ಮೊದಲಿಗೆ, ರೋಹಿತ್ ಶರ್ಮಾ ಅವರ ದಾಖಲೆಯನ್ನು ನೋಡೋಣ. 2018 ರ ನಂತರ ಮೊದಲ ಬಾರಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುತ್ತಿರುವ ರೋಹಿತ್ ಶರ್ಮಾ, ಇಲ್ಲಿಯವರೆಗೆ ಪಂದ್ಯಾವಳಿಯಲ್ಲಿ 18 ಪಂದ್ಯಗಳನ್ನು ಆಡಿದ್ದಾರೆ. ಆ 18 ಪಂದ್ಯಗಳಲ್ಲಿ 17 ಇನ್ನಿಂಗ್ಸ್‌ಗಳಲ್ಲಿ, ರೋಹಿತ್ ಶರ್ಮಾ 38.7 ರ ಸರಾಸರಿಯಲ್ಲಿ 581 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ, ಅವರು ಒಂದು ಶತಕ ಮತ್ತು ಮೂರು ಅರ್ಧಶತಕಗಳನ್ನು ಗಳಿಸಿದ್ದಾರೆ.
ದರ್ಶನ್ ಅಭಿಮಾನಿಗಳು ಮತ್ತು ಕಿಚ್ಚ ಸುದೀಪ್ (Kichcha Sudeep) ಅವರ ಅಭಿಮಾನಿಗಳ ನಡುವೆ ಘರ್ಷಣೆ ಏರ್ಪಟ್ಟಿದೆ. ಕಿಚ್ಚ ಸುದೀಪ್ ಅವರು ‘ಮಾರ್ಕ್’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ವೇಳೆ ನೀಡಿದ ಹೇಳಿಕೆಯಿಂದ ವಿವಾದ ಶುರುವಾಗಿದೆ. ಡಿಸೆಂಬರ್ 25ರಂದು ‘ಮಾರ್ಕ್’ ಚಿತ್ರ ಬಿಡುಗಡೆ ಆಗಲಿದೆ. ಈ ಸಮಯಕ್ಕೆ ವಿವಾದ ಆರಂಭ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ನಟ ರಜತ್ ಕಿಶನ್ (Rajath Kishan) ಅವರು ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಫ್ಯಾನ್ಸ್ ವಾರ್ ಬಗ್ಗೆ ಟಿವಿ9 ಜೊತೆ ಮಾತನಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
‘ದಯವಿಟ್ಟು ಇದನ್ನ ಫ್ಯಾನ್ಸ್ ವಾರ್ ಎಂದು ಕರೆಯಬೇಡಿ. ದರ್ಶನ್ ಮತ್ತು ಸುದೀಪ್ ಅವರು ಕರ್ನಾಟಕದ ಆಸ್ತಿ. ಅಭಿಮಾನಿಗಳು ಇದನ್ನು ಸಭ್ಯ ರೀತಿಯಲ್ಲಿ ನೋಡಬೇಕು. ಅವರ ಬಗ್ಗೆ ಮಾತಾಡುವಷ್ಟು ದೊಡ್ಡವನು ನಾನಲ್ಲ. ನನ್ನನ್ನು ಎಲ್ಲರೂ ದರ್ಶನ ಸರ್ ಫ್ಯಾನ್ ಎಂದು ಹೇಳಿದ್ದಾರೆ. ಅದು ನಿಜ ಕೂಡ ಹೌದು. ನನಗೆ ಒಂದು ಪರ್ಸನಲ್ ಸಮಸ್ಯೆ ಆಗಿತ್ತು. ರಾತ್ರಿ 2 ಗಂಟೆ, 3 ಗಂಟೆಗೆಲ್ಲ ಸುದೀಪ್ ಸರ್ ನಮ್ಮ ಮನೆಗೆ ಫೋನ್ ಮಾಡಿ, ನಾವು ಸೇಫ್ ಆಗಿದ್ದೇವೆ ಎಂಬ ವಿಷಯ ತಿಳಿದುಕೊಳ್ಳುವ ತನಕ ನಿದ್ದೆ ಮಾಡಿರಲಿಲ್ಲ. ಹಾಗಾಗಿ ಒಬ್ಬ ದರ್ಶನ್ ಸರ್ ಅಭಿಮಾನಿಯನ್ನು ಕಾಪಾಡಿದ್ದು ಸುದೀಪ್ ಸರ್’ ಎಂದಿದ್ದಾರೆ ರಜತ್.
‘ಸುದೀಪ್ ಮತ್ತು ದರ್ಶನ್ ಅವರು ನನ್ನ ಜೀವನದಲ್ಲಿ ಬಹಳ ಮುಖ್ಯ. ನಮ್ಮ ಅಪ್ಪ, ಅಮ್ಮನನ್ನು ಬಿಟ್ಟರೆ ನಾನು ತುಂಬಾ ಪ್ರೀತಿಸುವ ಅತಿ ಮುಖ್ಯವಾದ ವ್ಯಕ್ತಿಗಳು ಅವರಿಬ್ಬರು. ಇಬ್ಬರಿಗೂ ಒಳ್ಳೆಯದಾಗಲಿ. ಯಾರೂ ಇದನ್ನು ದೊಡ್ಡ ವಿಷಯ ಮಾಡುವುದು ಬೇಡ’ ಎಂದಿದ್ದಾರೆ ರಜತ್. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿರುವ ಅವರು ‘ದಿ ಡೆವಿಲ್’ ಮತ್ತು ‘ಮಾರ್ಕ್’ ಎರಡೂ ಸಿನಿಮಾವನ್ನು ವೀಕ್ಷಿಸುವುದಾಗಿ ಹೇಳಿದ್ದಾರೆ.
‘ದಿ ಡೆವಿಲ್ ಮತ್ತು ಮಾರ್ಕ್ ನಡುವೆ ನನ್ನ ಆಯ್ಕೆ ಯಾವುದು ಅಂತ ಕೇಳಿದರೆ, ಕನ್ನಡ ಸಿನಿಮಾ ಎಂಬುದು ನನ್ನ ಉತ್ತರ. ನಾನು ರಾಜ್ಕುಮಾರ್ ಫ್ಯಾನ್. ಅಲ್ಲಿಂದ ನೋಡಿಕೊಂಡು ಬಂದಿದ್ದೇವೆ. ಯಾವ ಸಿನಿಮಾ ಚೆನ್ನಾಗಿ ಇದೆಯೋ ಅದನ್ನು ನೋಡುತ್ತೇವೆ. ಇಷ್ಟ ಆಗಿಲ್ಲ ಎಂದರೆ ನೋಡಲ್ಲ. ದಿ ಡೆವಿಲ್ ಮತ್ತು ಮಾರ್ಕ್ ಎರಡೂ ಕೂಡ ನಮ್ಮ ಸಿನಿಮಾ’ ಎಂದಿದ್ದಾರೆ ರಜತ್.
