Category Archives: Blog

Your blog category

ಬ್ಯಾಂಕ್ ಸರ್ವರ್ ಸಮಸ್ಯೆಯಿಂದ ಮೆಟ್ರೋ ಟಿಕೆಟ್​​ ತೆಗೆದುಕೊಳ್ಳಲು ಪ್ರಯಾಣಿಕರ ಪರದಾಟ – Kannada News | Bengaluru Metro Ticketing Woes: Bank Server Glitch Causes UPI/Card Payment Failure

ಬೆಂಗಳೂರು, ಫೆ.10: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಒಂದು ಕಹಿ ಅನುಭವ ಆಗಿದೆ. ಬ್ಯಾಂಕ್ ಸರ್ವರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟಿಕೆಟ್ ಪಡೆಯಲು ಸಾಧ್ಯವಾಗದೆ ಸಾವಿರಾರು ಜನರು ಪರದಾಡುವಂತಾಗಿದೆ. ಇತ್ತೀಚೆಗಷ್ಟೇ ಮೆಟ್ರೋ ದರ ಏರಿಕೆ ಮಾಡಿ ಮೆಟ್ರೋ ಪ್ರಯಾಣಿಕರ ಅಕ್ರೋಶಕ್ಕೆ ಒಳಗಾಗಿತ್ತು, ಇದೀಗ ಇದರ ಬೆನ್ನಲ್ಲೇ ಬ್ಯಾಂಕ್ ಸರ್ವರ್‌ನಲ್ಲಿ ಡೌನ್​ ಆಗಿರುವುದು ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಇಂದು (ಫೆ. 10) ಸಂಜೆ 6 ಗಂಟೆಯಿಂದ ಬ್ಯಾಂಕ್ ಸರ್ವರ್ ಸಮಸ್ಯೆ ಆರಂಭವಾಗಿದೆ. ಯುಪಿಐ (UPI) ಪೇಮೆಂಟ್ ಅಥವಾ ಬ್ಯಾಂಕ್ ಕಾರ್ಡ್‌ಗಳ ಮೂಲಕ ಟಿಕೆಟ್ ಖರೀದಿಸುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದೆ.

ಕಚೇರಿ ಕೆಲಸ ಮುಗಿಸಿ ಮನೆಗೆ ಮರಳುವ ಅವಸರದಲ್ಲಿದ್ದ ಪ್ರಯಾಣಿಕರು ಟಿಕೆಟ್ ಕೌಂಟರ್ ಹಾಗೂ ಎಟಿಎಂಗಳ (ATMs) ಮುಂದೆ ಗಂಟೆಗಟ್ಟಲೆ ನಿಲ್ಲುವಂತಾಯಿತು. ಸರ್ವರ್ ಸಮಸ್ಯೆಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಪ್ರಯಾಣಿಕರು ಒಂದಕ್ಕೆ ಎರಡರಷ್ಟು ಬಾರಿ ಯುಪಿಐ ಪೇಮೆಂಟ್ ಮಾಡಿದ್ದಾರೆ. ಅಕೌಂಟ್‌ನಿಂದ ಹಣ ಕಟ್ ಆಗಿದ್ದರೂ ಕ್ಯೂಆರ್ ಕೋಡ್ (QR Code) ಜನರೇಟ್ ಆಗಿಲ್ಲ.ಸ್ಯಾಂಡಲ್ ಸೋಪ್ ಫ್ಯಾಕ್ಟರಿ, ಯಶವಂತಪುರ ಸೇರಿದಂತೆ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ

ಇಲ್ಲಿದೆ ನೋಡಿ ವಿಡಿಯೋ:

ಕಟ್ ಆಗಿರುವ ಹಣ ವಾಪಸ್ ಬರುತ್ತದೆಯೇ ಎಂಬ ಆತಂಕದಲ್ಲಿ ಜನರು ಕಸ್ಟಮರ್ ಕೇರ್ ಮುಂದೆ ಜಮಾಯಿಸಿದ್ದಾರೆ. ಇಂತಹ ತುರ್ತು ಸಂದರ್ಭಗಳಲ್ಲಿ ಸಣ್ಣ ಮೊತ್ತದ ನಗದು (Cash) ಇಟ್ಟುಕೊಳ್ಳುವುದು ಉತ್ತಮ. ಕೌಂಟರ್‌ಗಳಲ್ಲಿ ನಗದು ನೀಡಿ ಟೋಕನ್ ಪಡೆಯಬಹುದು. ಯುಪಿಐಗಿಂತ ಮೆಟ್ರೋ ಸ್ಮಾರ್ಟ್ ಕಾರ್ಡ್‌ಗಳು ಇಂತಹ ಸಮಯದಲ್ಲಿ ಹೆಚ್ಚು ಉಪಯುಕ್ತವಾಗುತ್ತದೆ. ಒಮ್ಮೆ ಹಣ ಕಟ್ ಆಗಿ ಟಿಕೆಟ್ ಬರದಿದ್ದರೆ, ಪದೇ ಪದೇ ಪೇಮೆಂಟ್ ಮಾಡಬೇಡಿ. ಸಾಮಾನ್ಯವಾಗಿ ಕಟ್ ಆದ ಹಣ 24-48 ಗಂಟೆಗಳಲ್ಲಿ ನಿಮ್ಮ ಖಾತೆಗೆ ಮರುಪಾವತಿಯಾಗುತ್ತದೆ ಎಂಬುದು ಬ್ಯಾಂಕ್​​​ಗಳ ಸಲಹೆ ಕೂಡ ನೀಡಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

200 ಸಿನಿಮಾಗಳಿಗೆ ಸಬ್ಸಿಡಿ ಕೊಡಿ: ಸರ್ಕಾರಕ್ಕೆ ನಿರ್ಮಾಪಕ ಕೆ. ಮಂಜು ಮನವಿ – Kannada News | Producer K Manju urges Government to give more subsidy for Kannada movies

