Category Archives: Blog

Your blog category

ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ಏಪ್ರಿಲ್ 1ರಿಂದ ಚೀನೀ ಸಿಸಿಟಿವಿ ಕ್ಯಾಮರಾಗಳಿಗೆ ನಿರ್ಬಂಧ; ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಈ ಕ್ರಮ

ನವದೆಹಲಿ, ಮಾರ್ಚ್ 30: ಪ್ರಮಾಣೀಕೃತವಲ್ಲದ ಸಿಸಿಟಿವಿ ಕ್ಯಾಮರಾಗಳ ಮಾರಾಟವನ್ನು ಭಾರತ ಏಪ್ರಿಲ್ 1ರಿಂದ ನಿರ್ಬಂಧಿಸಿದೆ. ಇದರೊಂದಿಗೆ ಚೀನೀ ಮೂಲದ ಸಿಸಿ ಕ್ಯಾಮರಾಗಳಿಗೆ (Chinese origin CCTV cameras) ಭಾರತದಲ್ಲಿ ಮಾರಾಟ ಸಾಧ್ಯವಾಗದೇ ಹೋಗಬಹುದು. ಭಾರತದ ಮಾರುಕಟ್ಟೆಯಲ್ಲಿ ಉಪಸ್ಥಿತಿ ಹೊಂದಿರುವ ಹೈಕ್​ವಿಶನ್ (HikVision), ಡಹುವಾ ಟೆಕ್ನಾಲಜಿ (Dahua Technology), ಟಿಪಿ ಲಿಂಕ್ (TP-Link) ಇತ್ಯಾದಿ ಚೀನೀ ಬ್ರ್ಯಾಂಡ್ ಈ ಕ್ರಮದಿಂದ ಭಾರತದ ಸ್ಥಳೀಯ ಸಿಸಿಟಿವಿ ಕ್ಯಾಮರಾ ಉದ್ಯಮಕ್ಕೆ ಪುಷ್ಟಿ ಸಿಗುವ ನಿರೀಕ್ಷೆ ಇದೆ.

ಸಿಸಿಟಿವಿ ಕ್ಯಾಮರಾದಲ್ಲಿ ಹೇಗೆ ನಿರ್ಬಂಧ?

ಸರ್ಕಾರವು ಸಿಸಿಟಿವಿ ಕ್ಯಾಮರಾ ಸಿಸ್ಟಂಗಳಿಗೆ ಹೊಸ ಸರ್ಟಿಫಿಕೇಶನ್ ನೀತಿ ರೂಪಿಸಿದೆ. ಅಂದರೆ, ಸರ್ಟಿಫೈಡ್ ಕ್ಯಾಮೆರಾಗಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಪ್ರವೇಶ ಸಿಗುತ್ತದೆ. ಚೀನಾ ನಿರ್ಮಿತ ಚಿಪ್​ಸೆಟ್​ಗಳನ್ನು ಬಳಸಿ ತಯಾರಿಸಲಾಗುವ ಸಿಸಿಟಿವಿ ಸಾಧನಗಳಿಗೆ ಸರ್ಟಿಫಿಕೇಶನ್ ಸಿಗುವ ಸಾಧ್ಯತೆ ಇಲ್ಲ. ಹೀಗಾಗಿ, ಚೀನಾ ಮೂಲದ ಸಿಸಿಟಿವಿ ಕ್ಯಾಮರಾ ಮತ್ತು ಸೆಕ್ಯೂರಿಟಿ ಸಿಸ್ಟಂಗಳು ಭಾರತದಲ್ಲಿ ನಿರ್ಬಂಧಿತಗೊಳ್ಳಲಿವೆ.

ಇದನ್ನೂ ಓದಿ: ಯುಪಿಐ ವಹಿವಾಟು ಸೇರಿದಂತೆ ವಿವಿಧ ಬ್ಯಾಂಕುಗಳ ಎಟಿಎಂ ಟ್ರಾನ್ಸಾಕ್ಷನ್ ನಿಯಮಗಳಲ್ಲಿ ಬದಲಾವಣೆ, ಗಮನಿಸಿ

ಚೀನಾ ಸಿಸ್ಟಂಗಳ ಮೇಲೆ ಯಾಕೆ ಕ್ರಮ?

ಚೀನಾ ಮಾತ್ರವೇ ಅಲ್ಲ, ಯಾವುದೇ ವಿದೇಶೀ ನಿರ್ಮಿತ ಚಿಪ್​ಸೆಟ್ ಇತ್ಯಾದಿ ಬಳಸಿ ತಯಾರಾಗುವ ಸೆಕ್ಯೂರಿಟಿ ಸಿಸ್ಟಂಗಳಿಗೆ ಸರ್ಟಿಫಿಕೇಶನ್ ಸಿಗುವುದಿಲ್ಲ. ಸಿಸಿಟಿವಿ ಕ್ಯಾಮರಾಗಳು ಭದ್ರತಾ ದೃಷ್ಟಿಯಿಂದ ಬಹಳ ಮುಖ್ಯವಾದ ಸಾಧನಗಳಾಗಿವೆ. ಏರ್​ಪೋರ್ಟ್, ಸರ್ಕಾರಿ ಕಚೇರಿ ಇತ್ಯಾದಿ ಬಹಳ ಸೂಕ್ಷ್ಮ ಸ್ಥಳಗಳಲ್ಲಿ ಅಳವಡಿಸುವ ಕ್ಯಾಮೆರಾಗಳು ತುಂಬಾ ಮುಖ್ಯವಾದ ದತ್ತಾಂಶವನ್ನು ಸೆರೆಹಿಡಿಯಬಲ್ಲುದು.

ಈ ಉಪಕರಣಗಳು ವಿದೇಶೀ ಮೂಲದ್ದಾಗಿದ್ದರೆ ಸೂಕ್ಷ್ಮ ಮಾಹಿತಿಯು ವಿದೇಶಗಳಿಗೆ ರವಾನೆಯಾಗುವ ಅಪಾಯ ಹೆಚ್ಚಿರುತ್ತದೆ. ಇದರಿಂದ ರಾಷ್ಟ್ರೀಯ ಭದ್ರತೆಗೆ ಬಹಳ ಅಪಾಯ ಇರುತ್ತದೆ.

