Headlines

ಮಗಳನ್ನು ಶಾಲೆಗೆ ಬಿಟ್ಟ ಮಹಿಳೆಗೆ ಥಳಿಸಿ ಚಿನ್ನ ಕದ್ದ ಕಳ್ಳರು!

ನವದೆಹಲಿ, ಮಾರ್ಚ್ 19: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಆಘಾತಕಾರಿ ಘಟನೆಯೊಂದು ನಡೆದಿದೆ. ತನ್ನ ಮಗಳನ್ನು ಶಾಲಾ ಬಸ್​​ಗೆ ಹತ್ತಿಸಲು ಸ್ಕೂಟಿಯಲ್ಲಿ ಬಂದಿದ್ದ ಮಹಿಳೆ ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಯುವಕರು ಬೈಕ್​ಗಳಲ್ಲಿ ಬಂದು ಆಕೆಯನ್ನು ಅಡ್ಡಹಾಕಿದರು. ಆಕೆಯ ಕುತ್ತಿಗೆಯಲ್ಲಿದ್ದ ಸರ, ಕೈಯಲ್ಲಿದ್ದ ಬ್ಯಾಗ್ ಕಸಿದುಕೊಳ್ಳಲು ಪ್ರಯತ್ನಿಸಿದರು. ಅವರಿಂದ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆಯುಧಗಳನ್ನು ತೆಗೆದು ಆಕೆಯ ಮೇಲೆ ದಾಳಿ ನಡೆಸಿದರು. ಇಷ್ಟೆಲ್ಲ ನಡೆದಿದ್ದು ಬೆಳಗ್ಗೆ ಜನರೆಲ್ಲ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗಲೇ. ಆದರೂ ಯಾರಿಗೂ ಹೆದರದ ಕಳ್ಳರು ಆಕೆಯನ್ನು ಲೂಟಿ ಮಾಡಿದ್ದಾರೆ….

Read More

WITT Summit 2026: WITT ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯಿಂದ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಹತ್ವದ ಚರ್ಚೆ

ನವದೆಹಲಿ, ಮಾರ್ಚ್ 19: ಟಿವಿ9 ನೆಟ್​ವರ್ಕ್ ಆಯೋಜಿಸುವ ವಾಟ್ ಇಂಡಿಯಾ ಥಿಂಕ್ಸ್ ಟುಡೇ (WITT Summit 2026) ಶೃಂಗಸಭೆ ತನ್ನ ನಾಲ್ಕನೇ ಆವೃತ್ತಿಯೊಂದಿಗೆ ಶೀಘ್ರದಲ್ಲೇ ಶುರುವಾಗಲು ಸಜ್ಜಾಗಿದೆ. ಮಾರ್ಚ್ 23 ಮತ್ತು 24ರಂದು ದೆಹಲಿಯಲ್ಲಿ ಈ ಶೃಂಗಸಭೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮುಖ್ಯ ಭಾಷಣ ಮಾಡಲಿದ್ದಾರೆ. ಸತತ ಮೂರನೇ ಬಾರಿಗೆ ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ಮೋದಿ ಭಾರತದ ಅಭಿವೃದ್ಧಿಯ ದಿಕ್ಕಿನ ಕುರಿತು ಮಾತನಾಡಲಿದ್ದಾರೆ. ಈ ಶೃಂಗಸಭೆಯು ದೇಶದ…

Read More

IPL 2026: ಯುವರಾಜ್ ಗರಡಿಯಲ್ಲಿ ಪಳಗಿದ 7 ಆಟಗಾರರು ಅಬ್ಬರಿಸಲು ರೆಡಿ

2026 ರ ಐಪಿಎಲ್ ಮಾರ್ಚ್ 28 ರಂದು ಆರಂಭವಾಗಲಿದೆ. ಪ್ರತಿ ವರ್ಷದಂತೆ, ವಿಶ್ವದ ಕೆಲವು ಅತ್ಯುತ್ತಮ ಕ್ರಿಕೆಟಿಗರು 10 ವಿಭಿನ್ನ ತಂಡಗಳ ಪರ ಕಣಕ್ಕಿಳಿಯಲಿದ್ದಾರೆ. ಆದರೆ ಈ ಬಾರಿ ಒಂದೇ ಕೋಚ್​ನ ಗರಡಿಯಲ್ಲಿ ಪಳಗಿದ 7 ಆಟಗಾರರು ಅಬ್ಬರಿಸಲು ಸಜ್ಜಾಗಿದ್ದಾರೆ. ಆ ಒಬ್ಬ ಕೋಚ್ ಯುವರಾಜ್ ಸಿಂಗ್ ಆಗಿದ್ದರೆ, ಅವರ ಗರಡಿಯಲ್ಲಿ ಪಳಗಿದ 7 ಆಟಗಾರರು ಯಾರು ಎಂಬುದರ ಪಟ್ಟಿ ಈ ಕೆಳಗಿನಂತಿದೆ. ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿ ಐಪಿಎಲ್‌ನಲ್ಲಿ ಹಾಗೂ ಟೀಂ ಇಂಡಿಯಾದಲ್ಲಿ ಅಬ್ಬರಿಸುತ್ತಿರುವ ಅಭಿಷೇಕ್…

