ಆನೇಕಲ್, ಮಾರ್ಚ್ 27: ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಬಿಲ್ವಾರದಳ್ಳಿಯಲ್ಲಿ ಭಾವನೇ ಬಾಮೈದನ ಕೊಲೆ ಮಾಡಿರುವ ಘಟನೆ ಸಂಬಂಧ ಇದೀಗ ಮೃತ ರಂಜಿತ್ ತಾಯಿ ಪ್ರತಿಕ್ರಿಯಿಸಿದ್ದಾರೆ. ಅಳಿಯ ಶ್ರೀನಿವಾಸನೇ ಮಗ ರಂಜಿತ್ನನ್ನು ಕೊಲೆ ಮಾಡಿದ್ದಾನೆ ಎಂದಿರುವ ಅವರು, ‘ನಮ್ಮ ಮಗ 24 ವರ್ಷದವನು, ಅವನಿಗೆ ಜ್ಞಾನ ಇರಲಿಲ್ಲ. ಆದರೆ ಆಕೆಗೆ (ಶ್ರೀನಿವಾಸ್ ತಂಗಿ) ಇಬ್ಬರು ಮಕ್ಕಳಿದ್ದರೂ ಆಕೆ ಆತನ ಹಿಂದೆ ಓಡಿಬಂದಳು. ಬುದ್ಧಿಹೇಳಿದರೂ ಕೇಳಲಿಲ್ಲ. ಅವರು ಅವರ ಹುಡುಗಿಯನ್ನು ಹುಷಾರಾಗಿ ಇಟ್ಟುಕೊಳ್ಳಬೇಕಿತ್ತು’ ಎಂದು ಅಳಲು ತೋಡಿಕೊಂಡಿದ್ದಾರೆ.
ರಂಜಿತ್ನ ಅಕ್ಕ ಪವಿತ್ರಾಳನ್ನು ಶ್ರೀನಿವಾಸ್ಗೆ ಮದುವೆ ಮಾಡಿಕೊಡಲಾಗಿತ್ತು. ಆ ಬಳಿಕ ಶ್ರೀನಿವಾಸ್ ತಂಗಿ ಕೋಮಲ್ ಜೊತೆಗೆ ರಂಜಿತ್ ಸಂಬಂಧ ಹೊಂದಿದ್ದ. ಕೋಮಲ್ ಬೇರೊಬ್ಬರೊಂದಿಗೆ ಮದುವೆಯಾಗಿ ಮಕ್ಕಳಿದ್ದರೂ, ಗಂಡನನ್ನು ಬಿಟ್ಟು ರಂಜಿತ್ ಜೊತೆಗೆ ಪರಾರಿಯಾಗಿದ್ದಳು. ಈ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.
ಬೆಂಗಳೂರು, ಮಾರ್ಚ್ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC)ರಾಷ್ಟ್ರಮಟ್ಟದಲ್ಲಿ ಮತ್ತೊಮ್ಮೆ ತನ್ನ ಸಾಧನೆಯನ್ನು ತೋರಿದೆ. ಇಲೆಟ್ಸ್ ಮೊಬಿಲಿಟಿ ಎಕ್ಸೆಲೆನ್ಸ್ ಅವಾರ್ಡ್ಸ್ನಲ್ಲಿ (Elets Mobility Excellence Awards 2026) ಎರಡು ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.
ಇನೋವೇಶನ್ ಇನ್ ಸಿಟಿಜೆನ್ ಎಂಗೇಜ್ಮೆಂಟ್ ಆ್ಯಂಡ್ ಇನ್ಕ್ಲೂಸಿವ್ ಮೊಬಿಲಿಟಿ ಅಂದರೆ ತಂತ್ರಜ್ಞಾನ ಮತ್ತು ಸಮುದಾಯದ ಸಲಹೆಗಳನ್ನು ಬಳಸಿ, ಸಮಾಜದ ಪ್ರತಿಯೊಬ್ಬರಿಗೂ (ವಿಶೇಷವಾಗಿ ವಿಕಲಚೇತನರು ಮತ್ತು ಹಿರಿಯ ನಾಗರಿಕರಿಗೆ) ಸುಲಭ ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಧ್ವನಿ ಸ್ಪಂದನ ಯೋಜನೆ ಪ್ರಶಸ್ತಿ ಪಡೆದಿದೆ. ಅದರೊಂದಿಗೆ ಔಟ್ಸ್ಟ್ಯಾಂಡಿಂಗ್ ಪಬ್ಲಿಕ್ ಟ್ರಾನ್ಸ್ಪೋರ್ಟ್ ಡಿಜಿಟೈಜೇಶನ್ ಇನಿಶಿಯೇಟಿವ್ ಅಂದರೆ ತಂತ್ರಜ್ಞಾನ ಆಧಾರಿತ ಯೋಜನೆಯು ಸಾರ್ವಜನಿಕ ಸಾರಿಗೆಯ ಡಿಜಿಟಲೀಕರಣದಲ್ಲಿ ಮಾಡಿದ ಅತ್ಯುತ್ತಮ ಸಾಧನೆಗಾಗಿ AWATAR 4.0 ಯೋಜನೆಗೂ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದೆ. ಈ ಯೋಜನೆ ಯುಪಿಐ ಪಾವತಿ ಸೌಲಭ್ಯವನ್ನು ಹೊಂದಿರುವುದರಿಂದ ಪ್ರಯಾಣಿಕರಿಗೆ ಹೆಚ್ಚು ಉಪಯೋಗಿಯಾಗಿದೆ.
