ಈ ಪುಟ್ಟ ಮಕ್ಕಳು (little kids) ತಮ್ಮ ಕೈಯಲ್ಲಿ ಏನಾದ್ರೂ ತಿಂಡಿ ತಿನಿಸು ಇದ್ರೆ ಮನೆಯ ಬೆಕ್ಕು, ನಾಯಿಗೂ ಹಾಕಿ ತಾನು ತಿನ್ನುವುದನ್ನು ನೋಡಿರುತ್ತೇವೆ. ಕೆಲವೊಮ್ಮೆ ಅವುಗಳನ್ನು ತಿನ್ನದಿದ್ದರೆ ತಿನ್ನು ತಿನ್ನು ಎಂದು ಗದರುವ ದೃಶ್ಯಗಳು ಮುದ್ದು ಮುದ್ದಾಗಿ ಕಾಣುತ್ತದೆ. ಇಂತಹ ವಿಡಿಯೋಗಳನ್ನು ನೋಡುವಾಗ ನಗು ತಡೆದುಕೊಳ್ಳಲಾಗುವುದಿಲ್ಲ. ಆದರೆ ಇದೀಗ ಇಲ್ಲೊಂದು ಪುಟಾಣಿಯೂ ಮನೆಬಾಗಿಲಿನ ಮುಂದೆ ಬಂದು ನಿಂತ ಗೋವಿಗೆ ಕೈಯಲ್ಲಿದ್ದ ಚಪಾತಿ ಕೊಟ್ಟು ಹಣೆ ಮುಟ್ಟಿ ಆಶೀರ್ವಾದ ಪಡೆದುಕೊಂಡಿದೆ. ಈ ಮುದ್ದಾದ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
ಗೋಮಾತೆ ರಾಷ್ಟ್ರಧರ್ಮ (Gomathe Rastradharma) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಯೊಂದು ಮನೆಯ ಬಾಗಿಲಿನ ಮುಂದೆ ನಿಂತ ಗೋಮಾತೆ ಹಸಿವು ನೀಗಿಸಿದೆ. ಪುಟ್ಟ ಮಗುವು ಕೈಯಲ್ಲಿ ಹಿಡಿದುಕೊಂಡು ಮೆಲ್ಲನೆ ನಡೆದುಕೊಂಡು ಬಂದಿದೆ. ಆ ಚಪಾತಿ ಬಳಿಕ ಹಸುವಿಗೆ ತಿನ್ನಲು ಕೊಟ್ಟು ಹಣೆ ಮುಟ್ಟಿ ನಮಸ್ಕಾರ ಪಡೆದುಕೊಂಡಿರುವುದನ್ನು ಕಾಣಬಹುದು.
ಈ ವಿಡಿಯೋ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮುಗ್ಧ ಮಗುವಿನ ಮನಸ್ಸು ಎಂದು ಹೇಳಿದ್ದಾರೆ. ಇನ್ನೊಬ್ಬರು, ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪುಟಾಣಿಯ ಒಳ್ಳೆಯ ಮನಸ್ಸಿಗೆ ನನ್ನದೊಂದು ಸಲಾಂ ಎಂದಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಹಿಂದೂ ಪಂಚಾಂಗದ ಪ್ರಕಾರ, 2026ರ ಯುಗಾದಿ ಹಬ್ಬವನ್ನು ಮಾರ್ಚ್ 19 ಗುರುವಾರದಂದು ಆಚರಿಸಲಾಗುತ್ತಿದೆ. ಈ ವರ್ಷ 12 ರಾಶಿಗಳ ಪೈಕಿ ಕೆಲವು ರಾಶಿಗಳಿಗೆ ಸಾಕಷ್ಟು ಶುಭ ಫಲಗಳು ಒದಗಿಬರಲಿದೆ. ಅದರಲ್ಲೂ ಕುಂಭ ರಾಶಿಯ ಕ್ರೀಡಾಪಟುಗಳಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆ ದೊರೆಯುವ ಯೋಗವಿದೆ ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ ಬಸವರಾಜ ಗುರೂಜಿಯವರು ಭವಿಷ್ಯ ನುಡಿದಿದ್ದಾರೆ.
ಕುಂಭ ರಾಶಿಯವರಿಗೆ ಗುರುವು ಐದನೇ ಮನೆಯಿಂದ ಆರನೇ ಮನೆಗೆ ಸಾಗಲಿದ್ದಾನೆ. ಶನಿ ಗ್ರಹವು ವರ್ಷ ಪೂರ್ತಿ ಎರಡನೇ ಮನೆಯಲ್ಲೇ ಇರುತ್ತದೆ. ರಾಹು ಗ್ರಹ ಒಂದನೇ ಮನೆಯಿಂದ ವ್ಯಯ ಸ್ಥಾನವಾದ 12ನೇ ಮನೆಗೆ ಬರುತ್ತಾನೆ, ಮತ್ತು ಕೇತು ಗ್ರಹ ಏಳನೇ ಮನೆಯಿಂದ ಆರನೇ ಮನೆಗೆ ಪ್ರವೇಶಿಸಲಿದ್ದಾನೆ. ಕುಂಭ ರಾಶಿಯವರು ಸಾಡೆ ಸಾತಿಯ ಕಟ್ಟ ಕಡೆಯ ಭಾಗದಲ್ಲಿರುವುದರಿಂದ, ಈ ವರ್ಷದಲ್ಲಿ ಅವರಿಗೆ ದೊಡ್ಡ ಕಷ್ಟಗಳಿಂದ ಕೊಂಚ ಸಡಿಲಿಕೆ ಸಿಗುವ ಸಾಧ್ಯತೆ ಇದೆ ಎಂದು ಗುರೂಜಿ ತಿಳಿಸಿದ್ದಾರೆ.
ಈ ವರ್ಷ ಕುಂಭ ರಾಶಿಯವರಿಗೆ ಆದಾಯ 6 ಮತ್ತು ವ್ಯಯ 4 ರ ಅನುಪಾತದಲ್ಲಿರುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ, ಉತ್ತಮ ಆರೋಗ್ಯದ ಅಂಶ 8 ಇದ್ದರೆ, ಅನಾರೋಗ್ಯದ ಅಂಶ 3 ಇರುತ್ತದೆ. ಸುಖ ಮತ್ತು ದುಃಖಗಳ ಪ್ರಮಾಣವನ್ನು ನೋಡಿದಾಗ, 7 ಭಾಗ ಸುಖ ಮತ್ತು 3 ಭಾಗ ದುಃಖ ಇರಲಿದೆ. ಒಟ್ಟಾರೆ, 2026ರ ಪರಾಭವನಾಮ ಸಂವತ್ಸರವು ಕುಂಭ ರಾಶಿಯವರಿಗೆ ಉತ್ಸಾಹ, ಚೈತನ್ಯ ಮತ್ತು ಅಭಿವೃದ್ಧಿಯ ವರ್ಷ ಎಂದು ಗುರೂಜಿ ಹೇಳಿದ್ದಾರೆ.
