ಮಲ್ಪೆಯಲ್ಲಿ ಮೀನಿನ ಬೆಲೆ ಪಾತಾಳಕ್ಕೆ! ಮಾಂಜಿ, ಅಂಜಲ್ ಬೆಲೆ ಎಷ್ಟಿದೆ ಗೊತ್ತಾ? : ಮೀನಿನ ದರ ಪಟ್ಟಿ ಇಲ್ಲಿದೆ ನೋಡಿ
ಉಡುಪಿ, ಮಾ.21: ಎಲ್ಲೋ ನಡೆಯುತ್ತಿರುವ ಯುದ್ಧವು ಕರಾವಳಿಯ ಮೀನುಗಾರರ ಬದುಕನ್ನು ಅಲ್ಲೋಲಕಲ್ಲೋಲಗೊಳಿಸಿದೆ. ಏಷ್ಯಾದ ಅತಿ ದೊಡ್ಡ ಮೀನುಗಾರಿಕಾ ಬಂದರು ಎನಿಸಿಕೊಂಡಿರುವ ಮಲ್ಪೆಯಲ್ಲಿ ಇಂದು ಮೀನುಗಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೋಟೆಲ್‌ಗಳ ಮುಚ್ಚುಗಡೆ ಮತ್ತು ರಫ್ತು ಸ್ಥಗಿತದಿಂದಾಗಿ ಮೀನಿನ ದರ ಪಾತಾಳಕ್ಕೆ ಕುಸಿದಿದೆ. ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 100 ರಿಂದ 200 ರೂಪಾಯಿ ಇಳಿಕೆಯಾಗಿದೆ. ಮೀನುಗಾರ ಮಹಿಳೆಯರಿಗೆ ಅಸಲು ಕೂಡ ಸಿಗದಂತಾಗಿದ್ದು, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.ಅಡುಗೆ ಅನಿಲದ (LPG) ವ್ಯತ್ಯಯ ಮತ್ತು ಯುದ್ಧದ…