Category Archives: Blog

Your blog category

Patanjali: ನಿಮ್ಮ ಜೀವನದಿಂದ ಈ ವಸ್ತುಗಳು ದೂರವೇ ಇರಲಿ: ಬಾಬಾ ರಾಮದೇವ್ ಸಲಹೆ – Kannada News | Baba Ramdev recommends quitting few things for healthier life

ಯೋಗ ಗುರು ಬಾಬಾ ರಾಮದೇವ್ (Baba Ramdev) ಅವರು ಸ್ವದೇಶಿ ಉತ್ಪನ್ನಗಳ ಅಳವಡಿಕೆಗೆ ಒತ್ತು ನೀಡುತ್ತಾರೆ. ಅವರು ಯೋಗ ಮತ್ತು ಆಯುರ್ವೇದ ಎರಡನ್ನೂ ಪ್ರತಿ ಮನೆಗೆ ತಲುಪಿಸಲು ಪ್ರಯತ್ನಿಸುತ್ತಿದ್ದಾರೆ. ಪತಂಜಲಿ ವೆಲ್ನೆಸ್ ಮೂಲಕ, ಅವರು ಆಗಾಗ್ಗೆ ಆರೋಗ್ಯದ ವಿಚಾರಗಳಲ್ಲಿ ಸಲಹೆ ನೀಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ನಮ್ಮ ಬದಲಾದ ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದಾಗಿ ಆರೋಗ್ಯಕ್ಕೆ ಹಾನಿ ಆಗುತ್ತಿದೆ. ವಯಸ್ಸಾದಾಗ ಬರುತ್ತಿದ್ದ ಕಾಯಿಲೆಗಳು ಈಗ ಕಿರಿಯ ವಯಸ್ಸಿನವರಲ್ಲೇ ಕಾಣಿಸಿಕೊಳ್ಳುತ್ತಿವೆ. ಹಿಂದಿನ ಕಾಲದಲ್ಲಿ, ಜನರು ಆಯುರ್ವೇದ ಉತ್ಪನ್ನಗಳು ಮತ್ತು ಮನೆಯಲ್ಲಿ ಬೇಯಿಸಿದ ಆಹಾರದ ಸೇವನೆ ಹೆಚ್ಚು ಮಾಡುತ್ತಿದ್ದರು. ಪ್ರಕೃತಿ ಚಿಕಿತ್ಸೆ ಮತ್ತು ಆಯುರ್ವೇದ ಉತ್ಪನ್ನಗಳ ಬಳಕೆ ಎಷ್ಟು ಮಹತ್ವದ್ದು ಎಂದು ಸಹ ಬಾಬಾ ರಾಮದೇವ್ ಒತ್ತಿಹೇಳುತ್ತಾರೆ. ನಮ್ಮ ಜೀವನದಿಂದ ಯಾವ ವಿಷಯಗಳನ್ನು ತೆಗೆದುಹಾಕಬೇಕು ಎಂಬುದನ್ನು ಸಹ ಅವರು ವಿವರಿಸಿದ್ದಾರೆ.

ನಮ್ಮ ಅನಾರೋಗ್ಯಕರ ಜೀವನಶೈಲಿ ನಿಧಾನವಾಗಿ ನಮಗೆ ಗೊತ್ತೇ ಆಗದಂತೆ ನಮ್ಮನ್ನು ಅನಾರೋಗ್ಯಕ್ಕೆ ಕೊಂಡೊಯ್ಯುತ್ತದೆ. ಚಿಕಿತ್ಸೆಗಾಗಿ ಆಸ್ಪತ್ರೆ, ಕ್ಲಿನಿಕ್​ಗಳನ್ನು ಸುತ್ತುತ್ತೇವೆ. ಇದಕ್ಕೆ ಹಣ ವ್ಯಯವಾಗುವುದು ಮಾತ್ರವಲ್ಲ, ದೈಹಿಕ ಮತ್ತು ಮಾನಸಿಕ ಬಳಲಿಕೆಯೂ ಆಗುತ್ತದೆ. ಕಾಯಿಲೆ ಬಂದಾಗ ಚಿಕಿತ್ಸೆ ಪಡೆಯುವುದು ಸರಿ. ಆದರೆ, ಕಾಯಿಲೆ ಬರದಂತೆಯೇ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವುದು ಇನ್ನೂ ಉತ್ತಮ. ನಿಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ವಕ್ಕರಿಸಿರುವ ಕೆಲ ಅನಾರೋಗ್ಯಕರ ಸಂಗತಿಗಳನ್ನು ತೆಗೆದುಹಾಕಿದರೆ ಇದು ಸಾಧ್ಯವಾಗುತ್ತದೆ. ಬಾಬಾ ರಾಮದೇವ್ ಯಾವ ವಿಷಯಗಳನ್ನು ತೆಗೆದುಹಾಕಲು ಸಲಹೆ ನೀಡಿದ್ದಾರೆ, ಅದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕಿಡ್ನಿ ಸಮಸ್ಯೆಗಳಿಗೆ ರಾಮಬಾಣವಾಗಬಲ್ಲ ಮನೆಮದ್ದುಗಳು; ಬಾಬಾ ರಾಮದೇವ್ ಸಲಹೆ ಇದು

ಬಿಳಿ ವಸ್ತುಗಳನ್ನು ತೆಗೆದುಹಾಕಿ

ನಮ್ಮ ಜೀವನದಿಂದ ತೊಲಗಬೇಕೆಂದು ಬಾಬಾ ರಾಮದೇವ್ ಶಿಫಾರಸು ಮಾಡುವ ಬಿಳಿ ಆಹಾರಗಳಲ್ಲಿ ಸಕ್ಕರೆಯೂ ಒಂದು. ಇದು ಇಂದಿನ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಇದು ಬೊಜ್ಜು ಹೆಚ್ಚಿಸಿ ಮಧುಮೇಹಕ್ಕೆ ಕಾರಣವಾಗುತ್ತದೆ. ಅಲ್ಲದೆ, ಇದನ್ನು ಚರ್ಮಕ್ಕೆ ಹಾನಿಕಾರಕ ಆಹಾರವೆಂದೂ ಸಹ ಪರಿಗಣಿಸಲಾಗುತ್ತದೆ. ಬಿಳಿ ಹಿಟ್ಟು ಅಥವಾ ಮೈದಾವನ್ನು ನಮ್ಮ ಜೀವನದಿಂದ ತೆಗೆದುಹಾಕಬೇಕು ಎಂದು ಬಾಬಾ ರಾಮದೇವ್ ಹೇಳುತ್ತಾರೆ. ಇದಲ್ಲದೆ, ಬಿಳಿ ಅಕ್ಕಿಯನ್ನು ತಪ್ಪಿಸಬೇಕು ಮತ್ತು ರೀಫೈನ್ಡ್ ಆಯಿಲ್ ಅನ್ನೂ ವ್ಯರ್ಜಿಸಬೇಕು ಎನ್ನುತ್ತಾರೆ.

ಸಿಂಥೆಟಿಕ್ ಪ್ರಾಡಕ್ಟ್ ತಪ್ಪಿಸಿ

ಬಾಬಾ ರಾಮದೇವ್ ಸ್ಥಳೀಯ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ಪ್ರಚಾರ ಮಾಡುತ್ತಾರೆ. ರಾಸಾಯನಿಕ ಆಧಾರಿತ ಶಾಂಪೂಗಳು, ಸೋಪುಗಳು, ಟೂತ್‌ಪೇಸ್ಟ್‌ಗಳು ಅಥವಾ ಪರ್ಸನಲ್ ಕೇರ್ ಐಟಂನಂತಹ ಸಿಂಥೆಟಿಕ್ ಉತ್ಪನ್ನಗಳಿಂದ ದೂರ ಉಳಿಯುವುದು ಒಳ್ಳೆಯದು. ಇದರ ಬದಲಾಗಿ, ನಾವು ನೈಸರ್ಗಿಕ ಪರ್ಯಾಯಗಳನ್ನು ಅಳವಡಿಸಿಕೊಳ್ಳಬೇಕು. ಅದೇ ರೀತಿ, ಶುಚಿಗೊಳಿಸುವ ಉತ್ಪನ್ನಗಳ ಬಳಕೆಯುಇ ಸಹ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ವಾಸ್ತವವಾಗಿ, ರಾಸಾಯನಿಕ ಆಧಾರಿತ ಉತ್ಪನ್ನಗಳು ನಿಮ್ಮ ಲಿವರ್​ನಿಂದ ಹಿಡಿದು ಕಿಡ್ನಿವರೆಗೆ ಅನೇಕ ಅಂಗಗಳಿಗೆ ಹಾನಿಗೊಳಿಸಬಹುದು.

ಇದನ್ನೂ ಓದಿ: Hair Fall Treatment: ಕೂದಲು ಉದುರುವಿಕೆ ನಿಲ್ಲಿಸಲು ಮನೆಮದ್ದುಗಳು: ಸರಳ ಪರಿಹಾರ ಸೂಚಿಸುವ ಬಾಬಾ ರಾಮದೇವ್

ಹಲವು ಆಯ್ಕೆಗಳು ಲಭ್ಯ

ರಾಸಾಯನಿಕ ಆಧಾರಿತ ಉತ್ಪನ್ನಗಳಿಗೆ ಪರ್ಯಾಯವಾಗಿರುವ ಅನೇಕ ಆರೋಗ್ಯಕರ ಉತ್ಪನ್ನಗಳು ಲಭ್ಯ ಇವೆ. ರೀಫೈನ್ಡ್ ಆಯಿಲ್ ಬದಲು ಸಾಸಿವೆ ಎಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆಯಂತಹ ನೈಸರ್ಗಿಕ ಎಣ್ಣೆಗಳನ್ನು ಬಳಸಬಹುದು. ಹಣ್ಣುಗಳು, ಬೀಜಗಳಿಂದ ಕೋಲ್ಡ್ ಪ್ರೆಸ್ ಮೂಲಕ ತೆಗೆಯುವ ವರ್ಜಿನ್ ಆಯಿಲ್ ಕೂಡ ಪ್ರಕೃತಿಯ ಶುದ್ಧ ರೂಪವೆಂದು ಬಾಬಾ ರಾಮದೇವ್ ಹೇಳುತ್ತಾರೆ. ಸಕ್ಕರೆ ಬದಲು ಬೆಲ್ಲ ಅಥವಾ ಕಚ್ಚಾ ಸಕ್ಕರೆಯನ್ನು (ಬ್ಲೀಚಿಂಗ್ ಏಜೆಂಟ್‌ಗಳನ್ನು ಬಳಸದ ಸಕ್ಕರೆಯ ಒಂದು ರೂಪ) ಬದಲಾಯಿಸಬಹುದು.

ಸಿಂಥೆಟಿಕ್ ವಸ್ತುಗಳು ರೋಗಕ್ಕೆ ಕಾರಣ

ಬಾಬಾ ರಾಮದೇವ್ ಹೇಳುವಂತೆ ನಾವು ಯಾವುದೇ ರೀತಿಯ ಸಿಂಥೆಟಿಕ್ ಉತ್ಪನ್ನಗಳ ಬಳಕೆ ತಪ್ಪಿಸಬೇಕು. ಇದರಲ್ಲಿ ದಂತ ಆರೈಕೆ, ಚರ್ಮ ಮತ್ತು ಕೂದಲಿನ ಆರೈಕೆ, ಮತ್ತು ಪಾತ್ರೆಗಳು, ಬಟ್ಟೆ ಮತ್ತು ಮನೆಯ ಕ್ಲೀನರ್‌ಗಳು ಸಹ ಸೇರಿವೆ. ಈ ರಾಸಾಯನಿಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ, ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಈ ಉತ್ಪನ್ನಗಳು ಕ್ಯಾನ್ಸರ್ ಹಾಗು, ಕಿಡ್ನಿ ಮತ್ತು ಮೂತ್ರಪಿಂಡದ ಸಮಸ್ಯೆಗಳಂತಹ ಗಂಭೀರ ಕಾಯಿಲೆಗಳಿಗೆ ಸಹ ಕಾರಣವಾಗಬಹುದು. ಆದ್ದರಿಂದ, ನಾವು ನೈಸರ್ಗಿಕ ಉತ್ಪನ್ನಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂಬುದು ಬಾಬಾ ಸಲಹೆ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’: ಸತತ 3 ಗಂಟೆಗಳ ಮನರಂಜನೆ – Kannada News | BBK 12 Gilli Nata Colors Dodmane Habba special show on 14 February on Colors Kannada

ಬಿಗ್ ಬಾಸ್ ಮುಗಿಯಿತು, ಮುಂದೇನು ಎಂದು ಕೇಳುತ್ತಿದ್ದ ವೀಕ್ಷಕರಿಗೆ ಇಲ್ಲಿದೆ ಮಸ್ತ್ ಅವಕಾಶ. ‘ಬಿಗ್ ಬಾಸ್ ಕನ್ನಡ 12’ (BBK 12) ಮುಕ್ತಾಯದ ನಂತರವೂ ಆ ಗುಂಗಿನಲ್ಲೇ ಇರುವ ಅಭಿಮಾನಿಗಳಿಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿಯು ಭರ್ಜರಿ ಉಡುಗೊರೆಯೊಂದನ್ನು ನೀಡಲು ಮುಂದಾಗಿದೆ. ಫೆಬ್ರವರಿ 14ರಂದು ‘ಕಲರ್ಸ್‌ ದೊಡ್ಮನೆ ಹಬ್ಬ’ (Colors Dodmane Habba) ಎಂಬ ಅದ್ದೂರಿ ಕಾರ್ಯಕ್ರಮ ಪ್ರಸಾರ ಆಗಲಿದೆ. ಸತತ ಮೂರು ಗಂಟೆಗಳ ಕಾಲ ವೀಕ್ಷಕರನ್ನು ರಂಜಿಸಲಿದೆ ಈ ಕಾರ್ಯಕ್ರಮ. ಫೆಬ್ರವರಿ 14ರಂದು ಕರುನಾಡಿನ ಮನೆ ಮಂದಿಯೆಲ್ಲ ಕುಳಿತು ನೋಡಬಹುದಾದ ಅತ್ಯುತ್ತಮ ಕಾರ್ಯಕ್ರಮ ಇದಾಗಲಿದೆ ಎಂದು ವಾಹಿನಿ ಹೇಳಿದೆ.

‘ಕಲರ್ಸ್‌ ದೊಡ್ಮನೆ ಹಬ್ಬ’ ಕಾರ್ಯಕ್ರಮ ಫೆ.14ರಂದು ಸಂಜೆ 6 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ‘ಕಲರ್ಸ್‌ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗಲಿದೆ. ‘ಬಿಗ್ ಬಾಸ್ ಕನ್ನಡ ಸೀಸನ್‌ 12’ರ ಎಲ್ಲ ಸ್ಪರ್ಧಿಗಳು ಹೊರಬಂದ ಮೇಲೆ ಇದೇ ಮೊದಲ ಬಾರಿಗೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದು ಈ ಕಾರ್ಯಕ್ರಮದ ವಿಶೇಷ ಆಗಿರಲಿದೆ.

ಬಿಗ್ ಬಾಸ್ ಮನೆಯೊಳಗಿನ ಗಂಭೀರ ವಾತಾವರಣದ ಬದಲು ಇಲ್ಲಿ ಕೇವಲ ನಗು, ಹರಟೆ ಮತ್ತು ಸಂಭ್ರಮಕ್ಕೆ ಮಾತ್ರ ಆದ್ಯತೆ ನೀಡಲಾಗಿದೆ. ನಕ್ಕು ನಗಿಸುವ ಸಾಕಷ್ಟು ಝಲಕ್‌ಗಳು ‘ಕಲರ್ಸ್‌ ದೊಡ್ಮನೆ ಹಬ್ಬ’ದ ಹೈಲೈಟ್‌ ಆಗಿರಲಿವೆ. ‘ಭಾಗ್ಯಲಕ್ಷ್ಮೀ’ ಸೀರಿಯಲ್‌ ನಟಿ ಹಾಗೂ ನಿರೂಪಕಿ ಸುಷ್ಮಾ ರಾವ್ ಅವರು ಲವಲವಿಕೆಯಿಂದ ಈ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೇವಲ ಹಾಡು, ಕುಣಿತ ಮಾತ್ರವಲ್ಲದೇ ಬಿಗ್ ಬಾಸ್ ಮನೆಯ ಟಾಸ್ಕ್‌ಗಳನ್ನು ನೆನಪಿಸುವಂತಹ ತಮಾಷೆಯ ಗೇಮ್‌ಗಳನ್ನು ಸುಷ್ಮಾ ಅವರು ಆಡಿಸಿ ರಂಜಿಸಿದ್ದಾರೆ. ಇದು ಸ್ಪರ್ಧಿಗಳ ನಡುವಿನ ಹಳೆಯ ಕಾಲೆಳೆಯುವ ಗುಣವನ್ನು ಮತ್ತೆ ನೆನಪಿಸಲಿದೆ. ಈ ಬಾರಿ ಬಿಗ್ ಬಾಸ್‌ ಮನೆಯಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾದ ಗಿಲ್ಲಿ ನಟ ಕೂಡ ಇದರಲ್ಲಿ ಭಾಗಿ ಆಗಿದ್ದಾರೆ.

ಇದನ್ನೂ ಓದಿ: ಫೆ.27ಕ್ಕೆ ಗಿಲ್ಲಿ ಸಿನಿಮಾ ‘ಸೂಪರ್ ಹಿಟ್’ ರಿಲೀಸ್; ಈಗಲೇ ಬಂದಿದೆ ಒಟಿಟಿ ಡಿಮ್ಯಾಂಡ್

‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಗಿಲ್ಲಿ ನಟ ಅವರ ಅಭಿಮಾನಿಗಳಿಗಾಗಿಯೇ ಈ ಕಾರ್ಯಕ್ರಮದಲ್ಲಿ ವಿಶೇಷ ವೇದಿಕೆ ಕಲ್ಪಿಸಲಾಗಿದೆ. ಅವರ ಬಿಗ್‌ ಬಾಸ್‌ ಜರ್ನಿಯನ್ನು ಸಂಭ್ರಮಿಸುವ ಜೊತೆಗೆ, ಫ್ಯಾನ್ಸ್‌ ಸಹ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನವನ್ನೇ ಬದಲಾಯಿಸಿದ್ದೇಗೆ ಕಮಲಾಕರ್​​ ಭಟ್​​ ಪರಿಚಯ? ಸತ್ಯ ಬಿಚ್ಚಿಟ್ಟ ಸ್ನೇಹಿತೆ – Kannada News | Suchitra’s Life Transformed from Lottery to Luxury After Relationship with Kamalakar Bhat

ಕಮಲಾಕರ್​​ ಭಟ್​ ಮತ್ತು ಸುಚಿತ್ರಾ

ಕಾರವಾರ, ಫೆಬ್ರವರಿ 10: ಸಿದ್ದಾಪುರದ ವಸಂತ್​​ ನಾಯ್ಕ್​​ ಕೊಲೆ ಪ್ರಕರಣದಲ್ಲಿ ಜೈಲು ಸೇರಿರೋ ಸುಚಿತ್ರಾಳ ಕುರಿತ ಒಂದೊಂದೇ ಮಾಹಿತಿಯೀಗ ಬಯಲಾಗುತ್ತಿದೆ. ಜ್ಯೋತಿಷಿ ಕಮಲಾಕರ್​​ ಭಟ್​​ ಸೇರಿದಂತೆ ಸಿರಿವಂತರನ್ನು ಬುಟ್ಟಿಗೆ ಹಾಕಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದ ಇದೇ ಸುಚಿತ್ರಾ ಒಂದು ಕಾಲದಲ್ಲಿ 10 ರೂಪಾಯಿಗೂ ಲಾಟರಿ ಹೊಡೆಯುತ್ತಿದ್ದಳು. ಅಷ್ಟಕ್ಕೂ ಈಕೆ ಜ್ಯೋತಿಷಿ ಕಮಲಾಕರ್​​ ಭಟ್​​ಗೆ ಪರಿಚಯವಾಗಿದ್ದು ಹೇಗೆ ಎಂಬ ಮಾಹಿತಿಯೀಗ ಬಹಿರಂಗಗೊಂಡಿದೆ. ಸುಚಿತ್ರಾಳನ್ನು ಕಮಲಾಕರ ಭಟ್​ಗೆ ಪರಿಚಯಿಸಿದ್ದು ನಾನೇ ಎಂದು ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಮೂಲದ ಸುಮಾ ಎಂಬವರು ಟಿವಿ9ಗೆ ತಿಳಿಸಿದ್ದಾರೆ.

ಕಮಲಾಕರ ಭಟ್ ಪರಿಚಯದ ಬಳಿಕ ಸುಚಿತ್ರಾ ಜೀವನವೇ ಬದಲು!