Read More

Eid al-Fitr: ಒಂದು ದಿನ ಮೊದಲೇ ಕರಾವಳಿ ಭಾಗದಲ್ಲಿ ರಂಜಾನ್ ಹಬ್ಬ ಆಚರಣೆ: ಮಾ 20ರಂದು ಸಾರ್ವತ್ರಿಕ ರಜೆ ಘೋಷಣೆ

ಮಂಗಳೂರು, ಮಾರ್ಚ್​ 19: ರಾಜ್ಯದ ಕರಾವಳಿ ಭಾಗದಲ್ಲಿ ನಾಳೆ ಅಂದರೆ ಮಾರ್ಚ್​​ 20ರಂದು ‘ಈದುಲ್ ಫಿತ್ರ್’ ಹಬ್ಬ (eid-ul-fitr) ಆಚರಣೆ ಮಾಡಲಾಗುತ್ತಿದೆ. ಆ ಮೂಲಕ ಒಂದು ದಿನ ಮೊದಲೇ ರಂಜಾನ್ ಹಬ್ಬ ಆಚರಣೆ ಮಾಡಲಾಗುತ್ತಿದೆ. ಇಂದು ಶವ್ವಾಲ್ ಮಾಸದ ಚಂದ್ರದರ್ಶನ ಹಿನ್ನೆಲೆ ಶುಕ್ರವಾರ ರಂಜಾನ್ ಹಬ್ಬ ಆಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಘೋಷಣೆ ಮಾಡಿದ್ದಾರೆ. ಆ ಮೂಲಕ ಕಳೆದ ಒಂದು ತಿಂಗಳಿಂದ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದ ಉಪವಾಸ ವ್ರತ…

Read More

ಫೇಸ್​​ಬುಕ್​ನಲ್ಲಿ ‘ನೀಲಿ ಡ್ರಮ್’ ಪೋಸ್ಟ್ ನೋಡಿ ಹೆಂಡತಿಯನ್ನು ಪ್ರೇಮಿ ಜೊತೆ ಹೋಗಲು ಬಿಟ್ಟ ಗಂಡ!

ಬುಲಂದ್‌ಶಹರ್, ಮಾರ್ಚ್ 19: ಉತ್ತರ ಪ್ರದೇಶದ ವ್ಯಕ್ತಿಯೊಬ್ಬರ ಹೆಂಡತಿ ಫೇಸ್​​ಬುಕ್​ನಲ್ಲಿ ಹಾಕಿದ್ದ “ಸಿಮೆಂಟ್ ಔರ್ ಡ್ರಮ್” (ಸಿಮೆಂಟ್ ಮತ್ತು ಡ್ರಮ್) ಎಂಬ ಪೋಸ್ಟ್ ಆ ವ್ಯಕ್ತಿಯನ್ನು ಎಷ್ಟು ಹೆದರಿಸಿದೆಯೆಂದರೆ ಅವರು ತನ್ನ ಹೆಂಡತಿಯನ್ನು ತನ್ನ ಪ್ರೇಮಿಯೊಂದಿಗೆ ಹೋಗಲು ಬಿಟ್ಟಿದ್ದಾರೆ. ಇದು ಉತ್ತರ ಪ್ರದೇಶದ ಬುಲಂದ್‌ಶಹರ್‌ನ ರಾಜ್‌ಕುಮಾರ್ ಅವರ ಕಥೆ. ಅವರು ತಮ್ಮ ಜೀವವನ್ನು ಉಳಿಸಿಕೊಳ್ಳಲು ಪತ್ನಿಯನ್ನು ಆಕೆಯ ಪ್ರಿಯಕರನಿಗೆ (Love Story) ಬಿಟ್ಟುಕೊಟ್ಟಿದ್ದಾರೆ. ರಾಜ್‌ಕುಮಾರ್ ಅವರ ಪತ್ನಿಗೆ ಅನೈತಿಕ ಸಂಬಂಧವಿತ್ತು. ಆಕೆ ತನ್ನ ಪ್ರೇಮಿಯೊಂದಿಗೆ ಇರಲು ಆಗಾಗ…