ಇದನ್ನೂ ಓದಿ: ಹೆಚ್ಚು ನಾಮಿನಿಗಳು, ಸೊನ್ನೆ ಲೋನ್ ಪ್ರೀಪೇಮೆಂಟ್ ಚಾರ್ಜ್; ಜನಸಾಮಾನ್ಯರು ಗಮನಿಸಬೇಕಾದ ಹೊಸ ನಿಯಮಗಳಿವು

ಸರ್ಕಾರ ಈ ಹಿಂದೆಯೇ ಪ್ರಮಾಣೀಕೃತ ಪರೀಕ್ಷೆ ಮತ್ತು ಗುಣಮಟ್ಟ ಪ್ರಮಾಣ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಈ ಪ್ರಮಾಣಪತ್ರ ಪಡೆಯಲು ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಉದ್ಯಮಕ್ಕೆ ಎರಡು ವರ್ಷ ಕಾಲಾವಕಾಶ ಕೊಡಲಾಗಿತ್ತು. ಸಿಸಿಟಿವಿ ತಯಾರಕರು ಚಿಪ್​ಸೆಟ್ ಇತ್ಯಾದಿ ಪ್ರಮುಖ ಬಿಡಿಭಾಗಗಳು ಯಾವ ದೇಶದಿಂದ ಬಂದಿರುವಂಥವು ಎಂಬುದನ್ನು ಬಹಿರಂಗಪಡಿಸಬೇಕು; ಪ್ರಮಾಣಿತ ಲ್ಯಾಬ್​ಗಳಲ್ಲಿ ಈ ಸಾಧನಗಳ ಪರೀಕ್ಷೆಯಾಗಬೇಕು. ದೂರದಿಂದಲೇ ಇದನ್ನು ಅನಧಿಕೃತವಾಗಿ ನಿಭಾಯಿಸಲ್ಪಡುತ್ತಿಲ್ಲ ಎಂಬುದು ಪರೀಕ್ಷೆಯಲ್ಲಿ ಸಾಬೀತಾಗಬೇಕು. ಇವೇ ಮುಂತಾದ ಮಾನದಂಡಗಳು ಸಿಸಿಟಿವಿ ಉತ್ಪನ್ನಗಳಿಗೆ ಇವೆ.

ಹೊಸ ನಿಯಮಗಳ ಅಡಿಯಲ್ಲಿ ಇಲ್ಲಿಯವರೆಗೆ ಸರ್ಕಾರವು 507 ಸಿಸಿಟಿವಿ ಕ್ಯಾಮರಾ ಮಾಡಲ್​ಗಳಿಗೆ ಸರ್ಟಿಫಿಕೇಶನ್ ನೀಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ ಎಂದಿದ್ಯಾಕೆ ಶ್ರೀರಾಮುಲು?

ಬಾಗಲಕೋಟೆ, (ಮಾರ್ಚ್ 30): ಕಾಂಗ್ರೆಸ್​​ನ  (Congress) ಎಚ್​​ವೈ ಮೇಟಿ ನಿಧನದಿಂದ ತೆರವಾದ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Bagalkot By Election) ಇದೇ ಏಪ್ರಿಲ್ 9ರಂದು ನಡೆಯಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್​​ನ ನಾಯಕರಿಂದ ಭರ್ಜರಿ ಮತಬೇಟೆ ನಡೆದಿದೆ. ಇನ್ನು ಇಂದಿನಿಂದ (ಮಾರ್ಚ್ 30) ಸಿಎಂ ಸಿದ್ದರಾಮಯ್ಯ ಸಹ ಪ್ರಚಾರಕ್ಕಿಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಕ್ಯಾಂಪೇನ್ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಶ್ರೀರಾಮುಲು ಸಹ ಪ್ರಚಾರ ನಡೆಸಿದ್ದು, ಈ ವೇಳೆ ಟಿವಿ9 ಜತೆ ಮಾತನಾಡಿದ ರಾಮುಲು, ಸಿದ್ದರಾಮಯ್ಯ ಬಾದಾಮಿ ಶಾಸಕರಾಗಿದ್ದಾಗ ಅಭಿವೃದ್ಧಿ ಮಾಡಿಲ್ಲ. ಆಗ ಕಳ್ಳ ಮತಗಳಿಂದ ನನ್ನ ವಿರುದ್ಧ ಗೆದ್ದಿದ್ದರು. ಈ ವೇಳೆ ಸಿ.ಎಂ.ಇಬ್ರಾಹಿಂ ಅವರೇ ಹೇಳಿದ್ದಾರೆ.ಸಿಎಂ ಸಿದ್ದರಾಮಯ್ಯಗೆ ಬಾಗಲಕೋಟೆ ಸೋಲಿನ ಭಯ ಇದೆ. ಹೀಗಾಗಿ 5 ದಿನ ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಪ್ರಚಾರ ಮಾಡಿದರೂ ಕಾಂಗ್ರೆಸ್​ ಗೆಲ್ಲುವುದಿಲ್ಲ. ಇಡೀ ಸಚಿವ ಸಂಪುಟ ಸಮೇತ ಬಂದರೂ ಬಿಜೆಪಿ ಗೆಲುವು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಥಾರ್ ಚಕ್ರದ ಅಡಿಯಲ್ಲಿ ಸಿಲುಕಿದ ಕರು; ಸಮಯಪ್ರಜ್ಞೆ ಮೆರೆದು ಜೀವ ಉಳಿಸಿದ ಕಾರು ಮಾಲೀಕ!

ರಸ್ತೆಯ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಪ್ಪು ಬಣ್ಣದ ಮಹೀಂದ್ರಾ ಥಾರ್ (Thar) ಎಸ್‌ಯುವಿಯ ಮುಂಭಾಗದ ಚಕ್ರದ ಅಡಿಯಲ್ಲಿ ಪುಟ್ಟ ಕರುವೊಂದು ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ತನ್ನ ಕರು ಅಪಾಯದಲ್ಲಿರುವುದನ್ನು ಕಂಡ ತಾಯಿ ಹಸು ಗಾಬರಿಗೊಂಡು, ಕಾರಿನ ಮೇಲೆರಗಲು ಪ್ರಯತ್ನಿಸುತ್ತಿತ್ತು. ಕರುವಿನ ರಕ್ಷಣೆಗಾಗಿ ಹಸು ಕಾರನ್ನು ತನ್ನ ಕೊಂಬಿನಿಂದ ಎತ್ತಲು ಪ್ರಯತ್ನಿಸುತ್ತಿದ್ದ ದೃಶ್ಯ ವಿಡಿಯೋದಲ್ಲಿದೆ.ತಕ್ಷಣವೇ ಸ್ಥಳಕ್ಕೆ ಬಂದ ಕಾರಿನ ಮಾಲೀಕರು ಮತ್ತು ಸ್ಥಳೀಯರು ಹಸುವನ್ನು ಸಮಾಧಾನಪಡಿಸಲು ಯತ್ನಿಸಿದರು. ನಂತರ ಅತ್ಯಂತ ಎಚ್ಚರಿಕೆಯಿಂದ ಕಾರಿನ ಮುಂಭಾಗವನ್ನು ಜ್ಯಾಕ್ (Jack) ಬಳಸಿ ಮೇಲಕ್ಕೆತ್ತಿ, ಅಡಿಯಲ್ಲಿ ಸಿಲುಕಿದ್ದ ಕರುವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಚಕ್ರದ ಅಡಿಯಿಂದ ಹೊರಬಂದ ತಕ್ಷಣ ಕರು ಓಡಿ ಹೋಗಿ ತನ್ನ ತಾಯಿಯನ್ನು ಸೇರಿಕೊಂಡಿತು. ಈ ಅಪರೂಪದ ಪುನರ್ಮಿಲನವನ್ನು ಕಂಡು ನೆರೆದಿದ್ದ ಜನರು ಹರ್ಷ ವ್ಯಕ್ತಪಡಿಸಿದರು. ಸಕಾಲದಲ್ಲಿ ಸ್ಪಂದಿಸಿ ಮೂಕಪ್ರಾಣಿಯ ಜೀವ ಉಳಿಸಿದ ಕಾರಿನ ಮಾಲೀಕನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆಯ ಸುರಿಮಳೆಗರೆಯುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

6 ತಿಂಗಳಲ್ಲಿ ನಾಲ್ಕನೇ ಐಷರಾಮಿ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯಗೆ (Hardik Pandya) ಕಾರುಗಳ ಮೇಲಿನ ಮೋಹ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿರುವಂತದ್ದೇ. ಪಾಂಡ್ಯ ಗ್ಯಾರೆಜ್​ನಲ್ಲಿ ಹಲವು ದುಬಾರಿ ಕಾರುಗಳ ಸಂಗ್ರಹವಿದೆ. ಇದೀಗ ಅವುಗಳ ಪಟ್ಟಿಗೆ ಮತ್ತೊಂದು ದುಬಾರಿ ಕಾರು ಸೇರ್ಪಡೆಗೊಂಡಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಕೇವಲ ಆರು ತಿಂಗಳಲ್ಲಿ ನಾಲ್ಕನೇ ಐಷಾರಾಮಿ ಕಾರನ್ನು ಖರೀದಿಸಿದಂತ್ತಾಗಿದೆ. ಈ ಬಾರಿ ಇತ್ತೀಚೆಗೆ ಬಿಡುಗಡೆಯಾದ ಕಾರನ್ನು ಖರೀದಿಸಿರುವ ಹಾರ್ದಿಕ್, ತಮ್ಮ ಗೆಳತಿ ಮಹಿಕಾ ಅವರೊಂದಿಗೆ ಕಾರಿನ ಮುಂದೆ ನಿಂತ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

ಹಾರ್ದಿಕ್ ಪಾಂಡ್ಯ ಹೊಸ ಜನರೇಷನ್​ನ​ ಮರ್ಸಿಡಿಸ್-ಬೆನ್ಜ್ ವಿ-ಕ್ಲಾಸ್ ಕಾರನ್ನು ಖರೀದಿಸಿದ್ದಾರೆ. ಈ ಮೂಲಕ ಈ ಕಾರನ್ನು ಖರೀದಿಸಿದ ಭಾರತದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಈ ಐಷಾರಾಮಿ MPV (ಬಹುಪಯೋಗಿ ವಾಹನ) ಕಾರಿಗೆನ ಬೆಲೆ ಸುಮಾರು ₹1.4 ಕೋಟಿ ರೂ. ಎನ್ನಲಾಗುತ್ತಿದೆ. ಆರಾಮದಾಯಕ ಕುಟುಂಬ ಪ್ರಯಾಣ ಮತ್ತು ಪ್ರೀಮಿಯಂ ಐಷಾರಾಮಿಗೆ ಹೆಸರುವಾಸಿಯಾದ ಇದು ವಿಶಾಲವಾದ ಒಳಾಂಗಣ, ಉನ್ನತ-ಮಟ್ಟದ ವೈಶಿಷ್ಟ್ಯಗಳು ಮತ್ತು ಸಾಟಿಯಿಲ್ಲದ ಸೌಕರ್ಯವನ್ನು ಹೊಂದಿದೆ.

ಪಾಂಡ್ಯ ಬಳಿ ಇರುವ ಐಷರಾಮಿ ಕಾರುಗಳು

ಹಾರ್ದಿಕ್ ಪಾಂಡ್ಯ ಅವರ ಗ್ಯಾರೇಜ್ ಈಗಾಗಲೇ ಹಲವಾರು ದುಬಾರಿ ಕಾರುಗಳಿಂದ ತುಂಬಿದೆ. ಪಾಂಡ್ಯ ಇತ್ತೀಚೆಗೆ ಸುಮಾರು ₹4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿ, ಅವರ ಮಗನಿಗೆ ಉಡುಗೊರೆಯಾಗಿ ನೀಡಿದ್ದರು. ಆ ಬಳಿಕ ಸುಮಾರು 12 ಕೋಟಿ ರೂ. ಮೌಲ್ಯದ ಫೆರಾರಿ 12-ಸಿಲಿಂಡರ್ ಕಾರನ್ನು ಪಾಂಡ್ಯ ಇತ್ತೀಚೆಗೆ ಖರೀದಿಸಿದ್ದರು. ಹಾಗೆಯೇ 4.5 ಕೋಟಿ ರೂ. ಮೌಲ್ಯದ ಲಂಬೋರ್ಘಿನಿ ಉರುಸ್ ಕಾರನ್ನು ಸಹ ಖರೀದಿಸಿದ್ದರು.

ಹೊಸ ಪ್ರೇಯಸಿಗಾಗಿ 10 ಕೋಟಿ ಬೆಲೆಯ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ

ಐಪಿಎಲ್​ನಲ್ಲಿ ಗೆಲುವಿನ ಆರಂಭ

ಇನ್ನು ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಲೀಗ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದ್ದಾರೆ.  ಮೊದಲ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಎದುರಿಸಿದ್ದ ಮುಂಬೈ, ಕೆಕೆಆರ್ ನೀಡಿದ್ದ 221 ರನ್​ಗಳ ಗುರಿಯನ್ನು ಕೊನೆಯ ಓವರ್​ನಲ್ಲಿ ಬೆನ್ನಟ್ಟಿ ಗೆಲುವು ಸಾಧಿಸಿತು. ಈ ಮೂಲಕ 2013 ರ ನಂತರ ಐಪಿಎಲ್​ನ ಮೊದಲ ಪಂದ್ಯದಲ್ಲಿ ಗೆದ್ದ ಸಾಧನೆಯನ್ನು ಮುಂಬೈ ತಂಡ ಮಾಡಿದೆ. ಹಾಗೆಯೇ 221 ರನ್​ಗಳ ಬೃಹತ್ ಮೊತ್ತ ಬೆನ್ನಟ್ಟಿದ ದಾಖಲೆ ಕೂಡ ಮುಂಬೈ ಪಾಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

