Category Archives: Blog

Your blog category

ಚೈತ್ರಾ ಡಿಬಾರ್ ಆಗಿದ್ದಳು: ಮಗಳ ಕಿರುಕುಳಕ್ಕೆ ನೊಂದು ಎಲ್ಲ ವಿಷಯ ಹೇಳಿದ ಬಾಲಕೃಷ್ಣ – Kannada News | Chaithra Kundapura was debarred in 1st PUC says her Father Balakrishna Naik

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿರುದ್ಧ ನ್ಯಾಯಾಲಯ ಆದೇಶ ನೀಡಿದೆ. ತಂದೆ ಬಾಲಕೃಷ್ಣ ನಾಯ್ಕ್ ಅವರು ಚೈತ್ರಾ ಮೇಲೆ ಕೇಸ್ ಹಾಕಿದ್ದರು. ಕೋರ್ಟ್ ಆದೇಶದ ಬಳಿಕ ಬಾಲಕೃಷ್ಣ ನಾಯ್ಕ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಚೈತ್ರಾ (Chaithra Kundapura) ಅವರ ಇತಿಹಾಸವನ್ನು ಅವರು ತೆರೆದಿಟ್ಟಿದ್ದಾರೆ. ‘ನನಗೆ ನ್ಯಾಯಾಲಯದ ರಕ್ಷಣೆ ಸಿಕ್ಕಿದ್ದು ತುಂಬ ಅನುಕೂಲ ಆಗಿದೆ. ಇನ್ಮುಂದೆ ನನಗೆ ಮಕ್ಕಳಿಂದ, ಹೆಂಡತಿಯಿಂದ ತೊಂದರೆ ಆಗಬಾರದು. ವಿದ್ಯಾಭ್ಯಾಸ ಮಾಡುವಾಗಲೇ ಚೈತ್ರಾ ಪೋಕರಿ ಕೆಲಸ ಮಾಡುತ್ತಿದ್ದಳು. ಪ್ರಥಮ ವರ್ಷ ಪಿಯುಸಿ ಓದುವಾಗಲೇ ಡಿಬಾರ್ ಆಗಿದ್ದಳು. ನನ್ನ ಬುದ್ಧಿವಾದ ಕೇಳುತ್ತಿರಲಿಲ್ಲ’ ಎಂದು ಬಾಲಕೃಷ್ಣ ನಾಯ್ಕ್ (Balakrishna Naik) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪಾಂಡವಪುರದಲ್ಲಿ ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್ – Kannada News | Pandavapura railway Station Master saved a passenger falling from moving Train

ಪಾಂಡವಪುರ, ಡಿಸೆಂಬರ್ 19: ರೈಲನ್ನು ಇಳಿಯುವ ಭರದಲ್ಲಿ ರೈಲು (Train Video) ನಿಲ್ಲುವ ಮೊದಲೇ ಪ್ರಯಾಣಿಕರು ರೈಲಿನಿಂದ ಕೆಳಗೆ ಹಾರಿಬಿಡುತ್ತಾರೆ. ಇದರಿಂದ ಕೆಲವೊಮ್ಮೆ ಕೆಲವರು ರೈಲಿನಡಿ ಸಿಲುಕಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ಕೆಲವು ಜನರು ಕಾಲು ಮುರಿದುಕೊಂಡಿದ್ದಾರೆ. ಪಾಂಡವಪುರದಲ್ಲಿ ಡಿಸೆಂಬರ್ 13ರಂದು ಪಾಂಡವಪುರದ ಸ್ಟೇಷನ್ ಮಾಸ್ಟರ್ ಅಭಿಜಿತ್ ಸಿಂಗ್ ಅವರು ಚಲಿಸುವ ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸುವ ಮೂಲಕ ದಿಟ್ಟತನ ತೋರಿದ್ದಾರೆ. ರೈಲ್ವೆ ಇಲಾಖೆ ಸಿಸಿಟಿವಿಯಲ್ಲಿ ಸೆರೆಯಾದ ಈ ವಿಡಿಯೋವನ್ನು ಎಕ್ಸ್​ನಲ್ಲಿ ಹಂಚಿಕೊಂಡಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs SA: ಸಂಜು ತೋಳ್ಬಲಕ್ಕೆ ಸಿಲುಕಿ ಮೈದಾನದಲ್ಲೇ ಬಿದ್ದು ಒದ್ದಾಡಿದ ಅಂಪೈರ್; ವಿಡಿಯೋ ನೋಡಿ – Kannada News | IND vs SA: Umpire Rohan Pandit Injured by Sanju Samson’s Fierce Shot

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಐದನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬಾರಿಸಿದ ಚೆಂಡು ಅಂಪೈರ್ ಕಾಲಿಗೆ ರಬಸವಾಗಿ ಬಡಿಯಿತು. ಇದರಿಂದಾಗಿ ಅಂಪೈರ್ ಕೆಲಕಾಲ ಮೈದಾನದಲ್ಲಿ ನೋವಿನಿಂದ ನರಳುವಂತ್ತಾಯಿತು.

ಭಾರತದ ಇನ್ನಿಂಗ್ಸ್​ನ 9ನೇ ಓವರ್​ನಲ್ಲಿ ಈ ಘಟನೆ ನಡೆಯಿತು. ಆಫ್ರಿಕಾ ಸ್ಪಿನ್ನರ್ ಫರ್ನಾಂಡಿಸ್ ಬೌಲ್ ಮಾಡಿದ ನಾಲ್ಕನೇ ಎಸೆತವನ್ನು ಸ್ಯಾಮ್ಸನ್ ನೇರವಾಗಿ ಹೊಡೆದರು. ಇತ್ತ ಆ ಹೊಡೆತ ಸೀದ ಬೌಲರ್ ಕೈಗೆ ಹೋಯಿತು. ಆದರೆ ಫರ್ನಾಂಡಿಸ್​ಗೆ ಆ ಚೆಂಡನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಚೆಂಡು ಬೌಲರ್​ ಕೈಗೆ ಬಡಿದು, ಬೌಲರ್ಸ್​ ಎಂಡ್​ನಲ್ಲಿ ಅಂಪೈರಿಂಗ್ ಮಾಡುತ್ತಿದ್ದ ರೋಹನ್ ಪಂಡಿತ್ ಅವರ ಬಲ ಮೊಣಕಾಲಿಗೆ ಬಡಿಯಿತು.

