ಹಾಸನ, ಮಾರ್ಚ್ 30: ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಗ್ರಾಮಕ್ಕೆ ನುಗ್ಗಿದ ‘ಪೆನ್ಸಿಲ್ ಕೋರೆ’ ಹೆಸರಿನ ದೈತ್ಯ ಒಂಟಿಸಲಗ, ಕೃಷ್ಣಪ್ಪ ಎಂಬುವವರಿಗೆ ಸೇರಿದ ಆಟೋವನ್ನು ಜಖಂಗೊಳಿಸಿದೆ. ಆನೆಯನ್ನು ಓಡಿಸಲು ಪಟಾಕಿ ಸಿಡಿಸಿದಾಗ ರೊಚ್ಚಿಗೆದ್ದ ಸಲಗ, ಮನೆಯ ಮುಂದಿದ್ದ ಆಟೋ ಮೇಲೆ ದಾಳಿ ನಡೆಸಿ ಆತಂಕ ಸೃಷ್ಟಿಸಿದೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಆನೆಗಳ ಹಿಂಡು ಬೀಡುಬಿಟ್ಟಿದ್ದು, ಕಾಫಿ ತೋಟಗಳಲ್ಲಿ ಕೆಲಸ ಮಾಡಲು ಕೃಷಿಕರು ಭಯಪಡುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಕನ್ನಡ, ಹಿಂದಿ ಸೇರಿದಂತೆ ಭಾರತದ ಬಹುತೇಕ ಚಿತ್ರರಂಗದವರು ವಿದೇಶದಲ್ಲಿ ಶೂಟ್ ಮಾಡುತ್ತಾರೆ. ಅದರಲ್ಲೂ ಬಾಲಿವುಡ್ನವರು ವಿದೇಶಿ ಲೊಕೇಶನ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಈಗ ಅಚ್ಚರಿ ಎಂಬಂತೆ ರಷ್ಯಾದ ಚಿತ್ರವೊಂದು ಭಾರತದ ಬೀದಿಗಳಲ್ಲಿ ಶೂಟ್ ಆಗಿದೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಸಂಪೂರ್ಣವಾಗಿ ಭಾರತದ ಸಿನಿಮಾಗಳಿಂದ ಪ್ರೇರಿತವಾಗಿದೆ.
ಭಾರತ ಹಾಗೂ ರಷ್ಯಾ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ‘ಪರ್ಸಿಮನ್ ಆಫ್ ಲವ್’ ಎಂಬುದು ಚಿತ್ರದ ಹೆಸರು. ಪರ್ಸಿಮನ್ ಎಂದರೆ ಆರೆಂಜ್ ರೀತಿಯಲ್ಲೇ ಇರುವ ಒಂದುಹಣ್ಣು. ಭಾರತ ಹಾಗೂ ರಷ್ಯಾ ಒಟ್ಟಾಗಿ ನಿರ್ಮಿಸಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ.
ಮಾರಿಯಸ್ ವೈಸ್‌ಬರ್ಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕಾಮಿಡಿ ಕ್ಲಬ್ ತಾರೆಯರಾದ ಡೆಮಿಸ್ ಕರಿಬಿಡಿಸ್ ಮತ್ತು ಮಿಖಾಯಿಲ್ ಗಲುಸ್ಟಿಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಡಿಲಾ ರಾಗಿಮೋವಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.
ಒಬ್ಬರು ಪೊಲೀಸ್ ಅಧಿಕಾರಿ ಆದರೆ, ಇನ್ನೊಬ್ಬರು ಅಪರಾಧಿ. ಅವರ ಪೈಪೋಟಿಯು ದೀರ್ಘಕಾಲದಿಂದ ಸಮಾಧಿಯಾಗಿ ಉಳಿದಿರುವ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಬಾಲ್ಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಎಂಬ ವಿಷಯ ನಂತರ ಹೊರ ಬರುತ್ತದೆ.
India, Russia film cooperation.
Poster of Russian movie “Persimmon of My Love”. It is the first major Russian feature film entirely shot in India. Set to premiere across Russia on April 1, blends Bollywood song and dance with Russian humour and brotherly drama. pic.twitter.com/9Vo5SBFkny
Promo of Russian Movie “Persimmon of My Love”. The movie has been entirely shot in India.
