ರಾಯಚೂರಿನಲ್ಲಿ ವರುಣನ ಆರ್ಭಟ: ಜಲಾವೃತಗೊಂಡ ರಸ್ತೆಗಳು, ಮನೆಗಳಿಗೆ ನುಗ್ಗಿದ ಚರಂಡಿ ನೀರು! – Kannada News | Raichur Rain Update: Heavy Rainfall Triggers Waterlogging, Disrupts Normal Life

ರಾಯಚೂರು, ಜೂನ್ 14: ಜಿಲ್ಲೆಯಾದ್ಯಂತ ಬೆಳ್ಳಂಬೆಳಿಗ್ಗೆ ಆರಂಭವಾದ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಒಂದೇ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಸರಣಿ ಅವಾಂತರಗಳು ಸೃಷ್ಟಿಯಾಗಿವೆ. ರಾಯಚೂರು ತಾಲೂಕಿನ ಇಡಪನೂರಿನಲ್ಲಿ ಹಳ್ಳದ ನೀರು ಕಿರು ಸೇತುವೆ ಮೇಲೆ ಹರಿದಿದ್ದರಿಂದ ಮೀರಾಪುರ ಹಾಗೂ ಯರಗೇರಾ ಮಾರ್ಗದ ರಸ್ತೆ ಸಂಚಾರ ಸ್ಥಗಿತಗೊಂಡಿದೆ.

ನಗರದ ಐಡಿಎಸ್ ಎಂಟಿ ಲೇಔಟ್‌ನಲ್ಲಿ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದಾಗಿ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಗಿದೆ. ಇತ್ತ ಹಳೆ ಆಶ್ರಯ ಕಾಲೋನಿಯಲ್ಲಿ ಸಯ್ಯದಾ ನಸಿಮುನ್ ಎಂಬುವರ ಮನೆ ಸೇರಿದಂತೆ ಹಲವೆಡೆ ಚರಂಡಿ ಮಿಶ್ರಿತ ಮಳೆನೀರು ನುಗ್ಗಿದ್ದು, ನಿವಾಸಿಗಳು ನೀರು ಹೊರಹಾಕಲು ಹರಸಾಹಸ ಪಡುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *