ಬೆಂಗಳೂರು, ಮಾ.18: ಕರ್ನಾಟಕದಾದ್ಯಂತ ಇಂದು ಹಗುರ ಮಳೆಯಾಗುವ ಮುನ್ಸೂಚನೆ ಇದೆ. ಗರಿಷ್ಠ ತಾಪಮಾನವು 33°C ಮತ್ತು ಕನಿಷ್ಠ ತಾಪಮಾನವು 21°C ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಠ 32°C ಮತ್ತು ಕನಿಷ್ಠ 19°C ತಾಪಮಾನ ದಾಖಲಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಹಗುರ ಮಳೆಯ ಮುನ್ಸೂಚನೆ ಇದ್ದು, ರಾತ್ರಿಯ ವೇಳೆ ಆಕಾಶವು ತಿಳಿಯಾಗಿರಲಿದೆ. ಇನ್ನು ನಗರದ ಕೆಲವು ಭಾಗಗಳಲ್ಲಿ ಸಾಯಂಕಾಲ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ (ಬೀದರ್, ಕಲಬುರಗಿ, ರಾಯಚೂರು ಇತ್ಯಾದಿ) ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನವು 37°C ಆಸುಪಾಸಿನಲ್ಲಿರಬಹುದು. ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿಯೂ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ. ಇನ್ನು ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸಂಜೆಯ ವೇಳೆಗೆ ಮಳೆಯಾಗುವ ಸಾಧ್ಯತೆಯಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಮಳೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮಲೆನಾಡು ಭಾಗದಲ್ಲಿ ಮೋಡ ಕವಿದ ವಾತಾವರಣವಿದ್ದು, ತಾಪಮಾನವು ಇತರ ಜಿಲ್ಲೆಗಳಿಗಿಂತ ಕಡಿಮೆ ಇರಲಿದೆ. ಹಾವೇರಿ ಮತ್ತು ಚಿತ್ರದುರ್ಗ ಭಾಗಗಳಲ್ಲಿ ಹಗಲು ಬಿಸಿಲು ತೀವ್ರವಾಗಿರಲಿದ್ದು, ಸಂಜೆಯ ಹೊತ್ತಿಗೆ ಆಕಾಶ ಮೋಡದಿಂದ ಕೂಡಿರುತ್ತದೆ.
ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಸೇವೆ ಮಾಡಲು ನಾಯಕನೇ ಆಗಬೇಕಿಲ್ಲ, ಸೇವಕನಾದರೂ ಸಾಕು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ನಿಮ್ಮ ಮೌನವು ಹಲವಾರ ಅನುಮಾನಕ್ಕೆ ಕಾರಣವಾಗಬಹುದು.
ವೃಷಭ ರಾಶಿ:
ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಸಲ್ಲದ ಮಾತುಗಳನ್ನಾಡಿ ಶತ್ರುಗಳನ್ನು ಪ್ರಬಲವಾಗಿಸುವಿರಿ. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಹೊಸತನ್ನು ನಿಮ್ಮದಾಗಿಸಿಕೊಳ್ಳುವ ಕಡೆ ಗಮನ ಅಧಿಕ. ಕಳೆದುಹೋದ ವ್ಯಕ್ತಿಗಳನ್ನು ಮತ್ತೆ ಪಡೆಯುವ ಪ್ರಯತ್ನ ಬೇಡ.
ಮಿಥುನ ರಾಶಿ:
ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ದೇಹದ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು ಎನಿಸುವುದು. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದೇಯಿರುವುದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಇಂದು ಹಣವನ್ನು ಹೊಂದಿಸುವುದು ಚಿಂತೆಯಾಗಬಹುದು.
ಕರ್ಕಾಟಕ ರಾಶಿ:
ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಸಾಲ ಕೊಟ್ಟವರಿಗೆ ಸಮಾಧಾನವಾಗುವಂತೆ ನಡೆದುಕೊಳ್ಳಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ಹಳೆಯ ಪ್ರೀತಿಯು ನೆನಪಾಗಿ ಮೌನವಾಗುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಪುಣ್ಯ ಕ್ಷೇತ್ರದ ಭೇಟಿಯಿಂದ ಸಮಾಧಾನ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.
ಸಿಂಹ ರಾಶಿ:
ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ದಿನಚರಿಯನ್ನು ಬದಲಿಸಿಕೊಳ್ಳಬೇಕು ಎಂದನಿಸಬಹುದು. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು.
ಕನ್ಯಾ ರಾಶಿ:
ಉದ್ಯಮಕ್ಕೆ ಬೇಕಾದ ಕಾನೂನಿನ ವಿಚಾರವನ್ನು ಚರ್ಚಿಸುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ಇಂದು ನೀವು ಸಮಯವನ್ನು ಮಾಡಿಕೊಂಡು ಕುಟುಂಬದ ಜೊತೆ ಸೌಹಾರ್ದತೆ ಉಂಟಾಗುವುದು. ಇತರರ ಜೊತೆ ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ.
