ಬೆಂಗಳೂರು, ಜುಲೈ 10: ಬೆಳಗಾವಿಯಲ್ಲಿ ಏಕೆ ಆರ್ಎಸ್ಎಸ್ ಸಭೆ ಅಂತಾ ಗೊತ್ತಿಲ್ಲ. RSS ಸಭೆ ಮಾಡಿದ ಬಳಿಕ ಏನಾದರೂ ಅನಾಹುತ ಆಗೇ ಆಗಿದೆ. ಈ ಹಿಂದೆ ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಅಂತಹವರ ಹತ್ಯೆ ಆಗಿತ್ತು. ಈ ಸಭೆ ಬಳಿಕ ಏನಾಗುತ್ತೆ ಅಂತಾ ನೋಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಯೋಧ್ಯೆ ರಾಮಮಂದಿರ ಹುಂಡಿ ಹಣ ಕಳ್ಳತನ ಪ್ರಕರಣದ ಕುರಿತು ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ಹರಿಪ್ರಸಾದ್ ತೀವ್ರ ವಾಗ್ದಾಳಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ರಾಜೀನಾಮೆಗೆ ಆಗ್ರಹಿಸಿರುವ ಅವರು, ಟ್ರಸ್ಟ್ ಸ್ಥಾಪನೆ, ಶಿಲಾನ್ಯಾಸ ಮತ್ತು ಪ್ರಾಣ ಪ್ರತಿಷ್ಠಾಪನೆಯ ಜವಾಬ್ದಾರಿಯನ್ನು ಪ್ರಧಾನಿಗಳು ಹೊರಬೇಕು ಎಂದಿದ್ದಾರೆ. 200 ಕೋಟಿ ರೂ ಲೂಟಿ ಮತ್ತು ಅಮೂಲ್ಯ ರಾಮಾಯಣ ಪುಸ್ತಕ ಕಳ್ಳತನವಾಗಿರುವ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.