‘ಆಗುತ್ತಿರುವ ವಿವಾದದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಬ್ಬರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ದರ್ಶನ್ ಸರ್ ಎಂದರೆ ನನಗೆ ಅತಿಯಾದ ಪ್ರೀತಿ. ಸುದೀಪ್ ಸರ್ ಎಂದರೆ ಅಪಾರ ಗೌರವ. ನನಗೆ ಬಿಗ್ ಬಾಸ್ ತುಂಬಾ ಇಷ್ಟ ಯಾಕೆಂದರೆ, ಅದು ನನಗೆ ಸುದೀಪ್ ಅವರನ್ನು ಮೊದಲ ಬಾರಿಗೆ ಪರಿಚಯ ಮಾಡಿಸಿತು. ಅಲ್ಲಿ ನಮ್ಮ ಮಾತನ್ನು ಕೇಳಿ ಖುಷಿಯಿಂದ ನಕ್ಕ ವ್ಯಕ್ತಿ ಅವರು. ನಮಗೆ ಒಂದು ರೆಸಾರ್ಟ್ ಓಪನಿಂಗ್ ಇದ್ದಾಗ ಏನೂ ನಿರೀಕ್ಷೆ ಮಾಡದೇ ಬಂದು ಓಪನಿಂಗ್ ಮಾಡಿಕೊಟ್ಟಿದ್ದು ದರ್ಶನ್ ಸರ್. ಎಂದಿಗೂ ನಾನು ನಿಯತ್ತಿಗೆ ಆಭಾರಿ. ಇಬ್ಬರೂ ನನಗೆ ಸಿಕ್ಕಾಪಟ್ಟೆ ಇಷ್ಟ’ ಎಂದು ರಜತ್ ಅವರು ಹೇಳಿದ್ದಾರೆ.
ನ್ಯೂಯಾರ್ಕ್, ಡಿಸೆಂಬರ್ 22: ದಿ ಆರ್ಟ್ ಆಫ್ ಲಿವಿಂಗ್ನ ಸಂಸ್ಥಾಪಕ ಹಾಗೂ ಜಾಗತಿಕ ಆಧ್ಯಾತ್ಮಿಕ ಗುರು ಗುರುದೇವ ಶ್ರೀ ಶ್ರೀ ರವಿಶಂಕರ್ (Sri Sri Ravi Shankar) ಅವರ ನೇತೃತ್ವದಲ್ಲಿ 150 ದೇಶಗಳಿಂದ 1.21 ಕೋಟಿಗೂ ಹೆಚ್ಚಿನ ಜನರು ಇತಿಹಾಸದಲ್ಲೇ ಅತ್ಯಂತ ದೊಡ್ಡ ಸಾಮೂಹಿಕ ಧ್ಯಾನದಲ್ಲಿ ಭಾಗವಹಿಸಿದರು. ತಜ್ಞರು ಇದನ್ನು ಜಾಗತಿಕ ಕಲ್ಯಾಣಕ್ಕೆ ಹೊಸ ಆಯಾಮವನ್ನು ನೀಡುವ ಮಹತ್ವದ ಕ್ಷಣವೆಂದು ಹೇಳುತ್ತಿದ್ದಾರೆ. ವಿಶ್ವ ಧ್ಯಾನ ದಿನದ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಗತ್ತಿನೆಲ್ಲೆಡೆ ಜನರಲ್ಲಿ ಹೆಚ್ಚುತ್ತಿರುವ ಆತಂಕ, ಒತ್ತಡ, ಸಂಘರ್ಷ ಮತ್ತು ಮಾನಸಿಕ ಆರೋಗ್ಯ ಸವಾಲುಗಳ ನಡುವೆಯೇ ಮಾನವಕುಲ ಹುಡುಕುತ್ತಿರುವ ಶಾಂತಿ ಮತ್ತು ಸಹನಶೀಲತೆಯನ್ನು ಧ್ಯಾನದ ಅಭ್ಯಾಸದ ಮೂಲಕ ಕಂಡುಕೊಳ್ಳುವ ಬಗೆಯನ್ನು ಈ ಧ್ಯಾನಾಸಕ್ತರ ಸಂಖ್ಯೆ ಸ್ಪಷ್ಟವಾಗಿ ಸಾಬೀತುಪಡಿಸಿತು.
ಜಗತ್ತಿನಲ್ಲಿ ಮಾನಸಿಕ ನೆಮ್ಮದಿ ಹಾಗೂ ಸಾಮಾಜಿಕ ಸಾಮರಸ್ಯವನ್ನು ನೆಲೆಗೊಳಿಸುವ ಉದ್ದೇಶದಿಂದ 2024ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 21ನ್ನು ‘ವಿಶ್ವ ಧ್ಯಾನ ದಿನ’ವೆಂದು ಅಧಿಕೃತವಾಗಿ ಅಂಗೀಕರಿಸಿತು. ಈ ವರ್ಷದ ಕಾರ್ಯಕ್ರಮವು ನ್ಯೂಯಾರ್ಕ್ ನಗರದ ವಿಶ್ವಸಂಸ್ಥೆಯ ಟ್ರಸ್ಟೀಶಿಪ್ ಕೌನ್ಸಿಲ್ ಸಭಾಂಗಣದಲ್ಲಿ ನಡೆಯಿತು. ಗುರುದೇವ ರವಿಶಂಕರ್ ಅವರ ನೇತೃತ್ವದಲ್ಲಿ ನಡೆದ ಧ್ಯಾನದ ಕಾರ್ಯಕ್ರಮದಲ್ಲಿ ರಾಜತಾಂತ್ರಿಕರು ಮತ್ತು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಧ್ಯಾನದಲ್ಲಿ ಭಾರತದ ಗ್ರಾಮೀಣ-ನಗರ ಪ್ರದೇಶಗಳೂ ಸೇರಿದಂತೆ ಆಫ್ರಿಕಾ, ಯುರೋಪ್, ಏಷ್ಯಾ, ಅಮೆರಿಕಾ ಹಾಗೂ ಆಸ್ಟ್ರೇಲಿಯಾ ಖಂಡಗಳಿಂದಲೂ ಜನರು ಆನ್ಲೈನ್ ಮೂಲಕ ಭಾಗವಹಿಸಿದ್ದರು.
ಈ ಕಾರ್ಯಕ್ರಮವು ಗಾಢವಾದ ಮೌನದ ಮಾರ್ದನಿಯಾಗಿತ್ತು. 60ಕ್ಕೂ ಅಧಿಕ ದೇಶಗಳಿಂದ ವಿದ್ಯಾರ್ಥಿಗಳು, ವೃತ್ತಿಪರರು, ರೈತರು, ಹಾಗೂ ಕಾರಾಗೃಹ ಕೈದಿಗಳವರೆಗೆ ವಿಭಿನ್ನ ಹಿನ್ನೆಲೆಯ ಜನರು ಒಂದೇ ಸಮಯದಲ್ಲಿ ಧ್ಯಾನದ ಅನುಭವಕ್ಕೆ ಸಾಕ್ಷಿಯಾಗಿದ್ದು ಇದರ ವಿಶೇಷತೆ.
