Category Archives: Blog

Your blog category

ರಾಜಮೌಳಿಗೆ ಅತ್ಯಂತ ಪ್ರಿಯವಾದ ವಿಲನ್ ಸುದೀಪ್: ಏಕೆ ಗೊತ್ತೆ?

ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವರ್ಷವಿದೆ. ಆದರೆ ಈಗಲೇ ಸಿನಿಮಾದ ಹೈಪ್ ಆಕಾಶಕ್ಕೇರಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಮಹೇಶ್ ಬಾಬು, ರಾಜಮೌಳಿಗೆ ತಮ್ಮ ಹೀರೋಗಳಿಗಿಂತಲೂ ವಿಲನ್​​ಗಳೇ ಬಹಳ ಇಷ್ಟ ಎಂದಿದ್ದರು. ‘ವಾರಣಾಸಿ’ಯ ಪೃಥ್ವಿರಾಜ್ ಸುಕುಮಾರ್ ಪಾತ್ರವೇ ರಾಜಮೌಳಿಗೆ ಇಷ್ಟ ಎಂಬುದು ಅವರ ಮಾತಿನ ಉದ್ದೇಶವಾಗಿತ್ತು. ರಾಜಮೌಳಿಯ ಸಿನಿಮಾಗಳಲ್ಲಿ ನಾಯಕರಷ್ಟೆ ವಿಲನ್​​ಗಳು ಸಹ ಬಹಳ ಪವರ್​ಫುಲ್ ಆಗಿರುತ್ತಾರೆ. ಆದರೆ ರಾಜಮೌಳಿಗೆ ತಮ್ಮ ಸಿನಿಮಾಗಳ ವಿಲನ್​​ಗಳಲ್ಲಿ ಅತಿ ಹೆಚ್ಚು ಇಷ್ಟವಾದ ವಿಲನ್ ಸುದೀಪ್.

ಸ್ವತಃ ರಾಜಮೌಳಿ ಹಲವಾರು ಬಾರಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿಯೇ ತಮಗೆ ಸುದೀಪ್ ಅವರು ಬಹಳ ಇಷ್ಟವಾದ ವಿಲನ್ ಎಂದು. ಸುದೀಪ್ ಅವರೇ ತಮಗೆ ಏಕೆ ಇಷ್ಟವೆಂದು ಸಹ ರಾಜಮೌಳಿ ಹೇಳಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾ ಬಿಡುಗಡೆ ಬಳಿಕ ಹಾಲಿವುಡ್​ನಲ್ಲಿ ಕೆಲವರು ರಾಜಮೌಳಿಯ ಬೆಸ್ಟ್ ಸಿನಿಮಾಗಳ ವಿಶೇಷ ಪ್ರದರ್ಶವನ್ನು ಆಯೋಜಿಸಿ, ರಾಜಮೌಳಿ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅಲ್ಲಿಯೂ ಸಹ ರಾಜಮೌಳಿ ಸುದೀಪ್ ಅವರನ್ನು ಕೊಂಡಾಡಿದರು.

ಇದನ್ನೂ ಓದಿ:ಜಪನೀಸ್​ ಸ್ಟುಡಿಯೋಗಳ ಜೊತೆ ದೊಡ್ಡ ಡೀಲ್​​​ಗೆ ಮುಂದಾದ ರಾಜಮೌಳಿ

‘ನಾನು ಸೃಷ್ಟಿಸಿದ ವಿಲನ್​​ಗಳ ಪೈಕಿ ಸುದೀಪ್ ಅವರ ಪಾತ್ರ ನನಗೆ ಬಹಳ ಇಷ್ಟ. ಸುದೀಪ್ ನನ್ನ ಮೆಚ್ಚಿನ ವಿಲನ್. ಅವರು ನಟಿಸಿದ ರೀತಿ ಅತ್ಯದ್ಭುತ’ ಎಂದ ರಾಜಮೌಳಿ, ಸುದೀಪ್ ಅವರ ನಟನಾ ಪ್ರತಿಭೆಯನ್ನು ತಮ್ಮದೇ ರೀತಿಯಲ್ಲಿ ವರ್ಣಿಸಿದ್ದರು. ‘ನಟರಿಗೆ ಎದುರಿಗೆ ಒಬ್ಬ ನಟನಿದ್ದರೆ ನಟಿಸುವುದು ಸುಲಭ. ಎದುರಿಗೆ ಕ್ಯಾಮೆರಾ ಇದ್ದು, ಆ ಕ್ಯಾಮೆರಾ ನಟನೆಂದು ಊಹಿಸುವುದು ಸಹ ಸುಲಭ, ಆದರೆ ‘ಈಗ’ ಸಿನಿಮಾನಲ್ಲಿ ಸುದೀಪ್ ಅವರು ನೊಣದ ಎದುರು ನಟಿಸಬೇಕಿತ್ತು. ಅಲ್ಲದೆ, ನೊಣ, ನಟರ ರೀತಿ ಒಂದು ಕಡೆ ನಿಲ್ಲುವ ಜೀವಿ ಅಲ್ಲ, ಅದು ಅತ್ತಿಂದಿತ್ತ, ಇತ್ತಿಂದತ್ತ ಹಾರಾಡುತ್ತಿರುತ್ತದೆ, ಅದು ಹೇಗೆ ಹಾರಾಡುತ್ತದೆ, ಅದನ್ನು ಹೇಗೆ ಹಾರಾಡಿಸಬೇಕು ಎಂಬುದು ನನ್ನ ಕಲ್ಪನೆಯಲ್ಲಿರುತ್ತಿತ್ತು, ನನ್ನ ಕಲ್ಪನೆಯಲ್ಲಿ ನೊಣ ಹೇಗೆ ಹಾರುತ್ತಿದೆ ಎಂಬುದನ್ನು ಗ್ರಹಿಸಿ ಅದಕ್ಕೆ ಅನುಗುಣವಾಗಿ ಸುದೀಪ್ ನಟಿಸಬೇಕಿತ್ತು, ಸುದೀಪ್ ಅವರ ಆ ಕೆಲಸವನ್ನು ಅತ್ಯದ್ಭುತವಾಗಿ ಮಾಡಿದ್ದಾರೆ’ ಎಂದಿದ್ದಾರೆ ರಾಜಮೌಳಿ.

