Category Archives: Blog

Your blog category

‘ಮಗನಿಗೆ ಒಳ್ಳೆಯ ಅಪ್ಪ ಇದ್ದಾನೆ’; ಮೊದಲ ಬಾರಿಗೆ ಡಿವೋರ್ಸ್ ಬಗ್ಗೆ ಮೌನ ಮುರಿದ ಮಯೂರಿ – Kannada News | Mayuri on Divorce Rumors: It’s Personal, My Son’s Happiness Matters Most

ಮಯೂರಿ (Mayuri) ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತುಂಬಾನೇ ಫೇಮಸ್ ಆದವರು. ‘ಅಗ್ನಿ ನಕ್ಷತ್ರ’ ಧಾರಾವಾಹಿ ಮಾಡಿದ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ನಂತರ ಹಿರಿತೆರೆಗೆ ಕಾಲಿಟ್ಟರು. ಅಲ್ಲಿಯೂ ಜನಪ್ರಿಯತೆ ಸಿಕ್ಕಿತು. 2020ರಲ್ಲಿ ಅವರು ಮದುವೆ ಆದರು. ಆದರೆ, ಅವರ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿ ಇದೆ. ಆದರೆ, ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಮಯೂರಿ. ‘ನಾನು ಸಿಟ್ಟು ಮಾಡಿಕೊಳ್ಳುವುದಿಲ್ಲ. ಏನೇ ನಡೆದರೂ ಹೀಲ್ ಮಾಡಿಕೊಂಡು ಮುಂದೆ ಸಾಗುತ್ತೇನೆ. ನನಗೆ ಕಣ್ಣೀರು ಇತ್ತೀಚೆಗೆ ಬರುತ್ತಿಲ್ಲ. ನನಗೆ ಯಾವುದರ ಮೇಲೂ ಅಟ್ಯಾಚ್​​ಮೆಂಟ್ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ನನ್ನ ಸುತ್ತಲೂ ಒಂದು ಜೀವನ ಕಟ್ಟಿಕೊಂಡಿದ್ದೇನೆ. ನಾನು ಮಟೀರಿಯಲ್ ಲೈಫ್ ಜೊತೆ ಅಟ್ಯಾಚ್ ಆಗಿದ್ದೇನೆ. ಮಗ ಇದ್ದಾನೆ. ಅವನ ನೋಡಿಕೊಳ್ಳಬೇಕು’ ಎಂದಿದ್ದಾರೆ ಅವರು.

ಇದನ್ನೂ ಓದಿ: ಮತ್ತೆ ಚಿತ್ರರಂಗಕ್ಕೆ ಹೆಜ್ಜೆ ಇಡಲು ರೆಡಿಯಾಗಿರುವ ಮಯೂರಿ ತೂಕ ಇಳಿಸಿಕೊಂಡ ಜರ್ನಿ ಬಗ್ಗೆ ಮಾತನಾಡಿದ್ದಾರೆ

ಡಿವೋರ್ಸ್ ವಿಷಯದ ಬಗ್ಗೆ ಕೇಳಿದ್ದಕ್ಕೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಡಿವೋರ್ಸ್ ಬಗ್ಗೆ ಮಾತನಾಡಲ್ಲ. ನನಗೆ ಐದು ವರ್ಷದ ಮಗ ಇದ್ದಾನೆ. ಆರವ್​​ಗೆ (ಮಗ) ಒಳ್ಳೆ ತಾಯಿ ಇದಾಳೆ, ಅದು ನಾನು. ಒಳ್ಳೆಯ ಅಪ್ಪ ಇದ್ದಾನೆ. ಆರವ್​ ಹಾಗೂ ಅವನ ತಂದೆ ಜೊತೆ ಒಳ್ಳೆಯ ಸಂಬಂಧ ಇದೆ. ಅದ್ಭುತ ಕುಟುಂಬ ಇದೆ’ ಎಂದು ಮಯೂರಿ ಹೇಳಿದ್ದಾರೆ.

