Category Archives: Blog

Your blog category

ಪದೇ ಪದೇ ಅದ್ನೇ ಕೇಳ್ಬೇಡಿ, ನಾನು-ಡಿಕೆ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು: ಸಿದ್ದರಾಮಯ್ಯ ಫುಲ್ ಗರಂ – Kannada News | Don’t Ask the Same Question Repeatedly: Siddaramaiah Reacts Sharply, Says He and DK Will Follow High Command

ಬೆಂಗಳೂರು, ಫೆಬ್ರವರಿ 11: ನಾಯಕತ್ವ ಗೊಂದಲದ ಕುರಿತು ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಸಿಎಂ ಸಿಟ್ಟಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆಯಿತು. ಕಳೆದ ಮೂರು ತಿಂಗಳಿಂದಲೂ ಇದೇ ವಿಷಯವನ್ನು ಪದೇ ಪದೇ ಕೇಳಲಾಗುತ್ತಿದೆ. ದಯವಿಟ್ಟು ಇದನ್ನು ಪುನರಾವೃತ್ತಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಗರಂ ಆಗಿಯೇ ಹೇಳಿದರು.

ಶಾಸಕರ ವಿದೇಶ ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ, ತಮ್ಮ ಗಮನಕ್ಕೆ ಬಂದಿಲ್ಲ, ಅದು ವೈಯಕ್ತಿಕ ಖರ್ಚಿನಲ್ಲಿದ್ದರೆ ವಿವಾದ ಏಕೆ ಎಂದು ಪ್ರಶ್ನಿಸಿದರು. ಆದರೆ, ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಯಿಂದ ಅವರು ಸಿಡಿಮಿಡಿಗೊಂಡರು.

‘ನಾನು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ, ಅದನ್ನು ನಾವು ತಪ್ಪದೆ ಪಾಲಿಸುತ್ತೇವೆ. ಇದು ಸಂಪೂರ್ಣವಾಗಿ ಹೈಕಮಾಂಡ್​ಗೆ ಬಿಟ್ಟ ವಿಚಾರ’ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

Source link

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಬಾಲಿವುಡ್​ನ (Bollywoo) ಖ್ಯಾತ ಹಾಸ್ಯನಟ ರಾಜ್​​ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯೆಂದು ಆದೇಶಿಸಲಾಗಿದೆ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್​​ಪಾಲ್ ಯಾದವ್ ಅವರಿಗೆ ಸೋಲಾಗಿದ್ದು ಇತ್ತೀಚೆಗಷ್ಟೆ ಅವರು ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳು ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಿದೆ. ಆದರೆ ಇದೀಗ ರಾಜ್​ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ.

ರಾಜ್​​ಪಾಲ್ ಯಾದವ್ ಬಾಲಿವುಡ್​ನಲ್ಲಿ 27 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ ಹಾಸ್ಯನಟರಲ್ಲಿ ರಾಜ್​ಪಾಲ್ ಯಾದವ್ ಸಹ ಒಬ್ಬರು. ಇದೇ ಕಾರಣಕ್ಕೆ ಚಿತ್ರರಂಗದ ಕೆಲವರು ಇದೀಗ ರಾಜ್​ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿದ್ದ ನಟ ಸೋನು ಸೂದ್, ‘ಚಿತ್ರರಂಗದವರು ರಾಜ್​ಪಾಲ್ ಯಾದವ್ ನೆರವಿಗೆ ಬರಬೇಕು, ಅವರೊಟ್ಟಿಗೆ ಸಿನಿಮಾ ಸಹಿ ಮಾಡಿಸಿಕೊಂಡಾದರೂ ಅವರಿಗೆ ಅಡ್ವಾನ್ಸ್ ರೂಪದಲ್ಲಿ ಹಣ ನೀಡಬೇಕು, ನಾನೂ ಸಹ ಹಾಗೆಯೇ ಮಾಡುತ್ತಿದ್ದೇನೆ. ಇದರಿಂದ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದಿದ್ದರು.

ಇದೀಗ ಖ್ಯಾತ ಸಂಗೀತ ನಿರ್ದೇಶಕ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್​ಪಾಲ್ ಯಾದವ್ ಸಹಾಯಕ್ಕೆ ಬಂದಿದ್ದು, ರಾಜ್​ಪಾಲ್ ಯಾದವ್ ಅವರಿಗೆ 1.11 ಕೋಟಿ ರೂಪಾಯಿಗಳ ನೆರವು ನೀಡಿದ್ದಾರೆ. ‘ಭೂಲ್ ಭುಲಯ್ಯ’, ‘ಹಂಗಾಮ’, ‘ವೆಲ್​​ಕಮ್’ ಇನ್ನೂ ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್​​ಪಾಲ್ ಯಾದವ್ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