‘ಈಗ’ ಸಿನಿಮಾನಲ್ಲಿ ಸುದೀಪ್ ಅವರಿಗೆ ಬಹಳ ಸವಾಲುಗಳಿದ್ದವು. ನನ್ನ ಗ್ರಹಿಕೆಯಲ್ಲಿರುವ ನೊಣವನ್ನು ಊಹಿಸಿ ಅವರು ನಟಿಸಬೇಕಿತ್ತು, ಅಲ್ಲದೆ, ಅವರು ನಟಿಸುವಾಗ ನೊಣದ ಮಾಡೆಲ್ ಸಹ ಇಡುವಂತಿರಲಿಲ್ಲ. ಎದುರಿಗೆ ಇಲ್ಲದೇ ಇರುವ ಜೀವಿಗೆ, ಅದೂ ಅವರ ಕಲ್ಪನೆಗೂ ಗೊತ್ತಿರದ ರೀತಿ ವರ್ತಿಸುವ ಜೀವಿಗೆ ಪ್ರತಿಯಾಗಿ ಅವರು ನಟಿಸಬೇಕಿತ್ತು. ಸುದೀಪ್ ಆ ಸಿನಿಮಾನಲ್ಲಿ ಅತ್ಯದ್ಭುತವಾಗಿ ನಟಿಸಿದರು. ಹಾಗಾಗಿ ಸುದೀಪ್ ಅವರು ನನ್ನ ಅಚ್ಚುಮೆಚ್ಚಿನ ವಿಲನ್’ ಎಂದಿದ್ದಾರೆ ರಾಜಮೌಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೊಮಾಲಿಯಾ: ರನ್​​ವೇಯಿಂದ ಜಾರಿ ಬೀಚ್​​ಗೆ ಬಿದ್ದ 55 ಜನರಿದ್ದ ವಿಮಾನ – Kannada News | Aircraft Carrying 55 Slides Off Runway, Stops Near Shoreline in Somalia

ಸೊಮಾಲಿಯಾ, ಫೆಬ್ರವರಿ 11: ಸೊಮಾಲಿಯಾದ ಪ್ರಮುಖ ವಿಮಾನ ನಿಲ್ದಾಣದಲ್ಲಿ 55 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನ(Flight)ವೊಂದು ರನ್‌ವೇಯಿಂದ ಜಾರಿ ಬೀಚ್​ಗೆ ಬಿದ್ದಿರುವ ಘಟನೆ ವರದಿಯಾಗಿದೆ. ಮೊಗಾದಿಶುವಿನ ಅಡೆನ್ ಅಬ್ದುಲ್ಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ಈ ಘಟನೆ ಸಂಭವಿಸಿದೆ.

ಯಾರಿಗೂ ಗಾಯಗಳಾಗಿಲ್ಲ.ಸ್ಟಾರ್‌ಸ್ಕಿ ಏವಿಯೇಷನ್ ​​ನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ 50 ಪ್ರಯಾಣಿಕರು ಮತ್ತು ಐದು ಸಿಬ್ಬಂದಿ ಇದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಸಿಇಒ ಅಹ್ಮದ್ ನೂರ್ ದೃಢಪಡಿಸಿದರು. ವಿಮಾನವು ರನ್‌ವೇಯಿಂದ ಜಾರಿ ಹಿಂದೂ ಮಹಾಸಾಗರದ ತೀರದ ಬಳಿ ನಿಂತಿತ್ತು.

ವಿಮಾನವು ಉತ್ತರ ನಗರವಾದ ಗಾಲ್ಕಸಿಯೊಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ, ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ವರದಿ ಮಾಡಿ ತುರ್ತು ಭೂಸ್ಪರ್ಶಕ್ಕಾಗಿ ಹಿಂತಿರುಗಲು ನಿರ್ಧರಿಸಿದ್ದರು. ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ, ವಿಮಾನವು ರನ್‌ವೇಯಿಂದ ಹೊರಟು ತೀರದ ಕಡೆಗೆ ಚಲಿಸಿತು.

ಮತ್ತಷ್ಟು ಓದಿ: Video: ಜಾರ್ಜಿಯಾದ ಜನನಿಬಿಡ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ, ಬಹು ವಾಹನಗಳಿಗೆ ಡಿಕ್ಕಿ

ರಕ್ಷಣಾ ತಂಡಗಳು ತ್ವರಿತವಾಗಿ ಪ್ರತಿಕ್ರಿಯಿಸಿವೆ, ವಿಮಾನದಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಂಡಿರುವುದಾಗಿ ಸಾರಿಗೆ ಸಚಿವ ಮೊಹಮ್ಮದ್ ಫರಾಹ್ ನುಹ್ ತಿಳಿಸಿದ್ದಾರೆ. ವಿಮಾನವು ಹಾನಿಗೊಳಗಾಗಿದ್ದರೂ, ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ.

ವಿಮಾನ ನಿಲ್ದಾಣದ ವಿಡಿಯೋ

ತಾಂತ್ರಿಕ ಸಮಸ್ಯೆ ಮತ್ತು ರನ್‌ವೇ ಘಟನೆಗೆ ಕಾರಣವೇನೆಂದು ಕಂಡುಹಿಡಿಯಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:29 pm, Wed, 11 February 26

Source link

ಚಿರತೆಗಳ ಜೊತೆ ಕಾದಾಡಿ ಜೀವ ಉಳಿಸಿಕೊಂಡ ಕಾಡುಹಂದಿ: ವಿಡಿಯೋ ವೈರಲ್​​ – Kannada News | Wild Boar Escapes Leopard Attack in Bhadra Sanctuary’s Lakkavalli Region; Video Goes Viral