‘ನನಗೆ ಡಿವೋರ್ಸ್ ಬಗ್ಗೆ ಮಾತನಾಡೋಕೆ ಇಷ್ಟ ಇಲ್ಲ. ನಾನು ಸ್ಟೇಟ್​​ಮೆಂಟ್ ಕೊಟ್ಟಿಲ್ಲ, ಕೊಡೋದೂ ಇಲ್ಲ. ಅದನ್ನು ನನ್ನ ಪರ್ಸ್​​​ನಲ್​. ನನಗೆ ಈ ಬಗ್ಗೆ ದಿನವೂ ಪ್ರಶ್ನೆ ಬರುತ್ತದೆ. ನಾನು ಮನುಷ್ಯ. ಸೋಶಿಯಲ್ ರೆಸ್ಪಾನ್ಸ್ ಇರುತ್ತದೆ. ಈಗ ಮಾತನಾಡಿಲ್ಲ, ಮುಂದೆಯೂ ಮಾತನಾಡುವುದಿಲ್ಲ. ನನ್ನ ಮಗನ ಬೆಳವಣಿಗೆ ಚೆನ್ನಾಗಿದೆ. ಆತ ಖುಷಿಯಿಂದ ಬೆಳೆಯಬೇಕು, ಬೆಳೆಯುತ್ತಿದ್ದಾನೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Hug Day 2026 Date: ವ್ಯಾಲೆಂಟೈನ್‌ ವೀಕ್‌ನಲ್ಲಿ ಹಗ್‌ ಡೇ ಆಚರಿಸುವ ಪದ್ಧತಿ ಆರಂಭವಾದದ್ದು ಹೇಗೆ ಗೊತ್ತೇ? – Kannada News | Hug Day 2026: Know the history and significance of Hug Day celebration

ವ್ಯಾಲೆಂಟೈನ್‌ ವೀಕ್‌ನ ಪ್ರತಿ ದಿನವೂ ಪ್ರೇಮಿಗಳಿಗೆ ತುಂಬಾನೇ ವಿಶೇಷವಾಗಿದೆ. ಈ ಪ್ರಣಯ ವಾರದ ಆರನೇ ದಿನ ಅಂದರೆ ಫೆಬ್ರವರಿ 12 ರಂದು ಹಗ್‌ ಡೇಯನ್ನು (Hug Day) ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ದಿನವು ವಿಶೇಷವಾಗಿ ಸಿಹಿ ಅಪ್ಪುಗೆಗೆ ಮೀಸಲಿಡಲಾಗಿದೆ. ಇದು ಪ್ರೀತಿ, ವಾತ್ಸಲ್ಯ ಮತ್ತು ಭಾವನಾತ್ಮಕ ಸಂಪರ್ಕ, ಸಂಬಂಧದಲ್ಲಿ ನಂಬಿಕೆಯನ್ನು ಬಲಪಡಿಸುತ್ತದೆ ಮತ್ತು ಸಂಗಾತಿಗಳ ನಡುವಿನ ಅಂತರವನ್ನು ಕಡಿಮೆ ಮಾಡಿ ಪ್ರೀತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ದಿನವು ಪ್ರೀತಿ, ವಾತ್ಸಲ್ಯ ಮತ್ತು ಅನ್ಯೋನ್ಯತೆಯನ್ನು ವ್ಯಕ್ತಪಡಿಸಲು ಇರುವಂತಹ ಒಂದು ಸುಂದರ ಸಂದರ್ಭವಾಗಿದ್ದು, ಈ ದಿನದ ಆಚರಣೆ ಪ್ರಾರಂಭವಾಗಿದ್ದು ಹೇಗೆ, ಇದರ ಮಹತ್ವವೇನು ಎಂಬುದನ್ನು ತಿಳಿಯೋಣ ಬನ್ನಿ.

ಹಗ್‌ ಡೇಯನ್ನು ಏಕೆ ಆಚರಿಸಲಾಗುತ್ತದೆ?

ಫೆಬ್ರವರಿ 12 ರಂದು ಹಗ್‌ ಡೇಯನ್ನು ಆಚರಿಸಲಾಗುತ್ತದೆ ಮತ್ತು ಪ್ರೀತಿ, ವಾತ್ಸಲ್ಯ ಮತ್ತು ಸ್ನೇಹದ ಮಹತ್ವವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಅಪ್ಪುಗೆಯು ಸಂಬಂಧಗಳನ್ನು ಗಾಢವಾಗಿಸುತ್ತದೆ ಮತ್ತು ಎಲ್ಲಾ ನೋವನ್ನು ಮರೆಸುತ್ತದೆ ಎಂಬುದನ್ನು ಹಾಗೂ ಸಂಬಂಧಗಳನ್ನು ಬಲಪಡಿಸುವಲ್ಲಿ ಮತ್ತು ಭಾವನೆಗಳನ್ನು ಬೆಳೆಸುವಲ್ಲಿ ದೈಹಿಕ ಸ್ಪರ್ಶದ ಮಹತ್ವವನ್ನು ಈ ದಿನ ನಮಗೆ ನೆನಪಿಸುತ್ತದೆ.  ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.

