Category Archives: Blog

Your blog category

ಕೋಗಿಲು ಲೇಔಟ್​​ಗೆ ಡಿಸಿಎಂ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು

ಬೆಂಗಳೂರು, ಡಿಸೆಂಬರ್​ 29: ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಗಿಲು ಲೇಔಟ್​ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​​ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಸಂತ್ರಸ್ತರ ಮನವಿ ಆಲಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಶಾಸಕರು ಕೂಡ ಗಮನಕ್ಕೆ ತಂದು ಮಾತನಾಡಿದ್ದಾರೆ. ಕಸದ ಗುಂಡಿ ಇತ್ತು, ಅದರ ಮೇಲೆಯೇ ಮನೆ ಕಟ್ಟಿಕೊಂಡಿದ್ದಾರೆ, ಆದರೆ ಕೆಲವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಕೇರಳ ಸಿಎಂ ಆದಿಯಾಗಿ ಎಲ್ಲರೂ ರಾಜಕೀಯ ಬೆರೆಸುತ್ತಿದ್ದಾರೆ. ಇಲ್ಲಿನ ನಿವಾಸಿಗಳು ನನ್ನ ಕಂಡ ಕೂಡಲೇ ಜೈಕಾರ ಹಾಕಿದರು. ನಮ್ಮದು ತಪ್ಪು ಇದ್ದರೆ ಧಿಕ್ಕಾರ ಕೂಗಬೇಕಿತ್ತು ಅಲ್ವಾ. ಯಾರಿಗೆ ತೊಂದರೆ ಆಗಿದೆಯೋ ಅವರಿಗೆ ನ್ಯಾಯ ಒದಗಿಸುತ್ತೇವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾದ ಕಥೆ ಬಹಿರಂಗ: 2ನೇ ಟ್ರೇಲರ್ ಇಲ್ಲಿದೆ.. – Kannada News | Prabhas starrer The Raja Saab second trailer gives hit about movie story

ಟಾಲಿವುಡ್ ನಟ ಪ್ರಭಾಸ್ ಅವರು ‘ದಿ ರಾಜಾ ಸಾಬ್’ (The Raja Saab) ಚಿತ್ರದಲ್ಲಿ ನಟಿಸಿದ್ದು, ಈ ಸಿನಿಮಾದಿಂದ 2ನೇ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಇದು ಹಾರರ್ ಸಿನಿಮಾ ಎಂಬ ಕಾರಣಕ್ಕೆ ಪ್ರಭಾಸ್ (Prabhas) ಅವರ ಅಭಿಮಾನಿಗಳಲ್ಲಿ ಬಹಳ ನಿರೀಕ್ಷೆ ಮನೆ ಮಾಡಿದೆ. 2026ರ ಜನವರಿ 9ರಂದು ಸಂಕ್ರಾಂತಿ ಪ್ರಯುಕ್ತ ಈ ಸಿನಿಮಾ ರಿಲೀಸ್ ಆಗಲಿದೆ. ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇರುವಾಗ ‘ದಿ ರಾಜಾ ಸಾಬ್’ ಸಿನಿಮಾದ ಎರಡನೇ ಟ್ರೇಲರ್ (The Raja Saab Trailer 2.0) ಅನಾವರಣ ಮಾಡಲಾಗಿದೆ. ಇದರಿಂದಾಗಿ ಸಿನಿಮಾದ ಬಹುತೇಕ ಕಥೆ ಬಹಿರಂಗ ಆದಂತೆ ಆಗಿದೆ.

ಮಾರುತಿ ಅವರು ‘ದಿ ರಾಜಾ ಸಾಬ್’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಜೊತೆ ಮಾಳವಿಕಾ ಮೋಹನನ್, ನಿಧಿ ಅಗರ್​ವಾಲ್, ಸಂಜಯ್ ದತ್, ಬೋಮನ್ ಇರಾನಿ, ರಿಧಿ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರು ಮಾಡಿರುವ ಮೊದಲ ಹಾರರ್ ಸಿನಿಮಾ ಇದು. ಈ ಚಿತ್ರದಲ್ಲಿ ಸಂಜಯ್ ದತ್ ಅವರು ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾದ ಎರಡನೇ ಟ್ರೇಲರ್:

‘ದಿ ರಾಜಾ ಸಾಬ್’ ಸಿನಿಮಾದ ಕಥೆ:

ಅಜ್ಜ (ಸಂಜಯ್ ದತ್) ನಿಧನ ಹೊಂದಿದ ಬಳಿಕ ದೆವ್ವ ಆಗುತ್ತಾನೆ. ದೊಡ್ಡ ಬಂಗಲೆಯಲ್ಲಿ ಆತನ ಆತ್ಮ ಇರುತ್ತದೆ. ಆ ಬಂಗಲೆಗೆ ಮೊಮ್ಮಗ (ಪ್ರಭಾಸ್) ತನ್ನ ಸ್ನೇಹಿತರ ಜೊತೆ ಎಂಟ್ರಿ ನೀಡುತ್ತಾನೆ. ಬಂಗಲೆ ಒಳಗೆ ಇರುವ ಅಪಾಯದ ಬಗ್ಗೆ ಮೊಮ್ಮಗನಿಗೆ ಸರಿಯಾಗಿ ಗೊತ್ತಿರುವುದಿಲ್ಲ. ಆ ಬಂಗಲೆ ಒಳಗೆ ಬಂದವರೆಲ್ಲ ದೆವ್ವದ ಜಾಲದಲ್ಲಿ ಸಿಕ್ಕಿಕೊಳ್ಳುತ್ತಾರೆ. ಅಲ್ಲಿ ವಿಚಿತ್ರಗಳೇ ತುಂಬಿಕೊಂಡಿರುತ್ತವೆ. ಮೊಮ್ಮಗ ಮತ್ತು ಆತನ ಸ್ನೇಹಿತರು ಆ ಬಂಗಲೆ ಒಳಗೆ ಸಿಕ್ಕಿಕೊಳ್ಳುತ್ತಾರೆ. ಹಾಗಾದರೆ ಆ ಬಂಗಲೆಯ ಒಳಗಿನ ರಹಸ್ಯಗಳು ಏನು? ಹೀರೋಗೆ ಏನೆಲ್ಲ ಸವಾಲುಗಳು ಎದುರಾಗುತ್ತದೆ? ಅವುಗಳನ್ನು ಆತ ಹೇಗೆ ಪರಿಹರಿಸುತ್ತಾನೆ ಎಂಬುದೇ ‘ದಿ ರಾಜಾ ಸಾಬ್’ ಸಿನಿಮಾದ ಕಹಾನಿ. ಟ್ರೇಲರ್​​ನಲ್ಲಿ ಸಂಜಯ್ ದತ್ ಅವರನ್ನು ದೆವ್ವದ ಪಾತ್ರದಲ್ಲಿ ನೋಡಿದ ಬಳಿಕ ಫ್ಯಾನ್ಸ್ ನಿರೀಕ್ಷೆ ಜಾಸ್ತಿ ಆಗಿದೆ.

ಇದನ್ನೂ ಓದಿ: ಪ್ರಭಾಸ್ ‘ಮಿಡ್ ರೇಂಜ್ ಹೀರೋ: ನಿರ್ದೇಶಕನ ಮಾತಿಗೆ ರೊಚ್ಚಿಗೆದ್ದ ಫ್ಯಾನ್ಸ್

‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಮೂಲಕ ಟಿಜಿ ವಿಶ್ವ ಪ್ರಸಾದ್ ಅವರು ‘ದಿ ರಾಜಾ ಸಾಬ್’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ದೊಡ್ಡ ಬಜೆಟ್​​ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಟ್ರೇಲರ್​ನಲ್ಲಿ ವಿಎಫ್​ಎಕ್ಸ್ ದೃಶ್ಯಗಳು ಹೈಲೈಟ್ ಆಗಿವೆ. ಥಮನ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

‘ದಿ ರಾಜಾ ಸಾಬ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲಿದೆ. ಕನ್ನಡದಲ್ಲೂ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್ ಕೊನೆಯಲ್ಲಿ ಜೋಕರ್ ಗೆಟಪ್ ಗಮನ ಸೆಳೆದಿದೆ. ಸಿನಿಮಾ ನೋಡಲು ಪ್ರಭಾಸ್ ಅಭಿಮಾನಿಗಳು ಕಾತುರರಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

VHT 2025-26: ತಮಿಳುನಾಡು ತಂಡವನ್ನು ಮಣಿಸಿ ಹ್ಯಾಟ್ರಿಕ್ ಜಯ ದಾಖಲಿಸಿದ ಕರ್ನಾಟಕ – Kannada News | Karnataka Dominates Tamil Nadu in Vijay Hazare Trophy, Secures Third Win

ವಿಜಯ್ ಹಜಾರೆ ಟ್ರೋಫಿಯ ತನ್ನ ಮೂರನೇ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಎದುರಿಸಿದ್ದ ಕರ್ನಾಟಕ ತಂಡ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಅಹಮದಾಬಾದ್​ನಲ್ಲಿರುವ ಗುಜರಾತ್ ಕಾಲೇಜು ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ತಂಡ 50ನೇ ಓವರ್​ನಲ್ಲಿ ತನ್ನೇಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 281 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು ಇನ್ನು 17 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇದು ಟೂರ್ನಿಯಲ್ಲಿ ಕರ್ನಾಟಕ ತಂಡದ 3ನೇ ಜಯವಾಗಿದ್ದು, ಈ ಹಿಂದೆ ಆಡಿದ್ದ ಎರಡೂ ಪಂದ್ಯಗಳಲ್ಲೂ ಕರ್ನಾಟಕ ಜಯಭೇರಿ ಬಾರಿಸಿತ್ತು.