The Rom-Com was filmed entirely on location in Mumbai, Udaipur and Jodhpur. First such movie in post soviet era. Has Hindi songs too, including ‘Jimmy Jimmy Aja Aja’ https://t.co/gTNVMRU1cgpic.twitter.com/iEmIOOeHab
ಇದು ಭಾರತದಲ್ಲಿ ಶೈಟ್ ಆಗಿರುವುದರಿಂದ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹಿಂದಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇದೆಯೇ ಎಂಬುದು ಸದ್ಯದ ಪ್ರಶ್ನೆ.
ಬೆಂಗಳೂರು, ಮಾರ್ಚ್ 30: ಕಳೆದ ವಾರ ನಾಲ್ಕು ದಿನ ಏರಿದ್ದ ಚಿನ್ನದ ಬೆಲೆ (Gold Rates) ಇವತ್ತು ಸೋಮವಾರ ಕಡಿಮೆಗೊಂಡಿದೆ. ಹತ್ತು ಗ್ರಾಮ್ ಚಿನ್ನದ ಬೆಲೆಯಲ್ಲಿ 750 ರೂಗಳಷ್ಟು ಕಡಿಮೆ ಆಗಿದೆ. ವಿದೇಶಗಳಲ್ಲಿ ಹೆಚ್ಚಿನ ಕಡೆ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು, ಬೆಳ್ಳಿ ಬೆಲೆಯೂ ಯಥಾಸ್ಥಿತಿ ಹೊಂದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,35,000 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,47,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 24,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,35,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 24,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಮಾರ್ಚ್ 30ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,046 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,728 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,500 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 245 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಗೆಲುವು ದಾಖಲಿಸಿದೆ. ಈ ಎರಡು ಅಮೋಘ ಗೆಲುವುಗಳ ಬೆನ್ನಲ್ಲೇ ಸಿಎಸ್ಕೆ ತಂಡದ ಮಾಜಿ ಆಟಗಾರ ಅಂಬಾಟಿ ರಾಯುಡು ಈ ಬಾರಿಯ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ್ದಾರೆ. ಆ ತಂಡಗಳೆಂದರೆ…
ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಸಮತೋಲನದಿಂದ ಕೂಡಿದೆ. ಅದರಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಉತ್ತಮ ಬ್ಯಾಟರ್ಗಳು ಇರುವ ಕಾರಣ ಈ ಬಾರಿ ಅವರ ಕಡೆಯಿಂದ ಭರ್ಜರಿ ಪ್ರದರ್ಶನವನ್ನು ನಿರೀಕ್ಷಿಸಬಹುದು ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್: ರಿಷಭ್ ಪಂತ್ ಮುಂದಾಳತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಅದರಲ್ಲೂ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿದ್ದ ಎಲ್ಎಸ್ಜಿ ಈ ಬಾರಿ ಕೂಡ ಸಾಂಘಿಕ ಪ್ರದರ್ಶನದೊಂದಿಗೆ ಪ್ಲೇಆಫ್ಗೇರಲಿದೆ ಎಂದು ರಾಯುಡು ಭವಿಷ್ಯ ನುಡಿದಿದ್ದಾರೆ.
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡದಲ್ಲಿರುವುದು ಅನುಭವಿ ಆಟಗಾರರು. ಅದರಲ್ಲೂ ಬಹುತೇಕ ಆಟಗಾರರು ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡವು ಈ ಬಾರಿ ಕೂಡ ಪ್ಲೇಆಫ್ಗೇರಲಿದೆ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಆರ್‌ಸಿಬಿ ತಂಡದಲ್ಲಿ ಮಹತ್ವದ ಬದಲಾಗಿಲ್ಲ. ಅದರಲ್ಲೂ ಕಳೆದ ಬಾರಿ ಕಣಕ್ಕಿಳಿದಿದ್ದ ಪ್ಲೇಯಿಂಗ್ ಇಲೆವೆನ್ನ ಆಟಗಾರರು ಈ ಬಾರಿ ಕೂಡ ತಂಡದಲ್ಲಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಈ ಬಾರಿ ಕೂಡ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು. ಈ ಪ್ರದರ್ಶನದೊಂದಿಗೆ ಆರ್‌ಸಿಬಿ ಸಹ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ ಎಂದು ಅಂಬಾಟಿ ರಾಯುಡು ಭವಿಷ್ಯ ನುಡಿದಿದ್ದಾರೆ.
