Category Archives: Blog

Your blog category

ಬಗೆದಷ್ಟೂ ಬಯಲಾಗ್ತಿದೆ ಬೇಲೂರು ಸರ್ಕಾರಿ ಆಸ್ಪತ್ರೆ ಕರ್ಮಕಾಂಡ; ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿದ್ದರಾ ಸಿಬ್ಬಂದಿ? – Kannada News | Hassan Hospital Scam: Scanning Machine Stolen in Beluru, Sex Determination Suspected

ಬಗೆದಷ್ಟೂ ಬಯಲಾಗ್ತಿದೆ ಬೇಲೂರು ಸರ್ಕಾರಿ ಆಸ್ಪತ್ರೆ ಕರ್ಮಕಾಂಡ

ಹಾಸನ, ಡಿಸೆಂಬರ್ 21:  ಹಾಸನದ (Hassan) ಬೇಲೂರಿನ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಗಂಭೀರ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದ್ದು, ಆರೋಗ್ಯ ಇಲಾಖೆಗೆ ಭಾರೀ ಮುಜುಗರ ಉಂಟಾಗಿದೆ. ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಸ್ಕ್ಯಾನಿಂಗ್ ಯಂತ್ರ, ಆಕ್ಸಿಜನ್ ಸಿಲಿಂಡರ್‌ಗಳು, ಐಸಿಯು ಮಾನಿಟರ್‌ಗಳು ಸೇರಿದಂತೆ ಹಲವು ಮಹತ್ವದ ವೈದ್ಯಕೀಯ ಉಪಕರಣಗಳು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೇ ಕದ್ದೊಯ್ದ ಯಂತ್ರದಲ್ಲಿ ಭ್ರೂಣ ಲಿಂಗ ಪತ್ತೆ ಮಾಡಲಾಗುತ್ತಿತ್ತಾ ಎಂಬ ಶಂಕೆ ವ್ಯಕ್ತವಾಗಿದೆ.

ಯಂತ್ರ ಕಳವಿನ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

ವರ್ಷಗಳ ಹಿಂದೆ ಆಸ್ಪತ್ರೆಗೆ ಒದಗಿಸಲಾಗಿದ್ದ ಸ್ಕ್ಯಾನಿಂಗ್ ಯಂತ್ರವು ತಜ್ಞರ ಕೊರತೆಯಿಂದ ಬಳಕೆಯಿಲ್ಲದೇ ಇದ್ದು, ಇತ್ತೀಚೆಗೆ ಹೊರಗುತ್ತಿಗೆ ಆಧಾರದಲ್ಲಿ ರೇಡಿಯಾಲಜಿಸ್ಟ್ ನೇಮಕವಾದ ನಂತರ ಯಂತ್ರ ಪರಿಶೀಲನೆಗೆ ಮುಂದಾದಾಗ ಯಂತ್ರವೇ ಆಸ್ಪತ್ರೆಯಲ್ಲಿ ಇಲ್ಲದಿರುವುದು ತಿಳಿದುಬಂದಿದೆ. ಸ್ಕ್ಯಾನಿಂಗ್ ಮಷಿನ್ ಕದ್ದೊಯ್ದು ಭ್ರೂಣ ಲಿಂಗ ಪತ್ತೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ವೇಳೆ ಡಿ ಗ್ರೂಪ್ ನೌಕರ ಪ್ರದೀಪ್ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಸೂಫಿಯಾನ್ ಸೇರಿ ಯಂತ್ರವನ್ನು ತೆಗೆದುಕೊಂಡಿರುವ ದೃಶ್ಯಗಳು ಕಂಡುಬಂದಿದೆ.ಇಬ್ಬರ ವಿರುದ್ದ ಕೇಸ್ ದಾಖಲಿಸಲಾಗಿದೆ. ವಿಚಾರಣೆಯಲ್ಲಿ ಯಂತ್ರವನ್ನು ಕದ್ದು ಮನೆಯಲ್ಲಿಟ್ಟಿದ್ದಾಗಿ ಸಿಬ್ಬಂದಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಇನ್ನೊಂದೆಡೆ ಭ್ರೂಣ ಲಿಂಗ ಪತ್ತೆಗೆ ಬಳಕೆ ಮಾಡಿರುವ ಹಿನ್ನೆಲೆಯಲ್ಲಿ ಪಿಸಿ ಪಿಎನ್ ಡಿಟಿ ಕಾಯಿದೆಯ ಅಡಿಯಲ್ಲಿ ರಚನೆಯಾಗಿರುವ ತಜ್ಞರ ಟೀಂ ಕೂಡ ಯಂತ್ರವನ್ನ ಪರಿಶೀಲನೆಗೆ ಒಳಪಡಿಸಿದೆ. ಈ ಬಗ್ಗೆ ಪ್ರತಿಕ್ರಿಸಿದ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಅನಿಲ್, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳೋದಾಗಿ ಹೇಳಿದ್ದಾರೆ

ಪ್ರಕರಣದ ಗಂಭೀರತೆ ಹಿನ್ನೆಲೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನಿಲ್ ಸೂಚನೆಯ ಮೇರೆಗೆ ಪೊಲೀಸ್ ದೂರು ದಾಖಲಾಗಿದ್ದು, ಇಬ್ಬರು ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.  ಅಧಿಕಾರಿಗಳ ಶಾಮೀಲಾತಿ ಶಂಕಿಸಿ ವಿವಿಧ ಸಂಘಟನೆಗಳು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿ ಸಮಗ್ರ ತನಿಖೆಗೆ ಆಗ್ರಹಿಸಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 11:33 am, Sun, 21 December 25

Source link

ನರೇಂದ್ರ ಮೋದಿ ಬಯೋಪಿಕ್ ‘ಮಾ ವಂದೇ’ ಶೂಟಿಂಗ್ ಶುರು; ರವಿ ಬಸ್ರೂರು ಸಂಗೀತ – Kannada News | Narendra Modi biopic Maa Vande Muhurtha: Ravi Basrur to score the music

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಜೀವನದ ಕುರಿತು ಹೊಸದೊಂದು ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗೆ ‘ಮಾ ವಂದೇ’ (Maa Vande) ಎಂದು ಹೆಸರು ಇಡಲಾಗಿದೆ. ಈಗ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ. ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur) ಅವರು ಈ ಸಿನಿಮಾಗೆ ಸಂಗೀತ ನೀಡಲಿದ್ದಾರೆ ಎಂಬುದು ವಿಶೇಷ. ಮಲಯಾಳಂ ಚಿತ್ರರಂಗದ ಖ್ಯಾತ ನಟ ಉನ್ನಿ ಮುಕುಂದನ್ ಅವರು ಈ ಸಿನಿಮಾದಲ್ಲಿ ನರೇಂದ್ರ ಮೋದಿ ಪಾತ್ರವನ್ನು ಮಾಡಲಿದ್ದಾರೆ. ನರೇಂದ್ರ ಮೋದಿ ಬಯೋಪಿಕ್ ಬಗ್ಗೆ ಅವರ ಅಭಿಮಾನಿಗಳಿಗೆ ಕೌತುಕ ಮೂಡಿದೆ.