ಧ್ವನಿ ಸ್ಪಂದನ ಯೋಜನೆ
ಮೈಸೂರು ನಗರ ಸಾರಿಗೆ ಬಸ್ಸುಗಳಲ್ಲಿನ ಸುಮಾರು 200 ಬಸ್ಸುಗಳಲ್ಲಿ ಜಾರಿಗೆ ತರಲಾದ ಧ್ವನಿ ಸ್ಪಂದನ ಯೋಜನೆ, ದೃಷ್ಟಿಹೀನ ಪ್ರಯಾಣಿಕರಿಗಾಗಿ ವಿಶೇಷವಾಗಿ ರೂಪಿಸಲಾದ ಆನ್‌ಬೋರ್ಡ್ ಗುರುತು ಮತ್ತು ನಾವಿಗೇಶನ್ ವ್ಯವಸ್ಥೆಯಾಗಿದೆ. ಜರ್ಮನಿಯ GIZ ಸಂಸ್ಥೆಯ ಸಹಯೋಗದಲ್ಲಿ ಅನುಷ್ಠಾನಗೊಂಡಿರುವ ಈ ಯೋಜನೆ, ದೃಷ್ಟಿಹೀನರ ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ, ಅವರ ಆತ್ಮವಿಶ್ವಾಸ, ಸುರಕ್ಷತೆ ಮತ್ತು ಸ್ವತಂತ್ರ ಪ್ರಯಾಣವನ್ನು ಉತ್ತೇಜಿಸಿದೆ ಎಂದು ನಿಗಮ ತಿಳಿಸಿದೆ.
ಇನ್ನೊಂದೆಡೆ, AWATAR (Anywhere Anytime Advance Reservation) ಯೋಜನೆ KSRTCಯ ಡಿಜಿಟಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿದ್ದು, ಪ್ರಯಾಣಿಕರು ವೆಬ್ ಹಾಗೂ ಮೊಬೈಲ್ ವೇದಿಕೆಗಳ ಮೂಲಕ ಎಲ್ಲಿಂದ ಬೇಕಾದರೂ, ಯಾವಾಗ ಬೇಕಾದರೂ ಟಿಕೆಟ್ ಕಾಯ್ದಿರಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ. ಒಟ್ಟಾರೆ, ಈ ಎರಡು ಪ್ರಶಸ್ತಿಗಳು KSRTCಯ ನವೀನತೆ ಮತ್ತು ಡಿಜಿಟಲೀಕರಣದ ದಿಸೆಯಲ್ಲಿ ಕೈಗೊಂಡ ಪ್ರಯತ್ನಗಳಿಗೆ ಸಿಕ್ಕ ಮಹತ್ವದ ಮಾನ್ಯತೆಯಾಗಿದೆ.
ಬೆಂಗಳೂರು, ಮಾ.27: ಪ್ರತಿ ವರ್ಷದಂತೆ ಈ ವರ್ಷವೂ ಮಾರ್ಚ್ ಕೊನೆಯ ಶನಿವಾರದಂದು ವಿಶ್ವದಾದ್ಯಂತ ಲಕ್ಷಾಂತರ ಜನರು ಒಂದು ಗಂಟೆಯ ಕಾಲ ದೀಪಗಳನ್ನು ಆರಿಸುವ ಮೂಲಕ ‘ಅರ್ಥ್ ಅವರ್’ ಆಚರಿಸಲಿದ್ದಾರೆ. 2007ರಲ್ಲಿ ಡಬ್ಲ್ಯೂಡಬ್ಲ್ಯೂಎಫ್ (WWF) ಆರಂಭಿಸಿದ ಈ ಅಭಿಯಾನವು ಇಂದು ವಿಶ್ವದ 190ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದ್ದು, ಹವಾಮಾನ ಬದಲಾವಣೆಯ ವಿರುದ್ಧದ ಅತಿದೊಡ್ಡ ಆಂದೋಲನವಾಗಿ ಬೆಳೆದಿದೆ.
ನಾವು ನಮ್ಮ ದೇಹವನ್ನು ಹೇಗೆ ನಡೆಸಿಕೊಳ್ಳುತ್ತೇವೆಯೋ, ಪರಿಸರವೂ ಹಾಗೆಯೇ ಇರುತ್ತದೆ. ಅಲ್ಟ್ರಾ-ಪ್ರೊಸೆಸ್ಡ್ ಆಹಾರ, ಅತಿಯಾದ ಸ್ಕ್ರೀನ್ ಟೈಮ್ ಮತ್ತು ದೈಹಿಕ ಚಟುವಟಿಕೆಯ ಕೊರತೆ ಕೇವಲ ಆರೋಗ್ಯವನ್ನಷ್ಟೇ ಅಲ್ಲ, ಭೂಮಿಯ ಆರೋಗ್ಯವನ್ನೂ ಕೆಡಿಸುತ್ತಿವೆ.ಫ್ಯಾಕ್ಟರಿ ಫಾರ್ಮಿಂಗ್‌ನಿಂದ ಬರುವ ಸಂಸ್ಕರಿಸಿದ ಆಹಾರಗಳು ಬೊಜ್ಜು ಮತ್ತು ಮಧುಮೇಹಕ್ಕೆ ಕಾರಣವಾದರೆ, ಅತ್ತ ಪರಿಸರಕ್ಕೆ ಮಾರಕವಾದ ಹಸಿರುಮನೆ ಅನಿಲಗಳನ್ನು ಹೊರಸೂಸುತ್ತವೆ.