ತುಲಾ ರಾಶಿ:
ಕೆಲವು ನಿರಾಶೆಯನ್ನು ಮೆಟ್ಟಿನಿಲ್ಲುವ ಧೈರ್ಯ ತೋರಬೇಕು. ನಿಮ್ಮ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ ಸ್ನೇಹಿತರ ಮನೆಗೆ ಹೋಗುವಿರಿ. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ಹೆಸರಿನಿಂದ ಬೇರೆಯವರು ಕೆಲಸ ಮಾಡಿಕೊಳ್ಳಬಹುದು. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.
ವೃಶ್ಚಿಕ ರಾಶಿ:
ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ಇಲ್ಲದ ತಪ್ಪನ್ನು ಒಪ್ಪಿಕೊಳ್ಳುವ ಸಂದರ್ಭ ಬರಬಹುದು. ಅಧಿಕಾರಿಗಳಿಗೆ ದಾಖಲೆಗಳನ್ನು ಒದಗಿಸಬೇಕಾಗುವುದು. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ ಮೇಲೆ ಬರಲಿದೆ. ಸಿಟ್ಟಿನಿಂದ ಅಂತಃಪ್ರಜ್ಞೆ ದೂರಾಗಬಹುದು. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ.
ಧನು ರಾಶಿ:
ಅತಿಯಾದ ಕೋಪದಿಂದ ಎಲ್ಲ ಕೆಲಸವು ವ್ಯತ್ಯಾಸವಾಗಬಹುದು. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ ಬೇಡ. ತಪ್ಪುಗಳನ್ನು ಸರಿಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ ಮನಸ್ಸಿನಿಂದ ಮಾತನಾಡುವಿರಿ.
ಮಕರ ರಾಶಿ:
ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಯಾರದೋ ಅಪರಿಚಿತರ ಸಂಪರ್ಕವನ್ನು ಮಾಡಬೇಕಾದೀತು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಹಿರಿಯರಿಂದ ಆದ ದೋಷವನ್ನು ಸರಿ ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು. ವ್ಯವಹಾರವು ಸರಿಯಾಗಿ ಇರಲಿ. ಇಂದು ಯಾರನ್ನೂ ಸುಲಭವಾಗಿ ನಂಬಲಾರಿರಿ.
ಕುಂಭ ರಾಶಿ:
ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ಸುತ್ತಲಿನ ವಾತಾವರಣದಿಂದ ಮನಸ್ಸು ಕೆಡುವ ಸಾಧ್ಯತೆ ಹೆಚ್ಚು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ ಜೊತೆ ಸಂಘರ್ಷ ಬೇಡ.
ಮೀನ ರಾಶಿ:
ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ತಮಾಷೆಯಾಗಿ ಶುರುವಾದ ಮಾತು ಕಲಹದಲ್ಲಿಯೋ ದ್ವೇಷದಲ್ಲಿಯೋ ಮುಕ್ತಯವಾಗಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ದೇಹದ ಯಾವುದಾದರೂ ಭಾಗದಲ್ಲಿ ಪ್ರಾಣಾಂತಿಕ ನೋವು ಕಾಣಿಸಿಜತು. ಉಗುಳಲಾಗದ, ನುಂಗಲಾಗದ ತುತ್ತನ್ನು ಬಾಯಲ್ಲಿ ಇಟ್ಟುಕೊಳ್ಳಬೇಕಾಗುವುದು.
ಇಂದಿನ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಬುಧ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ / ಚತುರ್ದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ಸಾಧ್ಯ, ಕರಣ : ಚತುಷ್ಪಾತ್, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:33 – 14:03, ಯಮಗಂಡ ಕಾಲ 08:02 – 09:32, ಗುಳಿಕ ಕಾಲ 11:02 – 12:33
ಆಯಾ ಋತುಮಾನಕ್ಕೆ ತಕ್ಕಂತೆ ಆರೋಗ್ಯದ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನಿಮ್ಮಲ್ಲಿ ಯಾರಿಗೆ ಆಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇರುತ್ತದೋ ಅಂಥವರಿಗೆ ಅದು ಉಲ್ಬಣಿಸುವ ಸಾಧ್ಯತೆ ಸಿಕ್ಕಾಪಟ್ಟೆ ಇದೆ. ಮುಖ್ಯವಾಗಿ ನಿಮಗೆ ಯಾವ ಆಹಾರ ಪದಾರ್ಥವು ಅಲರ್ಜಿಯೋ ಅಂಥ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು.
ಈ ದಿನ ನಿಮ್ಮ ಬಾಯಿಯ ಕಾರಣಕ್ಕೆ ಸಮಸ್ಯೆಯನ್ನು ಮಾಡಿಕೊಳ್ಳಲಿದ್ದೀರಿ. ಅದು ಬಾಯಿ ಚಪಲಕ್ಕೆ ಬಿದ್ದು, ವಿಪರೀತ ರುಚಿರುಚಿಯಾದದ್ದನ್ನು ಸೇವಿಸಿ ಸಮಸ್ಯೆ ಮಾಡಿಕೊಳ್ಳುತ್ತೀರೋ ಅಥವಾ ಆಡಬಾರದ ಮಾತು ಹಾಗೂ ಆಡಬಾರದ ಸ್ಥಳದಲ್ಲಿ ಆಡಿ, ತೊಂದರೆ ಮೈ ಮೇಲೆ ಎಳೆದುಕೊಳ್ಳುತ್ತೀರೋ ಒಟ್ಟಿನಲ್ಲಿ ನೆಮ್ಮದಿಯಂತೂ ಇಲ್ಲದಂತಾಗುತ್ತದೆ. ಇನ್ನು ಕೆಲವರಿಗೆ ಕೂದಲು ಹಾಗೂ ಚರ್ಮಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡಬಹುದು. ಅಥವಾ ನೀವು ಈಗಾಗಲೇ ತೆಗೆದುಕೊಂಡ ಔಷಧಿಯಿಂದ ಸಮಸ್ಯೆ ಇನ್ನೂ ವಿಪರೀತಕ್ಕೆ ಹೋಗಬಹುದು.