ಹಗ್‌ ಡೇ ಯಾವಾಗ ಪ್ರಾರಂಭವಾಯಿತು, ಅದರ ಇತಿಹಾಸವೇನು?

ಹಗ್‌ ಡೇಗೆ ಸಂಬಂಧಿಸಿದಂತೆ ಸ್ಪಷ್ಟ ಇತಿಹಾಸವಿಲ್ಲದಿದ್ದರೂ, 1980 ರ ದಶಕದಲ್ಲಿ ಅಮೆರಿಕದಲ್ಲಿ ಹಗ್ ಡೇ ಆಚರಣೆ ಹುಟ್ಟಿಕೊಂಡಿತು ಮತ್ತು  ಇದನ್ನು ಪ್ರೇಮಿಗಳ ವಾರದ ಭಾಗವಾಗಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ.  ಜನರು ಭಾವನಾತ್ಮಕವಾಗಿ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶವನ್ನು ಒದಗಿಸುವ ಒಂದು ಉಪಕ್ರಮವಾಗಿ ಇದನ್ನು ನೋಡಲಾಯಿತು. ಕ್ರಮೇಣ, ಈ ದಿನವು ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿತು ಮತ್ತು ಈಗ ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ.

ಇದನ್ನೂ ಓದಿ: ಫೆಬ್ರವರಿ 11 ರಂದು ಪ್ರಾಮಿಸ್ ಡೇ ಆಚರಿಸುವುದೇಕೆ? ದಿನ ಇತಿಹಾಸ, ಮಹತ್ವ ತಿಳಿಯಿರಿ

 ಹಗ್‌ ಡೇಯ ಮಹತ್ವವೇನು?

  • ಅಪ್ಪುಗೆಯ ದಿನವು ಪ್ರತಿಯೊಬ್ಬರ ಜೀವನದಲ್ಲೂ ವಿಶೇಷ ಮಹತ್ವವನ್ನು ಹೊಂದಿದೆ ಏಕೆಂದರೆ ಅದು ಪ್ರೀತಿ ಮತ್ತು ಭಾವನಾತ್ಮಕ ಸಂಪರ್ಕವನ್ನು ಉತ್ತೇಜಿಸುತ್ತದೆ.
  • ಹಗ್ ಡೇ ಕೇವಲ ಒಂದು ಸಣ್ಣ ಆಚರಣೆಯಲ್ಲ, ಅದು ನಂಬಿಕೆ ಮತ್ತು ಭದ್ರತೆಯ ಸಂಕೇತವೂ ಆಗಿದೆ.
  • ಅಪ್ಪುಗೆಯ ದಿನ ಸರಳವಾಗಿ ಕಾಣಿಸಬಹುದು, ಆದರೆ ಅದರ ಮಹತ್ವ ಅಪಾರವಾಗಿದೆ. ಇದು ಪ್ರೀತಿ ಮತ್ತು ಸಂತೋಷದಿಂದ ಹಿಡಿದು ಸಾಂತ್ವನ ಮತ್ತು ಸಾಂತ್ವನದವರೆಗೆ ವಿವಿಧ ಭಾವನೆಗಳನ್ನು ವ್ಯಕ್ತಪಡಿಸುವ ಸರಳ ಕ್ರಿಯೆಯಾಗಿದೆ.
  • ಈ ದಿನದಂದು, ಜನರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತಾರೆ, ಅವರ ಸಂಬಂಧಗಳನ್ನು ಬಲಪಡಿಸುತ್ತಾರೆ
  • ಹಗ್‌ ಡೇ ಯಂದು ಪ್ರೇಮಿಗಳು ಪರಸ್ಪರ ಅಪ್ಪಿಕೊಳ್ಳುವ ಮೂಲಕ ತಮ್ಮ ಸಂಬಂಧಗಳನ್ನು ಬಲಪಡಿಸಲು ಶ್ರಮಿಸುತ್ತಾರೆ.
  • ಅಪ್ಪುಗೆ ಭಾವನಾತ್ಮಕ ಬಂಧವನ್ನು ಬಲಪಡಿಸುವುದು ಮಾತ್ರವಲ್ಲದೆ, ನಂಬಿಕೆಯನ್ನೂ ಬಲಪಡಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಲವಂತದ ಮದುವೆ: ಹೋಮ್ ಗಾರ್ಡ್ ಹುದ್ದೆಗೆ ತಯಾರಿ ನಡೆಸುತ್ತಿದ್ದ ಯುವಕನನ್ನು ಅಪಹರಿಸಿ, ಮಾದಕ ದ್ರವ್ಯ ನೀಡಿ ವಿವಾಹ – Kannada News | Shocking Bihar Pakadwa Vivah: Home Guard Aspirant Kidnapped and Drugged for Marriage