TV9-Sensodyne Campaign | ನಿಮ್ಮ ಹಲ್ಲಿನ ಆರೋಗ್ಯಕ್ಕೆ ಮೊದಲ ಹೆಜ್ಜೆ: ದಂತ ವಯಸ್ಸಿನ ಬಗ್ಗೆ ಅರಿವು ಮೂಡಿಸಲು ಹೊಸ ಅಭಿಯಾನ

ದೆಹಲಿ, ಮಾ.30: ನಾವು ಯಾವಾಗಲೂ ನಮ್ಮ ವಯಸ್ಸು ಹೆಚ್ಚುತ್ತಿರುವುದರ ಬಗ್ಗೆ ಯೋಚಿಸುತ್ತೇವೆ ಮತ್ತು ಪ್ರತಿದಿನ ನಮ್ಮ ಆರೋಗ್ಯದ ಕಡೆ ಗಮನ ಕೊಡುತ್ತೇವೆ. ಫಿಟ್ನೆಸ್ ಟ್ರ್ಯಾಕ್ ಮಾಡುತ್ತೇವೆ, ಡಯಟ್ ಮತ್ತು ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ, ನಿದ್ರೆಯನ್ನು ಟ್ರ್ಯಾಕ್ ಮಾಡುತ್ತೇವೆ ಮತ್ತು ನಿಯಮಿತವಾಗಿ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುತ್ತೇವೆ. ಇವೆಲ್ಲವೂ ನಾವು ವಯಸ್ಸಾದರೂ ಆರೋಗ್ಯಕರವಾಗಿ ಮತ್ತು ಯುವಕರಂತೆ ಕಾಣಲು ನೆರವಾಗುತ್ತವೆ. ಆದರೆ, ನೀವು ಎಂದಾದರೂ ನಿಮ್ಮ ಹಲ್ಲಿನ ವಯಸ್ಸಿನ ಬಗ್ಗೆ ಯೋಚಿಸಿದ್ದೀರಾ? ನಿಮ್ಮ ದಂತ ವಯಸ್ಸು ನಿಮ್ಮ ನಿಜವಾದ ವಯಸ್ಸಿಗಿಂತ ಹೆಚ್ಚಿರಬಹುದು. ಈ ಪ್ರಮುಖ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು, ಸೆನ್ಸೋಡೈನ್ ಮತ್ತು ಟಿವಿ9 ನೆಟ್ವರ್ಕ್, ಇಂಡಿಯನ್ ಡೆಂಟಲ್ ಅಸೋಸಿಯೇಷನ್ (IDA) ಸಹಯೋಗದೊಂದಿಗೆ ನಿಮ್ಮ ದಂತ ವಯಸ್ಸು ತಿಳಿಯಿರಿ (Know Your Dental Age) ಎಂಬ ವಿಶೇಷ ಅಭಿಯಾನವನ್ನು ಪ್ರಾರಂಭಿಸಿವೆ.

ಈ ಅಭಿಯಾನಕ್ಕೆ ಚಾಲನೆ ನೀಡಲು, ಹೆಲಿಯಾನ್ ಇಂಡಿಯಾದ ಸಿಇಒ ಮತ್ತು ಏಷ್ಯಾ ಅಧ್ಯಕ್ಷರಾದ ಮಿಸ್ಟರ್ ಕೆದಾರ್ ಲೆಲೆ, ಟಿವಿ9 ನೆಟ್ವರ್ಕ್‌ನ ಪ್ರತಿನಿಧಿ ಎಂಜಾಸ್ ಮತ್ತು ಕೇಂದ್ರ ಸಚಿವೆ ಅನುಪ್ರಿಯ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಮಿಸ್ಟರ್ ಕೆದಾರ್ ಲೆಲೆ ಅವರು, “ಸ್ವಯಂ ಅರಿವು ಮತ್ತು ಸ್ವಯಂ ಪರೀಕ್ಷೆಯು ಆರೋಗ್ಯದ ಕಡೆಗೆ ಪ್ರಮುಖ ಹೆಜ್ಜೆ ಇಡಲು ಸಹಾಯ ಮಾಡುತ್ತದೆ” ಎಂದು ಹೇಳಿದರು. ಸಚಿವೆ ಅನುಪ್ರಿಯ ಪಟೇಲ್ ಅವರು ಈ ಅಭಿಯಾನವನ್ನು ಶ್ಲಾಘಿಸಿ, “ನಮ್ಮ ದೇಶದ ಜನರಲ್ಲಿ ಮೌಖಿಕ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಇನ್ನು ತುಂಬಾ ಕಡಿಮೆ ಇದೆ. ಅವರಿಗೆ ಮೂಲವಾಗಿ ಏನು ಮಾಡಬೇಕು ಎಂದು ತಿಳಿದಿಲ್ಲ, ಇದು ನಮ್ಮ ಆದ್ಯತೆ ಪಟ್ಟಿಯಲ್ಲಿ ಬಹಳ ಹಿಂದಿದೆ ಎಂಬ ಅರ್ಥವನ್ನು ನೀಡುತ್ತದೆ. ಇಂತಹ ಸಂದರ್ಭದಲ್ಲಿ ನೀವು ಮಾಡುತ್ತಿರುವ ಈ ವಿಶೇಷ ಅಭಿಯಾನ ಅತ್ಯಂತ ಪ್ರಶಂಸನೀಯವಾಗಿದೆ” ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಮೌಖಿಕ ಆರೋಗ್ಯವನ್ನು ನಿರ್ಲಕ್ಷಿಸುವುದರಿಂದ ಹಲ್ಲುಗಳ ವಯಸ್ಸು ಹೆಚ್ಚಾಗಬಹುದು, ಇದನ್ನು ಡೆಂಟಲ್ ಏಜಿಂಗ್ ಎಂದು ಕರೆಯಲಾಗುತ್ತದೆ. ಸಂವೇದನಾಶೀಲತೆ, ಹಲ್ಲಿನ ಸವೆತ, ದಂತ ಕವಚ ಸಮಸ್ಯೆ, ವಸಡು ಸಮಸ್ಯೆ ಮತ್ತು ಹಲ್ಲು ಹಳದಿಯಾಗುವಿಕೆ ಇವೆಲ್ಲವೂ ಡೆಂಟಲ್ ಏಜಿಂಗ್‌ನ ಲಕ್ಷಣಗಳಾಗಿವೆ. ವರ್ಲ್ಡ್ ಓರಲ್ ಹೆಲ್ತ್ ಡೇ ಸಂದರ್ಭದಲ್ಲಿ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಫಿಟ್ ಆಗಿರಲು ನಾವು ಪ್ರತಿದಿನ ಸಾವಿರಾರು ಹೆಜ್ಜೆಗಳನ್ನು ಹಾಕುತ್ತೇವೆ, ಕ್ಯಾಲೋರಿಗಳನ್ನು ಲೆಕ್ಕ ಹಾಕುತ್ತೇವೆ, ನಿದ್ರೆಯನ್ನು ಟ್ರ್ಯಾಕ್ ಮಾಡುತ್ತೇವೆ. ಇದೇ ರೀತಿ ನಮ್ಮ ಹಲ್ಲುಗಳ ವಯಸ್ಸಿನ ಬಗ್ಗೆಯೂ ಗಮನ ಹರಿಸುವುದು ಅಷ್ಟೇ ಮುಖ್ಯ.

