World Water Day 2026: ನೀರನ್ನು ಮಿತವಾಗಿ ಬಳಸುವ ಮೂಲಕ ಜೀವಜಲವನ್ನು ಸಂರಕ್ಷಿಸೋಣ
ನೀರು (Water) ಜೀವನದ ಅಡಿಪಾಯ. ಭೂಮಿಯ ಮೇಲಿರುವ ಜೀವ ಸಂಕುಲಗಳ ಜೀವನವು ನೀರಿನ ಮೇಲೆಯೇ ಅವಲಂಬಿತವಾಗಿದೆ. ನೀರಿಲ್ಲದೆ ಬದುಕನ್ನು ಕಲ್ಪಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಹೌದು ನಮ್ಮ ದಿನನಿತ್ಯದ ಜೀವನ ಆರಂಭವಾಗುವುದೇ ನೀರಿನಿಂದ. ನಾಗರಿಕತೆಗಳು ಅಭಿವೃದ್ಧಿ ಹೊಂದಿರುವುದು ಸಹ ನೀರಿನ ಮೂಲಗಳ ಬಳಿ. ಹೀಗೆ ನೀರು ಜೀವನಕ್ಕೆ ಜನ್ಮ ನೀಡಿದ್ದು ಮಾತ್ರವಲ್ಲದೆ ಸಂಸ್ಕೃತಿ, ಆರ್ಥಿಕತೆ ಮತ್ತು ಸಮಾಜವನ್ನು ಸಹ ರೂಪಿಸಿತು. ಆದರೆ ಇಂದು ಇದೇ ನೀರಿನ ಮೂಲ ಮಾನವನ ಸ್ವಾರ್ಥದ ಕಾರಣದಿಂದಾಗಿ ಅಪಾಯದ ಅಂಚಿನಲ್ಲಿನಲ್ಲಿದೆ. ನದಿ, ಕೆರೆಗಳಂತಹ ಸಿಹಿ…