ಚೆಂಡಿನ ರಬಸ ಎಷ್ಟಿತ್ತೆಂದರೆ, ಅಂಪೈರ್ ರೋಹನ್ ಪಂಡಿತ್ ನಡೆಯಲು ಸಾಧ್ಯವಾಗದೆ ನೋವಿನಿಂದ ಮೈದಾನದಲ್ಲೇ ಮಲಗಿದರು. ಕೂಡಲೇ ಮೈದಾನಕ್ಕೆ ಬಂದ ಪಿಸಿಯೋ, ರೋಹನ್ ಪಂಡಿತ್ ಅವರನ್ನು ಪರೀಕ್ಷಿಸಿದರು. ಸ್ವಲ್ಪ ಸಮಯದ ನಂತರ ಕೊಂಚ ಸುಧಾರಿಸಿಕೊಂಡ ರೋಹನ್ ಪಂಡಿತ್ ಮತ್ತೆ ಅಂಪೈರಿಂಗ್ ಮುಂದುವರೆಸಿದರು.
ಇನ್ನು ಈ ಪಂದ್ಯದಲ್ಲಿ 22 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ 37 ರನ್ ಬಾರಿಸಿದರು. ಸ್ಯಾಮ್ಸನ್ ತಮ್ಮ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದರು. ಸ್ಯಾಮ್ಸನ್ 21 ಎಸೆತಗಳಲ್ಲಿ ತಿಲಕ್ ಅವರೊಂದಿಗೆ 34 ರನ್‌ಗಳ ಪಾಲುದಾರಿಕೆಯನ್ನು ಹಂಚಿಕೊಂಡರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಈಶಾನ್ಯ ರಾಜ್ಯಗಳ ಅತಿದೊಡ್ಡ ವಿಮಾನ ನಿಲ್ದಾಣ – Kannada News | PM Modi To Inaugurate Guwahati Lokapriya Gopinath Bordoloi International Airport New Terminal Tomorrow

ಗುವಾಹಟಿ, ಡಿಸೆಂಬರ್ 19: ಗುವಾಹಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ನಾಳೆ (ಡಿಸೆಂಬರ್ 20) ಈಶಾನ್ಯ ರಾಜ್ಯದ ಅತಿದೊಡ್ಡ ವಿಮಾನ ನಿಲ್ದಾಣದ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ. ಈ ಲೋಕಪ್ರಿಯ ಗೋಪಿನಾಥ್ ಬೋರ್ಡೊಲೊಯ್ ಅಂತಾರಾಷ್ಟ್ರೀಯ (ಎಲ್‌ಜಿಬಿಐ) ವಿಮಾನ ನಿಲ್ದಾಣ ಅಸ್ಸಾಂ ಮತ್ತು ಈಶಾನ್ಯದ ವಾಯುಯಾನ ಇತಿಹಾಸದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ಈಶಾನ್ಯ ರಾಜ್ಯಗಳ ಪ್ರವಾಸೋದ್ಯಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತದೆ.

ಇದು ಅಸ್ತಿತ್ವದಲ್ಲಿರುವ ಟರ್ಮಿನಲ್‌ಗಿಂತ 7 ಪಟ್ಟು ದೊಡ್ಡದಾಗಿದೆ. “ನಾನು ನಾಳೆ ಅಸ್ಸಾಂನ ಗುವಾಹಟಿಯನ್ನು ತಲುಪುತ್ತೇನೆ. ಅಲ್ಲಿ ಲೋಕಪ್ರಿಯ ಗೋಪಿನಾಥ್ ಬಾರ್ಡೋಲೋಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಕಟ್ಟಡವನ್ನು ಉದ್ಘಾಟಿಸಲಾಗುವುದು. ಇದು ಅಸ್ಸಾಂನ ಮೂಲಸೌಕರ್ಯಕ್ಕೆ ಪ್ರಮುಖ ಉತ್ತೇಜನ ನೀಡುತ್ತದೆ” ಎಂದು ಪ್ರಧಾನಿ ಮೋದಿ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅದು ನನಗೆ ಗೊತ್ತಿದೆ: ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ – Kannada News | CM economic adviser and Yelburga MLA Basavaraj Rayareddy Talks about two months gruha Lakshmi Money Pending

ಕೊಪ್ಪಳ, (ಡಿಸೆಂಬರ್ 19): ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಮತ್ತು ವಿವಾದ ಮುಂದುವರಿದಿದೆ. ಫೆಬ್ರವರಿ ಹಾಗೂ ಮಾರ್ಚ್ ತಿಂಗಳ ಹಣ ಹಾಕಿಲ್ಲ. ಆದ್ರೆ, ಆಗಸ್ಟ್​ ವರೆಗೂ ಹಾಕಿದ್ದೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಸದನದಲ್ಲಿ ಸುಳ್ಳು ಹೇಳಿ ಸಿಕ್ಕಿಬಿದ್ದಿದ್ದು, ಇದನ್ನೇ ಅಸ್ತ್ರ ಮಾಡಿಕೊಂಡ ವಿಪಕ್ಷ ಬಿಜೆಪಿ, ಏಕೆ ಸದನಕ್ಕೆ ತಪ್ಪು ನೀಡಿದ್ರು? ಕೂಡಲೇ ಸಚಿವರು ಕ್ಷಮೆ ಕೇಳಿಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೇ ಎರಡು ತಿಂಗಳ 5 ಸಾವಿರ ಕೋಟಿ ರೂಪಾಯಿ ಹಣ ಎಲ್ಲಿ ಹೋಯ್ತು ಎಂದು ಪ್ರಶ್ನಿಸಿದ್ದಾರೆ. ಇದು ಕೋಲಾಹಲ ಸೃಷ್ಟಿಸಿಸುತ್ತಿದ್ದಂತೆಯೇ ಸಚಿವ ಹೆಬ್ಬಾಳ್ಕರ್, ಸದನದಲ್ಲಿ ತಮ್ಮಿಂದಾಗಿರುವ ತಪ್ಪನ್ನು ಒಪ್ಪಿಕೊಂಡರು. ಆರ್ಥಿಕ ಇಲಾಖೆಯಿಂದ ಎಡವಟ್ಟಾಗಿದೆ ಎಂದು ಸಿಎಂ ಬಳಿ ಇರುವ ಇಲಾಖೆ ಮೇಲೆ ಆರೋಪಿಸಿದ್ದರು. ಆಗ ಯಾವ ಆರ್ಥಿಕ ಇಲಾಖೆ ಅಧಿಕಾರಿಗಳು ಮಾತನಾಡಿಲ್ಲ.