ವಿಶ್ವಾದ್ಯಂತ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಜಾಗತಿಕ ಸಂಸ್ಥೆಯಾದ ಗ್ಯಾಲಪ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಸಂಯುಕ್ತವಾಗಿ ಧ್ಯಾನ ಮತ್ತು ಸಮಾಜ ಕಲ್ಯಾಣ ಕುರಿತಾದ ಜಾಗತಿಕ ಅಧ್ಯಯನವನ್ನು ಪ್ರಾರಂಭಿಸಿದ್ದು, ಈ ಜಾಗತಿಕ ಚಳವಳಿಗೆ ಮತ್ತೊಂದು ಮಹತ್ವದ ಆಯಾಮವನ್ನು ನೀಡಿತು.
ವಿಶ್ವ ಧ್ಯಾನ ದಿನದ ಮುನ್ನ ಘೋಷಿಸಲಾದ ಈ ಸಹಕಾರದಡಿಯಲ್ಲಿ, ಗ್ಯಾಲಪ್ ತನ್ನ ಪ್ರಸಿದ್ಧ ‘ಗ್ಯಾಲಪ್ ವರ್ಲ್ಡ್ ಪೋಲ್’ ನಲ್ಲಿ ಧ್ಯಾನಕ್ಕೆ ಸಂಬಂಧಿಸಿದ ಹೊಸ ಪ್ರಶ್ನೆಗಳನ್ನು ಸೇರಿಸಲಿದೆ. ಇದರಿಂದ ಮಾನಸಿಕ ಆರೋಗ್ಯ, ಜೀವನ ಮೌಲ್ಯಮಾಪನ ಹಾಗೂ ಸಾಮಾಜಿಕ ಕಲ್ಯಾಣಕ್ಕೆ ಧ್ಯಾನದ ಪಾತ್ರವನ್ನು ವಿಶ್ಲೇಷಿಸಲಿದೆ. ಇದುವರೆಗೆ ಲಭ್ಯವಿರದ ಮಹತ್ತರ ಡೇಟಾ ಇದರಿಂದ ಸೃಷ್ಟಿಯಾಗಲಿದೆ.
ಗ್ಯಾಲಪ್‌ನ ಇತ್ತೀಚಿನ ಸಂಶೋಧನೆಗಳು, ಜಾಗತಿಕ ಮಟ್ಟದಲ್ಲಿ ಒತ್ತಡ ಮತ್ತು ಚಿಂತೆಯಂತಹ ನಕಾರಾತ್ಮಕ ಭಾವನೆಗಳು ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವುದನ್ನು ತೋರಿಸುತ್ತವೆ. ಇದರಿಂದ ಮಾನಸಿಕ ಆರೋಗ್ಯ ಸುಧಾರಣಾ ಪರಿಹಾರಗಳ ಅಗತ್ಯತೆ ತೀವ್ರವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.
ಈ ಅಧ್ಯಯನದ ಜಾಗತಿಕ ಫಲಿತಾಂಶಗಳು ಡಿಸೆಂಬರ್ 2026ರಲ್ಲಿ ಪ್ರಕಟವಾಗಲಿದ್ದು, ಸಾರ್ವಜನಿಕ ನೀತಿ, ಶಿಕ್ಷಣ ಹಾಗೂ ಕಾರ್ಯಕ್ಷೇತ್ರದಲ್ಲಿ ಫಲಿತಾಂಶಗಳು ಉತ್ತಮಗೊಳ್ಳುವ ನಿರೀಕ್ಷೆಯಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಡಿಸೆಂಬರ್ 22: ದೇಶದಲ್ಲೇ ಪ್ರಥಮ ಬಾರಿಗೆ 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ. ಮೆಟ್ರೋ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ತಿಂಗಳು ಸುಮಾರು 100 ಕಿ.ಮೀ ಉದ್ದದ ಮೆಟ್ರೋ ಮೂರನೇ ಹಂತದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗುವುದು. ಈ ಯೋಜನೆಯಲ್ಲಿ ಎಲಿವೇಟೆಡ್ ಕಾರಿಡಾರ್ ಸಹ ಸೇರಿದೆ. ವಿಶೇಷವಾಗಿ, ಒಟ್ಟು 50 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್ ನಿರ್ಮಾಣವು ಈ ಯೋಜನೆಯ ಭಾಗವಾಗಿದೆ ಎಂದರು.
ಈ ಹಿಂದೆ 6 ಕಿ.ಮೀ ಎಲಿವೇಟೆಡ್ ಮಾರ್ಗ ನಿರ್ಮಿಸಲಾಗಿದ್ದು, ಈಗ 42 ರಿಂದ 43 ಕಿ.ಮೀ ಎಲಿವೇಟೆಡ್ ಕಾರಿಡಾರ್ ನಿರ್ಮಾಣವಾಗಲಿದೆ. ಇಷ್ಟು ದೊಡ್ಡ ಮೊತ್ತದ ಎಲಿವೇಟೆಡ್ ಕಾರಿಡಾರ್ ದೇಶದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿದೆ. ಈ ಯೋಜನೆಗಳು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ರೈಲು ಮತ್ತು ಮೆಟ್ರೋ ಪ್ರಯಾಣಿಕರಿಗೂ ಅನುಕೂಲ ಕಲ್ಪಿಸುವ ಗುರಿ ಹೊಂದಿವೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
2027ರ ವೇಳೆಗೆ ಮತ್ತೊಂದು 38 ಕಿ.ಮೀ ಮಾರ್ಗ ಪೂರ್ಣಗೊಳ್ಳಲಿದ್ದು, ಇದು ವಿಮಾನ ನಿಲ್ದಾಣ ರಸ್ತೆಯನ್ನು ಸಹ ಒಳಗೊಂಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಒಟ್ಟು 175 ಕಿ.ಮೀ ಮೆಟ್ರೋ ಚಾಲನೆಗೆ ಬರಲಿದೆ. ಇದಲ್ಲದೆ, ತಾವರೆಕೆರೆ, ವಾಗ್ಮಿ ರೋಡ್, ಬಿಡದಿ, ನೆಲಮಂಗಲದಂತಹ ಪ್ರದೇಶಗಳಿಗೆ ಮೆಟ್ರೋ ವಿಸ್ತರಣೆಯ ಯೋಜನೆಗಳಿದ್ದು, ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿ ನಡೆದ ಮರ್ಯಾದೆ ಹತ್ಯೆ (Hubballi Honor Killing) ಇಡೀ ರಾಜ್ಯವನ್ನೇ ಬಿಚ್ಚಿಬೀಳಿಸಿದೆ. 22 ವರ್ಷ ವಯಸ್ಸಿನ ಮಾನ್ಯ ಹಾಗೂ ವಿವೇಕಾನಂದ ಇಬ್ಬರೂ ಧಾರವಾಡ (Dharwad) ಜಿಲ್ಲೆಯ ಹುಬ್ಬಳ್ಳಿ (Hubballi) ತಾಲೂಕಿನ ಇನಾಂ ವೀರಾಪುರ ಗ್ರಾಮದವರು. ಯುವತಿ ಲಿಂಗಾಯತ ಸಮಾಜಕ್ಕೆ ಸೇರಿದ್ರೆ.. ಯುವಕ ದಲಿತನಾಗಿದ್ದ. ಡಿಗ್ರಿ ಓದುವಾಗಲೇ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು. ಮನೆಯವರ ಬೆದರಿಕೆಗೂ ಬಗ್ಗದಷ್ಟು ಆಳವಾಗಿ ಇಬ್ಬರ ನಡುವೆ ಪ್ರೀತಿ ಬೇರೂರಿತ್ತು. ಮಾನ್ಯ, ವಿವೇಕಾನಂದನ ಬಿಟ್ಟು ಬದುಕಲ್ಲ ಅಂತಾ ಹಠ ಹಿಡಿದ್ದಳು. ವಿವೇಕಾನಂದನಿಗೆ ನನ್ನ ನೀನು ಮದುವೆಯಾಗದೇ ಇದ್ರೆ ಆತ್ಮಹತ್ಯೆ ಮಾಡಿಕೊಳ್ತೀನಿ ಅಂತ ಹಠಕ್ಕೆ ಬಿದ್ದಾಗ, ವಿವೇಕಾನಂದ ಜುಲೈ 19ರಂದು ಹುಬ್ಬಳ್ಳಿಯಲ್ಲಿ ಮಾನ್ಯಳನ್ನ ರಿಜಿಸ್ಟರ್ ಮ್ಯಾರೇಜ್ ಆಗಿದ್ದ. ಆದ್ರೆ, ಇದೀಗ ಹೆತ್ತ ತಂದೆಯೇ ಮಗಳ ಬದುಕಿಗೆ ಮುಳ್ಳಾಗಿದ್ದಾನೆ.