ನರೇಂದ್ರ ಮೋದಿ ಅವರ ಜೀವನದ ವಿವರಗಳನ್ನು ಈಗಾಗಲೇ ಬೇರೆ ಬೇರೆ ರೂಪದಲ್ಲಿ ದಾಖಲಿಸಲಾಗಿದೆ. 2019ರಲ್ಲಿ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಆಗಿತ್ತು. ಅದರಲ್ಲಿ ವಿವೇಕ್ ಒಬೆರಾಯ್ ಅವರು ಮೋದಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಬಾಕ್ಸ್ ಆಫೀಸ್​​ನಲ್ಲಿ ಆ ಚಿತ್ರ ಸೋತಿತ್ತು. ನರೇಂದ್ರ ಮೋದಿ ಲುಕ್ ಬಗ್ಗೆ ಟೀಕೆ ವ್ಯಕ್ತವಾಗಿತ್ತು.

ಈಗ ನರೇಂದ್ರ ಮೋದಿ ಅವರ ಖಾಸಗಿ ಬದುಕು ಮತ್ತು ರಾಜಕೀಯ ಜೀವನದ ವಿವರಗಳನ್ನು ಇಟ್ಟುಕೊಂಡು ‘ಮಾ ವಂದೇ’ ಸಿನಿಮಾ ಮಾಡಲಾಗುತ್ತಿದೆ. ಈ ಸಿನಿಮಾವನ್ನು ಸೆಪ್ಟೆಂಬರ್ ತಿಂಗಳಲ್ಲಿ ಘೋಷಿಸಲಾಗಿತ್ತು. ಈಗ ಶೂಟಿಂಗ್ ಆರಂಭ ಆಗಿದೆ. ಮುಹೂರ್ತ ಸಮಾರಂಭದಲ್ಲಿ ಚಿತ್ರತಂಡದವರು ಭಾಗಿ ಆಗಿದ್ದಾರೆ. ಮುಂಬೈನಲ್ಲಿ ಮುಹೂರ್ತ ಮಾಡಲಾಗಿದ್ದು, ರವಿ ಬಸ್ರೂರು ಅವರ ಕೂಡ ಪಾಲ್ಗೊಂಡಿದ್ದಾರೆ.

‘ಮಾ ವಂದೇ’ ಸಿನಿಮಾದ ಮುಹೂರ್ತ ಸಮಾರಂಭದ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ‘ಸಿಲ್ವರ್ ಕಾಸ್ಟ್ ಕ್ರಿಯೇಷನ್ಸ್’ ಮೂಲಕ ವೀರ್ ರೆಡ್ಡಿ ಎಂ. ಅವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕ್ರಾಂತಿ ಕುಮಾರ್ ಸಿ.ಹೆಚ್. ಅವರು ‘ಮಾ ವಂದೇ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಮರಾಠಿ ಮುಂತಾದ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಲಿದೆ.

ಇದನ್ನೂ ಓದಿ:  ನಿಂತೇ ಹೋಯ್ತು ಶಿವಾಜಿ ಬಯೋಪಿಕ್; ಕಾರಣ ತಿಳಿಸಿದ ನಿರ್ದೇಶಕ

ಘಟಾನುಘಟಿ ತಂತ್ರಜ್ಞರು ‘ಮಾ ವಂದೇ’ ಸಿನಿಮಾದ ತಾಂತ್ರಿಕ ಬಳಗದಲ್ಲಿ ಕೆಲಸ ಮಾಡುತ್ತಿದ್ದಾರೆ. ‘ಬಾಹುಬಲಿ’ ಸಿನಿಮಾಗೆ ಛಾಯಾಗ್ರಹಣ ಮಾಡಿದ ಕೆ.ಕೆ. ಸೇಂಥಿಲ್ ಕುಮಾರ್ ಅವರ ಈ ಚಿತ್ರಕ್ಕೂ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’, ‘ಕೆಜಿಎಫ್: ಚಾಪ್ಟರ್ 2’, ‘ಸಲಾರ್’ ಸಿನಿಮಾಗಳಿಂದ ಫೇಮಸ್ ಆದ ರವಿ ಬಸ್ರೂರು ಅವರು ಮೋದಿ ಬಯೋಪಿಕ್​​ಗೆ ಸಂಗೀತ ನೀಡುವ ಅವಕಾಶ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಮಾಜಿ ಸಚಿವ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ – Kannada News | Former Minister KN Rajanna Makes Explosive Statement about DCM DK Shivakumar Meet

ಬೆಂಗಳೂರು, ಡಿಸೆಂಬರ್​ 21: ಶನಿವಾರದಂದು ಡಿಸಿಎಂ ಡಿಕೆ ಶಿವಕುಮಾರ್​ ಮತ್ತು ಮಾಜಿ ಸಚಿವ ಕೆ.ಎನ್​​ ರಾಜಣ್ಣ ಭೇಟಿ ಮಾಡಿದ್ದರು. ಇದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಸದ್ಯ ಈ ವಿಚಾರವಾಗಿ ಮಾಜಿ ಸಚಿವ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಡಿಕೆ ಶಿವಕುಮಾರ್ ಪಾರ್ಟಿ ಅಧ್ಯಕ್ಷರಾಗಿ ಭೇಟಿ ಮಾಡಿದ್ದರು. ಯಾರಿಗೆ ಬೇಕಾದರೂ ಭೇಟಿ ಮಾಡಬಹುದು, ಯಾರನ್ನಾದರೂ ಕರೆದು ಮಾತನಾಡಬಹುದು. ಪಕ್ಷದ ಹಿತದೃಷ್ಟಿಯಿಂದ ಏನೆಲ್ಲಾ ಮಾಡಬೇಕು ಅನಿಸುತ್ತೆ ಅವರು ಮಾಡುತ್ತಾರೆ. ಇದರಲ್ಲಿ ಯಾವುದೇ ಪ್ರಮುಖ ವಿಚಾರ ಇಲ್ಲ. ನಾವು ಯಾವಾಗಲೂ ಸಿದ್ದರಾಮಯ್ಯ ಪರವಾಗಿ ಇದ್ದೇವೆ. ಡಿಕೆ ಶಿವಕುಮಾರ್ ಏನೇ ಪ್ರಯತ್ನ ‌ಮಾಡಿದರು ಕೂಡ ನನ್ನ ಹಿಂದಿನ ಎಲ್ಲ ಹೇಳಿಕೆಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮಂಗಳೂರು: ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಅಂದರ್ – Kannada News | Mangaluru POCSO: Girl Raped for 17 Days by Honeybee Trainer

ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತೆ ಮೇಲೆ ನಿರಂತರ ಅತ್ಯಾಚಾರವೆಸಗಿದ ಪಾಪಿ ಅಂದರ್

ಮಂಗಳೂರು,ಡಿಸೆಂಬರ್ 21: ಜೇನುಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಘಟನೆ ಮಂಗಳೂರಿನ (Mangaluru) ಉಪ್ಪಿನಂಗಡಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೆಳಗಾವಿ ಮೂಲದ ಅಪ್ರಾಪ್ತೆಯನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಆರೋಪಿ, 17 ದಿನಗಳ ಕಾಲ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅರೆಸ್ಟ್ ಮಾಡಲಾಗಿದೆ.

ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು

ಬೆಳಗಾವಿ ಮೂಲದ ಅಪ್ರಾಪ್ತ ಬಾಲಕಿಯನ್ನು ಜೇನುಕೃಷಿ ತರಬೇತಿ ನೀಡುವುದಾಗಿ ಹೇಳಿ ಆರೋಪಿ ಅಬ್ದುಲ್ ಗಫೂರ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಪೋಷಕರು ಮಗಳನ್ನು ಸುಮಾರು ಎರಡು ತಿಂಗಳ ಹಿಂದೆ ಆರೋಪಿಯ ಮನೆಗೆ ಬಿಟ್ಟು ಹೋಗಿದ್ದು, ಈ ಅವಧಿಯಲ್ಲಿ ಡಿಸೆಂಬರ್ 2ರಿಂದ 19ರವರೆಗೆ ಬಾಲಕಿಯ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯ ಮಾಹಿತಿ ತಿಳಿದ ಪೊಲೀಸರು, ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.

ಇದನ್ನೂ ಓದಿ ಧರ್ಮಸ್ಥಳ ಬುರುಡೆ ಪ್ರಕರಣ: ಜೈಲಿನಿಂದ ಹೊರಬರುತ್ತಲೇ ಹೋರಾಟಗಾರರ ವಿರುದ್ಧವೇ ತಿರುಗಿ ಬಿದ್ದ ಚಿನ್ನಯ್ಯ!

ಹಾನಗಲ್​ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

2024ರ ಜನವರಿಯಲ್ಲಿ ಹಾವೇರಿಯ ಹಾನಗಲ್ ಪಟ್ಟಣದ ವ್ಯಾಪ್ತಿಯಲ್ಲಿ ನಡೆದ ಗ್ಯಾಂಗ್‌ರೇಪ್ ಪ್ರಕರಣವು ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಹಾನಗಲ್ ಗ್ಯಾಂಗ್‌ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಪ್ರಕರಣದ ಏಳು ಆರೋಪಿಗಳನ್ನು ಹಾವೇರಿ ಜಿಲ್ಲೆಯ ವ್ಯಾಪ್ತಿಯಿಂದ ಗಡಿಪಾರು ಮಾಡಲಾಗಿದೆ. ಸವಣೂರು ಉಪವಿಭಾಗಾಧಿಕಾರಿ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಆರೋಪಿಗಳಾದ ಅಪ್ತಾಬ್ ಚಂದನಕಟ್ಟಿ, ಶೋಯಿಬ್ ಮುಲ್ಲಾ, ಮದರ್ ಸಾಬ್ ಮಂಡಕ್ಕಿ, ಮೊಹ್ಮದ್ ಸಾದಿಕ್ ಅಗಸಿಮನಿ, ರಿಯಾಜ್ ಸಾವಿಕೇರಿ, ಸಮಿವುಲ್ಲಾ ಲಾಲನವರ ಹಾಗೂ ತೌಸಿಪ್ ಅಹ್ಮದ್ ಚೌಟಿರನ್ನು ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡುವಂತೆ ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Optical Illusion: ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ – Kannada News | Optical Illusion: You are smart if you can find a puppy hiding on the riverbank in 15 seconds

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಹಾಗೂ ಬ್ರೈನ್ ಟೀಸರ್ ಸಂಬಂಧಿತ ಚಿತ್ರಗಳು ಪಝಲ್ ಪ್ರಿಯರನ್ನು ಆಕರ್ಷಿಸುತ್ತವೆ. ಈ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯ ಜತೆಗೆ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಇದೀಗ ನಿಮಗೆ ಇಲ್ಲೊಂದು ಸವಾಲು ಇದೆ. ಈ  ಹಿಮ ಮಿಶ್ರಿತ ನದಿ ದಡದಲ್ಲಿ ನಾಯಿಮರಿಯೊಂದು ಅಡಗಿ ಕುಳಿತಿದೆ. ಈ ನಾರಿಮರಿಯನ್ನು ಹದಿನೈದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.

ವೈರಲ್ ಚಿತ್ರದಲ್ಲಿ ಏನಿದೆ?

ನೀವು ನಿಮ್ಮ ಬುದ್ಧಿ ಮಟ್ಟವನ್ನು ಪರೀಕ್ಷಿಸಲು ಸಜ್ಜಾಗಿದ್ದೀರಾ. ಹಾಗಾದ್ರೆ ಈ ಚಿತ್ರವು ನಿಮಗೆ ಸಹಾಯ ಮಾಡುತ್ತದೆ. ಈ ಚಿತ್ರದಲ್ಲಿ ನೀವು ನದಿ ದಡವನ್ನು ಕಾಣಬಹುದು. ಈ ನದಿಯ ದಡವು ಬಿಳಿ ಹಿಮದಿಂದ ಆವೃತ್ತವಾಗಿದ್ದು, ಇಲ್ಲಿ ನಾಯಿಮರಿ ಅಡಗಿಕೊಂಡಿದೆ. ಈ ನಾಯಿಮರಿಯನ್ನು ಹುಡುಕುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ, ನಿಮ್ಮ ಮೆದುಳಿಗೆ ಕೆಲಸ ನೀಡಿ.

ಇದನ್ನೂ ಓದಿ:ಜಸ್ಟ್‌ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ

ನಾಯಿಮರಿ ಸಿಕ್ಕಿತೇ?