ನಿಮ್ಮ ಆಲೋಚನೆಗೆ ಮನ್ನಣೆ ದೊರೆಯಲಿದೆ. ನನ್ನ ಮಾತಿಗೆ ಯಾವ ಮಹತ್ವ ಇದೆ ಎಂದುಕೊಂಡು ಇಷ್ಟು ಸಮಯ ನೀವೇನಾದರೂ ಇದ್ದಲ್ಲಿ ಈ ದಿನ ಅಭಿಪ್ರಾಯವನ್ನೇ ಬದಲಿಕೊಳ್ಳುವಂಥ ಬೆಳವಣಿಗೆಗಳು ಆಗಲಿವೆ. ಯಾರು ನಿಮ್ಮ ಬಗ್ಗೆ ಲಘುವಾಗಿ ಪರಿಗಣಿಸಿರುತ್ತಾರೋ ಅಂಥವರಿಗಂತೂ ಭಾರೀ ಅಚ್ಚರಿ ಮೂಡುವಂತೆ ಆಗುತ್ತದೆ. ಒಂದು ವೇಳೆ ನೀವೇನಾದರೂ ಆಸ್ತಿ ಮಾರಾಟಕ್ಕೆ ಇಟ್ಟಿದ್ದಲ್ಲಿ ನೀವು ನಿರೀಕ್ಷೆ ಮಾಡಿದಂಥ ಅಥವಾ ನಿಮ್ಮಲ್ಲಿ ಕೆಲವರಿಗೆ ನಿರೀಕ್ಷೆಯನ್ನು ಮೀರಿ ಬೆಲೆಯು ದೊರೆಯಬಹುದು.
ಸಂಕೋಚ ಪಟ್ಟು ಸುಮ್ಮನಿರುವುದರಲ್ಲಿ ಅರ್ಥವಿಲ್ಲ ಎಂದೆನಿಸಲಿದೆ. ನಿಮ್ಮ ಎಲ್ಲ ವಿಚಾರಗಳಿಗೆ, ಸಂಗತಿಗಳಿಗೆ ಮೂಗು ತೂರಿಸಿಕೊಂಡು ಬರುತ್ತಿದ್ದ ಅಥವಾ ಬರುತ್ತಿರುವ ವ್ಯಕ್ತಿಯೊಬ್ಬರಿಗೆ ಮುಲಾಜಿಲ್ಲದೆ ಎಚ್ಚರಿಕೆಯನ್ನು ನೀಡುವ ಸಾಧ್ಯತೆಗಳಿವೆ. ಇಷ್ಟು ಸಮಯ ಯಾವುದೋ ಸಂಕೋಚದಿಂದ ಹೇಳದೇ ಉಳಿದ ಸಂಗತಿಗಳನ್ನು ಏಕಾಏಕಿ ಹೇಳಿ ಮುಗಿಸಲಿದ್ದೀರಿ. ನಿಮ್ಮಲ್ಲಿ ಯಾರು ಪ್ರೀತಿ- ಪ್ರೇಮ ವಿಚಾರಗಳನ್ನು ಹೇಳಬೇಕು ಎಂದುಕೊಳ್ಳಲೇ ಬೇಕು
ಎಲ್ಲ ಜವಾಬ್ದಾರಿಗಳು ಒಂದೇ ಸಮನೆ ಬರುವುದರಿಂದ ಈ ದಿನ ಬಿಡುವೇ ಸಿಗದಷ್ಟರ ಮಟ್ಟಿಗೆ ಕೆಲಸಗಳು ಮೈ ಮೇಲೆ ಬೀಳಲಿವೆ. ಅದರ ಜತೆಗೆ ನೀವು ಪಡುವಂಥ ಶ್ರಮಕ್ಕೆ ತಕ್ಕ ಪ್ರತಿಫಲವೂ ದೊರೆಯಲಿದೆ. ಬಹಳ ಸಮಯದಿಂದ ಖರೀದಿ ಮಾಡಬೇಕು ಎಂದುಕೊಳ್ಳುತ್ತಿದ್ದ ಫೋನ್, ಲ್ಯಾಪ್ ಟಾಪ್, ಟ್ಯಾಬ್ ಲೆಟ್ ಅಥವಾ ಇಂಥ ಯಾವುದಾದರೂ ವಸ್ತುವನ್ನು ಈ ದಿನ ಕೊಳ್ಳುವ ಯೋಗ ನಿಮ್ಮ ಪಾಲಿಗೆ ಇದೆ.
ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಇಎಂಐ ಆಗಿ ಕನ್ವರ್ಟ್ ಮಾಡಿಸಿಯೋ ಕೆಲವು ಖರೀದಿ ಮಾಡುವಂಥ ಸಾಧ್ಯತೆಗಳಿವೆ. ನೆನಪಿನಲ್ಲಿಡಿ, ಸಾಲ ದೊರೆಯುತ್ತದೆ ಅಥವಾ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದೆ ಹಣ ಸಿಗುತ್ತದೆ ಎಂಬ ಕಾರಣಕ್ಕೆ ಅಗತ್ಯವನ್ನು ಮೀರಿ, ಖರೀದಿ ಮಾಡುವುದಕ್ಕೆ ಹೋಗಬೇಡಿ. ಮಕ್ಕಳ ಅಥವಾ ಕುಟುಂಬದಲ್ಲಿನ ಕಿರಿಯರ ಶಿಕ್ಷಣದ ವಿಚಾರ ವಿಪರೀತ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ಇದೇ ಕಾರಣಕ್ಕೆ ನೀವೇ ಸಾಲ ಮಾಡಬೇಕಾಗಬಹುದು.
ಯಾವುದೇ ಪ್ರಯತ್ನದಲ್ಲಿ ಗೆಲುವು ಕಾಣಲಿದ್ದೀರಿ. ಅಚಾನಕ್ ಸಿಗುವಂತಹ ಹಳೆಯ ಸ್ನೇಹಿತರು ಹೇಳುವ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿ. ಅವರೇನಾದರೂ ವ್ಯಾಪಾರ ಅಥವಾ ವೃತ್ತಿಗೆ ಸಂಬಂಧಿಸಿದ ಯಾವುದಾದರೂ ಅವಕಾಶಗಳ ಬಗ್ಗೆ ತಿಳಿಸಿದಲ್ಲಿ ಆ ಬಗ್ಗೆ ಕೂಡಲೇ ಸ್ಪಂದಿಸಿ. ಯಾವುದೇ ಕಾರಣಕ್ಕೂ ಆಮೇಲೆ ಮಾಡಿದರಾಯಿತು, ನೋಡಿದರಾಯಿತು ಎಂಬ ಧೋರಣೆಯನ್ನು ತೋರಿಸಬೇಡಿ.
ನೀವು ಈ ದಿನ ಇತರರ ಹಣಕಾಸಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತೀರಿ ಅಥವಾ ಅವರ ಪರವಾಗಿ ಮಾತುಕತೆಯನ್ನು ಮಾಡುತ್ತೀರಿ ಎಂದಾದಲ್ಲಿ ಯಶಸ್ಸು ಕಾಣುವ ಸಾಧ್ಯತೆಗಳು ಬಹಳ ಹೆಚ್ಚಿದೆ. ನಿಮ್ಮ ಪ್ರಭಾ ವಲಯ ವಿಸ್ತರಣೆ ಆಗಲಿದೆ. ಮಕ್ಕಳ ಸಲುವಾಗಿ ವಾಹನಗಳನ್ನು ಖರೀದಿ ಮಾಡುವಂಥ ಯೋಗ ಇದೆ. ಇನ್ನು ಅವರ ಸಲುವಾಗಿ ಪ್ರವಾಸಗಳ ಯೋಜನೆಯನ್ನು ರೂಪಿಸಲಿದ್ದೀರಿ.
ನಿಮ್ಮಲ್ಲಿ ಕೆಲವರು ಬಸ್, ರೈಲು, ವಿಮಾನದಲ್ಲಿ ಸೀಟ್ ಇಂಥದ್ದನ್ನು ಬುಕ್ ಮಾಡಬಹುದು ಅಥವಾ ಪ್ಯಾಕೇಜ್ ಪ್ರವಾಸಗಳನ್ನು ಸಹ ಬುಕ್ ಮಾಡುವಂಥ ಸಾಧ್ಯತೆಗಳು ಈ ದಿನ ಇದೆ. ಸಂಗಾತಿಯ ಕಡೆ ಸಂಬಂಧಿಕರು ಸಹಾಯ ಕೇಳಿಕೊಂಡು ಬರಬಹುದು. ನಿಮ್ಮಲ್ಲಿ ಕೆಲವರು ಈಗ ಮಾಡುತ್ತಿರುವ ಉದ್ಯೋಗ, ವೃತ್ತಿ ಅಥವಾ ವ್ಯಾಪಾರದ ಜತೆಗೆ ಇನ್ನೊಂದು ವ್ಯವಹಾರ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ.
ಬೆಳಗಾವಿ, (ಮಾರ್ಚ್ 17): 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಏಕಾಏಕಿ ಸಾವನ್ನಪ್ಪಿದ್ದು, ತಂದೆ ಮೇಲೆ ಅನುಮಾನ ವ್ಯಕ್ತವಾಗಿದೆ. ಹೌದು…ಳಗಾವಿ (Belagavi) ತಾಲೂಕಿನ ಉಕ್ಕಡ ಗ್ರಾಮದಲ್ಲಿ 15 ದಿನಗಳ ಹಿಂದೆಯಷ್ಟೇ ಜನಿಸಿದ್ದ ಮಗು ಪ್ರಿಯಾಂಕಾ ಇಂದು (ಮಾರ್ಚ್ 17) ಏಕಾಏಕಿ ಸಾವನ್ನಪ್ಪಿದ್ದು, ತಂದೆಯೇ ಮಗುವಿಗೆ ವಿಷ ಪ್ರಾಶನ ಮಾಡಿರುವ ಆರೋಪ ಕೇಳಿಬಂದಿದೆ. ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಮತ್ತೊಂದೆಡೆ ಮಗುವಿನ ತಂದೆ ಭೀಮರಾಯ ತಲೆಮರೆಸಿಕೊಂಡಿದ್ದಾನೆ. ಬಿಮ್ಸ್ ಆಸ್ಪತ್ರೆಗೆ ಡಿಸಿಪಿ ನಾರಾಯಣ್ ಬರಮನಿ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ವರದಿ ಬಳಿಕ ಮುಂದಿನ ಕ್ರಮದ ಭರವಸೆ ನೀಡಿದ್ದಾರೆ.