ಹೌದು..ನಿನ್ನೆ(ಡಿಸೆಂಬರ್ 21) ಸಂಜೆ ಮಾನ್ಯಾಳ ತಂದೆ ಪ್ರಕಾಶ್ ಗೌಡ ಪಾಟೀಲ್ ಸಂಬಂಧಿಕರಾದ ವೀರನಗೌಡ ಪಾಟೀಲ್, ಮತ್ತು ಅರುಣ್ ಗೌಡ ಪಾಟೀಲ್ ಸೇರಿ, ವಿವೇಕಾನಂದನ ಮನೆ ಮೇಲೆ ದಾಳಿ ಮಾಡಿದ್ದು, ವಿವೇಕಾನಂದ ಹಾಗೂ ಅವನ ತಾಯಿ ಜಯಶ್ರೀ ಹಾಗೂ ತಂದೆ ಸುಭಾಷ್ ಮೇಲೆ ಹಲ್ಲೆ ಮಾಡಿದ್ದಾರೆ. ಹಾಗೇ ಮಗಳು 6 ತಿಂಗಳ ಗರ್ಭಿಣಿ ಅನ್ನೋದನ್ನು ನೋಡದ ರಾಕ್ಷಸ ತಂದೆ ಪ್ರಕಾಶ್ ಗೌಡ, ಕಬ್ಬಿಣದ ಪೈಪ್ ಹಾಗೂ ಗುದ್ದಲಿಯಿಂದ ಮಗಳ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಾನ್ಯ ಸಾವನ್ನಪ್ಪಿದ್ದು, ಇಂದು (ಡಿಸೆಂಬರ್ 22) ಅಂತ್ಯಕ್ರಿಯೆ ಸಹ ನಡೆಯಿತು.
ಪತಿ ವಿವೇಕಾನಂದನೇ ಅಂತ್ಯಕ್ರಿಯೆಯ ಎಲ್ಲಾ ವಿಧಿವಿಧಾನಗಳನ್ನು ನೆರವೇರಿಸಿ ಅಂತಿಮವಾಗಿ ಪತ್ನಿ ಮಾನ್ಯಗಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಬಳಿಕ ಟಿವಿ9ಗೆ ಜೊತೆ ಮಾತನಾಡಿರುವ ವಿವೇಕಾನಂದ, ಘಟನೆಯ ಭೀಕರತೆಯನ್ನು ಬಿಚ್ಚಿಟ್ಟು ಕಣ್ಣೀರಿಟ್ಟಿದ್ದಾನೆ. ಹಾಗಾದ್ರೆ, ಪ್ರೀತಿಸಿ ಮದುವೆ ಬಳಿಕ ಏನೆಲ್ಲಾ ಕಷ್ಟಗಳನ್ನ ಅನುವಿಸಿದ ಎನ್ನುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಭಾರತದ ರಕ್ಷಣಾ ಇಲಾಖೆಯ ಆರ್ ಅಂಡ್ ಡಿ ಅಂಗವಾಗಿರುವ ಡಿಆರ್ಡಿಒ (DRDO) ಐದು ವರ್ಷದಲ್ಲಿ ಭಾರತದ ವೆಚ್ಚವನ್ನು 2.64 ಲಕ್ಷ ಕೋಟಿ ರೂನಷ್ಟು ಉಳಿಸಿದೆ ಎನ್ನುವ ಒಂದು ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಸಂಸದೀಯ ಸಮಿತಿಯೊಂದು ಇತ್ತೀಚೆಗೆ ಈ ವಿಚಾರವನ್ನು ಬಹಿರಂಗಪಡಿಸಿದೆ. ಭಾರತದಲ್ಲಿ ದೇಶೀಯವಾಗಿ ರೂಪಿತವಾಗುತ್ತಿರುವ ಅನೇಕ ಶಸ್ತ್ರಾಸ್ತ್ರ ತಂತ್ರಜ್ಞಾನ ಹಾಗೂ ಮಿಲಿಟರಿ ಉತ್ಪನ್ನಗಳಲ್ಲಿ ಡಿಆರ್ಡಿಒ ಹೆಸರು ಬಹುತೇಕ ಇದ್ದೇ ಇರುತ್ತದೆ. ಬಹಳ ಕ್ಷಮತೆ ಹಾಗೂ ಹೊಸತನಕ್ಕೆ ಉದಾಹರಣೆಯಾಗಿ ಡಿಆರ್ಡಿಒ ಇದೆ.
ಆರ್ ಅಂಡ್ ಎಷ್ಟು ಮುಖ್ಯ ಎಂದು ತೋರಿಸಿಕೊಟ್ಟಿದೆ ಡಿಆರ್ಡಿಒ
ಡಿಆರ್ಡಿಒ ಅಥವಾ ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ದೇಶೀಯವಾಗಿ ಮಿಲಿಟರಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಡಿಆರ್ಡಿಒ ಕಾರ್ಯಚಟುವಟಿಕೆ ತೀರಾ ಗರಿಗೆದರಿದೆ. ಈ ಹಿಂದೆ ಶಸ್ತ್ರಾಸ್ತ್ರ ತಯಾರಿಕೆಗೆ ಬೇಕಾದ ತಂತ್ರಜ್ಞಾನದ ಕೊರತೆ ಇತ್ತು. ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳದೇ ವಿಧಿ ಇರಲಿಲ್ಲ. ಆದರೆ, ಡಿಆರ್ಡಿಒ ಅನೇಕ ತಂತ್ರಜ್ಞಾನಗಳನ್ನು ತಾನೇ ಸ್ವಂತವಾಗಿ ಆವಿಷ್ಕರಿಸಿದೆ. ಇದರ ಪರಿಣಾಮವಾಗಿ ಇಂದು ಹಲವಾರು ಶಸ್ತ್ರಾಸ್ತ್ರಗಳು ಭಾರತದಲ್ಲೇ ತಯಾರಾಗುತ್ತಿವೆ. ಇದರಿಂದ ಭಾರತಕ್ಕೆ ಶಸ್ತ್ರಾಸ್ತ್ರ ಆಮದು ವೆಚ್ಚ ಗಣನೀಯವಾಗಿ ತಗ್ಗಿದೆ.