ಕುಟುಂಬ, ಸಂಬಂಧಗಳು ಮತ್ತು ವೃತ್ತಿಜೀವನ:
ಸಾಂಸಾರಿಕ ದುಃಖಗಳು ದೂರಾಗಿ, ಕುಟುಂಬದಲ್ಲಿ ಪ್ರಗತಿ ಕಂಡುಬರುತ್ತದೆ. ಅಣ್ಣತಮ್ಮಂದಿರು ಮತ್ತು ಕುಟುಂಬದ ಸದಸ್ಯರ ಬೆಂಬಲ ಚೆನ್ನಾಗಿರುತ್ತದೆ. ಗುರು ಅನುಗ್ರಹವೂ ಇರುವುದರಿಂದ, ಬಾಂಧವ್ಯಗಳು ಉತ್ತಮವಾಗಿರುತ್ತವೆ. ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ ಮತ್ತು ಆರ್ಥಿಕವಾಗಿ ಉತ್ತಮ ಪ್ರಗತಿ ಕಾಣುವಿರಿ. ಅಧಿಕಾರ ಪ್ರಾಪ್ತಿಯ ಯೋಗವೂ ಇದೆ. ಹೊಸ ಉದ್ಯೋಗದ ಅನುಭವಗಳು ಲಭಿಸುತ್ತವೆ, ವಿಶೇಷವಾಗಿ ರೈಲ್ವೆ, ಎಲೆಕ್ಟ್ರಾನಿಕ್, ಸಾಫ್ಟ್‌ವೇರ್, ವಿದ್ಯುತ್ ಮತ್ತು ನೀರಾವರಿ ಇಲಾಖೆಗಳಂತಹ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳು ಸಿಗಬಹುದು. ಕೆಲವರು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾವಣೆಗೊಳ್ಳಬಹುದು. ರಾಜಕೀಯ ವ್ಯಕ್ತಿಗಳಿಗೆ ಕೆಲವೊಂದು ಸಂಕಷ್ಟಗಳು ಎದುರಾಗುವ ಸಾಧ್ಯತೆಗಳಿದ್ದರೂ, ದುರಾಸೆಯನ್ನು ಬಿಟ್ಟುಬಿಡುವಂತೆ ಸೂಚಿಸಲಾಗಿದೆ. ಸಾಲಬಾಧೆ ತೀರಿಸಿಕೊಳ್ಳುವಿರಿ.
ವ್ಯಾಪಾರ, ವಿವಾಹ ಮತ್ತು ಇತರ ಕ್ಷೇತ್ರಗಳು:
ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಕ್ರೀಡಾಪಟುಗಳು ಮತ್ತು ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರಮಟ್ಟದಲ್ಲಿ ಕೀರ್ತಿ ಪ್ರತಿಷ್ಠೆಗಳು ದೊರೆಯುವ ಯೋಗವಿದೆ. ರೈತರು, ಗುತ್ತಿಗೆದಾರರು ಮತ್ತು ವ್ಯಾಪಾರಸ್ಥರಿಗೆ ಈ ವರ್ಷ ಅತ್ಯಂತ ಲಾಭದಾಯಕವಾಗಿರುತ್ತದೆ. ವಿವಾಹ ಯೋಗವು ತುಂಬಾ ಚೆನ್ನಾಗಿದ್ದರೂ, ಪ್ರೇಮ ವ್ಯವಹಾರಗಳಿಗೆ ಈ ವರ್ಷ ಅಷ್ಟು ಉತ್ತಮವಾಗಿಲ್ಲ. ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಸಣ್ಣ ಪ್ರಮಾಣದ ಆರ್ಥಿಕ ಆತಂಕಗಳು ಎದುರಾಗುವ ಸಾಧ್ಯತೆ ಇದೆ. ಸಾಲ ಮಂಜೂರಾತಿ, ಹೊಸ ಸಂಸ್ಥೆಗಳ ಸ್ಥಾಪನೆ ಮತ್ತು ರಾಜಕೀಯವಾಗಿ ಪ್ರಗತಿ ಕಂಡುಬರುತ್ತದೆ. ತಂದೆ-ತಾಯಿಗಳ ಅಗಲಿಕೆ ಅಥವಾ ಅವರ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆ ಇದೆ. ಕುಂಭ ರಾಶಿಯ ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ಅಥವಾ ಪ್ಯಾಕೇಜ್ ಬದಲಾವಣೆ ಕಂಡುಬರಲಿದೆ. ಕೀರ್ತಿ ಪ್ರತಿಷ್ಠೆಗಳಿಗೆ ಭಾಜನರಾಗುವ ಯೋಗವಿದೆ. ಸರ್ಕಾರಿ ನೌಕರರಿಗೆ ಉತ್ತಮವಾಗಿದ್ದು, ಹಳೆ ಬಾಕಿಗಳು ವಸೂಲಿಯಾಗುತ್ತವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ದೊಡ್ಡ ಕಷ್ಟಗಳಲ್ಲಿ ಸಿಲುಕಿದವರಿಗೆ, ಜೈಲು ವಾಸ ಅನುಭವಿಸಿದವರಿಗೂ ಸಹ ಜುಲೈ-ಆಗಸ್ಟ್‌ನಿಂದ ಸ್ವಲ್ಪ ಅನುಕೂಲ ಮತ್ತು ಸಡಿಲಿಕೆ ಸಿಗಲಿದೆ. ನಂಬಿಕೆ ದ್ರೋಹವಾಗುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ವಹಿಸಿ. ಮಡದಿಯ ಉದ್ಯೋಗದಲ್ಲಿ ಬಡ್ತಿ, ಹೆಣ್ಣುಮಕ್ಕಳಿಂದ ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಯೋಗವಿದೆ.
ಈ ವರ್ಷದಲ್ಲಿ ಕುಂಭ ರಾಶಿಯವರಿಗೆ ಶೇ.70 ರಷ್ಟು ಶುಭ ಫಲಗಳು ದೊರೆಯುವ ಸಾಧ್ಯತೆ ಇದೆ. ಬುಧವಾರ ಮತ್ತು ಶುಕ್ರವಾರಗಳು ಅದೃಷ್ಟದ ದಿನಗಳಾಗಿದ್ದು, ವರ್ಷ ಪೂರ್ತಿ ಶುಭ ಫಲಗಳನ್ನು ತರುತ್ತವೆ. ಕೇಸರಿ, ಬೂದು ಮತ್ತು ತಿಳಿ ಬಣ್ಣಗಳನ್ನು ಹೆಚ್ಚು ಬಳಸುವುದರಿಂದ ಒಳ್ಳೆಯದಾಗುತ್ತದೆ.
ಅಶ್ವತ್ಥ ವೃಕ್ಷ ದರ್ಶನ, ಅಶ್ವತ್ಥ ಕಟ್ಟೆಯ ದರ್ಶನ, ನಾಗರ ದರ್ಶನ ಮತ್ತು ನವನಾಗ ಸ್ತೋತ್ರ (ಅನಂತಂ ವಾಸುಕಿಂ ಶೇಷಂ ಪದ್ಮನಾಭಂಚ ಕಂಬಲಂ, ಶಂಖಪಾಲಂ ಧಾರ್ತರಾಷ್ಟ್ರಂ ತಕ್ಷಕಂ ಕಾಲಿಯಂ ತಥಾ) ಪಠಣ ಮಾಡುವುದು ಉತ್ತಮ. ಚೌತಿ (ಕೃಷ್ಣಪಕ್ಷ ಅಥವಾ ಶುಕ್ಲಪಕ್ಷ) ಅಥವಾ ಮಂಗಳವಾರದಂದು ನಾಗರ ಕಲ್ಲಿಗೆ ಹಾಲನ್ನು ಎರೆದು ಅಥವಾ ನಾಗನ ದರ್ಶನ ಮಾಡಿಕೊಳ್ಳುವುದು ಶುಭಕರ. ಪ್ರತಿದಿನ “ಓಂ ಅನಂತಾಯ ನಮಃ” ಮಂತ್ರವನ್ನು ಜಪಿಸುವುದರಿಂದಲೂ ಸಾಕಷ್ಟು ಶುಭ ಫಲಗಳು ಸಿಗುತ್ತವೆ. ಅನ್ನದಾನವನ್ನು ಹೆಚ್ಚಾಗಿ ಮಾಡಬೇಕು. ನಾಗರ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸುವುದು ಒಳ್ಳೆಯದು. ಸಾಡೆ ಸಾತಿಯ ಕೊನೆಯ ಭಾಗವಿರುವುದರಿಂದ, ಕಾಳಹಸ್ತಿ, ಕುಕ್ಕೆ ಅಥವಾ ಘಾಟಿ ದರ್ಶನ ಮಾಡಿಕೊಳ್ಳುವುದು ತುಂಬಾ ಶುಭಕರ ಎಂದು ಡಾ. ಬಸವರಾಜ ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಜುಲೈ ಮತ್ತು ಆಗಸ್ಟ್ ತಿಂಗಳ ನಡುವೆ ನಡೆಯಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನಾಡಲಿದೆ. ಈ ಎಂಟು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಹೋಮ್ಗ್ರೌಂಡ್ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್ನಲ್ಲಿ (ಎದುರಾಳಿ ತಂಡದ ಹೋಮ್ಗ್ರೌಂಡ್) ಆಡಲಾಗುತ್ತದೆ. ಇನ್ನು ಈ ಟೂರ್ನಿಗಾಗಿ ಈಗಾಗಲೇ 8 ತಂಡಗಳ ಸಿದ್ಧವಾಗಿದ್ದು, ಈ ತಂಡಗಳಲ್ಲಿರುವ ಆಟಗಾರರ ಪಟ್ಟಿ ಈ ಕೆಳಗಿನಂತಿದೆ…
ಸದರ್ನ್ ಬ್ರೇವ್: ಜೇಮಿ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಟ್ರಿಸ್ಟನ್ ಸ್ಟಬ್ಸ್, ಜೋಫ್ರಾ ಆರ್ಚರ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಡೇವಿಡ್ ಮಿಲ್ಲರ್, ಲ್ಯೂಕ್ ವುಡ್, ಬೆನ್ ಮೆಕಿನ್ನಿ, ಥಾಮಸ್ ರೆವ್, ಮೈಕೆಲ್ ಪೆಪ್ಪರ್, ಟಾಮ್ ಅಬೆಲ್, ಡ್ಯಾನ್ ವೊರಾಲ್, ಕ್ಯಾಲೆಬ್ ಫಾಲ್ಕನರ್, ನಿಖಿಲ್ ಚೌಧರಿ.
MI ಲಂಡನ್: ವಿಲ್ ಜ್ಯಾಕ್ಸ್, ರಶೀದ್ ಖಾನ್, ಸ್ಯಾಮ್ ಕರನ್, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ಟಾಮ್ ಕರನ್, ನಾಥನ್ ಸೌಟರ್, ಜೇಮ್ಸ್ ವಿನ್ಸ್, ಶೆರ್ಫೇನ್ ರದರ್ಫೋರ್ಡ್, ರಿಚರ್ಡ್ ಗ್ಲೀಸನ್, ಒಲೀ ಪೋಪ್, ಒಲೀ ಸ್ಟೋನ್, ಒಲೀ ಸೈಕ್ಸ್, ಕ್ಯಾಲಮ್ ಪಾರ್ಕಿನ್ಸನ್, ಜೇಸನ್ ರಾಯ್.
ಟ್ರೆಂಟ್ ರಾಕೆಟ್ಸ್: ಟಿಮ್ ಡೇವಿಡ್, ಬೆನ್ ಡಕೆಟ್, ಮಿಚೆಲ್ ಸ್ಯಾಂಟ್ನರ್, ಟಾಮ್ ಬ್ಯಾಂಟನ್, ಫಿನ್ ಅಲೆನ್, ಲೂಯಿಸ್ ಗ್ರೆಗೊರಿ, ಕ್ರೇಗ್ ಓವರ್ಟನ್, ಡೇವಿಡ್ ಪೇನ್, ಡ್ಯಾನ್ ಮೌಸ್ಲಿ, ಮ್ಯಾಟ್ ಹೆನ್ರಿ, ಸ್ಯಾಮ್ ಬಿಲ್ಲಿಂಗ್ಸ್, ಅನ್ಯೂರಿನ್ ಡೊನಾಲ್ಡ್, ಬೆನ್ ಮೇಯ್ಸ್, ಡ್ಯಾನಿ ಬ್ರಿಗ್ಸ್, ಲೂಯಿಸ್ ಕಿಂಬರ್, ಬ್ರಾಡ್ ಕ್ಯೂರಿ
ಲಂಡನ್ ಸ್ಪಿರಿಟ್: ಡೆವಾಲ್ಡ್ ಬ್ರೆವಿಸ್, ಲಿಯಾಮ್ ಲಿವಿಂಗ್ಸ್ಟೋನ್, ಆ್ಯಡಂ ಝಂಪಾ, ಜೇಮೀ ಓವರ್ಟನ್, ಜಾನಿ ಬೈರ್ಸ್ಟೋವ್, ಲುವಾನ್-ಡ್ರೆ ಪ್ರಿಟೋರಿಯಸ್, ಜೇಮ್ಸ್ ಕೋಲ್ಸ್, ಮೇಸನ್ ಕ್ರೇನ್, ಆ್ಯಡಂ ಮಿಲ್ನ್, ಡೇವಿಡ್ ವಿಲ್ಲಿ, ಆ್ಯಡಂ ಹೋಸ್, ಟೈಮಲ್ ಮಿಲ್ಸ್, ಜೇಮ್ಸ್ ರೆವ್, ಮ್ಯಾಟ್ ಫಿಶರ್.