ಇದನ್ನೂ ಓದಿ: ಹಲ್ಲುಗಳ ವಯಸ್ಸು ಹೆಚ್ಚಾಗುವ ಮೊದಲು ಎಚ್ಚರ, ಇಂದೇ ನಿಮ್ಮ ಡೆಂಟಲ್ ಏಜ್ ಪರಿಶೀಲಿಸಿ

ನಿಮ್ಮ ಹಲ್ಲುಗಳ ವಯಸ್ಸನ್ನು ತಿಳಿದುಕೊಳ್ಳಲು ಮತ್ತು ಅವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಪ್ರಸ್ತುತಪಡಿಸಲಾದ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಡೆಂಟಲ್ ಏಜ್ ಅನ್ನು ಪರಿಶೀಲಿಸಿಕೊಳ್ಳಬಹುದು. ನಿಮ್ಮ ಹಲ್ಲುಗಳ ವಯಸ್ಸು ನಿಮಗಿಂತ ಹೆಚ್ಚು ಹೆಚ್ಚಾಗಲು ಬಿಡಬೇಡಿ. ಹಲ್ಲು ನೋವು ಪ್ರಾರಂಭವಾಗುವ ಮೊದಲು ನೀವು ಕ್ರಮ ಕೈಗೊಳ್ಳಬೇಕು. ಮೌಖಿಕ ಆರೋಗ್ಯಕ್ಕಾಗಿ ಈ ಮೊದಲ ಹೆಜ್ಜೆಯನ್ನು ಇಟ್ಟು, ಆರೋಗ್ಯಕರ ನಗುವನ್ನು ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ನಿಶ್ಚಯವಾಗಿದ್ದ ಯುವಕನ ಬರ್ಬರವಾಗಿ ಕೊಂದ ಸಹೋದರ; ಅತ್ತಿಗೆ ಜೊತೆಗೆ ಅಕ್ರಮ ಸಂಬಂಧ ಆರೋಪಕ್ಕೆ ಹರಿದಿದ್ದು ನೆತ್ತರು

ತುಮಕೂರು, ಮಾರ್ಚ್​​ 30:  ಕೌಟುಂಬಿಕ ಕಲಹಕ್ಕೆ ಯುವಕನೋರ್ವ ಬಲಿಯಾಗಿರುವ ಘಟನೆ ತುಮಕೂರು ನಗರದ ಬನಶಂಕರಿಯಲ್ಲಿ ನಡೆದಿದೆ. ಅಣ್ಣನಿಂದಲೇ ತಮ್ಮ ಭೀಕರವಾಗಿ ಕೊಲೆಯಾಗಿದ್ದರೆ, ತಂದೆಯೂ ಕೃತ್ಯಕ್ಕೆ ಸಾಥ್​​ ಕೊಟ್ಟಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ. ಸ್ಟಾಲಿನ್​​ (29) ಮೃತ ಯುವಕನಾಗಿದ್ದು, ಆತನ ಸಹೋದರ ನವೀನ್​​ ಮತ್ತು ತಂದೆ ಜಾನ್​​ ಪಾಲ್​​ ಎಂಬುವವರೇ ಆರೋಪಿಗಳಾಗಿದ್ದಾರೆ. ಮೃತ ನವೀನ್​​ಗೆ ವಿವಾಹ ಕೂಡ ನಿಶ್ಚಯವಾಗಿತ್ತು. ಆತ ಜೊತೆಯಾಗಿ ಬಾಳಬೇಕಿದ್ದ ಯುವತಿ ಆಡಿದ್ದ ಒಂದು ಮಾತೇ ಸ್ಟಾಲಿನ್​​ ಕುಟುಂಬದಲ್ಲಿ ಬೆಂಕಿಯ ಕಿಡಿ ಹೊತ್ತಿಸಿತ್ತು ಎನ್ನಲಾಗಿದೆ. ಇದೇ ತಿಂಗಳ 22ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಜಾನ್​​ ಪಾಲ್​​ಗೆ ಇಬ್ಬರು ಗಂಡುಮಕ್ಕಳಿದ್ದು, ಆ ಪೈಕಿ ನವೀನ್​​ ಮೊದಲ ಮಗನಾದರೆ ಮೃತ ಸ್ಟಾಲಿನ್​​ ಎರಡನೇ ಪುತ್ರ. ನವೀನ್​​ಗೆ ಅದಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ತುಂಬು ಗರ್ಭಿಣಿ ಕೂಡ ಹೌದು. ಈ ನಡುವೆ ಸ್ಟಾಲಿನ್​​ಗೆ ಜನಿಫರ್​​ ಎಂಬ ಯುವತಿಯ ಜೊತೆಗೆ ಮದುವೆ ನಿಶ್ಚಯವಾಗಿತ್ತು. ವಿವಾಹ ತಯಾರಿಯ ನಡುವೆ ತಾನು ಮದುವೆಯಾಗಬೇಕಿದ್ದ ಸ್ಟಾಲಿನ್​​ ಮತ್ತು ಆತನ ಅತ್ತಿಗೆ ಅಂದರೆ ನವೀನ್​ ಪತ್ನಿ ನಡುವೆ ಅಕ್ರಮ ಸಂಬಂಧ ಇರೋದಾಗಿ ಆಕೆ ಗಂಭೀರ ಆರೋಪ ಮಾಡಿದ್ದಳು. ಇದೇ ವಿಚಾರವಾಗಿ ಸ್ಟಾಲಿನ್​​ ಮನೆಯಲ್ಲಿ ಒಂದು ವಾರದಿಂದ ಗಲಾಟೆ ನಡೆಯುತ್ತಿತ್ತು. ಇದು ವಿಕೋಪಕ್ಕೆ ಹೋಗಿ ಮಾರ್ಚ್​​ 22ರಂದು ಅಣ್ಣ ನವೀನ್​​ ತಮ್ಮ ಸ್ಟಾಲಿನ್​​ನ ಕೊಲೆ ಮಾಡಿದ್ದ. ಬಳಿಕ ಘಟನೆಯನ್ನು ಮುಚ್ಚಿಹಾಕುವ ಪ್ರಯತ್ನವನ್ನು ನಡೆಸಲಾಗಿತ್ತು ಎಂಬುದೀಗ ಗೊತ್ತಾಗಿದೆ.

