಲ್ಡ್ (ಕಾಡುಗೋಡಿ), ಮಾದಾವರದಿಂದ ರೇಷ್ಮೆ ಸಂಸ್ಥೆ ಮತ್ತು ಆ‌ರ್.ವಿ.ರಸ್ತೆಯಿಂದ ಬೊಮ್ಮಸಂದ್ರ ನಡುವಿನ ಮೆಟ್ರೋ ರೈಲು ಸೇವೆಗಳು ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಬೆಳಿಗ್ಗೆ 07 ಗಂಟೆಯಿಂದ ವೇಳಾಪಟ್ಟಿಯಂತೆ ಸಂಚರಿಸಲಿವೆ.

ಇದನ್ನೂ ಓದಿ: ಐಪಿಎಲ್ ಕ್ರೇಜ್: ಪಂದ್ಯ ಮುಗಿದ 50 ನಿಮಿಷಗಳಲ್ಲಿ ನಮ್ಮ ಮೆಟ್ರೋದಲ್ಲಿ ಬರೋಬ್ಬರಿ 22,000 ಜನ ಪ್ರಯಾಣ!

ಬೆಳಿಗ್ಗೆ 09 ಗಂಟೆಯ ನಂತರ ನಾಡಪ್ರಭು ಕೆಂಪೇಗೌಡ ನಿಲ್ದಾಣ-ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಮೆಟ್ರೋ ಸೇವೆಗಳು ಎಂದಿನಂತೆ ಸಂಚರಿಸಲಿವೆ. ಹೀಗಾಗಿ ನಮ್ಮ ಮೆಟ್ರೋ ಪ್ರಯಾಣಿಕರು ಬದಲಾವಣೆಗಳನ್ನು ಗಮನಿಸಿ ಪ್ರಯಾಣಿಸುವಂತೆ ಮತ್ತು ಸಹಕರಿಸುವಂತೆ ಬಿಎಂಆರ್​ಸಿಎಲ್​ ವಿನಂತಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರವಾಸಿಗರ ಸ್ವರ್ಗದಲ್ಲಿ ಹೊಸ ರೂಲ್ಸ್: ಚಿಕ್ಕಮಗಳೂರು ಟ್ರಿಪ್ ಹೋಗುವವರು ತಿಳಿದುಕೊಳ್ಳಲೇಬೇಕು

ಚಿಕ್ಕಮಗಳೂರು, (ಏಪ್ರಿಲ್ 02):  ಕರ್ನಾಟಕದ ನೆಚ್ಚಿನ ಪ್ರವಾಸಿ ತಾಣವಾದ ಕಾಫಿನಾಡು ಚಿಕ್ಕಮಗಳೂರಿನ (Chikmagalur) ಪ್ರಸಿದ್ಧ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಹೊಸ ನಿಯಮ ಜಾರಿ ಮಾಡಲಾಗಿದೆ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ವಿಶ್ವ ಪ್ರಸಿದ್ಧ ಎತ್ತರದ ಶಿಖರ ಮುಳ್ಳಯ್ಯನಗಿರಿ (Mullayanagiri) ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಹೊಸ ರೂಲ್ಸ್ ಮಾಡಲಾಗಿದೆ. ಹೌದು…ಮುಳ್ಳಯ್ಯನಗಿರಿಯಲ್ಲಿ ಕಾಲ ಕಳೆಯಲು ಪ್ರವಾಸಿಗರಿಗೆ ಮೂರು ಗಂಟೆಗಳ ಸಮಯ ನಿಗದಿ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಹಾಗೇ ಮುಳ್ಳಯ್ಯನಗಿರಿ ,ಸೀತಾಳಯ್ಯನಗಿರಿ ಭಾಗದಲ್ಲಿ ಅಡುಗೆ ಮಾಡುವುದು ಹಾಗೂ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ.

ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ತೆರಳದಂತೆ ಪ್ರವಾಸೋದ್ಯಮ ಇಲಾಖೆ ಸೂಚನ ಫಲಕಗಳ ಅಳವಡಿಸಿದೆ. ಇನ್ನು ಪ್ರವಾಸಿಗರು ಝರಿ ಫಾಲ್ಸ್ ಗೆ ಕಾಲ್ನಡಿಗೆಯಲ್ಲಿ ತೆರಳಲು ಅನುಮತಿ ನೀಡಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ನಾಗರಾಜ್ ವರು ಆದೇಶ ಹೊರಡಿಸಿದ್ದಾರೆ.

ಪ್ರವಾಸಿಗರ ಸ್ವರ್ಗ ಚಿಕ್ಕಮಗಳೂರು

ಕರ್ನಾಟಕದಲ್ಲಿ ಪ್ರಕೃತಿ ಸೌಂದರ್ಯದೊಂದಿಗೆ ಪ್ರವಾಸಿ ತಾಣಗಳನ್ನು ನೋಡಬೇಕೆಂದರೆ ಚಿಕ್ಕಮಗಳೂರಿಗೆ ಹೋಗಬೇಕು. ಬೆಂಗಳೂರಿನಿಂದ ಚಿಕ್ಕಮಗಳೂರು ಸುಮಾರು 250 ರಿಂದ 265 ಕಿ.ಮೀ ದೂರದಲ್ಲಿದ್ದು, ಚಿಕ್ಕಮಗಳೂರಿನಲ್ಲಿ ನೋಡಬೇಕಾದ ಸಾಕಷ್ಟು ಪ್ರವಾಸಿ ಆಕರ್ಷಣೆಗಳಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಮಾಣಿಕ್ಯಧಾರ ಜಲಪಾತ, ಕಲ್ಹಟ್ಟಿ ಜಲಪಾತ, ಮುಳ್ಳಯ್ಯನಗಿರಿ, ಹೆಬ್ಬೆ ಜಲಪಾತ, ಬಾಬಾ ಬುಡನ್‌ಗಿರಿ, ಕೆಮ್ಮಣ್ಣುಗುಂಡಿ, ಭದ್ರಾ ವನ್ಯಜೀವಿ ಧಾಮ, ಕಾಫಿ ವಸ್ತು ಸಂಗ್ರಹಾಲಯ, ಕದಂಬಿ ಜಲಪಾತ, ಝಡ್ ಪಾಯಿಂಟ್ ಸೇರಿದಂತೆ ಇನ್ನು ಹಲವಾರು ಪ್ರವಾಸಿ ತಾಣಗಳು ಪ್ರವಾಸಿಗರ ಕಣ್ಮನಸೆಳೆಯುವಂತಿವೆ.

ಚಳಿಗಾಲದಲ್ಲಿ ಜಿನುಗುವ ಮಂಜು ನೋಡುವುದೇ ಒಂದು ಮಜಾ. ಇನ್ನು ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಅಲ್ಲಿ ಹಚ್ಚ ಹಸಿರಿನಿಂದ ಕೂಡಿರುತ್ತೆ. ಕಣ್ಣು ಹಾಯಿಸುವ ಕಡೆಗಳಲ್ಲಿ ವಿವಿಧ ಬಗೆಯ ಹೂವುಗಳು ಗಿಡಿ ಮರಗಳ ಪ್ರಕೃತಿ ಸೌಂದರ್ಯವನ್ನು ಸವಿಯಬಹುದು.

ನೀವೇನಾದರೂ ಚಿಕ್ಕಮಗಳೂರು ಟ್ರಿಪ್ ಹೋಗುವ ಪ್ಲ್ಯಾನ್ ಮಾಡಿದರೆ ಮೇಲೆ ತಿಳಿಸಲಾದ ನಿಯಮಗಳನ್ನು ತಿಳಿದುಕೊಂಡು ಹೋಗಿ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ: ಪತಿಯಿಂದಲೇ ದಾರುಣವಾಗಿ ಪತ್ನಿಯ ಹತ್ಯೆ

