Category Archives: Blog

Your blog category

IPL 2026: ಐಪಿಎಲ್​ಗೆ ‘ಯುಪಿ ವಾರಿಯರ್ಸ್’ ತಂಡ ಎಂಟ್ರಿ? – Kannada News | Capri Global a frontrunner to buy Rajasthan Royals

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19 ಆರಂಭಕ್ಕೂ ಮುನ್ನ ಎರಡು ಫ್ರಾಂಚೈಸಿಗಳ ಮಾಲೀಕರು ಬದಲಾಗುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಡಿಯಾಜಿಯೋ ಕಂಪೆನಿಯು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮಾರಾಟಕ್ಕೆ ಬಿಡ್ಡಿಂಗ್ ಆಹ್ವಾನಿಸಿದೆ.

ಇದರ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಸಹ ಮಾರಾಟ ಮಾಡಲು ರಾಯಲ್ಸ್ ಸ್ಪೋರ್ಟ್ಸ್ ಗ್ರೂಪ್ ಮುಂದಾಗಿದೆ. ಅದರಂತೆ ಇದೀಗ ಆರ್​ಆರ್ ತಂಡದ ಖರೀದಿಗೂ ಬಿಡ್ಡಿಂಗ್​ಗಳನ್ನು ಆಹ್ವಾನಿಸಲಾಗಿದೆ. ಹೀಗಾಗಿ ಐಪಿಎಲ್​ ಆರಂಭಕ್ಕೂ ಮುನ್ನ ಆರ್​ಸಿಬಿ ಮತ್ತು ಆರ್​ಆರ್ ತಂಡಗಳ ಮಾಲೀಕರು ಬದಲಾಗುವ ಸಾಧ್ಯತೆ ಹೆಚ್ಚಿದೆ.

ಇಲ್ಲಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಖರೀದಿಗೆ ಕ್ಯಾಪ್ರಿ ಗ್ಲೋಬಲ್ ಆಸಕ್ತಿ ತೋರಿರುವುದು ವಿಶೇಷ. ಐಪಿಎಲ್​ನಲ್ಲಿ 18 ವರ್ಷಗಳನ್ನು ಪೂರೈಸಿರುವ ಹಳೆಯ ಫ್ರಾಂಚೈಸಿಯನ್ನು ಬಹುಪಾಲನ್ನು ಖರೀದಿಸಲು ಕ್ಯಾಪ್ರಿ ಗ್ಲೋಬಲ್ ಮಾತುಕತೆ ನಡೆಸಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಕ್ಯಾಪ್ರಿ ಗ್ಲೋಬಲ್ ಪಾಲಾಗುವ ಸಾಧ್ಯತೆ ಹೆಚ್ಚಿದೆ.

ಕುತೂಹಲಕಾರಿ ವಿಷಯ ಎಂದರೆ, ಕ್ಯಾಪ್ರಿ ಗ್ಲೋಬಲ್ ಕಂಪೆನಿಯು ಈಗಾಗಲೇ ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡವೊಂದನ್ನು ಕಣಕ್ಕಿಳಿಸುತ್ತಿದೆ. ಹೀಗಾಗಿ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯನ್ನು ಕ್ಯಾಪ್ರಿ ಗ್ಲೋಬಲ್ ಖರೀದಿಸಿದರೆ ಆರ್​ಆರ್ ತಂಡದ ಹೆಸರು ಬದಲಾವಣೆಯಾಗುವುದು ಖಚಿತ. ಅದರಂತೆ ರಾಜಸ್ಥಾನ್ ರಾಯಲ್ಸ್ ಬದಲಿಗೆ ಐಪಿಎಲ್​ನಲ್ಲಿ ಯುಪಿ ವಾರಿಯರ್ಸ್ ಹೆಸರಿನ ತಂಡ ಕಣಕ್ಕಿಳಿಯಲಿದೆ.

ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಖರೀದಿಗೆ ಮ್ಯಾಂಚೆಸ್ಟರ್‌ ಯುನೈಟೆಡ್‌ ಫುಟ್‌ಬಾಲ್‌ ಕ್ಲಬ್‌ ಮಾಲೀಕರಾದ ಅವ್ರಾಮ್ ಗ್ಲೇಝರ್ ಬಿಡ್ ಸಲ್ಲಿಸಿದ್ದಾರೆ. ಇವರೊಂದಿಗೆ ಅದಾನಿ ಗ್ರೂಪ್, ಆದಾರ್ ಪೂನವಾಲ ಸೇರಿದಂತೆ ಕೆಲ ಉದ್ಯಮಿಗಳು ಆರ್​ಸಿಬಿ ಫ್ರಾಂಚೈಸಿಯ ಖರೀದಿಗೆ ಆಸಕ್ತಿ ತೋರಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಕೂಡ ಬದಲಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

Published On – 3:09 pm, Tue, 10 February 26

Source link

AI University: ಅಮರಾವತಿಯಲ್ಲಿ ದೇಶದ ಮೊದಲ AI ವಿಶ್ವವಿದ್ಯಾಲಯ ಮುಂದಾದ ಸರ್ಕಾರ – Kannada News | India’s First AI University in Amaravati by Andhra Pradesh and NVIDIA: A Global Leap