ಇದನ್ನೂ ಓದಿ: ನನ್ನ ಸ್ನೇಹಿತೆ ಜತೆಗೂ ಸೇರು; ಪತ್ನಿಯ ವಿಕೃತ ಲೈಂಗಿಕ ಬೇಡಿಕೆಗೆ ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ

ಕಿರಿಯ ಮಗನ ಕೊಲೆ ಮಾಡಿದ್ದ ನವೀನ್​​ಗೆ ತಂದೆ ಜಾನ್​ ಪಾಲ್​​ ಕೂಡ ಬೆಂಬಲ ನೀಡಿದ್ದು, ಆರೋಪಿಗಳು ಘಟನೆ ಬಗ್ಗೆ ಕಥೆ ಕಟ್ಟಿದ್ದರು. ಬೈಕ್ ನಿಲ್ಲಿಸುವಾಗ ಕುಸಿದು ಬಿದ್ದು ಕಂಬಿ ತಾಗಿ ಹೊಟ್ಟೆಗೆ ಗಾಯವಾಗಿದೆ ಎಂದು ಹೇಳಿ ಸ್ಟಾಲಿನ್​​ನ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಐದು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಿದ್ದಗಂಗಾ ಆಸ್ಪತ್ರೆಯಲ್ಲಿ ಸ್ಟಾಲಿನ್​ ಮೃತಪಟ್ಟಿದ್ದಾರೆ. ಮೃತದೇಹ ಕುಟುಂಬಕ್ಕೆ ನೀಡುವ ಮುನ್ನ ಜಯನಗರ ಪೊಲೀಸರಿಗೆ ಆಸ್ಪತ್ರೆ ಮಾಹಿತಿ ಹಿನ್ನೆಲೆ ಪರಿಶೀಲಿಸಿದಾಗ ಚಾಕುವಿನಿಂದ ಇರಿದ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ತಂದೆ ಜಾನ್​​ ಪಾಲ್​​ನ ಪೊಲೀಸರು ವಿಚಾರಣೆ ನಡೆಸಿದ್ದು, ಈತ ಆರಂಭದಲ್ಲಿ ಕತೆ ಹೇಳಿದ್ದ. ಆದರೆ ಬಳಿಕ ಅಸಲಿ ಸತ್ಯವನ್ನು ಬಿಚ್ಚಿಟ್ಟ ಹಿನ್ನೆಲೆ ಕೊಲೆ ರಹಸ್ಯ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಟಾಕ್ಸಿಕ್’ ಚಿತ್ರವನ್ನು ಕಿಯಾರಾ ಒಪ್ಪಿಕೊಂಡಿದ್ದೇಕೆ? ಅಸಲಿ ಕಾರಣ ಬಯಲು

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಸಿನಿಮಾ ಮಾರ್ಚ್ 19ರಂದೇ ತೆರೆಗೆ ಬರಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ವಿಳಂಬ ಆಗಿದೆ. ಈಗ ಸಿನಿಮಾ ಬಗ್ಗೆ ಕಿಯಾರಾ ಅಡ್ವಾಣಿ ಮಾತನಾಡಿದ್ದಾರೆ. ಅವರು ಸಿನಿಮಾ ಒಪ್ಪಿಕೊಂಡಿದ್ದರ ಕಾರಣವನ್ನು ವಿವರಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದಲ್ಲಿ ಹಲವು ಹೀರೋಯಿನ್​​ಗಳು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ಪ್ರಮುಖರು. ಈಗ ರಿಲೀಸ್ ಆಗಿರುವ ಬಹುತೇಕ ಟೀಸರ್ ಹಾಗೂ ಗ್ಲಿಂಪ್ಸ್ ಯಶ್ ಅವರನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗಿದೆ. ಸಿನಿಮಾ ರಿಲೀಸ್ ಪೋಸ್ಟ್​​ಪೋನ್​ ಆಗುವುದಕ್ಕೂ ಮೊದಲು ‘ಟಾಕ್ಸಿಕ್’ ಸಿನಿಮಾದ ಸಾಂಗ್ ರಿಲೀಸ್ ಆಗಿತ್ತು. ಕಿಯಾರಾ ಹಾಗೂ ಯಶ್ ಒಟ್ಟಾಗಿ ಕಾಣಿಸಿಕೊಂಡ ಹಾಡಿನ ಲಿರಿಕಲ್ ವಿಡಿಯೋ ಇದಾಗಿತ್ತು.

ಈಗ ಕಿಯಾರಾ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದ್ದಾರೆ. ‘ನಾನು ಈವರೆಗೆ ನೋಡಿದ ಭಿನ್ನ ಪಾತ್ರಗಳಲ್ಲಿ ನಾಡಿಯಾ ಕೂಡ ಒಂದು. ನಮ್ಮ ನಿರ್ದೇಶಕಿ ಗಿತು ಮೋಹನ್​​ದಾಸ್ ಪಾತ್ರವನ್ನು ಬರೆದ ರೀತಿ ಹಾಗೂ ಪಾತ್ರವನ್ನು ಕೆತ್ತಿದ ರೀತಿ ನನಗೆ ಇಷ್ಟ ಆಯಿತು. ನಾನು ಆ ಚಾಲೆಂಜ್​​ನ ಸ್ವೀಕರಿಸಬೇಕು ಎನಿಸಿತು. ಅವರ ಆಲೋಚನೆಯಲ್ಲಿ ನನ್ನ ಪಾತ್ರವನ್ನು ಹೇಗೆ ನಿರ್ವಹಿಸಿದ್ದೇನೆ ಎಂಬುದನ್ನು ನೀವೇ ನೋಡಿ’ ಎಂದು ಕಿಯಾರಾ ಕೋರಿದ್ದಾರೆ.