Read More

ರಾತ್ರಿ ಮಲಗುವ 3 ಗಂಟೆ ಮುಂಚಿತವಾಗಿ ಊಟ ಮಾಡಿ; ಈ ರೋಗ ಬೇಕು ಅಂದ್ರು ಬರುವುದಿಲ್ಲ!

ನೀವು ರಾತ್ರಿ ಮಲಗುವ ಮೊದಲು ಸೇವನೆ ಮಾಡುವ ಆಹಾರ ಆರೋಗ್ಯ ಕಾಪಾಡಿಕೊಳ್ಳಲು ತುಂಬಾ ಮುಖ್ಯವಾಗುತ್ತದೆ. ಅದರಲ್ಲಿಯೂ ಆಹಾರವನ್ನು 3 ಗಂಟೆಗಳ ಮೊದಲು ಸೇವನೆ ಮಾಡಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ಒಂದು ಅಭ್ಯಾಸ ಅನೇಕ ರೀತಿಯ ರೋಗಗಳನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಅಷ್ಟು ಮಾತ್ರವಲ್ಲ, ಇದಕ್ಕೆ ಪೂರಕವಾಗಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದು, ವ್ಯಕ್ತಿ ಮಲಗುವ 3 ಗಂಟೆಗಳ ಮೊದಲು ಆಹಾರ ಸೇವನೆ ಮಾಡುವುದರಿಂದ ಅಧಿಕ ರಕ್ತದೊತ್ತಡದಿಂದ (Hypertension) ಹೃದಯ ಸಂಬಂಧಿ…

Read More

Explainer: ಬೆಂಗಳೂರಿಗೆ ಮಳೆ ತಂದಿದ್ದೇ ಬಿಲ್ ಗೇಟ್ಸ್ ಅಂತೆ; ಈ ವೈರಲ್ ಸುದ್ದಿ ಎಷ್ಟು ನಿಜ?

ನವದೆಹಲಿ, ಮಾರ್ಚ್ 19: ಅಮೆರಿಕದ ಅತಿ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ (Bill Gates) ಮಳೆಯ ಸುದ್ದಿ ಭಾರೀ ವೈರಲ್ ಆಗಿದೆ. ಕರ್ನಾಟಕದ ಹಲವೆಡೆ ಸುರಿಯುತ್ತಿರುವ ದಿಢೀರ್ ಮಳೆಗೆ ಹಾಗೂ ಹವಾಮಾನ ಬದಲಾವಣೆಯ ಹಿಂದೆ ಅವರದೇ ಕೈವಾಡವಿದೆಯೇ? ಎಂಬ ಚರ್ಚೆಗಳು ಶುರುವಾಗಿವೆ. ಮೋಡ ಬಿತ್ತನೆಯ ಬಗ್ಗೆ ನಿಮಗೆಷ್ಟು ಗೊತ್ತು? ಬಿಲ್ ಗೇಟ್ಸ್ ಬಗ್ಗೆ ಭಾರೀ ಸುದ್ದಿಗಳು ಹರಿದಾಡುತ್ತಿವೆ. ಸುದ್ದಿಗಳು ಮತ್ತು ರೀಲ್ಸ್​ಗಳಲ್ಲಿ ಮೋಡ ಬಿತ್ತನೆ, ಬಿಲ್ ಗೇಟ್ಸ್ ಮಳೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. “ಕಳೆದ ವಾರ ಕರ್ನಾಟಕದಲ್ಲಿ…

Read More

ಹುಬ್ಬಳ್ಳಿ: ಆಡಿ ಕಾರು-ಬೈಕ್ ಸ್ಟಂಟ್ ರೀಲ್ಸ್ ಹುಚ್ಚಾಟಕ್ಕೆ ಬಿಜೆಪಿ ಮುಖಂಡನ ಪತ್ರ ಬಲಿ

ಹುಬ್ಬಳ್ಳಿ, (ಮಾರ್ಚ್ 19): ರೀಲ್ಸ್  (Reels) ಹುಚ್ಚಾಟಕ್ಕೆ ಬಿದ್ದು ಬಿಜೆಪಿ ಮುಖಂಡನ ಪುತ್ರ ಸಾವನ್ನಪ್ಪಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ  (Hubballi) ನಡೆದಿದೆ. ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ(15) ಮೃತಟ್ಟಿದ್ದಾನೆ. ಹುಬ್ಬಳ್ಳಿಯ ಲಕ್ಷ್ಮಿ ನಗರದ ನಿವಾಸಿಯಾಗಿರುವ ನಮೀಷ ಸಂಗಳದ, ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಆದ್ರೆ, ಯುಗಾದಿ ಹಬ್ಬಕ್ಕೆಂದು ಹುಬ್ಬಳ್ಳಿಗೆ ಬಂದಿದ್ದು, ಈ ವೇಳೆ ಅಪಯಕಾರಿ ರೀಲ್ಸ್ ಮಾಡಲು ಹೋಗಿ ದುರಂತ ಸಾವು ಕಂಡಿದ್ದಾನೆ. ಇದರಿಂದ…

Read More

IPL: ಐಪಿಎಲ್ ಇತಿಹಾಸದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲದ ಐವರು ಲೆಜೆಂಡರಿ ಬೌಲರ್​ಗಳಿವರು

19ನೇ ಆವೃತ್ತಿಯ ಐಪಿಎಲ್​ ಆರಂಭಕ್ಕೂ ಮುನ್ನ ಕಳೆದ 18 ಆವೃತ್ತಿಗಳ ಸ್ವಾರಸ್ಯಕರ ಸಂಗತಿಗಳ ಮೇಲೆ ಕಣ್ಣು ಹಾಯಿಸೋಣ. ಅದರಂತೆ ಐಪಿಎಲ್‌ನ 18 ಆವೃತ್ತಿಗಳ ಇತಿಹಾಸದಲ್ಲಿ ಒಟ್ಟು 15 ಬೌಲರ್‌ಗಳು ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಒಂದು ಆವೃತ್ತಿಯಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಈ ಪಟ್ಟಿಯಲ್ಲಿ, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್ ಮತ್ತು ಡ್ವೇನ್ ಬ್ರಾವೋ ಎಂಬ ಮೂವರು ಕ್ರಿಕೆಟಿಗರು ಮಾತ್ರ ಎರಡು ಬಾರಿ ಪರ್ಪಲ್ ಕ್ಯಾಪ್ ಗೆದ್ದಿದ್ದಾರೆ. ಇವರ…

Read More

ಯುಗಾದಿ ದಿನವೇ ಧಾರವಾಡದಲ್ಲಿ ರಕ್ತಪಾತ: ಆಸ್ತಿಗಾಗಿ ಒಡ ಹುಟ್ಟಿದ ತಂಗಿಯನ್ನೇ ಕೊಚ್ಚಿ ಕೊಂದ ಅಣ್ಣ!

ಧಾರವಾಡ, ಮಾರ್ಚ್​ 19: ಇಂದು ರಾಜ್ಯದೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ. ನಾಡಿನ ಜನ ಬೇವು-ಬೆಲ್ಲ ಸವಿದು ಖುಷಿಪಟ್ಟರೆ, ಇತ್ತ ಧಾರವಾಡದಲ್ಲಿ ಯುಗಾದಿ ದಿನವೇ ರಕ್ತಪಾತವಾಗಿದೆ. ಆಸ್ತಿ ವಿಚಾರಕ್ಕೆ ಅಣ್ಣನಿಂದ ತಂಗಿಯ ಬರ್ಬರ ಕೊಲೆ (kill) ನಡೆದಿರುವಂತಹ ಘಟನೆ ಧಾರವಾಡ ತಾಲೂಕಿನ ಅಮ್ಮಿನಭಾವಿಯಲ್ಲಿ ನಡೆದಿದೆ. ಶಿವಕ್ಕ(45) ಮೃತ ತಂಗಿ. ಹನುಮಂತ ಯಲಿವಾಳ ಹತ್ಯೆಗೈದ ಅಣ್ಣ. ಸದ್ಯ ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ನಡೆದಿದ್ದೇನು? ಹನುಮಂತ ಯಲಿವಾಳ ಮತ್ತು ಶಿವಕ್ಕ ಅಣ್ಣ-ತಂಗಿ. ತಂದೆಯ ಆಸ್ತಿಯಲ್ಲಿ ನನಗೂ ಪಾಲಿದೆ,…

Read More