ಬರ್ಮಿಂಗ್ಹ್ಯಾಮ್ ಫೀನಿಕ್ಸ್: ರೆಹಾನ್ ಅಹ್ಮದ್, ಡೊನೊವನ್ ಫೆರೀರಾ, ಮಿಚೆಲ್ ಓವನ್, ಜೇಕಬ್ ಬೆಥೆಲ್, ಜೋ ಕ್ಲಾರ್ಕ್, ಸಾಕಿಬ್ ಮಹಮೂದ್, ಉಸ್ಮಾನ್ ತಾರಿಖ್, ವಿಲ್ ಸ್ಮೀಡ್, ಜೋರ್ಡನ್ ಥಾಂಪ್ಸನ್, ಸ್ಕಾಟ್ ಕ್ಯೂರಿ, ಲಾರಿ ಇವಾನ್ಸ್, ಕ್ರಿಸ್ ವುಡ್, ಎಥಾನ್ ಬ್ರೂಕ್ಸ್, ಮುಸ್ತಾಫಿಝುರ್ ರೆಹಮಾನ್
ವೆಲ್ಷ್ ಫೈರ್: ಮಾರ್ಕೊ ಯಾನ್ಸೆನ್, ಫಿಲ್ ಸಾಲ್ಟ್, ರಚಿನ್ ರವೀಂದ್ರ, ಕ್ರಿಸ್ ವೋಕ್ಸ್, ಜೋರ್ಡನ್ ಕಾಕ್ಸ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಜೋ ರೂಟ್, ಬೆನ್ ಕೆಲ್ಲಾವೇ, ಲಾಕಿ ಫರ್ಗುಸನ್, ಆಸಾ ಟ್ರೈಬ್, ಟಾಮ್ ಆಸ್ಪಿನ್ವಾಲ್, ಮ್ಯಾಟ್ ಶಾರ್ಟ್, ಸ್ಯಾಮ್ ಕುಕ್, ಜಾಫರ್ ಚೋಹನ್.
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್: ನೂರ್ ಅಹ್ಮದ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಡಾಸನ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್, ಲೆಯುಸ್ ಡು ಪ್ಲೂಯ್, ಟಾಮ್ ಹಾರ್ಟ್ಲಿ, ಐಡೆನ್ ಮಾರ್ಕ್ರಾಮ್, ಜೋಶ್ ಟಂಗ್, ಟಿಮ್ ಸೈಫರ್ಟ್, ಟಾಮ್ ಮೂರ್ಸ್, ಮ್ಯಾಕ್ಸ್ ಹೋಲ್ಡೆನ್, ತವಾಂಡಾ ಮುಮ್ಯೆವ್, ಜಾರ್ಜ್ ಸ್ಕ್ರಿಮ್ಶಾ, ಪೌಲ್ ವಾಲ್ಟರ್.
ರಾಯಚೂರು, ಮಾರ್ಚ್ 17: ಎಲ್ಪಿಜಿ ಸಿಲಿಂಡರ್ ಕೊರತೆ ರಾಜ್ಯಾದ್ಯಂತ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಯದಲ್ಲಿ, ರಾಯಚೂರಿನ ಕಾನ್ಸ್ಟೇಬಲ್ ವಿನೋದ್ ಬಯೋಗ್ಯಾಸ್ ಪದ್ಧತಿ ಅಳವಡಿಸಿ ಗಮನ ಸೆಳೆದಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮವಾಗಿ ಎಲ್ಪಿಜಿ ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ, ಅನೇಕ ಕಡೆಗಳಲ್ಲಿ ಜನ ಕಿಲೋಮೀಟರ್‌ಗಟ್ಟಲೆ ಸರತಿಯಲ್ಲಿ ನಿಂತು ಪರದಾಡುತ್ತಿರುವಂಥ ಸ್ಥಿತಿ ಇದೆ. ವಿನೋದ್ ಅವರು ಕಳೆದ ಎರಡು ವರ್ಷಗಳಿಂದ ಮನೆಯ ದೈನಂದಿನ ಅಡುಗೆಗೆ ಬಯೋಗ್ಯಾಸ್ ಬಳಸುತ್ತಿದ್ದು, ಇದು ಯಾವುದೇ ಅಡೆತಡೆ ಇಲ್ಲದೆ ಕಾರ್ಯನಿರ್ವಹಿಸುತ್ತಿದೆ. ಇದು ಈಗ ಗಮನ ಸೆಳೆದಿದೆ.
ಕೇವಲ 10,500 ರೂ. ವೆಚ್ಚದಲ್ಲಿ 1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಟ್ಯಾಂಕ್ ಬಳಸಿ ಈ ಘಟಕವನ್ನು ಸ್ಥಾಪಿಸಲಾಗಿದೆ. ಇದು ಗೃಹ ತ್ಯಾಜ್ಯ, ಹಣ್ಣು, ತರಕಾರಿ ತ್ಯಾಜ್ಯದಿಂದ ಅನಿಲ ಉತ್ಪಾದಿಸುತ್ತದೆ. ಇದು ಎಲ್ಪಿಜಿ ಸಿಲಿಂಡರ್‌ನಂತೆಯೇ ಹೆಚ್ಚಿನ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತದೆ. ವಿನೋದ್ ಅವರ ಈ ಮಾದರಿ ಪದ್ಧತಿಯನ್ನು ವೀಕ್ಷಿಸಲು ಮತ್ತು ಮಾಹಿತಿ ಪಡೆಯಲು ಈಗ ಸಾಕಷ್ಟು ಮಂದಿ ಅವರ ಮನೆಗೆ ಭೇಟಿ ನೀಡುತ್ತಿದ್ದಾರೆ. ಈ ಬಯೋಗ್ಯಾಸ್ ಪದ್ಧತಿಯು ಕನಿಷ್ಠ 25-30 ವರ್ಷಗಳ ಬಾಳಿಕೆ ಬರಲಿದ್ದು, ಆರ್ಥಿಕವಾಗಿ ಮತ್ತು ಪರಿಸರ ಸ್ನೇಹಿಯಾಗಿ ಉತ್ತಮ ಪರ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ಗೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಕಾಲಿಟ್ಟಿದೆ. ಈ ಲೀಗ್ನಲ್ಲಿ ಸನ್ರೈಸರ್ಸ್ ಲೀಡ್ಸ್ ತಂಡವನ್ನು ಕಣಕ್ಕಿಳಿಸುತ್ತಿರುವ ಸನ್ ಗ್ರೂಪ್ ವಿರುದ್ಧ ಇದೀಗ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಆಕ್ರೋಶಕ್ಕೆ ಕಾರಣ ಸನ್ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನ್ ತಂಡದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿರುವುದು. ಇದೀಗ ಈ ಖರೀದಿಯನ್ನು ಭಾರತದ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಕೂಡ ಟೀಕಿಸಿದ್ದಾರೆ.