ಇತ್ತೀಚೆಗೆ ರಿಲೀಸ್ ಆದ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಎಲ್ಲರ ಮೆಚ್ಚುಗೆ ಪಡೆದಿದೆ. ಈ ಹಾಡಿನ ವಿಡಿಯೋ ಕೂಡ ರಿಲೀಸ್ ಆಗಬೇಕಿತ್ತು ಎಂದು ಅಭಿಮಾನಿಗಳು ಬಯಸಿದ್ದರು. ಶೀಘ್ರವೇ ಅದನ್ನು ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ. ವಿಶಾಲ್ ಮಿಶ್ರಾ ಅವರು ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಇದನ್ನೂ ಓದಿ: ‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದಾರೆ. ಈ ಸಿನಿಮಾ ಜೂನ್ 4ರಂದು ರಿಲೀಸ್ ಆಗಲಿದೆ. ಮಲಯಾಳಂನ ಗೀತು ಮೋಹನ್​ ದಾಸ್ ನಿರ್ದೇಶನ ಮಾಡಿದ್ದಾರೆ. ಕೆವಿಎನ್​ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Source link

ಅರಣ್ಯ ಇಲಾಖೆ ಜೀಪನ್ನೇ ಅಟ್ಟಾಡಿಸಿ ಅಟ್ಯಾಕ್ ಮಾಡಿದ ಕಾಡಾನೆ! ಡ್ರೈವರ್ ಜಸ್ಟ್ ಮಿಸ್, ವೀಡಿಯೋ ನೋಡಿ

ಮೈಸೂರು, ಮಾರ್ಚ್​ 30: ಜಿಲ್ಲೆಯ ಸರಗೂರು ತಾಲೂಕಿನ ನುಗು ಜಲಾಶಯದ ಬಳಿ ಕಾಡಿನಿಂದ ನಾಡಿಗೆ ಬಂದ ಕಾಡಾನೆಗಳು ಮುಖ್ಯ ರಸ್ತೆಗೆ ನುಗ್ಗಿ ಕೆಲಕಾಲ ಆತಂಕ ಸೃಷ್ಟಿಸಿವೆ. ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನು ಓಡಿಸಲು ಮುಂದಾದ ವೇಳೆ, ಕಾಡಾನೆಗಳು ಜೀಪ್ ಮೇಲೆ ದಾಳಿ ನಡೆಸಿ ಜಖಂಗೊಳಿಸಿವೆ. ಅದೃಷ್ಟವಶಾತ್ ಜೀಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಮತ್ತೆ ಕಾಡಿಗೆ ಹಿಂತಿರುಗಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಲಬುರಗಿ: ತೊಗರಿ, ಈರುಳ್ಳಿ ಬೆಳೆಗೆ ‘ಕಸ್ಕೂಟಾ’ ಮಾರಿಯ ಕಾಟ, ಬೆಳೆ ಕಳೆದುಕೊಂಡು ಕಂಗಾಲಾದ ರೈತರು

ಕಲಬುರಗಿ, ಮಾರ್ಚ್ 30: ಕಲಬುರಗಿ (Kalaburagi) ಜಿಲ್ಲೆಯಲ್ಲಿ ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟ ಅನುಭವಿಸಿದ್ದ ರೈತರು ಹಿಂಗಾರು ಹಾಗೂ ಬೇಸಿಗೆ ಬೆಳೆಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕೆಂದು ನಿರೀಕ್ಷೆ ಇಟ್ಟಿದ್ದರು. ಆದರೆ ಇದೀಗ ‘ಕಸ್ಕೂಟಾ’ ಎಂಬ ರೋಗದಿಂದ ಬೆಳೆಗಳು ನಾಶವಾಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ಚಿಂಚೋಳಿ ತಾಲೂಕಿನ ಗಾರಂಪಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಸಮಸ್ಯೆ ಗಂಭೀರವಾಗಿ ಕಾಣಿಸಿಕೊಂಡಿದೆ. ರೈತರು ತಮ್ಮ ಜಮೀನಿನಲ್ಲಿ ಒಣಗಿ ಹೋಗಿರುವ ತೊಗರಿ ಬೆಳೆಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತೊಗರಿ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳಿಗೆ ಕಸ್ಕೂಟಾ ಎಂಬ ರೋಗ ಆವರಿಸಿ ಬೆಳೆಗಳನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದೆ ಎಂದು ರೈತರು ತಿಳಿಸಿದ್ದಾರೆ.

ಈ ಭಾಗದ ರೈತರು ಈ ಬಾರಿ ಅತಿಯಾದ ಮಳೆಯಿಂದ ಮುಂಗಾರು ಬೆಳೆಗಳನ್ನು ಕಳೆದುಕೊಂಡಿದ್ದರು. ಸಾಲ ಮಾಡಿ ಬೆಳೆದ ಬೆಳೆ ಹಾಳಾದ ಕಾರಣ, ಸಾಲ ತೀರಿಸಲು ಹಾಗೂ ಕುಟುಂಬದ ಜೀವನ ಸಾಗಿಸಲು ಹಿಂಗಾರು ಮತ್ತು ಬೇಸಿಗೆ ಬೆಳೆಗಳ ಮೇಲೆ ನಿರೀಕ್ಷೆ ಇಟ್ಟಿದ್ದರು. ಆದರೆ ಈಗ ಬೆಳೆಗಳು ಕೈಗೆ ಬರುತ್ತವೆ ಎನ್ನುವಷ್ಟರಲ್ಲಿ ಕಸ್ಕೂಟಾ ರೋಗ ವ್ಯಾಪಕವಾಗಿ ಹರಡಿದ್ದು, ಜಮೀನಿನಲ್ಲಿ ಬೆಳೆದಿರುವ ಬೆಳೆಗಳನ್ನು ನಿಂತಲ್ಲೇ ಒಣಗಿಸುತ್ತಿದೆ.

ಸಾಲ ಮಾಡಿ ಬೆಳೆ ಬೆಳೆದ ರೈತರಿಗೆ ಈ ರೋಗ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಹಿಂಗಾರು ಹಾಗೂ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟಾಗಿರುವುದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸರ್ಕಾರ ತಕ್ಷಣ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಸಾಲದ ಒತ್ತಡದಿಂದ ಬದುಕು ಸಾಗಿಸಲು ಕಷ್ಟವಾಗುತ್ತದೆ ಎಂದು ತಮ್ಮ ಅಸಹಾಯತೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಚಿಂಚೋಳಿ, ಚಿತ್ತಾಪುರ ಮತ್ತು ಸೇಡಂ ತಾಲೂಕುಗಳಲ್ಲಿನ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳಿಗೆ ಈ ರೋಗದಿಂದ ಹಾನಿಯಾಗಿದೆ. ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೋಗದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಕೃಷಿ ವಿಜ್ಞಾನಿಗಳು ನಡೆಸಿದ ಅಧ್ಯಯನದ ಪ್ರಕಾರ, ಇದು ವಿದೇಶದಿಂದ ಹರಡಿರುವ ರೋಗವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಕೂಡ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಆದರೆ ರೋಗ ತಡೆಗಟ್ಟಲು ಯಾವುದೇ ಕ್ರಿಮಿನಾಶಕ ಅಥವಾ ಔಷಧಿಯನ್ನು ಇನ್ನೂ ನೀಡಿಲ್ಲವೆಂದು ರೈತರು ದೂರಿದ್ದಾರೆ.

