Headlines

Video Viral: ರಾಮ ಮಂದಿರದಲ್ಲಿ ಹನುಮನ ಭಕ್ತಿ; ಮಂಗಳಾರತಿವರೆಗೂ ಕಾದು ಪ್ರಾರ್ಥನೆ ಸಲ್ಲಿಸಿದ ಕೋತಿ!

ತೆಲಂಗಾಣದ ಕೊಮಾರಂಭಿಮ್ ಆಸಿಫಾಬಾದ್ ಜಿಲ್ಲೆಯ ರಾಮ ದೇವಾಲಯದಲ್ಲಿ ನಡೆದ ಅಪರೂಪದ ದೃಶ್ಯವೊಂದು ವೈರಲ್​ ಆಗಿದೆ. ದೇವಾಲಯದ ಅರ್ಚಕರು ಹನುಮಂತನ ವಿಗ್ರಹಕ್ಕೆ ಮಂಗಳಾರತಿ ಬೆಳಗುತ್ತಿದ್ದ ಕ್ಷಣದಲ್ಲಿ, ಎಲ್ಲಿಂದಲೋ ಬಂದ ಕೋತಿಯೊಂದು ಶಾಂತವಾಗಿ ನಿಂತು ಪೂಜೆಯನ್ನು ಕಣ್ತುಂಬಿಸಿಕೊಂಡಿದೆ. ಮಂಗಳಾರತಿ ಪೂರ್ಣಗೊಂಡ ನಂತರ, ಸಾಕ್ಷಾತ್ ಹನುಮಂತನ ಪ್ರತಿರೂಪದಂತಿದ್ದ ಆ ಕೋತಿ ನೇರವಾಗಿ ವಿಗ್ರಹದ ಬಳಿಗೆ ತೆರಳಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿದೆ. ಅಷ್ಟೇ ಅಲ್ಲದೆ, ಅರ್ಚಕರು ನೀಡಿದ ತೀರ್ಥ ಮತ್ತು ಪ್ರಸಾದವನ್ನು ಸ್ವೀಕರಿಸಿ, ನೆರೆದಿದ್ದ ಭಕ್ತರನ್ನು ಆಶ್ಚರ್ಯಚಕಿತಗೊಳಿಸಿ ಅಲ್ಲಿಂದ ನಿರ್ಗಮಿಸಿದೆ. ಈ ಅದ್ಭುತ…

Read More

ಬೆಂಗಳೂರು ನಮ್ಮ ಮೆಟ್ರೋ ಸ್ಟೇಷನ್​​ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು: 40 ಕೋಟಿ ರೂ.ಗೆ ಡೀಲ್

ಬೆಂಗಳೂರು, (ಮಾರ್ಚ್ 29): ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು (90cr) ನಂತರ ಇದೀಗ ಬೆಂಗಳೂರು ನಮ್ಮ ಮೆಟ್ರೋ  (Bengaluru Namma Metro) ನಿಲ್ದಾಣಕ್ಕೆ ಮತ್ತೊಂದು ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಡಲು ಒಪ್ಪಂದವಾಗಿದೆ. ಹೌದು.. ಹೊರವರ್ತುಲ ರಸ್ತೆಯ (ಔಟರ್ ರಿಂಗ್ ರೋಡ್) ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ‘ಬಾಗ್ ಮಾನೆ’ (Bag mane) ಹೆಸರಿಡಲು ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಅಧಿಕೃತವಾಗಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. 40 ಕೋಟಿ…

Read More

ಶ್ರೀರಾಮನವಮಿ ಅನ್ನಪ್ರಸಾದ ಸೇವಿಸಿದ್ದ ಭಕ್ತರಿಗೆ ವಾಂತಿ, ಭೇದಿ!