ಚಿಕ್ಕಮಗಳೂರು, ಫೆಬ್ರವರಿ 11: ಬೇಟೆಗೆ ಹೊಂಚು ಹಾಕಿದ್ದ ಚಿರತೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಕಾಡುಹಂದಿ ಎಸ್ಕೇಪ್​​ ಆಗಿರುವ ಪ್ರಸಂಗ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಲಕ್ಕವಳ್ಳಿ ವಿಭಾಗದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್​​ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾಡು ಹಂದಿ ಬೇಟೆಗೆ ಎರಡು ಚಿರತೆಗಳು ಹೊಂಚುಹಾಕಿ ಕುಳಿತಿದ್ದವು. ಒಂದು ಚಿರತೆ ಮರವೇರಿದ್ದರೆ ಮತ್ತೊಂದು ಕೆಳಭಾಗದಿಂದಲೇ ಅಟ್ಯಾಕ್​​ಗೆ ರೆಡಿ ಆಗಿತ್ತು. ಆದರೆ ಚಿರತೆಗೇ ಗುದ್ದಿ ಕಾಡುಹಂದಿ ಎಸ್ಕೇಪ್​​ ಆಗಿದೆ. ಹಂದಿ ಮತ್ತು ಚಿರತೆ ಕಾದಾಟದ ದೃಶ್ಯವೀಗ ವೈರಲ್​​ ಆಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹಿಟಾಚಿ ಕೆಟ್ಟೋಗಿದ್ದಕ್ಕೆ ಶೋರೂಮ್​ಗೆ ಬೀಗ ಹಾಕಿದ ಗ್ರಾಹಕ ಅಷ್ಟಕ್ಕೇ ಸುಮ್ಮನಾಗದೆ ಏನು ಮಾಡಿದ್ರು ನೋಡಿ! – Kannada News | Customer Unique Protest Continues in Tumakuru after Locking Tata Hitachi Showroom After Machine Breakdown

ಹಿಟಾಚಿ ಶೋರೂಮ್ ಎದುರು ಗ್ರಾಹಕನ ವಿಭಿನ್ನ ಪ್ರತಿಭಟನೆImage Credit source: tv9

ತುಮಕೂರು, ಫೆಬ್ರವರಿ 11: ಹೊಸದಾಗಿ ಖರೀದಿಸಿದ ಹಿಟಾಚಿ ಯಂತ್ರವು ಮೂರೇ ತಿಂಗಳಲ್ಲಿ ಕೆಟ್ಟು ನಿಂತ ಹಿನ್ನೆಲೆಯಲ್ಲಿ ಬೇಸತ್ತ ಗ್ರಾಹಕ ಶೋರೂಂಗೆ ಬೀಗ ಹಾಕಿ ಪ್ರತಿಭಟನೆ ನಡೆಸಿರುವ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಇಷ್ಟಾದರೂ ಕಂಪನಿ ಸ್ಪಂದಿಸದ ಕಾರಣ ಅಂತರಸನಹಳ್ಳಿ ಬಳಿಯಿರುವ ಟಾಟಾ ಹಿಟಾಚಿ (Tata Hitachi) ಶೋರೂಂ ಮುಂದೆ ಗ್ರಾಹಕ ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಶೋರೂಂ ಮುಂದೆ ಶಾಮಿಯಾನ ಹಾಕಿ ಕುಳಿತುಕೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ.

ಹಿಟಾಚಿ ಶೋರೂಂಗೆ ಬೀಗ ಪ್ರಕರಣದ ಹಿನ್ನೆಲೆ

ತುಮಕೂರಿನ ಗಿರೀಶ್ ಎಂಬ ಗ್ರಾಹಕ ಸುಮಾರು ಐದು ತಿಂಗಳ ಹಿಂದೆ 52 ಲಕ್ಷ ರೂಪಾಯಿ ನೀಡಿ ಹೊಸ ಹಿಟಾಚಿ ಯಂತ್ರವನ್ನು ಖರೀದಿಸಿದ್ದರು. ಆದರೆ ಖರೀದಿಸಿದ ಮೂರೇ ತಿಂಗಳಲ್ಲಿ ಯಂತ್ರ ದೋಷಗೊಂಡು ಕಾರ್ಯನಿರ್ವಹಿಸದೇ ನಿಂತಿದ್ದು, ಅದನ್ನು ಸರಿಪಡಿಸುವಂತೆ ಕಂಪನಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕಂಪನಿ ನಡೆಗೆ ಬೇಸತ್ತ ಗಿರೀಶ್ ಶೋರೂಂ ಬಾಗಿಲಿಗೆ ಬೀಗ ಹಾಕಿ, ಹಿಟಾಚಿ ಯಂತ್ರವನ್ನೇ ಶೋರೂಂ ಪ್ರವೇಶದ್ವಾರಕ್ಕೆ ಅಡ್ಡವಾಗಿ ನಿಲ್ಲಿಸಿ ಪ್ರತಿಭಟನೆ ಆರಂಭಿಸಿದ್ದರು. ಇದರಿಂದ ಶೋರೂಂ ಸಿಬ್ಬಂದಿ ಒಳಗೆ ಪ್ರವೇಶಿಸಲು ಸಾಧ್ಯವಾಗದೆ ಹೊರಗಡೆಯೇ ಕಾಯುವಂತಾಗಿದೆ.

ಶೋರೂಂ ಮುಂದೆ ಶಾಮಿಯಾನ ಹಾಕಿ ಕುಳಿತ ಗ್ರಾಹಕ!

ಬುಧವಾರ ಶೋರೂಂ ಮುಂದೆ ಶಾಮಿಯಾನ ಹಾಕಿ ಧರಣಿ ಕುಳಿತಿರುವ ಗಿರೀಶ್, ಸಮಸ್ಯೆ ಬಗೆಹರಿಸಿ ಯಂತ್ರವನ್ನು ದುರಸ್ತಿ ಮಾಡಿಕೊಡುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಟಾಟಾ ಕಂಪನಿಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸದಾಗಿ ಖರೀದಿಸಿದ ಹಿಟಾಚಿ ಕೆಟ್ಟುಹೋಯ್ತೆಂದು ಶೋರೂಮ್​ಗೇ ಬೀಗ ಹಾಕಿದ ಗ್ರಾಹಕ!

ಘಟನೆ ಸ್ಥಳೀಯರಲ್ಲಿ ಚರ್ಚೆಗೆ ಕಾರಣವಾಗಿದ್ದು, ಗ್ರಾಹಕ ಹಾಗೂ ಕಂಪನಿ ನಡುವೆ ಸಮಸ್ಯೆ ಹೇಗೆ ಬಗೆಹರಿಯಲಿದೆ ಎಂಬುದೇ ಸ್ಥಳೀಯರ ಕುತೂಹಲವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು – Kannada News | Man was brutally beaten for coughing in front of the house in Ramanagar, Later died in Hospital

ಮನೆ ಮುಂದೆ ಕೆಮ್ಮಿದ್ದಕ್ಕೆ ಮಾರಣಾಂತಿಕ ಹಲ್ಲೆ! ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ರಾಮನಗರ, ಫೆಬ್ರವರಿ 11: ಸಮಾಜದಲ್ಲಿ ಯಾವ್ಯಾವುದೋ ವಿಚಾರಕ್ಕೆ ಗಲಾಟೆ, ಹಲ್ಲಗಳು ನಡೆಯುತ್ತವೆ. ಆದರೆ ವ್ಯಕ್ತಿಯೊಬ್ಬ ಮನೆ ಮುಂದೆ ಬಂದು ಕೆಮ್ಮಿದ ಎನ್ನವ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ರಾಮನಗರ (Ramnagar) ತಾಲೂಕಿನ ಬಿಡದಿಯಲ್ಲಿ ನಡೆದಿದೆ. ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಕೆಮ್ಮಿದ ವಿಚಾರಕ್ಕೆ ಶುರುವಾದ ಜಗಳ ವಿಕೋಪಕ್ಕೆ ತಿರುಗಿದೆ.