ಹತ್ತು ಹದಿನೈದು ವರ್ಷಗಳ ಹಿಂದೆ ಭಾರತವು ಶಸ್ತ್ರಾಸ್ತ್ರಗಳ ಆಮದು ಅತಿಹೆಚ್ಚು ಮಾಡುತ್ತಿತ್ತು. ಈಗ ವಿಶ್ವದ ಅತಿದೊಡ್ಡ ಮಿಲಿಟರಿ ರಫ್ತುದಾರ ದೇಶಗಳ ಸಾಲಿಗೆ ಸೇರ್ಪಡೆಯಾಗುತ್ತಿದೆ.
ಡಿಆರ್ಡಿಒ ಅಭಿವೃದ್ಧಿಪಡಿಸಿದ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳಿಗೆ ಲೆಕ್ಕ ಇಲ್ಲ. ತೇಜಸ್ ಎಲ್ಸಿಎ, ಅಗ್ನಿ ಕ್ಷಿಪಣಿ, ಪೃಥ್ವಿ ಕ್ಷಿಪಣಿ, ಬ್ರಹ್ಮೋಸ್ ಕ್ಷಿಪಣಿ, ಆಕಾಶ್, ಅಸ್ತ್ರ ಕ್ಷಿಪಣಿಗಳು, ಪಿನಾಕಾ ರಾಕೆಟ್, ಆ್ಯಂಟಿ ಟ್ಯಾಂಕ್ ಸಿಸ್ಟಂ, ಹೈಪರ್ಸಾನಿಕ್ ಕ್ಷಿಪಣಿ, ಹಲವು ರಾಡಾರ್ ಸಿಸ್ಟಂಗಳು, ಎಲೆಕ್ಟ್ರಾನಿಕ್ ವಾರ್ಫೇರ್ ಟೆಕ್ನಾಲಜಿಗಳ ಆವಿಷ್ಕಾರದಲ್ಲಿ ಡಿಆರ್ಡಿಒದ ರಿಸರ್ಚ್ನ ಪಾತ್ರ ಬಹಳಷ್ಟಿದೆ.
ಡಿಆರ್ಡಿಒ ಬಳಿ ಹಲವು ಇಂಟೆಲೆಕ್ಷುಯಲ್ ಪ್ರಾಪರ್ಟಿ ರೈಟ್, ಡೀಪ್ ಟೆಕ್ಗಳು ಇವೆ. ಡಿಆರ್ಡಿಒ ಸ್ಥಳೀಯವಾಗಿ ಎಂಎಸ್ಎಂಇಗಳಿಂದ ಬಿಡಿಭಾಗಗಳನ್ನು ತಯಾರಿಸಿಕೊಂಡು ತರಿಸಿಕೊಳ್ಳುತ್ತದೆ. ಹೀಗಾಗಿ, ಸ್ಥಿರವಾದ ಮತ್ತು ಸುಲಭವಾದ ಸಪ್ಪೈ ಚೈನ್ ವ್ಯವಸ್ಥೆ ಇದೆ. ಸಣ್ಣ ಉದ್ದಿಮೆಗಳಿಗೆ ಅದು ತರಬೇತಿಯನ್ನೂ ನೀಡುತ್ತದೆ. ತಾನು ಆವಿಷ್ಕರಿಸಿದ ತಂತ್ರಜ್ಞಾನವನ್ನು ವಿವಿಧ ಉದ್ದಿಮೆಗಳಿಗೆ ಕೊಟ್ಟು ಆ ಮೂಲಕ ಉತ್ಪನ್ನಗಳ ತಯಾರಿಕೆಯ ಪ್ರಮಾಣ ಹೆಚ್ಚಾಗುವಂತೆ ಮಾಡುತ್ತದೆ. ಉದ್ಯಮ ವಲಯವೂ ಬೆಳೆಯುತ್ತದೆ.
ಡಿಆರ್ಡಿಒದ ಈ ಕಾರ್ಯವೈಖರಿಯು ಕಾರ್ಪೊರೇಟ್ ಕ್ಷೇತ್ರಕ್ಕೆ ಮಾದರಿಯಾಗಬಹುದು. ಹೆಚ್ಚಿನ ಕಾರ್ಪೊರೇಟ್ ಕಂಪನಿಗಳು ಆರ್ ಅಂಡ್ ಡಿಗೆ ಒತ್ತು ಕೊಡುತ್ತಿಲ್ಲ. ಇದರಿಂದ ಟೆಕ್ನಾಲಜಿ ಆಮದು ವೆಚ್ಚ ಹೆಚ್ಚುತ್ತದೆ. ಕಂಪನಿಗಳ ಅಂತಿಮ ಲಾಭದ ಮಾರ್ಜಿನ್ ಕಡಿಮೆ ಆಗುತ್ತದೆ. ಈ ಕಂಪನಿಗಳು ರಿಸರ್ಚ್ಗೆ ಒಂದಷ್ಟು ವೆಚ್ಚ ಮಾಡಿದರೆ ಅದರಿಂದ ಉತ್ತಮ ತಂತ್ರಜ್ಞಾನ ಆವಿಷ್ಕರಿಸಿ ಜಾಗತಿಕವಾಗಿ ಪೈಪೋಟಿ ನಡೆಸಲು ಸಾಧ್ಯವಾಗುತ್ತದೆ ಎಂಬುದು ತಜ್ಞರ ಅನಿಸಿಕೆ.
ಸೊಳ್ಳೆ, ಹಲ್ಲಿ (lizards), ಜಿರಳೆ, ಇಲಿ ಇವೆಲ್ಲವೂ ಪ್ರತಿ ಮನೆಗೂ ಕರೆಯದೆ ಬರುವ ಅತಿಥಿಗಳು ಅಂತಾನೇ ಹೇಳಬಹುದು. ಒಮ್ಮೆ ಮನೆಯೊಳಗೆ ನುಸುಳಿದರೆ ಸಾಕು ಇವು ಸಿಕ್ಕಾಪಟ್ಟೆ ಕಿರಿಕಿರಿ ಉಂಟು ಮಾಡುತ್ತವೆ. ಇವುಗಳನ್ನು ಓಡಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಗೋಡೆಯ ಮೇಲೆ ಓಡಾಡುವ ಹಲ್ಲಿಗಳು ಯಾವಾಗ ಮೈ ಮೇಲೆ ಬೀಳುತ್ತವೋ, ತಯಾರಿಸಿಟ್ಟ ಆಹಾರದ ಮೇಲೆ ಬೀಳುತ್ತವೋ ಎಂಬ ಸಣ್ಣ ಭಯ ಎಲ್ಲರಲ್ಲೂ ಇದ್ದೇ ಇರುತ್ತದೆ. ಅದಕ್ಕಾಗಿ ಇವುಗಳನ್ನು ಓಡಿಸಲು ಹಲವರು ಅನೇಕಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ನೀವು ಸಹ ಇದೇ ರೀತಿ ಹಲ್ಲಿಗಳ ಕಾಟದಿಂದ ಬೇಸತ್ತಿದ್ದೀರಾ? ಹಾಗಿದ್ರೆ ಈ ಮನೆಯಲ್ಲಿ ಈ ಗಿಡಗಳನ್ನು ನೆಡಿ. ಈ ಗಿಡಗಳು ವಿಶಿಷ್ಟವಾದ ವಾಸನೆಯನ್ನು ಹೊಂದಿದ್ದು, ಇವು ಹಲ್ಲಿಗಳನ್ನು ನೈಸರ್ಗಿಕವಾಗಿ ದೂರವಿಡಲು ಸಹಾಯ ಮಾಡುತ್ತವೆ.