ದೇವನಹಳ್ಳಿ, ಮಾರ್ಚ್​ 29: ತಾಲೂಕಿನ ಬೆಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀರಾಮನವಮಿ ಅಂಗವಾಗಿ ವಿತರಿಸಿದ ಅನ್ನಪ್ರಸಾದ ಸೇವಿಸಿದ ಭಕ್ತರಲ್ಲಿ ಫುಡ್ ಪಾಯಿಸನ್ ಆಗಿರುವುದು ಕಂಡುಬಂದಿದೆ. ನಿನ್ನೆ (ಮಾರ್ಚ್​ 28) ದೇವಸ್ಥಾನದಲ್ಲಿ ನೀಡಿದ ಪ್ರಸಾದ ಸೇವಿಸಿದ ಬಳಿಕ ಹಲವರಿಗೆ ವಾಂತಿ, ಬೇಧಿ ಸಮಸ್ಯೆ ಕಾಣಿಸಿಕೊಂಡು ಬಹುತೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರತಿವರ್ಷ ನಡೆಯುವಂತೆ ಈ ವರ್ಷವೂ ಅನ್ನಪ್ರಸಾದ ವಿತರಣೆ ಮಾಡಲಾಗಿತ್ತು. ಆದರೆ ಈ ಬಾರಿ ಪ್ರಸಾದ ಸೇವಿಸಿದ ಅನೇಕ ಭಕ್ತರು ಅಸ್ವಸ್ಥಗೊಂಡಿರುವುದು ಆತಂಕ ಮೂಡಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲೇ ಪ್ರಾಥಮಿಕ…

Read More

ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ ವಂಚನೆ: ಹೆಚ್ಚಿನ‌‌ ಲಾಭದ ಆಸೆಗೆ ಮೋಸ ಹೋದ ವ್ಯಕ್ತಿ

ಚಿಕ್ಕಮಗಳೂರು, ಮಾರ್ಚ್​ 29: ಜಗತ್ತಿನಲ್ಲಿ ಮೋಸ ಹೋಗುವವರು ಇರುವವರೆಗೆ ಮೋಸ (Fraud)  ಮಾಡುವವರು  ಇರುತ್ತಾರೆ ಎಂಬ ಮಾತಿಗೆ ಈ ಸ್ಟೋರಿ ಒಂದು ಉದಾಹರಣೆ ಎನ್ನಬಹುದು. ಫೇಸ್​ಬುಕ್ ಜಾಹೀರಾತು ನಂಬಿ ಓರ್ವ ವ್ಯಕ್ತಿ ಬರೋಬ್ಬರಿ 1.28 ಕೋಟಿ ರೂ ಕಳೆದುಕೊಂಡ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಯ ಚಿಕ್ಕಮಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಡೆದದ್ದೇನು? ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ‌ ಶಿವಪುರ ಗ್ರಾಮದ ನಿವಾಸಿ ಕಲ್ಲೇಗೌಡ ಎಂಬುವರಿಗೆ ಖದೀಮರು ಆನ್​ಲೈನ್​ ಟ್ರೇಡಿಂಗ್​ ಇನ್ವೆಸ್ಟ್​ಮೆಂಟ್​ ಹೆಸರಲ್ಲಿ ಕೋಟ್ಯಂತರ ರೂ…

Read More

ಬಿಡುಗಡೆಗೆ ಸಜ್ಜಾಗಿದೆ ರಾಯರ ಕುರಿತ ಹೊಸ ಕನ್ನಡ ಸಿನಿಮಾ ‘ಅಮಲಾಮೃತ’

ರಾಘವೇಂದ್ರ ಸ್ವಾಮಿಗಳ ಕುರಿತಾದ ಭಕ್ತಿ ಪ್ರಧಾನ ಕಥೆ ಹೊಂದಿರುವ ‘ಅಮಲಾಮೃತ’ (Amalamrutha) ಸಿನಿಮಾದ ಎಲ್ಲ ಕೆಲಸಗಳು ಮುಗಿದಿವೆ. ‘ಸಿರಿ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ಸಿದ್ಧವಾಗಿದೆ. ಮೈಸೂರು ಮೂಲದ ಗುರುರಾಜ ರಾವ್ ಎಂ.ಎಸ್. ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಯತಿಗಳು, ಸರ್ಕಾರಿ ಅಧಿಕಾರಿಗಳಿಗೆ ಈ ಸಿನಿಮಾ ವೀಕ್ಷಿಸಿದರು. ಸಿನಿಮಾ ನೋಡಿದ ಜನರ ಪ್ರತಿಕ್ರಿಯೆ ಕಂಡು ಚಿತ್ರತಂಡಕ್ಕೆ ಖುಷಿ ಆಗಿದೆ. ಕೆ.ಎಸ್. ಗೋವಿಂದರಾಮ…

