ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯಲ್ಲಿ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಭಾಗಿ ಆಗಿದ್ದರು. ಈಗ ಫೋಟೋಗಳ ಮೂಲಕ ಅಭಿಮಾನಿಗಳಿಗೆ ಮದುವೆ ಸಂಭ್ರಮದ ಝಲಕ್ ಕಾಣಿಸಿದೆ.
ರಾಜಸ್ಥಾನದ ಉದಯಪುರದಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಮದುವೆ ಮಾಡಿಕೊಂಡರು. ಬಹಳ ಸಂಭ್ರಮದಿಂದ ಹಳದಿ ಶಾಸ್ತ್ರ ಮಾಡಲಾಗಿತ್ತು. ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಹಲವು ವರ್ಷಗಳ ಕಾಲ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಸಾರ್ವಜನಿಕವಾಗಿ ಅವರು ಒಪ್ಪಿಕೊಂಡಿರಲಿಲ್ಲ. ಕೊನೆಗೂ ಅವರ ಪ್ರೀತಿಗೆ ಮದುವೆಗೆ ಮುದ್ರೆ ಬಿದ್ದಿದೆ.
ಇದೇ ಮೊದಲ ಬಾರಿಗೆ ಹಳದಿ ಶಾಸ್ತ್ರದ ಫೋಟೋಗಳನ್ನು ಈ ಜೋಡಿ ಹಂಚಿಕೊಂಡಿದೆ. ಮದುವೆಯಲ್ಲಿ ಹಾಜರಿದ್ದ ಕುಟುಂಬದ ಸದಸ್ಯರು ಮತ್ತು ಆಪ್ತರು ಸಂಭ್ರಮಿಸಿದ ಕ್ಷಣಗಳು ಈ ಫೋಟೋದಲ್ಲಿ ಸೆರೆಯಾಗಿವೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಯ ಈ ಫೋಟೋಗಳಿಗೆ ಅಭಿಮಾನಿಗಳಿಂದ ಲಕ್ಷಾಂತರ ಲೈಕ್ಸ್ ಸಿಗುತ್ತಿವೆ. ಕಮೆಂಟ್ಗಳ ಮೂಲಕ ಜನರು ಈ ದಂಪತಿಗೆ ಅಭಿನಂದನೆ ತಿಳಿಸುತ್ತಿದ್ದಾರೆ.