ಈ ಬಗ್ಗೆ ಮಾತನಾಡಿರುವ ಇಂದೆರ್ಜೀತ್ ಸಿಂಗ್, ‘ರಾಜ್​​ಪಾಲ್ ಯಾದವ್ ಅವರು ಭಾರತೀಯರನ್ನು ದಶಕಗಳಿಂದಲೂ ರಂಜಿಸುತ್ತಾ ಬಂದಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಹಲವು ನೆನಪುಳಿವ, ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಸಹ ಆಗಿದ್ದಾರೆ. ಇದು ಕೇವಲ ಹಣದ ಸಹಾಯ ಮಾತ್ರ ಅಲ್ಲ. ಇದು ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ, ಅದರಲ್ಲೂ ಒಬ್ಬ ಚಿತ್ರಕರ್ಮಿ ಕಷ್ಟದಲ್ಲಿದ್ದಾಗ ಜೊತೆಗೆ ನಿಲ್ಲಬೇಕಾದುದು ಕರ್ತವ್ಯ ಎಂಬ ಕಾರಣಕ್ಕೆ ಮಾಡಿದ ಸಹಾಯ’ ಎಂದಿದ್ದಾರೆ.

ರಾಜ್​​ಪಾಲ್ ಯಾದವ್ ಅವರಿಗೆ 10 ಲಕ್ಷ ರೂಪಾಯಿ ಹಣ ಸಹಾಯ ಮಾಡುವುದಾಗಿ ವಿವಾದಾತ್ಮಕ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಸಹ ಹೇಳಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಚಿತ್ರರಂಗದ ಕೆಲವು ದಿಗ್ಗಜರು ತೆರೆ ಮರೆಯಲ್ಲಿ ರಾಜ್​ಪಾಲ್ ಯಾದವ್ ಅವರಿಗೆ ಹಣ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ರಾಜ್​​ಪಾಲ್ ಯಾದವ್ ಅವರು 9 ಕೋಟಿ ರೂಪಾಯಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಒಂದೊಮ್ಮೆ ಅವರು 9 ಕೋಟಿ ರೂಪಾಯಿ ಹಣವನ್ನು ಕಟ್ಟಿದ್ದೇ ಆದಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಕ್ಲು ಶಿವ ಕೊಲೆ ಕೇಸ್​: ಭೈರತಿ ಬಸವರಾಜ್ ವಿರುದ್ಧ ಲುಕ್ ಔಟ್ ನೋಟಿಸ್ – Kannada News | Biklu Shiva Murder Case: Lookout Notice Issued for Byrathi Basavaraj After Bail Cancellation

ಬೆಂಗಳೂರು, ಫೆಬ್ರವರಿ 11: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೇಲ್ ಅರ್ಜಿ ಎರಡು ಬಾರಿ ರದ್ದಾದ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಟಿವಿ9ಗೆ ಸಿಐಡಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಭೈರತಿ ಬಸವರಾಜ್ ಸ್ವತಃ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಕೊಡಿ: ಹೂವು ಮಾರುವಾಕೆಯ ಮುಗ್ಧತೆಗೆ ಮನಸೋತ ಮಹಿಳೆ – Kannada News | Heartwarming Viral Video: Flower Seller’s Respect and Joy Inspires

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಹೂವು ಮಾರುವ ಮಹಿಳೆಯ ಮುಗ್ಧತೆ ಮತ್ತು ಆಕೆಯ ಮುಖದಲ್ಲಿರುವ ಸುಂದರವಾದ ನಗು ಎಲ್ಲರ ಗಮನ ಸೆಳೆಯುತ್ತದೆ. ಆಕೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಗೌರವಕ್ಕೆ ಬೆಲೆ ನೀಡುತ್ತಾಳೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ವಿಡಿಯೋ ಇಷ್ಟೊಂದು ಜನರಿಗೆ ತಲುಪಲು ಮುಖ್ಯ ಕಾರಣ ಆ ಹೂವು ಮಾರುವ ಮಹಿಳೆಯ ಆತ್ಮವಿಶ್ವಾಸ ಮತ್ತು ಮುಗ್ಧತೆ ಕಾರಣ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಗ್ರಾಹಕರೊಂದಿಗೆ ಚೌಕಾಶಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಈಕೆ, ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟೇ ಕೊಡಿ. ಎಂದು ಹೇಳುವ ಮೂಲಕ ಹಣಕ್ಕಿಂತ ಗೌರವ ಮತ್ತು ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ನಡೆದ ಸಂಭಾಷಣೆ ಏನು? ಎಂಬುದು ಇಲ್ಲಿದೆ. ಹೂವು ಮಾರುವಾಕೆ ಅರೇ… ಇಲ್ಲ ಇಲ್ಲ ಇಲ್ಲ. ಇದು ನಿಮಗಾಗಿ, ಇದಕ್ಕೆ ಕಾರಿನಲ್ಲಿದ್ದವರು ಎಷ್ಟು ಇದರ ಬೆಲೆ? ಹೇಳಿ ಎಂದು ಕೇಳುತ್ತಾರೆ. ಇಟ್ಟುಕೊಳ್ಳಿ ದೀದಿ. ಪರವಾಗಿಲ್ಲ ಎಂದು ಹೂವು ಮಾರುವಾಕೆ ಹೇಳುತ್ತಾಳೆ. ಫ್ರೀ ಆದ್ರೆ ಬೇಡ, ನನಗೆ ಬೇಡ ಎಂದು ಕಾರಿನಲ್ಲಿದ್ದವರು ಹೇಳುತ್ತಾರೆ. ಮತ್ತೆ ಹೂವು ಮಾರುವ ಮಹಿಳೆ, ಇಲ್ಲ, ಇದು ನಿಮಗಾಗಿ ಎಂದು ಹೇಳುತ್ತಾಳೆ. ಇದರ ಬೆಲೆ ಎಷ್ಟು? ಬೇಗ ಹೇಳಿ ಎಂದು ಕಾರಿನಲ್ಲಿದ್ದವರು ಕೇಳುತ್ತಾರೆ. ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟು ಕೊಡಿ ಎಂದು ಈ ಮಹಿಳೆ ಹೇಳುತ್ತಾಳೆ. ಥ್ಯಾಂಕ್ ಯು ಸರ್… ಬಾಯ್! ಎಂದು ಹೇಳುತ್ತಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹೊಸ ಐಟಿ ರೂಲ್ಸ್; ಎಐ ಸೃಷ್ಟಿದ ಕಂಟೆಂಟ್​ಗೆ ಲೇಬಲಿಂಗ್ ಕಡ್ಡಾಯ; ಫೇಸ್​ಬುಕ್, ಇನ್ಸ್​ಟಾಗಳಿಗೆ ಕಠಿಣ ನಿಯಮ – Kannada News | New IT rules from 2026 Feb 20th, mandatory AI content labelling and other things to know

ಡೀಪ್ ಫೇಕ್ ಕಂಟೆಂಟ್​ನ ಸಾಂದರ್ಭಿಕ ಚಿತ್ರ

ನವದೆಹಲಿ, ಫೆಬ್ರುವರಿ 11: ಎಐ ಸೃಷ್ಟಿದ ಫೋಟೋ, ವಿಡಿಯೋಗಳು (AI generated content) ಥೇಟ್ ನೈಜ ವ್ಯಕ್ತಿ ಮತ್ತು ಸ್ಥಳದ್ದೇ ಎನಿಸುವಂತಿರುತ್ತವೆ. ಯಾವುದು ಅಸಲಿ, ಯಾವುದು ಕೃತಕ ಎಂದು ಮೇಲ್ನೋಟಕ್ಕೆ ಕಂಡು ಹಿಡಿಯುವುದು ಕಷ್ಟ. ದುರುಳರು ಈ ಎಐ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರೂಪಿಸಿದೆ. ಡೀಪ್​ಫೇಕ್ ವಿಡಿಯೋ, ಸಿಂಥೆಟಿಕ್ ಆಡಿಯೋ, ತಿರುಚಿದ ದೃಶ್ಯಗಳು ಇತ್ಯಾದಿ ಎಐ ಸೃಷ್ಟಿದ ಕಂಟೆಂಟ್ ಅನ್ನು ಐಟಿ ನಿಯಮಗಳಡಿ ತರಲಾಗಿದೆ. ಫೆಬ್ರುವರಿ 20ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತವೆ.

ಎಐ ಕಂಟೆಂಟ್ ಎಂದು ನೋಡಿದ ಕೂಡಲೇ ಗೊತ್ತಾಗಬೇಕು…

ಫೇಸ್​ಬುಕ್ ಇತ್ಯಾದಿ ಪ್ಲಾಟ್​ಫಾರ್ಮ್​ಗಳು ತಮ್ಮಲ್ಲಿ ಅಪ್​ಲೋಡ್ ಆಗುವ ಕಂಟೆಂಟ್​ಗಳು ಸಿಂಥೆಟಿಕ್ ಆಗಿದ್ದರೆ ಅದು ಗೊತ್ತಾಗುವ ರೀತಿಯಲ್ಲಿ ಲೇಬಲ್ ಆಗಿರಬೇಕು. ಮೆಟಾಡಾಟಾ ಮತ್ತು ಯೂನಿಕ್ ಐಡೆಂಟಿಫೈರ್​ಗಳನ್ನು ಎಂಬೆಡ್ ಮಾಡಬೇಕು. ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾ ಮತ್ತು ವೆಬ್​ಸೈಟ್​ಗಳಲ್ಲಿ ಸಿಂಥೆಟಿಕ್ ಕಂಟೆಂಟ್ ಅಪ್​ಲೋಡ್ ಆಗಿದ್ದರೆ, ಅದು ನೋಡುಗರಿಗೆ ಸ್ಪಷ್​ಟವಾಗಿ ಗೊತ್ತಾಗುವಂತಿರಬೇಕು ಎಂಬುದು ಆಶಯ.