ಆದ್ರೆ, ಇದೀಗ ಅಧಿವೇಶನ ಮುಗಿಯುತ್ತಿದ್ದಂತೆಯೇ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಪ್ರತಿಕ್ರಿಯಿಸಿದ್ದು,  2024ರ ಫೆಬ್ರವರಿ, ಮಾರ್ಚ್​​​ ತಿಂಗಳ ಹಣ ಹಾಕಿಲ್ಲ. ಅದು ನಿಜ ನನಗೆ ಗೊತ್ತಿದೆ. ಆದ್ರೆ ಮಾಹಿತಿ ಕೊರತೆಯಿಂದ ಕಣ್ತಪ್ಪಿನಿಂದ ಸಚಿವರು ಕೊಟ್ಬಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಅದನ್ನ ಸಚಿವರು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಸೌಜನ್ಯಯುತವಾಗಿ ಒಪ್ಪಿಕೊಂಡೊದ್ದಾರೆ. ಅದನ್ನು ವಿರೋಧ ಪಕ್ಷದವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಈ ವೇಳೆ 2024ರ ಆರ್ಥಿಕ ವರ್ಷ ಮುಕ್ತಾಯ ಆಗಿದೆ ವಾಪಸ್ ಹಣ ಕೊಡೊಕೆ ಬರತ್ತಾ ಎಂಬ ಪತ್ರಕರ್ತರ ಪ್ರಶ್ನೆಗೆ ಹಾರಿಕೆ ಉತ್ತರ ನೀಡಿ ಹೋದರು. ಹಾಗಾದ್ರೆ, ಎರಡು ತಿಂಗಳ ಗೃಹಲಕ್ಷ್ಮೀ ಹಣ ಮನ್ನಾ ಆಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಇದನ್ನೂ ನೋಡಿ: ಗೃಹಲಕ್ಷ್ಮಿ ಬಗ್ಗೆ ತಪ್ಪು ಮಾಹಿತಿ: ಸದನದಲ್ಲಿ ವಿಷಾದ ವ್ಯಕ್ತಪಡಿಸಿದ ಲಕ್ಷ್ಮಿ ಹೆಬ್ಬಾಳ್ಕರ್, ಕ್ಷಮೆಗೆ ಪ್ರತಿಪಕ್ಷ ಪಟ್ಟು

Source link

ಧೂಳೆಬ್ಬಿಸುತ್ತಿದೆ ‘ಧುರಂಧರ್’: ವೀಕೆಂಡ್, ಕ್ರಿಸ್ಮಸ್, ಹೊಸ ವರ್ಷವೂ ಭರ್ಜರಿ ಕಲೆಕ್ಷನ್ ನಿರೀಕ್ಷೆ – Kannada News | Ranveer Singh starrer Dhurandhar movie box office collection expected to cross Rs 600 Cr

ನಟ ರಣವೀರ್ ಸಿಂಗ್ (Ranveer Singh) ವೃತ್ತಿ ಜೀವನದ ಅತಿ ದೊಡ್ಡ ಚಿತ್ರವಾಗಿ ‘ಧುರಂಧರ್’ (Dhurandhar) ಸಿನಿಮಾ ಹೊರಹೊಮ್ಮಿದೆ. ನೈಜ ಘಟನೆಗಳನ್ನು ಆಧರಿಸಿ ಸಿದ್ಧವಾದ ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಬಿಡುಗಡೆ ಆಗಿ 15 ದಿನ ಕಳೆದಿದ್ದರೂ ಕೂಡ ‘ಧುರಂದರ್’ ಸಿನಿಮಾದ ಹವಾ ತಗ್ಗುತ್ತಲೇ ಇಲ್ಲ. ಅನೇಕ ಹಳೇ ದಾಖಲೆಗಳನ್ನು ಈ ಸಿನಿಮಾ ಮುರಿಯುತ್ತಿದೆ. ಈಗಾಗಲೇ ಭಾರತದ ಗಲ್ಲಾಪೆಟ್ಟಿಗೆಯಲ್ಲಿ ಈ ಚಿತ್ರಕ್ಕೆ 470 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ (Dhurandhar Collection) ಆಗಿದೆ. ಮುಂಬರುವ ದಿನಗಳಲ್ಲಿ ಕೂಡ ಉತ್ತಮ ಕಮಾಯಿ ಆಗಲಿದೆ.

ಡಿಸೆಂಬರ್ 5ರಂದು ‘ಧುರಂಧರ್’ ಸಿನಿಮಾ ಬಿಡುಗಡೆ ಆಯಿತು. ಮೊದಲ ದಿನದಿಂದಲೇ ಈ ಸಿನಿಮಾಗೆ ಜನಮೆಚ್ಚುಗೆ ಸಿಕ್ಕಿತು. ಬಳಿಕ ಜನರಿಂದ ಬಾಯಿ ಮಾತಿನ ಪ್ರಚಾರ ಸಿಕ್ಕಿದ್ದರಿಂದ ಕಲೆಕ್ಷನ್ ಜಾಸ್ತಿ ಆಯಿತು. ಮೊದಲ ವೀಕೆಂಡ್ ಮತ್ತು ಎರಡನೇ ವೀಕೆಂಡ್​​ನಲ್ಲಿ ಅಬ್ಬರಿಸಿದ ಈ ಸಿನಿಮಾ ಈಗ ಮೂರನೇ ವೀಕೆಂಡ್​​ನಲ್ಲಿ ಕೂಡ ಅಭೂತಪೂರ್ವ ಕಲೆಕ್ಷನ್ ಮಾಡುವ ಸೂಚನೆ ಸಿಕ್ಕಿದೆ.