ಅಹಮದಾಬಾದ್, ಮಾರ್ಚ್ 30: ಗುಜರಾತ್ನಲ್ಲಿ ದಲಿತರು, ಆದಿವಾಸಿಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಬಿಜೆಪಿ ಗುರಿಯಾಗಿಸಿಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಧ್ವನಿ ಎತ್ತುವುದಾಗಿ ಪ್ರತಿಜ್ಞೆ ಮಾಡಿದರು. ಪ್ರಸ್ತುತ ಆಡಳಿತದಲ್ಲಿ ಈ ಸಮುದಾಯಗಳ ವಿರುದ್ಧ ತಾರತಮ್ಯ ಹೆಚ್ಚುತ್ತಿದೆ ಎಂದು ಭಾನುವಾರ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇಂದಿಗೂ ಸಹ, ದಲಿತರು ಮತ್ತು ಆದಿವಾಸಿಗಳನ್ನು ಕ್ರೂರವಾಗಿ ಥಳಿಸಲಾಗುತ್ತಿರುವ ಘಟನೆಗಳು ನಡೆಯುತ್ತಲೇ ಇವೆ.ಆದಿವಾಸಿಗಳು ಬೆಸ್ಟ್ ಯೂನಿವರ್ಸಿಟಿಯಲ್ಲಿ ಓದಬೇಕು, ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡಬೇಕು ಮತ್ತು ಸಿಇಒ ಆಗಬೇಕು ಎಂದು ನಾವು ಬಯಸುತ್ತೇವೆ. ಇದು ನಮ್ಮ ಹೋರಾಟ ಎಂದರು.
ಒಬ್ಬ ವ್ಯಕ್ತಿಯ ಮೇಲೆ ತೀವ್ರವಾಗಿ ಹಲ್ಲೆ ನಡೆಸಲಾಗಿದ್ದು, ಅವರ ದೇಹದಾದ್ಯಂತ 19 ಮುರಿತಗಳು ಸಂಭವಿಸಿವೆ. ತಮ್ಮ ಹಕ್ಕುಗಳ ರಕ್ಷಣೆಗಾಗಿ ಧ್ವನಿ ಎತ್ತುವವರು ಹೆಚ್ಚಾಗಿ ಭಾರೀ ಬೆಲೆ ತೆರಬೇಕಾಗುತ್ತಿದೆ ಎಂದು ದೂರಿದರು. ಇವರ ಹೇಳಿಕೆಗೆ ನೆಟ್ಟಿಗರು ಸರಿಯಾಗಿ ಉತ್ತರ ನೀಡಿದ್ದಾರೆ. ಅಧಿಕಾರದಲ್ಲಿದ್ದರು, ಬುಡಕಟ್ಟು ಜನಾಂಗದವರಿಗೆ ಎಷ್ಟು ಪ್ರಾತಿನಿಧ್ಯ ನೀಡಿದ್ದರು? ಅವರ ಪ್ರದೇಶಗಳಲ್ಲಿ ನಕ್ಸಲಿಸಂ ಏಕೆ ಹೆಚ್ಚಾಯಿತು ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ಮಾ,30: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯದ ವೇಳೆ ಅಭಿಮಾನಿಗಳಿಗೆ ಭಾರಿ ಶಾಕ್ ಎದುರಾಗಿದೆ. ಪಂದ್ಯದ ಸಂಭ್ರಮದಲ್ಲಿದ್ದ ಪ್ರೇಕ್ಷಕರ ಮೊಬೈಲ್ ಫೋನ್‌ಗಳನ್ನು ಗುರಿಯಾಗಿಸಿಕೊಂಡು ಸಂಘಟಿತ ಕಳ್ಳರ ತಂಡವೊಂದು ದೊಡ್ಡ ಮಟ್ಟದ ಕಳ್ಳತನ ಎಸಗಿದೆ. ಈ ಬಗ್ಗೆ ಮಹಿಳೆಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಅಂದರೆ ಎಕ್ಸ್ನಲ್ಲಿ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಕ್ರೀಡಾಂಗಣದ P3 ಸ್ಟ್ಯಾಂಡ್ ಒಂದರಲ್ಲೇ ಸುಮಾರು 50 ರಿಂದ 60 ಮೊಬೈಲ್ ಫೋನ್‌ಗಳು ಕಳ್ಳತನವಾಗಿವೆ ಎಂದು ವರದಿಯಾಗಿದೆ. ಸಂತ್ರಸ್ತ ಮಹಿಳೆಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದು, “ಪಂದ್ಯದ ಮೊದಲ ಇನ್ನಿಂಗ್ಸ್ ವೇಳೆ ನನ್ನ ಪತಿ ನೀರು ತರಲು ಹೋದಾಗ ಅವರ ಫೋನ್ ಕಳುವಾಗಿದೆ. ನಮ್ಮಂತೆ ಹತ್ತಾರು ಜನರು ಅದೇ ಸಮಯದಲ್ಲಿ ತಮ್ಮ ಫೋನ್ ಕಳೆದುಕೊಂಡು ಕಂಗಾಲಾಗಿದ್ದರು” ಎಂದು ತಿಳಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
