ಐಪಿಎಲ್ ಮುಗಿದ ಕೂಡಲೇ ಟಿ20 ಸರಣಿ ಆಡಲಿದೆ ಭಾರತ; ವೇಳಾಪಟ್ಟಿ ಪ್ರಕಟ
ಕೆಲವೇ ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ (Team India) ಇದೀಗ ಐಪಿಎಲ್‌ನಲ್ಲಿ (IPL 2026) ಕಣಕ್ಕಿಳಿಯಲು ಸಜ್ಜಾಗಿದೆ. ಎರಡು ತಿಂಗಳ ಕಾಲ ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಬೆವರು ಹರಿಸಲಿರುವ ಟೀಂ ಇಂಡಿಯಾ ಆಟಗಾರರು ಆ ಬಳಿಕ ಮತ್ತೆ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ. ಅದಕ್ಕೆ ಪೂರಕವಾಗಿ ಇದೀಗ ಭಾರತದ ಮುಂದಿನ ಟಿ20 ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೂರ್ಯಕುಮಾರ್ ಯಾದವ್ (Suryakumar Yadav) ನೇತೃತ್ವದ ತಂಡವು ಐರ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು…