ಹ್ಯಾಂಡ್‌ಶೇಕ್ ಮಾಡ್ತೀರಾ?… “ನಾವಿಲ್ಲಿ ಬಂದಿರುವುದು ಕ್ರಿಕೆಟ್ ಆಡಲು ಮಾತ್ರ!” – Kannada News | IND vs PAK: Harmanpreet Blunts Pakistan Handshake Row
ಮಹಿಳಾ ಟಿ20 ವಿಶ್ವಕಪ್ನ (Women’s T20 World Cup 2026) ಆರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ ಸ್ಟೇಡಿಯಂನಲ್ಲಿ ಇಂದು (ಜೂ.14) ನಡೆಯಲಿರುವ ಈ ಪಂದ್ಯದ ವೇಳೆ ಉಭಯ ತಂಡಗಳ ಆಟಗಾರ್ತಿಯರು ‘ಹ್ಯಾಂಡ್‌ಶೇಕ್’ ಮಾಡಲಿದ್ದಾರೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಯನ್ನು ಟೀಮ್ ಇಂಡಿಯಾ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ಮುಂದಿಡಲಾಗಿದೆ. ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡಿರುವ ಹರ್ಮನ್ಪ್ರೀತ್ ಕೌರ್ಗೆ, “ಭಾರತ ತಂಡವು ಪಾಕಿಸ್ತಾನ್ ಆಟಗಾರ್ತಿಯರೊಂದಿಗೆ ಪಂದ್ಯದ ಆರಂಭದಲ್ಲಿ ಮತ್ತು…