Headlines

RCB vs SRH: ಅಂಕಿ ಅಂಶಗಳ ಪ್ರಕಾರ ಯಾರು ಬಲಿಷ್ಠ?

ಒಂದೆಡೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು… ಮತ್ತೊಂದೆಡೆ ಬಲಿಷ್ಠ ದಾಂಡಿಗರ ಸನ್​ರೈಸರ್ಸ್ ಹೈದರಾಬಾದ್… ಎರಡು ಮದಗಜಗಳ ಕಾಳಗದೊಂದಿಗೆ ಐಪಿಎಲ್ ಸೀಸನ್​-19 ಗೆ ಚಾಲನೆ ದೊರೆಯಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮಾ.28) ನಡೆಯಲಿರುವ ಐಪಿಎಲ್​ನ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು. ಇಂತಹದೊಂದು ನಿರೀಕ್ಷೆಗೆ ಕಾರಣ ಉಭಯ ತಂಡಗಳಲ್ಲಿರುವ ಸ್ಟಾರ್ ಆಟಗಾರರ ದಂಡು. ಏಕೆಂದರೆ ಆರ್​ಸಿಬಿ ತಂಡದಲ್ಲಿ ಸ್ಟಾರ್ ಬ್ಯಾಟರ್​ಗಳಿದ್ದರೆ, ಎಸ್​ಆರ್​ಹೆಚ್ ತಂಡದಲ್ಲಿ ಹೊಡಿಬಡಿ ದಾಂಡಿಗರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ರನ್…

Read More

ಮದ್ಯದ ಅಂಗಡಿಗೆ ಮುತ್ತಿಗೆ ಹಾಕಿ ಸಿಬ್ಬಂದಿಗೆ ಕ್ಲಾಸ್ ತಗೊಂಡ ಮಹಿಳೆಯರು!

ತುಮಕೂರು, ಮಾರ್ಚ್​ 28: ಶಿರಾ ತಾಲ್ಲೂಕಿನ ಸಾಕ್ಷಿಹಳ್ಳಿಯಲ್ಲಿ ಕುಂಬಾರಳ್ಳಿ ಸ್ತ್ರೀಶಕ್ತಿ ಸಂಘದ ಮಹಿಳೆಯರು ಅಕ್ರಮ ಮದ್ಯ ಮಾರಾಟಕ್ಕೆ ಪ್ರತಿಭಟನೆ ನಡೆಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ ಚಿಲ್ಲರೆ ಅಂಗಡಿಗಳಿಗೆ ಮದ್ಯ ಸರಬರಾಜು ಮಾಡುತ್ತಿರುವ MSIL ಮದ್ಯದ ಅಂಗಡಿಯನ್ನು ಮಹಿಳೆಯರು ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಘದ ಮಹಿಳೆಯರು, ಅಕ್ರಮ ಮಾರಾಟ ನಿಲ್ಲಿಸದಿದ್ದರೆ ಅಂಗಡಿಗೆ ಬೀಗ ಹಾಕುವ ಮತ್ತು ಉಗ್ರ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. Source link

Read More

‘ಗೋ ಬ್ಯಾಕ್ ಜಮೀರ್​ ಅಹ್ಮದ್’: ಬಾಗಲಕೋಟೆಯಲ್ಲಿ ಮುಸ್ಲಿಂ ಮುಖಂಡರ ಆಕ್ರೋಶ!

ಬಾಗಲಕೋಟೆ, ಮಾರ್ಚ್​ 28: ಬಾಗಲಕೋಟೆ ಉಪಚುನಾವಣೆ (By election) ದಿನದಿಂದ ದಿನಕ್ಕೆ ರಂಗು ಪಡೆಯುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರಗಳನ್ನು ಅನುಸರಿಸುತ್ತಿವೆ. ಈ ಸಂದರ್ಭದಲ್ಲಿ, ರಾಜ್ಯದ ಪ್ರಮುಖ ಅಲ್ಪಸಂಖ್ಯಾತ ನಾಯಕರೆಂದು ಗುರುತಿಸಿಕೊಂಡಿರುವ ವಕ್ಫ್ ಸಚಿವ ಜಮೀರ್ ಅಹ್ಮದ್ ಅವರಿಗೆ ಬಾಗಲಕೋಟೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಇಲ್ಲಿನ ಅಂಜುಮನ್ ಸಮಿತಿಯ ಪದಾಧಿಕಾರಿಗಳು ಹಾಗೂ ಬೆಂಬಲಿಗರು ಜಮೀರ್ ಅಹ್ಮದ್ ಅವರು ಪ್ರಚಾರಕ್ಕೆ ಬರುವುದನ್ನು ವಿರೋಧಿಸಿ ‘ಗೋ ಬ್ಯಾಕ್ ಜಮೀರ್​ ಅಹ್ಮದ್’ ಅಭಿಯಾನ ನಡೆಸಿದ್ದಾರೆ. ಈ ವಿರೋಧಕ್ಕೆ ಪ್ರಮುಖ ಕಾರಣ,…

