ಬೆಂಗಳೂರು ಬಿಟ್ಟು 40 ಕಿಮೀ ಹೋದ್ರೆ ಸೌದೆ ಸಿಗುತ್ತೆ: ಕಟ್ಟಿಗೆ ಬಳಸುವಂತೆ ಸಚಿವ ಮುನಿಯಪ್ಪ ಕರೆ
ಬೆಂಗಳೂರು, ಮಾರ್ಚ್ 29: ಗಲ್ಫ್ ಯುದ್ಧವೂ 30ನೇ ದಿನಕ್ಕೆ ಕಾಲಿಟ್ಟಿದೆ. ಇತ್ತ ಕರುನಾಡಲ್ಲಿ ಸಮರದ ಎಫೆಕ್ಟ್ ಬೀರಿದ್ದು, ಅಡುಗೆ ಅನಿಲ ಅಭಾವ (Gas Cylinder Crisis) ಮುಂದುವರಿದಿದೆ. ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್, ಕೈಗಾರಿಕೆಗಳು ಥಂಡಾ ಹೊಡೆದಿವೆ. ಜನರು ಖಾಲಿ ಗ್ಯಾಸ್ ಸಿಲಿಂಡರ್ ಹಿಡಿದು ಏಜೆನ್ಸಿಗಳತ್ತ ಧಾವಿಸುತ್ತಿದ್ದಾರೆ. ಈ ಮಧ್ಯೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸಿಲಿಂಡರ್ ಅಭಾವ ಇರುವುದರಿಂದ ಸೌದೆ ಒಲೆ ಬಳಸುವಂತೆ ಕರೆ ನೀಡಿದ್ದಾರೆ. ಸೌದೆ ಒಲೆಗಳನ್ನು ಬಳಸುವಂತೆ ಸಚಿವ ಕೆ.ಹೆಚ್ ಮುನಿಯಪ್ಪ ಮನವಿ ಬೆಂಗಳೂರಿನಲ್ಲಿರುವ…