ಬಿಹಾರದಲ್ಲಿ ಮತ್ತೆ ಬಲವಂತದ ಮದುವೆ ಪದ್ಧತಿ ಮುನ್ನೆಲೆಗೆ ಬಂದಿದ್ದು, ಹೋಮ್ ಗಾರ್ಡ್ ಉದ್ಯೋಗಾಕಾಂಕ್ಷಿಯೊಬ್ಬರನ್ನು ಅಪಹರಿಸಿ, ಮಾದಕ ದ್ರವ್ಯ ನೀಡಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ನಿವಾಸಿ, ಹೋಮ್ ಗಾರ್ಡ್ ಹುದ್ದೆಯ ಆಕಾಂಕ್ಷಿಯಾದ ಯುವಕ ದೈಹಿಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಈ ವೇಳೆ ಕೆಲವು ವ್ಯಕ್ತಿಗಳು ಅವರನ್ನು ಅಪಹರಿಸಿದ್ದಾರೆ. ಅಪಹರಣಕಾರರು ಯುವಕನಿಗೆ ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ನೀಡಿದ್ದರಿಂದ ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಯುವಕನ ಹೇಳಿಕೆಯ ಪ್ರಕಾರ, ಅವರು ಕಣ್ಣು ಬಿಟ್ಟಾಗ ಮದುವೆ ಮಂಟಪದಲ್ಲಿದ್ದರು. ಮಾದಕ ದ್ರವ್ಯದ ಪ್ರಭಾವದಿಂದ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ, ಬೆದರಿಕೆ ಹಾಕಿ ಯುವತಿಯೊಬ್ಬಳ ಜೊತೆ ಮದುವೆ ವಿಧಿವಿಧಾನಗಳನ್ನು ಮಾಡಲಾಗಿದೆ. ನಾನು ಎಚ್ಚರಗೊಂಡಾಗ ಮದುವೆಯ ಕಾರ್ಯಗಳು ನಡೆಯುತ್ತಿದ್ದವು, ನನಗೆ ಏನಾಗುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಮದುವೆ ಮುಗಿದಿತ್ತು ಎಂದು ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕನ್ನಡ ಶಾಲೆ ಮುಚ್ಚುತ್ತಿರುವುದು ಖಂಡನೀಯ: ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಕಿಡಿ – Kannada News | Karnataka Government Closes 638 Kannada Schools; Former CM Basavaraj Bommai Demands Reopening

ಮಾಜಿ ಸಿಎಂ ಬಸವರಾಜ ಬೊಮ್ಮಾಯಿImage Credit source: scroll.in

ಬೆಂಗಳೂರು, ಫೆಬ್ರವರಿ 11: ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್​ ಸ್ಕೂಲ್​​ (KPS​​) ಮ್ಯಾಗ್ನೆಟ್​ ಯೋಜನೆ ಜಾರಿಗೆ ಮುಂದಾಗಿದೆ. ಆ ಮೂಲಕ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ಈ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj S Bommai)
ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ ಸರ್ಕಾರ ಈಗಾಗಲೇ 638 ಕನ್ನಡ ಶಾಲೆಗಳನ್ನು ಮುಚ್ಚಿದೆ.  ಇದು ಕನ್ನಡ ಮತ್ತು ಕನ್ನಡ ಶಾಲೆಗಳ ವಿರೋಧಿಯಾಗಿದೆ. ಇದನ್ನು ಖಂಡಿಸುತ್ತೇನೆ, ಕನ್ನಡ ಶಾಲೆಗಳ ಪುನರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ: ಬೊಮ್ಮಾಯಿ

