Headlines

ವಿವಿಧ ಬ್ಯಾಂಕುಗಳಲ್ಲಿ ಯುಪಿಐ ಆಧಾರಿತ ಕ್ಯಾಷ್ ವಿತ್​ಡ್ರಾಯಲ್ ನಿಯಮಗಳಲ್ಲಿ ಬದಲಾವಣೆ

ನವದೆಹಲಿ, ಮಾರ್ಚ್ 22: ಎಟಿಎಂಗಳಲ್ಲಿ ಕ್ಯಾಷ್ ವಿತ್​ಡ್ರಾ ಮಾಡಲು ನಿರ್ದಿಷ್ಟ ಮಿತಿ, ಶುಲ್ಕ ಇತ್ಯಾದಿ ನಿರ್ಬಂಧಗಳಿವೆ. ವಿವಿಧ ಬ್ಯಾಂಕುಗಳು ತಮ್ಮ ಈ ಎಟಿಎಂ ಶುಲ್ಕಗಳನ್ನು ಆಗಾಗ್ಗೆ ಪರಿಷ್ಕರಿಸುತ್ತವೆ. ಮುಂದಿನ ತಿಂಗಳಿಂದ ಹೊಸ ಎಟಿಎಂ ನಿಯಮಗಳು ಜಾರಿಗೆ ಬರಲಿವೆ. ಏಪ್ರಿಲ್ 1ರಿಂದ ಬರಲಿರುವ ಈ ನಿಯಮ ಬದಲಾವಣೆಗಳಲ್ಲಿ, ದಿನದ ವಿತ್​ಡ್ರಾಯಲ್ ಮಿತಿ, ಯುಪಿಐ ಆಧಾರಿತ ಕ್ಯಾಷ್ ವಿತ್​ಡ್ರಾಯಲ್ ಇತ್ಯಾದಿ ಒಳಗೊಂಡಿವೆ. ಯುಪಿಐ ಆಧಾರಿತ ಕ್ಯಾಷ್ ವಿತ್​ಡ್ರಾಯಲ್​ಗೆ ಎಚ್​ಡಿಎಫ್​ಸಿ ಬ್ಯಾಂಕ್​ನಿಂದ ಶುಲ್ಕ ಎಚ್​ಡಿಎಫ್​ಸಿ ಬ್ಯಾಂಕ್ ಈಗ ಎಟಿಎಂ ವಿತ್​ಡ್ರಾಯಲ್ ನಿಯಮಗಳಲ್ಲಿ…

Read More

ನಿಮ್ಮ ಜೊತೆ ಕೆಲಸ ಮಾಡುವಾಸೆ: ರಿಷಬ್ ಎದುರು ಬೇಡಿಕೆ ಇಟ್ಟ ವಿಜಯ್

ವಿಜಯ್ ಸೇತುಪತಿ (Vijay Sethupathi) ತಮಿಳಿನ ಸ್ಟಾರ್ ನಟ, ತಮಿಳು ಮಾತ್ರವೇ ಅಲ್ಲದೆ ತೆಲುಗು, ಹಿಂದಿ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಪೋಷಕ ನಟ, ನಾಯಕ ನಟ, ವಿಲನ್ ಅವರು ಮಾಡದ ಪಾತ್ರಗಳಿಲ್ಲ. ಭಾರತದ ಅತ್ಯುತ್ತಮ ನಟರಲ್ಲಿ ವಿಜಯ್ ಸೇತುಪತಿ ಸಹ ಒಬ್ಬರು. ಇತ್ತೀಚೆಗೆ ವೇದಿಕೆಯೊಂದರಲ್ಲಿ ರಿಷಬ್ ಶೆಟ್ಟಿ ಅವರನ್ನು ಭೇಟಿಯಾದ ವಿಜಯ್ ಸೇತುಪತಿ, ಎಲ್ಲರೆದುರು, ‘ನನಗೆ ನಿಮ್ಮ ಜೊತೆ ನಟಿಸುವ ಆಸೆಯಿದೆ’ ಎಂದಿದ್ದಾರೆ. ವಿಜಯ್ ಅವರ ಬೇಡಿಕೆಗೆ ರಿಷಬ್ ಶೆಟ್ಟಿ ಸಹ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಗಲಾಟ ಗ್ಲೋರಿಯಸ್ ಐಕಾನ್ಸ್…