ಹೆರಿಗೆ ಹಿನ್ನೆಲೆ ಶೀಲಾ ತವರುಮನೆ ಉಕ್ಕಡ ಗ್ರಾಮದಲ್ಲಿ ಇದ್ದಳು. ಹೀಗಾಗಿ ಭೀಮರಾಯ ಇಂದು (ಮಾರ್ಚ್ 17) ಮಧ್ಯಾಹ್ನ ಉಕ್ಕಡ ಗ್ರಾಮ ಆಗಮಿಸಿ ಪತ್ನಿ ಹಾಗೂ ಮಗು ಪ್ರಿಯಾಂಕಾಳನ್ನ ನೋಡಿಕೊಂಡು ವಾಪಸ್ ತಮ್ಮೂರು ಕಡೆ ಹೋಗಿದ್ದಾನೆ. ಆದ್ರೆ, ಏಕಾಏಕಿ ಮಗು ಸಾವನ್ನಪ್ಪಿದೆ. ಇದರಿಂದ ಪೋಷಕರು ಕಂಗಾಲಾಗಿದ್ದು, ಮಗು ಚೆನ್ನಾಗಿತ್ತು ದಿಢೀರ್ ಏನಾಯ್ತು ಎಂದು ಯೋಚಿಸುವಾಗ ಮೃತ ಮಗುವಿನ ತಂದೆ ಭೀಮರಾಯನ ಮೇಲೆ ಅನುಮಾನ ಬಂದಿದೆ.
ಸಣ್ಣದೊಂದು ಟ್ಯೂಬ್ ಹಿಡಿದುಕೊಂಡು ಬಂದಿದ್ದ. ಅದೇ ಟ್ಯೂಬ್ನಿಂದ ಮಗುವಿಗೆ ಕುಡಿಸಿದ್ದಾನೆ ಎಂದು ಪತ್ನಿ ಶೀಲಾ ಹಾಗೂ ಆಕೆಯ ಪೋಷಕರಿಂದ ಗಂಭೀರ ಆರೋಪ ಮಾಡಿದ್ದಾರೆ. ಇನ್ನೊಂದೆಡೆ ಭೀಮರಾಯ ಸಹ ನಾಪತ್ತೆಯಾಗಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸದ್ಯ ಬಿಮ್ಸ್ ಆಸ್ಪತ್ರೆ ಮುಂದೆ ಮಗುವಿನ ಶವವಿಟ್ಟುಕೊಂಡು ಆಕ್ರೋಶ ಹೊರಹಾಕಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಡಿಸಿಪಿ ನಾರಾಯಣ್ ಬರಮನಿ ಆಗಮಿಸಿ ಪರಿಶೀಲನೆ ಮಾಡಿದ್ದು, ಮೃತ ಮಗುವಿನ ಮರಣೋತ್ತರ ಪರೀಕ್ಷೆ ಬಳಿಕ ಸತ್ಯ ಆಚೆ ಬರಲಿದೆ.
ವಾಷಿಂಗ್ಟನ್, ಮಾರ್ಚ್ 17: ಇರಾನ್ ಮೇಲೆ ಇಸ್ರೇಲ್ ಜೊತೆ ಕೈಜೋಡಿಸಿ ಅಮೆರಿಕ ಯುದ್ಧ ಸಾರಿದ ನಂತರ ಟ್ರಂಪ್ (Donald Trump) ಸರ್ಕಾರದ ಪ್ರಮುಖ ಅಧಿಕಾರಿಯಾದ ಜೋ ಕೆಂಟ್ ರಾಜೀನಾಮೆ ನೀಡಿದ್ದಾರೆ. ಅಮೆರಿಕದ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನಾಗಿರುವ ಜೋ ಕೆಂಟ್ ಇಂದು ರಾಜೀನಾಮೆ ನೀಡಿದ್ದಾರೆ. ಈ ವೇಳೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದ ಅವರು ಅಮೆರಿಕಕ್ಕೆ ಇರಾನ್ ಬೆದರಿಕೆಯೊಡ್ಡಿರಲಿಲ್ಲ ಎಂದು ಹೇಳಿದ್ದರು.
ಈ ಬಗ್ಗೆ ಟ್ರಂಪ್ ಪ್ರತಿಕ್ರಿಯೆ ನೀಡಿದ್ದಾರೆ. “ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ಮುಖ್ಯಸ್ಥ ಜೋ ಕೆಂಟ್ ರಾಜೀನಾಮೆ ನೀಡಿರುವುದು ಒಳ್ಳೆಯದೇ ಆಯಿತು. ನಾನು ಅವರ ಹೇಳಿಕೆಯನ್ನು ಓದಿದೆ. ಅವರು ಬಹಳ ಒಳ್ಳೆಯ ವ್ಯಕ್ತಿ ಎಂದು ನಾನು ಭಾವಿಸಿದ್ದೆ. ಆ ವ್ಯಕ್ತಿ ಒಳ್ಳೆಯವರೇ. ಆದರೆ ಅವರು ಯಾವಾಗಲೂ ಭದ್ರತೆಯ ವಿಚಾರದಲ್ಲಿ ದುರ್ಬಲರಾಗಿದ್ದರು. ಅವರು ರಾಜೀನಾಮೆ ನೀಡಿದ್ದೇ ಒಳ್ಳೆಯದಾಯಿತು” ಎಂದು ಶ್ವೇತಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಅವರ ಹೇಳಿಕೆಯನ್ನು ಓದಿದಾಗ ಅವರು ಹೊರಗೆ ಹೋಗಿದ್ದೇ ಒಳ್ಳೆಯದು ಎಂದುಕೊಂಡೆ. ಏಕೆಂದರೆ ಇರಾನ್ ಬೆದರಿಕೆಯೊಡ್ಡಿರಲಿಲ್ಲ ಎಂದು ಅವರು ಹೇಳಿದ್ದರು. ಆದರೆ, ಇರಾನ್ ಅಮೆರಿಕಕ್ಕೆ ಮಾತ್ರವಲ್ಲ ಪ್ರತಿಯೊಂದು ದೇಶಕ್ಕೂ ಬೆದರಿಕೆ” ಎಂದು ಟ್ರಂಪ್ ಹೇಳಿದ್ದಾರೆ.
After much reflection, I have decided to resign from my position as Director of the National Counterterrorism Center, effective today.
I cannot in good conscience support the ongoing war in Iran. Iran posed no imminent threat to our nation, and it is clear that we started this… pic.twitter.com/prtu86DpEr
“ಇರಾನ್ ಅಮೆರಿಕಕ್ಕೆ ಯಾವುದೇ ಬೆದರಿಕೆಯೊಡ್ಡಿರಲಿಲ್ಲ. ಇಸ್ರೇಲ್ ಪದೇಪದೆ ಒತ್ತಡ ಹೇರಿದ್ದರಿಂದ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕೈಜೋಡಿಸಿತು. ಬಹಳ ಯೋಚನೆಯ ಮಾಡಿ ನಾನು ಇಂದಿನಿಂದಲೇ ಜಾರಿಗೆ ಬರುವಂತೆ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಜೋ ಕೆಂಟ್ ತಮ್ಮ ಎಕ್ಸ್ ಪೇಜಿನಲ್ಲಿ ಪೋಸ್ಟ್ ಮಾಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 17: ಬೆಂಗಳೂರಿನ ವೈಯಾಲಿಕಾವಲ್‌ನ ವಿನಾಯಕ ವೃತ್ತದ ಬಳಿ ಅಚ್ಚರಿ ಮೂಡಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯನ್ನು ಚೀಲಕ್ಕೆ ಹಾಕಿ ಕೊರಿಯರ್ ಶಾಪ್ಗೆ ತಂದಿದ್ದಾರೆ. ಪುಂಡರ ಹುಚ್ಚಾಟಕ್ಕೆ ಕೊರಿಯರ್ ಶಾಪ್ ಸಿಬ್ಬಂದಿ ಕಂಗಾಲಾಗಿದ್ದಾರೆ. ಪ್ರೊಫೆಷನಲ್ ಕೊರಿಯರ್ ಶಾಪ್ಗೆ ಬಂದ ಪುಂಡರು ಪ್ಲಾಸ್ಟಿಕ್ ಚೀಲದಲ್ಲಿರುವ ವ್ಯಕ್ತಿಯನ್ನು ಕೊರಿಯರ್ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಈ ವೇಳೆ ಚೀಲ ಅಲುಗಾಡುತ್ತಿರುವುದನ್ನು ಗಮನಿಸಿದ ಕೊರಿಯರ್ ಸಿಬ್ಬಂದಿ ಪರಿಶೀಲಿಸಿದ್ದು, ಅದರೊಳಗೆ ಮನುಷ್ಯನೊಬ್ಬ ಇರುವುದು ಕಂಡುಬಂದಿದೆ. ಒಂದು ಕ್ಷಣ ಕೊರಿಯರ್ ಶಾಪ್ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಅವರು ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಧ್ರುವ ಸರ್ಜಾ ನಟನೆಯ, ಜೋಗಿ ಪ್ರೇಮ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ: ದಿ ಡೆವಿಲ್’ (KD: The Devil) ನೆಗೆಟಿವ್ ಕಾರಣಕ್ಕೆ ಸುದ್ದಿ ಆಗುತ್ತಿದೆ. ಈ ಸಿನಿಮಾದ ‘ಸರ್ಸೆ ನಿನ್ನ ಸೆರಗ ಸರ್ಸೆ’ ಹಾಡು ಸದ್ಯ ದೇಶಾದ್ಯಂತ ಭಾರಿ ವಿವಾದಕ್ಕೆ ಸಿಲುಕಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಈ ಹಾಡಿನ ಸಾಹಿತ್ಯ ಮತ್ತು ನೃತ್ಯ ಸಂಯೋಜನೆ ಬಗ್ಗೆ ಈಗ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ತೀವ್ರವಾಗಿ ಕಿಡಿಕಾರಿದ್ದಾರೆ. ಈ ಹಾಡಿನ ಹಿಂದಿ ವರ್ಷನ್ ‘ಸರ್ಕೆ ಚುನರ್ ತೇರಿ ಸರ್ಕೆ’ ಈಗಾಗಲೇ ಡಿಲೀಟ್ ಆಗಿದೆ.