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಮೇಲಿಂದ ಮೇಲೆ ಚುನಾವಣೆಯಲ್ಲಿ ಸೋಲುತ್ತಿರುವುದರಿಂದ ಅವರ ನಾಯಕ ಹತಾಶರಾಗಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಅವರು ನಗರ ನಕ್ಸಲರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್​

ಬೆಂಚ್​ಗಳ ಮೇಲೆ ನಿಲ್ಲುವುದು, ಸ್ಪೀಕರ್ ಮೇಲೆ ದಾಳಿ ಮಾಡುವುದು ಇದು ಮಿತಿಮೀರಿದೆ. ಕಾಂಗ್ರೆಸ್ ಮಹಿಳಾ ಸಂಸದರು  ಪ್ರಧಾನಮಂತ್ರಿಯ ಆಸನದವರೆಗೆ ಬಂದು ಅವರು ಬರುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಸಂಸತ್ತಿನ ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಇದು ಬಾಗಿಲು ಮುಚ್ಚದ ಸರ್ಕಾರಿ ಶಾಲೆ, ಅಧ್ಯಾಪಕರಿಗೆ ಶಿಫ್ಟ್​ನಲ್ಲಿ ಕೆಲಸ! SSLC ಫಲಿತಾಂಶ ಹೆಚ್ಚಿಸಲು ವಿನೂತನ ಪ್ರಯೋಗ

ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕಲಾಪವನ್ನು ಸುಗಮವಾಗಿ ನಡೆಸಲು ಬಿಡುತ್ತಾರೆ ಎನ್ನುವ ನಂಬಿಕೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಏನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ಅವರು ಜನರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ. ಅವರು ತೊಂದರೆ ಕೊಡುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. ಬಹುತೇಕ ಅದೇ ಆಗಬಹುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್​; ಕೊಟ್ಟ ಮಾತಿನ ವಿಚಾರ ಮತ್ತೆ ಮುನ್ನೆಲೆಗೆ – Kannada News | Karnataka CM Post Battle: DK Suresh Backs Shivakumar, Recalls Siddaramaiah’s Promise

ಸಿಎಂ ಕುರ್ಚಿ ಕದನ ಮತ್ತೆ ಮುನ್ನೆಲೆಗೆImage Credit source: Tv9 Kannada

ಬೆಂಗಳೂರು, ಫೆಬ್ರವರಿ 11: ರಾಜ್ಯ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿ ಫೈಟ್​ ಮತ್ತೆ ಮುನ್ನೆಗೆ ಬಂದಿದ್ದು ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್​​ ದೆಹಲಿಗೆ ಹಾರಿದ್ದರೆ, ಇತ್ತ ಡಿ.ಕೆ. ಸುರೇಶ್​ ಸಹೋದರನ ಪರ ಅಖಾಡಕ್ಕಿಳಿದಿದ್ದಾರೆ. ಕೊಟ್ಟ ಮಾತಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಮಾಜಿ ಸಂಸದ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ತಾರೆ. ಆ ಬಗ್ಗೆ ನನಗೆ ಈಗಲೂ ಭರವಸೆ ಇದೆ ಎಂದಿದ್ದಾರೆ.

ಡಿಕೆಶಿ ಪರ ಸಹೋದರನ ಬ್ಯಾಟಿಂಗ್​​


ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಕಾಂಗ್ರೆಸ್​​ ಎಂಎಲ್ಸಿ ಯತೀಂದ್ರ ಹೇಳಿಕೆ ಸಂಬಂಧವೂ ವ್ಯಂಗ್ಯವಾಡಿರುವ ಸುರೇಶ್​​, ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದಿದ್ದಾರೆ. ಕಾಂಗ್ರೆಸ್​ ಪಕ್ಷದ ಕೆಲ ಶಾಸಕರಿಗೆ ಡಿಕೆಶಿ ವಿದೇಶ ಪ್ರವಾಸ ಆಯೋಜಿಸಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರವಾಸಕ್ಕೂ ಡಿ.ಕೆ.ಶಿವಕುಮಾರ್​ಗೂ ಸಂಬಂಧವಿಲ್ಲ. ಯಾರು ವಿದೇಶ ಪ್ರವಾಸ ಹೋಗ್ತಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ತಾರಕಕ್ಕೇರಲಿದೆ ಕುರ್ಚಿ ಕದನ; ಟೂರ್ ಪಾಲಿಟಿಕ್ಸ್ Vs ರೆಸಾರ್ಟ್ ಪಾಲಿಟಿಕ್ಸ್​ಗೆ ಬಣಗಳ ಸಿದ್ಧತೆ