ಸಣ್ಣದಾಗಿ ಶುರುವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿತು

ರಾಜಸ್ಥಾನ ಮೂಲದ ವಿನೋದ್ ಕುಮಾರ್ ಶೈನಿ (34) ಕಳೆದ 11 ವರ್ಷಗಳಿಂದ ಬಿಡದಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಯೇ ವಾಸವಾಗಿದ್ದರು. ಮೂರು ದಿನಗಳ ಹಿಂದೆ ಮನೆ ಪಕ್ಕದಲ್ಲಿದ್ದ ಸಂಜಯ್ ಅವರೊಂದಿಗೆ ಮಾತಿನ ಚಕಮಕಿ ಉಂಟಾಗಿದ್ದು, ಕೆಮ್ಮಿದ ವಿಚಾರಕ್ಕೆ ಜಗಳ ತೀವ್ರಗೊಂಡಿದೆ ಎನ್ನಲಾಗಿದೆ. ಈ ವೇಳೆ ಸಂಜಯ್, ಹೊಂಬಯ್ಯ (ಹೊಂಬೆಗೌಡ), ವಿಜಯ್ ಸೇರಿದಂತೆ ಇತರರು ಸೇರಿ ವಿನೋದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಗಂಭೀರವಾಗಿ ಗಾಯಗೊಂಡ ವಿನೋದ್ ಅವರನ್ನು ತಕ್ಷಣ ಬಿಡದಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Bengaluru: ಸೊಸೆ ಮೇಲೆ ಮಾವನಿಂದಲೇ ಲೈಂಗಿಕ ದೌರ್ಜನ್ಯ; ಆಸೆ ಈಡೇರಿಸು ಎಂದು ಪೀಡನೆ – Kannada News | Married woman physically harassed by father in law police complaint lodged

ಬೆಂಗಳೂರು, ಫೆಬ್ರವರಿ 11: ನನ್ನ ಆಸೆ ಈಡೇರಿಸು ಎಂದು ಸೊಸೆಗೆ ಮಾವನೇ ಲೈಂಗಿಕ ಕಿರುಕುಳ ನೀಡಿರುವ ಆರೋಪ ಬೆಂಗಳೂರಲ್ಲಿ ಕೇಳಿಬಂದಿದೆ. ಥಣಿಸಂಧ್ರದ ಪ್ರತಿಷ್ಟಿತ ಸ್ಕೂಲ್ ಪ್ರಿನ್ಸಿಪಾಲ್ ಆಗಿರುವ ಮಹಿಳೆಗೆ ಆಕೆಯ ಗಂಡನ ತಂದೆ, ಕಾವಲ್ ಬೈರಸಂಧ್ರದ ಶಾಲೆಯೊಂದರ ಫೌಂಡರ್ ಆಗಿರುವ ವ್ಯಕ್ತಿ ಕಿರುಕುಳ ನೀಡಿರುವ ಬಗ್ಗೆ ಆರ್. ಟಿ. ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಷಯವನ್ನು ಮಗನಿಗೆ ತಿಳಿಸಿದರೆ ಕೊಲ್ಲೋದಾಗಿ ಆರೋಪಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದ ಎಂಬ ಬಗ್ಗೆಯೂ ದೂರಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲೆಂದರಲ್ಲಿ ಲೈಂಗಿಕ ಕಿರುಕುಳ ಆರೋಪ

2007ರಲ್ಲಿ ಮದುವೆಯಾಗಿದ್ದ ಸಂತ್ರಸ್ತೆಗೆ ಆರಂಭದಲ್ಲಿ ಜೀವನ ಚೆನ್ನಾಗಿಯೇ ಇತ್ತು. ಆದರೆ ಬರ ಬರುತ್ತಾ ಮಾವನ ಕಾಟ ಶುರುವಾಗಿದೆ. 2005ರಲ್ಲಿ ಪತ್ನಿಯ ಸಾವಿನ ಬಳಿಕ ಆರೋಪಿ 2006ರಲ್ಲಿ ಎರಡನೇ ಮದುವೆಯಾಗಿದ್ದ. ಹೀಗಿದ್ದರೂ ಸೊಸೆಯ ಮೇಲೆ ಕಣ್ಣು ಹಾಕಿದ್ದ ಈತ, ಆಕೆಯ ಜೊತೆ ಅನುಚಿತ ವರ್ತನೆ ತೋರಲು ಶುರುಮಾಡಿದ್ದಾನೆ. ಪಕ್ಕದ ಅಪಾರ್ಟ್​​ಮೆಂಟ್​​ನಲ್ಲಿಯೇ ವಾಸವಿದ್ದ ಈತ, ಸಂತ್ರಸ್ತೆ ಮನೆಯಲ್ಲಿ ಒಬ್ಬಳೇ ಇರುವ ಸಮಯ ನೋಡಿಕೊಂಡು ಬಂದು ಆಕೆಗೆ ಲೈಂಗಿಕ ದೌರ್ಜನ್ಯ ನೀಡಲಾರಂಭಿಸಿದ್ದ. ಅಸಭ್ಯ ಪದಗಳನ್ನು ಮಾತನಾಡುವ ಜೊತೆಗೆ ಬಲವಂತಾಗಿ ಬಟ್ಟೆ ಬಿಚ್ಚಲು ಯತ್ನಿಸುತ್ತಿದ್ದ. 2020ರಿಂದಲೇ ಮಾವನ ಈ ರೀತಿಯ ವರ್ತನೆಗಳು ಆರಂಭವಾಗಿತ್ತು. ಆದ್ರೆ ಭಯಭೀತಳಾಗಿದ್ದ ಸಂತ್ರಸ್ತೆ ಎಲ್ಲವೂ ಸರಿಹೋಗಬಹುದೆಂದು ಸುಮ್ಮನಿದ್ದಳು. ಆದರೆ ಆಕೆ ಮತ್ಮತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಹಿಳೆ ಮೇಲೆ ಹಲ್ಲೆಯನ್ನೂ ನಡೆಸಿದ್ದ. ಬಳಿಕ ಅಪಾರ್ಟ್​​ಮೆಂಟ್​​ನ ಲಿಫ್ಟ್​​, ಸ್ಕೂಲ್​​ ಕ್ಯಾಬಿನ್​​ನಲ್ಲಿಯೂ ಸಂತ್ರಸ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ  ಆರೋಪಿಸಲಾಗಿದೆ.