ದಿ ಹಂಡ್ರೆಡ್ ಲೀಗ್ 2026ರ ಹರಾಜಿನಲ್ಲಿ ಸನ್ ರೈಸರ್ಸ್ ಲೀಡ್ಸ್ ತಂಡವು ಅಬ್ರಾರ್ ಅಹ್ಮದ್ ಅವರನ್ನು ಸುಮಾರು ₹2.34 ಕೋಟಿ (£1,90,000) ನೀಡಿ ಖರೀದಿಸಿದೆ. ಈ ಖರೀದಿ ಬಗ್ಗೆ ‘ಮಿಡ್-ಡೇ’ ಪತ್ರಿಕೆಯಲ್ಲಿ ಬರೆದ ಅಂಕಣದಲ್ಲಿ ಪ್ರಸಾಪಿಸಿರುವ ಸುನಿಲ್ ಗವಾಸ್ಕರ್, ಇದು ಭಾರತೀಯ ಸೈನಿಕರ ಸಾವಿಗೆ ಪರೋಕ್ಷ ಕೊಡುಗೆ! ಎಂದು ಆಕ್ರೋಶ ಹೊರಹಾಕಿದ್ದಾರೆ.
ಪಾಕಿಸ್ತಾನಿ ಆಟಗಾರರು ಗಳಿಸುವ ಹಣದ ಮೇಲೆ ಆ ದೇಶದ ಸರ್ಕಾರ ತೆರಿಗೆ ವಿಧಿಸುತ್ತದೆ. ಆ ಹಣವನ್ನು ಭಾರತೀಯ ಸೈನಿಕರ ವಿರುದ್ಧ ಬಳಸುವ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಬಳಸಲಾಗುತ್ತದೆ.
ಅಂದರೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ನೀಡುವ ಮೊತ್ತದಲ್ಲಿ ಪಾಕ್ ಸರ್ಕಾರಕ್ಕೂ ಪಾಲು ಹೋಗುತ್ತದೆ. ಹೀಗಾಗಿ ಈ ಒಪ್ಪಂದವು “ಭಾರತೀಯ ಸೈನಿಕರು ಮತ್ತು ನಾಗರಿಕರ ಸಾವಿಗೆ ಪರೋಕ್ಷವಾಗಿ ಕೊಡುಗೆ ನೀಡುತ್ತದೆ” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.
ಅಷ್ಟೇ ಅಲ್ಲದೆ, ನಿಮಗೆ ಗೆಲುವು ಮುಖ್ಯವೋ ಅಥವಾ ಭಾರತೀಯರ ಜೀವ ಮುಖ್ಯವೋ ಎಂದು ಸುನಿಲ್ ಗವಾಸ್ಕರ್ ಎಸ್ಆರ್ಹೆಚ್ ಮಾಲೀಕರನ್ನು ಪ್ರಶ್ನಿಸಿದ್ದಾರೆ. ವಿದೇಶಿ ಕೋಚ್‌ಗಳಿಗೆ ಭಾರತದ ಭಾವನೆಗಳು ತಿಳಿಯದಿರಬಹುದು, ಆದರೆ ಭಾರತೀಯ ಮಾಲೀಕರು ಇದನ್ನು ತಡೆಯಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಸ್ಆರ್ಎಲ್ ತಂಡದ ಸಮರ್ಥನೆ:
ಸನ್ ರೈಸರ್ಸ್ ಲೀಡ್ಸ್ ತಂಡದ ಮುಖ್ಯ ಕೋಚ್ ಡೇನಿಯಲ್ ವೆಟ್ಟೋರಿ, ಇದು ಕೇವಲ ಕ್ರೀಡಾ ದೃಷ್ಟಿಕೋನದಿಂದ ತೆಗೆದುಕೊಂಡ ನಿರ್ಧಾರ ಎಂದು ಸಮರ್ಥಿಸಿಕೊಂಡಿದ್ದಾರೆ. ಆದಿಲ್ ರಶೀದ್ ಅವರು ಲಭ್ಯವಿಲ್ಲದ ಕಾರಣ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಸಿಸಿಐ ಪ್ರತಿಕ್ರಿಯೆ:
ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು, ಇದು ವಿದೇಶಿ ಲೀಗ್ ಆಗಿರುವುದರಿಂದ ಭಾರತೀಯ ಕ್ರಿಕೆಟ್ ಮಂಡಳಿಯು ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ:
ಈ ಬೆಳವಣಿಗೆಯಿಂದಾಗಿ ಭಾರತೀಯ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಂಡವನ್ನು ಬಹಿಷ್ಕರಿಸುವಂತೆ ಅಭಿಯಾನ ನಡೆಸುತ್ತಿದ್ದಾರೆ. ಅಬ್ರಾರ್ ಅಹ್ಮದ್ ಈ ಹಿಂದೆ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಆತನನ್ನು ತಂಡದಿಂದ ಕೈ ಬಿಡುವಂತೆ ಸನ್ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಸೋಷಿಯಲ್ ಮೀಡಿಯಾ ಮೂಲಕ ಆಗ್ರಹಿಸುತ್ತಿದ್ದಾರೆ.
ಒಟ್ಟಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ದಿ ಹಂಡ್ರೆಡ್ ಲೀಗ್ನಲ್ಲಿ ತೆಗೆದುಕೊಂಡ ಒಂದು ನಿರ್ಧಾರದಿಂದ ಇಕ್ಕಟ್ಟಿಗೆ ಸಿಲುಕಿದ್ದು, ಈ ಬಗ್ಗೆ ಪುನರ್ಪರಿಶೀಲಿಸಲು ಫ್ರಾಂಚೈಸಿ ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೂ ಸನಾತನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಾದ ನಾಮಕರಣ, ವಿವಾಹ, ಅಥವಾ ಗೃಹಪ್ರವೇಶದಂತಹ ಸಂದರ್ಭಗಳಲ್ಲಿ ಮುಯ್ಯಿ ನೀಡುವ ಪದ್ಧತಿಯು ಅನಾದಿ ಕಾಲದಿಂದಲೂ ರೂಢಿಯಲ್ಲಿದೆ. ಇದು ಕೇವಲ ಒಂದು ಆಚರಣೆಯಾಗದೆ, ಆಳವಾದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಹೊಂದಿದೆ ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ಮುಯ್ಯಿ ಎಂದರೆ ಕೇವಲ ಕೊಡುಗೆಯಲ್ಲ, ಬದಲಿಗೆ ಪ್ರೀತಿಪೂರ್ವಕವಾಗಿ, ಮನಸ್ಸಿನ ಉತ್ತಮ ಭಾವನೆಯಿಂದ ನೀಡುವ ಒಂದು ಕಾಣಿಕೆಯಾಗಿದೆ. ಅದು ಹಣದ ರೂಪದಲ್ಲಿರಬಹುದು, ವಸ್ತುವಿನ ರೂಪದಲ್ಲಿರಬಹುದು, ಯಾವುದೇ ರೀತಿಯಲ್ಲಿರಬಹುದು, ಆದರೆ ಅದರ ಹಿಂದಿರುವ ಭಾವನೆಯೇ ಪ್ರಮುಖವಾದುದು. “ಮುಯ್ಯಿ” ಎಂಬ ಪದವು ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯ ಭಾಗವಾಗಿದೆ, ಇದು ಸಂಬಂಧಗಳನ್ನು ಬಲಪಡಿಸುವ ಮತ್ತು ಪರಸ್ಪರ ಸಹಕಾರವನ್ನು ಸೂಚಿಸುವ ಒಂದು ವಿಶಿಷ್ಟ ಪದ್ಧತಿಯಾಗಿದೆ.