ಸುದ್ದಿ ಸಂಸ್ಥೆ ಎಎನ್ಐ ಜೊತೆ ಮಾತನಾಡಿದ ಕಂಗನಾ ರಣಾವತ್, ‘ಬಾಲಿವುಡ್ ಅಶ್ಲೀಲತೆ, ಗಿಮಿಕ್ ಮತ್ತು ಅಟೆನ್ಷನ್ ಪಡೆಯುವ ತಂತ್ರಗಳಲ್ಲಿ ಎಲ್ಲ ಮಿತಿಗಳನ್ನು ಮೀರಿದೆ. ಇಡೀ ದೇಶವೇ ಇವರನ್ನು ಖಂಡಿಸುತ್ತಿದೆ. ಆದರೆ ಇವರಿಗೆ ಯಾವುದೇ ನಾಚಿಕೆ ಇಲ್ಲ ಎಂದು ನನಗನ್ನಿಸುತ್ತದೆ. ಇಂತಹ ಅಸಭ್ಯ ಪ್ರದರ್ಶನಗಳ ಬಗ್ಗೆ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಬಾಲಿವುಡ್‌ಗೆ ಸರಿಯಾದ ಲಗಾಮು ಹಾಕುವ ಸಮಯ ಬಂದಿದೆ’ ಎಂದು ಗುಡುಗಿದ್ದಾರೆ.
ಈ ಹಾಡಿನ ಸಾಹಿತ್ಯ ಕೇಳಿ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ನನ್ನ ಟೈಮ್‌ಲೈನ್‌ನಲ್ಲಿ ಈ ಹಾಡು ಕಂಡಾಗ, ನಾನು ಕೇಳಿದ್ದು ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಪ್ಲೇ ಮಾಡಿದೆ. ಕಮರ್ಷಿಯಲ್ ಹಾಡುಗಳ ಸಾಹಿತ್ಯ ಇಷ್ಟು ಕೀಳುಮಟ್ಟಕ್ಕೆ ತಲುಪಿರುವುದು ನಿಜಕ್ಕೂ ಬೇಸರದ ಸಂಗತಿ’ ಎಂದು ಬೇಸರ ಹಂಚಿಕೊಂಡಿದ್ದಾರೆ.
#WATCH | Delhi: On the controversy over the actress Nora Fatehi’s song, BJP MP Kangana Ranaut says, “Bollywood has crossed all limits with vulgarity, tactics, and attention-seeking. The entire country is condemning and reprimanding them. But I don’t think they have any… pic.twitter.com/o4cyShzoEY
‘ಕೆಡಿ: ದಿ ಡೆವಿಲ್’ ಚಿತ್ರದ ಈ ಹಾಡಿನ ಆರಂಭಿಕ ಸಾಲುಗಳು ಲೈಂಗಿಕತೆಯನ್ನು ಬಿಂಬಿಸುವ ದ್ವಂದ್ವಾರ್ಥದ ಪದಗಳಿಂದ ಕೂಡಿವೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ಆನಂದ್ ಆಡಿಯೋ’ ಈ ಹಾಡನ್ನು ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಮಾಡಿದೆ. ತೀವ್ರ ಪ್ರತಿರೋಧ ಮತ್ತು ಸಾರ್ವಜನಿಕರ ಆಕ್ರೋಶದ ಬೆನ್ನಲ್ಲೇ, ಈ ಹಾಡಿನ ಹಿಂದಿ ಆವೃತ್ತಿಯನ್ನು ಯೂಟ್ಯೂಬ್‌ನಿಂದ ಅಧಿಕೃತವಾಗಿ ತೆಗೆದುಹಾಕಲಾಗಿದೆ.
ನಿರ್ದೇಶಕ ಪ್ರೇಮ್ ಅವರ ಈ ಮಹತ್ವಾಕಾಂಕ್ಷೆಯ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇತ್ತಾದರೂ, ಈ ಹಾಡಿನ ವಿವಾದವು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹಿಂದಿ ವರ್ಷನ್ ಮಾತ್ರ ಡಿಲೀಟ್ ಆಗಿದ್ದು, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡು ಲಭ್ಯವಿದೆ. ಅವುಗಳ ವಿರುದ್ಧವೂ ದೂರುಗಳು ದಾಖಲಾಗುತ್ತಿವೆ. ಚಿತ್ರತಂಡ ಪ್ರತಿಕ್ರಿಯೆ ನೀಡಬೇಕಿದೆ.