‘ಧುರಂಧರ್’ ಬಿಡುಗಡೆ ಆದ ಬಳಿಕ ಕೆಲವು ಸ್ಟಾರ್ ಸಿನಿಮಾಗಳು ರಿಲೀಸ್ ಆದವು. ದರ್ಶನ್ ನಟನೆಯ ‘ದಿ ಡೆವಿಲ್’, ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾಗಳು ತೆರೆಕಂಡವು. ಹಾಗಿದ್ದರೂ ಕೂಡ ‘ಧುರಂಧರ್’ ಕಲೆಕ್ಷನ್ ಕಡಿಮೆ ಆಗಲಿಲ್ಲ. ಅಷ್ಟೇ ಅಲ್ಲ, ಈಗ ಹಾಲಿವುಡ್​​ನ ‘ಅವತಾರ್ 3’ ಸಿನಿಮಾ ಬಂದಿದೆ. ಆದರೂ ಸಹ ‘ಧುರಂಧರ್’ ಅಬ್ಬರಿಸುತ್ತಲೇ ಇದೆ.

15ನೇ ದಿನವಾದ ಡಿಸೆಂಬರ್ 19ರಂದು ‘ಧುರಂಧರ್’ ಸಿನಿಮಾ ಹಲವು ಕಡೆಗಳಲ್ಲಿ ಹೌಸ್​ಫುಲ್ ಆಗಿದೆ. ಇನ್ನು, ಮೂರನೇ ವೀಕೆಂಡ್ ಆದ ಡಿಸೆಂಬರ್ 20 ಮತ್ತು 21ರಂದು ಹೆಚ್ಚಿನ ಪ್ರೇಕ್ಷಕರು ಸಿನಿಮಾ ವೀಕ್ಷಿಸುವ ನಿರೀಕ್ಷೆ ಇದೆ. ‘ಬಾಹುಬಲಿ 2’, ‘ಪುಷ್ಪ 2’ ಮುಂತಾದ ಸಿನಿಮಾಗಳ ದಾಖಲೆಗಳನ್ನು ಮುರಿಯುವತ್ತ ‘ಧುರಂಧರ್’ ಸಿನಿಮಾ ಮುನ್ನುಗ್ಗುತ್ತಿದೆ.

ಇದನ್ನೂ ಓದಿ: 167 ಕೋಟಿ ರೂ. ಒಡೆಯ, ಧುರಂಧರ್ ನಟ ಅಕ್ಷಯ್ ಖನ್ನಾ ಮದುವೆ ಆಗಿಲ್ಲ ಯಾಕೆ?

‘ಧುರಂಧರ್’ ಸಿನಿಮಾದ ಕಲೆಕ್ಷನ್ ಇಷ್ಟಕ್ಕೇ ನಿಲ್ಲುವುದಿಲ್ಲ. ಡಿಸೆಂಬರ್ 25ರಂದು ಕ್ರಿಸ್ಮಸ್ ರಜೆ ಬರಲಿದೆ. ಅದರ ಬೆನ್ನಲ್ಲೇ ನಾಲ್ಕನೇ ವೀಕೆಂಡ್ ಬರಲಿದೆ. ನಂತರ ಹೊಸ ವರ್ಷದ ಸೆಲೆಬ್ರೇಷನ್ ಕೂಡ ಇರುತ್ತದೆ. ಈ ಎಲ್ಲ ಸಂಭ್ರಮಗಳ ಕಾರಣದಿಂದ ‘ಧುರಂಧರ್’ ಸಿನಿಮಾಗೆ ಖಂಡಿತಾ ಉತ್ತಮವಾಗಿ ಕಲೆಕ್ಷನ್ ಆಗಲಿದೆ. ‘ಧುರಂಧರ್’ ಸಿನಿಮಾದ ಟೋಟಲ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ಕಾದು ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದ್ವೇಷ ಭಾಷಣ ವಿಧೇಯಕ ರಿಜೆಕ್ಟ್​ ಮಾಡಲು ಸಾಕಾಗಲಿದೆಯಾ ಆ ಒಂದು ಕಾರಣ! ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲೇನಿದೆ? – Kannada News | Opposition to Karnataka Hate Speech Bill Reaches Governor, Shobha Karandlaje, Others Write Letter Seeking Assent Withheld

ಬೆಳಗಾವಿ, ಡಿಸೆಂಬರ್ 19: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ವಿಧಾನ ಮಂಡಲದ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಆದರೆ, ಮತ್ತೊಂದೆಡೆ ವಿಧೇಯಕದ ವಿರುದ್ಧದ ವಿರೋಧದ ಧ್ವನಿ ರಾಜ್ಯಪಾಲರ ಅಂಗಳ ತಲುಪಿದೆ. ವಕೀಲ ಗಿರೀಶ್ ಭಾರದ್ವಾಜ್ ಎಂಬವರು ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ವಿಧೇಯಕಕ್ಕೆ ಅಂಕಿತ ಹಾಕಬಾರದು ಎಂದು ಮನವಿ ಮಾಡಿದ್ದಾರೆ.

ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ, 2025ಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯುವಂತೆ ಮತ್ತು ಅದನ್ನು ವಿಧಿ 200 ರ ಅಡಿಯಲ್ಲಿ ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸುವಂತೆ ಒತ್ತಾಯಿಸಿ ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಗೆ ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದ್ದೇನೆ ಎಂದು ವಕೀಲ ಗಿರೀಶ್ ಭಾರದ್ವಾಜ್ ಎಕ್ಸ್​ನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಅಲ್ಲದೆ, ರಾಜ್ಯಪಾಲರಿಗೆ ಬರೆದ ಪತ್ರದ ಪ್ರತಿಯನ್ನೂ ಲಗತ್ತಿಸಿದ್ದಾರೆ.

ವಿಧೇಯಕದ ವಿಭಾಗ 4 ಮತ್ತು 5 ಕಾರ್ಯಾಂಗದಲ್ಲಿ ಅನಿಯಂತ್ರಿತ ಅಧಿಕಾರವನ್ನು ನೀಡುತ್ತವೆ. ಇದು ವಿಧಿ 19(1)(ಎ), ಸುಪ್ರೀಂ ಕೋರ್ಟ್ ಇತ್ಯರ್ಥಪಡಿಸಿದ ಕಾನೂನು ಮತ್ತು ಮೂಲ ರಚನೆಯನ್ನು ಉಲ್ಲಂಘಿಸುತ್ತವೆ ಎಂದು ಗಿರೀಶ್ ಪ್ರತಿಪಾದಿಸಿದ್ದಾರೆ.