‘ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ’

ನಿಗಮ ಮಂಡಳಿಯಲ್ಲಿ ಬಿಜೆಪಿ ಮುಖಂಡನಿಗೆ ಸ್ಥಾನ ನೀಡಿದ ವಿಚಾರವಾಗಿಯೂ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ರಾಜ್ಯ ಸರ್ಕಾರ ಎಲ್ಲರನ್ನೂ ಕೂಡ ಜೊತೆಗೆ ಕರೆದೊಯ್ಯಬೇಕು. ಕಾಂಗ್ರೆಸ್​ ಪಕ್ಷದ್ದು ಸರ್ವಧರ್ಮ ಪಾಲಿಸಿ ಅಲ್ವಾ? ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ‌ ಆದ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪದೇ ಪದೇ ಅದ್ನೇ ಕೇಳ್ಬೇಡಿ, ನಾನು-ಡಿಕೆ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು: ಸಿದ್ದರಾಮಯ್ಯ ಫುಲ್ ಗರಂ – Kannada News | Don’t Ask the Same Question Repeatedly: Siddaramaiah Reacts Sharply, Says He and DK Will Follow High Command

ಬೆಂಗಳೂರು, ಫೆಬ್ರವರಿ 11: ನಾಯಕತ್ವ ಗೊಂದಲದ ಕುರಿತು ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಸಿಎಂ ಸಿಟ್ಟಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆಯಿತು. ಕಳೆದ ಮೂರು ತಿಂಗಳಿಂದಲೂ ಇದೇ ವಿಷಯವನ್ನು ಪದೇ ಪದೇ ಕೇಳಲಾಗುತ್ತಿದೆ. ದಯವಿಟ್ಟು ಇದನ್ನು ಪುನರಾವೃತ್ತಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಗರಂ ಆಗಿಯೇ ಹೇಳಿದರು.

ಶಾಸಕರ ವಿದೇಶ ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ, ತಮ್ಮ ಗಮನಕ್ಕೆ ಬಂದಿಲ್ಲ, ಅದು ವೈಯಕ್ತಿಕ ಖರ್ಚಿನಲ್ಲಿದ್ದರೆ ವಿವಾದ ಏಕೆ ಎಂದು ಪ್ರಶ್ನಿಸಿದರು. ಆದರೆ, ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಯಿಂದ ಅವರು ಸಿಡಿಮಿಡಿಗೊಂಡರು.

‘ನಾನು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ, ಅದನ್ನು ನಾವು ತಪ್ಪದೆ ಪಾಲಿಸುತ್ತೇವೆ. ಇದು ಸಂಪೂರ್ಣವಾಗಿ ಹೈಕಮಾಂಡ್​ಗೆ ಬಿಟ್ಟ ವಿಚಾರ’ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL​ 2026 ಆರಂಭಕ್ಕೂ ಮುನ್ನವೇ RCBಗೆ ಆಘಾತ ನೀಡಿದ ಮುಂಬೈ ಇಂಡಿಯನ್ಸ್

Source link

ಜೈಲು ಸೇರಿದ ರಾಜ್​ಪಾಲ್ ಯಾದವ್​​ಗೆ ಹರಿದು ಬರುತ್ತಿದೆ ನೆರವು

ಬಾಲಿವುಡ್​ನ (Bollywoo) ಖ್ಯಾತ ಹಾಸ್ಯನಟ ರಾಜ್​​ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯೆಂದು ಆದೇಶಿಸಲಾಗಿದೆ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್​​ಪಾಲ್ ಯಾದವ್ ಅವರಿಗೆ ಸೋಲಾಗಿದ್ದು ಇತ್ತೀಚೆಗಷ್ಟೆ ಅವರು ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳು ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಿದೆ. ಆದರೆ ಇದೀಗ ರಾಜ್​ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ.