Read More

ಚಾಕೊಲೇಟ್ ಕದ್ದಿದ್ದಾಳೆಂದು 12 ವರ್ಷದ ಮಗಳನ್ನು ದೊಣ್ಣೆಯಿಂದ ಹೊಡೆದು ಕೊಂದ ತಂದೆ

ಬುಲಂದ್​ಶಹರ್, ಮಾರ್ಚ್​ 29: ಮಗಳು ಚಾಕೊಲೇಟರ್ ಕದ್ದಿರಬಹುದು ಎನ್ನುವ ಸಂಶಯದಲ್ಲಿ ತಂದೆಯೊಬ್ಬ ಆಕೆಗೆ ದೊಣ್ಣೆಯಿಂದ ಹೊಡೆದು ಕೊಲೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಬುಲಂದ್​ಶಹರ್​​ನಲ್ಲಿ ನಡೆದಿದೆ. ನರೋರಾದ ರತನ್‌ಪುರ ಗ್ರಾಮದಲ್ಲಿ ಗುರುವಾರ ಈ ಘಟನೆ ನಡೆದಿದ್ದು, ಪೂಜಾ ತನ್ನ ಹಣ ನೀಡದೆ ಚಾಕೊಲೇಟ್ ಪ್ಯಾಕೆಟ್ ತೆಗೆದುಕೊಂಡಿದ್ದಾಳೆ ಎಂದು ಅಂಗಡಿಯವ ಹೇಳಿದ ನಂತರ ಆಕೆಯ ಮೇಲೆ ತಂದೆ ಪುಷ್ಪೇಂದ್ರಗೆ ಕೋಪ ಬಂದಿತ್ತು. ಆರೋಪದಿಂದ ಕೋಪಗೊಂಡ ಆರೋಪಿಗೆ ಮದ್ಯದ ಚಟ ಕೂಡ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸಂಜೆ ಮನೆಗೆ…

Read More

ನಟನಿಂದ ಮೋಸ: ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಯುವಕ

ನಟರಿಗಾಗಿ ಪ್ರಾಣ ಕೊಡಲು ತಯಾರು ಎನ್ನುವ ಅಭಿಮಾನಿಗಳು ಇರುತ್ತಾರೆ. ಇಲ್ಲೊಬ್ಬ ಯುವಕ, ನಟನಿಂದಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಅದೃಷ್ಟವಶಾತ್ ಬದುಕುಳಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದಿರುವುದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆ, ಪೂತಲಪಟ್ಟು ಎಂಬಂಲ್ಲಿ. ಪೂತಲಪಟ್ಟು ಬಳಿಯ ಶೇಷಾಪುರಂನ ಲೋಕೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿದ್ದು ‘ಜೆಟ್ಟಿ’ ಸಿನಿಮಾ ಖ್ಯಾತಿಯ ನಟ ಮಾನ್ಯಂ ಮುರಳಿ ಕೃಷ್ಣ ತನ್ನ ಈ ಸ್ಥಿತಿಗೆ ಕಾರಣ ಎಂದು ಲೋಕೇಶ್ ಬರೆದಿರುವ ಡೆತ್ ನೋಟ್ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಚಿತ್ತೂರು…

Read More

ಜೈಲುಪಾಲಾಗಿರುವ ಪುತ್ರ ಪ್ರಜ್ವಲ್ ಗಾಗಿ ತಂದೆ ರೇವಣ್ಣ ವಿಶೇಷ ಪೂಜೆ

ಮಂಡ್ಯ, (ಮಾರ್ಚ್​​ 29): ಜಿಲ್ಲೆಯ ಪಾಂಡವಪುರ ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಅದ್ದೂರಿಯಾಗಿ ಜರುಗಿತು. ಈ ಭವ್ಯ ಉತ್ಸವವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಭಕ್ತರು ನೆರೆದಿದ್ದರು. ವೈರಮುಡಿ ಬ್ರಹ್ಮೋತ್ಸವದ ಪ್ರಮುಖ ಆಕರ್ಷಣೆಯೆಂದರೆ ಶ್ರೀದೇವಿ ಮತ್ತು ಭೂದೇವಿ ಸಮೇತ ಚಲುವನಾರಾಯಣಸ್ವಾಮಿಯು ರತ್ನಖಚಿತ ವೈರಮುಡಿ ಕಿರೀಟವನ್ನು ಧರಿಸಿ ಭಕ್ತರಿಗೆ ದರ್ಶನ ನೀಡುವುದು. ಈ ವೈರಮುಡಿ ಕಿರೀಟವನ್ನು ದೇವರಿಗೆ ಧಾರಣೆ ಮಾಡುವ ಆ ಕ್ಷಣವು ಅತಿ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಈ ವಿಶಿಷ್ಟ ಸಂದರ್ಭವನ್ನು ಕಣ್ತುಂಬಿಕೊಳ್ಳಲು ದೇಶದ ನಾನಾ ಭಾಗಗಳಿಂದ ಭಕ್ತರು…