Beware Cricket fans
Listen to this lady and
This shouldn’t go unheard because it’s such an organised crime where so many phone’s were stolen and it’s such a breach of trust & security. She requested Bangalore Police to take strict action against this and get hold of the… pic.twitter.com/MJXrlsaoHd
ಈ ಬಗ್ಗೆ ಕ್ರೀಡಾಂಗಣದಲ್ಲಿದ್ದ ಪೊಲೀಸರಿಗೆ ದೂರು ನೀಡಿದರೂ ಸರಿಯಾದ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪಿಸಿದ್ದಾರೆ. ನಂತರ ಪೊಲೀಸ್ ಠಾಣೆಗೆ ತೆರಳಿದಾಗ ಅಲ್ಲಿ ನೂರಾರು ಜನರು ಇದೇ ರೀತಿಯ ದೂರು ನೀಡಲು ಸಾಲಿನಲ್ಲಿ ನಿಂತಿರುವುದು ಕಂಡುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮಾರು 10 ರಿಂದ 12 ಅಪ್ರಾಪ್ತ ಮಕ್ಕಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಈ ಮಕ್ಕಳು ತಂಡದ ಜರ್ಸಿ ಧರಿಸಿ, ಕಾಂಪ್ಲಿಮೆಂಟರಿ ಟಿಕೆಟ್ ಹಿಡಿದು ಓಡಾಡುತ್ತಿದ್ದರು, ಇದು ದೊಡ್ಡ ಮಟ್ಟದ ಸಂಘಟಿತ ಜಾಲವಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ಎರಡನೇ ಇನ್ನಿಂಗ್ಸ್ ಆರಂಭವಾದಾಗ ಪ್ರೇಕ್ಷಕರು ಆಹಾರ ಮತ್ತು ಪಾನೀಯಕ್ಕಾಗಿ ಸೀಟು ಬಿಟ್ಟು ಎದ್ದ ಸಂದರ್ಭವನ್ನು ಕಳ್ಳರು ಸರಿಯಾಗಿ ಬಳಸಿಕೊಂಡಿದ್ದಾರೆ. ಇಷ್ಟು ದೊಡ್ಡ ಮಟ್ಟದ ಭದ್ರತೆ ಇರುವ ಸ್ಟೇಡಿಯಂನಲ್ಲಿ ಇಂತಹ ಘಟನೆ ನಡೆದಿರುವುದು ಬೆಂಗಳೂರು ಪೊಲೀಸರ ಮತ್ತು ಕ್ರೀಡಾಂಗಣದ ಭದ್ರತಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾ ಶೂಟಿಂಗ್ ವೇಳೆ ಸಂಭವಿಸುವ ಅವಘಡಗಳು ಕೆಲ ಕಲಾವಿದರ ಬದುಕನ್ನೇ ಬದಲಿಸಿಬಿಡುತ್ತವೆ. ಈಗ ಧಾರಾವಾಹಿ (Serial) ಶೂಟಿಂಗ್ ವೇಳೆ ಸಂಭವಿಸಿದ ಅವಘಡ ಎಲ್ಲರಿಗೂ ಶಾಕ್ ತರಿಸಿದೆ. ಬೆಂಗಾಲಿ ನಟ ರಾಹುಲ್ ಅರುಣೋದಯ್ ಬ್ಯಾನರ್ಜಿ ಅವರು ಭಾನುವಾರ (ಮಾರ್ಚ್ 29) ನಿಧನ ಹೊಂದಿದ್ದಾರೆ. ಸಮುದ್ರದಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ಇದು ಬೆಂಗಾಲಿ ಚಿತ್ರರಂಗಕ್ಕೆ ಹಾಗೂ ಅಲ್ಲಿನ ಕಿರುತೆರೆ ಲೋಕಕ್ಕೆ ಶಾಕಿಂಗ್ ಎನಿಸಿದೆ. ರಾಹುಲ್ ಅವರಿಗೆ 43 ವರ್ಷ ವಯಸ್ಸಾಗಿತ್ತು.