ಬೆಂಗಳೂರು, ಏಪ್ರಿಲ್​​ 02: ಹಣಕಾಸಿನ ವಿಚಾರಕ್ಕೆ ಪತ್ನಿ ಮತ್ತು ಗಂಡನ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ (Bengaluru) ಪೀಣ್ಯಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗಸಂದ್ರದಲ್ಲಿ ನಡೆದಿದೆ. ಕಾವ್ಯಾ (34) ಮೃತಳಾಗಿದ್ದು, ಹೆಂಡ್ತಿ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದು ಪತಿ ದರಿಯಪ್ಪ ಎಂಬಾತ ಹತ್ಯೆ ಮಾಡಿದ್ದಾನೆ. ಹಣಕಾಸಿನ ವಿಚಾರಕ್ಕೆ ದಂಪತಿ ನಡುವೆ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ನಿನ್ನೆ ಎರಡು ಲಕ್ಷ ಹಣವನ್ನು ಮನೆಯಲ್ಲಿ ತಂದು ಗಂಡ ದರಿಯಪ್ಪಇಟ್ಟಿದ್ದ. ಆ ಹಣವನ್ನು ತನ್ನ ಅಣ್ಣನಿಗೆ ಕೊಡೋದಾಗಿ ಪತ್ನಿ ಗಲಾಟೆ ಮಾಡಿದ್ದು, ಇದೇ ವಿಚಾರಕ್ಕೆ ಕೊಲೆ ನಡೆದಿದೆ.

ಬೆಳಗಾಂ ಮೂಲದವರಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದು, ಸದಾ ಆಸ್ತಿ ಮತ್ತು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಿದ್ದರು. ದರಿಯಪ್ಪ ನಗರದಲ್ಲಿ ಗುತ್ತಿಗೆ ಕೆಲಸ ಮಾಡ್ತಿದ್ದ ಎನ್ನಲಾಗಿದೆ ಘಟನಾ ಸ್ಥಳಕ್ಕೆ ಪೀಣ್ಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ನಡುವೆ ದರಿಯಪ್ಪ ಸ್ನೇಹಿತ ವೆಂಕಟಾಚಲಯ್ಯ ಸ್ಫೋಟಕ ಆರೋಪ ಮಾಡಿದ್ದು, ಆತನಿಗೆ ಹುಡುಗಿಯರ ಶೋಕಿ ವಿಪರೀತವಾಗಿತ್ತು. ಬೇರೆ ಹೆಣ್ಣುಮಕ್ಕಳ ಜೊತೆ ಇರುವ ಫೋಟೊವನ್ನ ತನ್ನ ಹೆಂಡತಿಗೇ ತೋರಿಸುತ್ತಿದ್ದ. ಇದರಿಂದಾಗಿ ಕಾವ್ಯಾ ಸಾಕಷ್ಟು ನೊಂದಿದ್ದರು. ಇದೇ ವಿಚಾರವಾಗಿ ನಾನು ಹಲವು ಬಾರಿ ರಾಜಿ ಮಾಡಿಸಿದ್ದೆ. ನಂತರ ಇತ್ತೀಚೆಗೆ ಮನೆ ಖಾಲಿ ಮಾಡಿ ಇಲ್ಲಿಗೆ ಬಂದು, ನಮ್ಮ ಸಂಪರ್ಕ ತಪ್ಪಿಸಿದ್ದ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:  ಪ್ರಾಧ್ಯಾಪಕನ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ; ಆತ್ಮಹತ್ಯೆಗೂ ಮುನ್ನ ವಿದ್ಯಾರ್ಥಿನಿ ಬರೆದ ಡೆತ್​​ನೋಟ್​​ನಲ್ಲಿ ಸ್ಫೋಟಕ ಮಾಹಿತಿ

ವಿದ್ಯುತ್​ ಶಾಕ್​​ ತಗುಲಿ ಮಹಿಳೆ ದುರ್ಮರಣ

ಮನೆಯಲ್ಲಿ ನೀರು ಕಾಯಿಸುವಾಗ ವಿದ್ಯುತ್​ ಸ್ಪರ್ಶಿಸಿ ಗೃಹಿಣಿಯೋರ್ವಳು ದಾರುಣವಾಗಿ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. ನಿವೇದಿತಾ ನಾಯ್ಕರ್(24) ಮೃತರಾಗಿದ್ದು, ಬಕೆಟ್​​ನಲ್ಲಿ ಕ್ವಾಯಿಲ್ ಮೂಲಕ ಕಾಯಿಸಲು ಇಟ್ಟ ನೀರಿನ ಬಕೆಟ್​​ನ ಆಕಸ್ಮಿಕವಾಗಿ ಮುಟ್ಟಿದ ಕಾರಣ ವಿದ್ಯುತ್​​ ಶಾಕ್​​ ತಗುಲು ಪ್ರಾಣ ಬಿಟ್ಟಿದ್ದಾರೆ, ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