ಸಿದ್ದಾಪುರದಲ್ಲಿ ಕವಡೆ ಕಾಸಿಗೂ ಪರದಾಡುತ್ತಿದ್ದ ಸುಚಿತ್ರಾ ಕಮಲಾಕರ ಭಟ್ ಪರಿಚಯದ ನಂತರ ಹೈಫೈ ಆಗಿಬಿಟ್ಟಳು. ಒಮ್ಮೆ ಆಶ್ರಮಕ್ಕೆ ಹೋದಾಗ ನನ್ನನ್ನೇ ಯಾರೋ ಅನ್ನೋ ತರ ನೋಡಿದ್ಲು. ಕಮಲಾಕರ ಭಟ್​ನ ಆಶ್ರಮವನ್ನು ಮ್ಯಾನೇಜ್ ಮಾಡ್ತಿದ್ದ ಈಕೆ ಒಂದು ಹೋಮ ಕಾರ್ಯಕ್ರಮಕ್ಕೆ ಮದುವೆ ಹೆಣ್ಣಿನ ತರ ಬಂದಿದ್ಲು. ಹೊಸ ತಾಳಿ, ಕಾಲುಂಗುರ ಧರಿಸಿ ಕಮಲಾಕರ ಭಟ್ ಜೊತೆ ಹೋಮದಲ್ಲಿ ಭಾಗಿಯಾಗಿದ್ದಳು. ಹೀಗಾಗಿ ಸುಚಿತ್ರಾಳನ್ನು ಮದುವೆ ಆಗಿದ್ದೀರಾ ಎಂದು ಕಮಲಾಕರ ಭಟ್​ಗೆ ಕೇಳಿದ್ದೆ. ಧರ್ಮಸ್ಥಳದ ಅಣ್ಣಪ್ಪನ ಆಣೆಗೂ ಮದುವೆಯಾಗಿಲ್ಲವೆಂದು ಈ ವೇಳೆ ಅವರು ಹೇಳಿದ್ದರು. ಆರೋಗ್ಯ ಸರಿಯಿಲ್ಲ, ಅದೆಲ್ಲ ನಂಗ್ಯಾಕೆ ಎಂದು ನನಗೆ ತಿಳಿಸಿದ್ದರು. ನನ್ನನ್ನು ಮಗಳೇ ಎಂದು ಕರೆಯುತ್ತಿದ್ದ ಜ್ಯೋತಿಷಿ ಕಮಲಾಕರ ಭಟ್ ಮತ್ತು ಸುಚಿತ್ರಾಳ ಬಂಧನ ವಿಚಾರ ಕೇಳಿ ತನಗೆ ಶಾಕ್​​ ಆಗಿದೆ ಎಂದು ಸುಮಾ ಹೇಳಿದ್ದಾರೆ.

ಇದನ್ನೂ ಓದಿ: ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ ಬಹಿರಂಗ

ಹಣದ ದಾಹಕ್ಕೆ ಪ್ರೀತಿಸಿ ಮದುವೆ ಆಗಿದ್ದವನನ್ನೇ ತೊರೆದ ಸುಚಿತ್ರಾ

ಇನ್ನು ಐಷಾರಾಮಿ ಜೀವನದ ಕನಸು ಕಂಡಿದ್ದ ಸುಚಿತ್ರಾ ಅದನ್ನು ಪಡೆಯಲು ನಾನಾ ಸರ್ಕಸ್​​ ನಡೆಸಿದ್ದಳು. ಕಮಲಾಕರ್​​ ಭಟ್​​ ಮಾತ್ರವಲ್ಲದೆ ಕಲಬುರಗಿ ಜಿಲ್ಲೆಯ ಜಮೀನ್ದಾರನ ಜೊತೆ ಲವ್ ರಿಲೇಷನಲ್ಲಿದ್ದ ಈಕೆ ಆತನ ಹಣದಲ್ಲೇ ಆರ್ಕೆಸ್ಟ್ರಾ ಕೂಡ ನಡೆಸುತ್ತಿದ್ದಳು. ಸಾಲದ್ದಕ್ಕೆ ಆತನ ಹಣವನ್ನು ಸಿದ್ದಾಪುರದಲ್ಲಿ ಬಡ್ಡಿಗೆ ಬಿಡುತ್ತಿದ್ದಳು. ಬಳಿಕ ಕಮಲಾಕರ್​​ ಭಟ್​​ನಿಂದಲೂ ಸುಲಿಗೆಗೆ ಇಳಿದಿದ್ದ ಸುಚಿತ್ರಾ ಕಾರು, ಬೈಕ್​​ಗಳನ್ನ ಉಡುಗರೆಯಾಗಿ ಪಡೆದಿದ್ದಳು. ಈಕೆಗಾಗಿ ಜ್ಯೋತಿಷಿ ಜಮೀನು ಕೂಡ ಖರೀದಿಸಿದ್ದ ಎಂಬ ಸುದ್ದಿಯೂ ಇದೆ. ಹಣದ ಆಸೆಗೆ ಪ್ರೀತಿಸಿ ಮದುವೆಯಾಗಿದ್ದವನನ್ನೇ ತೊರೆದು ಹೋಗಿದ್ದ ಈಕೆ, ಹೆತ್ತ ಮಕ್ಕಳಿಗೂ ಹಿಂಸೆ ಕೊಡುತ್ತಿದ್ದಳು ಎಂಬ ವಿಚಾರವೀಗ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪರಿಹಾರ ಕೊಡದಿದ್ದಕ್ಕೆ ಸೇಡಿಗಾಗಿ ವಿಧಾನಸೌಧ ಬಳಿ ಗಂಧದ ಮರ ಕಡಿದು ರೈತ ಆಕ್ರೋಶ – Kannada News | Chikkamagaluru Farmer Protest Against Governmnet via a Cutting Sandalwood Tree Near Vidhana Soudha

ಬೆಂಗಳೂರು, (ಫೆಬ್ರವರಿ 10): ಅಭಿವೃದ್ಧಿ ಹೆಸರಿನಲ್ಲಿ ಜಮೀನಿನಲ್ಲಿ 30 ಮರಗಳನ್ನು ಕಡಿದು ಪರಿಹಾರ ಕೊಡದ ಸರ್ಕಾರದ ವಿರುದ್ಧ ರೈತ ಆಕ್ರೋಶಗೊಂಡಿದ್ದು, ವಿಧಾನಸೌಧದ ಮುಂದೆ ಇರುವ ಶ್ರೀಗಂಧದ ಮರ ಕಡಿದು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರಿನ ವಿಶುಕುಮಾರ್ ಎನ್ನುವರ ಜಮೀನಿನಲ್ಲಿ 30 ಮರಗಳನ್ನು ಕಡಿಯಲಾಗಿದೆ. ಆದ್ರೆ, ಇದಕ್ಕೆ ಪರಿಹಾರ ಕೊಟ್ಟಿಲ್ಲ. ಹೀಗಾಗಿ ಸೇಡಿಗಾಗಿ ವಿಧಾನಸೌಧದ ಬಳಿ ಇರುವ ಗಂಧದ ಮರವನ್ನು ಕಡಿದು ಹಾಕಿದ್ದಾರೆ.