ಇದನ್ನೂ ಓದಿ: ಲವ್ವರ್‌ಗೆ ತಾಯಿ, ದೊಡ್ಡಮ್ಮನ ಖಾಸಗಿ ಫೋಟೋ ರವಾನೆ; ತನಿಖೆ ವೇಳೆ ಸ್ಫೋಟಕ ಅಂಶ ಬಯಲಿಗೆ

ಮಾವನ ಕಾಟಕ್ಕೆ ಬೇಸತ್ತ ಈಕೆ ಅಂತಿಮವಾಗಿ ವಿಷಯವನ್ನು ಪತಿಗೆ ತಿಳಿಸಿದ್ದು, ಯಾಕೆ ಹೀಗೆ ಮಾಡುತ್ತಿದ್ದೀಯಾ ಎಂದು ಅವರೂ ಪ್ರಶ್ನಿಸಿದ್ದರು. ಬಳಿಕ ಹಿರಿಯರಿಂದ ಈ ಬಗ್ಗೆ ಬುದ್ಧಿಯನ್ನೂ ಹೇಳಿಸಲಾಗಿತ್ತು. ಕೆಲ ದಿನ ಸುಮ್ಮನಾಗಿದ್ದ ಆರೋಪಿ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಾನೆ. ಸೊಸೆಯ ಸೌಂದರ್ಯದ ಬಗ್ಗೆ ಪತ್ರ ಬರೆದು ತಂದು ಆಕೆಯ ಮುಂದೆಯೇ ಓದ್ತಿದ್ದ ಈತ, ಲೈಂಗಿಕ ಕಿರುಕುಳ ನೀಡಿ ನಂತರ ಆ ಪತ್ರವನ್ನ ತಾನೇ ಇಟ್ಟುಕೊಳ್ಳುತ್ತಿದ್ದ. ಇತ್ತೀಚೆಗ ಸಂತ್ರಸ್ತೆಯ ಮೈಕೈ ಮುಟ್ಟಿ ಆರೋಪಿ ಕಿರುಕುಳ ನೀಡಿದ್ದು, ಈ ವೇಳೆ ಆಕೆ ವಿರೋಧ ವ್ಯಕ್ತಪಡಿಸಿದ ಕಾರಣ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಮಾವನ ವಿರುದ್ಧ ಕೊನೆಗೂ ಸೊಸೆ ಪೊಲೀಸರಿಗೆ ದೂರು ನೀಡಿದ್ದಾಳೆ.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪಾಕ್ ಬೌಲರ್ ಪರ ಅಶ್ವಿನ್ ಬ್ಯಾಟಿಂಗ್ – Kannada News | R Ashwin Backed Pak’s Usman Tariq Bowling Action

ಪಾಕಿಸ್ತಾನ್ ತಂಡದ ಸ್ಪಿನ್ನರ್ ಉಸ್ಮಾನ್ ತಾರಿಖ್ ಅವರ ಬೌಲಿಂಗ್ ಆ್ಯಕ್ಷನ್ ಬಗೆಗಿನ ಚರ್ಚೆ ಮುಂದುವರೆದಿದೆ. ಲಾಹೋರ್​ನ ಗದ್ದಾಫಿ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಉಸ್ಮಾನ್ ತಾರಿಖ್ ಎಸೆತದಲ್ಲಿ ಆಸ್ಟ್ರೇಲಿಯಾ ದಾಂಡಿಗ ಕ್ಯಾಮರೋನ್ ಗ್ರೀನ್ ಔಟಾಗಿದ್ದರು. ಹೀಗೆ ಔಟಾಗಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದ ಗ್ರೀನ್ ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದರು. ಇದೀಗ ಟಿ20 ವಿಶ್ವಕಪ್​ನಲ್ಲೂ ಉಸ್ಮಾನ್ ತಾರಿಖ್ ತನ್ನ ವಿಳಂಬ ರೀತಿಯ ಬೌಲಿಂಗ್​ಗೆ ಶೈಲಿಯನ್ನು ಮುಂದುವರೆಸಿದ್ದಾರೆ. ಇದನ್ನೇ ಭಾರತೀಯ ಕ್ರಿಕೆಟಿಗ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

“ಫುಟ್​ಬಾಲ್ ಆಟಗಾರರಿಗೆ ಪೆನಾಲ್ಟಿ ರನ್-ಅಪ್ ಸಮಯದಲ್ಲಿ ನಿಲ್ಲಲು ಅವಕಾಶ ನೀಡುವುದಿಲ್ಲ. ಇದು ಹೇಗೆ ಸರಿ? ಆಕ್ಷನ್ – ಎಲ್ಲವೂ ಒಳ್ಳೆಯದು. ಆದರೆ ಈ ವಿರಾಮ? ಅದು ಕೂಡ ಚೆಂಡೆಸೆಯುವ ಮುನ್ನ. ಇದು ಗಂಭೀರ ವಿಷಯ, ಇದನ್ನೆಲ್ಲಾ ಮುಂದುವರೆಸಲು ಅನುಮತಿಸಬಾರದು!” ಎಂಬಾರ್ಥದಲ್ಲಿ ಶ್ರೀವಾಸ್ತವ್ ಗೋಸ್ವಾಮಿ X ನಲ್ಲಿ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ರವಿಚಂದ್ರನ್ ಅಶ್ವಿನ್, “ಫುಟ್​ಬಾಲ್​ನಲ್ಲಿ ಇದನ್ನು ಅನುಮತಿಸುವುದಿಲ್ಲ ಎಂಬುದನ್ನು ಒಪ್ಪಿಕೊತ್ತೇನೆ! ಆದರೆ ಬ್ಯಾಟರ್ ತನ್ನ ಸ್ಟಾನ್ಸ್ ತೆಗೆದುಕೊಂಡ ನಂತರ, ಅಂಪೈರ್ ಅಥವಾ ಬೌಲರ್‌ಗೆ ತಿಳಿಸದೆ ಸ್ವಿಚ್ ಹಿಟ್ ಅಥವಾ ರಿವರ್ಸ್ ಶಾಟ್ ಹೊಡೆಯಲು ಅನುಮತಿಸಲಾಗುತ್ತದೆ.

