ವಾಣಿಜ್ಯ ಬಳಕೆ ಸಿಲಿಂಡರ್ ಅಭಾವ: ಬೆಂಗಳೂರು ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟ
ಬೆಂಗಳೂರು, ಮಾರ್ಚ್ 21: ಗಲ್ಫ್ ಯುದ್ಧದಿಂದ ಇರಾನ್ ಹೊರ್ಮುಝ್ ಜಲಸಂಧಿ ಮುಚ್ಚಿದೆ. ಭಾರತಕ್ಕೆ ಅಡುಗೆ ಅನಿಲ, ತೈಲ ಹೊತ್ತು ಬರ್ತಿದ್ದ 22 ಹಡಗುಗಳು ಇರಾನ್ ಹಿಡಿತದಲ್ಲಿವೆ. ಇದರಿಂದ ಕರ್ನಾಟಕ ಸೇರಿದಂತೆ ದೇಶದಾದ್ಯಂತೆ ಗ್ಯಾಸ್ ಸಿಲಿಂಡರ್ ಕೊರತೆ ತಾಂಡವವಾಡುತ್ತಿದೆ. ವಾಣಿಜ್ಯ ಬಳಕೆ ಸಿಲಿಂಡರ್ (Commercial Gas) ಅಭಾವದಿಂದ ಬೆಂಗಳೂರಿನ ಹೋಟೆಲ್‌ಗಳಿಗೆ 150 ಕೋಟಿ ರೂ ನಷ್ಟವಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ಗಳ ಸಮಸ್ಯೆಯಿಂದ ಎದುರಾಗಿರುವ ಸಂಕಷ್ಟ ಅಷ್ಟಿಷ್ಟಲ್ಲ….