Blog
Your blog category
ಸಹಾಯ ಮಾಡಿದ ಬಳಿಕ ಒಂದು ಕಂಡೀಷನ್ ಹಾಕುತ್ತಿದ್ದ ಪುನೀತ್ ರಾಜ್ಕುಮಾರ್
Puneeth Rajkumar Birthday: ಪುನೀತ್ ರಾಜ್ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಅವರು ಇಂದು ಬದುಕಿದ್ದರೆ ಅಭಿಮಾನಿಗಳು ಅದ್ದೂರಿಯಾಗು ಹುಟ್ಟುಹಬ್ಬದ ಆಚರಿಸಿಕೊಳ್ಳುತ್ತಿದ್ದರು. ಅವರು ಇಲ್ಲದೆ ಇರುವುದು ಅಭಿಮಾನಿಗಳಿಗೆ ಸಾಕಷ್ಟು ಬೇಸರ ಇದೆ. ಪುನೀತ್ ರಾಜ್ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ. ಪುನೀತ್ ರಾಜ್ಕುಮಾರ್ ಅವರು ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾದಾಗ ಹಲವು ಜನರಿಗೆ ಸಹಾಯ ಮಾಡಿದ್ದರು. ಕಷ್ಟದಲ್ಲಿದ್ದು…
ತ್ರಿಷಾ ಬರ್ತ್ಡೇ ದಿನ ದಳಪತಿ ವಿಜಯ್ ರಾಜಕೀಯ ಭವಿಷ್ಯ; ಚುನಾವಣೆಗೂ ಮುನ್ನವೇ ಡಿವೋರ್ಸ್?
ಸದ್ಯ ತಮಿಳುನಾಡು ಚುನಾವಣಾ ದಿನಾಂಕ ಘೋಷಣೆ ಆಗಿದೆ. ಏಪ್ರಿಲ್ 23ರಂದು ಒಂದೇ ಹಂತದಲ್ಲಿ ರಾಜ್ಯದ 234 ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ದಳಪತಿ ವಿಜಯ್ ಅವರ ಟಿವಿಕೆ (ತಮಿಳಗ ವೆಟ್ರಿ ಕಳಗಮ್) ಪಕ್ಷ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ. ಹೀಗಿರುವಾಗಲೇ ಕೆಲವೊಂದು ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ವಿಜಯ್ ಅವರು ಚುನಾವಣೆಗೂ ಮೊದಲೇ ಡಿವೋರ್ಸ್ ಪಡೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡಿದೆ. ತ್ರಿಷಾ ಬರ್ತ್ಡೇ ದಿನ ವಿಜಯ್ (Vijay) ರಾಜಕೀಯ ಭವಿಷ್ಯ ನಿರ್ಧಾರ ಆಗಲಿದೆ. ವಿಜಯ್ ಅವರ ಪತ್ನಿ ಸಂಗೀತಾ…
ಪೂಜೆ, ಪುನಸ್ಕಾರ ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವಾ? ಶಾಸ್ತ್ರಗಳು ಹೇಳೋದೇನು ನೋಡಿ
ಪೂಜೆ-ಪುನಸ್ಕಾರಗಳನ್ನು ಮಾಡುವುದರಿಂದ ಕಷ್ಟಗಳು ನಿವಾರಣೆಯಾಗುತ್ತವೆಯೇ ಎಂಬ ಪ್ರಶ್ನೆಯ ಬಗ್ಗೆ ‘ಟಿವಿ9’ ಕನ್ನಡ ಡಿಜಿಟಲ್ನ ‘ನಿತ್ಯ ಭಕ್ತಿ’ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ವಿಶ್ಲೇಷಿಸಿದ್ದಾರೆ. ಮಾನವರಾಗಿ ಜನಿಸಿದ ಮೇಲೆ ಕಷ್ಟ-ಸುಖಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಹಣೆಬರಹ ಅಥವಾ ಕರ್ಮಫಲವನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಆದರೆ, ಪೂಜೆ, ಪುನಸ್ಕಾರ, ಹೋಮ, ಹವನ, ಯಜ್ಞ, ಯಾಗಾದಿ ಮತ್ತು ಜಪಗಳು ಕಷ್ಟಗಳನ್ನು ಸಂಪೂರ್ಣವಾಗಿ ನಿವಾರಿಸದಿದ್ದರೂ, ಅವುಗಳನ್ನು ಎದುರಿಸುವ ವಿಶೇಷ ಶಕ್ತಿಯನ್ನು ನೀಡುತ್ತವೆ. ಪೂಜೆ, ಮಂತ್ರಗಳನ್ನು…