Read More

Optical Illusion: ಈ ಚಿತ್ರದಲ್ಲಿ ಮರೆ ಮಾಡಲಾಗಿರುವ ಬಾಳೆಹಣ್ಣನ್ನು ಗುರುತಿಸಬಲ್ಲಿರಾ

ಮನಸ್ಸು ಹಾಗೂ ಮೈಂಡ್ ಎರಡನ್ನು ರಿಲ್ಯಾಕ್ಸ್ ಆಗಿಸಲು ಕೆಲವರು ತಮ್ಮ ಇಷ್ಟದ ಹವ್ಯಾಸದತ್ತ ಮುಖ ಮಾಡುತ್ತಾರೆ. ಆದರೆ, ಈ ಆಪ್ಟಿಕಲ್‌ ಇಲ್ಯೂಷನ್‌ನಂತಹ (Optical Illusion) ಒಗಟಿನ ಚಿತ್ರಗಳು ನಿಮ್ಮ ಮೈಂಡ್ ರಿಲ್ಯಾಕ್ಸ್ ಆಗಿಸುತ್ತದೆ. ಅಷ್ಟೇ ಅಲ್ಲದೇ, ಈ ಮೂಲಕ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಿಕೊಳ್ಳಬಹುದು. ಇದೀಗ ಮೆದುಳಿನ ಸಾಮರ್ಥ್ಯಕ್ಕೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಚಿತ್ರದಲ್ಲಿ ಬಾಳೆ ಹಣ್ಣು ಎಲ್ಲಿದೆ ಎಂದು ಕಂಡು ಹಿಡಿಯುವುದೇ ಇಲ್ಲಿರುವ ಸವಾಲು. 9 ಸೆಕೆಂಡುಗಳೊಳಗೆ ಈ…

Read More

ದೆಹಲಿ ಪೊಲೀಸರ ಕಾರ್ಯಾಚರಣೆ: ಶಾಲೆಗಳು, ಕೋರ್ಟ್​ಗಳಿಗೆ ಬಾಂಬ್ ಬೆದರಿಕೆ ಹಾಕುತ್ತಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್

ಮೈಸೂರು, ಮಾರ್ಚ್ 28: ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ನ್ಯಾಯಾಲಯಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಇ-ಮೇಲ್ ಮೂಲಕ ಕಳೆದ ಕೆಲವು ದಿನಗಳಿಂದ ಬೆದರಿಕೆ (Bomb Threat) ಸಂದೇಶ ಕಳುಹಿಸುತ್ತಿದ್ದ ಆರೋಪಿಯನ್ನು ದೆಹಲಿ ಪೊಲೀಸರ (Delhi Police) ವಿಶೇಷ ತಂಡ ಮೈಸೂರಿನಲ್ಲಿ ಬಂಧಿಸಿದೆ. ಮೈಸೂರು (Mysuru) ನಗರದಲ್ಲಿ ಅಡಗಿ ಕುಳಿತಿದ್ದ ಶ್ರೀನಿವಾಸ್ ಎಂಬಾತನನ್ನು ಬಂಧಿಸಲಾಗಿದ್ದು, ದೆಹಲಿ ಪೊಲೀಸರ ತಂಡ ಆತನನ್ನು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆದೊಯ್ಯಲಿದೆ. ಆರೋಪಿಯು ಒಂದೇ ತಿಂಗಳಲ್ಲಿ ಅನೇಕ ಬಾರಿ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಿ…