ಅಯ್ಯೋ ಎಷ್ಟೇ ಹುಡುಕಿದರೂ ಹಿಮದಿಂದ ಆವೃತ್ತವಾದ ನದಿಯ ದಡದಲ್ಲಿ ಅಡಗಿರುವ ನಾಯಿ ಮರಿಯನ್ನು ಹುಡುಕಲು ನಿಮ್ಮಿಂದ ಸಾಧ್ಯವಾಗಿಲ್ಲವೇ. ಹಾಗಾದ್ರೆ ನೀವು ಹೆಚ್ಚು ಯೋಚಿಸಬೇಡಿ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರದಲ್ಲಿ ನದಿಯ ದಡದಲ್ಲಿ ನಾಯಿಮರಿ ಎಲ್ಲಿದೆ ಎಂದು ಕಪ್ಪು ಬಣ್ಣದಲ್ಲಿ ಗುರುತಿಸಿದ್ದೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Weekly Career Horoscope: ಡಿಸೆಂಬರ್​ನ 4ನೇ ವಾರ ನಿಮ್ಮ ರಾಶಿಗನುಗುಣವಾಗಿ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Weekly Career Horoscope Dec 21 27, 2025: Challenges, Health and Success for All Zodiac Signs

21-12-2025ರಿಂದ 27-12-2025ರವರಗೆ ಈ ವಾರವು ಡಿಸೆಂಬರ್ ತಿಂಗಳ ನಾಲ್ಕನೇ ವಾರವಾಗಿದ್ದು ಅನ್ಯರ ಸಮಸ್ಯೆಯಿಂದ ಉದ್ಯೋಗದಲ್ಲಿ ನಿಮಗೆ ತೊಂದರೆ, ಆರೋಗ್ಯದಲ್ಲಿ ಆಗುವ ವ್ಯತ್ಯಾಸ ಕೆಲಸದ ಮೇಲೆ ಪರಿಣಾಮ ಬೀರುವುದು. ಕರ್ಮಾಧಿಪತಿ ಮೇಲೆ ಕುಜನ ಪರಸ್ಪರ ದೃಷ್ಟಿ ಇರುವ ಕಾರಣ ಯಂತ್ರ ತಂತ್ರಗಳ ಜೊತೆ ಕಾರ್ಯಕ್ಕೆ ಉತ್ಸಾಹ ಬರಲಿದೆ. ರಾಜಸಮಾನರಿಂದ ಉದ್ಯಮಕ್ಕೆ ಸಹಕಾರ ಸಿಗುವುದು. ವಿದೇಶ ಪ್ರವಾಸಕ್ಕೆ ಬಹಳ ಅವಸರ ಕಾಣಿಸುವುದು. ಒಟ್ಟಿನಲ್ಲಿ ಯಾವುದೇ ವಿಘ್ನಗಳೂ ನಿಮಗೆ ಬಾಧೆ ಕೊಡದೇ ಯಶಸ್ವಿಯಾಗಿ ಮುನ್ನಡೆಯಲಿ.

ಮೇಷ ರಾಶಿ:

ಈ ವಾರ ಉದ್ಯೋಗದಲ್ಲಿ ಚುರುಕು ಹೆಚ್ಚಾದರೂ ಆತುರದ ನಿರ್ಧಾರಗಳು ಸಮಸ್ಯೆ ಉಂಟುಮಾಡಲಿವೆ. ಮೇಲಧಿಕಾರಿಗಳೊಂದಿಗೆ ಮಾತಿನ ಜಾಗರೂಕತೆ ಅಗತ್ಯ. ದಾಖಲೆ ಅಥವಾ ತಾಂತ್ರಿಕ ದೋಷದಿಂದ ಕೆಲಸ ವಿಳಂಬವಾಗುವ ಸಾಧ್ಯತೆ. ಈ ವಾರ ಕೋಪ ನಿಯಂತ್ರಿಸಿ ಶಾಂತರಾಗುದ್ದರೆ ಮಾತ್ರ ನಿಮ್ಮ ಶ್ರಮಕ್ಕೆ ಗೌರವ ಸಿಗುತ್ತದೆ.

ವೃಷಭ ರಾಶಿ:

ನಾಲ್ಕನೇ ವಾರ ಕಾರ್ಯದಲ್ಲಿ ಸ್ಥಿರತೆ ಇದ್ದರೂ ಪ್ರಗತಿ ನಿರೀಕ್ಷೆಯಷ್ಟು ವೇಗವಾಗುವುದಿಲ್ಲ. ಹಠ ಮತ್ತು ಹಳೆಯ ಆಲೋಚನೆಗಳು ಅವಕಾಶಗಳನ್ನು ತಪ್ಪಿಸುವುದು. ಹಣಕಾಸು ವಿಷಯದಲ್ಲಿ ಒತ್ತಡ ಕಂಡುಬರುತ್ತದೆ. ಉದ್ಯೋಗ ಬದಲಾವಣೆ ಯತ್ನ ಈ ವಾರ ಯಶಸ್ಸು ನೀಡದಿರಬಹುದು. ಸಹನೆಯನ್ನು ಕಳೆದುಕೊಳ್ಳುವ ಅವಶ್ಯಕತೆ ಇಲ್ಲ.

ಮಿಥುನ ರಾಶಿ:

ರಾಶಿಯ ಅಧಿಪತಿಯಾದ ಬುಧನಿಂದ ಉದ್ಯಮಕ್ಕೆ ಬೇಕಾದ ಸಂವಹನದ ಗೊಂದಲಗಳನ್ನು ಹೆಚ್ಚಿಸುವನು. ಮಾತಿನ ತಪ್ಪು ಅಥವಾ ತಪ್ಪು ಮಾಹಿತಿ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಳೆಯ ಸಂಪರ್ಕಗಳಿಂದ ಅವಕಾಶ ಬಂದರೂ ಸ್ಪಷ್ಟತೆ ಇಲ್ಲದಿದ್ದರೆ ನಷ್ಟ. ನೀವು ಪ್ರತಿಯೊಂದು ನಿರ್ಧಾರಕ್ಕೂ ಪುನಃ ಪರಿಶೀಲನೆ ಮಾಡಿಕೊಳ್ಳುವಿರಿ.

ಕರ್ಕಾಟಕ ರಾಶಿ:

ಈ ವಾರ ನಿಮ್ಮ ಮನಸ್ಸಿನ ಅಸ್ಥಿರತೆಯಡೆ ಉದ್ಯೋಗದಲ್ಲಿ ಏರುಪೇರಿಗೆ ಕಾರಣವಾಗಬಹುದು. ಭಾವನಾತ್ಮಕ ಪ್ರತಿಕ್ರಿಯೆಗಳು ಸಹೋದ್ಯೋಗಿಗಳ ಜೊತೆ ಅಂತರ ಹೆಚ್ಚಿಸಬಹುದು. ಈ ವಾರದಲ್ಲಿ ಆಗಾಗ ಕೆಲಸದ ಒತ್ತಡ ಮನಸ್ಸನ್ನು ಕಾಡುತ್ತದೆ. ಶಾಂತವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಮಾನ್ಯತೆ ಸಿಗುತ್ತದೆ; ಇಲ್ಲದಿದ್ದರೆ ಅವಕಾಶ ಕೈ ತಪ್ಪಬಹುದು.