ಹಿಂದಿನ ಕಾಲದಿಂದಲೂ, ಮದುವೆ ಅಥವಾ ಮನೆ ಕಟ್ಟುವಂತಹ ದೊಡ್ಡ ಕಾರ್ಯಗಳು ಕುಟುಂಬಗಳಿಗೆ ಅಪಾರ ಆರ್ಥಿಕ ಹೊರೆಯನ್ನು ತರುತ್ತಿದ್ದವು. “ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು” ಎಂಬ ನಾಣ್ಣುಡಿಯು ಈ ಕಷ್ಟಗಳನ್ನು ಎತ್ತಿ ತೋರಿಸುತ್ತದೆ. ಇಂತಹ ಸಂದರ್ಭಗಳಲ್ಲಿ, ನೆಂಟರು, ಸ್ನೇಹಿತರು ಅಥವಾ ಆತ್ಮೀಯರು ಬರಿಗೈಯಲ್ಲಿ ಹೋಗುವುದಿಲ್ಲ. ಒಂದು ಮುಯ್ಯಿ ಕವರ್‌ನಲ್ಲಿ ತಮ್ಮ ಕೈಲಾದ ಹಣವನ್ನು ಇರಿಸಿ, ಆತಿಥೇಯರ ಆರ್ಥಿಕ ಹೊರೆಗೆ ಒಂದು ಸಣ್ಣ ಸಹಾಯ ನೀಡುತ್ತಾರೆ. ಇದು ಕೇವಲ ಹಣಕಾಸಿನ ನೆರವಲ್ಲ, ಆತಿಥೇಯರ ಕಷ್ಟದಲ್ಲಿ ನಾವಿದ್ದೇವೆ ಎಂಬ ಮಾನಸಿಕ ಬೆಂಬಲವನ್ನೂ ಸೂಚಿಸುತ್ತದೆ.
ಇತ್ತೀಚಿನ ದಿನಗಳಲ್ಲಿ, ಕೆಲವರು ಆಮಂತ್ರಣ ಪತ್ರಿಕೆಗಳಲ್ಲಿ “ಮುಯ್ಯಿ ಸ್ವೀಕರಿಸುವುದಿಲ್ಲ” ಎಂದು ನಮೂದಿಸುತ್ತಾರೆ. ಇದು ಅವರ ಸಂಪತ್ತನ್ನು ಸೂಚಿಸಬಹುದು, ಆದರೆ ಮುಯ್ಯಿಯ ನಿಜವಾದ ಅರ್ಥವನ್ನು ನಿರ್ಲಕ್ಷಿಸಿದಂತಾಗುತ್ತದೆ. ಮುಯ್ಯಿಯು ಕೇವಲ ಆರ್ಥಿಕ ಸಹಾಯವಲ್ಲ, ಬದಲಿಗೆ ಆಶೀರ್ವಾದ, ಶುಭ ಹಾರೈಕೆ ಮತ್ತು ಸಂಬಂಧಗಳ ಬಾಂಧವ್ಯವನ್ನು ಬಲಪಡಿಸುವ ಒಂದು ಸಂಕೇತವಾಗಿದೆ. ಆತಿಥೇಯರು ಎಷ್ಟೇ ಶ್ರೀಮಂತರಾಗಿದ್ದರೂ, ಅತಿಥಿಗಳು ನೀಡುವ ಮುಯ್ಯಿ ಕೇವಲ ಹಣವಲ್ಲ, ಅದು ಸದ್ಭಾವನೆ ಮತ್ತು ಆಶೀರ್ವಾದದ ರೂಪದಲ್ಲಿರುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ17: ರಾಜ್ಯದಲ್ಲಿ ಬೇಸಿಗೆಯ ಬಿಸಿಲ ಬೇಗೆಯ ನಡುವೆಯೇ ವರುಣನ ಆಗಮನದ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 17 ಜಿಲ್ಲೆಗಳಲ್ಲಿ ಅನಿರೀಕ್ಷಿತ ಮಳೆಯಾಗುವ ಸಾಧ್ಯತೆಯಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿ ವೇಳೆಗೆ ಲಘು ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ 21°C ದಾಖಲಾಗಬಹುದು. ಮಳೆಯ ಮುನ್ಸೂಚನೆ ಒಂದೆಡೆಯಾದರೆ, ಉತ್ತರ ಕರ್ನಾಟಕದ ಜಿಲ್ಲೆಗಳಾದ ಕಲ್ಬುರ್ಗಿ, ರಾಯಚೂರು ಮತ್ತು ವಿಜಯಪುರದಲ್ಲಿ ತಾಪಮಾನ ಏರಿಕೆಯಾಗಲಿದೆ. ಇಲ್ಲಿ ಗರಿಷ್ಠ ತಾಪಮಾನ 38°C ದಾಟುವ ಸಂಭವವಿದೆ.
ಕರ್ನಾಟಕದ ವಿವಿಧ ಜಿಲ್ಲೆಗಳ ತಾಪಮಾನ ಮತ್ತು ಮಳೆಯ ವಿವರ ಇಲ್ಲಿದೆ:
ಜಿಲ್ಲೆ/ನಗರ
ಗರಿಷ್ಠ ತಾಪಮಾನ
ಕನಿಷ್ಠ ತಾಪಮಾನ
ಮಳೆ ಮುನ್ಸೂಚನೆ
ಬೆಂಗಳೂರು
33°C
19°C
ಹಗುರ ಮಳೆ (40-50% ಸಂಭವನೀಯತೆ)
ಮೈಸೂರು
33°C
19°C
ಹಗುರ ಮಳೆ (40% ಸಂಭವನೀಯತೆ)
ಮಂಗಳೂರು
31°C
24°C
ಭಾಗಶಃ ಮೋಡ, ರಾತ್ರಿ ಮಳೆ ಸಾಧ್ಯತೆ (65%)
ಕಲಬುರಗಿ
34°C
22°C
ಮೋಡ ಕವಿದ ವಾತಾವರಣ
ಬಾಗಲಕೋಟೆ
35°C
21°C
ಗುಡುಗು ಸಹಿತ ಮಳೆ ಸಾಧ್ಯತೆ
ಮಳೆ ಬರುವ ಸಂದರ್ಭದಲ್ಲಿ ಗಂಟೆಗೆ 30 ರಿಂದ 40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದ್ದು, ಸಾರ್ವಜನಿಕರು ಮತ್ತು ರೈತರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿಯಲ್ಲಿ ರಾಜ್ಯದ ಅತಿ ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಸೆಖೆ ಹೆಚ್ಚಿರಲಿದೆ.
ಮಂಗಳೂರು, ಮಾರ್ಚ್ 17: ದೂರು ನೀಡಲು ಬಂದ ಮಹಿಳೆಯನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಬಲವಂತ ಮಾಡಿರುವ ಆರೋಪ ಎದುರಿಸುತ್ತಿರುವ ಮೂಡಬಿದ್ರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ವಿರುದ್ಧ ಇದೀಗ ಅನೇಕ ಆರೋಪಗಳು ಕೇಳಿಬರುತ್ತಿವೆ. ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತನಿಖೆಗೆ ಆದೇಶಿಸಿದ್ದು, ಯಾರಾದರೂ ಸಂತ್ರಸ್ತೆಯರಿದ್ದರೆ ಧೈರ್ಯವಾಗಿ ಬಂದು ದೂರು ನೀಡಿ, ನಾವು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಅಭಯ ನೀಡಿದ್ದಾರೆ. ಆರೋಪಿ ಸಂದೇಶ್ ಹಲವಾರು ಮಹಿಳೆಯರ ಜತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ತಡರಾತ್ರಿ ಮಹಿಳೆಯೊಬ್ಬರ ಮನೆ ಕಂಪೌಂಡ್ ಹಾರಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.
2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ಲೆಕ್ಕಾಚಾರಗಳು ಶುರುವಾಗಿದೆ. ಅದರಲ್ಲೂ ಪ್ರಸ್ತುತ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾಗೆ ಮುಂದಿನ 9 ಮ್ಯಾಚ್ಗಳು ನಿರ್ಣಾಯಕ. ಅಂದರೆ ಈ ಒಂಭತ್ತು ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ಗೇರಬಹುದು.
ಟೀಮ್ ಇಂಡಿಯಾ ಈವರೆಗೆ ಆಡಿದ 9 ಪಂದ್ಯಗಳಲ್ಲಿ 4 ಗೆಲುವು, 4 ಸೋಲು ಹಾಗೂ 1 ಡ್ರಾ ಸಾಧಿಸಿದೆ. ಈ ಮೂಲಕ ಶೇಕಡಾವಾರು 48.15% ಅಂಕಗಳೊಂದಿಗೆ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.
ಇತ್ತ ಫೈನಲ್ ಆಡಲು ಅರ್ಹತೆ ಪಡೆಯಬೇಕಿದ್ದರೆ ಟಾಪ್-2 ನಲ್ಲಿ ಕಾಣಿಸಿಕೊಳ್ಳಬೇಕು. ಅಂದರೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸುವ ತಂಡಗಳು ಫೈನಲ್ ಆಡುತ್ತವೆ. ಅದರಂತೆ ಇದೀಗ 6ನೇ ಸ್ಥಾನದಲ್ಲಿರುವ ಟೀಮ್ ಇಂಡಿಯಾ ಮುಂದೆ ಇನ್ನೂ 9 ಪಂದ್ಯಗಳಿವೆ.
ಈ 9 ಪಂದ್ಯಗಳಲ್ಲಿ ಭಾರತ ತಂಡವು ಕನಿಷ್ಠ 7 ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಲೇಬೇಕು. ಏಳು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಗೆದ್ದರೆ ಶೇಕಡಾವಾರು ಅಂಕ 62.96% ಗೆ ತಲುಪುತ್ತದೆ. ಈ ಮೂಲಕ ಇತರೆ ತಂಡಗಳನ್ನು ಹಿಂದಿಕ್ಕಿ ಫೈನಲ್ ಹಾದಿಯನ್ನು ಸುಲಭಗೊಳಿಸಬಹುದು.
ಇನ್ನು ಟೀಮ್ ಇಂಡಿಯಾ ಉಳಿದ 9 ಮ್ಯಾಚ್ಗಳಲ್ಲಿ ಎಲ್ಲಾ ಪಂದ್ಯಗಳನ್ನು ಅಥವಾ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ ನೇರವಾಗಿ ಫೈನಲ್ಗೇರಲಿದೆ. ಅಂದರೆ 9 ರಲ್ಲಿ 7 ಪಂದ್ಯ ಗೆದ್ದರೂ ಕೆಲ ತಂಡಗಳ ಫಲಿತಾಂಶವನ್ನು ಎದುರು ನೋಡಬೇಕಾಗುತ್ತದೆ. ಇತ್ತ 8 ಮ್ಯಾಚ್ಗಳನ್ನು ಗೆದ್ದುಕೊಂಡರೆ 64% ರಿಂದ 65% ಅಂಕಗಳನ್ನು ಪಡೆದು ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಳ್ಳಬಹುದು.
ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ, ಭಾರತ ತಂಡದ ಮುಂದಿನ ಎದುರಾಳಿಗಳು ಶ್ರೀಲಂಕಾ, ನ್ಯೂಝಿಲೆಂಡ್ ಮತ್ತು ಆಸ್ಟ್ರೇಲಿಯಾ. ಇಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತವರಿನಲ್ಲಿ 5 ಟೆಸ್ಟ್ ಪಂದ್ಯಗಳನ್ನಾಡಲಿದೆ. ಹಾಗೆಯೇ ನ್ಯೂಝಿಲೆಂಡ್ ಹಾಗೂ ಶ್ರೀಲಂಕಾ ವಿರುದ್ಧ ತಲಾ 2 ಪಂದ್ಯಗಳನ್ನಾಡಬೇಕಿದೆ.
ಇಲ್ಲಿ ಶ್ರೀಲಂಕಾ ಹಾಗೂ ನ್ಯೂಝಿಲೆಂಡ್ ತಂಡಗಳನ್ನು ಅವರ ನೆಲದಲ್ಲಿ ಎದುರಿಸಬೇಕಿರುವುದು ಟೀಮ್ ಇಂಡಿಯಾ ಮುಂದಿರುವ ದೊಡ್ಡ ಸವಾಲು. ಹಾಗೆಯೇ ಆಸ್ಟ್ರೇಲಿಯಾ ವಿರುದ್ಧ 5-0 ಅಂತರದಿಂದ ಗೆಲ್ಲುವುದು ಕೂಡ ಕಷ್ಟಸಾಧ್ಯ ಎಂದೇ ಹೇಳಬಹುದು. ಹೀಗಾಗಿ ನವೆಂಬರ್ವರೆಗೆ ಟೀಮ್ ಇಂಡಿಯಾದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಲೆಕ್ಕಾಚಾರ ಮುಂದುವರೆಯಲಿದೆ ಎನ್ನಬಹುದು.