KKR vs SRH IPL 2026 Live Score: ಸೋತ ತಂಡಗಳ ನಡುವೆ ಪಂದ್ಯ

ಐಪಿಎಲ್ 2026 ರ ಆರನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳು ತಮ್ಮ ಆರಂಭಿಕ ಪಂದ್ಯಗಳಲ್ಲಿ ಕಳಪೆ ಆರಂಭವನ್ನು ಪಡೆದಿದ್ದು, ಸೋಲುಗಳನ್ನು ಅನುಭವಿಸಿವೆ. ಆದ್ದರಿಂದ, ಎರಡು ತಂಡಗಳು ಮೊದಲ ಗೆಲುವನ್ನು ಎದುರು ನೋಡುತ್ತಿವೆ.

Source link

ಚಿತ್ರಮಂದಿರಗಳ ಗಟ್ಟಿ ನಿರ್ಧಾರ, ‘ಪೆದ್ದಿ’, ‘ಟಾಕ್ಸಿಕ್’ಗೆ ಸಮಸ್ಯೆ?

ಸಿಂಗಲ್ ಸ್ಕ್ರೀನ್ (Single screen) ಚಿತ್ರಮಂದಿರಗಳು (Theater) ಕಳೆದ ಕೆಲ ವರ್ಷಗಳಿಂದಲೂ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡುತ್ತಲೇ ಇವೆ. ಕೇರಳದಲ್ಲಿ ಈ ಬಗ್ಗೆ ಸ್ವತಃ ರಾಜ್ಯದ ಸಚಿವರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸಿದ್ದು ಸುದ್ದಿ ಆಗಿತ್ತು. ತೆಲುಗು ರಾಜ್ಯಗಳಲ್ಲಿಯೂ ಸಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ನಿರ್ಮಾಪಕರ ಸಂಘ ಇನ್ನಿತರೆಗಳ ಕದ ತಟ್ಟುತ್ತಲೇ ಇದ್ದರು. ಅವರ ಬೇಡಿಕೆಯಲ್ಲಿ ಪ್ರಮುಖವಾದ ಬೇಡಿಕೆ ಲಾಭ ಹಂಚಿಕೆಯದ್ದಾಗಿತ್ತು. ಇದೀಗ ತೆಲಂಗಾಣದ ಪ್ರದರ್ಶಕರು ಇನ್ನು ಮುಂದೆ ತಾವು ಬಾಡಿಗೆ ಮಾದರಿಯಲ್ಲ ಬದಲಿಗೆ ಲಾಭ ಹಂಚಿಕೆ ಮಾದರಿಯಲ್ಲಿಯೇ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ. ಇದು ದೊಡ್ಡ ಸಿನಿಮಾಗಳಿಗೆ ದೊಡ್ಡ ಪೆಟ್ಟನ್ನೇ ನೀಡಲಿದೆ.