ಈ ಬಗ್ಗೆ ಮಾತನಾಡಿರುವ ವಿಶುಕುಮಾರ್,ಪರಿಹಾರ ಕೊಟ್ಟಿಲ್ಲ, ನನ್ನ ಮಕ್ಕಳ ಬರ್ತಡೆ ನೆನಪಿಗಾಗಿ ಗಿಡ ನೆಟ್ಟಿದ್ದೆ. ಹೆದ್ದಾರಿ ಪಕ್ಕ ಇದೆ ಎಂದು ಮರವನ್ನು ಕಡಿದುಹಾಕಿದ್ದಾರೆ. ಕೋರ್ಟ್ ನಲ್ಲಿ ಪರಿಹಾರವನ್ನು ನೀಡಬೇಕೆಂದು ಆದೇಶವಾದರೂ ಸಹ ಅರಣ್ಯ ಇಲಾಖೆ ಕೊಟ್ಟಿಲ್ಲ. ಮೂವತ್ತು ಮರ ಕಡಿದಿದ್ದಾರೆ. ಅದಕ್ಕಾಗಿ ನಾನು ಮುನ್ನೂರು ಮರ ಕಡಿಯುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ – Kannada News | Bangalore Basavanagudi Crime: 241g Gold Stolen, Recovered After Police Catch Accused

ಬೆಂಗಳೂರು, ಫೆ.10: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಯುವಕನೊಬ್ಬ ಕನ್ನ ಹಾಕಿದ್ದಾನೆ. ಈ ಘಟನೆ ಬೆಂಗಳೂರಿನ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಯಲ್ಲಿದ್ದ 241 ಗ್ರಾಂ ಚಿನ್ನಾಭರಣ, 2.8 ಕೆಜಿ ಬೆಳ್ಳಿ
1.3 ಲಕ್ಷ ನಗದು ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಮಹಿಳೆಯೊಬ್ಬರು ಕೆಲಸ ಮಾಡುತ್ತಿದ್ದರು. ಮಾಲೀಕರು ಆಕೆಯ ಮೇಲೆ ಅತೀವ ನಂಬಿಕೆ ಇಟ್ಟು ಮನೆಯ ಕೀಲಿ ಕೈಯನ್ನು ಆಕೆಯ ಬಳಿಯೇ ನೀಡುತ್ತಿದ್ದರು. ಈ ಮಹಿಳೆಯ ಜೊತೆಗೆ ಆಕೆಯ ತಂಗಿಯ ಮಗನೂ ಸಹ ಆಗಾಗ ಇರುತ್ತಿದ್ದನು.

ದೊಡ್ಡಮ್ಮನ ಬಳಿಯಿದ್ದ ಮನೆಯ ಕೀಲಿಯನ್ನು ಯುವಕ ಚಾಲಾಕಿತನದಿಂದ ಪಡೆದುಕೊಂಡಿದ್ದಾನೆ.ಮಾಲೀಕರು ಇಲ್ಲದ ಸಮಯ ನೋಡಿ ಮನೆಯೊಳಗೆ ನುಗ್ಗಿ ಕಪಾಟಿನಲ್ಲಿದ್ದ ಬೆಲೆಬಾಳುವ ಆಭರಣ ಮತ್ತು ನಗದನ್ನು ದೋಚಿದ್ದಾನೆ. ಮನೆಯಲ್ಲಿ ಕಳ್ಳತನವಾದ ಬಗ್ಗೆ ಮನೆಯವರು ದೂರು ನೀಡಿದ್ದಾರೆ. ಒಟ್ಟು 241 ಗ್ರಾಂ ಚಿನ್ನ, 2.8 ಕೆಜಿ ಬೆಳ್ಳಿ, 1.3 ಲಕ್ಷ ನಗದು ಕಳ್ಳತನ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರೇ ಇಲ್ಲಿನ ಐಸ್ ಕ್ರೀಂ ತಿಂದ್ರೆ ನೇರ ಯಮನ ಪಾದಕ್ಕೆ: ದಾಳಿಯ ವೇಳೆ ಅಧಿಕಾರಿಗಳಿಗೆ ಶಾಕ್

ಮನೆಯಲ್ಲಿ ಕಳ್ಳತನವಾದ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡ ಬಸವನಗುಡಿ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾದ ಎಲ್ಲಾ ಚಿನ್ನ, ಬೆಳ್ಳಿ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಎಷ್ಟೇ ನಂಬಿಕಸ್ಥ ಕೆಲಸಗಾರರಾಗಿದ್ದರೂ, ಮನೆಯ ಕೀಲಿ ಕೈಗಳನ್ನು ಅವರ ಬಳಿ ಬಿಟ್ಟು ಹೋಗುವುದು ಸುರಕ್ಷಿತವಲ್ಲ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಇನ್ನು ಬಸವನಗುಡಿ ಪೊಲೀಸರು ಈ ಪ್ರಕರಣವನ್ನು ಕ್ಷಿಪ್ರವಾಗಿ ಭೇದಿಸಿ ಆಭರಣಗಳನ್ನು ವಶಪಡಿಸಿಕೊಳ್ಳುವ ಮೂಲಕ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ; ಏನಿದು ಪ್ರಕರಣ? – Kannada News | Assam CM Himanta Biswa Sarma files Rs 500 crore defamation case against Congress leaders

ನವದೆಹಲಿ, ಫೆಬ್ರವರಿ 10: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ (Himanta Biswa Sarma) ಇಂದು ತಮ್ಮ ವಿರುದ್ಧ ಮಾಡಲಾದ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳ ಹಿನ್ನೆಲೆಯಲ್ಲಿ  ಹಿರಿಯ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಎಕ್ಸ್​​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ, “ಇಂದು ಪತ್ರಿಕಾಗೋಷ್ಠಿಯ ಮೂಲಕ ನನ್ನ ವಿರುದ್ಧ ಸುಳ್ಳು, ದುರುದ್ದೇಶಪೂರಿತ ಮತ್ತು ಮಾನನಷ್ಟ ಆರೋಪಗಳನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಾಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ಧ 500 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ಅಸ್ಸಾಂ ಜನರಿಗೆ ಗೌರವ ಕೊಡಲಿಲ್ಲ, ವಲಸಿಗರಿಗೆ ಮಣೆ ಹಾಕಿತು; ಗುವಾಹಟಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ರಾಜಕೀಯ ಒತ್ತಡ ಅಥವಾ ಸಾರ್ವಜನಿಕ ದಾಳಿಗೆ ನಾವು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಪುನರುಚ್ಚರಿಸಿದರು. ಅವರಿಗೆ ಸ್ವಲ್ಪವೂ ಧೈರ್ಯವಿದ್ದರೆ, ಅವರ ಬಳಿ ಪುರಾವೆಗಳಿದ್ದರೆ ನ್ಯಾಯಾಲಯದ ಮುಂದೆ ಆರೋಪವನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಹೇಳಿದ್ದಾರೆ.