ಸಿಂಥೆಟಿಕ್ ಅಥವಾ ಎಐ ಜನರೇಟೆಡ್ ಕಂಟೆಂಟ್ ಯಾವುವು?

ನೈಜವೆನಿಸುವ ರೀತಿಯಲ್ಲಿ ಕಂಪ್ಯೂಟರ್ ಬಳಸಿ ಯಾವುದೇ ಧ್ವನಿ ಅಥವಾ ದೃಶ್ಯವನ್ನು ಸೃಷ್ಟಿಸಿದ್ದರೆ ಅಥವಾ ಬದಲಾಯಿಸಿದ್ದರೆ ಅಂಥದ್ದನ್ನು ಸಿಂಥೆಟಿಕ್ ಆಗಿ ಸೃಷ್ಟಿಸಿದ ಮಾಹಿತಿ ಎಂದು ವ್ಯಾಖ್ಯಾನಿಸಲಾಗಿದೆ.

ಇದನ್ನೂ ಓದಿ: ಟ್ರೇಡ್ ಡೀಲ್; ಫ್ಯಾಕ್ಟ್ ಶೀಟ್​ನಲ್ಲಿ ಬದಲಾವಣೆ; ಭಾರತದ ಒತ್ತಡಕ್ಕೆ ಬಗ್ಗಿತಾ ಅಮೆರಿಕ?

ಗಮನಿಸಬೇಕಾದ ಸಂಗತಿ ಎಂದರೆ, ಫೋಟೋ ಅಥವಾ ವಿಡಿಯೋದಲ್ಲಿ ಮಾಡಲಾಗುವ ಎಲ್ಲಾ ಬದಲಾವಣೆಗಳೂ ಇದಕ್ಕೆ ಒಳಪಡುವುದಿಲ್ಲ. ಉದಾಹರಣೆಗೆ, ಫೋಟೋ ಅಥವಾ ವಿಡಿಯೋದಲ್ಲಿ ಕಲರ್ ಕರೆಕ್ಷನ್, ಬ್ರೈಟ್ನೆಸ್ ಹೊಂದಾಣಿಕೆ, ನಾಯ್ಸ್ ಕರೆಕ್ಷನ್ ಇತ್ಯಾದಿ ಮಾಡಿದರೆ ಸಮಸ್ಯೆ ಇರುವುದಿಲ್ಲ.

ಬಳಕೆದಾರರಿಗೆ ಜವಾಬ್ದಾರಿ…

ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್​ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ನಮೂದಿಸಬೇಕು. ಇವರು ಕಂಟೆಂಟ್ ಅನ್ನು ಅಪ್​ಲೋಡ್ ಮಾಡುವ ಮುನ್ನ ಅದು ಎಐ ಜನರೇಟೆಡ್ ಹೌದಾ ಅಲ್ಲವಾ ಎಂಬುದನ್ನು ಪ್ಲಾಟ್​ಫಾರ್ಮ್​ಗಳು ಕೇಳಬೇಕು. ಫೇಸ್ಬುಕ್​ನಲ್ಲಿ ಯಾರಾದರೂ ಫೋಟೋ ಅಪ್ಲೋಡ್ ಮಾಡುವಾಗ ಇದನ್ನು ಘೋಷಿಸಬೇಕು.

ಇಷ್ಟು ಮಾತ್ರವಲ್ಲ, ಯಾರಾದರೂ ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಎಐ ಸೃಷ್ಟಿತ ಕಂಟೆಂಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ಹಾಕುವ ಸಾಧ್ಯತೆ ಇರುವುದರಿಂದ, ಆಟೊಮೇಟ್ ಟೂಲ್​ಗಳ ಮೂಲಕ ಅವುಗಳ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎನ್ನುತ್ತದೆ ನಿಯಮ.

ಪ್ಲಾಟ್​ಫಾರ್ಮ್​ಗಳಿಗೆ ಕಡಿಮೆ ಸಮಯಾವಕಾಶ…

ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನಿನ ಆದೇಶ ಬಂದರೆ ಅದನ್ನು ಪಾಲಿಸಲು 36 ಗಂಟೆ ಇದ್ದ ಕಾಲಾವಕಾಶದ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. 15 ದಿನಗಳಿದ್ದ ಕಾಲಾವಕಾಶವನ್ನು ಏಳು ದಿನಕ್ಕೆ ಇಳಿಸಲಾಗಿದೆ. 24 ಗಂಟೆ ಇದ್ದ ಡೆಡ್​ಲೈನ್ ಅನ್ನು 12 ಗಂಟೆಗೆ ಇಳಿಸಲಾಗಿದೆ.