ಕರ್ನಾಟಕ ಸೇರಿ ದಕ್ಷಿಣದ ರಾಜ್ಯಗಳಲ್ಲಿ ಚಿತ್ರಮಂದಿರಗಳು ಬಾಡಿಗೆ ಮಾಡೆಲ್​​ನಲ್ಲಿಯೇ ಕೆಲಸ ಮಾಡುವುದು ಹೆಚ್ಚು. ಚಿತ್ರಮಂದಿರಗಳವರಿಗೆ ನಿರ್ಮಾಪಕರು ಅಥವಾ ವಿತರಕರು ನಿಗದಿತ ಬಾಡಿಗೆ ಮೊತ್ತ ನೀಡಿ ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಸಿನಿಮಾ ಓಡಲಿ, ಓಡದೇ ಇರಲಿ ಅವರಿಗೆ ಬಾಡಿಗೆ ಬರುತ್ತದೆ. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಹಾಗಾಗುವುದಿಲ್ಲ ಅಲ್ಲಿ ಲಾಭಾಂಶದ ಹಂಚಿಕೆ ಮಾದರಿ ಇರುತ್ತದೆ. ಮೊದಲ ವಾರ ನಿರ್ಮಾಪಕರಿಗೆ 50% ಹೋದರೆ, ಮುಂದಿನ ವಾರ ಪಿವಿಆರ್ ಅವರಿಗೆ 60, ನಿರ್ಮಾಪಕರಿಗೆ 40 ಹೋಗುತ್ತದೆ. ಹೀಗೆ ವಾರಗಳು ಕಳೆದಷ್ಟೂ ನಿರ್ಮಾಪಕರಿಗೆ ಲಾಭಾಂಶ ಕಡಿಮೆ ಆಗಿ ಮಲ್ಟಿಪ್ಲೆಕ್ಸ್​​ಗಳಿಗೆ ಹೆಚ್ಚಾಗುತ್ತದೆ.

ಇದನ್ನೂ ಓದಿ:‘ಆಕಾಶ್’ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದ ರಮ್ಯಾ, ರಾಘಣ್ಣ: ವಿಡಿಯೋ

ಇದೇ ರೀತಿಯ ಮಾಡೆಲ್ ತಮಗೂ ಬೇಕೆಂದು ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಒತ್ತಾಯಿಸಿದ್ದು, ಇದೀಗ ತೆಲಂಗಾಣದಲ್ಲಿ ಈ ಮಾಡೆಲ್ ಅನ್ನು ಜಾರಿಗೆ ತಂದಿದ್ದು, ನಾಳಿನಿಂದ ಅಂದರೆ ಏಪ್ರಿಲ್ 3 ರಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು 60-50-40 ಮಾದರಿಯಲ್ಲಿ ಲಾಭ ಹಂಚಿಕೆ ಮಾಡಲಿವೆ. ಅಂದರೆ ಮೊದಲ ವಾರ ವಿತರಕರಿಗೆ 60% ಲಾಭ ಹೋಗಲಿದೆ. ಎರಡನೇ ವಾರ 50% ಮೂರನೇ ವಾರ 40% ಮಾತ್ರವೇ ವಿತರಕರ ಅಥವಾ ನಿರ್ಮಾಪಕರ ಪಾಲಾಗಲಿದೆ. ದೊಡ್ಡ ಸಿನಿಮಾಗಳಿಗೆ 2.50% ಹೆಚ್ಚಿನ ಪಾಲು ನೀಡಲಾಗುತ್ತದೆ, ಅದೂ ಟಿಕೆಟ್ ದರ ಹೆಚ್ಚಳ ಮಾಡಿದರೆ ಮಾತ್ರ ಎಂದು ಪ್ರದರ್ಶಕರು ಹೇಳಿದ್ದಾರೆ.

ಆದರೆ ಈ ಪರ್ಸೆಂಟೇಜ್ ವ್ಯವಸ್ಥೆಯಿಂದ ಸಿನಿಮಾಗಳಿಗೆ ಬರುವ ಲಾಭ ಕಡಿಮೆ ಆಗಲಿದೆ. ಅದರಲ್ಲೂ ದೊಡ್ಡ ಸಿನಿಮಾಗಳಿಗೆ, ಸ್ಟಾರ್ ನಟರ ಸಿನಿಮಾಗಳಿಗೆ ಹೊಡೆತ ಬೀಳಲಿದೆ. ಸ್ಟಾರ್ ನಟರ ಸಿನಿಮಾಗಳಿಗೆ ಹೆಚ್ಚು ಆದಾಯ ಬರುತ್ತಿದ್ದಿದ್ದೇ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಆದರೆ ಅಲ್ಲಿಯೂ ಲಾಭಾಂಶ ಹಂಚಿಕೆ ಮಾಡೆಲ್ ಅನುಸರಿಸಿದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಂದ ಬರುತ್ತಿದ್ದ ಲಾಭದಲ್ಲಿ 40 ರಿಂದ 50% ಕಡಿತ ಆಗಲಿದೆ ಎಂಬ ಆತಂಕ ಚಿತ್ರರಂಗವನ್ನು ಕಾಡುತ್ತಿದೆ. ಇದೀಗ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಬಳಿಕ ಯಶ್ ಅವರ ‘ಟಾಕ್ಸಿಕ್’ ಸಹ ಇದೆ. ಈ ಎರಡೂ ಸಿನಿಮಾಗಳಿಗೆ ಪೆಟ್ಟು ಬೀಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ನಿಂದ ಬ್ಯಾನ್ ಆಗಿರುವ ಹ್ಯಾರಿ ಬ್ರೂಕ್​ಗೆ ಪಿಎಸ್​ಎಲ್​ನಿಂದ ಆಹ್ವಾನ