ಸುಬ್ರಹ್ಮಣ್ಯನ ಲಹರಿ ಇರುವ ಇಂದಿನ ದಿನ ಭವಿಷ್ಯ ಹೇಗಿದೆ ನೋಡಿ
2026 ರ ಮಾರ್ಚ್ 17 ರ ಮಂಗಳವಾರದ ದೈನಂದಿನ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿ, ಶತಭಿಷಾ ನಕ್ಷತ್ರ, ಸಿದ್ಧಿ ಯೋಗ ಮತ್ತು ವಣಿಕ್ ಕರಣವಿರುವ ಈ ದಿನದ ಮಹತ್ವವನ್ನು ಕೂಡ ವಿವರಿಸಿದ್ದಾರೆ. ಈ ದಿನದ ರಾಹುಕಾಲವು ಮಧ್ಯಾಹ್ನ 3:28 ರಿಂದ 4:59 ರ ತನಕ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭಕಾಲವು…
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಮಾರ್ಚ್ 17ರ ದಿನಭವಿಷ್ಯ
ಪಾರ್ವತಿ ದೇವಿಗೆ ಕ್ಷೀರಾಭಿಷೇಕ ಮಾಡಿಸುವುದರಿಂದ ಯಾವುದೇ ಕೆಲಸದಲ್ಲಿ ಇರುವಂಥ ಗೊಂದಲ ದೂರವಾಗಲಿದೆ. ಇನ್ನು ನಿರಾಸಕ್ತಿ ಕಾಡುತ್ತಾ ಇದ್ದಲ್ಲಿ ಆ ಸಮಸ್ಯೆ ಕೂಡ ಬಗೆಹರಿಯಲಿದೆ. ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7) ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಒತ್ತಡ ಹೆಚ್ಚಾಗಲಿದೆ. ಮಕ್ಕಳ ಶಿಕ್ಷಣಕ್ಕೆ ಹಣದ ಅಗತ್ಯ ಬಂದು, ಅದಕ್ಕಾಗಿ ಉಳಿತಾಯ ಅಥವಾ ಹೂಡಿಕೆ ಹಣ ಹಿಂದೆ ತೆಗೆಯುವ ಬಗ್ಗೆ ನಿರ್ಧಾರ ಮಾಡುತ್ತೀರಿ. ಬ್ಯೂಟಿ ಪಾರ್ಲರ್ ನಡೆಸುತ್ತಾ ಇರುವವರಿಗೆ ಈಗಿರುವ ಸ್ಥಳದಿಂದ ಬೇರೆ…
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 17ರ ದಿನಭವಿಷ್ಯ
ಈ ದಿನ ಮೃತ್ಯುಂಜಯ ಮಂತ್ರವಾದ ತ್ರ್ಯಯಂಬಕಂ ಯಜಾಮಹೇ…ಇದನ್ನು ಹನ್ನೊಂದು ಬಾರಿ ಪಠಿಸಿ ಅಥವಾ ಶ್ರವಣ ಮಾಡಿ. ಪ್ರಯಾಣದ ವೇಳೆ ಜಾಗ್ರತೆಯಿಂದ ಇರಬೇಕು. ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4) ಯಾವುದೇ ಕೆಲಸ- ಕಾರ್ಯ, ಪ್ರಯಾಣವನ್ನು ಬಲವಂತದಿಂದ ಮಾಡಲಿಕ್ಕೆ ಹೋಗಬೇಡಿ. ಇತರರ ಆಸಕ್ತಿ ಹಾಗೂ ಅದರಲ್ಲಿ ತೊಡಗಲು ಇರುವಂಥ ಉದ್ದೇಶ, ಸಮಯ ಇತ್ಯಾದಿ ವಿಚಾರ ಪರಿಗಣಿಸಿ. ಕಾರು ಚಾಲನೆ ವೃತ್ತಿಯಾಗಿ ಮಾಡುತ್ತಿರುವವರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳಲು ಅವಕಾಶ ತೆರೆದುಕೊಳ್ಳುತ್ತದೆ….