ರಾಜ್​​ಪಾಲ್ ಯಾದವ್ ಬಾಲಿವುಡ್​ನಲ್ಲಿ 27 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ ಹಾಸ್ಯನಟರಲ್ಲಿ ರಾಜ್​ಪಾಲ್ ಯಾದವ್ ಸಹ ಒಬ್ಬರು. ಇದೇ ಕಾರಣಕ್ಕೆ ಚಿತ್ರರಂಗದ ಕೆಲವರು ಇದೀಗ ರಾಜ್​ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿದ್ದ ನಟ ಸೋನು ಸೂದ್, ‘ಚಿತ್ರರಂಗದವರು ರಾಜ್​ಪಾಲ್ ಯಾದವ್ ನೆರವಿಗೆ ಬರಬೇಕು, ಅವರೊಟ್ಟಿಗೆ ಸಿನಿಮಾ ಸಹಿ ಮಾಡಿಸಿಕೊಂಡಾದರೂ ಅವರಿಗೆ ಅಡ್ವಾನ್ಸ್ ರೂಪದಲ್ಲಿ ಹಣ ನೀಡಬೇಕು, ನಾನೂ ಸಹ ಹಾಗೆಯೇ ಮಾಡುತ್ತಿದ್ದೇನೆ. ಇದರಿಂದ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದಿದ್ದರು.

ಇದೀಗ ಖ್ಯಾತ ಸಂಗೀತ ನಿರ್ದೇಶಕ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್​ಪಾಲ್ ಯಾದವ್ ಸಹಾಯಕ್ಕೆ ಬಂದಿದ್ದು, ರಾಜ್​ಪಾಲ್ ಯಾದವ್ ಅವರಿಗೆ 1.11 ಕೋಟಿ ರೂಪಾಯಿಗಳ ನೆರವು ನೀಡಿದ್ದಾರೆ. ‘ಭೂಲ್ ಭುಲಯ್ಯ’, ‘ಹಂಗಾಮ’, ‘ವೆಲ್​​ಕಮ್’ ಇನ್ನೂ ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್​​ಪಾಲ್ ಯಾದವ್ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.

ಇದನ್ನೂ ಓದಿ:ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ

ಈ ಬಗ್ಗೆ ಮಾತನಾಡಿರುವ ಇಂದೆರ್ಜೀತ್ ಸಿಂಗ್, ‘ರಾಜ್​​ಪಾಲ್ ಯಾದವ್ ಅವರು ಭಾರತೀಯರನ್ನು ದಶಕಗಳಿಂದಲೂ ರಂಜಿಸುತ್ತಾ ಬಂದಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಹಲವು ನೆನಪುಳಿವ, ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಸಹ ಆಗಿದ್ದಾರೆ. ಇದು ಕೇವಲ ಹಣದ ಸಹಾಯ ಮಾತ್ರ ಅಲ್ಲ. ಇದು ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ, ಅದರಲ್ಲೂ ಒಬ್ಬ ಚಿತ್ರಕರ್ಮಿ ಕಷ್ಟದಲ್ಲಿದ್ದಾಗ ಜೊತೆಗೆ ನಿಲ್ಲಬೇಕಾದುದು ಕರ್ತವ್ಯ ಎಂಬ ಕಾರಣಕ್ಕೆ ಮಾಡಿದ ಸಹಾಯ’ ಎಂದಿದ್ದಾರೆ.

ರಾಜ್​​ಪಾಲ್ ಯಾದವ್ ಅವರಿಗೆ 10 ಲಕ್ಷ ರೂಪಾಯಿ ಹಣ ಸಹಾಯ ಮಾಡುವುದಾಗಿ ವಿವಾದಾತ್ಮಕ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಸಹ ಹೇಳಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಚಿತ್ರರಂಗದ ಕೆಲವು ದಿಗ್ಗಜರು ತೆರೆ ಮರೆಯಲ್ಲಿ ರಾಜ್​ಪಾಲ್ ಯಾದವ್ ಅವರಿಗೆ ಹಣ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ರಾಜ್​​ಪಾಲ್ ಯಾದವ್ ಅವರು 9 ಕೋಟಿ ರೂಪಾಯಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಒಂದೊಮ್ಮೆ ಅವರು 9 ಕೋಟಿ ರೂಪಾಯಿ ಹಣವನ್ನು ಕಟ್ಟಿದ್ದೇ ಆದಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಬಹುದಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬಿಕ್ಲು ಶಿವ ಕೊಲೆ ಕೇಸ್​: ಭೈರತಿ ಬಸವರಾಜ್ ವಿರುದ್ಧ ಲುಕ್ ಔಟ್ ನೋಟಿಸ್ – Kannada News | Biklu Shiva Murder Case: Lookout Notice Issued for Byrathi Basavaraj After Bail Cancellation