ಅನುಕೂಲಕ್ಕಾಗಿ ನಾವು ಬಳಸುವ ಪ್ಲಾಸ್ಟಿಕ್ ಪ್ಯಾಕೇಜ್ಡ್ ಆಹಾರಗಳು ನಮ್ಮ ಕರುಳಿನ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ಭೂಮಿಯನ್ನೂ ಕಲುಷಿತಗೊಳಿಸುತ್ತಿವೆ. ನಾಳೆ ರಾತ್ರಿ ದೀಪ ಆರಿಸುವುದು ಕೇವಲ ಸಾಂಕೇತಿಕವಲ್ಲ, ಅದು ನಿಮ್ಮ ಮೆದುಳಿಗೂ ಒಳ್ಳೆಯದು.
ಏನಿದು ‘ಅರ್ಥ್ ಅವರ್’?
ಇದು ಹವಾಮಾನ ಬದಲಾವಣೆಯ (Climate Change) ವಿರುದ್ಧ ಹೋರಾಡಲು ಮತ್ತು ಪರಿಸರ ರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಕೈಗೊಂಡಿರುವ ಅಭಿಯಾನ. ಇದರ ಭಾಗವಾಗಿ, ಪ್ರತಿ ವರ್ಷದ ಮಾರ್ಚ್ ತಿಂಗಳ ಕೊನೆಯ ಶನಿವಾರದಂದು ರಾತ್ರಿ 8:30 ರಿಂದ 9:30 ರವರೆಗೆ ಒಂದು ಗಂಟೆಯ ಕಾಲ ಮನೆಯ ಅಥವಾ ಕಚೇರಿಯ ಅನಗತ್ಯ ವಿದ್ಯುತ್ ದೀಪಗಳನ್ನು ಮತ್ತು ಉಪಕರಣಗಳನ್ನು ಆರಿಸಲಾಗುತ್ತದೆ.
ಮೆಲಟೋನಿನ್ ವೃದ್ಧಿ: ಕೃತಕ ಬೆಳಕು, ವಿಶೇಷವಾಗಿ ಸ್ಕ್ರೀನ್‌ಗಳ ‘ಬ್ಲೂ ಲೈಟ್’ ನಿದ್ರೆಗೆ ಪೂರಕವಾದ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸುತ್ತದೆ. ಒಂದು ಗಂಟೆಯ ಕತ್ತಲೆ ನಿಮ್ಮ ನಿದ್ರೆಯ ಚಕ್ರವನ್ನು (Circadian Rhythm) ಸುಧಾರಿಸಲು ಸಹಾಯ ಮಾಡುತ್ತದೆ.
ಒತ್ತಡ ನಿವಾರಣೆ: ನಕ್ಷತ್ರಗಳಿರುವ ಕತ್ತಲ ಆಕಾಶದ ಕೆಳಗೆ ಕುಳಿತುಕೊಳ್ಳುವುದು ಅಥವಾ ಶಾಂತತೆಯನ್ನು ಅನುಭವಿಸುವುದು ದೇಹದಲ್ಲಿನ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ನಾಳೆ ಅರ್ಥ್ ಅವರ್ ಅನ್ನು ಅನಾನುಕೂಲತೆ ಎಂದು ಭಾವಿಸಬೇಡಿ, ಬದಲಾಗಿ ರಚನಾತ್ಮಕ ವಿರಾಮ, ನಿಮ್ಮ ಸ್ವಂತ ಜೀವನಶೈಲಿಯನ್ನು ಪರಿಶೀಲಿಸಲು ಅಂತರ್ನಿರ್ಮಿತ ಕ್ಷಣ ಎಂದು ಭಾವಿಸಿ. ಮೇಣದಬತ್ತಿಯ ಬೆಳಕಿನಲ್ಲಿ ಆರೋಗ್ಯಕರವಾದ ಹಾಗೂ ಸಸ್ಯಹಾರಗಳನ್ನು ಸೇವನೆ ಮಾಡಿ.
ರಂಗಭೂಮಿ (Theatre) ಕಲಾವಿದರಿಗೆ ಬದುಕು ಕಟ್ಟಿಕೊಟ್ಟಿದೆ. ಹೀಗಾಗಿ ಈ ರಂಗಭೂಮಿಯಿಂದ ಕಿರುತೆರೆ ಹಾಗೂ ಹಿರಿತೆರೆಗೆ ಹೋದ ಅದೆಷ್ಟೋ ಕಲಾವಿದರು ಇದ್ದಾರೆ. ಪ್ರಾಚೀನ ಕಾಲದ ಕಲಾ ಪ್ರಕಾರಗಳಲ್ಲಿ ಒಂದಾದ ಈ ರಂಗಭೂಮಿ ಹಿಂದಿನಿಂದಲೂ ಗಂಭೀರ ವಿಷಯಗಳತ್ತ ಬೆಳಕು ಚೆಲ್ಲಿದೆ. ಈ ಹಿನ್ನಲೆಯಲ್ಲಿ ರಂಗಭೂಮಿಗಾಗಿ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ ಮಾರ್ಚ್ 27. ಈ ದಿನದಂದು ವಿಶ್ವ ರಂಗಭೂಮಿ ದಿನವನ್ನು (World TheatreDay) ಆಚರಿಸಿಕೊಂಡು ಬರಲಾಗುತ್ತಿದೆ.
ವಿಶ್ವ ರಂಗಭೂಮಿ ದಿನದ ಇತಿಹಾಸವೇನು?