ಹಲ್ಲಿಗಳನ್ನು ಓಡಿಸಲು ಈ ಗಿಡಗಳನ್ನು ಮನೆಯಲ್ಲಿ ನೆಡಿ:
ಲ್ಯಾವೆಂಡರ್ ಸಸ್ಯ: ಲ್ಯಾವೆಂಡರ್ ಬಲವಾದ ವಾಸನೆ ಹಾಗೂ ಲಿನೂಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಇದು ಪ್ರಬಲವಾದ ನೈಸರ್ಗಿಕ ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ವಾಸನೆಯನ್ನು ಹಲ್ಲಿಗಳು, ಇತರ ಕೀಟಗಳು ಇಷ್ಟಪಡುವುದಿಲ್ಲ. ಹಾಗಾಗಿ ನೀವು ಕಿಟಕಿಗಳ ಬಳಿ, ಮನೆಯ ಬಾಲ್ಕನಿ, ಪ್ರವೇಶದ್ವಾರದ ಬಳಿ ಇಡಬಹುದು. ಇದರ ಸುವಾಸನೆಯು ಹಲ್ಲಿಗಳನ್ನು ದೂರವಿಡುವುದಲ್ಲದೆ ನಿಮ್ಮ ಮನೆಗೆ ತಾಜಾ ಸುವಾಸನೆಯನ್ನು ನೀಡುತ್ತದೆ.
ತುಳಸಿ ಗಿಡ: ತುಳಸಿಯ ಕಟುವಾದ ಮತ್ತು ವಿಶಿಷ್ಟವಾದ ವಾಸನೆಯು ಹಲ್ಲಿಗಳಿಗೆ ತುಂಬಾ ಕಿರಿಕಿರಿ ಉಂಟುಮಾಡುತ್ತದೆ. ಇದು ಹಲ್ಲಿಗಳನ್ನು ಮಾತ್ರವಲ್ಲದೆ, ಸೊಳ್ಳೆಗಳು ಮತ್ತು ಇತರೆ ಕೀಟಗಳನ್ನು ಮನೆಯಿಂದ ದೂರವಿಡುತ್ತದೆ. ಅಡುಗೆಮನೆಯ ಕಿಟಕಿಗಳು, ಬಾಲ್ಕನಿಗಳು, ಪ್ರವೇಶ ದ್ವಾರದ ಬಳಿ ಕುಂಡಗಳಲ್ಲಿ ತುಳಸಿ ಗಿಡವನ್ನು ನೆಡಿ. ಈ ಸಸ್ಯವು ನೈಸರ್ಗಿಕವಾಗಿ ಮನೆಯನ್ನು ರಕ್ಷಿಸುವುದಲ್ಲದೆ ಪರಿಸರವನ್ನು ಶುದ್ಧೀಕರಿಸುತ್ತದೆ.
ಪುದೀನಾ ಗಿಡ: ಪುದೀನಾದಲ್ಲಿರುವ ಬಲವಾದ ಮೆಂಥಾಲ್ ವಾಸನೆಯು ಹಲ್ಲಿಗಳ ಸೂಕ್ಷ್ಮ ಇಂದ್ರಿಯಗಳಿಗೆ ಅತ್ಯಂತ ಅಹಿತಕರವಾಗಿದೆ. ಹಾಗಾಗಿ ಮನೆಯ ಆರ್ದ್ರ ಪ್ರದೇಶಗಳಾದ ಸ್ನಾನಗೃಹದ ಕಿಟಕಿ ಅಥವಾ ಅಡುಗೆಮನೆಯ ಬಳಿ ಪುದೀನಾ ಗಿಡಗಳನ್ನು ಕುಂಡದಲ್ಲಿ ನೆಡಿ. ಹೆಚ್ಚುವರಿಯಾಗಿ, ನೀವು ಕೆಲವು ಹನಿ ಪುದೀನಾ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ ಹಲ್ಲಿಗಳು ಓಡಾಡುವ ಸ್ಥಳಗಳಲ್ಲಿ ಸ್ಪ್ರೇ ಮಾಡಬಹುದು.
ರೋಸ್ಮೆರಿ ಗಿಡ: ರೋಸ್ಮರಿಯು ಕಟುವಾದ ವಾಸನೆಯನ್ನು ಹಲ್ಲಿಗಳು ಮಾತ್ರವಲ್ಲದೆ ನೊಣಗಳು, ಸೊಳ್ಳೆಗಳು ಸಹ ಇಷ್ಟಪಡುವುದಿಲ್ಲ. ಹಾಗಾಗಿ ಈ ಹಲ್ಲಿಗಳನ್ನು ಪರಿಣಾಮಕಾರಿಯಾಗಿ ಓಡಿಸಲು ನೀವು ರೋಸ್ಮೆರಿ ಗಿಡಗಳನ್ನು ಕುಂಡದಲ್ಲಿ ನೆಟ್ಟು ಮನೆಯ ಬಾಲ್ಕನಿ, ಕಿಟಕಿಗಳ ಬಳಿ ಇಡಬಹುದು.
ಚೆಂಡು ಹೂವಿನ ಗಿಡ: ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರ ಜೊತೆಗೆ, ಚೆಂಡು ಹೂಗಳ ಪರಿಮಳವು ಕೀಟಗಳು ಮತ್ತು ಹಲ್ಲಿಗಳನ್ನು ಸಹ ಹಿಮ್ಮೆಟ್ಟಿಸುತ್ತದೆ. ಹಾಗಾಗಿ ಹಲ್ಲಿಗಳ ಕಾಟದಿಂದ ಮುಕ್ತಿ ಪಡೆಯಲು ಮನೆ ಸುತ್ತಲೂ ಚೆಂಡು ಹೂವಿನ ಗಿಡ ನೆಡಿ.