‘ಭೋಲೆ ಬಾಬಾ ಪರ್ ಕರೆಗಾ’ ಹೆಸರಿನ ಧಾರಾವಾಹಿ ಶೂಟಿಂಗ್ ಪಶ್ಚಿಮ ಬಂಗಾಳದ ದಿಘಾದಲ್ಲಿ ನಡೆಯುತ್ತಿತ್ತು. ಮಧ್ಯಾಹ್ನದ ವೇಳೆ ಶೂಟ್ ಪೂರ್ಣಗೊಂಡಿದೆ. ಪ್ಯಾಕಪ್ ಆದ ಬಳಿಕ ರಾಹುಲ್ ಒಂಟಿಯಾಗಿ ತಲ್ಸಾರಿ ಸಮುದ್ರದ ಕಡೆ ತೆರಳಿದ್ದಾರೆ. ಆ ಬಳಿಕ ಅವರು ಕಾಣೆಯಾದರು. ಈ ಬಗ್ಗೆ ಚರ್ಚೆ ನಡೆಯಿತು. ಅವರ ಹುಡುಕಾಟ ಆರಂಭ ಆಯಿತು.
ರಾಹುಲ್ ಸಮುದ್ರದಲ್ಲಿ ಕಾಣಿಸಿದರು. ಅವರನ್ನು ಎತ್ತಲು ಅಲ್ಲಿದ್ದವರು ಪ್ರಯತ್ನಿಸಿದರು. ನಂತರ ಅವರನ್ನು ಹೊರಕ್ಕೆ ತಂದು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಸಂಜೆ ವೇಳೆ ಅವರು ನಿಧನ ಹೊಂದಿದ್ದಾಗಿ ವೈದ್ಯರು ಘೋಷಿಸಿದರು. ನೀರಿನಲ್ಲಿ ಮುಳುಗಿದ್ದರಿಂದಲೇ ನಿಧನ ಹೊಂದಿದ್ದಾಗಿ ಪ್ರಾಥಮಿಕ ವರದಿಗಳು ಹೇಳಿವೆ.
ಈ ವಿಷಯವಾಗಿ ರಾಹುಲ್ ಪತ್ನಿ ಪ್ರಿಯಾಂಕಾ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಕಷ್ಟದ ಸಂದರ್ಭದಲ್ಲಿ ಖಾಸಗಿತನಕ್ಕೆ ಗೌರವ ಕೊಡಿ ಎಂದು ಅವರು ಬೇಡಿಕೊಂಡಿದ್ದಾರೆ. 2008ರಲ್ಲಿ ಸೀರಿಯಲ್ ಸೆಟ್ ಅಲ್ಲಿ ಇಬ್ಬರೂ ಭೇಟಿ ಆದರು. ನಿಜ ಜೀವನದಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತು. 2010ರಲ್ಲಿ ಇವರು ಮದುವೆ ಆದರು. 2017ರಲ್ಲಿ ಇವರು ಬೇರೆ ಆದರು. 2018ರಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದರು. ಅಚ್ಚರಿ ಎಂದರೆ 2023ರಲ್ಲಿ ಇಬ್ಬರೂ ಮತ್ತೆ ಒಂದಾದರು. ಈ ದಂಪತಿಗೆ ಸೊಹೊಜ್ ಹೆಸರಿನ ಮಗ ಇದ್ದಾನೆ.