ಮೊದಲು ಬ್ಯಾಟಿಂಗ್‌ ಮಾಡಿದ ತಮಿಳುನಾಡು ಪರ ನಾಯಕ ಎನ್​ ಜಗದೀಸನ್ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟರು. ಜಗದೀಸನ್ 67 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕನಿಗೆ ಸಾಥ್ ನೀಡಿದ ಪ್ರದೋಷ್ ಪಾಲ್ ಕೂಡ 57 ರನ್​ಗಳ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರ ಆಟದಿಂದಾಗಿ ತಂಡದ ಮೊತ್ತ 100 ರನ್​ಗಳ ಗಡಿ ದಾಟಿತು.

ಉಳಿದಂತೆ 6 ನೇ ಕ್ರಮಾಂಕದಲ್ಲಿ ಬಂದ ಮೊಹಮ್ಮದ್ ಅಲಿ 31 ರನ್​ಗಳ ಇನ್ನಿಂಗ್ಸ್ ಆಡಿದರೆ, ಸಾಯಿ ಕಿಶೋರ್ ಕೂಡ 38 ರನ್​ಗಳ ಕಾಣಿಕೆ ನೀಡಿದರು. ಇಂದ್ರಜಿತ್ 28 ರನ್​ಗಳಿಗೆ ಸುಸ್ತಾದರೆ, ಆರಂಭಿಕ ಅಥೀಶ್ ಇನ್ನಿಂಗ್ಸ್​ 14 ರನ್​ಗಳಿಗೆ ಅಂತ್ಯವಾಯಿತು. ಹೀಗಾಗಿ ತಂಡ 49.5 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕ ಪರ ಬೌಲಿಂಗ್‌ನಲ್ಲಿ ಮತ್ತೊಮ್ಮೆ ಮಿಂಚಿದ ಅಭಿಲಾಶ್ ಶೆಟ್ಟಿ 4 ವಿಕೆಟ್ ಪಡೆದರೆ, ವಿದ್ಯಾದರ್ ಪಾಟೀಲ್ ಹಾಗೂ ಶ್ರೇಯಸ್ ಆಚಾರ್ ತಲಾ 2 ವಿಕೆಟ್​ ಪಡೆದರು.

ಈ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೂ ಸಾಧಾರಣ ಆರಂಭ ಸಿಕ್ಕಿತು. ಮೊದಲೆರಡು ಪಂದ್ಯಗಳಲ್ಲಿ ಸ್ಫೋಟಕ ಶತಕ ಸಿಡಿಸಿದ್ದ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿಯೂ ಉತ್ತಮ ಆರಂಭ ಪಡೆದುಕೊಂಡರು. ಆದಾಗ್ಯೂ ಪಡಿಕ್ಕಲ್ ಇನ್ನಿಂಗ್ಸ್ 22 ರನ್​ಗಳಿಗೆ ಅಂತ್ಯವಾಯಿತು. ಅನುಭವಿ ಕರುಣ್ ಕೂಡ 17 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಸ್ಮರಣ್ ಆಟವೂ 15 ರನ್​ಗಳಿಗೆ ಅಂತ್ಯವಾಯಿತು. ಆದರೆ ಒಂದು ತುದಿಯಲ್ಲಿ ಭದ್ರವಾಗಿ ಬೇರೂರಿದ್ದ ನಾಯಕ ಮಯಾಂಕ್ 58 ರನ್​ಗಳ ಇನ್ನಿಂಗ್ಸ್ ಆಡಿ ತಂಡವನ್ನು ಒತ್ತಡದಿಂದ ಹೊರತೆಗೆದರು.

ನಾಯಕನ ಬಳಿಕ ಜೊತೆಯಾದ ಶ್ರೀಜಿತ್ ಹಾಗೂ ಶ್ರೇಯಸ್ ಗೋಪಾಲ್ ತಲಾ ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಗೆಲುವಿನ ಸನಿಹಕ್ಕೆ ತಂದರು. ಶ್ರೀಜಿತ್ 77 ರನ್​ಗಳ ಇನ್ನಿಂಗ್ಸ್ ಆಡಿದರೆ, ಶ್ರೇಯಸ್ ಗೋಪಾಲ್ 55 ರನ್​ಗಳ ಕಾಣಿಕೆ ನೀಡಿದರು. ಉಳಿದ ಕೆಲಸ ಮಾಡಿದ ಅಭಿನವ್ ಮನೋಹರ್ ಅಜೇಯ 20 ರನ್ ಹಾಗೂ ವಿದ್ಯಾದರ್ ಅಜೇಯ 17 ರನ್ ಬಾರಿಸಿ ತಂಡವನ್ನು ಸತತ ಮೂರನೇ ಗೆಲುವಿನತ್ತ ಕೊಂಡೊಯ್ದರು.

Source link

ಕನ್ನಡ ಮಾತನಾಡಿ ಕನ್ನಡಿಗರನ್ನು ಮೋಡಿ ಮಾಡಿದ ಬಿಹಾರ ಪೋರಿ – Kannada News | 10 Year Old Bihar Girl Masters Kannada in Bangalore: Inspiring Story

ಬೆಂಗಳೂರಿನಲ್ಲಿ ಕನ್ನಡಿಗರಾಗಿ ಕನ್ನಡ ಮಾತನಾಡಲು ಹಿಂಜರಿಯುವ ಜನರ ಮಧ್ಯೆ ಬಿಹಾರದ ಪುಟ್ಟ  ಬಾಲಕಿಯಬ್ಬಳು (Bihar girl) ಕನ್ನಡ ಮಾತನಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾಳೆ. ಇದೀಗ ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಹಾರದ 10 ವರ್ಷದ ಬಾಲಕಿಯ ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಂಡು ಒಮ್ಮೆ ಅಚ್ಚರಿಯಾಗುವುದು ಖಂಡಿತ ಎಂದು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ.