ವಕೀಲ ಗಿರೀಶ್ ಭಾರದ್ವಾಜ್ ಎಕ್ಸ್ ಸಂದೇಶ

ವಾಕ್ ಸ್ವಾತಂತ್ರ್ಯ ಹಕ್ಕಿನ ಉಲ್ಲಂಘನೆ: ಶೋಭಾ ಕರಂದ್ಲಾಜೆ ಆಕ್ಷೇಪ, ರಾಜ್ಯಪಾಲರಿಗೆ ಪತ್ರ

ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು (ತಡೆಗಟ್ಟುವಿಕೆ) ಮಸೂದೆ, 2025ಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ದ್ವೇಷ ಭಾಷಣವನ್ನು ನಿಗ್ರಹಿಸುವ ಗುರಿಯನ್ನು ಹೊಂದಿರುವ ಈ ಮಸೂದೆಯು ಕಾರ್ಯಾಂಗಕ್ಕೆ ಅತಿಯಾದ ಮತ್ತು ಅಸ್ಪಷ್ಟ ಅಧಿಕಾರವನ್ನು ನೀಡುತ್ತದೆ, 19(1)(a) ವಿಧಿಯ ಅಡಿಯಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆದರಿಕೆ ಹಾಕುತ್ತದೆ ಮತ್ತು ಸ್ಪಷ್ಟ ವ್ಯಾಖ್ಯಾನಗಳನ್ನು ಹೊಂದಿಲ್ಲ ಎಂದು ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಶೋಭಾ ಕರಂದ್ಲಾಜೆ ಪ್ರತಿಪಾದಿಸಿದ್ದಾರೆ.

ಏತನ್ಮಧ್ಯೆ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ವಿಧಾನ ಮಂಡಲದ ಮೇಲ್ಮನೆಯಲ್ಲಿ ಅಂಗೀಕಾರ ದೊರೆತಿದೆ. ಇದರೊಂದಿಗೆ, ದ್ವೇಷ ಭಾಷಣ ಪ್ರತಿಬಂಧಕ ಕಾಯ್ದೆ ಕಾನೂನಾಗಿ ರೂಪುಗೊಳ್ಳುವುದು ಬಹುತೇಕ ಖಚಿತವಾಗಿದೆ. ಇನ್ನು ರಾಜ್ಯಪಾಲರ ಅಂಕಿತ ಬಿದ್ದ ಬೆನ್ನಲ್ಲೇ ಕಾನೂನಾಗಿ ಅಸ್ತಿತ್ವಕ್ಕೆ ಬರಲಿದೆ. ವ್ಯಕ್ತಿ, ವ್ಯಕ್ತಿಗಳ ಸಮೂಹ, ಸಂಸ್ಥೆಗಳ ವಿರುದ್ಧ ಸಮಾಜದಲ್ಲಿ ಅಸಾಮರಸ್ಯ ದ್ವೇಷವನ್ನುಂಟು ಮಾಡುವ ದ್ವೇಷಭಾಷಣದ ಪ್ರಸರಣೆ, ಪ್ರಕಟಣೆ ಅಥವಾ ಪ್ರಚಾರವನ್ನು ಹಾಗೂ ಅಪರಾಧಗಳನ್ನು ತಡೆಗಟ್ಟಲು ಮತ್ತು ಪ್ರತಿಬಂಧಿಸಲು, ಅಂಥ ಅಪರಾಧಗಳಿಗೆ ದಂಡನೆಯನ್ನು ಉಪಬಂಧಿಸಲು ಹಾಗೂ ಹಾನಿಗೊಳಗಾದ ಸಂತ್ರಸ್ತರಿಗೆ ತಕ್ಕಷ್ಟು ಪರಿಹಾರವನ್ನು ಒದಗಿಸಲು ಶಾಸನವನ್ನು ಅಧಿನಿಯಮಿಸುವುದು ಅವಶ್ಯಕವೆಂದು ಪರಿಗಣಿಸಿ ಈ ವಿಧೇಯಕ ಜಾರಿ ಮಾಡಲಾಗುತ್ತಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಸದನಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಏನಿದು ದ್ವೇಷ ಅಪರಾಧಗಳ ಮಸೂದೆ? ದ್ವೇಷಾಪರಾಧಕ್ಕೆ ಶಿಕ್ಷೆಯೇನು? ಇಲ್ಲಿದೆ ಮಾಹಿತಿ

ಸುಧೀರ್ಘ ಅವಧಿಯ ಚರ್ಚೆಯ ನಂತರ ಪ್ರಸ್ತಾವವನ್ನು ಸಭಾಪತಿಯವರು ಧ್ವನಿಮತಕ್ಕೆ ಹಾಕಿದರು. ಸದಸ್ಯರ ಸಹಮತದೊಂದಿಗೆ ವಿಧೇಯಕಕ್ಕೆ ಅಂಗೀಕಾರ ದೊರೆಯಿತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹೊಸ ರಿಯಾಲಿಟಿ ಶೋಗೆ ಹೋಸ್ಟ್ ಆದ ಅಕ್ಷಯ್ ಕುಮಾರ್; ಗೆದ್ದವರಿಗೆ ಕೋಟಿ ಕೋಟಿ ಹಣ? – Kannada News | Akshay Kumar Hosts Wheel of Fortune India: Sony TV’s New Reality Game Show

ವಿಶ್ವಾದ್ಯಂತ ಹಲವು ರಿಯಾಲಿಟಿ ಶೋಗಳು ಪ್ರಸಾರ ಕಾಣುತ್ತಿವೆ. ಇಂಗ್ಲಿಷ್​ನಲ್ಲಿ ಪ್ರಸಾರ ಕಾಣುವ ಅನೇಕ ರಿಯಾಲಿಟಿ ಶೋಗಳನ್ನು ಈಗ ಭಾರತಕ್ಕೆ ತರಲಾಗುತ್ತಿದೆ. ಬಿಗ್ ಬಾಸ್, ಶಾರ್ಕ್ ಟ್ಯಾಂಕ್ ಇಂಡಿಯಾ ಸೇರಿದಂತೆ ಅನೇಕ ರಿಯಾಲಿಟಿ ಶೋಗಳು ಬೇರೆ ದೇಶಗಳಿಂದ ಎರವಲು ಪಡೆದಿದ್ದು. ಈಗ ಸೋನಿ ಪಿಕ್ಚರ್ಸ್ ನೆಟ್ವರ್ಕ್ ಇಂಡಿಯಾ ‘ವೀಲ್ಸ್ ಆಫ ಫಾರ್ಚೂನ್’ ಹೆಸರಿನ ರಿಯಾಲಿಟಿ ಶೋ ಆರಂಭಿಸುತ್ತಿದೆ. ಈ ಶೋನ ಅಕ್ಷಯ್ ಕುಮಾರ್ ನಡೆಸಿಕೊಡಲಿದ್ದಾರೆ.