ಒಂದೆಡೆ ಭಾರತದಲ್ಲಿ ಐಪಿಎಲ್ (IPL 2026) ನಡೆಯುತ್ತಿದ್ದರೆ, ಮತ್ತೊಂದೆಡೆ ಪಾಕಿಸ್ತಾನದಲ್ಲಿ ಪಿಎಸ್​ಎಲ್ (PSL) ನಡೆಯುತ್ತಿದೆ. ಆದಾಗ್ಯೂ ಪಿಎಸ್‌ಎಲ್​ಗೆ ಆರಂಭದಲ್ಲೇ ನಾನಾ ಸಂಕಷ್ಟಗಳು ಎದುರಾಗಿವೆ. ಇದರಿಂದಾಗಿ ಪಂದ್ಯಾವಳಿಯನ್ನು ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತಿದೆ. ಇದರ ಜೊತೆಗೆ ಲೀಗ್ ಆರಂಭಕ್ಕೂ ಮುನ್ನ ಕೆಲವು ಆಟಗಾರರು ಲೀಗ್​ನಿಂದ ಹಿಂದೆ ಸರಿದಿದ್ದರು. ಇದೀಗ ಅವರ ಬದಲಿಯಾಗಿ ಕೆಲವು ಫ್ರಾಂಚೈಸಿಗಳು ಬೇರೆ ಆಟಗಾರರ ಮೊರೆ ಹೋಗಿವೆ. ಅದರಂತೆ ಜಿಂಬಾಬ್ವೆಯ ವೇಗದ ಬೌಲರ್ ಬ್ಲೆಸ್ಸಿಂಗ್ ಮುಜರಬಾನಿ ಪಿಎಸ್‌ಎಲ್​ನಲ್ಲಿ ಇಸ್ಲಾಮಾಬಾದ್ ಯುನೈಟೆಡ್ ತಂಡವನ್ನು ತೊರೆದು ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದರು. ಇದೀಗ ಅವರ ಬದಲಿಯಾಗಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್ (Harry Brook) ತಂಡವನ್ನು ಸೇರಲಿದ್ದಾರೆ.

ಹ್ಯಾರಿ ಬ್ರೂಕ್​ಗೆ ಆಹ್ವಾನ

ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಮತ್ತೆ ಆಡಲಿದ್ದಾರೆ. ಇಸ್ಲಾಮಾಬಾದ್ ಯುನೈಟೆಡ್ ತಂಡವು ಬ್ಲೆಸ್ಸಿಂಗ್ ಮುಜರಬಾನಿ ಬದಲಿಗೆ ಹ್ಯಾರಿ ಬ್ರೂಕ್ ಅವರನ್ನು ತಂಡಕ್ಕೆ ನೇಮಿಸಿಕೊಂಡಿದೆ. ಹ್ಯಾರಿ ಬ್ರೂಕ್ ಈ ಹಿಂದೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರ ಆಗಮನದಿಂದ ಇಸ್ಲಾಮಾಬಾದ್ ಯುನೈಟೆಡ್ ತಂಡದ ಬ್ಯಾಟಿಂಗ್‌ ವಿಭಾಗಕ್ಕೆ ಮತ್ತಷ್ಟು ಬಲ ಬಂದಿದೆ.

ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಬ್ಯಾನ್

ಹ್ಯಾರಿ ಬ್ರೂಕ್ ಈ ವರ್ಷ ಐಪಿಎಲ್‌ನಲ್ಲಿ ಆಡುತ್ತಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಅವರನ್ನು ಎರಡು ಆವೃತ್ತಿಗಳ (2026 ಮತ್ತು 2027) ಐಪಿಎಲ್‌ನಿಂದ ನಿಷೇಧಿಸಲಾಗಿದೆ. ವಾಸ್ತವವಾಗಿ ಐಪಿಎಲ್ ಹರಾಜಿನಲ್ಲಿ ಹ್ಯಾರಿ ಬ್ರೂಕ್ ಅವರನ್ನು ದೆಹಲಿ ಕ್ಯಾಪಿಟಲ್ಸ್‌ ಫ್ರಾಂಚೈಸಿ 6.25 ಕೋಟಿ ರೂ.ಗೆ ಖರೀದಿ ಮಾಡಿತ್ತು. ಆದರೆ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ಹೆಚ್ಚು ಆದ್ಯತೆ ನೀಡಿ ಐಪಿಎಲ್ ಒಪ್ಪಂದದಿಂದ ಹಿಂದೆ ಸರಿದಿದ್ದರು. ಬಿಸಿಸಿಐನ ಕಟ್ಟುನಿಟ್ಟಿನ ನೀತಿಯಡಿಯಲ್ಲಿ, ಹರಾಜಿನಲ್ಲಿ ಆಯ್ಕೆಯಾದ ಮತ್ತು ನಂತರ ಗಾಯವಿಲ್ಲದೆ ಪಂದ್ಯಾವಳಿಯಿಂದ ಹಿಂದೆ ಸರಿಯುವ ಆಟಗಾರರು ಎರಡು ವರ್ಷಗಳ ನಿಷೇಧವನ್ನು ಎದುರಿಸುತ್ತಾರೆ.

ಅದರಂತೆ ಐಪಿಎಲ್​ನಿಂದ ಹಿಂದೆ ಸರಿದ ಬ್ರೂಕ್ ಅವರ ದೆಹಲಿ ಕ್ಯಾಪಿಟಲ್ಸ್‌ನೊಂದಿಗಿನ ಒಪ್ಪಂದದ ಎರಡನೇ ಉಲ್ಲಂಘನೆಯಾಗಿದ್ದು, ಇದರ ಪರಿಣಾಮವಾಗಿ ಅವರಿಗೆ ಎರಡು ವರ್ಷಗಳ ನಿಷೇಧದ ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಹ್ಯಾರಿ ಬ್ರೂಕ್ ಮುಂದಿನ ಎರಡು ಆವೃತ್ತಿಗಳ ಐಪಿಎಲ್‌ನಲ್ಲಿ ಆಡಲು ಸಾಧ್ಯವಾಗುವುದಿಲ್ಲ ಅಥವಾ ಹರಾಜಿನಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.

ಹ್ಯಾರಿ ಬ್ರೂಕ್ ವೃತ್ತಿಜೀವನ

ಹ್ಯಾರಿ ಬ್ರೂಕ್ ಕೊನೆಯ ಬಾರಿಗೆ 2022 ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡಿದ್ದರು. ಆ ಆವೃತ್ತಿಯಲ್ಲಿ ಅವರು ಒಟ್ಟು 10 ಪಂದ್ಯಗಳನ್ನು ಆಡಿ264 ರನ್ ಬಾರಿಸಿದ್ದರು. ಇದರಲ್ಲಿ ಒಂದು ಶತಕವನ್ನೂ ಬಾರಿಸಿದ್ದರು. ಆದ್ದರಿಂದ, ಹ್ಯಾರಿ ಬ್ರೂಕ್ ಆಗಮನವು ಇಸ್ಲಾಮಾಬಾದ್ ಯುನೈಟೆಡ್‌ ತಂಡದ ಬ್ಯಾಟಿಂಗ್‌ ಬಲವನ್ನು ಹೆಚ್ಚಿಸಲಿದೆ ಎಂದರೆ ತಪ್ಪಾಗಲಾರದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link