ಲೆಮನ್‌ಗ್ರಾಸ್: ಲೆಮನ್‌ಗ್ರಾಸ್ ಸಿಟ್ರೊನೆಲ್ಲಾ ಎಣ್ಣೆಯನ್ನು ಹೊಂದಿರುತ್ತದೆ, ಇದು ಪ್ರಬಲವಾದ ನೈಸರ್ಗಿಕ ಕೀಟ ನಿವಾರಕವಾಗಿದೆ. ಇದರ ಬಲವಾದ, ಸಿಟ್ರಸ್ ಪರಿಮಳವು ಹಲ್ಲಿಗಳಿಗೆ ತುಂಬಾ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹಾಗಾಗಿ ನೀವು ಮನೆ ಬಳಿ ಈ ಗಿಡಗಳನ್ನು ನೆಡಿ.
ಢಾಕಾ, ಡಿಸೆಂಬರ್ 22: ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಶಾಂತಿ ಹುಟ್ಟುಹಾಕಿದ ಷರೀಫ್ ಉಸ್ಮಾನ್ ಬಿನ್ ಹಾದಿ ಹತ್ಯೆಯ ಕೆಲವು ದಿನಗಳ ನಂತರ ಇಂದು ಬಾಂಗ್ಲಾದೇಶದಲ್ಲಿ (Bangladesh) ಮತ್ತೊಬ್ಬ ಯುವ ನಾಯಕನ ಮೇಲೆ ಗುಂಡು ಹಾರಿಸಲಾಗಿದೆ. ಯುವ ನಾಯಕನನ್ನು ಬಾಂಗ್ಲಾದೇಶದ ರಾಷ್ಟ್ರೀಯ ನಾಗರಿಕ ಪಕ್ಷದ ಖುಲ್ನಾ ವಿಭಾಗೀಯ ಮುಖ್ಯಸ್ಥ ಮೋತಲೆಬ್ ಸಿಕ್ದರ್ ಎಂದು ಗುರುತಿಸಲಾಗಿದೆ. ಅವರ ತಲೆಗೆ ಗುಂಡು ಹಾರಿಸಲಾಗಿದೆ.
ಮೋತಲೆಬ್ ಸಿಕ್ದರ್ ಅವರ ತಲೆಯ ಎಡಭಾಗಕ್ಕೆ ಗುಂಡು ಹಾರಿಸಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಎನ್‌ಸಿಪಿಯ ಕಾರ್ಮಿಕರ ಸಂಘಟನೆಯ ನಾಯಕ 42 ವರ್ಷದ ಮೊಹಮ್ಮದ್ ಮೋತಲೆಬ್ ಸಿಕ್ದರ್ ಅವರ ಮೇಲೆ ಇಂದು ಮಧ್ಯಾಹ್ನ 12.15ರ ಸುಮಾರಿಗೆ ಖುಲ್ನಾದ ಸೋನದಂಗ ಪ್ರದೇಶದ ಮನೆಯೊಂದರಲ್ಲಿ ಗುಂಡು ಹಾರಿಸಲಾಯಿತು.
32 ವರ್ಷದ ಹಾದಿ ಇಂಕಿಲಾಬ್ ಮೊಂಚೊ ಸ್ಥಾಪಕರಾಗಿದ್ದು, ಅವರು ಪದಚ್ಯುತ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಶೇಖ್ ಹಸೀನಾ ಅವರ ಸರ್ಕಾರದ ಪತನಕ್ಕೆ ಕಾರಣವಾಯಿತು. ಫೆಬ್ರವರಿ 12ರ ಸಂಸತ್ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ಲಾನ್ ಮಾಡಿದ್ದ ಹಾದಿಗೆ ಈ ತಿಂಗಳ ಆರಂಭದಲ್ಲಿ ಢಾಕಾದಲ್ಲಿ ಪ್ರಚಾರ ನಡೆಸುತ್ತಿದ್ದಾಗ ತಲೆಗೆ ಗುಂಡು ಹಾರಿಸಲಾಗಿತ್ತು. ತಕ್ಷಣ ಹಾದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಸಿಂಗಾಪುರಕ್ಕೆ ಸ್ಥಳಾಂತರಿಸಲಾಯಿತು. ಅಲ್ಲಿ ಅವರು ಕಳೆದ ವಾರ ನಿಧನರಾದರು. ಅವರ ಸಾವು ಬಾಂಗ್ಲಾದೇಶದಾದ್ಯಂತ ಭಾರಿ ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹಾದಿಯ ಹಂತಕರು ಭಾರತಕ್ಕೆ ಪಲಾಯನ ಮಾಡಿದ್ದಾರೆ ಎಂದು ಅವರ ಬೆಂಬಲಿಗರು ಆರೋಪಿಸಿ, ಅವರನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದರು. ಆದರೆ, ಈ ಆರೋಪವನ್ನು ಭಾರತ ತಳ್ಳಿಹಾಕಿತ್ತು.
ಹಾದಿ ಅವರ ಅಂತ್ಯಕ್ರಿಯೆಯನ್ನು ಶನಿವಾರ ಮುಖ್ಯ ಸಲಹೆಗಾರ ಮುಹಮ್ಮದ್ ಯೂನಸ್ ಸಮ್ಮುಖದಲ್ಲಿ ಬಿಗಿ ಭದ್ರತೆಯ ನಡುವೆ ನಡೆಸಲಾಯಿತು. ಹಾದಿಯ ಹಂತಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಯೂನಸ್ ಭರವಸೆ ನೀಡಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 3-0 ಅಂತರದ ಹಿನ್ನಡೆ ಅನುಭವಿಸಿದೆ. ಆಸೀಸ್ ನೆಲದಲ್ಲಿ ಆತಿಥೇಯರ ದಾಳಿಗೆ ನಲುಗಿ ಹೋಗಿರುವ ಇಂಗ್ಲೆಂಡ್ ಆಡಿರುವ 3 ಪಂದ್ಯಗಳಲ್ಲೂ ಏಕಪಕ್ಷೀಯ ಸೋಲು ಅನುಭವಿಸಿದೆ. ಹೀಗಾಗಿ ಟೆಸ್ಟ್ ಕ್ರಿಕೆಟ್ ದಿಕ್ಕು ಬದಲಿಸಲು ಹೊರಟಿದ್ದ ಇಂಗ್ಲೆಂಡ್ ದಿಕ್ಕಾಪಾಲಾಗಿರುವುದು ವಿಶ್ವ ಕ್ರಿಕೆಟ್ ಮುಂದೆ ನಗೆಪಾಟಲಿಗೀಡಾಗಿದೆ. ಇದೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಕೂಡ ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಯೇ ಅಣಕಿಸಿದ್ದಾರೆ.
ರೋಹಿತ್ ಶರ್ಮಾ ಇತ್ತೀಚೆಗೆ ಗುರುಗ್ರಾಮದಲ್ಲಿ ನಡೆದ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರೋಹಿತ್, ತಮ್ಮ ಅನುಭವಗಳು ಮತ್ತು ತಮ್ಮ ವೃತ್ತಿಜೀವನದುದ್ದಕ್ಕೂ ಎದುರಿಸಿದ ಸವಾಲುಗಳನ್ನು ಹಂಚಿಕೊಂಡರು. ಹಾಗೆಯೇ ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವದ ಬಗ್ಗೆಯೂ ಮಾತನಾಡಿದ ರೋಹಿತ್, ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಅಣಕಿಸಿದರು.
ಆಸ್ಟ್ರೇಲಿಯಾದಲ್ಲಿ ಆಡಿದ ಅನುಭವಗಳ ಮಾತನಾಡಿದ ರೋಹಿತ್ ಬ್ರಿಸ್ಬೇನ್‌ನಲ್ಲಿ ಟೀಂ ಇಂಡಿಯಾದ ಟೆಸ್ಟ್ ಗೆಲುವಿನ ಬಗ್ಗೆ ಉಲ್ಲೇಖಿಸುತ್ತಾ, ‘ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವುದು, ವಿಶೇಷವಾಗಿ ಟೆಸ್ಟ್ ಕ್ರಿಕೆಟ್ ಆಡುವುದು ತುಂಬಾ ಕಷ್ಟ. ಟೆಸ್ಟ್ ಕ್ರಿಕೆಟ್ ಸ್ವತಃ ತುಂಬಾ ಸವಾಲಿನದ್ದಾಗಿದೆ, ಏಕೆಂದರೆ ನೀವು ಐದು ದಿನವೂ ಗಮನಹರಿಸಬೇಕು. ಅದರಲ್ಲೂ ಆಸ್ಟ್ರೇಲಿಯಾದಲ್ಲಿ ಆಡುವುದು ಅತ್ಯಂತ ಕಷ್ಟ. ನೀವು ಬೇಕಿದ್ದರೆ ಈ ಬಗ್ಗೆ ಇಂಗ್ಲೆಂಡ್ ಬಳಿ ಕೇಳಿ ತಿಳಿದುಕೊಳ್ಳಬಹುದು. ಆದ್ದರಿಂದ, ಆ ಪಂದ್ಯ ಮತ್ತು ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆಲ್ಲುವುದು ನಮಗೆಲ್ಲರಿಗೂ ದೊಡ್ಡ ಸಾಧನೆಯಾಗಿದೆ. ಅದರಿಂದ ನಾವು ಬಹಳಷ್ಟು ಕಲಿತಿದ್ದೇವೆ’ ಎಂದಿದ್ದಾರೆ.
ವಾಸ್ತವವಾಗಿ ರೋಹಿತ್ ನೀಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎನ್ನಬಹುದು. ಏಕೆಂದರೆ ತನ್ನ ಬಾಝ್ ಬಾಲ್ ಕ್ರಿಕೆಟ್ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದ ಇಂಗ್ಲೆಂಡ್, ಟೆಸ್ಟ್ ಮಾದರಿಯಲ್ಲಿ ಹೇಳ ಹೆಸರಿಲ್ಲದಂತೆ ಕಣ್ಮರೆಯಾಗಿದೆ. ಬಲಿಷ್ಠ ತಂಡಗಳೆದುರು ಇಂಗ್ಲೆಂಡ್ ಆಟ ನಡೆಯುತ್ತಿಲ್ಲ. ಅದರಲ್ಲೂ ಪ್ರತಿಷ್ಠಿತ ಆಶಸ್ ಸರಣಿಯಲ್ಲಿ ಇಂಗ್ಲೆಂಡ್ ಪ್ರದರ್ಶನವೂ ವಿಶೇಷವಾಗಿಲ್ಲ. ಕಳೆದ ಏಳೆಂಟು ವರ್ಷಗಳಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ಐದು ಟೆಸ್ಟ್ ಪಂದ್ಯಗಳು ಮತ್ತು ಎರಡು ಸರಣಿಗಳನ್ನು ಗೆದ್ದಿದ್ದರೂ, 2010-11 ರಿಂದ ಇಂಗ್ಲೆಂಡ್, ಆಸ್ಟ್ರೇಲಿಯಾದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಈ ಅವಧಿಯಲ್ಲಿ ಇಂಗ್ಲೆಂಡ್ ತಂಡ ಸತತ 17 ಟೆಸ್ಟ್ ಸೋಲುಗಳನ್ನು ಅನುಭವಿಸಿರುವುದು ಅವರ ಕಳಪೆ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹುಬ್ಬಳ್ಳಿ, (ಡಿಸೆಂಬರ್ 22): ಹುಬ್ಬಳ್ಳಿಯ (Hubballi) ಮಾನ್ಯ ಹಾಗೂ ವಿವೇಕಾನಂದ ಇವರಿಬ್ಬರು ಜಾತಿ ಗಡಿ ಮೀರಿ ಪ್ರೀತಿ ಮಾಡಿದ್ರು.. ಹೆತ್ತವರನ್ನ ಎದುರುಹಾಕಿಕೊಂಡು ಮದುವೆಯನ್ನೂ ಮಾಡಿಕೊಂಡಿದ್ರು. ಮದುವೆಯಾಗಿ 7 ತಿಂಗಳು ಕಳೆದಿತ್ತು. ಯುವತಿ ಸಹ 6 ತಿಂಗಳ ಗರ್ಭಿಣಿಯಾಗಿದ್ಳು. ಆದ್ರೆ ಜಾತಿ ಅಮಲು ತಲೆಗೇರಿಸಿಕೊಂಡಿದ್ದ ಯುವತಿ ತಂದೆ, ಗರ್ಭಿಣಿ ಮಗಳನ್ನೇ ಬಡಿದುಕೊಂದಿದ್ದಾನೆ. ಈ ಮರ್ಯಾದೆಗೇಡು ಹತ್ಯೆಗೆ ಹುಬ್ಬಳ್ಳಿ( Hubballi Honor Killing) ಬೆಚ್ಚಿಬಿದ್ದಿದೆ.
ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲೇ ಇನಾಮ್ ವೀರಾಪುರ ಗ್ರಾಮದ ಹಳ್ಳದಲ್ಲಿ ಮಾನ್ಯಾಳ ಅಂತ್ಯಕ್ರಿಯೆ ಆಗಿದ್ದು, ಹುಟ್ಟಿಸಿ ಬೆಳೆಸಿದ್ದ ಮಗಳ ಅಂತಿಮದರ್ಶನಕ್ಕೂ ಮಾನ್ಯಾ ಪೋಷಕರು ಬಂದಿಲ್ಲ. ಹೀಗಾಗಿ ಹತ್ಯೆಯಾದ ವಿವೇಕಾನಂದ ಕುಟುಂಬಸ್ಥರೇ ಮಾನ್ಯಾಳ ಶವಸಂಸ್ಕಾರ ನೆರವೇರಿಸಿದ್ದಾರೆ. ಪತಿ ವಿವೇಕಾನಂದ ದೊಡ್ಮನಿ ಮಾನ್ಯಾಳ ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಗೋಳಾಡಿದ್ದು, ಪತಿ ವಿವೇಕಾನಂದ ಮಾನ್ಯಾಳನ್ನು ಪ್ರೀತಿಸಿ ಕೊನೆಯವರೆಗೂ ಕೈಬಿಟ್ಟಿಲ್ಲ. ಈ ಸನ್ನಿವೇಶ ನೆರೆದವರ ಕಣ್ಣಲ್ಲಿ ನೀರು ತರಿಸಿದೆ.