ರಣಜಿ ಅಂಗಳದಲ್ಲಿ ಕರ್ನಾಟಕ ತಂಡವನ್ನು ಫೈನಲ್ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಕೆಎಲ್ ರಾಹುಲ್ ಇದೀಗ ಐಪಿಎಲ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಈ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೆಎಲ್ ರಾಹುಲ್, ಈ ಬಾರಿಯ ಐಪಿಎಲ್ನಲ್ಲಿ ಡೆಲ್ಲಿ ತಂಡದಲ್ಲಿ ಹೊಸ ಪಾತ್ರವನ್ನು ನಿರ್ವಹಿಸಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತನ್ನ ಹಿಂದಿನ ತಪ್ಪುಗಳಿಂದ ಪಾಠ ಕಲಿತಿದ್ದು, ಕೆಎಲ್ ರಾಹುಲ್ ಅವರನ್ನು ಓಪನರ್ ಆಗಿ ಆಡಿಸಲು ನಿರ್ಧರಿಸಿದೆ. ಹೀಗಾಗಿ ಅವರು ಈ ಆವೃತ್ತಿಯ ಮೊದಲ ಪಂದ್ಯದಿಂದಲೇ ಡೆಲ್ಲಿ ಕ್ಯಾಪಿಟಲ್ಸ್ ಪರ ಇನ್ನಿಂಗ್ಸ್ ತೆರೆಯುವುದನ್ನು ಕಾಣಬಹುದು. ಇದು ಮಾತ್ರವಲ್ಲದೆ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕನಾಗುವುದರ ಜೊತೆಗೆ ವಿಕೆಟ್ ಕೀಪರ್ ಕೂಡ ಆಗಿರುತ್ತಾರೆ.
2025 ರ ಐಪಿಎಲ್ನಲ್ಲಿ ಕೆಎಲ್ ರಾಹುಲ್ ಮೊದಲ 11 ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ್ದರು. ಆದಾಗ್ಯೂ, ಜ್ಯಾಕ್ ಫ್ರೇಸರ್ ಮೆಕ್ಗುರ್ಕ್ ಅವರ ಕಳಪೆ ಆರಂಭಿಕ ಪ್ರದರ್ಶನದಿಂದ ಬೇಸತ್ತ ಡೆಲ್ಲಿ ಫ್ರಾಂಚೈಸ್ ಕೆಎಲ್ ರಾಹುಲ್ ಅವರನ್ನು ಆರಂಭಿಕನಾಗಿ ಕಣಕ್ಕಿಳಿಸಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ರಾಹುಲ್ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದರು.
ಕಳೆದ ಐಪಿಎಲ್ ಋತುವಿನಲ್ಲಿ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯಂತ ಯಶಸ್ವಿ ಬ್ಯಾಟ್ಸ್ಮನ್ ಆಗಿದ್ದರು. ಗುಜರಾತ್ ಟೈಟಾನ್ಸ್ ವಿರುದ್ಧ 65 ಎಸೆತಗಳಲ್ಲಿ 112 ರನ್ ಸೇರಿದಂತೆ 13 ಪಂದ್ಯಗಳಲ್ಲಿ 149.72 ಸ್ಟ್ರೈಕ್ ರೇಟ್ನಲ್ಲಿ 539 ರನ್ ಗಳಿಸಿದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರನಾಗಿ ರಾಹುಲ್ ಆ ಶತಕ ಬಾರಿಸಿದ್ದರು.
ಐಪಿಎಲ್ 2026 ರಲ್ಲೂ ಕೆಎಲ್ ರಾಹುಲ್ ಅವರಿಂದ ಇದೇ ರೀತಿಯ ಉತ್ತಮ ಪ್ರದರ್ಶನವನ್ನು ಡೆಲ್ಲಿ ಕ್ಯಾಪಿಟಲ್ಸ್ ನಿರೀಕ್ಷಿಸುತ್ತದೆ, ಇದನ್ನು ಗಮನದಲ್ಲಿಟ್ಟುಕೊಂಡು ರಾಹುಲ್ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸುವ ಅಂತಿಮ ನಿರ್ಧಾರವನ್ನು ಆಡಳಿತ ಮಂಡಳಿ ತೆಗೆದುಕೊಂಡಿದೆ.
ಕೆಎಲ್ ರಾಹುಲ್ ಅವರ ಐಪಿಎಲ್ ವೃತ್ತಿಜೀವನದಲ್ಲಿ 145 ಪಂದ್ಯಗಳ 136 ಇನ್ನಿಂಗ್ಸ್ಗಳಲ್ಲಿ 46.21 ಸರಾಸರಿ ಮತ್ತು 136.02 ಸ್ಟ್ರೈಕ್ ರೇಟ್ನಲ್ಲಿ 5222 ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪರ ಇದುವರೆಗೆ 13 ಪಂದ್ಯಗಳನ್ನು ಆಡಿರುವ ರಾಹುಲ್ 53.90 ಸರಾಸರಿಯಲ್ಲಿ 539 ರನ್ ಗಳಿಸಿದ್ದಾರೆ. ಕೆಎಲ್ ರಾಹುಲ್ ಇದುವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಪರ ಕೇವಲ ಒಂದು ಸೀಸನ್ ಮಾತ್ರ ಆಡಿದ್ದಾರೆ.