ಇದನ್ನೂ ಓದಿ: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಬಾಂಗ್ಲಾದೇಶ; ಟ್ಯಾರಿಫ್ ಶೇ. 19ಕ್ಕೆ ಇಳಿಕೆ

ಇವು ಕೂಡ ಕ್ರಿಮಿನಲ್ ಅಪರಾಧಗಳೇ…

ಮಕ್ಕಳ ಲೈಂಗಿಕ ದುರ್ಬಳಕೆಯ ಸರಕುಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ರೆಕಾರ್ಡ್​ಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್​ಫೇಕ್​ಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧವಾಗುತ್ತದೆ ಎಂದು ಹೊಸ ಐಟಿ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆಯಾಗಿ ಮಕ್ಕಳಿರುವ ವಿಷಯ ಮುಚ್ಚಿಟ್ಟು ಮತ್ತೊಂದು ವಿವಾಹ: ಮಹಿಳೆಯ ಸ್ಫೋಟಕ ಹೇಳಿಕೆ – Kannada News | Haveri Marriage Scam: Woman Accused of Fraud Denies Receiving Money, Claims to Have Informed Broker of Previous Marriage

ಹಾವೇರಿ, ಫೆಬ್ರವರಿ 11: ರಾಣೆಬೆನ್ನೂರಿನಲ್ಲಿ ಮದುವೆ ವಂಚನೆಯ ಪ್ರಕರಣವೊಂದು ವರದಿಯಾಗಿದೆ. ತುಮ್ಕಿನಕಟ್ಟಿ ಗ್ರಾಮದ ರವಿಚಂದ್ರ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರೇಖಾ ಎಂಬ ಮಹಿಳೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೇಖಾ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ರವಿಚಂದ್ರ ಅವರನ್ನು ಮದುವೆಯಾಗಿ 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾ ಅವರ ಮಕ್ಕಳು ಕರೆ ಮಾಡಿದಾಗ ಈ ಕೃತ್ಯ ಬಯಲಾಗಿದೆ. ನ್ಯಾಯಕ್ಕಾಗಿ ರವಿಚಂದ್ರ ಅವರು ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ರೇಖಾ, ತಮಗೆ ಹಣದ ವಿಷಯ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2.5 ರಿಂದ 3 ಲಕ್ಷ ರೂಪಾಯಿ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಹಣವನ್ನು ಯಾರು ತೆಗೆದುಕೊಂಡಿದ್ದಾರೆ ಎಂದು ಬ್ರೋಕರ್​ಗಳನ್ನು ಕೇಳುವಂತೆ ಹೇಳಿದ್ದಾರೆ. ಅಲ್ಲದೆ ಬ್ರೋಕರ್​ಗೆ ತಾನು ಹಿಂದೆಯೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

NIC Recruitment 2026: GATE ಉತ್ತೀರ್ಣರಿಗೆ ಕೇಂದ್ರದಿಂದ ಉದ್ಯೋಗವಕಾಶ; ತಿಂಗಳಿಗೆ 1,12,400 ರೂ. ಸಂಬಳ – Kannada News | NIC Recruitment 2026: 376 Scientific and Technical Assistant Posts, GATE Required!

ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕ ‘ಎ’ (Scientific & Technical Assistant ‘A’) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಗುಂಪು–ಬಿ, ನಾನ್-ಗೆಜೆಟೆಡ್ ಎಸ್ ಮತ್ತು ಟಿ ವರ್ಗಕ್ಕೆ ಸೇರಿದ ಈ ಹುದ್ದೆಗಳು ತಾಂತ್ರಿಕ ಹಾಗೂ ಐಟಿ ಕ್ಷೇತ್ರದಲ್ಲಿ ಸರ್ಕಾರಿ ಸೇವೆಗೆ ಸೇರಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಒಟ್ಟು 376 ಹುದ್ದೆಗಳು ಭರ್ತಿಯಾಗಲಿದ್ದು, ಎಂಎಸ್ಸಿ, ಎಂಎಸ್, ಎಂಸಿಎ, ಬಿಇ ಅಥವಾ ಬಿಟೆಕ್ ಪದವಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಆದರೆ GATE ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯವಾಗಿದೆ.

ವರ್ಗವಾರು ಹುದ್ದೆಗಳ ಹಂಚಿಕೆಯಲ್ಲಿ ಮೀಸಲಾತಿ ಇಲ್ಲದ (UR) ವಿಭಾಗಕ್ಕೆ 154 ಹುದ್ದೆಗಳು, ಎಸ್‌ಸಿ ವಿಭಾಗಕ್ಕೆ 56, ಎಸ್‌ಟಿ ವಿಭಾಗಕ್ಕೆ 28, ಒಬಿಸಿ ವಿಭಾಗಕ್ಕೆ 101 ಹಾಗೂ ಇಡಬ್ಲ್ಯೂಎಸ್ ವಿಭಾಗಕ್ಕೆ 37 ಹುದ್ದೆಗಳು ಮೀಸಲಾಗಿದೆ. ಅರ್ಜಿದಾರರು ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವುದರ ಜೊತೆಗೆ 2024, 2025 ಅಥವಾ 2026ರಲ್ಲಿ ಪಡೆದ ಮಾನ್ಯ GATE ಅಂಕಗಳನ್ನು ಹೊಂದಿರಬೇಕು.