ಸಿಂಹ ರಾಶಿ:

ಐದನೇ ರಾಶಿಯವರಿಗೆ ಈ ವಾರ ನಿಮ್ಮ ಸಾಮರ್ಥ್ಯ ಗುರುತಿಸಲ್ಪಟ್ಟರೂ ಅಹಂಕಾರದಿಂದ ವಿರೋಧ ಎದುರಾಗಬಹುದು. ಅಧಿಕಾರಕ್ಕೆ ಸಂಬಂಧಿತ ವಿಷಯಗಳಲ್ಲಿ ಎಚ್ಚರಿಕೆ ಅವಶ್ಯಕ. ಮೇಲಧಿಕಾರಿಗಳ ಜೊತೆ ಸಂಘರ್ಷ ಮಾಡಿಕೊಳ್ಳುವುದು ಬೇಡ. ನಾಯಕತ್ವದ ಗುಣವನ್ನು ವಿನಯದಿಂದ ಬಳಸದೇ ಇದ್ದರೆ ಗೌರವದ ಬದಲು ಟೀಕೆ ಎದುರಾಗುವ ಸಾಧ್ಯತೆ.

ಕನ್ಯಾ ರಾಶಿ:

ಈ ವಾರ ನೀವು ಮಾಡುವ ಕೆಲಸಗಳಲ್ಲಿ ಹಿಡಿತ ಇದ್ದರೂ ಸಣ್ಣ ತಪ್ಪು ದೊಡ್ಡ ಸಮಸ್ಯೆಯಾಗಬಹುದು. ಅತಿಯಾದ ಒತ್ತಡದಿಂದ ಆರೋಗ್ಯದ ದಣಿವು ಕಾರ್ಯಕ್ಷಮತೆಯನ್ನು ಕಡಿಮೆಮಾಡಬಹುದು. ದಾಖಲೆ, ಲೆಕ್ಕಪತ್ರಗಳಲ್ಲಿ ಜಾಗ್ರತೆಯಿಂದ ರಕ್ಷಿಸಿ. ಪರಿಪೂರ್ಣತೆಯ ಹಠವು ಕೆಲಸದ ಒತ್ತಡವನ್ನು ಹೆಚ್ಚಿಸಬಹುದು.

ತುಲಾ ರಾಶಿ:

ಏಳನೇ ರಾಶಿಯವರಿಗೆ ಪಾಲುದಾರಿಕೆಯ ಉದ್ಯೋಗಗಳಲ್ಲಿ ಅವಕಾಶ ಇದ್ದರೂ ನಿರ್ಧಾರ ಗೊಂದಲ ನಷ್ಟಕ್ಕೆ ಕಾರಣವಾಗಬಹುದು. ಒಪ್ಪಂದ ಅಥವಾ ಕಾನೂನು ವಿಷಯಗಳಲ್ಲಿ ಸರಿಯಾದ ಅರಿವು ಇರದು. ಈ ವಾರ ಇತರರ ಅಭಿಪ್ರಾಯದ ಮೇಲೆ ಹೆಚ್ಚು ಅವಲಂಬನೆ ಸಮಸ್ಯೆ ತರುತ್ತದೆ. ಸ್ವಂತ ನಿರ್ಣಯ ಸ್ಪಷ್ಟವಾಗಿರಬೇಕು.

ವೃಶ್ಚಿಕ ರಾಶಿ:

ಕುಜನ ಆಧಿಪತ್ಯದ ಈ ವಾರ ಗುಪ್ತ ಯೋಜನೆಗಳು ಫಲ ನೀಡುವ ಸಾಧ್ಯತೆ ಇದ್ದರೂ ಒಳರಾಜಕೀಯ ಮತ್ತು ಈರ್ಷೆ ತೊಂದರೆ ಕೊಡಬಹುದು. ಸಹೋದ್ಯೋಗಿಗಳ ಜೊತೆ ವಾಗ್ವಾದ ಸಂಭವಿಸುವುದು. ಅತಿಯಾದ ಸಂಶಯ ಕೆಲಸದ ವಾತಾವರಣ ಹಾಳುಮಾಡಬಹುದು. ಮೌನ ಮತ್ತು ತಾಳ್ಮೆಯೇ ಈ ವಾರ ಆಪ್ತರಕ್ಷಕ.

ಧನು ರಾಶಿ:

ಡಿಸೆಂಬರ್ ನಾಲ್ಕನೇ ವಾರ ನಿಮ್ಮ ಆತ್ಮವಿಶ್ವಾಸ ಹೆಚ್ಚಾದರೂ ಅತಿಯಾದ ಆಶಾವಾದದಿಂದ ತಪ್ಪು ಆಶ್ವಾಸನೆಗಳನ್ನು ಕೆಲಸದ ಹೊಣೆಗಾರಿಕೆ ಹೆಚ್ಚಾಗಿ ಒತ್ತಡ ಉಂಟಾಗುತ್ತದೆ. ವಿದೇಶಿ ಅಥವಾ ದೂರದ ಸಂಪರ್ಕಗಳಲ್ಲಿ ವಿಳಂಬ ಸಾಧನೆ ಮಾಡಿಕೊಳ್ಳುವಿರಿ. ಕಾಲ್ಪನಿಕ ದೃಷ್ಟಿಯಿಂದ ವಾಸ್ತವಿಕ ಗುರಿಗಳನ್ನು ಹೊಂದಿದರೆ ಮಾತ್ರ ತೃಪ್ತಿ ಸಿಗುತ್ತದೆ.

ಮಕರ ರಾಶಿ:

ಶನಿಯ ಆಧಿಪತ್ಯದ ಪರಿಶ್ರಮಕ್ಕೆ ಫಲ ಸಿಗುವ ಸೂಚನೆ ಇದ್ದರೂ ಕೆಲಸದ ಹೊರೆ ದೈಹಿಕ ಮತ್ತು ಮಾನಸಿಕ ದಣಿವು ತರಬಹುದು. ಕುಟುಂಬ, ಕೆಲಸದಲ್ಲಿ ಸಮತೋಲನ ತಪ್ಪುವ ಸಾಧ್ಯತೆ ಕಂಡುಬರುವುದು. ಮೇಲಧಿಕಾರಿಗಳಿಂದ ನಿಮ್ಮ ಮೇಲೆ ನಿರೀಕ್ಷೆ ಹೆಚ್ಚಾಗುತ್ತದೆ. ವಿಶ್ರಾಂತಿ ಕಡೆಗಣಿಸಿದರೆ ಅನಾರೋಗ್ಯದ ಸಮಸ್ಯೆ ಕಾಣಿಸಬಹುದು.