ಇದು ಈ ಹುಡುಗಿಯ ಅಸಾಧಾರಣ ಸಾಧನೆ ಎಂದು ಹೇಳಲಾಗಿದೆ. “ಕನ್ನಡದಲ್ಲಿ ಟಾಪರ್ ಆಗಿರುವ ನನ್ನ ಮಗಳು, ನಾನು ಬೇರೆ ಭಾಷೆಯಲ್ಲಿ ಕೇಳಿದ್ರೆ, ಆಕೆ ಕನ್ನಡದಲ್ಲಿ ಕೇಳಿ ಎಂದು ಹೇಳುತ್ತಾಳೆ” ಎಂದು ಆಕೆಯ ತಂದೆ ಹೇಳಿದ್ದಾರೆ. ಈ ಬಗ್ಗೆ ಒಂದು ವಿಡಿಯೋವನ್ನು ಆಕೆಯ ತಂದೆ ಇನ್ಸ್ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ.  ಆಕೆಯ ತಂದೆ ಇಂಗ್ಲಿಷ್​​​ನಲ್ಲಿ ಕನ್ನಡದಲ್ಲಿ ಕೇಳುತ್ತಾರೆ. ಇದಕ್ಕೆ ಆಕೆ ಕನ್ನಡದಲ್ಲಿ ಉತ್ತರಿಸುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಆಕೆಯ ಕನ್ನಡದ ಬಗ್ಗೆ ತಂದೆ ಹೇಳಿದ್ದೇನು?

ಅಭಿಷೇಕ್ ದುಬೆ ಅವರು ಹಿಂದೂಸ್ಥಾನ್​​ನಲ್ಲಿ ಮಾತನಾಡಿದ್ದಾರೆ. ತಮ್ಮ ಮಗಳು ಮತ್ತು ಆಕೆಯ ಕನ್ನಡ ಕಲಿಕಾ ಬಗ್ಗೆ ಕೇಳುವುದು ಮಾಹಿತಿಯನ್ನು ನೀಡಿದ್ದಾರೆ. “ಆಕೆಯ ಹೆಸರು ಮೃಗಾಂಕಾ ಅಭಿಷೇಕ್ , ಅವಳನ್ನು ಮಹಿ ಎಂಬ ಪ್ರೀತಿಯಿಂದ ಕರೆಯುತ್ತೇವೆ. ಈಗ ಅವಳಿಗೆ 10 ವರ್ಷ, 5 ತರಗತಿಯಲ್ಲಿ ಓದುತ್ತಿದ್ದಾಳೆ. ಕನ್ನಡ ಅವಳ ಪಠ್ಯಕ್ರಮದ ಭಾಗವಾಗಿದೆ. ಕನ್ನಡ ಕಲಿಯಲು ಯಾವುದೇ ವಿಶೇಷ ತರಗತಿಗೆ ಹೋಗಿಲ್ಲ. ಕನ್ನಡ ಉನ್ನತ ಅಂಕ ಪಡೆದಿದ್ದಾಳೆ. ತಮ್ಮ ಮಗಳು ಕನ್ನಡವನ್ನು ನಿರರ್ಗಳವಾಗಿ ಓದುತ್ತಾಳೆ ಮತ್ತು ಬರೆಯುತ್ತಾಳೆ. ನಾನು ಕಳೆದ 16 ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ. ಅವಳು ಹುಟ್ಟಿದ್ದು ಬೆಂಗಳೂರಿನಲೇ,  ಕನ್ನಡವನ್ನು  ಅರ್ಥಮಾಡಿಕೊಂಡರೂ, ಅದನ್ನು ನಿರರ್ಗಳವಾಗಿ ಮಾತನಾಡುವುದು ಇನ್ನೂ ಒಂದು ಸವಾಲಾಗಿದೆ ಎಂದು ಹೇಳಿದ್ದಾರೆ. ನನಗೆ ಕನ್ನಡ ಅರ್ಥವಾಗುತ್ತದೆ ಆದರೆ ನಿರರ್ಗಳವಾಗಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ

ನೆಟ್ಟಿಗರು ಹೇಳಿದ್ದೇನು?

ಚೆನ್ನಾಗಿ ಮಾಡಿದ್ದೀರಿ ಮಗು, ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಕೇಳಲು ತುಂಬಾ ಚೆನ್ನಾಗಿದೆ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ. ಮತ್ತಷ್ಟು ಕನ್ನಡವನ್ನು ಕಲಿಯಿರಿ ಎಂದು ಇನ್ನೊಬ್ಬರು ಕಮೆಂಟ್​​ ಮಾಡಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:14 pm, Mon, 29 December 25

Source link

78 ವರ್ಷ ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಬೇಕಿತ್ತು; ಸದ್ಗುರು ಅಭಿಮತ – Kannada News | 78 Year Old Siliguri Corridor Should Have Been Corrected In 1971 says Sadhguru

ಬೆಂಗಳೂರು, ಡಿಸೆಂಬರ್ 29: ಬಾಂಗ್ಲಾದೇಶದ ಬೆದರಿಕೆಗಳ ನಡುವೆಯೇ ಸಿಲಿಗುರಿ ಕಾರಿಡಾರ್ ಬಗ್ಗೆ ಇಶಾ ಫೌಂಡೇಶನ್‌ನ (Isha Foundation) ಸಂಸ್ಥಾಪಕ ಸದ್ಗುರು (Sadhguru) ಪ್ರತಿಕ್ರಿಯೆ ನೀಡಿದ್ದಾರೆ. “78 ವರ್ಷಗಳಷ್ಟು ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಿಕೊಂಡಿದ್ದರೆ ಈ ಬಿಕ್ಕಟ್ಟು ಎದುರಾಗುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ. ಇದನ್ನು ದಶಕಗಳ ಹಿಂದೆಯೇ ಸರಿಪಡಿಸಬೇಕಾಗಿತ್ತು. ಚಿಕನ್ ನೆಕ್ ಎಂದು ಕರೆಯಲ್ಪಡುವ ಈ ಜಾಗವನ್ನು ಆನೆಯ ಕುತ್ತಿಗೆಯಾಗಿ ಮಾಡಬೇಕಿದೆ ಎಂದಿದ್ದಾರೆ.

ಸಿಲಿಗುರಿ ಕಾರಿಡಾರ್ ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೀಡಿದ ಹೇಳಿಕೆಗಳ ಕುರಿತು ಬೆಂಗಳೂರಿನಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಎಕ್ಸ್​​ನಲ್ಲಿ ತಮ್ಮ ಸಂವಾದದ ವಿಡಿಯೋವನ್ನು ಹಂಚಿಕೊಂಡ ಸದ್ಗುರು, “ಸಿಲಿಗುರಿ ಕಾರಿಡಾರ್ ಭಾರತದ ವಿಭಜನೆಯಿಂದ ಸೃಷ್ಟಿಸಲ್ಪಟ್ಟ 78 ವರ್ಷಗಳಷ್ಟು ಹಳೆಯದಾದ ಅಸಂಗತತೆಯಾಗಿದ್ದು, ಇದನ್ನು 1971ರಲ್ಲಿಯೇ ಸರಿಪಡಿಸಬೇಕಾಗಿತ್ತು. ಈಗ ಅದರಿಂದ ಭಾರತ ದೇಶದ ಸಾರ್ವಭೌಮತ್ವಕ್ಕೆ ಬಹಿರಂಗವಾಗಿ ಬೆದರಿಕೆ ಉಂಟಾಗಿದೆ. ಚಿಕನ್ ಅನ್ನು ಪೋಷಿಸಿ ಅದನ್ನು ಆನೆಯಾಗಿ ವಿಕಸನಗೊಳಿಸುವ ಸಮಯ ಬಂದಿದೆ” ಎಂದು ಸದ್ಗುರು ಹೇಳಿದ್ದಾರೆ.

ಇದನ್ನೂ ಓದಿ: ಅಂಗವಿಕಲರಿಗಾಗಿ ಮಿರಾಕಲ್ ಆಫ್ ಮೈಂಡ್ ಧ್ಯಾನ ಪರಿಚಯಿಸಿದ ಸದ್ಗುರುವಿನ ಇಶಾ ಫೌಂಡೇಷನ್​

“ಬಹುಶಃ 1946-47ರಲ್ಲಿ ನಮಗೆ ಗಡಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿರಲಿಲ್ಲ. ಆದರೆ 1972ರಲ್ಲಿ ನಮಗೆ ಅಧಿಕಾರವಿತ್ತು. ಆದರೂ ನಾವು ಅದನ್ನು ಸರಿ ಮಾಡಲಿಲ್ಲ. ಈಗ, ಜನರು ಅದರ ಬಗ್ಗೆ ಚರ್ಚಿಸುವಂತಾಗಿದೆ, ಬೇರೆ ದೇಶ ನಮಗೆ ಬೆದರಿಕೆ ಹಾಕುವಂತಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ಅಸಂಗತತೆ ಕೇವಲ 78 ವರ್ಷಗಳ ಹಿಂದೆ ಸಂಭವಿಸಿದೆ. ಅದಕ್ಕೆ ಕೆಲವು ತಿದ್ದುಪಡಿ ಅಗತ್ಯವಿದೆ. ತಿದ್ದುಪಡಿ ಆಗಬೇಕು. ನಾವು ಕೋಳಿಗೆ ಚೆನ್ನಾಗಿ ಆಹಾರ ನೀಡಬೇಕು ಮತ್ತು ಅದನ್ನು ಆನೆಯನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಕೋಳಿಗಿಂತಲೂ ಆನೆಯ ಕುತ್ತಿಗೆಯನ್ನು ನಿಭಾಯಿಸುವುದು ಸುಲಭ” ಎಂದು ಸದ್ಗುರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ – Kannada News | Tumakuru: Mother Dies by Suicide After Jumping Into Lake With 8 Year Old Son