ಸಿಎಂ ಹಿಮಂತ ಬಿಸ್ವ ಶರ್ಮ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಾರ್ವಜನಿಕವಾಗಿ ಘೋಷಿಸಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ಸಂಭವಿಸಿದೆ. ಇದು ಸಿವಿಲ್ ಮತ್ತು ಕ್ರಿಮಿನಲ್ ಪರಿಹಾರಗಳನ್ನು ಅನುಸರಿಸುವ ಉದ್ದೇಶವನ್ನು ಸೂಚಿಸುತ್ತದೆ. ಕಾಂಗ್ರೆಸ್ ಹೈಕಮಾಂಡ್ ಸಂಘಟಿತ ಅಪಪ್ರಚಾರ ಮತ್ತು ರಾಜಕೀಯ ನಾಟಕೀಯ ತಂತ್ರಗಳನ್ನು ಆಶ್ರಯಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಗಾಂಧಿ ಕುಟುಂಬದ ಆಜ್ಞೆಯ ಮೇರೆಗೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಬಕಾರಿ ಇಲಾಖೆಯಲ್ಲಿ 2500 ಕೋಟಿ ರೂ. ಹಗರಣ, ಅಕ್ರಮದ ಹಣ ಅಸ್ಸಾಂ ಚುನಾವಣೆಗೆ ಬಳಕೆ: ಆರ್ ಅಶೋಕ್ ಗಂಭೀರ ಆರೋಪ

ಫೆಬ್ರವರಿ 4ರಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ಅವರು ಪತ್ರಿಕಾಗೋಷ್ಠಿಯಲ್ಲಿ ಸಿಎಂ ಹಿಮಂತ್ ಬಿಸ್ವಾ ಅವರ ಮೇಲೆ ಭ್ರಷ್ಟಾಚಾರ, ಅಕ್ರಮ ಆಸ್ತಿಗಳ ಆರೋಪ ಮಾಡಿದ್ದರು. ಅವರು ವೀಡಿಯೊಗಳ ಮೂಲಕ ಮುಸ್ಲಿಮರ ವಿರುದ್ಧ ನರಮೇಧವನ್ನು ಪ್ರಚೋದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೌದಿ ಸಿನಿಮಾನಲ್ಲಿ ಸಲ್ಮಾನ್ ಖಾನ್, ಸಂಜಯ್ ದತ್: ಸಿನಿಮಾ ಯಾವುದು? – Kannada News | Salman Khan and Sanjay Dutt acted in Saudi movie The seven dogs

ಭಾರತದ ಸ್ಟಾರ್ ನಟರುಗಳಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಅದರಲ್ಲೂ ಅರಬ್ ದೇಶಗಳಲ್ಲಿ ಭಾರತೀಯ ಸಿನಿಮಾಗಳಿಗೆ (Indian Movies) ಭಾರಿ ದೊಡ್ಡ ಮಾರುಕಟ್ಟೆ ಇದೆ. ಯಾವ ಮಟ್ಟಿಗೆಂದರೆ ಅರಬ್ ದೇಶದ ಚಿತ್ರರಂಗದಲ್ಲಿ ನಿರ್ಮಾಣಗೊಂಡ ಸಿನಿಮಾಗಳಲ್ಲಿ ಭಾರತದ ಸ್ಟಾರ್ ನಟರುಗಳು ನಟಿಸಿದ್ದಾರೆ. ಅದುವೇ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್. ಬಾಲಿವುಡ್​ನ ಈ ಇಬ್ಬರು ಸ್ಟಾರ್ ನಟರು ಇದೀಗ ಸೌದಿಯ ಸಿನಿಮಾನಲ್ಲಿ ನಟಿಸಿದ್ದಾರೆ.

ಸೌದಿ ಚಿತ್ರರಂಗದಲ್ಲಿ ನಿರ್ಮಾಣಗೊಂಡಿರುವ ‘ದಿ ಸೆವೆನ್ ಡಾಗ್ಸ್’ ಹೆಸರಿನ ಭರ್ಜರಿ ಆಕ್ಷನ್ ಸಿನಿಮಾನಲ್ಲಿ ಸಲ್ಮಾನ್ ಖಾನ್ ಮತ್ತು ಸಂಜಯ್ ದತ್ ನಟಿಸಿದ್ದಾರೆ. ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದ್ದು, ಸಲ್ಮಾನ್ ಮತ್ತು ಸಂಜಯ್ ದತ್ ಅವರುಗಳು ಟ್ರೈಲರ್​​ನಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ಭರ್ಜರಿ ಆಕ್ಷನ್ ಸಿನಿಮಾ ಇದಾಗಿದ್ದು, ಸಲ್ಮಾನ್ ಹಾಗೂ ಸಂಜಯ್ ಅವರು ಸಹ ಸಖತ್ ಪವರ್​​ಫುಲ್ ಪಾತ್ರಗಳಲ್ಲಿಯೇ ಸಿನಿಮಾನಲ್ಲಿ ಕಾಣಿಸಿಕೊಂಡಿರುವುದು ಟ್ರೈಲರ್​​ನಿಂದ ತಿಳಿದು ಬರುತ್ತಿದೆ.

ಈ ಹಿಂದೆ ಸೂಪರ್ ಹಿಟ್ ಆಗಿದ್ದ ಸೌದಿ ಸಿನಿಮಾ ‘ಬ್ಯಾಡ್ ಬಾಯ್ಸ್ ಫಾರ್ ಲೈಫ್’ ಸಿನಿಮಾ ನಿರ್ದೇಶಿಸಿದ್ದ ಅದಿಲ್ ಇಲ್ ಅರಬ್ಬಿ ಮತ್ತು ಬಿಲಾಲ್ ಫಲಾಹ್ ಅವರುಗಳು ನಿರ್ದೇಶನ ಮಾಡಿರುವ ‘ದಿ ಸೆವೆನ್ ಡಾಗ್ಸ್’ ಸಿನಿಮಾನಲ್ಲಿ ಸಲ್ಮಾನ್ ಮತ್ತು ಸಂಜಯ್ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ನಾಯಕ ಪಾತ್ರದಲ್ಲಿ ಇಜಿಪ್ಟಿಯನ್ ನಟ ಕರೀಮ್ ಅಬ್ದಿಲ್ ಅಜೀಜ್ ಮತ್ತು ಅಹ್ಮದ್ ಇಜ್ ನಟಿಸಿದ್ದಾರೆ. ಸಿನಿಮಾದ ನಾಯಕಿ ಹಾಲಿವುಡ್ ಸ್ಟಾರ್ ನಟಿ ಮೋನಿಕಾ ಬೆಲೂಚಿ.

ಇದನ್ನೂ ಓದಿ:ಪ್ರೇಮಿಗಳಿಗಾಗಿ ಮತ್ತೆ ರಿಲೀಸ್ ಆಗುತ್ತಿದೆ ಸಲ್ಮಾನ್ ಖಾನ್ ಸಿನಿಮಾ ‘ತೇರೆ ನಾಮ್’

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಸಲ್ಮಾನ್ ಖಾನ್ ಸೂಟು ಧರಿಸಿ, ಏಜೆಂಟ್ ರೀತಿ ಕಾಣಿಸಿಕೊಂಡಿದ್ದಾರೆ. ‘ನೀನ್ಯಾಕೊ ಕ್ರಿಮಿನಲ್ ರೀತಿ ಕಾಣುತ್ತಿದ್ದೀಯ’ ಎಂಬ ಡೈಲಾಗ್ ಅನ್ನು ಸಹ ಪಾತ್ರವೊಂದಕ್ಕೆ ಹೇಳುತ್ತಿರುವ ದೃಶ್ಯ ಟ್ರೈಲರ್​​ನಲ್ಲಿದೆ. ಇನ್ನು ಸಂಜಯ್ ದತ್, ಪಾರ್ಟಿ ಮಾಡುತ್ತಾ ಡ್ಯಾನ್ಸ್ ಮಾಡುತ್ತಿರುವ ದೃಶ್ಯ ಟ್ರೈಲರ್​​ನಲ್ಲಿದೆ. ಸಿನಿಮಾದ ಕತೆ ಡ್ರಗ್ಸ್ ಮಾಫಿಯಾ ವಿರುದ್ಧ ಹೋರಾಡುವ ಏಜೆಂಟ್​​ಗಳದ್ದು ಎಂಬುದು ಸಹ ಟ್ರೈಲರ್​​ನಿಂದ ತಿಳಿದು ಬರುತ್ತಿದೆ.