ಕುಂಭ ರಾಶಿ:

ನಿಮಗೆ ನವೀನ ಆಲೋಚನೆಗಳಿಗೆ ಮೆಚ್ಚುಗೆ ಇದ್ದರೂ ವ್ಯವಸ್ಥೆಯ ಅಡ್ಡಿಗಳು ಮತ್ತು ವಿಳಂಬಕ್ಕೆ ಕಿರಿಕಿರಿಯನ್ನು ತಡೆದುಕೊಳ್ಳಲಾಗದು. ಸಾಮಾಜಿಕವಾಗಿ ಆಡಿದ ನಿಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ. ಸಹನೆ ಕಳೆದುಕೊಂಡರೆ ಅವಕಾಶ ಕೈ ತಪ್ಪುವುದು. ಪೂರ್ವಾಪರ ಆಲೋಚನೆ ಇಲ್ಲದೇ ನಿಯಮಗಳನ್ನು ಉಲ್ಲಂಘಿಸುವುದು ಸಮಸ್ಯೆ ತರುತ್ತದೆ.

ಮೀನ ರಾಶಿ:

ಕೊನೆಯ ರಾಶಿಯವರಿಗೆ ಈ ವಾರ ನಿಮ್ಮ ಪ್ರಭಾವದಿಂದ ಕೆಲಸದ ಹೊಣೆಗಾರಿಕೆ ಮತ್ತು ಅದರಲ್ಲಿ ಟೀಕೆ ಹೆಚ್ಚಾಗಬಹುದು. ನಿಮ್ಮ ಆತ್ಮವಿಶ್ವಾಸ ಕುಸಿಯುವ ಸಂದರ್ಭಗಳು ಎದುರಾಗುತ್ತವೆ. ಈ ವಾರದ ನಿಮ್ಮ ಶ್ರಮ ತಕ್ಷಣ ಫಲ ನೀಡದಿರಬಹುದು. ನಿರಾಶೆಗೆ ಒಳಗಾಗದೇ ನಿರಂತರ ಪ್ರಯತ್ನ ಮಾಡಿದರೆ ಮುಂದಿನ ದಿನಗಳಲ್ಲಿ ಸ್ಥಿರತೆ ಸಿಗುತ್ತದೆ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

Ashes 2025: ಮೂರಕ್ಕೆ ಮೂರು… ಆಸ್ಟ್ರೇಲಿಯಾ ಪಾಲಾದ ಆ್ಯಶಸ್

ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಸರಣಿಯ ಮೂರನೇ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಆಸೀಸ್ ಪಡೆ ಆ್ಯಶಸ್ ಸರಣಿಯನ್ನು ವಶಪಡಿಸಿಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ತಲಾ 8 ವಿಕೆಟ್​ಗಳ ಜಯ ಸಾಧಿಸಿತ್ತು. ಇದೀಗ ಮೂರನೇ ಪಂದ್ಯದಲ್ಲಿ 82 ರನ್​ಗಳ ಗೆಲುವು ದಾಖಲಿಸಿದೆ.

ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 371 ರನ್ ಕಲೆಹಾಕಿದರೆ, ಇಂಗ್ಲೆಂಡ್ 286 ರನ್​ಗಳಿಗೆ ಆಲೌಟ್ ಆಗಿತ್ತು.

ಇನ್ನು ಮೊದಲ ಇನಿಂಗ್ಸ್​ನಲ್ಲಿನ 85 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ 349 ರನ್​ಗಳಿಸಿ ಆಲೌಟ್ ಆಗಿತ್ತು. ಇತ್ತ ಮೊದಲ ಇನಿಂಗ್ಸ್​ನಲ್ಲಿನ ಹಿನ್ನಡೆಯೊಂದಿಗೆ 435 ರನ್​​ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 352 ರನ್​ಗಳಿಸಿ ಸರ್ವಪತನ ಕಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡವು ಮೂರನೇ ಟೆಸ್ಟ್ ಪಂದ್ಯವನ್ನು 82 ರನ್​ಗಳಿಂದ ಗೆದ್ದುಕೊಂಡಿದೆ.

ಇದೀಗ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಮೂರು ಮ್ಯಾಚ್​ಗಳಲ್ಲೂ ಆಸ್ಟ್ರೇಲಿಯಾ ತಂಡ ಜಯ ಸಾಧಿಸಿದ್ದು, ಇನ್ನುಳಿದ ಎರಡು ಪಂದ್ಯಗಳಲ್ಲಿ ಗೆಲ್ಲುವ ಮೂಲಕ ಆ್ಯಶಸ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಜೇಕ್ ವೆದರಾಲ್ಡ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಕ್ಯಾಮರೋನ್ ಗ್ರೀನ್, ಜೋಶ್ ಇಂಗ್ಲಿಸ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೊಲ್ಯಾಂಡ್.

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಓಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮೀ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಜೋಫ್ರಾ ಆರ್ಚರ್, ಜೋಶ್ ಟಂಗ್.

 

Source link

ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ – Kannada News | Eating Eggs Does Not Cause Cancer: FSSAI Clarifies

ದೆಹಲಿ, ಡಿಸೆಂಬರ್​ 21: ಮೊಟ್ಟೆ (Egg) ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವರದಿಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಧಾರ ರಹಿತ ಎಂದು ತಳ್ಳಿ ಹಾಕಿದೆ. ಸದ್ಯ ದೇಶದಲ್ಲಿರುವ ಮೊಟ್ಟೆಗಳು ಸೇವನೆಗೆ ಸುರಕ್ಷಿತವಾಗಿವೆ ಎಂದು ಸ್ಪಷ್ಟನೆ ನೀಡಿದೆ. ಆ ಮೂಲಕ ಜನರ ಗೊಂದಲಗಳಿಗೆ ತೆರೆ ಎಳೆಯಲಾಗಿದೆ.