Read More

ವಿಕ್ಟೋರಿಯಾ ಆಸ್ಪತ್ರೆ ಮೇಲೆ ಲೋಕಾ ದಿಢೀರ್ ದಾಳಿ! ಐಸಿಯು ಅವ್ಯವಸ್ಥೆ ಬಯಲು

ಬೆಂಗಳೂರು, ಮಾರ್ಚ್​ 28: ಕರ್ನಾಟಕ ಲೋಕಾಯುಕ್ತ ತಂಡದ ಏಕಾಏಕಿ ಭೇಟಿ ವೇಳೆ ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ (ವಿಕ್ಟೋರಿಯಾ ಆಸ್ಪತ್ರೆ) ಟ್ರಾಮಾ ಕೇರ್ ಸೆಂಟರ್‌ನಲ್ಲಿ ಗಂಭೀರ ಅವ್ಯವಸ್ಥೆಗಳು ಬೆಳಕಿಗೆ ಬಂದಿವೆ. ಐಸಿಯುನಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿದ್ದು, ಖಾಲಿ ಹಾಸಿಗೆಗಳಿದ್ದರೂ ತುರ್ತು ರೋಗಿಗೆ ದಾಖಲಾತಿ ನಿರಾಕರಿಸಿರುವುದು ಗಮನಕ್ಕೆ ಬಂದಿದೆ. ಹಾಸಿಗೆಗಳಿದ್ದರೂ ರೋಗಿಗಳಿಗೆ ದಾಖಲಾತಿ ಇಲ್ಲ! ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ , ವೆಂಟಿಲೇಟರ್ ದೋಷದಿಂದ ಹಾಸಿಗೆಗಳು ಬಳಸಿಲ್ಲ ಎಂದು ಹೇಳಿರುವುದು ಆಸ್ಪತ್ರೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದಿದ್ದಾರೆ….

Read More

PSLನ ಬಿಗ್ ಆಫರ್ ತ್ಯಜಿಸಿ IPLಗೆ ಬಂದ ಆಸ್ಟ್ರೇಲಿಯನ್ ವೇಗಿ..!

ಪಾಕಿಸ್ತಾನ್ ಸೂಪರ್ ಲೀಗ್ (PSL 2026) ತ್ಯಜಿಸಿ ಇಂಡಿಯನ್ ಪ್ರೀಮಿಯರ್ ಲೀಗ್​ಗೆ (IPL 2026) ಆಗಮಿಸುತ್ತಿರುವ ಆಟಗಾರರ ಪಟ್ಟಿ ಬೆಳೆಯುತ್ತಿದೆ. ಇದೀಗ ಈ ಪಟ್ಟಿಗೆ ಹೊಸ ಸೇರ್ಪಡೆ ಆಸ್ಟ್ರೇಲಿಯಾ ವೇಗಿ ಸ್ಪೆನ್ಸರ್ ಜಾನ್ಸನ್. ಸ್ಪೆನ್ಸರ್ ಈ ಬಾರಿಯ ಐಪಿಎಲ್​ಗೆ ಆಯ್ಕೆಯಾಗಿರಲಿಲ್ಲ. ಇತ್ತ ಐಪಿಎಲ್​ನಲ್ಲಿ ಚಾನ್ಸ್ ಸಿಗದ ಕಾರಣ ಸ್ಪೆನ್ಸರ್ ಜಾನ್ಸನ್ ಪಾಕಿಸ್ತಾನ್ ಸೂಪರ್​ ಲೀಗ್​​ಗೆ ಹೆಸರು ನೀಡಿದ್ದಾರೆ. ಅದರಂತೆ ಅವರನ್ನು ಕ್ವೆಟ್ಟಾ ಗ್ಲಾಡಿಯೇಟರ್ಸ್ ಫ್ರಾಂಚೈಸಿಯು ಆಸ್ಟ್ರೇಲಿಯಾ ವೇಗಿಯನ್ನು ₹1.88 ಕೋಟಿ ರೂ.ಗೆ (PKR) ಖರೀದಿಸಿತ್ತು. ಆದರೆ ಇದೀಗ…