ಕೋಲಾರ, ಮಾರ್ಚ್ 30: ಕೋಲಾರ ಜಿಲ್ಲೆಯ ದೊಡ್ಡಹಸಾಳ ಗ್ರಾಮದ ಬಳಿ ಹಾವೊಂದು ಮತ್ತೊಂದು ಭಾರಿ ಗಾತ್ರದ ಹಾವನ್ನೇ ನುಂಗಲು ಯತ್ನಿಸಿದ ಅಪರೂಪದ ಘಟನೆ ನಡೆದಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಉರಗ ರಕ್ಷಕ ನಾಗರಾಜ್, ಅತ್ಯಂತ ಜಾಣ್ಮೆಯಿಂದ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೊಂದು ಹಾವಿನ ಬಾಯಿಗೆ ಆಹಾರವಾಗುತ್ತಿದ್ದ ಹಾವನ್ನು ಸುರಕ್ಷಿತವಾಗಿ ಬಿಡಿಸುವಲ್ಲಿ ನಾಗರಾಜ್ ಯಶಸ್ವಿಯಾಗಿದ್ದಾರೆ. ಉರಗ ರಕ್ಷಕನ ಈ ಸಾಹಸದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ನ್ಯೂಝಿಲೆಂಡ್ನ ಸ್ಫೋಟಕ ದಾಂಡಿಗ ಫಿನ್ ಅಲೆನ್ (Finn Allen) ಐಪಿಎಲ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿಯುವ ಮೂಲಕ ಅಲೆನ್ ತಮ್ಮ ಬಹುಕಾಲದ ಕನಸನ್ನು ಈಡೇರಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಫಿನ್ ಅಲೆನ್, “ಈ ಕ್ಷಣಕ್ಕಾಗಿ ನಾನು ಬಹಳ ವರ್ಷಗಳಿಂದ ಕಾಯುತ್ತಿದ್ದೆ. ಕೊನೆಗೂ ವಿಶ್ವದ ಅತಿದೊಡ್ಡ ಟಿ20 ಟೂರ್ನಮೆಂಟ್‌ನಲ್ಲಿ ಆಡಲು ಅವಕಾಶ ಸಿಕ್ಕಿದೆ, ಇದು ನಿಜಕ್ಕೂ ಸಂತಸದ ಕ್ಷಣ” ಎಂದಿದ್ದಾರೆ.
ಅಂದಹಾಗೆ ಫಿನ್ ಅಲೆನ್ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದು 2021 ರಲ್ಲಿ. 5 ವರ್ಷಗಳ ಹಿಂದೆಯೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಅವಕಾಶ ಪಡೆದರೂ ಅವರಿಗೆ ಕಣಕ್ಕಿಳಿಯಲು ಚಾನ್ಸ್ ಸಿಕ್ಕಿರಲಿಲ್ಲ ಎಂಬುದೇ ಅಚ್ಚರಿ.
2021ರ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಅವರ ಬದಲಿಗೆ ಫಿನ್ ಅಲೆನ್ ಆರ್‌ಸಿಬಿ ತಂಡಕ್ಕೆ ಆಯ್ಕೆಯಾಗಿದ್ದರು.
ಹೀಗೆ ಬದಲಿ ಆಟಗಾರನಾಗಿ ಐಪಿಎಲ್ಗೆ ಎಂಟ್ರಿ ಕೊಟ್ಟಿದ್ದ ಫಿನ್ ಅಲೆನ್ ಮೂರು ವರ್ಷಗಳ ಕಾಲ ಬೆಂಚ್ ಕಾದಿದ್ದರು ಎಂದರೆ ನಂಬಲೇಬೇಕು. ಅಂದರೆ ಅಲೆನ್ಗೆ ಒಂದೇ ಒಂದು ಪಂದ್ಯವಾಡಲು ಆರ್‌ಸಿಬಿ ಅವಕಾಶ ನೀಡಿರಲಿಲ್ಲ. ಇದಾಗ್ಯೂ ಪ್ರತಿ ಸೀಸನ್ನಲ್ಲೂ ಆರ್‌ಸಿಬಿ ಫ್ರಾಂಚೈಸಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳುತ್ತಿದ್ದರು.