ಈ ಕುರಿತಾಗಿ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಶನಿವಾರ ಮಾಧ್ಯಮ ಪ್ರಕರಣೆ ಹೊರಡಿಸಿದ್ದು, ಮೊಟ್ಟೆ ತಿನ್ನುವುದರಿಂದ ಕ್ಯಾನ್ಸರ್ ಬರುತ್ತೆ ಎನ್ನುವ ವರದಿಗಳು ಅವೈಜ್ಞಾನಿಕವಾಗಿದ್ದು, ದಾರಿತಪ್ಪಿಸುವ ಮೂಲಕ ಸಾರ್ವಜನಿಕರಲ್ಲಿ ಅನಗತ್ಯ ಆತಂಕ ಉಂಟು ಮಾಡುತ್ತಿದ್ದು, ಅಂತಹ ವರದಿಗಳನ್ನು ನಂಬದಂತೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹೇಳಿದೆ.

ಇದನ್ನೂ ಓದಿ: ಮೊಟ್ಟೆ ತಿಂದರೆ ಕ್ಯಾನ್ಸರ್ ಬರುತ್ತಾ? ಮೊಟ್ಟೆ ರಹಸ್ಯ ಬಿಚ್ಚಿಟ್ಟ ತಜ್ಞ ವೈದ್ಯರು, ಎಲ್ಲಾ ಗೊಂದಲಗಳಿಗೆ ತೆರೆ!

ಎಗ್ಗೋಜ್​ ನ್ಯೂಟ್ರಿಷನ್ ಕಂಪನಿಯ ಮೊಟ್ಟೆಯಲ್ಲಿ ಕ್ಯಾನ್ಸರ್​ಕಾರಕ ಅಂಶ ಇದೆ ಅಂತಾ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿ ಹರಿದಾಡಿತ್ತು. ಇದು ಸಾರ್ವಜನಿಕರಲ್ಲಿ ಸಾಕಷ್ಟು ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ಈ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡ ನಿಯಮ 2011ರ ಅಡಿಯಲ್ಲಿ ಕೋಳಿ ಮತ್ತು ಮೊಟ್ಟೆಗಳ ಉತ್ಪಾದನೆಯ ಎಲ್ಲಾ ಹಂತಗಳಲ್ಲಿ ನೈಟ್ರೋಫ್ಯೂರಾನ್‌ಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗಾಗಿ ಮೊಟ್ಟೆಗಳಲ್ಲಿ ಕ್ಯಾನ್ಸರ್ ಅಂಶ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಆಗಿದೆ.

ಇದನ್ನೂ ಓದಿ: ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಸೋಶಿಯಲ್​​ ಮೀಡಿಯಾಗಳಲ್ಲೀಗ ಇದೇ ಚರ್ಚೆ!

ಮೊಟ್ಟೆಗಳು ಅಸುರಕ್ಷಿತವೆಂಬುವುದು ಒಂದೆರಡು ಪ್ರಾಯೋಗಿಕ ಸಂಶೋಧನೆಗಳನ್ನು ವೈಜ್ಞಾನಿಕವಾಗಿ ಸರಿಯಲ್ಲವೆಂದು ಸಂಸ್ಥೆ ಹೇಳಿದ್ದು, ಆಹಾರ ಸುರಕ್ಷತಾ ನಿಯಮಗಳಿಗೆ ಅನುಸಾರವಾಗಿ ಮೊಟ್ಟೆಗಳನ್ನು ಉತ್ಪಾದಿಸಿ ಸೇವಿಸಿದಾಗ ಅವು ಸಮತೋಲಿತ ಆಹಾರದ ಸುರಕ್ಷಿತ, ಪೌಷ್ಟಿಕ ಮತ್ತು ಮೌಲ್ಯಯುತ ಅಂಶವಾಗಿ ಉಳಿಯುತ್ತವೆ ಎಂದು FSSAI ಪುನರುಚ್ಚರಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

World Saree Day 2025: ನೀರೆಯರ ಮನಗೆದ್ದ ಸೀರೆಗೂ ಒಂದು ದಿನ; ಈ ಆಚರಣೆಯ ಮಹತ್ವವನ್ನು ತಿಳಿಯಿರಿ – Kannada News | World Saree Day 2025: What is the purpose of celebrating World Saree Day?

ಸೀರೆ (Saree) ಹೆಣ್ಣಿನ ಚೆಲುವು ಸೌಂದರ್ಯದ ಸಂಕೇತ ಅಂತಾನೇ ಹೇಳಬಹುದು. ಸೊಬಗು ಸೌಂದರ್ಯದ ಪ್ರತಿಬಿಂಬವಾಗಿರುವ ಸೀರೆ ಕೇವಲ ಉಡುಗೆಯಲ್ಲ ಇದು ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಮತ್ತು ಸಂಪ್ರದಾಯದ ಮೂರ್ತ ರೂಪವಾಗಿದೆ. ಶತಮಾನಗಳಿಂದಲೂ ಭಾರತದಲ್ಲಿ ಮಹಿಳೆಯರು ಸೀರೆಯನ್ನು ಧರಿಸುತ್ತಿದ್ದಾರೆ. ಎಷ್ಟೇ ಫ್ಯಾಶನ್‌, ಟ್ರೆಂಡಿ ಉಡುಗೆಗಳು ಬಂದರೂ ಸೀರೆಯ ಕ್ರೇಜ್‌ ಮಾತ್ರ ಇಂದಿಗೂ ಕಮ್ಮಿಯಾಗಿಲ್ಲ. ಈ ಸೀರೆ ಫ್ಯಾಷನ್‌ಗೂ ಮೀರಿ ಸಾಂಸ್ಕೃತಿಕ ಹೆಮ್ಮೆಯನ್ನು ಪ್ರತಿನಿಧಿಸುವ ಒಂದು ಉಡುಪಾಗಿದ್ದು, ಇದರ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವ ಸಲುವಾಗಿ ಪ್ರತಿವರ್ಷ ಡಿಸೆಂಬರ್‌ 21 ರಂದು ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಸೀರೆ ದಿನದ ಇತಿಹಾಸವೇನು?

ನೇಕಾರರ ಸಮುದಾಯ ಮತ್ತು ಸೀರೆಗಳ ವಿಶಿಷ್ಟ ಕಲೆಯನ್ನು ಗೌರವಿಸುವ ಉದ್ದೇಶದಿಂದ ವಿಶ್ವ ಸೀರೆ ದಿನವನ್ನು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರಾದ ಸಿಂಧೂರ ಕವಿತಿ ಮತ್ತು ನಿಸ್ತುಲಾ ಹೆಬ್ಬಾರ್ ಅವರು ಸೀರೆಗಳ ಸಂಕೀರ್ಣ ಕರಕುಶಲತೆ ಮತ್ತು ಶ್ರೀಮಂತ ಪರಂಪರೆಯನ್ನು  ಸಂಭ್ರಮಿಸುವ ಸಲುವಾಗಿ 2020 ರಲ್ಲಿ ಈ ದಿನದ ಆಚರಣೆಯನ್ನು ಪ್ರಾರಂಭಿಸಿದರು.  ಈ ಉಪಕ್ರಮವು ಸಾಮಾಜಿಕ ಮಾಧ್ಯಮ ಮತ್ತು ಫ್ಯಾಷನ್ ಸಮುದಾಯದ ಗಮನ ಸೆಳೆಯಿತು. ಮತ್ತು ಇದು ವಿಶ್ವಾದ್ಯಂತ ಈ ದಿನವನ್ನು ಪ್ರತಿವರ್ಷ ಡಿಸೆಂಬರ್‌ 21 ರಂದು ಆಚರಿಸಲಾಗುತ್ತಿದೆ.