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 17ರ ದಿನಭವಿಷ್ಯ
ಸುಬ್ರಹ್ಮಣ್ಯ ಸ್ವಾಮಿಯ ಪೂಜೆ, ಆರಾಧನೆ ಮಾಡಿಕೊಳ್ಳಿ. ಇದನ್ನು ಮಾಡುವುದರಿಂದ ಚರ್ಮ ಕಾಯಿಲೆಯಿಂದ ಬಳಲುತ್ತಾ ಇರುವವರಿಗೆ, ಸಾಲ ಬಾಧೆ ಇರುವವರಿಗೆ ಸಮಸ್ಯೆಯಿಂದ ಹೊರಬರುವಂಥ ಮಾರ್ಗ ಗೋಚರ ಆಗಲಿದೆ. ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1) ಸಂಭ್ರಮದ ಮಧ್ಯೆ ಯಾವುದೋ ಕೆಲಸ ಬಂತು ಅಥವಾ ಕರೆ ಬಂತು ಎಂಬ ಕಾರಣಕ್ಕೆ ಹೊರಡುವಂತೆ ಆಗಲಿದೆ. ಮನಸ್ಸಿಲ್ಲದ ಮನಸ್ಸಿನಿಂದ ತೆರಳಬೇಕಾದ ಸನ್ನಿವೇಶ ಎದುರಾಗಲಿದೆ. ಈ ದಿನ ಖರ್ಚು ಹೆಚ್ಚಿಗೆ ಆದ ನಂತರವೂ ಒಂದು…
Horoscope Today 17 March: ಇಂದು ಈ ರಾಶಿಯವರಿಗೆ ಆರೋಗ್ಯದ ಬಗ್ಗೆ ಕಾಳಜಿ ಅತ್ಯಗತ್ಯ
ಇಂದಿನ ಪಂಚಾಂಗ ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಫಾಲ್ಗುಣ, ಸೌರ ಮಾಸ : ಮೀನ, ಮಹಾನಕ್ಷತ್ರ : ಪೂರ್ವಾಭಾದ್ರ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ಶತಭಿಷಾ, ಯೋಗ : ಸಿದ್ಧ, ಕರಣ : ಭದ್ರ, ಸೂರ್ಯೋದಯ – 06 – 31 am, ಸೂರ್ಯಾಸ್ತ – 06 – 33 pm, ಇಂದಿನ ಶುಭಾಶುಭ ಕಾಲ :…
ಕಾಂಗ್ರೆಸ್ ಮುಖಂಡರ ಗಲಾಟೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಮೊರೆ ಹೋದ ಮಹಿಳಾ ಕಾರ್ಯದರ್ಶಿ
ಚಿಕ್ಕಮಗಳೂರು, (ಮಾರ್ಚ್ 16): ಕಾಂಗ್ರೆಸ್ ಮಹಿಳಾ ಘಟಕದ ರಾಜ್ಯ ಮಹಿಳಾ ಕಾರ್ಯದರ್ಶಿ ಮೇಲೆ ಅದೇ ಪಕ್ಷದ ಮುಖಂಡನೋರ್ವ ಹಲ್ಲೆ ನಡೆಸಿರುವ ಪ್ರಕರಣ ಚಿಕ್ಕಮಗಳೂರಿನಲ್ಲಿ (Chikkamagakuru) ನಡೆದಿದೆ. ಮನೆ ಖಾಲಿ ಮಾಡಿಸಿದ್ದಕ್ಕೆ ಕೋಪಗೊಂಡು ಕಾಂಗ್ರೆಸ್ ಮುಖಂಡ ರಾಹಿಲ್ ಷರೀಫ್ ಎನ್ನುವಾತ ತಮ್ಮದೇ ಪಕ್ಷದ ಮಹಿಳಾ ಕಾರ್ಯದರ್ಶಿ ಚೇತನಾ ಹಾಗೂ ಅವರ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ಫೆಬ್ರವರಿ 28ರಂದು ರಾತ್ರಿ ಚಿಕ್ಕಮಗಳೂರು ಹೌಸಿಂಗ್ ಬೋರ್ಡ್ನಲ್ಲಿ ಚೇತನಾ ದಂಪತಿ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ ವೇಳೆ…