ಬಳ್ಳಾರಿ, ಮಾರ್ಚ್ 17: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ (Iran Israel War) ಪರಿಣಾಮ ಜಾಗತಿಕವಾಗಿ ಮಾತ್ರವಲ್ಲದೆ, ಸ್ಥಳೀಯವಾಗಿಯೂ ತಟ್ಟತೊಡಗಿದೆ. ಬಳ್ಳಾರಿಯ ಹೆಮ್ಮೆಯ ಜೀನ್ಸ್ ಉದ್ಯಮಕ್ಕೆ (Ballari Jeans Industry) ಈ ಯುದ್ಧ ಈಗ ಭಾರಿ ಹೊಡೆತ ನೀಡಿದೆ. ಕೊಲ್ಲಿ ರಾಷ್ಟ್ರಗಳಿಂದ ಬರುತ್ತಿದ್ದ ಕೆಮಿಕಲ್ ಸರಬರಾಜು ಸ್ಥಗಿತಗೊಂಡಿರುವುದು ಉದ್ಯಮಿಗಳನ್ನು ಹೈರಾಣಾಗಿಸಿದೆ. ಇದರಿಂದಾಗಿ ಉತ್ಪಾದನೆ ಕುಸಿತವಾಗಿದೆ. ಮತ್ತೊಂದೆಡೆ, ರಫ್ತು ಕೂಡ ಸ್ಥಗಿತಗೊಂಡಿದೆ. ಇದು ಜೀನ್ಸ್ ಉದ್ಯಮಿಗಳನ್ನು, ಕಾರ್ಮಿಕರನ್ನು ಸಂಕಷ್ಟಕ್ಕೆ ಈಡುಮಾಡಿದೆ.
ಜೀನ್ಸ್ ಉದ್ಯಮಕ್ಕೆ ಕೆಮಿಕಲ್ ಬಿಸಿ
ಜೀನ್ಸ್ ಪ್ಯಾಂಟ್‌ಗಳಿಗೆ ಬಣ್ಣ ನೀಡಲು ಬಳಸುವ ರಾಸಾಯನಿಕಗಳು ಹೆಚ್ಚಾಗಿ ಗಲ್ಫ್ ರಾಷ್ಟ್ರಗಳಿಂದ ಹಡಗುಗಳ ಮೂಲಕ ಸರಬರಾಜಾಗುತ್ತಿದ್ದವು. ಆದರೆ ಯುದ್ಧದ ಹಿನ್ನೆಲೆಯಲ್ಲಿ ಹಡಗುಗಳ ಸಂಚಾರ ಸ್ಥಗಿತಗೊಂಡಿದ್ದು, ಕೆಮಿಕಲ್ ಪೂರೈಕೆ ಸಂಪೂರ್ಣ ನಿಂತುಹೋಗಿದೆ. ಜೀನ್ಸ್ ಲೇಪನಕ್ಕೆ ಮುಖ್ಯವಾಗಿ ಬೇಕಾದ ಹೈಡ್ರೋಜನ್ ಪೆರಾಕ್ಸೈಡ್, ಸೋಡಿಯಂ ಹೈಪೋಕ್ಲೋರೈಟ್ಸ್ ಹಾಗೂ ಪೊಟ್ಯಾಸಿಯಮ್ ಪರ್ಮಾಂಗನೇಟ್ ರಾಸಾಯನಿಕಗಳ ಕೊರತೆ ಉಂಟಾಗಿದೆ.
ಮೂರ್ನಾಲ್ಕು ಪಟ್ಟು ಹೆಚ್ಚಾದ ಕೆಮಿಕಲ್ ದರ
ಹಿಂದೆ ಕೆಜಿಗೆ ಕೇವಲ 40 ರೂಪಾಯಿಗೆ ಸಿಗುತ್ತಿದ್ದ ಕೆಮಿಕಲ್ ದರ ಈಗ 150 ರೂಪಾಯಿ ಗಡಿ ದಾಟಿದೆ. ಸ್ಥಳೀಯವಾಗಿ ಸ್ಟಾಕ್ ಇರುವ ಕೆಮಿಕಲ್‌ಗಳನ್ನು ಮಾರಾಟಗಾರರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಉದ್ಯಮಿಗಳನ್ನು ಸಂಕಷ್ಟಕ್ಕೆ ದೂಡಿದೆ.
ರಂಜಾನ್, ಯುಗಾದಿ ಹಬ್ಬದ ಸೀಸನ್‌ನಲ್ಲೇ ಏಟು
ಸಾಮಾನ್ಯವಾಗಿ ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಬಳ್ಳಾರಿ ಜೀನ್ಸ್ ಬಟ್ಟೆಗಳಿಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇರುತ್ತದೆ. ಈ ಬಾರಿ ಸುಮಾರು 20 ಲಕ್ಷ ಜೀನ್ಸ್ ಪ್ಯಾಂಟ್‌ಗಳು ದುಬೈ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗಬೇಕಿತ್ತು. ಆದರೆ ಬಣ್ಣದ ಕೊರತೆಯಿಂದಾಗಿ ಉತ್ಪಾದನೆಯು ಶೇ 50ರಷ್ಟು ಕುಸಿತ ಕಂಡಿದೆ. ಇದರಿಂದಾಗಿ ಕೋಟ್ಯಂತರ ರೂಪಾಯಿ ವ್ಯವಹಾರಕ್ಕೆ ಧಕ್ಕೆಯಾಗಿದೆ.
ಬಳ್ಳಾರಿಯ ಜೀನ್ಸ್ ಉದ್ಯಮವು ಈಗಾಗಲೇ ಕಾರ್ಮಿಕರ ಕೊರತೆಯಿಂದ ಹೈರಾಣಾಗಿತ್ತು. ಈಗ ಅಂತರಾಷ್ಟ್ರೀಯ ಸಂಘರ್ಷದಿಂದಾಗಿ ಕಚ್ಚಾ ವಸ್ತುಗಳ ಬೆಲೆ ಗಗನಕ್ಕೇರಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಸಾವಿರಾರು ಕುಟುಂಬಗಳಿಗೆ ಆಸರೆಯಾಗಿರುವ ಜೀನ್ಸ್ ಫ್ಯಾಕ್ಟರಿಗಳು ಮುಚ್ಚುವ ಭೀತಿ ಎದುರಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