ಅರ್ಜಿ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. GATE 2026 ಫಲಿತಾಂಶ ಪ್ರಕಟವಾದ ದಿನಾಂಕದಿಂದ 10 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈ ಕುರಿತು ಕಿರು ಅಧಿಸೂಚನೆ ಈಗಾಗಲೇ NIC ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಶೀಘ್ರದಲ್ಲೇ ವಿವರವಾದ ಅಧಿಸೂಚನೆ ಬಿಡುಗಡೆಯಾಗಲಿದೆ. ಅಭ್ಯರ್ಥಿಗಳು ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸುವುದು ಒಳಿತು.

ಇದನ್ನೂ ಓದಿ: ಎಕ್ಸಿಮ್ ಬ್ಯಾಂಕ್​ನಲ್ಲಿ 40 ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗೆ ನೇಮಕಾತಿ; ತಿಂಗಳಿಗೆ 65,000ರೂ. ಸ್ಟೈಫಂಡ್

ವೇತನದ ವಿಷಯದಲ್ಲಿ, ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 35,400 ರಿಂದ 1,12,400 ರೂ. ರವರೆಗೆ (ಪೇ ಲೆವೆಲ್-6) ಸಂಬಳ ಹಾಗೂ ಇತರ ಸರ್ಕಾರಿ ಭತ್ಯೆಗಳು ದೊರೆಯುತ್ತವೆ. ಉದ್ಯೋಗ ಭದ್ರತೆ, ಉತ್ತಮ ವೇತನ ಮತ್ತು ಕೇಂದ್ರ ಸರ್ಕಾರಿ ಸೌಲಭ್ಯಗಳನ್ನು ಬಯಸುವ ತಾಂತ್ರಿಕ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವೃತ್ತಿ ಅವಕಾಶವಾಗಿದೆ. ಈ ವರ್ಷದ GATE ಫಲಿತಾಂಶಗಳನ್ನು ಮಾರ್ಚ್ 11 ರಂದು ಪ್ರಕಟಿಸಲಾಗುವುದರಿಂದ ಆಸಕ್ತರು ಈಗಲೇ ತಯಾರಿ ಆರಂಭಿಸುವುದು ಸೂಕ್ತ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜಮೌಳಿಗೆ ಅತ್ಯಂತ ಪ್ರಿಯವಾದ ವಿಲನ್ ಸುದೀಪ್: ಏಕೆ ಗೊತ್ತೆ?

ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಿರುವ ‘ವಾರಣಾಸಿ’ ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವರ್ಷವಿದೆ. ಆದರೆ ಈಗಲೇ ಸಿನಿಮಾದ ಹೈಪ್ ಆಕಾಶಕ್ಕೇರಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್. ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿದ್ದ ಮಹೇಶ್ ಬಾಬು, ರಾಜಮೌಳಿಗೆ ತಮ್ಮ ಹೀರೋಗಳಿಗಿಂತಲೂ ವಿಲನ್​​ಗಳೇ ಬಹಳ ಇಷ್ಟ ಎಂದಿದ್ದರು. ‘ವಾರಣಾಸಿ’ಯ ಪೃಥ್ವಿರಾಜ್ ಸುಕುಮಾರ್ ಪಾತ್ರವೇ ರಾಜಮೌಳಿಗೆ ಇಷ್ಟ ಎಂಬುದು ಅವರ ಮಾತಿನ ಉದ್ದೇಶವಾಗಿತ್ತು. ರಾಜಮೌಳಿಯ ಸಿನಿಮಾಗಳಲ್ಲಿ ನಾಯಕರಷ್ಟೆ ವಿಲನ್​​ಗಳು ಸಹ ಬಹಳ ಪವರ್​ಫುಲ್ ಆಗಿರುತ್ತಾರೆ. ಆದರೆ ರಾಜಮೌಳಿಗೆ ತಮ್ಮ ಸಿನಿಮಾಗಳ ವಿಲನ್​​ಗಳಲ್ಲಿ ಅತಿ ಹೆಚ್ಚು ಇಷ್ಟವಾದ ವಿಲನ್ ಸುದೀಪ್.

ಸ್ವತಃ ರಾಜಮೌಳಿ ಹಲವಾರು ಬಾರಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾಗಳಲ್ಲಿಯೇ ತಮಗೆ ಸುದೀಪ್ ಅವರು ಬಹಳ ಇಷ್ಟವಾದ ವಿಲನ್ ಎಂದು. ಸುದೀಪ್ ಅವರೇ ತಮಗೆ ಏಕೆ ಇಷ್ಟವೆಂದು ಸಹ ರಾಜಮೌಳಿ ಹೇಳಿದ್ದಾರೆ. ‘ಆರ್​​ಆರ್​​ಆರ್’ ಸಿನಿಮಾ ಬಿಡುಗಡೆ ಬಳಿಕ ಹಾಲಿವುಡ್​ನಲ್ಲಿ ಕೆಲವರು ರಾಜಮೌಳಿಯ ಬೆಸ್ಟ್ ಸಿನಿಮಾಗಳ ವಿಶೇಷ ಪ್ರದರ್ಶವನ್ನು ಆಯೋಜಿಸಿ, ರಾಜಮೌಳಿ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ಅಲ್ಲಿಯೂ ಸಹ ರಾಜಮೌಳಿ ಸುದೀಪ್ ಅವರನ್ನು ಕೊಂಡಾಡಿದರು.