ತುಮಕೂರು, ಡಿಸೆಂಬರ್ 29: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ತುಮಕೂರು (Tumakuru) ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ತಾಯಿ ಹಂಸಲೇಖ(36) ಮತ್ತು ಪುತ್ರ ಗುರುಪ್ರಸಾದ್(8) ಮೃತರು. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೆರೆಯಿಂದ ತಾಯಿ, ಮಗನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವಗಳು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಭೂಪಸಂದ್ರ ಗ್ರಾಮದ ನಾಗೇಶ್ ಜೊತೆಗೆ ಹಂಸಲೇಖರ ಮದುವೆಯಾಗಿತ್ತು. ಅನಾರೋಗ್ಯದಿಂದ ಹಂಸಲೇಖ ಪತಿ ನಾಗೇಶ್ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. 3 ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್​ ಜತೆ ಹಂಸಲೇಖಳಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಏಕಾಏಕಾ ಇಂದು ಬೆಳಗ್ಗೆ ಕೆರೆಯಲ್ಲಿ ಮಗನ ಜೊತೆಗೆ ತಾಯಿಯ ಶವ ಪತ್ತೆ ಆಗಿದೆ.

ಕೆ‌ಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಬೈಕ್‌ಗೆ ಕೆ‌ಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎ.ಚೋಳೇನಹಳ್ಳಿ ಬಳಿ ನಡೆದಿದೆ. ದಡದಹಳ್ಳಿ ನಿವಾಸಿಗಳಾದ ಸುನೀಲ್(20) ಮತ್ತು ಶೃಂಗಾರ್(18) ಮೃತ ಯುವಕರು.

ಇದನ್ನೂ ಓದಿ: ಶೂಟ್​ ಮಾಡಿಕೊಂಡು ಪತಿ ಆತ್ಮಹತ್ಯೆ: ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?

KA 13 EQ 1866 ಸಂಖ್ಯೆಯ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕೆ‌ಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ಸಂಪ್ ಸ್ವಚ್ಚತೆ ವೇಳೆ ವಿದ್ಯುತ್ ಶಾಕ್​​​ ಹೊಡೆದು ಕಾರ್ಮಿಕ ಸಾವು

ನೀರಿನ ಸಂಪ್ ಸ್ವಚ್ಚತೆ ವೇಳೆ ವಿದ್ಯುತ್ ಶಾಕ್​​ ಹೊಡೆದು ಒಡಿಶಾ ಮೂಲದ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಟೌನ್ ಶಿವ ನಗರದಲ್ಲಿ ಘಟನೆ ನಡೆದಿದೆ. ಉಮಾಕಾಂತ್ ಮಾಲೀಕ್(26) ಮೃತ ಕಾರ್ಮಿಕ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್​​ ಪಲ್ಟಿ: ದೃಶ್ಯ ನೋಡಿದ್ರೆ ಎದೆ ಝಲ್​​ ಎನ್ನುತ್ತೆ!

ವೇಣುಗೋಪಾಲ ಎಂಬುವವರ ಸಂಪ್ ಸ್ವಚ್ಚತೆ ಮಾಡಲಾಗುತ್ತಿತ್ತು. ಮೊದಲು ಒಂದು ಸಂಪ್​​ ಸ್ವಚ್ಛ ಮಾಡಲಾಗಿದ್ದು, ಬಳಿಕ ಎರಡನೇ ಸಂಪ್ ಸ್ವಚ್ಚಗೊಳಿಸುವ ವೇಳೆ ಕರೆಂಟ್ ಶಾಕ್​ ಹೊಡೆದು ಸಂಪ್​ನಲ್ಲಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕೈ’ ನಾಯಕರಿಗೆ ಶಾಕ್​​ ಕೊಟ್ಟ ಖಾಕಿ: ದಾವಣಗೆರೆಯಲ್ಲಿ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಕೋರರು! – Kannada News | Davangere Drugs Scandal: Minister Aides Nabbed in Major Police Crackdown

ದಾವಣಗೆರೆ, ಡಿಸೆಂಬರ್​​ 29: ರಾಜ್ಯ ಸರ್ಕಾರದಲ್ಲಿನ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಯಲ್ಲಿ ಭಾಗಿಯಾಗಿರೋದನ್ನು ದಾವಣಗೆರೆ ಪೊಲೀಸರು ಬಟಾಬಯಲು ಮಾಡಿದ್ದಾರೆ. ಡಿ.23ರಂದು ನಡೆದಿದ್ದ ಡ್ರಗ್ಸ್ ದಂಧೆಕೋರರ ಗ್ಯಾಂಗ್​​ ಮೇಲಿನ ದಾಳಿ ಪ್ರಕರಣ ಸಂಬಂಧ ಮತ್ತೊಬ್ಬ ಸಚಿವರ ಪರಮಾಪ್ತನನ್ನು ಖಾಕಿ ಹೆಡೆಮುರಿ ಕಟ್ಟಿದೆ. ಆ ಮೂಲಕ ಸಿಂಥೆಟಿಕ್ ಡ್ರಗ್ಸ್ ಕೇಸ್‌ನಲ್ಲಿ ಈವರೆಗೆ ಒಟ್ಟು 8 ಆರೋಪಿಗಳ ಬಂಧನ ಆದಂತಾಗಿದೆ.