ವಿಶ್ವ ರಂಗಭೂಮಿ ದಿನದ ಇತಿಹಾಸದತ್ತ ಕಣ್ಣಾಯಿಸಿದರೆ 1961 ರಲ್ಲಿ ಅಂತಾರಾಷ್ಟ್ರೀಯ ರಂಗಭೂಮಿ ಸಂಸ್ಥೆ ಅಥವಾ ಇಂಟರ್‌ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್ (ಐಟಿಐ) ಈ ದಿನದ ಆಚರಣೆಯನ್ನು ಪರಿಚಯಿಸಿತು. ವಿಶ್ವ ರಂಗಭೂಮಿ ದಿನದಂದು ಫ್ರೆಂಚ್ ನಾಟಕಕಾರ ಜೀನ್ ಕಾಕ್ಟೋ ಅವರು ಮೊದಲ ಸಂದೇಶವನ್ನು ನೀಡುವ ಕೆಲಸವನ್ನು ಮಾಡಿದರು. ಅಂದಿನಿಂದ ಪ್ರತಿ ವರ್ಷ ಮಾರ್ಚ್ 27 ರಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಗುತ್ತಿದೆ.
ಆಧುನಿಕತೆಗೆ ತೆರೆದು ಕೊಳ್ಳುತ್ತಿದ್ದಂತೆ ಪ್ರಾಚೀನ ಕಲೆಗಳು ಕಣ್ಮರೆಯಾಗುತ್ತಿದೆ. ಈ ಪ್ರಾಚೀನ ಕಲೆಯಾದ ರಂಗಭೂಮಿಯ ಮಹತ್ವದ ಬಗ್ಗೆ ಅರಿವು ಮೂಡಿಸುವುದು. ರಂಗಭೂಮಿ ಕಲೆಗಳ ಸೌಂದರ್ಯ, ಸಾಂಸ್ಕೃತಿಕ ವಿನಿಮಯ ಮತ್ತು ಸಮಾಜದ ಮೇಲೆ ಅದರ ಪ್ರಭಾವವನ್ನು ಆಚರಿಸುವುದು. ಈ ಕಲೆಯನ್ನೇ ನಂಬಿಕೊಂಡಿರುವ ಕಲಾವಿದರನ್ನು ಗೌರವಿಸುವುದು ಈ ದಿನದ ಮಹತ್ವವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಾಯಣ ಮತ್ತು ನಾಟಕ ಅಕಾಡೆಮಿಗಳು ಈ ದಿನದಂದು ವಿಶೇಷ ರಂಗಚಟುವಟಿಕೆಗಳನ್ನು ಆಯೋಜಿಸುತ್ತವೆ. ನಾಟಕ ಪ್ರದರ್ಶನಗಳು ಹಾಗೂ ಜಾಗೃತಿ ಕಾರ್ಯಾಗಾರಗಳು ನಡೆಯುತ್ತವೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ನಟಿಸಿ ಗಮನ ಸೆಳೆದ ಸಂಜನಾ ಬುರ್ಲಿ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮರ್ಥ್ ಅವರ ಜೊತೆ ಸಂಜನಾ ಮದುವೆ ನಡೆದಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.
ಸಂಜನಾ ಬುರ್ಲಿ ಹಾಗೂ ಸಮರ್ಥ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಫೋಟೋ ಹಾಗೂ ವಿಡಿಯೋಗಳು ವೈರಲ್ ಆಗಿವೆ. ಮಾರ್ಚ್ 25ರಂದು ಇವರ ಮದುವೆ ನಡೆದಿದೆ ಎಂದು ಹೇಳಲಾಗುತ್ತಾ ಇದೆ. ರೆಸಾರ್ಟ್ ಒಂದರಲ್ಲಿ ಮದುವೆ ನಡೆದಿದೆ.
ತಾಳಿ ಕಟ್ಟಿದ ಬಳಿಕ ಸಮರ್ಥ್ ಅವರು ಸಂಜನಾ ಬುರ್ಲಿ ಅವರಿಗೆ ಸಮರ್ಥ್ ಪ್ರೀತಿಯಿಂದ ಮುತ್ತು ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಬಳಿಕ ಸಂಜನಾ ಅವರು ಒಂದು ಸಣ್ಣ ಗ್ಯಾಪ್ ಪಡೆದರು. ಆ ಬಳಿಕ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿಯಲ್ಲಿ ನಟಿಸಿದರು. ಈ ಸೀರಿಯಲ್ ಅನ್ನೂ ಅವರು ಅರ್ಧಕ್ಕೆ ತೊರೆದರು.
ವಿವಾಹ ಆಗುವ ಉದ್ದೇಶದಿಂದಲೇ ಸಂಜನಾ ಬುರ್ಲಿ ಅವರು ‘ಶ್ರೀ ಗಂಧದ ಗುಡಿ’ ಧಾರಾವಾಹಿ ತೊರೆದರು ಎನ್ನಲಾಗಿದೆ. ಈ ಬಗ್ಗೆ ಅವರು ಇತ್ತೀಚೆಗೆ ಸ್ಪಷ್ಟನೆ ಕೊಟ್ಟರು. ಅವರು ಮತ್ತೆ ಹೊಸ ಧಾರಾವಾಹಿಯಲ್ಲಿ ನಟಿಸುತ್ತಾರಾ ಕಾದು ನೋಡಬೇಕಿದೆ.