ಇದೊಂದು ಅದ್ಧೂರಿ ಆಕ್ಷನ್ ಸಿನಿಮಾ ಆಗಿದ್ದು, ಸಿನಿಮಾನಲ್ಲಿ ಸಖತ್ ಚೇಸಿಂಗ್ ಮತ್ತು ಆಕ್ಷನ್ ಸಿನಿಮಾಗಳಿದ್ದು ಅವುಗಳ ತುಣುಕುಗಳನ್ನು ಟ್ರೈಲರ್​​ನಲ್ಲಿ ತೋರಿಸಲಾಗಿದೆ. ಅದ್ಧೂರಿ ಕಾರುಗಳು, ಹೆಲಿಕಾಪ್ಟರ್, ವಿಮಾನಗಳು ಹೇರಳವಾಗಿವೆ ಸಿನಿಮಾನಲ್ಲಿ. ಸಿನಿಮಾದ ಟ್ರೈಲರ್ ಇದೀಗ ಬಿಡುಗಡೆ ಆಗಿದೆ. ಆದರೆ ಸಿನಿಮಾ ಬಿಡುಗಡೆಗೆ ಇನ್ನೂ ಕೆಲ ತಿಂಗಳು ಬಾಕಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Chanakya Niti: ಮನುಷ್ಯನ ನೆಮ್ಮದಿ ಹಾಳಾಗಲು ಕಾರಣವೇ ಈ ಸಂಗತಿಗಳು – Kannada News | Chanakya Niti: Chanakya says these things are the reason for the destruction of happiness and peace

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ ಪ್ರತಿಯೊಬ್ಬ ವ್ಯಕ್ತಿಗೂ ಉಪಯುಕ್ತವಾದ ಜೀವನದ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಯಾವ ರೀತಿ ಜೀವನ ನಡೆಸಬೇಕು, ಯಶಸ್ಸಿಗಾಗಿ ಏನು ಮಾಡಬೇಕು, ನೆಮ್ಮದಿಯ ಜೀವನ ನಡೆಸಲು ಮಾಡಬೇಕಾದದ್ದೇನು ಎಂಬಿತ್ಯಾದಿ ವಿಷಯಗಳನ್ನು ತಿಳಿಸಿದ್ದಾರೆ. ಅದೇ ರೀತಿ ಅವರು ಈ ಐದು ಬಗೆಯ ಸಮಸ್ಯೆಗಳು ಯಾರ ಜೀವನದಲ್ಲಿ ಇರುತ್ತದೆಯೋ ಅವರು ಖಂಡಿತವಾಗಿಯೂ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಅವರು ಯಾವಾಗಲೂ ಚಿಂತೆಯಲ್ಲಿಯೇ ಮುಳುಗಿರುತ್ತಾರೆ ಎಂದು ಹೇಳಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿಲ್ಲ, ಯಾವ ವಿಷಯಗಳು ಮನುಷ್ಯನ ನೆಮ್ಮದಿಯನ್ನು ಹಾಳು ಮಾಡುತ್ತದೆ, ಮಾನಸಿಕವಾಗಿ ದುರ್ಬಲಗೊಳಿಸುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಮನುಷ್ಯನ ನೆಮ್ಮದಿ ಹಾಳಾಗಲು ಇವೇ ಮುಖ್ಯ ಕಾರಣ:

ಕಟುವಾಗಿ ಮಾತನಾಡುವ ಜನರೊಂದಿಗೆ ಇರುವುದು: ಚಾಣಕ್ಯರು ಹೇಳುವಂತೆ, ನಿರಂತರವಾಗಿ ಕಟುವಾಗಿ ಮಾತನಾಡುವ ಅಥವಾ ಇತರರನ್ನು ಅವಮಾನಿಸುವ ಜನರೊಂದಿಗೆ ಬದುಕುವುದು ತುಂಬಾ ಕಷ್ಟ. ಅವರೊಂದಿಗೆ ವಾಸಿಸುವುದರಿಂದ ಮಾನಸಿಕ ಶಾಂತಿ ಕದಡುತ್ತದೆ, ನೆಮ್ಮದಿ ಹಾಳಾಗುತ್ತದೆ. ಜೊತೆಗೆ ಪ್ರತಿಕ್ಷಣವೂ ಸಹ ನೋವಿನಿಂದಲೇ ಇರಬೇಕಾಗುತ್ತದೆ. ಹೀಗೆ ಇಂತಹ ಜನರೊಂದಿಗೆ ಇರುವವರು ಎಂದಿಗೂ ಸುಖ ಜೀವನ ನಡೆಸಲು ಸಾಧ್ಯವೇ ಇಲ್ಲ.

ಭಾರೀ ಸಾಲದ ಹೊರೆ: ಆಚಾರ್ಯ ಚಾಣಕ್ಯರ ಪ್ರಕಾರ, ಒಬ್ಬ ವ್ಯಕ್ತಿಯು ಹೆಚ್ಚು ಸಾಲದಲ್ಲಿದ್ದಾಗ, ಆತ ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ, ಆತ ಸಂಪೂರ್ಣ ನೆಮ್ಮದಿಯನ್ನೇ ಕಳೆದುಕೊಳ್ಳುತ್ತಾನೆ. ಆತ ಸದಾ ತನ್ನ ಸಾಲವನ್ನು ಮರುಪಾವತಿಸುವ ಆಲೋಚನೆಯಲ್ಲಿ ಮುಳುಗಿರುತ್ತಾನೆ. ಈ ಮಾನಸಿಕ ಒತ್ತಡವು ಆತನನ್ನು ಒಳಗಿನಿಂದ ಸುಡುತ್ತದೆ.

ಅವಿಧೇಯ ಮಕ್ಕಳು: ಮಕ್ಕಳು ದಾರಿ ತಪ್ಪಿದರೆ ಅಥವಾ ತಂದೆ, ತಾಯಿ, ಹಿರಿಯರನ್ನು ಅಗೌರವಿಸಿದರೆ ಅಂತಹ ಮಕ್ಕಳನ್ನು ಪಡೆದ  ಪೋಷಕರು ತೀವ್ರ ದುಃಖಿತರಾಗುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ತಮ್ಮ ಸ್ವಂತ ಮಕ್ಕಳಿಂದ ಉಂಟಾಗುವ ಈ ದುಃಖವು ಒಬ್ಬ ವ್ಯಕ್ತಿಯನ್ನು ಒಳಗಿನಿಂದ ಸುಡುತ್ತದೆ, ಮತ್ತು ಆ ವ್ಯಕ್ತಿಯೂ ಸದಾ ತನ್ನ ಮಗ ಅಥವಾ ಮಗಳು ನೀಡಿದಂತಹ ಆ ನೋವಿನ ಮಾತನ್ನೇ ನೆನೆಯುತ್ತಿರುತ್ತಾರೆ. ಈ ಅಂಶ ಆತನ ನೆಮ್ಮದಿಯನ್ನು ಸಹ ಹಾಳು ಮಾಡುತ್ತದೆ.