ಇದನ್ನೂ ಓದಿ: ಒಗ್ಗಟ್ಟಿನಿಂದ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸುಸ್ಥಿರ ಅಭಿವೃದ್ಧಿ ಸಾಧ್ಯ

ವಿಶ್ವ ಸೀರೆ ದಿನದ ಮಹತ್ವವೇನು?

ಸಾಂಸ್ಕೃತಿಕ ಪರಂಪರೆಯನ್ನು ಆಚರಿಸುವುದು: ಸೀರೆ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದ್ದು, ಸಂಪ್ರದಾಯ, ಸೊಬಗು ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಗೌರವಿಸಲು ಮತ್ತು ಆಚರಿಸಲು ಈ ದಿನ ಒಂದು ಅವಕಾಶವನ್ನು ಒದಗಿಸುತ್ತದೆ.

ಭಾರತೀಯ ಕೈಮಗ್ಗಗಳನ್ನು ಉತ್ತೇಜಿಸುವುದು: ಭಾರತದ ಜವಳಿ ಉದ್ಯಮದ ಅವಿಭಾಜ್ಯ ಅಂಗವಾದ ಕೈಮಗ್ಗ ನೇಯ್ಗೆಯ ಕಲೆಯನ್ನು ಉತ್ತೇಜಿಸುವುದು ಮತ್ತು ಸಂರಕ್ಷಿಸುವುದು ವಿಶ್ವ ಸೀರೆ ದಿನದ ಪ್ರಮುಖ ಉದ್ದೇಶವಾಗಿದೆ. ಈ ದಿನವು ಕೈಮಗ್ಗ ಕೈಗಾರಿಕೆಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

ಕುಶಲಕರ್ಮಿಗಳನ್ನು ಗೌರವಿಸುವುದು: ಈ ದಿನ ಪ್ರತಿ ಸೀರೆಯ ಹಿಂದಿರುವ ನೇಕಾರರು ಮತ್ತು ಕುಶಲಕರ್ಮಿಗಳ ಪ್ರಯತ್ನಗಳನ್ನು ಗೌರವಿಸಲಾಗುತ್ತದೆ.

ಇದಲ್ಲದೆ ಸಾಂಪ್ರದಾಯಿಕ ಭಾರತೀಯ ಉಡುಪು ಸೀರೆಯ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಮಹತ್ವಕ್ಕೆ ಗೌರವ ನೀಡುವುದು ವಿಶ್ವ ಸೀರೆ ದಿನದ ಮುಖ್ಯ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ – Kannada News | Pramod Shetty talks about Shetty Gang dispute in Kannada Film Industry

ಕನ್ನಡ ಚಿತ್ರರಂಗದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಈ ಕಲಾವಿದರು ಜೊತೆಜೊತೆಯಾಗಿ ಸಿನಿಮಾ ಕೆಲಸಗಳನ್ನು ಮಾಡುತ್ತಿದ್ದಾರೆ. ಆ ಕಾರಣದಿಂದ ಅಭಿಮಾನಿಗಳು ಇವರನ್ನು ಶೆಟ್ಟಿ ಗ್ಯಾಂಗ್ (Shetty Gang) ಎಂದು ಕರೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಒಂದು ವದಂತಿ ಹಬ್ಬಿತ್ತು. ಶೆಟ್ಟಿ ಗ್ಯಾಂಗ್​ನಲ್ಲಿ ಬಿರುಕು ಮೂಡಿದೆ ಎಂಬ ಅನುಮಾನ ವ್ಯಕ್ತವಾಗಿತ್ತು. ಆ ಬಗ್ಗೆ ನಟ ಪ್ರಮೋದ್ (Pramod Shetty) ಅವರು ಮಾತನಾಡಿದ್ದಾರೆ. ‘45’ ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಮೌನ ಮುರಿದರು. ‘ಶಿವಣ್ಣ, ಉಪೇಂದ್ರ ಅವರ ಬಗ್ಗೆ ಮಾತನಾಡಿದ ಬಳಿಕ ನಾನು ರಾಜ್ ಬಿ. ಶೆಟ್ಟಿ ಬಗ್ಗೆ ಮಾತನಾಡಲೇಬೇಕು. ಮೊನ್ನೆ ನಾನು ರಾಜ್ ಶೆಟ್ಟಿ (Raj B Shetty) ಬಗ್ಗೆ ಜಾಸ್ತಿ ಮಾತನಾಡಿರಲಿಲ್ಲ. ನನ್ನ ಫ್ರೆಂಡ್ ಆದ್ದರಿಂದ ಜಾಸ್ತಿ ಮಾತಾಡೋದು ಬೇಡ ಅಂತ ಸುಮ್ಮನಾಗಿದ್ದೆ. ಆಮೇಲೆ ಮಾಧ್ಯಮಗಳಲ್ಲಿ ನೋಡಿದಾಗ ಗೊತ್ತಾಯಿತು ಇದು ಸಿಕ್ಕಾಪಟ್ಟೆ ಬಿರುಕು ಆಗಿದೆ ಅಂತ. ಇಷ್ಟೊಂದು ಬಿರುಕು ಯಾವಾಗ ಬಂತು? ಹೌದಾ ಅಂತ ತುಂಬಾ ಜನ ನನಗೆ ಫೋನ್ ಮಾಡಿ ಕೇಳಿದರು. ಹೌದು ಏನೀಗ ಅಂತ ನಾನು ಹೇಳಿದೆ. ನಿಮಗೆ ಯಾಕೆ ಬಿಟ್ಟಾಕಿ. ನಾವು ಆರಾಮಾಗಿ ಇದ್ದೇವೆ. ನೀವು ಯಾಕೆ ಜಗಳ ಮಾಡಿಕೊಳ್ಳುತ್ತಿದ್ದೀರಿ ಅಂತ ಕೇಳಿದೆ’ ಎಂದಿದ್ದಾರೆ ಪ್ರಮೋದ್ ಶೆಟ್ಟಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link