ಭಾರತೀಯ ಸಂಸ್ಕೃತಿಯಲ್ಲಿ ವೃಕ್ಷಗಳಿಗೆ ವಿಶೇಷ ಸ್ಥಾನಮಾನವಿದೆ. ವೃಕ್ಷೋ ರಕ್ಷತಿ ರಕ್ಷಿತಃ ಎಂಬ ಮಾತು ಮರಗಳ ಸಂರಕ್ಷಣೆ ಮತ್ತು ಅದರ ಪ್ರಯೋಜನಗಳನ್ನು ಸಾರುತ್ತದೆ. ಆಹಾರ, ನೆರಳು, ವಾಸಕ್ಕೆ ಸಹಕಾರಿ ಹಾಗೂ ಔಷಧೀಯ ಗುಣಗಳನ್ನು ಹೊಂದಿರುವ ವೃಕ್ಷಗಳ ಜೊತೆಗೆ, ಕೆಲವು ವೃಕ್ಷಗಳನ್ನು ಪೂಜನೀಯ ಭಾವದಿಂದ ಕಾಣಲಾಗುತ್ತದೆ. ಅವುಗಳಲ್ಲಿ ಅರಳೀ ಮರದ ಜೊತೆಗೆ ತುಳಸಿ ಗಿಡವು ಅಗ್ರ ಪಂಕ್ತಿಯಲ್ಲಿ ನಿಲ್ಲುತ್ತದೆ. ಪ್ರತಿಯೊಂದು ಮನೆಯಲ್ಲೂ ತುಳಸಿ ಗಿಡ ಇರಲೇಬೇಕು ಎಂಬ ನಂಬಿಕೆಯಿದೆ. ತುಳಸಿ ಗಿಡವನ್ನು ಕೇವಲ ಬೆಳೆಸುವುದು, ನೀರು ಹಾಕುವುದು, ಅಥವಾ ವಿವಾಹ ಮಾಡಿಸುವುದು ಮಾತ್ರವಲ್ಲದೆ, ಅದರ ಸುತ್ತ ಪ್ರದಕ್ಷಿಣೆ ಮಾಡುವ ವಿಶೇಷ ತಂತ್ರವೂ ಇದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಬೆಳಗಿನ ಜಾವ ಕೇವಲ ಐದು ನಿಮಿಷಗಳ ಕಾಲ ತುಳಸಿ ಗಿಡಕ್ಕೆ ಪ್ರದಕ್ಷಿಣೆ ಮಾಡುವುದರಿಂದ ಅಪಾರ ಫಲಗಳು ಲಭಿಸುತ್ತವೆ. ಆದಾಗ್ಯೂ, 11 ಪ್ರದಕ್ಷಿಣೆಗಳ ಮಿತಿಯನ್ನು ಕಾಯ್ದುಕೊಳ್ಳಬೇಕು. ಪ್ರತಿಯೊಂದು ಪ್ರದಕ್ಷಿಣೆಯು ವಿಭಿನ್ನ ಹಾಗೂ ಗಹನವಾದ ಪ್ರಯೋಜನಗಳನ್ನು ನೀಡುತ್ತದೆ.
ಪ್ರತೀ ಸುತ್ತಿನ ಹಿಂದಿನ ಮಹತ್ವ ಇಲ್ಲಿ ತಿಳಿಯಿರಿ
ಒಂದು ಪ್ರದಕ್ಷಿಣೆ (ಗೋಪ ಪ್ರದಕ್ಷಿಣೆ): ತುಳಸಿಗೆ ಒಂದು ಪ್ರದಕ್ಷಿಣೆ ಮಾಡಿ ನಮಸ್ಕರಿಸಿದರೆ, ಸಾಕ್ಷಾತ್ ಸ್ಥಿತಿಕಾರಕನಾದ ವಿಷ್ಣುವು ನಮ್ಮ ಕಡೆ ಕಣ್ಬಿಡುತ್ತಾನೆ, ಗೋವಿಂದನು ನಮ್ಮ ಮೇಲೆ ಅನುಗ್ರಹವನ್ನು ತೋರುತ್ತಾನೆ ಎಂದು ಹೇಳಲಾಗುತ್ತದೆ.
ಎರಡು ಪ್ರದಕ್ಷಿಣೆಗಳು: ಈ ಪ್ರದಕ್ಷಿಣೆಗಳು ವೈಕುಂಠದ ಹಾದಿಯನ್ನು ಸ್ಪಷ್ಟಪಡಿಸುತ್ತವೆ, ಭಕ್ತರಿಗೆ ಮೋಕ್ಷ ಮಾರ್ಗವನ್ನು ತೋರಿಸುತ್ತವೆ ಎಂದು ನಂಬಲಾಗಿದೆ.
ಮೂರು ಪ್ರದಕ್ಷಿಣೆಗಳು: ಮನಸ್ಸಿನ ಶುದ್ಧಿಗೆ ಇದು ಅತ್ಯಂತ ಪರಿಣಾಮಕಾರಿ. ದೈವಿಕ ಬಲ ಹೊಂದಿರುವವರ ಮುಖ, ಚಟುವಟಿಕೆಗಳು ಮತ್ತು ಮಾತುಗಳು ವಿಶೇಷವಾಗಿರುವಂತೆ, ಮೂರು ಪ್ರದಕ್ಷಿಣೆಗಳು ಮನಸ್ಸನ್ನು ನಿರ್ಮಲಗೊಳಿಸುತ್ತವೆ.
ನಾಲ್ಕು ಪ್ರದಕ್ಷಿಣೆಗಳು: ಸಂಪತ್ತಿನ ಅನುಗ್ರಹಕ್ಕೆ ಇದು ಸಹಕಾರಿ. ಆರ್ಥಿಕ ಅಡೆತಡೆಗಳು ನಿವಾರಣೆಯಾಗಿ ಸಂಪತ್ತು ಹರಿದು ಬರಲು ಮಾರ್ಗವಾಗುತ್ತದೆ.
ಐದು ಪ್ರದಕ್ಷಿಣೆಗಳು: ಸಂತಾನದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಲು ಐದು ಪ್ರದಕ್ಷಿಣೆಗಳು ನೆರವಾಗುತ್ತವೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚುತ್ತದೆ.