ಇದನ್ನೂ ಓದಿ: ರೀತಿಯ ಜನರಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತಾರೆ ಚಾಣಕ್ಯ

ಬಡತನ ಮತ್ತು ಅವಮಾನ: ಬಡತನದ ಕಾರಣದಿಂದಾಗಿ ಸಮಾಜದಲ್ಲಿ ಯಾರಾದರೂ ಅವಮಾನಕ್ಕೊಳಗಾದಾಗ, ಅದು ಮನಸ್ಸಿಗೆ ತುಂಬಾ ನೋವುಂಟು ಮಾಡುತ್ತದೆ ಎಂದು ಚಾಣಕ್ಯ ಹೇಳುತ್ತಾರೆ.  ಈ ಅವಮಾನವು ಮನಸ್ಸಿಗೆ ಆಳವಾಗಿ ನೋವುಂಟು ಮಾಡುತ್ತಾರೆ. ಈ ಅವಮಾನವನ್ನು ಪದೇ ಪದೇ ನೆನೆದು, ಆತ ದುಃಖ ಪಡುತ್ತಾನೆ. ಇದು ಆತನ ಸಂಪೂರ್ಣ ನೆಮ್ಮದಿಯನ್ನೇ ಹಾಳು ಮಾಡಿ ಬಿಡುತ್ತದೆ.

ಮನೆಯಲ್ಲಿ ನಿರಂತರ ಜಗಳಗಳು: ಗಂಡ ಹೆಂಡತಿಯ ನಡುವೆ ಅಥವಾ ಕುಟುಂಬದೊಳಗೆ ನಿರಂತರವಾಗಿ ಜಗಳ ನಡೆಯುತ್ತಿದ್ದರೆ, ಅಂತಹ ಮನೆ ನರಕಕ್ಕೆ ಸಮಾನವಾಗಿರುತ್ತದೆ. ಅಂತಹ ಮನೆಯಲ್ಲಿ ವಾಸಿಸುವವರಿಗೆ ನೆಮ್ಮದಿ ಎಂಬುದು ಇರುವುದಿಲ್ಲ, ಈ ಅಶಾಂತಿ ಸಂಪೂರ್ಣ ಮಾನಸಿಕ ನೆಮ್ಮದಿಯನ್ನೇ ನಾಶ ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮಲಾಕರ ಭಟ್​​​ನ ತನ್ನ ತಾಳಕ್ಕೆ ಕುಣಿಸುತ್ತಿರುವ ಸುಚಿತ್ರಾಳ ವಿಡಿಯೋ ಬಹಿರಂಗ – Kannada News | Kamalakar Bhat And His Lover Suchitra one More video viral

ಕಾರವಾರ, (ಫೆಬ್ರವರಿ 10): ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಮೂಲದ ಸುಚಿತ್ರಾ ಹಾಗೂ ಪ್ರಿಯಕರ ಕಮಲಾಕರ್ ಭಟ್ ಗುರೂಜಿ ಹಿಂದಿನ ಕರಾಳ ಮತ್ತು ಕುತೂಹಲಕಾರಿ ಸಂಗತಿಗಳು ಇದೀಗ ಒಂದೊಂದಾಗಿ ಹೊರಬರುತ್ತಿವೆ. ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗುತ್ತಿದ್ದಂತೆಯೇ ಜೋಡಿ ಹಳ್ಳಿಯ ಬಗೆ ಬಗೆಯ ವಿಡಿಯೋಗಳು, ಆಡಿಯೋಗಳು ವೈರಲ್ ಆಗುತ್ತಿವೆ. ರೀಲ್ಸ್ ರಾಣಿಯಾಗಿರುವ ಸುಚಿತ್ರಾ, ಕಮಲಾಕರ್ ಭಟ್​​ ನೊಂದಿಗೆ ಹಲವು ರೀಲ್ಸ್​ ಮಾಡಿರುವ ವಿಡಿಯೋಗಳು ಸಹ ವೈರಲ್ ಆಗುತ್ತಿವೆ. ತನ್ನ ಮೈಮಾಟದಿಂದ ಕಮಲಾಕರ್ ಭಟ್​​ ನನ್ನು ಬುಟ್ಟಿಗೆ ಹಾಕಿಕೊಂಡ ಸುಚಿತ್ರಾ, ತನ್ನ ತಾಳಕ್ಕೆ ತಕ್ಕಂತೆ ಕುಣಿಸಿದ್ದಾಳೆ. ಭಟ್ಟನ ಹಣದಿಂದ ಕಾರು, ಬೈಕು ಅಂತ ಐಷಾರಾಮಿ ನಡೆಸಿದ್ದು, ಇದೀಗ ಭಟ್ಟನನ್ನು ತನ್ನ ತಾಳಕ್ಕೆ ಕುಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಮೊದಲ ಸಲ ಕಮಲಾಕರ ಜೊತೆ ಹೋಗಿದ್ದಕ್ಕೆ 10 ಸಾವಿರ ರೂ. ನಿರೀಕ್ಷಿಸಿದ್ದ ಸುಚಿತ್ರಾಗೆ ಸಿಕ್ಕಿದ್ದು 35 ಸಾವಿರ ರೂ.

Source link

ಸಿನಿಮಾ ಸಬ್ಸಿಡಿ ಹೆಚ್ಚು ಮಾಡಿ: ನಿರ್ಮಾಪಕ ಕೆ ಮಂಜು – Kannada News | Producer K Manju demands government to rise subsidy for movies

ಸಿನಿಮಾ (Cinema) ಸಬ್ಸಿಡಿ ವಿಚಾರವಾಗಿ ಇತ್ತೀಚೆಗೆ ಮತ್ತೆ ಚರ್ಚೆ ಶುರುವಾಗಿದ್ದು, ಇದೀಗ ನಿರ್ಮಾಪಕರ ಸಂಘ ಕೆ ಮಂಜು ಅವರು ಈ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಸಬ್ಸಿಡಿಯನ್ನು ಕಡಿಮೆ ಮಾಡಿ ಎಂದು ಕೆಲವರು ಹೇಳಿದ್ದಾರೆ, ಆದರೆ ನಿರ್ಮಾಪಕರಾಗಿ ನಾವು ಕೇಳುತ್ತಿರುವುದು ಸಬ್ಸಿಡಿ ಕಡಿಮೆ ಮಾಡುವುದು ಬೇಡ, ಈಗ 150 ಸಿನಿಮಾಗಳಿಗೆ ಕೊಡುತ್ತಿದ್ದಾರೆ ಅದನ್ನು 200 ಸಿನಿಮಾಗಳಿಗೆ ವಿಸ್ತರಿಸಿ, ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆ ಇದೆ, ಅದರಲ್ಲೂ ನಿರ್ಮಾಪಕರಿಗೆ ಇನ್ನೂ ಹೆಚ್ಚಿನ ಸಮಸ್ಯೆ ಇದೆ, ಸಬ್ಸಿಡಿಯನ್ನು ಕಡಿಮೆ ಮಾಡುವ ಬಗ್ಗೆ ಯಾರೂ ಮಾತನಾಡುವುದು ಬೇಡ ಎಂದು ಮಂಜು ಹೇಳಿದ್ದಾರೆ. ವಿಡಿಯೋ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link