ಸೋನಿ ಪಿಕ್ಚರ್ಸ್​​ನಲ್ಲಿ ‘ಶಾರ್ಕ್ ಟ್ಯಾಂಕ್’ ಪ್ರಸಾರ ಕಂಡಿದೆ. ‘ಕೌನ್ ಬನೇಗಾ ಕರೋಡ್ಪತಿ’ ಕೂಡ ಪ್ರಸಾರ ಕಾಣೋದು ಸೋನಿಯಲ್ಲಿ. ಈಗ ವೀಲ್ಸ್ ಆಫ್ ಫಾರ್ಚೂನ್ ಶೋ ಬರುತ್ತಿದೆ. ಶೋನ ಗೆದ್ದವರಿಗೆ ಕೋಟಿ ರೂಪಾಯಿವರೆಗೆ ಹಣ ಸಿಗೋ ನಿರೀಕ್ಷೆ ಇದೆ. ಈ ಆಟ ಯಾವ ರೀತಿಯಲ್ಲಿ ಇರುತ್ತದೆ ಎಂಬ ಕುತೂಹಲ ಇದೆ.

ವೀಲ್ಸ್ ಆಫ್ ಫಾರ್ಚೂನ್ ಅಮೇರಿಕದ ಗೇಮ್ ಶೋ. ಇದನ್ನು ಮೊದಲು ಬಾರಿಗೆ ಆರಂಭಿಸಿದ್ದು 1975ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಶೋ ವಿವಿಧ ಹಂತದಲ್ಲಿ, ವಿವಿಧ ವಾಹಿನಿಗಳಲ್ಲಿ ಪ್ರಸಾರ ಕಾಣುತ್ತಲೇ ಬರುತ್ತಿದೆ. ಈ ಶೋನ ಭಾರತಕ್ಕೆ ತರಲು ಹೈಗೇಟ್ ಎಂಟರ್ಟೈನ್ಮೆಂಟ್ ಪರವಾನಿಗೆ ಪಡೆದಿದ್ದು, ಇದೇ ಸಂಸ್ಥೆ ಶೋನ ನಿರ್ಮಾಣ ಮಾಡಲಿದೆ.

ಪದಗಳ ಪಜಲ್, ದೈತ್ಯ ಕಾರ್ನಿವಾಲ್ ತಿರುಗಿಸೋದು ಸೇರಿದಂತೆ ವಿವಿಧ ಗೇಮ್​ಗಳನ್ನು ಇದರಲ್ಲಿ ಇರಲಿವೆ. ಇಂಗ್ಲಿಷ್​​ನಲ್ಲಿ ಈಗಾಗಲೇ 8 ಸಾವಿರಕ್ಕೂ ಹೆಚ್ಚು ಎಪಿಸೋಡ್​ಗಳು ಪ್ರಸಾರ ಕಂಡಿರೋದು ಇದರ ಹೆಚ್ಚುಗಾರಿಕೆ. ಭಾರತಕ್ಕೆ ತಕ್ಕಂತೆ ನಿಯಮ ಬದಲಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಇದು ಸಮಾಜಕ್ಕೂ ಅಪಾಯಕಾರಿ’; ಅಕ್ಷಯ್ ಕುಮಾರ್ ವಿಡಿಯೋ ಬಗ್ಗೆ ಕೋರ್ಟ್ ಕಳವಳ

ಅಂದಹಾಗೆ, ಅಕ್ಷಯ್ ಕುಮಾರ್ ಅವರು ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಅವರು ದಿನಕ್ಕೆ 2-3 ಸಿನಿಮಾಗಳನ್ನು ಶೂಟ್ ಮಾಡಿದ ಉದಾಹರಣೆ ಕೂಡ ಇದೆ. ಇವುಗಳ ಜೊತೆ ಅವರು ಈಗ ರಿಯಾಲಿಟಿ ಶೋ ಕೂಡ ಒಪ್ಪಿಕೊಂಡಿದ್ದಾರೆ. ಇದಕ್ಕಾಗಿ ಅವರು ಒಂದರಿಂದ ಎರಡು ದಿನ ಮೀಸಲಿಡಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕನಸಿನ ಮನೆ ಕನಸು ಕಂಡವರಿಗೆ ಶಾಕ್: ಉಳ್ಳವರಿಗಾಗಿ ಬಡವರ ಹೊಟ್ಟೆ ಮೇಲೆ ಹೊಡೆದ ಸರ್ಕಾರ – Kannada News | Devanahalli land scam allegation: Officials Allocate Quarry Plots to Poor

ದೇವನಹಳ್ಳಿ, ಡಿಸೆಂಬರ್​ 19: ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎನ್ನುವ ಗಾದೆ ಮಾತು ಒಂದಿದೆ. ಈ ಗಾದೆ ಮಾತು ಇದೀಗ ನಗರದ ಹೊರವಲಯದ ಗ್ರಾಮಸ್ಥರಿಗೆ ಅನ್ವಯವಾಗುತ್ತಿದೆ. ದಶಕಗಳ ಕನಸು ನನಸಾಯಿತು ಅಂತ ಖುಷಿ ಪಡುವಷ್ಟರಲ್ಲೇ ಕಂದಾಯ ಇಲಾಖೆ ಅಧಿಕಾರಿಗಳು (Revenue Department officials) ಮಾಡಿರುವ ಅದೊಂದು ಎಡವಟ್ಟಿನಿಂದ ಇದೀಗ ಗ್ರಾಮಸ್ಥರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಲ್ಲು ಕ್ವಾರಿಯಲ್ಲಿ ಜಮೀನು ಮಂಜೂರು

ಅಂದಹಾಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಮಾರಗೊಂಡನಹಳ್ಳಿ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಸರ್ಕಾರದಿಂದ ನಿವೇಶನ ಪಡೆಯಲು ಕಾದು ಕುಳಿತಿದ್ದರು. ಜೊತೆಗೆ ಜನರ ಮನವಿಗೆ ಸ್ಪಂದಿಸಿದ ಸ್ಥಳಿಯ ಶಾಸಕ ಹಾಗೂ ಸಚಿವ ಕೆಹೆಚ್ ಮುನಿಯಪ್ಪ ಪಂಚಾಯತಿಗಳಲ್ಲಿ ಭುಮಿ ಗುರುತಿಸಿ ನಿವೇಶನ ರಹಿತರಿಗೆ ನಿವೇಶನ ನೀಡಲು ಸೂಚಿಸಿದ್ದರು. ಅದರಂತೆ ನಿವೇಶನಗಳಿಗೆ ಸೂಕ್ತವಾದ ಜಾಗ ನೀಡಬೇಕಾದ ಕಂದಾಯ ಅಧಿಕಾರಿಗಳು ಇದೀಗ ಪಕ್ಕದಲ್ಲೇ ಸಮತಟ್ಟಾದ ಭೂಮಿ ಇದ್ದರು ಕಲ್ಲು ಕ್ವಾರಿಯ ಜಮೀನನ್ನ ಮಂಜೂರು ಮಾಡಿದ್ದಾರಂತೆ.

ಇದನ್ನೂ ಓದಿ: ಅಕ್ರಮ BPL ಕಾರ್ಡ್​​ದಾರರಿಗೆ ಭರ್ಜರಿ ಶಾಕ್​​ ಕೊಟ್ಟ ಸರ್ಕಾರ: 3 ತಿಂಗಳಲ್ಲಿ ರದ್ದಾದ ಪಡಿತರ ಚೀಟಿಗಳೆಷ್ಟು?

ಹೀಗಾಗೆ ಕಲ್ಲು ಕ್ವಾರಿಯ ಜಮೀನಿನಲ್ಲಿ ಯಾವ ರೀತಿ ಮನೆ ಕಟ್ಟಲು ಸದ್ಯವಾಗುತ್ತೆ ಅಂತ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ರೊಚಿಗೆದ್ದಿದ್ದು, ಕಲ್ಲು ಕ್ವಾರಿ ಜಮೀನು ಮಂಜೂರು ಮಾಡಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೆ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರೊಬ್ಬರಿಗೆ ಅನುಕೂಲ ಮಾಡಲು ಈ ರೀತಿ ಉತ್ತಮ ಜಾಗ ಬಿಟ್ಟು ಕಲ್ಲುಗಳಿರುವ ಜಾಗ ನೀಡಿದ್ದಾರೆ ಅಂತ ಪಿಡಿಒ ಸೇರಿದಂತೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರಾದ ಗೋವಿಂದರಾಜು ಎನ್ನುವವರು ಆಕ್ರೋಶ ಹೊರಹಾಕಿದ್ದಾರೆ.

ಆಶ್ರಯ ಯೋಜನೆಯಡಿಯಲ್ಲಿ ಬಡ ಜನರಿಗೆ ನಿವೇಶನ ನೀಡಲು ಕಲ್ಲು ಕ್ವಾರಿ ಜಾಗ ಗುರುತಿಸಿರುವುದು ಯಾವ ಮಾನದಂಡದ ಮೇಲೆ ಅಂತ ಇಓ ಮತ್ತು ತಹಶೀಲ್ದಾರ್​​​ಗೆ ಗ್ರಾಮಸ್ಥರು ದೂರು ನೀಡಿದ್ದು, ಕಲ್ಲು ಬಂಡೆ ಜಮೀನು ಹಿಂಪಡೆದು ಸಮತಟ್ಟಾದ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿದ್ದಾರೆ.

ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಹೇಳಿದ್ದಿಷ್ಟು 

ಇನ್ನು ಈ ಕುರಿತು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಮಾತನಾಡಿದ್ದು, ಕಂದಾಯ ಇಲಾಖೆ ನಮ್ಮ ಆಶ್ರಯ ಯೋಜನೆಗೆ ಜಮೀನು ಮಂಜೂರು ಮಾಡಿದ್ದು, ನಾವು ಆ ಜಮೀನು ಕೊಡುವಂತೆ ಕೇಳಿಲ್ಲ. ಇದೀಗ ಅದು ನಿವೇಶನಗಳಿಗೆ ಯೋಗ್ಯವಾಗದ ಕಾರಣ ಆ ಜಮೀನನ್ನ ವಾಪಸ್ ಪಡೆಯುವಂತೆ ಡಿಸಿ ಅವರಿಗೆ ಪತ್ರ ಬರೆದಿದ್ದು, ಬದಲಿಯಾಗಿ ಯೋಗ್ಯವಾದ ಜಮೀನು ನಿವೇಶನಗಳಿಗೆ ನೀಡುವಂತೆ ಕೇಳಿದ್ದೇವೆ ಎಂದರು.

ಇದನ್ನೂ ಓದಿ: ಮುಡಾ ಕೇಸ್​​ ವಿಚಾರಣೆ ಮುಂದೂಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ: ವಾದ-ಪ್ರತಿವಾದ ಹೇಗಿತ್ತು?

ಒಟ್ಟಿನಲ್ಲಿ ಏರ್ಪೋಟ್ ಬಳಿ ಭೂಮಿ ಬೆಲೆ ಗಗನಕ್ಕೇರುತ್ತಿದ್ದು ಒಂದಿಚ್ಚು ಭೂಮಿ ಬಂಗಾರದ ಬೆಲೆಬಾಳುತ್ತಿದೆ. ಈ ನಡುವೆ ಸರ್ಕಾರದಿಂದ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದವರಿಗೆ ಅಧಿಕಾರಿಗಳ ಎಡವಟ್ಟಿನಿಂದ ಆತಂಕ ಶುರುವಾಗಿದೆ. ಸದ್ಯ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಆಶ್ರಯ ಯೋಜನೆಗೆ ಸೂಕ್ತ ಭೂಮಿ ನೀಡುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೈತ್ರಾ ಕುಂದಾಪುರ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ಕೋರ್ಟ್ ಸೂಚನೆ: ಏನಿದು ಕೇಸ್? – Kannada News | Court order against Bigg Boss Kannada Season 12 contestant Chaithra Kundapura

