ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ
ನವದೆಹಲಿ, ಮಾರ್ಚ್ 30: ಪ್ರಮಾಣೀಕೃತವಲ್ಲದ ಸಿಸಿಟಿವಿ ಕ್ಯಾಮರಾಗಳ ಮಾರಾಟವನ್ನು ಭಾರತ ಏಪ್ರಿಲ್ 1ರಿಂದ ನಿರ್ಬಂಧಿಸಿದೆ. ಇದರೊಂದಿಗೆ ಚೀನೀ ಮೂಲದ ಸಿಸಿ ಕ್ಯಾಮರಾಗಳಿಗೆ (Chinese origin CCTV cameras) ಭಾರತದಲ್ಲಿ ಮಾರಾಟ ಸಾಧ್ಯವಾಗದೇ ಹೋಗಬಹುದು. ಭಾರತದ ಮಾರುಕಟ್ಟೆಯಲ್ಲಿ ಉಪಸ್ಥಿತಿ ಹೊಂದಿರುವ ಹೈಕ್ವಿಶನ್ (HikVision), ಡಹುವಾ ಟೆಕ್ನಾಲಜಿ (Dahua Technology), ಟಿಪಿ ಲಿಂಕ್ (TP-Link) ಇತ್ಯಾದಿ ಚೀನೀ ಬ್ರ್ಯಾಂಡ್ ಈ ಕ್ರಮದಿಂದ ಭಾರತದ ಸ್ಥಳೀಯ ಸಿಸಿಟಿವಿ ಕ್ಯಾಮರಾ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ. ಸಿಸಿಟಿವಿ ಕ್ಯಾಮರಾದಲ್ಲಿ ಹೇಗೆ ನಿರ್ಬಂಧ?…