ಆರು ಪ್ರದಕ್ಷಿಣೆಗಳು: ದೀರ್ಘಾಯುಷ್ಯ ಪ್ರಾಪ್ತಿಗಾಗಿ ಆರು ಪ್ರದಕ್ಷಿಣೆಗಳನ್ನು ಮಾಡಲಾಗುತ್ತದೆ. ಆರೋಗ್ಯ ಮತ್ತು ದೀರ್ಘ ಜೀವನಕ್ಕೆ ಇದು ಶುಭಕಾರಿ.
ಏಳು ಪ್ರದಕ್ಷಿಣೆಗಳು: ಜ್ಯೋತಿಷ್ಯದಲ್ಲಿ ಕಳತ್ರ ಭಾವ ಎಂದು ಕರೆಯಲ್ಪಡುವ ಕುಟುಂಬ ನಿರ್ವಹಣೆಗೆ ಏಳು ಪ್ರದಕ್ಷಿಣೆಗಳು ಶಕ್ತಿ ನೀಡುತ್ತವೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ.
ಎಂಟು ಪ್ರದಕ್ಷಿಣೆಗಳು: ಏಕಾಗ್ರತೆ ಹೆಚ್ಚಾಗಿ, ಮನಸ್ಸಿನಲ್ಲಿ ಸಾವಿನ ಕುರಿತ ಆತಂಕಗಳು ದೂರವಾಗುತ್ತವೆ. ಜೀವನದ ಬಗ್ಗೆ ಧನಾತ್ಮಕ ದೃಷ್ಟಿಕೋನ ಮೂಡುತ್ತದೆ.
ಒಂಬತ್ತು ಪ್ರದಕ್ಷಿಣೆಗಳು: ಎಲ್ಲಾ ರೀತಿಯ ರೋಗರುಜಿನಗಳು ದೂರವಾಗಿ, ಹಿಂದಿನ ಜನ್ಮಗಳ ಕರ್ಮಫಲದ ಪ್ರಭಾವ ಕಡಿಮೆಯಾಗುತ್ತದೆ. ಆರೋಗ್ಯ ಮತ್ತು ಶಾಂತಿಗೆ ಇದು ಸಹಕಾರಿ.
ಹತ್ತು ಪ್ರದಕ್ಷಿಣೆಗಳು: ಸತ್ಕರ್ಮಗಳನ್ನು, ಧರ್ಮ ಕಾರ್ಯಗಳನ್ನು ಮಾಡಲು ಮನಸ್ಸನ್ನು ಪ್ರೇರೇಪಿಸುತ್ತದೆ. ಸಮಾಜ ಮತ್ತು ವೈಯಕ್ತಿಕ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುತ್ತದೆ.
ಹನ್ನೊಂದು ಪ್ರದಕ್ಷಿಣೆಗಳು: ವಿವಾಹ, ಮನೆ ಕಟ್ಟಿಸುವಿಕೆ, ಸಾಲ ಮುಕ್ತಿ ಮುಂತಾದ ನಿಮ್ಮ ಅಭೀಷ್ಟಗಳು ಈಡೇರುತ್ತವೆ. ಇದು ಇಷ್ಟಾರ್ಥ ಸಿದ್ಧಿಗೆ ಕಾರಣವಾಗುತ್ತದೆ.
ಈ ಪ್ರದಕ್ಷಿಣೆಯನ್ನು ಪ್ರತಿದಿನ ಕನಿಷ್ಠ 48 ದಿನಗಳ ಕಾಲ ನಿರಂತರವಾಗಿ ಮಾಡಿದರೆ ಸಾಕಷ್ಟು ಶುಭ ಫಲಗಳು ದೊರೆಯುತ್ತವೆ ಎಂದು ನಂಬಲಾಗಿದೆ. ನಿಮ್ಮ ಮನೆಯಲ್ಲಿರುವ ತುಳಸಿ ಗಿಡವು ದೇವಸ್ಥಾನವಿದ್ದಂತೆ, ಅಲ್ಲಿ ದೇವರೇ ನೆಲೆಸಿರುತ್ತಾನೆ ಎಂಬ ಭಾವನೆಯಿಂದ ಈ ಆಚರಣೆಯನ್ನು ಕೈಗೊಳ್ಳಬೇಕು ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 27: ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಪ್ರತಿ ಲೀಟರ್ ಪೆಟ್ರೋಲ್‌ಗೆ 3 ರೂಪಾಯಿ ಮತ್ತು ಡೀಸೆಲ್ ಸುಂಕ ಶೂನ್ಯಕ್ಕೆ ಇಳಿದಿದೆ. ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಯುದ್ಧ ಮತ್ತು ಅದರ ಪರಿಣಾಮವಾಗಿ ಟೆಹ್ರಾನ್ ಹಾರ್ಮುಜ್ ಜಲಸಂಧಿಯ ಮೇಲೆ ಹೇರಿದ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನಿಂದಾಗಿ ಬೆಲೆ ಏರಿಕೆಯಾಗುವ ಭೀತಿಯ ಮಧ್ಯೆ ಈ ಕಡಿತ ಮಾಡಲಾಗಿದೆ.