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ (KFCC) ಸುದ್ದಿಗೋಷ್ಠಿ ನಡೆಸಲಾಗಿದೆ. ಈ ವೇಳೆ ನಿರ್ಮಾಪಕ ಕೆ. ಮಂಜು ಅವರು ಮಾತನಾಡಿದರು. ‘ಇಂದು ಹಲವು ನಿರ್ಮಾಪಕರು ವಾಣಿಜ್ಯ ಮಂಡಳಿಗೆ ಮನವಿ ಪತ್ರ ನೀಡಿದ್ದಾರೆ. ಚಿತ್ರರಂಗ ಇರುವವರೆಗೂ ಸಬ್ಸಿಡಿ ನೀಡಬೇಕು ಎಂಬುದು ನಮ್ಮೆಲ್ಲರ ಉದ್ದೇಶ. ಯಾವ ಕಾರಣಕ್ಕೂ ಸಬ್ಸಿಡಿ ನಿಲ್ಲಬಾರದು. ಇನ್ನೂ ಜಾಸ್ತಿ ಕೊಡಿ ಅಂತ ಕೇಳುತ್ತೇವೆ. 10 ಲಕ್ಷ ರೂಪಾಯಿ ಇರುವುದನ್ನು 15 ಲಕ್ಷ ರೂಪಾಯಿ ಮಾಡಿ ಎನ್ನುತ್ತೇವೆ. 125 ಸಿನಿಮಾಗಳಿಗೆ ಕೊಡುತ್ತಾರೆ. 200 ಸಿನಿಮಾಗಳಿಗೆ ಕೊಡಿ ಅಂತ ಕೇಳುತ್ತಿದ್ದೇವೆ. ಚಿತ್ರೋದ್ಯಮದ ಹಿತದೃಷ್ಟಿಯಿಂದ ಮನವಿ ಮಾಡುತ್ತಿದ್ದೇನೆ’ ಎಂದು ಕೆ. ಮಂಜು (K Manju) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇಂಡಿಯನ್ vs ವೆಸ್ಟರ್ನ್ ಟಾಯ್ಲೆಟ್: ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ತಡೆಗಟ್ಟಲು ಯಾವುದು ಬೆಸ್ಟ್ ಗೊತ್ತಾ? – Kannada News | Squat or Sit? The Best Toilet Position for Your Gut

ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ಎಲ್ಲಾ ರೀತಿಯ ಅಭ್ಯಾಸಗಳನ್ನು ಬದಲಿಸುತ್ತಿದೆ. ಅಷ್ಟೇಅಲ್ಲ ಮನೆ, ನಾವು ಬಳಸುವ ವಸ್ತುಗಳು ಜೊತೆಗೆ ಶೌಚಾಲಯಗಳು ಕೂಡ ಬದಲಾಗುತ್ತಿದೆ. ಹಿಂದೆ ಪ್ರತಿ ಮನೆಯಲ್ಲೂ ಇಂಡಿಯನ್ ಟಾಯ್ಲೆಟ್ (Indian toilet) ಗಳು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ ಅದು ಬದಲಾಗಿದೆ. ಪಾಶ್ಚಿಮಾತ್ಯ ಕಮೋಡ್‌ ಅಥವಾ ವೆಸ್ಟರ್ನ್ ಟಾಯ್ಲೆಟ್ (Western Toilet) ಗಳನ್ನು ಎಲ್ಲರೂ ಹೆಚ್ಚಾಗಿ ಬಳಕೆ ಮಾಡಲು ಆರಂಭಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲಿಯೂ ಇವು ಕಾಣಲು ಸಿಗುತ್ತಿದೆ. ಈ ಬದಲಾವಣೆ ಅನುಕೂಲಕರವಾಗಿದ್ದರೂ ಕೂಡ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಗೆ (Digestive Health) ಹಾನಿ ಮಾಡುತ್ತದೆಯೇ ಎಂಬ ಅನುಮಾನ ಹೆಚ್ಚಿನವರಲ್ಲಿ ಕಾಡುತ್ತಿದೆ. ಅದರಲ್ಲಿಯೂ ಇತ್ತೀಚೆಗೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಶೌಚಾಲಯದಲ್ಲಿ ಕುಳಿತುಕೊಳ್ಳುವ ಭಂಗಿಯಿಂದ ಈ ರೀತಿಯಾಗುತ್ತದೆಯೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ. ಹಾಗಾದರೆ ಈ ಬಗ್ಗೆ ತಜ್ಞರ ಅಭಿಪ್ರಾಯವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇಂಡಿಯನ್ ಟಾಯ್ಲೆಟ್ ಒಳ್ಳೆಯದೇ?

ನವದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯ ತಜ್ಞ ಡಾ. ಸೋನಿಯಾ ರಾವತ್ ಹೇಳುವ ಪ್ರಕಾರ, ಇಂಡಿಯನ್ ಟಾಯ್ಲೆಟ್ ನಲ್ಲಿ ಕುಳಿತುಕೊಳ್ಳುವುದರಿಂದ ಅನೇಕ ಪ್ರಯೋಜನಗಳಿವೆ. ಈ ಸ್ಥಾನದಲ್ಲಿ ಕುಳಿತಾಗ, ಗುದನಾಳವು ನೇರವಾಗುತ್ತದೆ. ಇದು ಯಾವುದೇ ರೀತಿಯ ಅಡಚಣೆಯಿಲ್ಲದೆ ಮಲವನ್ನು ಸುಲಭವಾಗಿ ಹೊರಹಾಕಲು ಅನುವು ಮಾಡಿಕೊಡುತ್ತದೆ. ಇದು ಕರುಳಿನ ಮೇಲಿನ ಅನಗತ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ. ಕರುಳನ್ನು ಸಂಪೂರ್ಣವಾಗಿ ಖಾಲಿ ಮಾಡುವುದರಿಂದ ಮಲಬದ್ಧತೆ ಸಮಸ್ಯೆಗಳನ್ನು ತಡೆಯುತ್ತದೆ.

ವೆಸ್ಟರ್ನ್ ಟಾಯ್ಲೆಟ್ ಉಪಯೋಗ ಮಾಡುವುದರಿಂದಾಗುವ ಸಮಸ್ಯೆಗಳು?