ಬ್ಯಾಟರ್​ಗೆ ಹೀಗೆ ಅನುಮತಿಸಬಹುದಾದರೆ, ನಿರ್ಬಂಧಗಳು ಬೌಲರ್‌ಗೆ ಮಾತ್ರ ಏಕೆ ಸೀಮಿತವಾಗಿವೆ?. ವಾಸ್ತವವಾಗಿ ಬೌಲರ್ ಅಂಪೈರ್‌ಗೆ ತಿಳಿಸದೆ ತಾನು ಬೌಲ್ ಮಾಡುವ ತೋಳನ್ನು ಬದಲಾಯಿಸಲು ಅನುಮತಿಸಲಾಗುವುದಿಲ್ಲ!  ಮೊದಲು ಆ ನಿಯಮವನ್ನು ಬದಲಾಯಿಸಬೇಕು” ಎಂದು ಅಶ್ವಿನ್ ಟ್ವೀಟ್ ಮಾಡಿದ್ದಾರೆ.

ಈ ಮೂಲಕ ಪಾಕಿಸ್ತಾನ್ ಸ್ಪಿನ್ನರ್​ನ ಲೇಟ್ ಎಸೆತಗಳನ್ನು ರವಿಚಂದ್ರನ್ ಅಶ್ವಿನ್ ಪರೋಕ್ಷವಾಗಿ ಬೆಂಬಲಿಸಿದ್ದಾರೆ. ಅಂದರೆ ಇಲ್ಲಿ ಬ್ಯಾಟರ್​ಗಳು ಚೆಂಡೆಸೆದ ಬಳಿಕ ಯಾವುದೇ ರೀತಿಯಲ್ಲೂ ಬೇಕಿದ್ದರೂ ಬ್ಯಾಟ್ ಬೀಸಬಹುದು. ಉದಾಹರಣೆಗೆ ರೈಟ್ ಹ್ಯಾಂಡ್ ಬ್ಯಾಟರ್, ಚೆಂಡು ಬರುವಾಗ ಲೆಫ್ಟ್ ಹ್ಯಾಂಡ್ ಆಗಿ ಬ್ಯಾಟ್ ಬೀಸಲು ಅವಕಾಶವಿದೆ.

ಆದರೆ ಬೌಲರ್​ಗಳಿಗೆ ಇಂತಹ ಯಾವುದೇ ಆಯ್ಕೆ ಇಲ್ಲ. ಒಂದು ವೇಳೆ ಬೌಲರ್ ಬಲಗೈ ಬದಲು ಎಡಗೈನಲ್ಲಿ ಚೆಂಡೆಸೆಯಲು ಮುಂದಾದರೆ ಅಂಪೈರ್​ಗೆ ತಿಳಿಸಬೇಕು. ಅದೇ ಬ್ಯಾಟರ್​ ಸ್ವಿಚ್ ಹಿಟ್ ಅಥವಾ ರಿವರ್ಸ್ ಸ್ವೀಪ್ ಮಾಡುತ್ತೇನೆ ಎಂಬುದನ್ನು ಅಂಪೈರ್​ಗೆ ತಿಳಿಸುವ ಅವಶ್ಯಕತೆಯಿಲ್ಲ. ಅಂದರೆ ಇಲ್ಲಿ ಬ್ಯಾಟರ್ ಕೂಡ ತನ್ನ ಬ್ಯಾಟಿಂಗ್ ಶೈಲಿಯನ್ನು ಬದಲಿಸುವುದಲ್ಲವೇ? ಇದಾಗ್ಯೂ ಎಲ್ಲಾ ನಿಯಮಗಳು ಬೌಲರ್​ಗಳಿಗೆ ಮಾತ್ರ ಸೀಮಿತವಾಗಿದೆ ಎಂದು ಅಶ್ವಿನ್ ಪ್ರಶ್ನಿಸಿದ್ದಾರೆ.

ಇತ್ತ ವಿಭಿನ್ನ ಶೈಲಿಯ ಬೌಲಿಂಗ್ ಮೂಲಕ ಉಸ್ಮಾನ್ ತಾರಿಖ್ ಈಗಾಗಲೇ ಸಂಚಲನ ಸೃಷ್ಟಿಸಿದ್ದಾರೆ. ಅದರಲ್ಲೂ ಲೇಟ್ ಎಸೆತಗಳ ಮೂಲಕ ಬ್ಯಾಟರ್​​ನ ಮೂವ್​ಮೆಂಟ್​ ಗ್ರಹಿಸುತ್ತಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಇದನ್ನೆ ಶ್ರೀವಾಸ್ತವ್ ಗೋಸ್ವಾಮಿ ಪ್ರಶ್ನಿಸಿದ್ದಾರೆ.

ಆದರೆ ಉಸ್ಮಾನ್ ತಾರಿಖ್​ಗೂ ಮುನ್ನವೇ ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಅಂಗಳದಲ್ಲಿ ಇಂತಹ ಲೇಟ್ ಎಸೆತಗಳನ್ನು ಎಸೆದಿದ್ದರು ಎಂಬುದೇ ಸತ್ಯ. 2013 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಕೊನೆಯ ಎಸೆತದಲ್ಲಿ ಇಂಗ್ಲೆಂಡ್ ತಂಡಕ್ಕೆ 6 ರನ್ ಬೇಕಿದ್ದಾಗ ಅಶ್ವಿನ್ ಲೇಟ್ ಎಸೆತದ ಮೂಲಕ ಭಾರತ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.