Read More

ಹೊಸ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಎಂಟ್ರಿ

ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ (R. Ashwin) ವಿದೇಶಿ ಲೀಗ್​ನತ್ತ ಮುಖ ಮಾಡಿದ್ದಾರೆ. ಈಗಾಗಲೇ ಐಪಿಎಲ್​ನಿಂದ ನಿವೃತ್ತಿ ಘೋಷಿಸಿರುವ ಅವರು ಮುಂಬರುವ ಮೇಜರ್ ಲೀಗ್  ಕ್ರಿಕೆಟ್ (MLC) ಟೂರ್ನಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ತಂಡದ ಪರ ಕಣಕ್ಕಿಳಿಯಲಿದ್ದಾರೆ. ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯು ಅಮೆರಿಕ ಕ್ರಿಕೆಟ್ ಬೋರ್ಡ್ ಆಯೋಜಿಸುವ ಟಿ20 ಲೀಗ್. ಈಗಾಗಲೇ ಮೂರು ಸೀಸನ್​ ಮುಗಿಸಿರುವ ಎಂಎಲ್​ಸಿಯ ನಾಲ್ಕನೇ ಆವೃತ್ತಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ಪರ ಕಣಕ್ಕಿಳಿಯಲು ಅಶ್ವಿನ್ ಒಪ್ಪಂದ ಮಾಡಿಕೊಂಡಿದ್ದಾರೆ. ಇದರೊಂದಿಗೆ …

Read More

ಮಾರ್ಚ್ ತಿಂಗಳಲ್ಲಿ 27 ದಿನಗಳಲ್ಲಿ 1.14 ಲಕ್ಷ ಕೋಟಿ ರೂ ವಿದೇಶೀ ಹೂಡಿಕೆಗಳ ಹೊರಹರಿವು; ಇದು ಹೊಸ ಮಾಸಿಕ ದಾಖಲೆ

ನವದೆಹಲಿ, ಮಾರ್ಚ್ 29: ಭಾರತದ ಈಕ್ವಿಟಿಗಳಿಂದ ಮಾರ್ಚ್ ತಿಂಗಳಲ್ಲಿ 12.3 ಬಿಲಿಯನ್ ಡಾಲರ್​ನಷ್ಟು ಎಫ್​ಪಿಐಗಳ ಹೂಡಿಕೆಗಳು ಹೊರಹೋಗಿವೆ. ಅಂದರೆ, ಮಾರ್ಚ್​ನಲ್ಲಿ ಈವರೆಗೂ (27, ಶುಕ್ರವಾರ) 1.14 ಲಕ್ಷ ಕೋಟಿ ರೂ ಈಕ್ವಿಟಿಗಳನ್ನು ವಿದೇಶೀ ಹೂಡಿಕೆದಾರರು ಮಾರಿದ್ದಾರೆ. ಇನ್ನೂ ಎರಡು ಟ್ರೇಡಿಂಗ್ ಸೆಷನ್​ಗಳು ಉಳಿದಿದ್ದು, ಮತ್ತಷ್ಟು ಸಾವಿರಾರು ಕೋಟಿ ರೂ ಎಫ್​ಪಿಐಗಳ (FPI- Foreign Portfolio Investors) ಹೊರಹರಿವು ಆಗುವ ನಿರೀಕ್ಷೆ ಇದೆ. ಯಾವುದೇ ಒಂದು ತಿಂಗಳಲ್ಲಿ ಇಷ್ಟು ಮೊತ್ತದ ವಿದೇಶೀ ಹೂಡಿಕೆಗಳ ಹೊರಹರಿವು ಕಂಡಿದ್ದು ಇದೇ ಮೊದಲು….

Read More