ದಾವಣಗೆರೆ ಡ್ರಗ್ಸ್‌ ಕೇಸ್‌ನಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​​ ಪಕ್ಷದ ಘಟಾನುಘಟಿಗಳೇ ಬಂಧನ ಆಗಿರೋದು ಜನ ಹುಬ್ಬೇರಿಸುವಂತೆ ಮಾಡಿದೆ. ಡಿ.23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್‌ ಮೇಲೆ ಪೊಲೀಸರ ದಾಳಿ ವೇಳೆ ಕಾಂಗ್ರೆಸ್ ಮುಖಂಡ, ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿ ನಾಲ್ವರ ಬಂಧನವಾಗಿತ್ತು. ಬಂಧಿತರಿಂದ 90 ಗ್ರಾಂ ಎಂಡಿಎಂಎ , ಸಿಂಥೆಟಿಕ್ ಸೇರಿದಂತೆ ಲಕ್ಷಾಂತರ ಮೌಲ್ಯದ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಎಂಜಿನಿಯರ್ ಮಾಸ್ಟರ್ ಮೈಂಡ್?

ಇದೇ ಪ್ರಕರಣದಲ್ಲೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಕೂಡ ಅರೆಸ್ಟ್‌ ಆಗಿದ್ದಾರೆ. ಜೊತೆಗೆ ಪಾರಸ್‌, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನು ಕೂಡ ಬಂಧಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ. ಎಸ್ಪಿ ಉಮಾ ಪ್ರಶಾಂತ್‌ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಸರ್ಕಾರಕ್ಕೆ ಧಮ್ ಇಲ್ಲ’

ಕರ್ನಾಟಕಕ್ಕೆ 500-600 ಕೋಟಿ ಮೌಲ್ಯದ ಡ್ರಗ್ಸ್ ಬಂದಿದ್ದು, ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇನ್ನು ಎರಡು ದಿನಗಳಲ್ಲಿ ಎಲ್ಲಾ ಡ್ರಗ್ಸ್​ ವಿಲೇವಾರಿ ಆಗಲಿದೆ. ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್, ತಾಕತ್ತು ಇಲ್ಲ. ಆಂಧ್ರ, ತೆಲಂಗಾಣ ಪೊಲೀಸರು ದಾಳಿ ಮಾಡೋದು ಬಾಕಿ ಇದ್ದು, ಬೇರೆ ರಾಜ್ಯದವರೇ ನಮ್ಮನ್ನು ಆಳುತ್ತಿದ್ದಾರೆ. ಹೊರ ರಾಜ್ಯದ ಪೊಲೀಸರು ನಮ್ಮ ಕಾನೂನು ವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಅಶೋಕ್​​ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಎತ್ತರದ ಅಪಾರ್ಟ್ಮೆಂಟ್​​ ಮೇಲೆ ಸಿಲುಕಿಕೊಂಡ ಬೆಕ್ಕು, ಅಗ್ನಿಶಾಮಕ ದಳದ ಕಾರ್ಯಚರಣೆ ಹೇಗಿತ್ತು? – Kannada News | Bengaluru Firefighters Save Cat Stuck on Apartment Ledge: Chandapura Rescue

ಬೆಂಗಳೂರು, ಡಿ.29: ಅಪಾರ್ಟ್ಮೆಂಟ್​​​ನ ಕಿಟಕಿ ಮೇಲೆ ಸಿಲುಕಿದ್ದ ಬೆಕ್ಕನ್ನು ಅಗ್ನಿಶಾಮಕ ತಂಡ ಕಾಪಾಡಿರುವ ಘಟನೆ ಚಂದಾಪುರದ ಹೀಲಲಿಗೆ ಸಮೀಪದ ಮಹೇಂದ್ರ ಆರ್ಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಬೆಕ್ಕಿನ ರಕ್ಷಣೆ ಮಾಡಲಾಗಿದೆ. ಪ್ಲಾಟ್​​​ ಹೊರೆಗೆ ಇರುವ ಕಿಟಕಿಯ ಸಜ್ಜದ ಮೇಲೆ ಹೋಗಿ ಕೂತಿದೆ. ಅಲ್ಲಿಂದ ಹೊರಬರಲಾಗದೆ ಬೆಕ್ಕು ಪರದಾಟ ಮಾಡಿದೆ. ಬೆಕ್ಕಿನ ಕಿರುಚಾಟ ಕೇಳಿ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಬೆಕ್ಕನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ನಂತರ ಮಗುವಿನಂತೆ ಅಪ್ಪಿಕೊಂಡು ಬೆಕ್ಕನ್ನು ಎತ್ತಿಕೊಂಡು ಮಾಲೀಕರು ಮುದ್ದಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ವಿವಾದದ ಬಳಿಕ ಅರಾವಳಿ ಬೆಟ್ಟದ ಕುರಿತ ತನ್ನದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ – Kannada News | Supreme Court Stays Its own Order On Aravalli Hills amid row