ಆ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಝಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದರು. ವಿವಿಧ ಲೀಗ್ಗಳಲ್ಲೂ ಅಬ್ಬರಿಸಿದ್ದರು. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಕೂಡ ಆಡಿದ್ದರು. ಇದಾಗ್ಯೂ ಐಪಿಎಲ್ಗೆ ಬಂದರೆ ಬೆಂಚ್ ಕಾಯುವುದೇ ಬಂತು.
ಕುತೂಹಲಕಾರಿ ವಿಷಯ ಎಂದರೆ ಈ ಮೂರು ಸೀಸನ್ಗಳ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 45 ಪಂದ್ಯಗಳನ್ನಾಡಿತ್ತು. ಅಂದರೆ ಫಿನ್ ಅಲೆನ್ ಬರೋಬ್ಬರಿ 45 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು. ಆದರೆ 2024 ರಲ್ಲಿ ಫಿನ್ ಅಲೆನ್ ಆರ್‌ಸಿಬಿ ತಂಡದಿಂದ ಹೊರಬರುವ ಮೂಲಕ ಈ ಕಾಯುವಿಕೆಗೆ ಬ್ರೇಕ್ ಹಾಕಿದ್ದರು.
ಇದೀಗ ಅಲೆನ್ ಕೊಲ್ಕತ್ತಾ ನೈಟ್ ರೈಡರ್ಡ್ ತಂಡಕ್ಕೆ ಆಯ್ಕೆಯಾದ ಮೊದಲ ವರ್ಷವೇ ಪಾದಾರ್ಪಣೆ ಮಾಡಲು ಅವಕಾಶ ಸಿಕ್ಕಿದೆ. ಅಲ್ಲದೆ ಚೊಚ್ಚಲ ಪಂದ್ಯದಲ್ಲೇ 17 ಎಸೆತಗಳಲ್ಲಿ 37 ರನ್ ಸಿಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ನವದೆಹಲಿ, ಮಾರ್ಚ್ 30: ಮಕ್ಕಳನ್ನು ಎಷ್ಟೇ ಮುದ್ದಿನಿಂದ ಬೆಳೆಸಿದರೂ ಸಮಾಜದಲ್ಲಿ ಹೇಗೆ ಬದುಕಬೇಕೆಂಬುದನ್ನು ಕೂಡ ಕಲಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿ. ಬಾಲಕನೊಬ್ಬ ಕಾರಿನಿಂದ ವಾಟರ್ ಬಲೂನ್ ಎಸೆದ ಪರಿಣಾಮ ಅದು ಬೈಕ್ ಸವಾರನಿಗೆ ತಾಕಿ, ಅವರು ಆಯತಪ್ಪಿ ಫ್ಲೈಓವರ್ ಗೋಡೆಗೆ ಡಿಕ್ಕಿ ಹೊಡೆದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ವಿಡಿಯೋವನ್ನು ಮೊದಲು ದಿವ್ಯಾ ಟಂಡನ್ ಅವರು ಶೇರ್ ಮಾಡಿದ್ದರು.
ಬಾಲಕ ಮಾಡಿದ ಒಂದು ತಪ್ಪಿನಿಂದ ಜೀವವೇ ಹೋಗುವ ಸಾಧ್ಯತೆ ಇತ್ತು. ಮಾರ್ಚ್ 27 ರಂದು ನಡೆದ ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಬಾಲಕಿಯ ಪೋಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಲವರು ಒತ್ತಾಯಿಸಿದ್ದಾರೆ.ಅಪರಾಧ ಎಸಗಿದ ವಾಹನದ ಮೇಲೆ ಅಪಾಯಕಾರಿ ಚಾಲನೆ ಮತ್ತು ಕಾನೂನು ಉಲ್ಲಂಘನೆಗಾಗಿ ಮೋಟಾರ್‌ಸೈಕಲ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ದಂಡ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.