Read More

ಸಂಜನಾ ಬುರ್ಲಿ ಮದುವೆಯ ಫೋಟೋಗಳು ಎಷ್ಟು ಸುಂದರವಾಗಿವೆ ನೋಡಿ

ಸಂನಾ ಬುರ್ಲಿ ಅವರು ಸಮರ್ಥ್ ಚೆನ್ನಗಿರಿ ಜೊತೆ ವಿವಾಹ ಆಗಿದ್ದಾರೆ. ಅವರ ವಿವಾಹದ ಮುದ್ದಾದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿವೆ.  ಸಂಜನಾ ಬುರ್ಲಿ ಅವರು ಹಲವು ವರ್ಷಗಳಿಂದ ಕಿರುತೆರೆಯಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿದ್ದರು. ಆ ಬಳಿಕ ‘ಕಲರ್ಸ್ ಕನ್ನಡ’ಕ್ಕೆ ಬಂದರು.  ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ವಿವಾಹ ಕಾರಣದಿಂದ ಅವರು ಧಾರಾವಾಹಿಯನ್ನು ಅರ್ಧಕ್ಕೆ ತೊರೆದಿದ್ದರು.  ಈಗ ಸಂಜನಾ ಬುರ್ಲಿ ಅವರು ಸಮರ್ಥ ಚೆನ್ನಗಿರಿ ಅವರನ್ನು…

Read More

Girl Child as Lakshmi: ಹೆಣ್ಣು ಮಗು ಜನಿಸಿದರೆ ಮನೆಯ ಅದೃಷ್ಟವೇ ಬದಲಾಗುತ್ತದೆಯೇ? ಶಾಸ್ತ್ರಗಳು ಹೇಳುವುದೇನು?

ಭಾರತೀಯ ಪರಂಪರೆಯಲ್ಲಿ ಹೆಣ್ಣು ಮಗುವಿನ ಜನನವು ಕೇವಲ ಒಂದು ಕುಟುಂಬದ ವಿಸ್ತರಣೆಯಲ್ಲ, ಅದು ಸಾಕ್ಷಾತ್ ಲಕ್ಷ್ಮಿ ದೇವಿಯ ಆಗಮನವೆಂದೇ ಶತಶತಮಾನಗಳಿಂದ ನಂಬಿಕೊಂಡು ಬರಲಾಗಿದೆ. ಮನೆಯ ಅಂಗಳದಲ್ಲಿ ಹೆಣ್ಣು ಮಗುವಿನ ನಗು ಕೇಳಿಸಿದರೆ ಅಲ್ಲಿ ದಾರಿದ್ರ್ಯ ಸುಳಿಯುವುದಿಲ್ಲ ಎಂಬ ಮಾತು ಕೇವಲ ಭಾವನಾತ್ಮಕ ನುಡಿಯಲ್ಲ, ಅದರ ಹಿಂದೆ ಆಳವಾದ ಆಧ್ಯಾತ್ಮಿಕ ಮತ್ತು ಜ್ಯೋತಿಷ್ಯ ಶಾಸ್ತ್ರದ ಕಾರಣಗಳಿವೆ. ಹೆಣ್ಣು ಮಗು ಜನಿಸಿದಾಗ ಆಕೆಯ ಜಾತಕದಲ್ಲಿರುವ ಗ್ರಹಗತಿಗಳು ಇಡೀ ಕುಟುಂಬದ ಅದೃಷ್ಟವನ್ನೇ ಬದಲಿಸುವ ಶಕ್ತಿ ಹೊಂದಿರುತ್ತವೆ ಎಂದು ಶಾಸ್ತ್ರಗಳು ಉಲ್ಲೇಖಿಸುತ್ತವೆ. ಜ್ಯೋತಿಷ್ಯ…

Read More

ನೇಪಾಳ: ಬಲೆನ್ ಶಾ ಅಧಿಕಾರ ಸ್ವೀಕಾರ ಬೆನ್ನಲ್ಲೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ

ಕಾಠ್ಮಂಡು, ಮಾರ್ಚ್ 28: ನೇಪಾಳ (Nepal) ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ನೂತನ ಪ್ರಧಾನಿಯಾಗಿ ಬಾಲೆನ್ ಶಾ ಹಾಗೂ ಸಂಪುಟ ಸಚಿವರು ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ (KP Sharma Oli) ಅವರನ್ನು ಬಂಧಿಸಲಾಗಿದೆ. ಕಳೆದ ವರ್ಷ ನಡೆದ ಭ್ರಷ್ಟಾಚಾರ ವಿರೋಧಿ ‘ಜೆನ್ ಜಿ (Gen Z)’ ಪ್ರತಿಭಟನೆಯ ವೇಳೆ ಕನಿಷ್ಠ 77 ಜನರ ಸಾವಿಗೆ ಕಾರಣವಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಲಿ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಒಲಿ ಅವರೊಂದಿಗೆ ಮಾಜಿ ಗೃಹ…

Read More