ನವದೆಹಲಿ, ಡಿಸೆಂಬರ್ 29: ಅರಾವಳಿ ಬೆಟ್ಟಗಳ ಏಕರೂಪದ ವ್ಯಾಖ್ಯಾನದ ಕುರಿತು ನವೆಂಬರ್ 20ರಂದು ನೀಡಿದ ತನ್ನದೇ ತೀರ್ಪು ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತಡೆಹಿಡಿದಿದೆ. ತನ್ನದೇ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಅರಾವಳಿ ಬೆಟ್ಟಗಳು (Aravalli Hills) ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು ಪ್ರಕಟವಾಗುತ್ತಿದ್ದಂತೆ ಅನಿಯಂತ್ರಿತ ಗಣಿಗಾರಿಕೆ ಮತ್ತು ಪರಿಸರ ಹಾನಿಯ ಬಗ್ಗೆ ಕಳವಳಗಳು ಹೆಚ್ಚಾಗಿತ್ತು. ಈ ತೀರ್ಪಿನ ವಿರುದ್ಧ ತೀವ್ರ ಪ್ರತಿಭಟನೆಗಳು ಕೂಡ ನಡೆದಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎ.ಜಿ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು 4 ಅರಾವಳಿ ಬೆಟ್ಟಗಳ ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣಕ್ಕೆ ನೋಟಿಸ್ ನೀಡಿದೆ. ಜನವರಿ 21ರಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ, ಐಷಾರಾಮಿ ರೆಸಾರ್ಟ್‌ಗಳ ಮಾಹಿತಿ ಇಲ್ಲಿದೆ.

ಇಂದು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ನವೆಂಬರ್ ತಿಂಗಳ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಈಗ ಉಳಿದಿರುವ 100 ಮೀಟರ್ ಎತ್ತರದ ಮಾನದಂಡವನ್ನು ಕಟ್ಟುನಿಟ್ಟಾಗಿ ಆಧರಿಸಿ ಅರಾವಳಿ ಪ್ರದೇಶಗಳನ್ನು ಗುರುತಿಸಲು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿದ ಮ್ಯಾಪಿಂಗ್ ಮತ್ತು ಡಿಲಿಮಿನೇಷನ್ ಪ್ರಕ್ರಿಯೆಯನ್ನು ಮಧ್ಯಂತರ ತಡೆಯಾಜ್ಞೆಯು ತಡೆಹಿಡಿಯುವ ಸಾಧ್ಯತೆಯಿದೆ. ಇದು ಈ ಪ್ರದೇಶದಲ್ಲಿ ಭವಿಷ್ಯದ ಗಣಿಗಾರಿಕೆ ನಿರ್ಧಾರಗಳಿಗೆ ಅಡಿಪಾಯವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಇದನ್ನೂ ಓದಿ: ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡಿತ್ತು. ತಜ್ಞರ ವರದಿಗಳು ಹೊರಬರುವವರೆಗೆ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ನಿಷೇಧಿಸಿತ್ತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯು ಅರಾವಳಿ ಬೆಟ್ಟದ ವ್ಯಾಖ್ಯಾನದ ಕುರಿತು ನೀಡಿದ ಶಿಫಾರಸುಗಳನ್ನು ನ್ಯಾಯಾಲಯವು ಅಂಗೀಕರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:30 pm, Mon, 29 December 25

Source link

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ? – Kannada News | Bigg Boss Kannada Season 12 Nomination for 14th week in Gilli Nata captaincy

ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಈಗ ಕೆಲವೇ ಮಂದಿ ಇದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಪೈಪೋಟಿ ಜೋರಾಗಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸೋಮವಾರ (ಡಿಸೆಂಬರ್ 29) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಗಿಲ್ಲಿ ಅವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನಾಮಿನೇಷನ್ ವೇಳೆ ಪ್ರತಿ ಬಾರಿಯೂ ಕಿರಿಕ್ ಇದ್ದೇ ಇರುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕಾವ್ಯಾ ಪರವಾಗಿ ಗಿಲ್ಲಿ ನಿಂತಿದ್ದಕ್ಕೆ ಅಶ್ವಿನಿ ಗೌಡ ಅವರು ಗರಂ ಆಗಿದ್ದಾರೆ. ಈ ವಾರ ಯಾರು ಔಟ್ ಆಗುತ್ತಾರೆ? ಫಿನಾಲೆ ತನಕ ಯಾರು ಬರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಧನುಶ್, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಕಾವ್ಯಾ ಶೈವ, ಗಿಲ್ಲಿ ನಟ (Gilli Nata) ಅವರ ನಡುವೆ ಪೈಪೋಟಿ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link