ವಿಜಯಪುರದಲ್ಲಿ ಅಸ್ಮಿತಾ ಖೇಲೋ ಇಂಡಿಯಾ ಮಹಿಳಾ ಸೈಕ್ಲಿಂಗ್ ಲೀಗ್: ಇಲ್ಲಿವೆ ರೇಸ್‌ನ ರೋಚಕ ಕ್ಷಣಗಳು!
ಸೈಕ್ಲಿಸ್ಟ್‌ಗಳ ತವರೂರು ಎಂದೇ ಪ್ರಸಿದ್ಧಿ ಪಡೆದಿರುವ ಐತಿಹಾಸಿಕ ವಿಜಯಪುರ ನಗರದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ 'ಅಸ್ಮಿತಾ ಖೇಲೋ ಇಂಡಿಯಾ ವುಮೆನ್ಸ್ ಸೈಕ್ಲಿಂಗ್ ಸಿಟಿ ಲೀಗ್' ಅತ್ಯಂತ ಯಶಸ್ವಿಯಾಗಿ ನಡೆಯಿತು. ಮಹಿಳಾ ಸೈಕ್ಲಿಸ್ಟ್‌ಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದ್ದ ಈ ವಿಶಿಷ್ಟ ಕ್ರೀಡಾಕೂಟಕ್ಕೆ ಇಡೀ ನಗರವೇ ಸಾಕ್ಷಿಯಾಯಿತು ಮತ್ತು ನೂರಾರು ಮಹಿಳಾ ಸೈಕ್ಲಿಸ್ಟ್‌ಗಳು ಸೈಕಲ್ ಸವಾರಿ ಮಾಡುವ ಮೂಲಕ ನಗರದಲ್ಲಿ ಹೊಸ ಕಳೆ ತಂದರು. ಈ ಲೀಗ್ ಅನ್ನು ಕ್ರೀಡಾ ಪ್ರೋತ್ಸಾಹಕ್ಕಾಗಿ ದೇಶದ ಮತ್ತು ರಾಜ್ಯದ ಪ್ರಮುಖ…