ಇದೀಗ ಉಸ್ಮಾನ್ ತಾರಿಖ್​ಗೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೇ ಅಶ್ವಿನ್ ಅವರ ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Source link

Video: ಟ್ರಕ್ ಚಾಲಕ ಬ್ರೇಕ್ ಹಾಕದೇ ಇದ್ದಿದ್ರೆ ಥಾರ್ ಮೇಲೆ ಕುಳಿತು ಪುಂಡಾಟ ಮಾಡುತ್ತಿದ್ದವರ ಪ್ರಾಣವೇ ಹೋಗ್ತಿತ್ತು – Kannada News | Truck Driver’s Timely Brake Saves Youths Riding Atop Moving SUV in Haryana

ಹರಿಯಾಣ, ಫೆಬ್ರವರಿ 11: ಎದುರಿದ್ದ ಟ್ರಕ್ ಬ್ರೇಕ್ ಹಾಕಿಲ್ಲವೆಂದಾದರೆ ಮೂವರ ಪ್ರಾಣವೂ ಹೋಗಿರೋದು. ಒಂದಷ್ಟು ಯುವಕರು ಮಹಿಂದ್ರಾ ಥಾರ್ ಒಳಗೆ ಉಳಿದ ಮೂವರು ಥಾರ್ ಮೇಲೆ ಕುಳಿತಿದ್ದರು.  ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕ ಎದುರು ಬರುತ್ತಿದ್ದ ಟ್ರಕ್​ ನೋಡಿ ಎಡಕ್ಕೆ ಗಾಡಿ ತಿರುಗಿಸಿದ್ದಾನೆ. ಕೂಡಲೇ ಥಾರ್ ಮೇಲಿದ್ದ ಮೂವರು ಯುವಕರು ನೆಲಕ್ಕೆ ಬಿದ್ದಿದ್ದಾರೆ. ಆ ಸಮಯಕ್ಕೆ ಸರಿಯಾಗಿ ಟ್ರಕ್ ಚಾಲಕ ಕೂಡ ಬ್ರೇಕ್ ಹಾಕಿದ ಪರಿಣಾಮ ಮೂವರ ಜೀವ ಉಳಿದಿದೆ. ಇಲ್ಲವಾದಲ್ಲಿ ಎಲ್ಲಾ ಮೂವರ ತಲೆ ಮೇಲೆ ಟ್ರಕ್​ ಚಕ್ರ ಹತ್ತುವುದಂತೂ ಪಕ್ಕಾ ಆಗಿತ್ತು. ಅಪಘಾತದ ವಿಡಿಯೋ ಇಲ್ಲಿದೆ ನೊಡಿ. ಹರಿಯಾಣ ನೋಂದಣಿಯ ವಾಹನ ಅದಾಗಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

2 ಕಂತು ಇಎಂಐ ಕಟ್ಟಿಲ್ಲವೆಂದು ಜೆಸಿಬಿಯನ್ನೇ ಹರಾಜು ಹಾಕಿದ ಬ್ಯಾಂಕ್: 10 ದಿನಗಳಿಂದ ಧರಣಿ ನಡೆಸುತ್ತಿರುವ ತಾಯಿ-ಮಗ – Kannada News | Mother and Son Protest Outside HDFC Bank in Chikkamagaluru After JCB Seized and Auctioned Over EMI Default

ಬ್ಯಾಂಕ್ ಎದುರು ಧರಣಿ ನಡೆಸುತ್ತಿರುವ ತಾಯಿ-ಮಗImage Credit source: tv9

ಚಿಕ್ಕಮಗಳೂರು, ಫೆಬ್ರವರಿ 11: ಕೇವಲ ಎರಡು ಕಂತು ಇಎಂಐ (EMI) ತಡವಾದ ಕಾರಣ ಜೆಸಿಬಿ ವಾಹನವನ್ನು ಸೀಜ್ ಮಾಡಿ ಹರಾಜು ಮಾಡಲಾಗಿದೆ ಎಂದು ಆರೋಪಿಸಿ ತಾಯಿ ಮತ್ತು ಮಗ ಚಿಕ್ಕಮಗಳೂರು ನಗರದ ಎಂಜಿ ರಸ್ತೆಯಲ್ಲಿರುವ ಹೆಚ್​ಡಿಎಫ್​ಸಿ (HDFC) ಬ್ಯಾಂಕ್ ಮುಂದೆ ಹತ್ತಿ ದಿನಗಳಿಂದ ನಿರಂತರ ಧರಣಿ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (Chikkamagaluru) ತಾಲೂಕಿನ ಗೌಡನಹಳ್ಳಿ ಗ್ರಾಮದ ಮಂಜುನಾಥ್ ಅವರು ಜೆಸಿಬಿ ಖರೀದಿಸಲು ಐದು ವರ್ಷಗಳ ಅವಧಿಗೆ HDFC ಬ್ಯಾಂಕ್‌ನಿಂದ ಸುಮಾರು 29 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ವೇಳೆ 7 ಲಕ್ಷ ರೂಪಾಯಿ ಮುಂಗಡವಾಗಿ ಪಾವತಿಸಿ, ಉಳಿದ ಹಣವನ್ನು ತಿಂಗಳ EMI ರೂಪದಲ್ಲಿ ಕಟ್ಟುತ್ತಿದ್ದರು. ಸುಮಾರು ಒಂದು ವರ್ಷ ಆರು ತಿಂಗಳು ನಿಯಮಿತವಾಗಿ ಕಂತು ಕಟ್ಟಿದ ಬಳಿಕ, ಎರಡು ತಿಂಗಳು ಕಂತು ತಡವಾದ ಹಿನ್ನೆಲೆ ಮೂರನೇ ತಿಂಗಳಲ್ಲಿ ಬ್ಯಾಂಕ್ ಜೆಸಿಬಿಯನ್ನು ಸೀಜ್ ಮಾಡಿದೆ ಎಂದು ಆರೋಪಿಸಲಾಗಿದೆ.

ಸಾಲದ ಅವಧಿ ಬಾಕಿ ಇರುವಾಗಲೇ ಬ್ಯಾಂಕ್ ಜೆಸಿಬಿಯನ್ನು ಹರಾಜು ಮೂಲಕ ಮಾರಾಟ ಮಾಡಿರುವುದಾಗಿ ಮಂಜುನಾಥ್ ಆರೋಪಿಸಿದ್ದಾರೆ. ಸಂಪೂರ್ಣ ಬಾಕಿ ಇರುವ 22.5 ಲಕ್ಷ ರೂಪಾಯಿ ಪಾವತಿಸಿ ವಾಹನವನ್ನು ಪಡೆದುಕೊಳ್ಳಬಹುದು ಎಂದು ಬ್ಯಾಂಕ್ ಹೇಳಿದ್ದರೂ, ಹಣ ತೆಗೆದುಕೊಂಡು ಹೋದಾಗಲೇ ಜೆಸಿಬಿ ಮಾರಾಟವಾಗಿದೆ ಎಂದು ಆರೋಪಿಸಲಾಗಿದೆ.