ಪೆಟ್ರೋಲ್: ಲೀಟರ್‌ಗೆ 13 ರೂ.ನಿಂದ 3 ರೂ.ಗೆ ಇಳಿಸಲಾಗಿದೆ. ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಮತ್ತು ಅಮೆರಿಕ-ಇರಾನ್ ಯುದ್ಧದ ಬೆದರಿಕೆಯಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 114 ಡಾಲರ್ಗಿಂತ ಹೆಚ್ಚಿದ್ದವು. ಡೀಸೆಲ್ ಮೇಲಿನ ಸುಂಕ 10 ರೂ.ನಿಂದ ಶೂನ್ಯಕ್ಕೆ ಇಳಿಕೆಯಾಗಿದೆ.
‘ಧುರಂಧರ್ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು.
ಪಾರ್ವತಮ್ಮ ರಾಜ್ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್ಕುಮಾರ್, ವಿಜಯಲಕ್ಷ್ಮೀ, ಶ್ರೀನಾಥ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿ ಮೂರು ದಶಕ ಕಳೆಯುತ್ತಾ ಬಂದಿದೆ. ಈ ಸಿನಿಮಾ ಸಂಪೂರ್ಣವಾಗಿ ಭಯೋತ್ಪಾದನೆಯ ಮೇಲೆ ಇದೆ. ಈ ಚಿತ್ರದ ದೃಶ್ಯವೊಂದು ಈಗ ವೈರಲ್ ಆಗಿದೆ.
ಸಿಬಿಐ ಮುಖ್ಯಸ್ಥ (ಶ್ರೀನಾಥ್) ಗುರು (ರಾಘವೇಂದ್ರ ರಾಜ್ಕುಮಾರ್) ಬಳಿ ಬಂದು ಭಯೋತ್ಪಾದಕ ಜೊತೆ ಸೇರುವಂತೆ ಕೋರುತ್ತಾನೆ. ಭಯೋತ್ಪಾದಕರ ಜೊತೆ ಸೇರಿ ಅವರಲ್ಲಿ ಒಬ್ಬರಾಗಿ ಭಯೋತ್ಪಾದಕ ಪ್ಲ್ಯಾನ್ ನಾಶ ಮಾಡುವಂತೆ ಸಿಬಿಐ ಮುಖ್ಯಸ್ಥ ಕೋರಿಕೆ ಇಡುತ್ತಾನೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಅನೇಕರು ‘ಧುರಂಧರ್’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.
In 1998, I think this is the first movie related to national security, infiltration and terr0r!sts. The story plot was so GOATed and everyone were shocked about the climax just like #Dhurandhar2TheRevenge
Swastik remains as one of the cult movies from KFI. It deserved IH status https://t.co/wPFML6hOoT
ಧುರಂಧರ್ ಸಿನಿಮಾದಲ್ಲೂ ರಣವೀರ್ ಸಿಂಗ್ ಬಳಿ ಬರುವ ಆರ್ ಮಾಧವನ್ ಇದೇ ರೀತಿಯ ಬೇಡಿಕೆ ಇಡುತ್ತಾನೆ. ಈ ದೃಶ್ಯಕ್ಕೆ ಹೋಲಿಕೆ ಇರುವುದರಿಂದ ಅನೇಕರು ‘ಸ್ವಸ್ತಿಕ್’ ಚಿತ್ರವನ್ನು ‘ಧುರಂಧರ್’ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ‘ಸ್ವಸ್ತಿಕ್’ ಚಿತ್ರದಲ್ಲಿ ಸೇನಾ ಮುಖ್ಯಸ್ಥನೇ ವಿಲನ್ ಆಗಿರುತ್ತಾನೆ. ಉಗ್ರರ ಜೊತೆ ಸೇರಿ ಆತನೇ ಕೆಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಆದರೆ,‘ಧುರಂಧರ್ 2’ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ.
ಈಗ ಧುರಂಧರ್ ರಿಲೀಸ್ ಬೆನ್ನಲ್ಲೇ ಈ ಸಿನಿಮಾದ ಕ್ಲಿಪ್ ವೈರಲ್ ಆಗುತ್ತಿದೆ. ಸುಮಾರು 30 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಅಷ್ಟು ಬ್ರಿಲಿಯಂಟ್ ಆಗಿ ಸಿನಿಮಾ ಮಾಡಿದ್ದರು ಎಂದು ಅನೇಕರು ಹೇಳಿದ್ದಾರೆ.
ಆಂಧ್ರಪ್ರದೇಶ, ಮಾರ್ಚ್ 27: ಮಾಂಸ(Meat) ಬೇಯಲಿಲ್ಲ ಎಂದ್ರೆ ಯಾರಾದ್ರೂ ಪೊಲೀಸ್ ಠಾಣೆಗೆ ಹೋಗ್ತಾರಾ ಎಂದು ನೀವು ಪ್ರಶ್ನೆ ಕೇಳಬಹುದು. ಇಲ್ಲೊಬ್ಬ ವ್ಯಕ್ತಿ ಇಪ್ಪತ್ತು ಬಾರಿ ಬೇಯಿಸಿದರೂ ಬೇಯದ ಮಾಂಸವಿರುವ ಕುಕ್ಕರ್ ಹಿಡಿದು ವ್ಯಕ್ತಿಯೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಎನ್ಡಿಟಿವಿ ವರದಿ ಪ್ರಕಾರ, ತಡಿಪತ್ರಿಯ ಪುಟ್ಲೂರು ರಸ್ತೆಯ ನಿವಾಸಿ ಸೋದಲ ಹಾಜಿ ಸ್ಥಳೀಯ ಮಾರಾಟಗಾರರಿಂದ ಮೇಕೆ ತಲೆಯ ಮಾಂಸವನ್ನು ಖರೀದಿಸಿದ್ದರು.