Read More

PSL 2026: ಪಾಕಿಸ್ತಾನ ಸೂಪರ್ ಲೀಗ್ ತೊರೆದ 8 ವಿದೇಶಿ ಆಟಗಾರರು

2026 ರ ಐಪಿಎಲ್ (PSL 2026) ಇದೇ ಮಾರ್ಚ್​ 28 ರಿಂದ ಆರಂಭವಾಗುತ್ತಿದೆ. ಬಿಸಿಸಿಐ (BCCI) ಕೂಡ ಇದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇತ್ತ ಐಪಿಎಲ್​ಗೆ ಟಕ್ಕರ್ ಕೊಡುವ ಸಲುವಾಗಿ ಪಾಕಿಸ್ತಾನದಲ್ಲಿ ಪಾಕಿಸ್ತಾನ ಸೂಪರ್ ಲೀಗ್ (PSL 2026) ಕೂಡ ಆರಂಭವಾಗುತ್ತಿದೆ. ಅದು ಕೂಡ ಐಪಿಎಲ್ ಆರಂಭವಾಗುವುದಕ್ಕಿಂತ ಎರಡು ದಿನ ಮೊದಲು. ಅಂದರೆ ಐಪಿಎಲ್ ಮಾರ್ಚ್​ 28 ರಿಂದ ಆರಂಭವಾದರೆ, ಪಿಎಸ್​ಎಲ್​ ಮಾರ್ಚ್​ 26 ರಿಂದ ಆರಂಭವಾಗುತ್ತಿದೆ. ಆದಾಗ್ಯೂ ಲೀಗ್ ಆರಂಭಕ್ಕೂ ಮುನ್ನವೇ ಪಿಎಸ್ಎಲ್​​ಗೆ ವಿದೇಶಿ ಆಟಗಾರರ…

Read More

ಸರ್ಕಾರದ ಮುಖ್ಯಸ್ಥರಾಗಿ ಸುದೀರ್ಘ ಸೇವೆ ಸಲ್ಲಿಸಿದ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಪ್ರಧಾನಿ ಮೋದಿ

ನವದದೆಹಲಿ, ಮಾರ್ಚ್​ 22: ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತೀಯ ರಾಜಕೀಯ ಇತಿಹಾಸದಲ್ಲಿ ಅಭೂತಪೂರ್ವ ಮೈಲಿಗಲ್ಲು ಸಾಧಿಸಿದ್ದಾರೆ. ಅವರು ಭಾರತದಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಅವರು ಈ ಐತಿಹಾಸಿಕ ಸಾಧನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಹಂಚಿಕೊಂಡು ಪ್ರಧಾನಿಯನ್ನು ಅಭಿನಂದಿಸಿದ್ದಾರೆ. ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಅವರ 8930 ದಿನಗಳ ಅಧಿಕಾರಾವಧಿಯನ್ನು ಪ್ರಧಾನಿ ಮೋದಿ ಮೀರಿಸಿದ್ದಾರೆ. ಸರ್ಕಾರದ ಮುಖ್ಯಸ್ಥರಾಗಿ…

Read More

ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಖ್ಯಾತ ನಟ ಅನಿರುದ್ಧ ಜತ್ಕರ್

ನಟ ಅನಿರುದ್ಧ ಜತ್ಕರ್ (Aniruddha Jatkar) ಅವರು ಕಿರುತೆರೆ ಮತ್ತು ಸಿನಿಮಾಗಳಲ್ಲಿ ಹೆಸರು ಮಾಡಿದ್ದಾರೆ. ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿರುವ ಅವರು ಸಾಮಾಜಿಕ ಕಳಕಳಿ ಕೂಡ ಹೊಂದಿದ್ದಾರೆ. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಬಗ್ಗೆ ಜನರಲ್ಲಿ ಅವರು ಜಾಗೃತಿ ಮೂಡಿಸುತ್ತಾರೆ. ಇತ್ತೀಚೆಗೆ ಅವರು ಬೆಂಗಳೂರಿನಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ (Cleanliness Drive) ಭಾಗಿಯಾದರು. ಆ ಸಂದರ್ಭದ ವಿಡಿಯೋ ಇಲ್ಲಿದೆ. ವಿಧಾನ ಸೌಧದ ಮುಂಭಾಗ ಸ್ವಚ್ಛ ಮಾಡುವ ಮೂಲಕ ಇತರರಿಗೂ ಮಾದರಿ ಆಗಿದ್ದಾರೆ. ಅನಿರುದ್ಧ ಜತ್ಕರ್ ಅವರು ತಮ್ಮ ಸೋಶಿಯಲ್…

Read More

ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಯುವಕನ ಬರ್ಬರ ಕೊಲೆ; ಹತ್ಯೆಯಾದವನ ಮೇಲಿವೆ 10ಕ್ಕೂ ಹೆಚ್ಚು ಕೇಸ್​ಗಳು!

ಬೆಂಗಳೂರು, ಮಾರ್ಚ್​ 22: ನಗರದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದ್ದು, ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಯುವಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ  (Murder) ಮಾಡಲಾಗಿದೆ. ಇಂದು (ಮಾ.22)ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಿರಣ್ (25) ಎಂಬ ಯುವಕನನ್ನು ದುಷ್ಕರ್ಮಿಗಳು ತಲೆ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಹತ್ಯೆಗೈದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆಯ ದ್ವೇಷಕ್ಕೆ ನಡೀತಾ ಕೊಲೆ?…

Read More

Optical Illusion: ಜಸ್ಟ್‌ 10 ಸೆಕೆಂಡುಗಳಲ್ಲಿ ಹೂವುಗಳ ನಡುವೆ ಇರುವ ಗಂಟೆಯನ್ನು ಕಂಡು ಹಿಡಿಯಬಲ್ಲಿರಾ

ಆಪ್ಟಿಕಲ್‌ ಇಲ್ಯೂಷನ್‌ (optical illusion) ಹಾಗೂ ಬ್ರೈನ್ ಟೀಸರ್ ನಂತಹ ಒಗಟಿನ ಚಿತ್ರಗಳೇ ಹಾಗೆ. ಕ್ಷಣಾರ್ಧದಲ್ಲಿ ಈ ಒಗಟು ಬಿಡಿಸಿ ಉತ್ತರ ಕಂಡುಕೊಳ್ಳಲು ಅಸಾಧ್ಯ. ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸಲು ಹೋಗಿ ಕೈ ಚೆಲ್ಲಿ ಕುಳಿತುಕೊಳ್ಳುತ್ತಾರೆ. ಆದರೆ ಈ ಟ್ರಿಕ್ಕಿ ಚಿತ್ರಗಳು ನಿಮ್ಮ ದೃಷ್ಟಿ ಸಾಮರ್ಥ್ಯ ಹಾಗೂ ಯೋಚನಾ ಸಾಮರ್ಥ್ಯ ಪರೀಕ್ಷಿಸಲು ಸಹಾಯ ಮಾಡುತ್ತವೆ. ಈ ಉದ್ಯಾನವನದಲ್ಲಿ ಹೂವುಗಳ ನಡುವೆ ಗಂಟೆಯೊಂದಿದೆ. ನೀವು ಒಗಟು ಬಿಡಿಸೋದ್ರಲ್ಲಿ ಪಂಟಾರಾಗಿದ್ರೆ ಕೇವಲ ಹತ್ತು ಒಳಗೆ ಈ ವಸ್ತುವನ್ನು ಪತ್ತೆ…

Read More

ಮೂಡಬಿದ್ರೆ ಇನ್ಸ್​ಪೆಕ್ಟರ್ ಕಾಮಕಾಂಡ ಪ್ರಕರಣ: ಸಂತ್ರಸ್ತೆಗೆ ಜೀವ ಬೆದರಿಕೆ ಹಾಕಿಸಿದ್ರಾ ಸಂದೇಶ್​​​​​?

ಮಂಗಳೂರು, ಮಾರ್ಚ್​​ 22: ಮೂಡಬಿದ್ರೆ ಇನ್ಸ್​ಪೆಕ್ಟರ್​​​ ಸಂದೇಶ್​​ ಕಾಮಕಾಂಡ ಪ್ರಕರಣ ಸಂಬಂಧ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದ ಸಂತ್ರಸ್ತ ಶಿಕ್ಷಕಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಪ್ರಕರಣ ಬಯಲಾಗುತ್ತಲೇ ಸಂತ್ರಸ್ತೆಗೆ ಮಾ.19ರಂದು ಸ್ಮಿತಾ ಮತ್ತು ಸುನೀತಾ ಲೋಬೋ ಎಂಬುವವರ ಮೂಲಕ ಇನ್ಸ್​ಪೆಕ್ಟರ್​​​ ಸಂದೇಶ್​​ ಬೆದರಿಕೆ ಹಾಕಿರೋದಾಗಿ ದೂರಲಾಗಿದೆ. ಇಬ್ಬರು ಮಹಿಳೆಯರನ್ನ ಸಂತ್ರಸ್ತೆ ಮನೆಗೆ ಕಳಿಸಿ ಇಲ್ಲಿಯವರೆಗೂ ನಡೆದ ವಿಚಾರಗಳ ಬಗ್ಗೆ ಬಾಯಿ ಬಿಡಬಾರದು. ಬಾಯಿ ಬಿಟ್ಟರೆ ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಲಾಗಿದೆ….

Read More

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್​​ ಟಿಕೆಟ್​​ ಸಿಕ್ಕ ಬೆನ್ನಲ್ಲೇ ತಂದೆ ನೆನೆದು ಉಮೇಶ್ ಮೇಟಿ ಭಾವುಕ

ಬಾಗಲಕೋಟೆ, ಮಾರ್ಚ್​​ 22: ಹೆಚ್​​.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಕ್ಷೇತ್ರದ ಉಪ ಚುನಾವಣೆಗೆ ಕಾಂಗ್ರೆಸ್​​ ಅಭ್ಯರ್ಥಿಯಾಗಿ ಮೇಟಿ ಅವರ ದ್ವಿತೀಯ ಪುತ್ರ ಉಮೇಶ್ ಅವರಿಗೆ ಟಿಕೆಟ್ ಘೋಷಣೆಯಾಗಿದೆ. ಆ ಬೆನ್ನಲ್ಲೇ ಉಮೇಶ್ ಮೇಟಿ ಅವರು ತಮ್ಮ ತಂದೆಯ ಮೇಲಿನ ಅನುಕಂಪ ಮತ್ತು ಅವರ ಮೇಲಿನ ಪ್ರೀತಿಗೆ ಮತದಾರರು ಸ್ಪಂದಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಚ್.ವೈ. ಮೇಟಿ ಅವರು ಮಾಡಿರುವ ಅನೇಕ ಜನಪರ ಕೆಲಸಗಳು, ವಿಶೇಷವಾಗಿ ವೈದ್ಯಕೀಯ ಕಾಲೇಜು ಸ್ಥಾಪನೆಯಂತಹ ಐತಿಹಾಸಿಕ ಕಾರ್ಯಗಳನ್ನು ಸ್ಮರಿಸಿದ ಅವರು…

Read More

Video: ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ, ಭೂಕುಸಿತ

ಶಿಮ್ಲಾ, ಮಾರ್ಚ್​ 22: ಹಿಮಾಚಲ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಭೂಕುಸಿತ ಉಂಟಾಗಿದೆ. ಮಂಡಿ ಜಿಲ್ಲೆಯ ಕೋಟ್ಲಿ ಹಳ್ಳಿಯಲ್ಲಿ ಭೂಕುಸಿತ ಉಂಟಾಗಿದೆ. ಬಂಡೆ, ಮಣ್ಣು ಎಲ್ಲವೂ ರಸ್ತೆಗೆ ಅಡ್ಡವಾಗಿ ಬಿದ್ದಿವೆ. ಎರಡು ದಿನಗಳ ಹಿಂದಷ್ಟೇ ಕುಲ್ಲುವಿನ ಪಾರ್ವತಿ ಕಣಿವೆಯಲ್ಲಿ, ಘಾಟಿಗಢದಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದ್ದರಿಂದ ಮಣಿಕರಣ್-ಬರ್ಶೈನಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿತ್ತು. ಜಚ್ನಿಯಲ್ಲಿ ಮಣ್ಣು ಕುಸಿತ ಸಂಭವಿಸಿ ಭುಂತರ್-ಮಣಿಕರಣ್ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಸಂಪರ್ಕ ರಸ್ತೆಯ ಎರಡೂ ಬದಿಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇದೀಗ…

Read More