ಸಾಮಾನ್ಯವಾಗಿ ವೆಸ್ಟರ್ನ್ ಟಾಯ್ಲೆಟ್‌ಗಳ ಬಳಕೆ ಅನುಕೂಲಕರವಾಗಿರಬಹುದು, ಆದರೆ ಇದು ಕೆಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಭಂಗಿಯಲ್ಲಿ, ಗುದನಾಳವು ಸ್ವಲ್ಪ ಬಾಗುತ್ತದೆ. ಇದರಿಂದ ದೇಹಕ್ಕೆ ಕರುಳನ್ನು ಸಂಪೂರ್ಣವಾಗಿ ಖಾಲಿ ಮಾಡಲು ಕಷ್ಟವಾಗುತ್ತದೆ. ಕಾಲಾನಂತರದಲ್ಲಿ ಇದು ಮಲಬದ್ಧತೆ, ಅನಿಲ ಮತ್ತು ಮೂಲವ್ಯಾಧಿಗಳಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಸ್ಟ್ರೆಸ್ ಮಲಬದ್ದತೆಗೆ ಹೇಗೆ ಕಾರಣವಾಗುತ್ತೆ ಗೊತ್ತಾ? ಈ ಬಗ್ಗೆ ಡಾ ಅನುರಾಗ್ ಶೆಟ್ಟಿ ಏನ್ ಹೇಳ್ತಾರೆ ನೋಡಿ

ಯಾರಿಗೆ ಯಾವುದು ಒಳ್ಳೆಯದು?

ಇದರರ್ಥ ಎಲ್ಲರೂ ಭಾರತೀಯ ಶೌಚಾಲಯ ಅಥವಾ ಇಂಡಿಯನ್ ಟಾಯ್ಲೆಟ್ ಬಳಕೆ ಮಾಡಬೇಕು ಎಂದಲ್ಲ. ಮೊಣಕಾಲು ನೋವು, ಕೀಲು ಸಮಸ್ಯೆ ಇರುವವರಿಗೆ ಅಥವಾ ವೃದ್ಧರಿಗೆ ಪಾಶ್ಚಿಮಾತ್ಯ ಶೌಚಾಲಯಗಳು ಸುರಕ್ಷಿತ. ನೀವು ಪಾಶ್ಚಿಮಾತ್ಯ ಶೌಚಾಲಯವನ್ನು ಬಳಸುತ್ತಿದ್ದರೆ, ನಿಮ್ಮ ಪಾದಗಳ ಕೆಳಗೆ ಸಣ್ಣ ಸ್ಟೂಲ್ ಇಡುವುದರಿಂದ ನಿಮ್ಮ ಮೊಣಕಾಲುಗಳು ಮೇಲಕ್ಕೆತ್ತಲ್ಪಡುತ್ತವೆ ಮತ್ತು ನಿಮ್ಮನ್ನು ಭಾರತೀಯ ಶೌಚಾಲಯದ ಭಂಗಿಗೆ ತರುತ್ತದೆ. ಇದು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ. ಜಂಕ್ ಫುಡ್ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ ಜೀರ್ಣಕಾರಿ ಸಮಸ್ಯೆಗಳು ಈಗಾಗಲೇ ಹೆಚ್ಚುತ್ತಿವೆ. ಅಂತಹ ಸಂದರ್ಭಗಳಲ್ಲಿ, ಸರಿಯಾದ ಶೌಚಾಲಯದ ಭಂಗಿಯನ್ನು ಆಯ್ಕೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು”: ಗಂಡನಿಗೆ ಪ್ರತಿದಿನ ಹೆಂಡತಿಯಿಂದ ಕಿರುಕುಳ – Kannada News | I Know Officials: Hassan Husband Claims Wifes Harassment and Threats

ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ದಾಂಪತ್ಯ ಕಲಹದ ಪ್ರಕರಣವೊಂದು ಈಗ ಸಾರ್ವಜನಿಕ ಗಮನ ಸೆಳೆದಿದೆ. ಪತಿ ಶಶಿಕುಮಾರ್ ಅವರು ತಮ್ಮ ಪತ್ನಿ ಅರ್ಪಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಸ್ತಿಗಾಗಿ ಪತ್ನಿ ತಮ್ಮ ಕುಟುಂಬಕ್ಕೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ. ಶಶಿಕುಮಾರ್ ಮತ್ತು ಅರ್ಪಿತಾ ಪ್ರೀತಿಸಿ ಮದುವೆಯಾಗಿದ್ದು, ಮದುವೆಯ ನಂತರ ಮೊದಲ ಎರಡು ವರ್ಷಗಳು ಸಂತೋಷದಿಂದ ಕಳೆದಿದ್ದವು ಎಂದು ಶಶಿಕುಮಾರ್ ಹೇಳಿದ್ದಾರೆ. ಆದರೆ, ಪತ್ನಿ ಅರ್ಪಿತಾ ತನ್ನ ತಂದೆ-ತಾಯಿಯ ಮನೆಗೆ ಭೇಟಿ ನೀಡಿ ಬಂದ ನಂತರ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಯಿತು. ಪತ್ನಿಯ ಪೋಷಕರು ಪ್ರತ್ಯೇಕವಾಗಿರಲು ಸಲಹೆ ನೀಡಿದ ನಂತರ, ಅರ್ಪಿತಾ ಮನೆಗೆ ಬಂದು ಪ್ರತ್ಯೇಕ ಸಂಸಾರ ನಡೆಸುವಂತೆ ಪೀಡಿಸಲು ಪ್ರಾರಂಭಿಸಿದರು ಎಂದು ಶಶಿಕುಮಾರ್ ಆರೋಪಿಸಿದ್ದಾರೆ. “ನಾನು ನನ್ನ ಅಪ್ಪ-ಅಮ್ಮನನ್ನು ನೋಡಿಕೊಳ್ಳಬೇಕು ಮತ್ತು ನಿನ್ನನ್ನೂ ನೋಡಿಕೊಳ್ಳಬೇಕು ಎಂದಾಗ ಬೇರೆ ಕಡೆ ಪ್ರತ್ಯೇಕವಾಗಿ ಹೋಗಿ ವಾಸಿಸೋಣ ಎಂದು ಹೇಳುತ್ತಿದ್ದಾಳು, ಇದಕ್ಕೆ ನಾನು ಒಪ್ಪಿಲ್ಲ, ಮೇಲ್ಮಹಡಿಯಲ್ಲಿ ರೂಮ್​​​​ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಹಣಕಾಸಿನ ತೊಂದರೆಯಿಂದ ತಕ್ಷಣ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಸಾಲ ಮಾಡಿ ಸಣ್ಣದಾಗಿ ರೂಮ್​​​​ ಮಾಡಿಕೊಡುವಂತೆ ಒತ್ತಾಯಿಸಿದ್ದರು ಎಂದು ಶಶಿಕುಮಾರ್ ವಿವರಿಸಿದ್ದಾರೆ.