ಸ್ಥಳೀಯವಾಗಿ ತಲಾಕುರ ಎಂದು ಕರೆಯಲ್ಪಡುವ ಸಾಂಪ್ರದಾಯಿಕ ತಲೆ ಮಾಂಸದ ಕರಿಯನ್ನು ತಯಾರಿಸಲು ಉತ್ಸುಕರಾಗಿದ್ದ ಹಾಜಿ, ಮಾಂಸವನ್ನು ಬೇಯಿಸಲು ಪ್ರಾರಂಭಿಸಿದರು. ಸುಮಾರು 20 ಪ್ರಯತ್ನಗಳ ನಂತರವೂ, ಮಾಂಸವು ಗಟ್ಟಿಯಾಗಿಯೇ ಉಳಿದಿತ್ತು. ಗೊಂದಲಕ್ಕೊಳಗಾದ ಮತ್ತು ಹತಾಶನಾದ ಹಾಜಿ, ಇಡೀ ಅಡುಗೆ ಪಾತ್ರೆಯನ್ನು ಸಾಕ್ಷಿಯಾಗಿ ತೆಗೆದುಕೊಂಡು ನೇರವಾಗಿ ಪೊಲೀಸ್ ಠಾಣೆಗೆ ಹೋಗಿದ್ದಾರೆ. ಒಮ್ಮೆ ಈ ದೂರಿನ ಬಗ್ಗೆ ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ಆಶ್ಚರ್ಯಚಕಿತರಾದರು ಆದರೆ ಸಮಸ್ಯೆಯನ್ನು ತನಿಖೆ ಮಾಡಲು ಒಪ್ಪಿಕೊಂಡರು.
ಮಾಂಸ ಮಾರಾಟಗಾರರೊಂದಿಗೆ ನಡೆದ ಚರ್ಚೆ ಬಳಿಕ, ಪಟ್ಟಣ ವೃತ್ತ ನಿರೀಕ್ಷಕ ಆನಂದ ರಾವ್ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ತಕ್ಷಣವೇ ಬಗೆಹರಿಸಿದರು.ಮಾರಾಟಗಾರರು ಅದೇ ಪ್ರಮಾಣದ ತಾಜಾ, ಖಾದ್ಯ ಮಟನ್‌ನೊಂದಿಗೆ ಬದಲಿಯನ್ನು ಒದಗಿಸಲು ಒಪ್ಪಿಕೊಂಡರು.
ಆ ಮಾಂಸವು ಕತ್ತರಿಸಿಟ್ಟು ಬು ಸಮಯ ಕಳೆದಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ. ಇದು ಅನೇಕ ಪ್ರಯತ್ನಗಳ ಹೊರತಾಗಿಯೂ ಅದು ಗಟ್ಟಿಯಾಗಿ ಮತ್ತು ಬೇಯಿಸದೆ ಇರುವುದಕ್ಕೆ ಕಾರಣವಾಗಿರಬಹುದು. ಮಾರಾಟಗಾರರು ಸ್ಪಷ್ಟ ವಿವರಣೆಯನ್ನು ನೀಡಲಿಲ್ಲ, ಆದರೆ ಪ್ರಾಣಿಯ ವಯಸ್ಸು ಕಾರಣ ಎಂದು ಹೇಳಲಾಗುತ್ತಿದೆ.
ರಾಯಚೂರು, ಮಾರ್ಚ್ 27: ನಯಾರಾ ಕಂಪನಿಯ ಪೆಟ್ರೋಲ್ ಬಂಕ್‌ಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಇದೀಗ ಆ ಕಂಪನಿ ಬಂಕ್ಗಳತ್ತ ಗ್ರಾಹಕರೇ ಸುಳಿಯುತ್ತಿಲ್ಲ. ಪೆಟ್ರೋಲ್ ಮೇಲೆ ಪ್ರತಿ ಲೀಟರ್‌ಗೆ 5 ರೂ. ಮತ್ತು ಡೀಸೆಲ್ ಮೇಲೆ 3 ರೂ. ಏರಿಕೆಯಾಗಿದೆ. ಈ ಏಕಾಏಕಿ ದರ ಹೆಚ್ಚಳದಿಂದಾಗಿ ಬೈಕ್ ಸವಾರರು ನಯಾರಾ ಪೆಟ್ರೋಲ್ ಬಂಕ್‌ಗಳಿಂದ ದೂರ ಸರಿಯುತ್ತಿದ್ದಾರೆ. ಬಂಕ್‌ನತ್ತ ಬರುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಸದ್ಯ ನಯಾರಾ ಪೆಟ್ರೋಲ್ ಬಂಕ್‌ಗಳಿಗೆ ಹೆದ್ದಾರಿ ಮಾರ್ಗವಾಗಿ ಹೋಗುವವರು ಮಾತ್ರ ಭೇಟಿ ನೀಡುತ್ತಿದ್ದಾರೆ. ಉಳಿದ ಬೈಕ್ ಸವಾರರು ನಗರದೊಳಗಿನ ಇತರ ಪೆಟ್ರೋಲ್ ಬಂಕ್‌ಗಳ ಕಡೆಗೆ ಮುಖ ಮಾಡಿದ್ದು, ಅಲ್ಲಿ ಸಂದಣಿ ಹೆಚ್ಚಾಗಿದೆ. 300 ರೂಪಾಯಿಗೆ 3 ಲೀಟರ್ ಪೆಟ್ರೋಲ್ ಸಿಗುತ್ತಿದ್ದ ಜಾಗದಲ್ಲಿ, ಈಗ 315 ರೂಪಾಯಿಗೆ ಕೇವಲ 2.8 ಲೀಟರ್ ಸಿಗುತ್ತಿದೆ ಎಂದು ಬೈಕ್ ಸವಾರರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