ಹಸಿವಾಗುವುದು ಕಡಿಮೆ ಆಗಿದ್ಯಾ? ಹಾಗಿದ್ರೆ ನಿರ್ಲಕ್ಷ್ಯ ಮಾಡ್ಬೇಡಿ ಇದು ಗಂಭೀರ ಕಾಯಿಲೆ ಬರುವ ಮುನ್ಸೂಚನೆಯಾಗಿರಬಹುದು – Kannada News | Sudden Loss of Appetite: A Warning Sign?
ಕೆಲವರಿಗೆ ಇದ್ದಕ್ಕಿದ್ದಂತೆ ಹಸಿವು (Appetite) ಕಡಿಮೆಯಾಗುವುದು ಸಹಜ. ಅದಕ್ಕಾಗಿಯೇ ಜನ ಇದನ್ನು ಸಾಮಾನ್ಯ ಸಮಸ್ಯೆ ಎಂದು ನಿರ್ಲಕ್ಷಿಸುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ರೀತಿ ಮಾಡಬಾರದು. ಏಕೆಂದರೆ ಇದು ಗಂಭೀರ ಸಮಸ್ಯೆಯ ಸಂಕೇತವೂ ಆಗಿರಬಹುದು. ಇದನ್ನು ಆಯಾಸ (Fatigue), ಹವಾಮಾನ ಅಥವಾ ದಿನಚರಿಯಲ್ಲಿನ ಬದಲಾವಣೆ ಎಂದು ಗಂಭೀರವಾಗಿ ಪರಿಗಣಿಸದಿದ್ದರೆ ಇದಕ್ಕೆ ತಕ್ಕ ದಂಡ ತೆರಬೇಕಾದ ಸಮಯ ಬರಬಹುದು. ಹೌದು, ಹಸಿವು ದೇಹದ ಅಗತ್ಯತೆ ಮತ್ತು ಆಂತರಿಕ ಸಮತೋಲನವನ್ನು ಸಂಕೇತಿಸುತ್ತದೆ. ದೇಹಕ್ಕೆ ಶಕ್ತಿಯ ಅಗತ್ಯವಿದ್ದಾಗ, ಹಸಿವಾಗುವುದು ಸಹಜ. ಯಾವುದೇ ನಿರ್ದಿಷ್ಟ…