ಬೆಂಗಳೂರು, ಫೆಬ್ರವರಿ 11: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೇಲ್ ಅರ್ಜಿ ಎರಡು ಬಾರಿ ರದ್ದಾದ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಟಿವಿ9ಗೆ ಸಿಐಡಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಭೈರತಿ ಬಸವರಾಜ್ ಸ್ವತಃ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಕೊಡಿ: ಹೂವು ಮಾರುವಾಕೆಯ ಮುಗ್ಧತೆಗೆ ಮನಸೋತ ಮಹಿಳೆ – Kannada News | Heartwarming Viral Video: Flower Seller’s Respect and Joy Inspires

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​​ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಹೂವು ಮಾರುವ ಮಹಿಳೆಯ ಮುಗ್ಧತೆ ಮತ್ತು ಆಕೆಯ ಮುಖದಲ್ಲಿರುವ ಸುಂದರವಾದ ನಗು ಎಲ್ಲರ ಗಮನ ಸೆಳೆಯುತ್ತದೆ. ಆಕೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಗೌರವಕ್ಕೆ ಬೆಲೆ ನೀಡುತ್ತಾಳೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ವಿಡಿಯೋ ಇಷ್ಟೊಂದು ಜನರಿಗೆ ತಲುಪಲು ಮುಖ್ಯ ಕಾರಣ ಆ ಹೂವು ಮಾರುವ ಮಹಿಳೆಯ ಆತ್ಮವಿಶ್ವಾಸ ಮತ್ತು ಮುಗ್ಧತೆ ಕಾರಣ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಗ್ರಾಹಕರೊಂದಿಗೆ ಚೌಕಾಶಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಈಕೆ, ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟೇ ಕೊಡಿ. ಎಂದು ಹೇಳುವ ಮೂಲಕ ಹಣಕ್ಕಿಂತ ಗೌರವ ಮತ್ತು ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ನಡೆದ ಸಂಭಾಷಣೆ ಏನು? ಎಂಬುದು ಇಲ್ಲಿದೆ. ಹೂವು ಮಾರುವಾಕೆ ಅರೇ… ಇಲ್ಲ ಇಲ್ಲ ಇಲ್ಲ. ಇದು ನಿಮಗಾಗಿ, ಇದಕ್ಕೆ ಕಾರಿನಲ್ಲಿದ್ದವರು ಎಷ್ಟು ಇದರ ಬೆಲೆ? ಹೇಳಿ ಎಂದು ಕೇಳುತ್ತಾರೆ. ಇಟ್ಟುಕೊಳ್ಳಿ ದೀದಿ. ಪರವಾಗಿಲ್ಲ ಎಂದು ಹೂವು ಮಾರುವಾಕೆ ಹೇಳುತ್ತಾಳೆ. ಫ್ರೀ ಆದ್ರೆ ಬೇಡ, ನನಗೆ ಬೇಡ ಎಂದು ಕಾರಿನಲ್ಲಿದ್ದವರು ಹೇಳುತ್ತಾರೆ. ಮತ್ತೆ ಹೂವು ಮಾರುವ ಮಹಿಳೆ, ಇಲ್ಲ, ಇದು ನಿಮಗಾಗಿ ಎಂದು ಹೇಳುತ್ತಾಳೆ. ಇದರ ಬೆಲೆ ಎಷ್ಟು? ಬೇಗ ಹೇಳಿ ಎಂದು ಕಾರಿನಲ್ಲಿದ್ದವರು ಕೇಳುತ್ತಾರೆ. ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟು ಕೊಡಿ ಎಂದು ಈ ಮಹಿಳೆ ಹೇಳುತ್ತಾಳೆ. ಥ್ಯಾಂಕ್ ಯು ಸರ್… ಬಾಯ್! ಎಂದು ಹೇಳುತ್ತಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link