ವ್ಯಕ್ತಿಗೆ ಬಲವಂತವಾಗಿ ಮೂತ್ರ ಕುಡಿಸಿದ ಹಳ್ಳಿ ಜನ
ಲಾತೇಹಾರ್, ಮಾರ್ಚ್ 20: ವ್ಯಕ್ತಿಯೊಬ್ಬರಿಗೆ ಹಳ್ಳಿಯ ಜನರು ಬಲವಂತವಾಗಿ ಮೂತ್ರ ಕುಡಿಸಿರುವ ಘಟನೆ ಜಾರ್ಖಂಡ್ನ ಲಾತೇಹಾರ್ ಜಿಲ್ಲೆಯಲ್ಲಿ ನಡೆದಿದೆ. ವೃದ್ಧರೊಬ್ಬರು ಮಾಟಮಂತ್ರ(Witchcraft) ಮಾಡುತ್ತಿದ್ದಾರೆ ಎಂದು ಆರೋಪಿಸಿ ಅವರಿಗೆ ಮೂತ್ರ ಕುಡಿಸಿದ್ದಾರೆ. ಗ್ರಾಮದಲ್ಲಿ ಇತ್ತೀಚೆಗೆ ನಡೆದ ರಸ್ತೆ ಅಪಘಾತಕ್ಕೂ ಹಾಗೂ ಅವರಿಗೂ ಸಂಬಂಧ ಕಲ್ಪಿಸಿ ಈ ಕೃತ್ಯವೆಸಗಿದ್ದಾರೆ. ಮಗ ಬ್ರಜೇಶ್ ಮುಂಡಾ ಅವರ ಪ್ರಕಾರ, ಈ ಘಟನೆ ಮಂಗಳವಾರ ನಡೆದಿದೆ. ರಸ್ತೆ ಅಪಘಾತದಲ್ಲಿ ಮಹಿಳೆಯೊಬ್ಬರ ಸಾವಿಗೆ ವೀರೇಂದ್ರ ಸಿಂಗ್ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅವರು ಮಾಟಮಂತ್ರದ ಮೂಲಕ…