ಜೆಸಿಬಿ ಮಾರಾಟವಾದ ಬಳಿಕವೂ ಬ್ಯಾಂಕ್‌ಗೆ ಇನ್ನೂ 1.75 ಲಕ್ಷ ರೂಪಾಯಿ ಬಾಕಿ ಇದ್ದು ಅದನ್ನು ಪಾವತಿಸುವಂತೆ ಸಿಬ್ಬಂದಿ ತಿಳಿಸಿದ್ದಾರೆ ಎಂದು ಮಂಜುನಾಥ್ ಕುಟುಂಬ ಆರೋಪಿಸಿದೆ. ಸಂಪೂರ್ಣ ಹಣ ಪಾವತಿಸಲು 15 ದಿನಗಳ ಅವಧಿ ನೀಡಿದರೂ, ಆ ಅವಧಿ ಪೂರ್ಣಗೊಳ್ಳುವ ಮುನ್ನವೇ ಜೆಸಿಬಿಯನ್ನು ಮಾರಾಟ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಸಿಬಿಯೇ ತಮ್ಮ ಜೀವನಕ್ಕೆ ಆಧಾರವಾಗಿದ್ದು, ಅದನ್ನು ವಾಪಸ್ ನೀಡುವಂತೆ ಒತ್ತಾಯಿಸಿ ಮಂಜುನಾಥ್ ಹಾಗೂ ಅವರ ತಾಯಿ ಕಳೆದ 10 ದಿನಗಳಿಂದ ಬ್ಯಾಂಕ್ ಮುಂದೆ 24 ಗಂಟೆಗಳೂ ಧರಣಿ ನಡೆಸುತ್ತಿದ್ದಾರೆ. ರಾತ್ರಿ ವೇಳೆ ಸಹ ಬ್ಯಾಂಕ್ ಮುಂದೆ ಮಲಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಮದುವೆ ನೆಪದಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’, ನಕಲಿ ಮಾವ ಪೊಲೀಸ್ ಬಲೆಗೆ

ಜೆಸಿಬಿಯ ಮೌಲ್ಯಕ್ಕಿಂತ ಕಡಿಮೆ ದರಕ್ಕೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಿರುವ ಕುಟುಂಬ, ತಮ್ಮ ಜೆಸಿಬಿಯನ್ನು ವಾಪಸ್ ನೀಡಿ ಬಾಕಿ ಹಣವನ್ನು ಕಟ್ಟಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ HDFC ಬ್ಯಾಂಕ್ ವಿರುದ್ಧ ಸ್ಥಳೀಯರಲ್ಲೂ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣ ಸದ್ಯ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕ ವಿರುದ್ಧ ಸ್ಪಿನ್ನಾಸ್ತ್ರ ಬಳಸಿದ ಪಾಕಿಸ್ತಾನ್ – Kannada News | T20 World Cup 2026: Pakistan Beat USA First Time

ಟಿ20 ವಿಶ್ವಕಪ್​ನ 12ನೇ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಜಯ ಸಾಧಿಸಿದೆ. ಕೊಲಂಬೊದ ಎಸ್​ಎಸ್​ಸಿ ಕ್ರಿಕೆಟ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್​ಎ ತಂಡದ ನಾಯಕ ಮೊನಾಂಕ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಪಾಕ್ ಪರ ಸಾಹಿಬ್​ಝಾದ ಫರ್ಹಾನ್ 41 ಎಸೆತಗಳಲ್ಲಿ 5 ಸಿಕ್ಸ್ ಹಾಗೂ 6 ಫೋರ್​ ಒಳಗೊಂಡಂತೆ ಒಟ್ಟು 73 ರನ್ ಚಚ್ಚಿದ್ದರು. ಈ ಅರ್ಧಶತಕದ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 190 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಯುಎಸ್​ಎ ತಂಡವನ್ನು ಕಟ್ಟಿ ಹಾಕಲು ಪಾಕಿಸ್ತಾನ್ ಸ್ಪಿನ್ನಾಸ್ತ್ರ ಬಳಸಿದ್ದು ವಿಶೇಷ. ಅಂದರೆ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ 20 ಓವರ್​ಗಳಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ಗಳಿಂದಲೇ ಹಾಕಿಸಿದ್ದರು. ಈ ಮೂಲಕ ಯುಎಸ್​ಎ ತಂಡವನ್ನು 20 ಓವರ್​ಗಳಲ್ಲಿ 158 ರನ್​ಗಳಿಗೆ ನಿಯಂತ್ರಿಸುವಲ್ಲಿ ಪಾಕಿಸ್ತಾನ್ ಯಶಸ್ವಿಯಾಗಿದ್ದಾರೆ.

ವಿಶೇಷ ಎಂದರೆ ಪಾಕಿಸ್ತಾನ್ ತಂಡವು ಟಿ20 ಪಂದ್ಯದಲ್ಲಿ 16 ಓವರ್​ಗಳನ್ನು ಸ್ಪಿನ್ನರ್​ನಿಂದ ಹಾಕಿಸುತ್ತಿರುವುದು ಇದು 2ನೇ ಬಾರಿ. ಇದಕ್ಕೂ ಮುನ್ನ 2012 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಸ್ಪಿನ್ನರ್​ಗಳಿಂದ 18 ಓವರ್​ಗಳನ್ನು ಮಾಡಿಸಲಾಗಿತ್ತು. ಇದೀಗ 14 ವರ್ಷಗಳ ಬಳಿಕ ಮತ್ತೊಮ್ಮೆ ಪಾಕ್ ತಂಡವು ಸ್ಪಿನ್ನಾಸ್ತ್ರ ಪ್ರಯೋಗಿಸಿದ್ದಾರೆ. ಈ ಸ್ಪಿನ್ನಾಸ್ತ್ರದ ಮೂಲಕ ಯುಎಸ್​ಎ ವಿರುದ್ಧ 32 ರನ್​ಗಳ ಜಯ ಸಾಧಿಸಿದೆ.

 

Source link