ಇದನ್ನೂ ಓದಿ: ಆಲಿಕಲ್ಲು ಮಳೆಗೆ ಕಾಶ್ಮೀರದಂತಾದ ಬಿಸಿಲನಾಡು ಕಲಬುರಗಿ: ಧಾರವಾಡ, ವಿಜಯಪುರದಲ್ಲಿ ಅಪಾರ ಬೆಳೆ ನಾಶ

ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವರು ಚಿಂಚೋಳಿ ಭೇಟಿ ನೀಡಿದ ವೇಳೆ ರೈತರು ತಮ್ಮ ಸಮಸ್ಯೆಯನ್ನು ಅವರ ಗಮನಕ್ಕೆ ತಂದಿದ್ದರು. ಆದರೂ ಮೂರು ತಾಲೂಕಿನ ರೈತರಿಗೆ ಇನ್ನೂ ಯಾವುದೇ ಸ್ಪಷ್ಟ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಐಪಿಎಲ್​ನಲ್ಲಿ ಬೌಲಿಂಗ್ ಮಾಡದಂತೆ ಗ್ರೀನ್​ಗೆ ನಿರ್ಬಂಧ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಬೌಲಿಂಗ್ ಮಾಡದಂತೆ​ ಕ್ಯಾಮರೋನ್ ಗ್ರೀನ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ ನಿರ್ಬಂಧ ಹೇರಿದೆ. ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುತ್ತಿರುವ ಗ್ರೀನ್ ಫಿಟ್​ನೆಸ್ ಸಮಸ್ಯೆಯಿಂದ ಬಳುತ್ತಿದ್ದು, ಹೀಗಾಗಿ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಯುವಂತೆ ಸೂಚಿಸಲಾಗಿದೆ.

ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಕ್ಯಾಮರೋನ್ ಗ್ರೀನ್ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಬರೋಬ್ಬರಿ 25.20 ಕೋಟಿ ರೂ.ಗೆ ಖರೀದಿಸಿದೆ. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಬೌಲಿಂಗ್ ಮಾಡಿರಲಿಲ್ಲ.

ಇದಕ್ಕೆ ಮುಖ್ಯ ಕಾರಣ ಕ್ರಿಕೆಟ್ ಆಸ್ಟ್ರೇಲಿಯಾದ ಸೂಚನೆ. ಅಂದರೆ ಬೆನ್ನು ನೋವಿನಿಂದ ಬಳಲುತ್ತಿರುವ ಕ್ಯಾಮರೋನ್ ಗ್ರೀನ್​ಗೆ ಬೌಲಿಂಗ್ ಮಾಡಲು ಎನ್​ಒಸಿ ನೀಡಲಾಗಿಲ್ಲ. ಸಂಪೂರ್ಣ ಫಿಟ್​ನೆಸ್ ಸಾಧಿಸುವರೆಗೆ ಕೇವಲ ಬ್ಯಾಟರ್ ಆಗಿ ಆಡುವಂತೆ ಸೂಚಿಸಲಾಗಿದೆ.

2024ರ ಕೊನೆಯಲ್ಲಿ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ದೀರ್ಘಕಾಲದ ಫಿಟ್​ನೆಸ್​ ಕಾಪಾಡಿಕೊಳ್ಳಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (CA) ಅವರ ಬೌಲಿಂಗ್ ಮೇಲೆ ಸದ್ಯಕ್ಕೆ ನಿರ್ಬಂಧ ಹೇರಿದೆ.

ಇದಾಗ್ಯೂ ಐಪಿಎಲ್​ನ ದ್ವಿತಿಯಾರ್ಧದ ವೇಳೆಗೆ ಅವರು ಸಂಪೂರ್ಣವಾಗಿ ಫಿಟ್​ನೆಸ್ ಸಾಧಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂದರೆ ಏಪ್ರಿಲ್ ಎರಡನೇ ವಾರದ ವೇಳೆಗೆ ಅವರು ಬೌಲಿಂಗ್ ಆರಂಭಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಹೀಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಪಂದ್ಯಗಳಲ್ಲಿ ಕ್ಯಾಮರೋನ್ ಗ್ರೀನ್ ಕೇವಲ ಬ್ಯಾಟರ್ ಆಗಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಅತ್ತ ಅನುಭವಿ ವೇಗಿಗಳ ಕೊರತೆ ಎದುರಿಸುತ್ತಿರುವ ಕೆಕೆಆರ್ ತಂಡಕ್ಕೆ ಗ್ರೀನ್ ಅವರ ಫಿಟ್​ನೆಸ್ ಸಮಸ್ಯೆಯು ಹಿನ್ನಡೆಯಾಗಿ ಪರಿಣಮಿಸಿರುವುದು ಸುಳ್ಳಲ್ಲ.

ಇದನ್ನೂ ಓದಿ: VIDEO: ಪಾಕಿಸ್ತಾನ್ ಸೂಪರ್ ಲೀಗ್​ನ ‘ಕಳ್ಳಾಟ’ ಬಯಲು

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ: ಅಜಿಂಕ್ಯ ರಹಾನೆ, ಅಂಗ್​ಕ್ರಿಶ್ ರಘುವಂಶಿ, ಅನುಕುಲ್ ರಾಯ್, ಮನೀಶ್ ಪಾಂಡೆ, ರಮಣದೀಪ್ ಸಿಂಗ್, ರಿಂಕು ಸಿಂಗ್, ರೋವ್​ಮನ್ ಪೊವೆಲ್, ಸುನಿಲ್ ನರೈನ್, ಉಮ್ರಾನ್ ಮಲಿಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ, ಕ್ಯಾಮೆರೋನ್ ಗ್ರೀನ್, ಫಿನ್ ಅಲೆನ್, ಮಥೀಶ ಪತಿರಾಣ, ತೇಜಸ್ವಿ ಸಿಂಗ್, ಕಾರ್ತಿಕ್ ತ್ಯಾಗಿ, ಪ್ರಶಾಂತ್ ಸೋಲಂಕಿ, ರಾಹುಲ್ ತ್ರಿಪಾಠಿ, ಟಿಮ್ ಸೈಫರ್ಟ್, ಬ್ಲೆಸ್ಸಿಂಗ್ ಮುಝರಬಾನಿ, ಸಾರ್ಥಕ್ ರಂಜನ್, ದಕ್ಷ್ ಕಮ್ರಾ, ರಚಿನ್ ರವೀಂದ್ರ, ಆಕಾಶ್ ದೀಪ್, ಹರ್ಷಿತ್ ರಾಣಾ (ಅಲಭ್ಯ).

 

Source link