ಈ ಎಲ್ಲದರ ನಡುವೆ, ಅರ್ಪಿತಾ ಅವರ ಕಿರುಕುಳ ಹೆಚ್ಚಾಯಿತು. ಅರ್ಪಿತಾ ಅವರು “ನಾನು ಹೆಣ್ಣು, ನನಗೆ ಮೇಲಧಿಕಾರಿಗಳು ಗೊತ್ತು, ಎಸ್ಪಿ ಕಚೇರಿಯವರು ಗೊತ್ತು, ಬೆಂಗಳೂರಿನಿಂದಲೂ ನನಗೆ ಸಂಪರ್ಕಗಳಿವೆ” ಎಂದು ಹೇಳಿ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. “ಏನೇ ತೊಂದರೆಯಾದರೂ ನಾನೇ, ನೀವೆಲ್ಲ ಇಡೀ ಕುಟುಂಬವನ್ನು ಜೈಲಿಗೆ ಕಳಿಸುತ್ತೇನೆ, ಕೋರ್ಟಿಗೆ ಕಳಿಸುತ್ತೇನೆ, ನಮಗೆ ಏನು ಮಾಡಕ್ಕಾಗಲ್ಲ” ಎಂದು ನಿರಂತರವಾಗಿ ಬೆದರಿಸುತ್ತಿದ್ದಾರೆ. ಅಲ್ಲದೆ, “ಡೆತ್ ನೋಟ್ ಬರೆಯುತ್ತೇನೆ” ಎಂದು ಹೇಳಿ ಮಾನಸಿಕವಾಗಿ ಹಿಂಸಿಸುತ್ತಿದ್ದಾರೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ:

ಈ ಪ್ರಕರಣ ಹಲವಾರು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ನ್ಯಾಯಾಲಯದಲ್ಲೂ ವಿಚಾರಣೆ ನಡೆಯುತ್ತಿದೆ. ನ್ಯಾಯಾಧೀಶರು ಸಹ ಅರ್ಪಿತಾ ಅವರನ್ನು ಕರೆದುಕೊಂಡು ಹೋಗಲು ಹಲವಾರು ಬಾರಿ ಸೂಚಿಸಿದ್ದರೂ, ನ್ಯಾಯಾಲಯದಲ್ಲಿ ಒಪ್ಪಿಗೆ ನೀಡಿ ಮನೆಗೆ ಬಂದ ನಂತರ ಜಗಳ ಮಾಡುತ್ತಾಳೆ ಎಂದು ಶಶಿಕುಮಾರ್ ಹೇಳಿದ್ದಾರೆ. ತಮ್ಮ ತಂದೆ-ತಾಯಿ ಮತ್ತು ಅಕ್ಕ-ತಂಗಿಯರಿಗೂ ಸಹ ಅರ್ಪಿತಾ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಚಪ್ಪಲಿಯಿಂದ ಹೊಡೆಯಲು ಪ್ರಯತ್ನಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ತಾಯಿಗೆ ಚಪ್ಪಲಿಯಿಂದ ಹೊಡೆಯಲು ಹೋಗಿ, ಗಲಾಟೆ ಸೃಷ್ಟಿಸಿ ಪತ್ರಕರ್ತರನ್ನು ಕರೆಯಿಸಿರುವುದಾಗಿಯೂ ಹೇಳಿದ್ದಾಳೆ ಎಂದು ಶಶಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: “ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ” ಎಂದ ಅಳಿಯ: ಇದಕ್ಕೆಲ್ಲ ಇವನೇ ಕಾರಣ

ಈ ಎಲ್ಲಾ ಘಟನೆಗಳು ಉದ್ದೇಶಪೂರ್ವಕವಾಗಿದ್ದು, ಹಣ ಮತ್ತು ಆಸ್ತಿಗಾಗಿ ಅರ್ಪಿತಾ ನಾಟಕ ಮಾಡುತ್ತಿದ್ದಾಳೆ ಎನ್ನುವುದು ಶಶಿಕುಮಾರ್ ಅವರ ಪ್ರಮುಖ ಆರೋಪ. ನನ್ನ ಬಳಿ ಪತ್ನಿಯ ಬೆದರಿಕೆಗಳು, ಅವಾಚ್ಯ ಮಾತುಗಳು ಮತ್ತು ಕಿರುಕುಳದ ವಿಡಿಯೋ ಹಾಗೂ ಆಡಿಯೋ ಕ್ಲಿಪ್‌ಗಳಿವೆ ಎಂದು ಅವರು ತಿಳಿಸಿದ್ದಾರೆ. ಈ ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧರಿರುವುದಾಗಿ ಶಶಿಕುಮಾರ್ ಹೇಳಿದ್ದಾರೆ. ಕುಟುಂಬವು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ಸಮಾಜದಲ್ಲಿ ತಮ್ಮನ್ನು ಕೀಳಾಗಿ ಕಾಣಿಸುವ ಉದ್ದೇಶದಿಂದ ಈ ಎಲ್ಲಾ ಸನ್ನಿವೇಶಗಳನ್ನು ಅರ್ಪಿತಾ ಸೃಷ್ಟಿಸುತ್ತಿದ್ದಾರೆ ಎಂದು ಶಶಿಕುಮಾರ್ ಅಳಲು ತೋಡಿಕೊಂಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 8:53 pm, Tue, 10 February 26

Source link

‘ಟಾಕ್ಸಿಕ್’ ಹೊಸ ದಾಖಲೆ: ವಿದೇಶಿ ವಿತರಣೆ ಹಕ್ಕು 105 ಕೋಟಿ ರೂಪಾಯಿಗೆ ಮಾರಾಟ – Kannada News | Yash starrer Toxic movie overseas distribution rights sold to Rs 105 Cr to Phars Films

‘ರಾಕಿಂಗ್ ಸ್ಟಾರ್’ ಯಶ್ (Yash) ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಇತ್ತೀಚೆಗಷ್ಟೇ ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ವಿತರಣಾ ಹಕ್ಕುಗಳು 120 ಕೋಟಿ ರೂಪಾಯಿಗೆ ಮಾರಾಟ ಆಗಿದ್ದವು. ಈಗ ‘ಟಾಕ್ಸಿಕ್’ (Toxic) ಸಿನಿಮಾ ವಿದೇಶಿ ಮಾರುಕಟ್ಟೆಯಲ್ಲೂ ದೂಳೆಬ್ಬಿಸಿದೆ. ವಿಶ್ವದಾದ್ಯಂತ ಸಿನಿಮಾ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು ‘ಟಾಕ್ಸಿಕ್’ ಚಿತ್ರದ ಓವರ್​ಸೀಸ್ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ.

ಈ ಐತಿಹಾಸಿಕ ಡೀಲ್ ಬರೋಬ್ಬರಿ ₹105 ಕೋಟಿ ಅಡ್ವಾನ್ಸ್ ಮೊತ್ತಕ್ಕೆ ಕುದುರಿದ್ದು, ಭಾರತೀಯ ಚಿತ್ರರಂಗದಲ್ಲೇ ಇದು ಅತ್ಯಂತ ದೊಡ್ಡ ಮಟ್ಟದ ವಿದೇಶಿ ವ್ಯವಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ವಿಶೇಷವೆಂದರೆ, ಈ 105 ಕೋಟಿ ರೂಪಾಯಿ ವ್ಯವಹಾರ ಕೇವಲ ಭಾರತೀಯ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಆವೃತ್ತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಚಿತ್ರದ ಇಂಗ್ಲಿಷ್ ಆವೃತ್ತಿಯ ಹಕ್ಕುಗಳು ಇದರಲ್ಲಿ ಒಳಗೊಂಡಿಲ್ಲ.

ಈ ಬಗ್ಗೆ ‘ಫಾರ್ಸ್ ಫಿಲ್ಮ್ಸ್’ ಸಿಇಒ ಅಹಮದ್ ಗೋಲ್ಚಿನ್ ಮಾತನಾಡಿದ್ದಾರೆ.‘ಟಾಕ್ಸಿಕ್ ಮೂಲಕ ನಾವು ಗಡಿಗಳನ್ನು ಮೀರಿದ ಕಥೆಯನ್ನು ಹೇಳಲು ಹೊರಟಿದ್ದೇವೆ. ಈ ಚಿತ್ರದ ಕಥಾವಸ್ತು ಜಾಗತಿಕ ಮಟ್ಟದ ಪ್ರೇಕ್ಷಕರಿಗೆ ಕನೆಕ್ಟ್ ಆಗಲಿದೆ ಎಂಬ ನಂಬಿಕೆ ನಮಗಿದೆ’ ಎಂದು ಅವರು ಹೇಳಿದ್ದಾರೆ. ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ವಿದೇಶಗಳಲ್ಲಿ ಸೃಷ್ಟಿಸಿದ ಸುನಾಮಿಯೇ ಈ ದೊಡ್ಡ ಮಟ್ಟದ ವ್ಯವಹಾರಕ್ಕೆ ತಳಹದಿಯಾಗಿದೆ. ಚೀನಾ, ಜಪಾನ್ ಮತ್ತು ನೇಪಾಳ ಹೊರತುಪಡಿಸಿ ವಿಶ್ವದಾದ್ಯಂತ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ‘ಟಾಕ್ಸಿಕ್’ ಬಿಡುಗಡೆ ಆಗಲಿದೆ.

ಗಮನಿಸಬೇಕಾದ ಇನ್ನೊಂದು ಅಂಶ ಏನೆಂದರೆ, ಈ ಸಿನಿಮಾದ ಮುಖ್ಯ ಟೀಸರ್ ಆಗಲಿ, ಟ್ರೇಲರ್ ಆಗಲಿ ಇನ್ನೂ ಬಿಡುಗಡೆ ಆಗಿಲ್ಲ. ಸದ್ಯಕ್ಕೆ ರಿಲೀಸ್ ಆಗಿರುವುದು ಹೀರೋ ಪಾತ್ರದ ಇಂಟ್ರಡಕ್ಷನ್ ಟೀಸರ್ ಮಾತ್ರ. ಅಷ್ಟರಲ್ಲಿಯೇ ಭಾರಿ ಮಟ್ಟದ ಕ್ರೇಜ್ ಸೃಷ್ಟಿಸಿದೆ. ಇನ್ನು, ಟ್ರೇಲರ್ ರಿಲೀಸ್ ಆದರೆ ‘ಟಾಕ್ಸಿಕ್’ ಸಿನಿಮಾದ ಹವಾ ಭರ್ಜರಿ ಆಗಲಿದೆ.

‘ಕೆವಿಎನ್ ಪ್ರೊಡಕ್ಷನ್ಸ್’ ಮೂಲಕ ‘ಟಾಕ್ಸಿಕ್’ ಸಿನಿಮಾ ನಿರ್ಮಾಣ ಆಗಿದೆ. ಮಾರ್ಚ್ 19ರಂದು ಅದ್ದೂರಿಯಾಗಿ ಈ ಚಿತ್ರ ತೆರೆಕಾಣಲಿದೆ. ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಘಟಾನುಘಟಿ ತಂತ್ರಜ್ಞರು ಈ ಸಿನಿಮಾದ ತೆರೆ ಹಿಂದೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ‘ಐ ಲವ್ ಯಶ್’; ‘ಟಾಕ್ಸಿಕ್’ ಬಗ್ಗೆ ನಿರೀಕ್ಷೆ ಹೊರಹಾಕಿದ ಆಶಿಶ್ ಚಂಚ್ಲಾನಿ

ಯಶ್ ನಟಿಸಿದ್ದ ‘ಕೆಜಿಎಫ್: ಚಾಪ್ಟರ್ 2’ ವಿಶ್ವಾದ್ಯಂತ ಅಬ್ಬರಿಸಿತ್ತು. ಆ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಮೇಲೆ ಮುಗಿಲೆತ್ತರದಷ್ಟು ನಿರೀಕ್ಷೆ ಮನೆ ಮಾಡಿದೆ. ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ ಎಂಬುದನ್ನು ನೋಡಲು ಫ್ಯಾನ್ಸ್ ಕಾದಿದ್ದಾರೆ. ‘ಟಾಕ್ಸಿಕ್’ ಎದುರು ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇನ್ಮುಂದೆ ಹೋಟೆಲ್‌ಗಳಲ್ಲಿ ಟೀ, ಕಾಫಿ ಹೀರುತ್ತಾ ಟೈಮ್ ಪಾಸ್ ಮಾಡಿದ್ರೆ ಬೀಳುತ್ತೆ ದಂಡ – Kannada News | Bengaluru Hotel Association to Plan table charge to customers who Sitting for Long Hours

ಬೆಂಗಳೂರು, (ಫೆಬ್ರವರಿ 10): ಸಿಲಿಕಾನ್ ಟಿಸಿ ಬೆಂಗಳೂರಿನಲ್ಲಿ (Bengaluru) ದಿನೇ ದಿನೇ ಹೆಚ್ಚುತ್ತಿರುವ ಸಣ್ಣ ಹಾಗೂ ಮಧ್ಯಮ ವರ್ಗದ ಹೋಟೆಲ್‌ಗಳಲ್ಲಿ (hotel) ಗ್ರಾಹಕರು ತಾಸುಗಟ್ಟಲೆ ಕೂತು ಕಾಲಹರಣ ಮಾಡುವ ಪ್ರವೃತ್ತಿ ಹೋಟೆಲ್ ಮಾಲೀಕರಿಗೆ ತೀವ್ರ ತೊಂದರೆಯಾಗುತ್ತಿದೆ. ಹೌದು…ಮಾತುಕತೆಗಾಗಿ ನೆಪಕ್ಕೆ ಎರಡು ಟೀ, ಕಾಫಿ ತಗೊಂಡು ಗಂಟೆ ಗಟ್ಟಲೇ ಕುಳಿತು ಟೈಮ್ ಪಾಸ್ ಮಾಡುತ್ತಾರೆ. ಇದಕ್ಕೆ ಪರಿಹಾರವಾಗಿ, ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ‘ಟೇಬಲ್ ಚಾರ್ಜ್’ ಅಥವಾ ದಂಡ ವಿಧಿಸುವ ಕುರಿತು ಹೋಟೆಲ್ ಮಾಲೀಕರ ಸಂಘ ಹೊಸ ಚಿಂತನೆ ನಡೆಸಿದ್ದು, ‘ಟೇಬಲ್ ಚಾರ್ಜ್’ ಹೆಸರಿನಲ್ಲಿ 500ರಿಂದ 1000 ರೂ.ವರೆಗೆ ದಂಡ ವಿಧಿಸಲು ಮುಂದಾಗಿದೆ.

ಪಾರ್ಕಿಂಗ್ ಚಾರ್ಜ್ ರೀತಿ ಟೇಬಲ್ ಚಾರ್ಜ್

ಬೆಂಗಳೂರಿನಲ್ಲಿ ಹೋಟೆಲ್​ ಮಾಲೀಕರು ಇತ್ತೀಚೆಗೆ ಹೊಸದೊಂದು ಸಮಸ್ಯೆಯನ್ನ ಎದುರಿಸುತ್ತಿದ್ದಾರೆ. ಬೆಂಗಳೂರಿನ ಸಣ್ಣ ಹಾಗೂ ಮಧ್ಯಮ ಹೋಟೆಲ್‌ಗಳಲ್ಲಿ ಗ್ರಾಹಕರು ಗಂಟೆಗಟ್ಟಲೆ ಕಾಲಹರಣ ಮಾಡುವುದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ. ಊಟ, ತಿಂಡಿ, ಕಾಫಿ ಎಂದು ಹೋಟೆಲ್​ನತ್ತ ಆಗಮಿಸುವ ಕೆಲ ಗ್ರಾಹಕರು ಇವೆಲ್ಲಾ ಮುಗಿದ ಬಳಿಕವೂ ಎದ್ದು ಹೋಗುತ್ತಿಲ್ಲ. ಕಾಫಿ, ಟೀ, ತಿಂಡಿಗೆ ಬರುವ ಗ್ರಾಹಕರಿಂದ ಗಂಟೆಗಟ್ಟಲೆ ನಾನಾ ವಿಚಾರಗಳ ಮಾತುಕತೆ ಆಗುತ್ತೆ.  ಭೂ ವ್ಯವಹಾರ, ರಿಯಲ್ ಎಸ್ಟೇಟ್, ರಾಜಕೀಯ ಇತ್ಯಾದಿ ವಿಚಾರಗಳ ಬಗ್ಗೆ ಹರಟೆ ಹೊಡೆಯುವ ಹಿನ್ನೆಲೆ ಇತರೆ ಗ್ರಾಹಕರಿಗೆ ಹೋಟೆಲ್​ಗಳಲ್ಲಿ ಸ್ಥಳಾವಕಾಶ ಸಿಗದೇ ವಾಪಸ್ ಹೋಗುತ್ತಾರೆ. ಹೀಗಾಗಿ ಇದನ್ನ ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಪಾರ್ಕಿಂಗ್ ಚಾರ್ಜ್ ರೀತಿ ಟೇಬಲ್ ಚಾರ್ಜ್ ಹಾಕುವುದಕ್ಕೆ ಚಿಂತನೆ ನಡೆಸಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರ್ಕಾರ: ಶೇ. 50ರಷ್ಟು ಸಿಗಲಿದೆ ಮನೆ ಬಾಡಿಗೆ ಭತ್ಯೆ

ಸದ್ಯ ಅನಗತ್ಯ ವಿಚಾರ ಚರ್ಚೆ ಮಾಡುತ್ತಾ ಕಾಲಹರಣ ಮಾಡಿ ಇತರರಿಗೆ ತೊಂದರೆ ನೀಡುವ ಗ್ರಾಹಕರಿಗೆ ಹೋಟೆಲ್ ಸಿಬ್ಬಂದಿ ಮನವಿ ಮಾಡುತ್ತಿದ್ದು, ಸಮಸ್ಯೆ ಮತ್ತಷ್ಟು ಗಂಭೀರ ಹಂತ ತಲುಪಿದರೆ ಟೇಬಲ್ ಚಾರ್ಜ್ ವಸೂಲಿ ಮಾಡಲು ಹೋಟೆಲ್​ ಮಾಲೀಕರ ಸಂಘ ತೀರ್ಮಾನಿಸಿದೆ.

ಈ ನಿರ್ಧಾರವನ್ನು ಅಧಿಕೃತವಾಗಿ ಜಾರಿಗೆ ತರಲು ಸರ್ಕಾರಕ್ಕೆ ಶೀಘ್ರದಲ್ಲೇ ಪತ್ರ ಬರೆದು ಅನುಮತಿ ಪಡೆಯಲು ಹೋಟೆಲ್ ಮಾಲೀಕರ ಸಂಘ ಸಿದ್ಧತೆ ನಡೆಸುತ್ತಿದೆ. ಸರ್ಕಾರದ ಒಪ್ಪಿಗೆ ದೊರೆತರೆ, ಈ ನಿಯಮವನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲೂ ಜಾರಿಗೆ ತರಲು ಯೋಜನೆ ರೂಪಿಸಲಾಗುತ್ತಿದೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದೇನು?

ಈ ಕುರಿತು ಮಾತನಾಡಿದ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್, ಹೋಟೆಲ್‌ಗಳಲ್ಲಿ ಒಂದು ಟೀ ಕುಡಿದು ಗಂಟೆಗಟ್ಟಲೆ ಕುಳಿತು ಸಭೆಗಳು ನಡೆಸುತ್ತಾರೆ. ಇದರಿಂದ ಇತರ ಗ್ರಾಹಕರಿಗೆ ತೊಂದರೆ ಆಗುವುದಲ್ಲದೆ, ನಮ್ಮ ವ್ಯಾಪಾರಕ್ಕೂ ನಷ್ಟವಾಗುತ್ತಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ದೀರ್ಘಕಾಲ ಕೂತರೆ ಟೇಬಲ್ ಚಾರ್ಜ್ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯವಿದ್ದರೆ 500 ರಿಂದ 1,000 ರೂ.ವರೆಗೆ ಶುಲ್ಕ ವಿಧಿಸುವ ಬಗ್ಗೆ ಚರ್ಚೆ ನಡೆದಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು

Source link

ಮೈಸೂರು ಸ್ಯಾಂಡಲ್ ಸೋಪ್​​ಗೆ ತಮನ್ನಾ ರಾಯಭಾರಿ; ಕನ್ನಡದಲ್ಲೇ ಮಾತು ಆರಂಭಿಸಿದ ನಟಿ

ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರು ‘ಮೈಸೂರು ಸ್ಯಾಂಡಲ್ ಸೋಪ್’ನ ರಾಯಭಾರಿಯಾಗಿದ್ದಾರೆ. ಇಂದಿನಿಂದ ಎರಡು ವರ್ಷಗಳವರೆಗೆ ಅವರು ಈ ಬ್ರ್ಯಾಂಡ್​ನ ರಾಯಭಾರಿ ಆಗಲಿದ್ದಾರೆ. ಇಂದು (ಫೆಬ್ರವರಿ 10) ಬೆಂಗಳೂರಿಗೆ ಆಗಮಿಸಿದ ಅವರು, ಅದ್ದೂರಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ತಮನ್ನಾ ಭಾಟಿಯಾ ಅವರು ಕನ್ನಡದಲ್ಲೇ ಮಾತು ಆರಂಭಿಸಿದರು ಅನ್ನೋದು ವಿಶೇಷ. ‘ಎಲ್ಲರಿಗೂ ನಮಸ್ಕಾರ’ ಎಂದು ಹೇಳಿದ ತಮನ್ನಾ ನಂತರ ಆಂಗ್ಲ ಭಾಷೆಯಲ್ಲಿ ಮಾತು ಮುಂದುವರಿಸಿದರು. ತಮನ್ನಾ ಭಾಟಿಯಾ ಅವರಿಗೆ ಈ ದಿನ ತುಂಬಾನೇ ವಿಶೇಷವಂತೆ. ವೃತ್ತಿ ಜೀವನದಲ್ಲಿ ಇಷ್ಟು ವರ್ಷ ಒಂದು ಲೆಕ್ಕ ಆದರೆ, ಇನ್ನುಮುಂದೆ ಮತ್ತೊಂದು ರೀತಿಯ ಲೆಕ್ಕ’ ಎಂದು ತಮನ್ನಾ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ – Kannada News | This is why Veerendra Heggade acted in Veera Kambala movie directed by Rajendra Singh Babu

ಖ್ಯಾತ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ದಿನಾಂಕ ಹತ್ತಿರ ಆಗಿರುವ ಈ ಹೊತ್ತಿನಲ್ಲಿ ಹೊಸ ಹೊಸ ಅಪ್​​ಡೇಟ್ಸ್ ಹಂಚಿಕೊಳ್ಳಲಾಗುತ್ತಿದೆ. ‘ವೀರ ಕಂಬಳ’ (Veera Kambala) ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಅಂದಾಜು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸಿನಿಮಾದಲ್ಲಿನ ಒಂದು ಮಹತ್ವದ ಪಾತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ನಟಿಸಿದ್ದಾರೆ.

ವೀರೇಂದ್ರ ಹೆಗ್ಗಡೆ ಅವರು ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ಮೊದಲೇ ಹೊರಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಈ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿರುವ ಅಂಶಗಳನ್ನೂ ಕೂಡ ರಾಜೇಂದ್ರ ಸಿಂಗ್ ಬಾಬು ಅವರು ಹಂಚಿಕೊಂಡಿದ್ದಾರೆ. ಕಂಬಳದ ಇತಿಹಾಸ ಕೆದಗುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರಿಗೆ ಅಚ್ಚರಿ ಮೂಡಿಸಿತು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡರು.