ಇದನ್ನೂ ಓದಿ:ಜಪನೀಸ್​ ಸ್ಟುಡಿಯೋಗಳ ಜೊತೆ ದೊಡ್ಡ ಡೀಲ್​​​ಗೆ ಮುಂದಾದ ರಾಜಮೌಳಿ

‘ನಾನು ಸೃಷ್ಟಿಸಿದ ವಿಲನ್​​ಗಳ ಪೈಕಿ ಸುದೀಪ್ ಅವರ ಪಾತ್ರ ನನಗೆ ಬಹಳ ಇಷ್ಟ. ಸುದೀಪ್ ನನ್ನ ಮೆಚ್ಚಿನ ವಿಲನ್. ಅವರು ನಟಿಸಿದ ರೀತಿ ಅತ್ಯದ್ಭುತ’ ಎಂದ ರಾಜಮೌಳಿ, ಸುದೀಪ್ ಅವರ ನಟನಾ ಪ್ರತಿಭೆಯನ್ನು ತಮ್ಮದೇ ರೀತಿಯಲ್ಲಿ ವರ್ಣಿಸಿದ್ದರು. ‘ನಟರಿಗೆ ಎದುರಿಗೆ ಒಬ್ಬ ನಟನಿದ್ದರೆ ನಟಿಸುವುದು ಸುಲಭ. ಎದುರಿಗೆ ಕ್ಯಾಮೆರಾ ಇದ್ದು, ಆ ಕ್ಯಾಮೆರಾ ನಟನೆಂದು ಊಹಿಸುವುದು ಸಹ ಸುಲಭ, ಆದರೆ ‘ಈಗ’ ಸಿನಿಮಾನಲ್ಲಿ ಸುದೀಪ್ ಅವರು ನೊಣದ ಎದುರು ನಟಿಸಬೇಕಿತ್ತು. ಅಲ್ಲದೆ, ನೊಣ, ನಟರ ರೀತಿ ಒಂದು ಕಡೆ ನಿಲ್ಲುವ ಜೀವಿ ಅಲ್ಲ, ಅದು ಅತ್ತಿಂದಿತ್ತ, ಇತ್ತಿಂದತ್ತ ಹಾರಾಡುತ್ತಿರುತ್ತದೆ, ಅದು ಹೇಗೆ ಹಾರಾಡುತ್ತದೆ, ಅದನ್ನು ಹೇಗೆ ಹಾರಾಡಿಸಬೇಕು ಎಂಬುದು ನನ್ನ ಕಲ್ಪನೆಯಲ್ಲಿರುತ್ತಿತ್ತು, ನನ್ನ ಕಲ್ಪನೆಯಲ್ಲಿ ನೊಣ ಹೇಗೆ ಹಾರುತ್ತಿದೆ ಎಂಬುದನ್ನು ಗ್ರಹಿಸಿ ಅದಕ್ಕೆ ಅನುಗುಣವಾಗಿ ಸುದೀಪ್ ನಟಿಸಬೇಕಿತ್ತು, ಸುದೀಪ್ ಅವರ ಆ ಕೆಲಸವನ್ನು ಅತ್ಯದ್ಭುತವಾಗಿ ಮಾಡಿದ್ದಾರೆ’ ಎಂದಿದ್ದಾರೆ ರಾಜಮೌಳಿ.

‘ಈಗ’ ಸಿನಿಮಾನಲ್ಲಿ ಸುದೀಪ್ ಅವರಿಗೆ ಬಹಳ ಸವಾಲುಗಳಿದ್ದವು. ನನ್ನ ಗ್ರಹಿಕೆಯಲ್ಲಿರುವ ನೊಣವನ್ನು ಊಹಿಸಿ ಅವರು ನಟಿಸಬೇಕಿತ್ತು, ಅಲ್ಲದೆ, ಅವರು ನಟಿಸುವಾಗ ನೊಣದ ಮಾಡೆಲ್ ಸಹ ಇಡುವಂತಿರಲಿಲ್ಲ. ಎದುರಿಗೆ ಇಲ್ಲದೇ ಇರುವ ಜೀವಿಗೆ, ಅದೂ ಅವರ ಕಲ್ಪನೆಗೂ ಗೊತ್ತಿರದ ರೀತಿ ವರ್ತಿಸುವ ಜೀವಿಗೆ ಪ್ರತಿಯಾಗಿ ಅವರು ನಟಿಸಬೇಕಿತ್ತು. ಸುದೀಪ್ ಆ ಸಿನಿಮಾನಲ್ಲಿ ಅತ್ಯದ್ಭುತವಾಗಿ ನಟಿಸಿದರು. ಹಾಗಾಗಿ ಸುದೀಪ್ ಅವರು ನನ್ನ ಅಚ್ಚುಮೆಚ್ಚಿನ ವಿಲನ್’ ಎಂದಿದ್ದಾರೆ ರಾಜಮೌಳಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸೊಮಾಲಿಯಾ: ರನ್​​ವೇಯಿಂದ ಜಾರಿ ಬೀಚ್​​ಗೆ ಬಿದ್ದ 55 ಜನರಿದ್ದ ವಿಮಾನ – Kannada News | Aircraft Carrying 55 Slides Off Runway, Stops Near Shoreline in Somalia

ಸೊಮಾಲಿಯಾ, ಫೆಬ್ರವರಿ 11: ಸೊಮಾಲಿಯಾದ ಪ್ರಮುಖ ವಿಮಾನ ನಿಲ್ದಾಣದಲ್ಲಿ 55 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನ(Flight)ವೊಂದು ರನ್‌ವೇಯಿಂದ ಜಾರಿ ಬೀಚ್​ಗೆ ಬಿದ್ದಿರುವ ಘಟನೆ ವರದಿಯಾಗಿದೆ. ಮೊಗಾದಿಶುವಿನ ಅಡೆನ್ ಅಬ್ದುಲ್ಲೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಸಮಯದಲ್ಲಿ ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ನಂತರ ಈ ಘಟನೆ ಸಂಭವಿಸಿದೆ.

ಯಾರಿಗೂ ಗಾಯಗಳಾಗಿಲ್ಲ.ಸ್ಟಾರ್‌ಸ್ಕಿ ಏವಿಯೇಷನ್ ​​ನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ 50 ಪ್ರಯಾಣಿಕರು ಮತ್ತು ಐದು ಸಿಬ್ಬಂದಿ ಇದ್ದರು. ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಸಿಇಒ ಅಹ್ಮದ್ ನೂರ್ ದೃಢಪಡಿಸಿದರು. ವಿಮಾನವು ರನ್‌ವೇಯಿಂದ ಜಾರಿ ಹಿಂದೂ ಮಹಾಸಾಗರದ ತೀರದ ಬಳಿ ನಿಂತಿತ್ತು.

ವಿಮಾನವು ಉತ್ತರ ನಗರವಾದ ಗಾಲ್ಕಸಿಯೊಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಸುಮಾರು 15 ನಿಮಿಷಗಳ ನಂತರ, ಸಿಬ್ಬಂದಿ ತಾಂತ್ರಿಕ ಸಮಸ್ಯೆಯನ್ನು ವರದಿ ಮಾಡಿ ತುರ್ತು ಭೂಸ್ಪರ್ಶಕ್ಕಾಗಿ ಹಿಂತಿರುಗಲು ನಿರ್ಧರಿಸಿದ್ದರು. ಲ್ಯಾಂಡಿಂಗ್ ಪ್ರಯತ್ನದ ಸಮಯದಲ್ಲಿ, ವಿಮಾನವು ರನ್‌ವೇಯಿಂದ ಹೊರಟು ತೀರದ ಕಡೆಗೆ ಚಲಿಸಿತು.

ಮತ್ತಷ್ಟು ಓದಿ: Video: ಜಾರ್ಜಿಯಾದ ಜನನಿಬಿಡ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ, ಬಹು ವಾಹನಗಳಿಗೆ ಡಿಕ್ಕಿ

ರಕ್ಷಣಾ ತಂಡಗಳು ತ್ವರಿತವಾಗಿ ಪ್ರತಿಕ್ರಿಯಿಸಿವೆ, ವಿಮಾನದಲ್ಲಿದ್ದ ಎಲ್ಲರನ್ನೂ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಂಡಿರುವುದಾಗಿ ಸಾರಿಗೆ ಸಚಿವ ಮೊಹಮ್ಮದ್ ಫರಾಹ್ ನುಹ್ ತಿಳಿಸಿದ್ದಾರೆ. ವಿಮಾನವು ಹಾನಿಗೊಳಗಾಗಿದ್ದರೂ, ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಯಾವುದೇ ತೊಂದರೆಯಾಗಿಲ್ಲ.

ವಿಮಾನ ನಿಲ್ದಾಣದ ವಿಡಿಯೋ

ತಾಂತ್ರಿಕ ಸಮಸ್ಯೆ ಮತ್ತು ರನ್‌ವೇ ಘಟನೆಗೆ ಕಾರಣವೇನೆಂದು ಕಂಡುಹಿಡಿಯಲು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 12:29 pm, Wed, 11 February 26

Source link