ಸಾಕಷ್ಟು ವಿವಾದಗಳಿಂದ ಸುದ್ದಿಯಾದ ಚೈತ್ರಾ ಕುಂದಾಪುರ ಅವರು ಈಗ ಬಿಗ್ ಬಾಸ್ (Bigg Boss Kannada Season 12) ಶೋನಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರ ವಿರುದ್ಧ ಕೋರ್ಟ್ ಆದೇಶ ಬಂದಿದೆ. ಸ್ವತಃ ಚೈತ್ರಾ ಕುಂದಾಪುರ ಅವರ ತಂದೆಯೇ ಚೈತ್ರಾ ವಿರುದ್ಧ ಕೇಸ್ ಹಾಕಿದ್ದರು. ಪತ್ನಿ ಹಾಗೂ ಮಗಳಿಂದ ತಮಗೆ ಕಿರುಕುಳ ಆಗುತ್ತಿದೆ ಎಂದು ಚೈತ್ರಾ ಕುಂದಾಪುರ ಅವರ ತಂದೆ ಬಾಲಕೃಷ್ಣ ನಾಯ್ಕ್ ಅವರು ದೂರು ನೀಡಿದ್ದರು. ತಮಗೆ ನ್ಯಾಯ ದೊರಕಿಸಿಕೊಡುವಂತೆ ಬಾಲಕೃಷ್ಣ ಅವರು ಹಿರಿಯ ನಾಗರಿಕರ ನ್ಯಾಯಾಲಯದ ಮೊರೆ ಹೋಗಿದ್ದರು. ಈಗ ಚೈತ್ರಾ ಕುಂದಾಪುರ (Chaithra Kundapura) ವಿರುದ್ಧ ಆದೇಶ ಬಂದಿದೆ. ನಿಯಮಾನುಸಾರ ಕ್ರಮ ಕೈಗೊಳ್ಳಲು ಕುಂದಾಪುರ ಪೊಲೀಸರಿಗೆ ನ್ಯಾಯಾಲಯ ಸೂಚಿಸಿದೆ.

ಹಿರಿಯ ನಾಗರಿಕರ ನ್ಯಾಯಾಲಯವು ಚೈತ್ರಾ ಕುಂದಾಪುರ ವಿರುದ್ಧ ಆದೇಶ ನೀಡಿದೆ. ‘ಬಾಲಕೃಷ್ಣ ನಾಯ್ಕ್ ಅವರಿಗೆ ಯಾವುದೇ ದೈಹಿಕ, ಮಾನಸಿಕ ಕಿರುಕುಳ ನೀಡುವಂತಿಲ್ಲ. ಮನೆಯಲ್ಲಿ ನಿರ್ಭೀತಿಯಿಂದ ವಾಸಿಸಲು ಅನುವು ಮಾಡಿಕೊಡಬೇಕು’ ಎಂದು ನ್ಯಾಯಾಲಯ ಆದೇಶ ನೀಡಿದೆ. ಅಲ್ಲದೇ, ಈ ಬಗ್ಗೆ ಚೈತ್ರಾ ಕುಂದಾಪುರ ಅವರಿಂದ ಸೂಕ್ತ ಮುಚ್ಚಳಿಕೆ ಪಡೆಯುವಂತೆ ಸೂಚಿಸಲಾಗಿದೆ.

ಬಾಲಕೃಷ್ಣ ನಾಯ್ಕ್​ ಅವರಿಗೆ ಕರ್ನಾಟಕ ಪೋಷಕರು ಮತ್ತು ಹಿರಿಯ ನಾಗರಿಕರ ಪಾಲನೆ ಮತ್ತು ಕಲ್ಯಾಣ ನಿಯಮಗಳು ಅಡಿಯಲ್ಲಿ ರಕ್ಷಣೆ ನೀಡಲಾಗಿದೆ. ಇದರ ಅನ್ವಯ ಕುಂದಾಪುರ ಪೊಲೀಸರು ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಿದ್ದಾರೆ. ಇದರಿಂದ ಚೈತ್ರಾ ಕುಂದಾಪುರ ಅವರ ಬಿಗ್ ಬಾಸ್ ಆಟಕ್ಕೆ ತೊಂದರೆ ಆಗುತ್ತಾ ಎಂಬ ಪ್ರಶ್ನೆ ಉದ್ಭವ ಆಗಿದೆ.

ಈ ಮೊದಲು ಚೈತ್ರಾ ಕುಂದಾಪುರ ಮತ್ತು ಅವರ ತಂದೆಯ ನಡುವಿನ ಸಂಘರ್ಷ ತಾರಕಕೇರಿತ್ತು. ಚೈತ್ರಾ ಮದುವೆ ವೇಳೆ ಬಾಲಕೃಷ್ಣ ಅವರ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಸಮಯದಲ್ಲಿ ತಂದೆಯ ವಿರುದ್ಧ ಸಾಮಾಜಿಕ ಜಾಲತಾಣಗಳ ಮೂಲಕ ಪರೋಕ್ಷವಾಗಿ ಚೈತ್ರಾ ಕುಂದಾಪುರ ಅವರ ಕಿಡಿಕಾರಿದ್ದರು. ಈ ಎಲ್ಲ ಕಾರಣಗಳಿಂದ ಅವರ ಕುಟುಂಬದಲ್ಲಿ ಬಿರುಕು ಮೂಡಿತ್ತು.

ಇದನ್ನೂ ಓದಿ: ಬಾಯಿ ಬಿಟ್ಟರೆ ಬರೀ ಸುಳ್ಳು, ಮೋಸದ ಆಟ: ಚೈತ್ರಾ ಮೇಲೆ ಆರೋಪ; ದೇವರ ಮುಂದೆ ಕಣ್ಣೀರು

ಬಿಗ್ ಬಾಸ್ ಕನ್ನಡ 11ನೇ ಸೀಸನ್​ನಲ್ಲಿ ಚೈತ್ರಾ ಕುಂದಾಪುರ ಅವರು ಸ್ಪರ್ಧಿಸಿದ್ದರು. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದಾರೆ. ಕೋರ್ಟ್ ಆದೇಶದ ಪರಿಣಾಮದಿಂದ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬರಬೇಕಾದ ಪ್ರಮೇಯ ಬರುತ್ತಾ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link