ಅದುವರೆಗೆ ತುಳುನಾಡ ಸೀಮೆಯ ಖಾಸಗಿ ಮನರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು 70ರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರಗೊಂಡು ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ‘ವೀರ ಕಂಬಳ’ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಸೆಯು ನಿರ್ದೇಶಕರ ಮನಸಲ್ಲಿ ಮೂಡಿತ್ತು. ಅದು ನೆರವೇರಿದೆ. ಬಹಳ ಸಂಭ್ರಮದಿಂದಲೇ ವೀರೇಂದ್ರ ಹೆಗ್ಗಡೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ: ವಿರೇಂದ್ರ ಹೆಗ್ಗಡೆ

‘ವೀರ ಕಂಬಳ’ ಸಿನಿಮಾವನ್ನು ‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಬ್ಯಾನರ್ ಮೂಲಕ ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತುಳು ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದ್ದು, ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಮುಂತಾದವರು ನಟಿಸಿದ್ದಾರೆ.

ವಿಜಯ್ ಕೊಡಿಯಾಲ್‌ಬೈಲ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದಾರೆ. ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್. ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ, ಕಾಂತ ಅವರ ಪ್ರಸಾದನ, ಭಾಷಾ ಅವರ ವಸ್ತ್ರವಿನ್ಯಾಸ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾಜಿ ಸೇನಾ ಮುಖ್ಯಸ್ಥ ನರವಾಣೆಯ ವಿವಾದಿತ ಪುಸ್ತಕ ಎಲ್ಲೂ ಪ್ರಕಟವೇ ಆಗಿಲ್ಲ; ಪೆಂಗ್ವಿನ್‌ ಪ್ರಕಾಶನದಿಂದ ಸ್ಪಷ್ಟನೆ – Kannada News | Ex army chief MM Naravanes book publisher clarifies memoir not yet published

ನವದೆಹಲಿ, ಫೆಬ್ರವರಿ 10: ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ (ಎಂಎಂ ನರವಾಣೆ) ಅವರು ತಮ್ಮ ಆತ್ಮಚರಿತ್ರೆಯ ವಿವಾದ ಭುಗಿಲೆದ್ದ ನಂತರ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ನರವಾಣೆಯವರ (MM Naravane) ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿತ್ತು. ಆ ಸ್ಪಷ್ಟನೆಯನ್ನು ನರವಾಣೆ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಪೆಂಗ್ವಿನ್ ಬಿಡುಗಡೆ ಮಾಡಿದ ಹೇಳಿಕೆಯನ್ನು ಹಂಚಿಕೊಂಡ ಜನರಲ್ ಎಂಎಂ ನರವಾಣೆ, “ಇದು ನನ್ನ ಪುಸ್ತಕದ ಸದ್ಯದ ಸ್ಥಿತಿ” ಎಂದು ಹೇಳಿದ್ದಾರೆ. ಆತ್ಮಚರಿತ್ರೆಯ ಅನಧಿಕೃತ ಪ್ರತಿಗಳ ಹಂಚಿಕೆಯ ಕುರಿತಾದ ರಾಜಕೀಯ ವಿವಾದದ ನಡುವೆ ಪ್ರಕಾಶಕರ ಸ್ಪಷ್ಟೀಕರಣವನ್ನು ನರವಾಣೆ ಕೂಡ ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆ ಮಾಜಿ ಸೇನಾ ಮುಖ್ಯಸ್ಥ ನರವಾಣೆಯವರ ಆತ್ಮಚರಿತ್ರೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ ಏಕೈಕ ಪ್ರಕಾಶನ ಹಕ್ಕುಗಳನ್ನು ತಾನೇ ಹೊಂದಿರುವುದಾಗಿ ಪುನರುಚ್ಚರಿಸಿದೆ. ಹಾಗೇ, ಆ ಪುಸ್ತಕ ಇನ್ನೂ ಪ್ರಕಟಣೆಗೆ ಹೋಗಿಲ್ಲ, ಅದರ ಸಾಫ್ಟ್​ ಕಾಪಿಗಳು ಕೂಡ ಎಲ್ಲೂ ಲಭ್ಯವಿಲ್ಲ ಎಂದು ಹೇಳಿದೆ. ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಯಾವುದೇ ಪ್ರತಿಗಳನ್ನು ಪ್ರಕಟಿಸಲಾಗಿಲ್ಲ, ವಿತರಿಸಲಾಗಿಲ್ಲ, ಮಾರಾಟ ಮಾಡಲಾಗಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು

ಆತ್ಮಚರಿತ್ರೆಯ ಪಿಡಿಎಫ್ ಆವೃತ್ತಿಗಳು ಪ್ರಸಾರವಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ಆ ಪುಸ್ತಕದ ಹಸ್ತಪ್ರತಿಗೆ ರಕ್ಷಣಾ ಸಚಿವಾಲಯದಿಂದ ಇನ್ನೂ ಕಡ್ಡಾಯ ಅನುಮತಿ ಸಿಗದ ಕಾರಣದಿಂದ ಪುಸ್ತಕ ಪ್ರಕಟವಾಗಿಲ್ಲ ಎಂದು ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲೊಂದು ಲವ್ ಜಿಹಾದ್ – Kannada News | Love Jihad In Bengaluru: Man Cheating to West Bengal Hindu Woman

ಬೆಂಗಳೂರು, (ಫೆಬ್ರವರಿ 10): ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯೋರ್ವಳಿಗೆ ಹೆಣ್ಣು ಮಗು ಕರುಣಿಸಿ ಸೈಯದ್ ಎನ್ನುವ ವ್ಯಕ್ತಿ ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬಿಟಿಎಂ ಲೇಔಟ್​​ನ ಸೈಯದ್ ಇಮ್ತಿಯಾಜ್‌ ಎನ್ನುವಾತ ಸಾಮಾಜಿಕ ಜಾಲತಾಣಗಳಲ್ಲಿ ಪಶ್ಚಿಮಬಂಗಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಯನ್ನು ಜೈನಾಬ್​ ಎಂದು ಹೆಸರಿಟ್ಟು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಬಳಿಕ 2025 ಜುಲೈನಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ದಂಪತಿ ಒಂದು ಹೆಣ್ಣು ಮಗುವಾಗಿದೆ. ಆಗ ಸೈಯದ್ ತಾಯಿ ಹಾಗೂ ಮಗುವನ್ಉ ಕೋಲ್ಕತ್ತಾದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link