ಕೃತಕ ಬುದ್ಧಿಮತ್ತೆ (Artificial Intelligence – AI) ಕ್ಷೇತ್ರದಲ್ಲಿ ಭಾರತವನ್ನು ಜಾಗತಿಕ ಮಟ್ಟಕ್ಕೆ ತರುವ ಉದ್ದೇಶದಿಂದ ಆಂಧ್ರಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಅಮರಾವತಿಯಲ್ಲಿ ದೇಶದ ಮೊದಲ AI ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮುಂದಾಗಿದೆ. ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಇಲಾಖೆಯು ಇತ್ತೀಚೆಗೆ ಕೃತಕ ಬುದ್ಧಿಮತ್ತೆ ಪರಿಸರ ವ್ಯವಸ್ಥೆ, ಮೂಲಸೌಕರ್ಯ ಮತ್ತು ತರಬೇತಿ ಕೇಂದ್ರಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕೃತ ಆದೇಶ (GO) ಹೊರಡಿಸಿದ್ದು, ಈ ವಿಶ್ವವಿದ್ಯಾಲಯವನ್ನು ಜಾಗತಿಕ ತಂತ್ರಜ್ಞಾನ ದೈತ್ಯ NVIDIA ಸಹಯೋಗದೊಂದಿಗೆ “AI ಲಿವಿಂಗ್ ಲ್ಯಾಬ್ಸ್” ಎಂಬ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. ವರದಿಗಳ ಪ್ರಕಾರ, ಇದರ ಕಾರ್ಯಾಚರಣೆಗಳು ಇದೇ ತಿಂಗಳ 19ರಿಂದ ಪ್ರಾರಂಭವಾಗಲಿವೆ.

ರಾಜ್ಯ ಸರ್ಕಾರವು ಈ ಯೋಜನೆಯನ್ನು 2013ರ ಕಂಪನಿ ಕಾಯ್ದೆಯ ಸೆಕ್ಷನ್ 8ರ ಅಡಿಯಲ್ಲಿ ಲಾಭರಹಿತ ಸಂಸ್ಥೆಯಾಗಿ ಸ್ಥಾಪಿಸಲು ಅನುಮೋದನೆ ನೀಡಿದೆ. ಇದರ ಮೂಲಕ ಶಿಕ್ಷಣ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸ್ಟಾರ್ಟ್‌ಅಪ್ ಸಂಸ್ಥೆಗಳಿಗೆ ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸುವ ಉದ್ದೇಶವಿದೆ. ಐಟಿ ಇಲಾಖೆ ಮತ್ತು NVIDIA ಕಾರ್ಪೊರೇಷನ್ ನಡುವೆ ಸಹಿ ಹಾಕಿರುವ ಒಪ್ಪಂದದ ಮೂಲಕ ಅತ್ಯಾಧುನಿಕ AI ತಂತ್ರಜ್ಞಾನ, ಹಾರ್ಡ್‌ವೇರ್ ಮತ್ತು ತರಬೇತಿ ವ್ಯವಸ್ಥೆಗಳು ನೇರವಾಗಿ ಲಭ್ಯವಾಗಲಿವೆ.

ಈ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಅಮರಾವತಿಯಲ್ಲಿ ಇರಲಿದ್ದು, ಅಲ್ಲಿಂದ ರಾಜ್ಯಾದ್ಯಂತ ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗಿದೆ. ಇದು ಕೇವಲ ಶೈಕ್ಷಣಿಕ ಸಂಸ್ಥೆಯಾಗಿರದೆ, ಸಂಶೋಧನೆ ಮತ್ತು ನವೋದ್ಯಮಗಳಿಗೆ ಕೇಂದ್ರಬಿಂದುವಾಗಿ ಕೆಲಸ ಮಾಡಲಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಕಲಿಕೆ, ಲೈವ್ ಪ್ರಾಜೆಕ್ಟ್‌ಗಳು, ಇಂಡಸ್ಟ್ರಿ ಇಂಟರ್ನ್‌ಶಿಪ್‌ಗಳು ಮತ್ತು ಜಾಗತಿಕ ತಜ್ಞರ ಮಾರ್ಗದರ್ಶನದೊಂದಿಗೆ ಕೈಗಾರಿಕಾ ಅಗತ್ಯಗಳಿಗೆ ತಕ್ಕ ತರಬೇತಿ ನೀಡಲಾಗುತ್ತದೆ.

ಇದನ್ನೂ ಓದಿ: ಹುಶಾರ್​…. ಮಕ್ಕಳಿಗೆ ಕಂಡ ಕಂಡ ಹಾಗೆ ಚಾಟ್​ ಜಿಪಿಟಿ ಬಳಸಲು ಬಿಡಬೇಡಿ; ಪ್ರಾಣಕ್ಕೆ ಕುತ್ತು ತರಬಹುದು!

ಈ ಯೋಜನೆ ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಕೃಷಿ, ಆರೋಗ್ಯ ರಕ್ಷಣೆ, ಉತ್ಪಾದನಾ ಕ್ಷೇತ್ರ, ಫಿನ್‌ಟೆಕ್, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ಮತ್ತು ಸರ್ಕಾರಿ ಆಡಳಿತದಲ್ಲಿ AI ಬಳಕೆಯನ್ನು ಉತ್ತೇಜಿಸುವುದು ಇದರ ಪ್ರಮುಖ ಗುರಿಯಾಗಿದೆ. ರೈತರಿಗೆ ಮುಂಗಡ ಬೆಳೆ ಅಂದಾಜು, ಆಸ್ಪತ್ರೆಗಳಲ್ಲಿ ತ್ವರಿತ ರೋಗನಿರ್ಣಯ, ಕೈಗಾರಿಕೆಯಲ್ಲಿ ಸ್ಮಾರ್ಟ್ ಉತ್ಪಾದನೆ ಮತ್ತು ಸರ್ಕಾರಿ ಸೇವೆಗಳ ಸುಧಾರಣೆಗೆ AI ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಇದು ಸಹಾಯ ಮಾಡಲಿದೆ.

ಈ ವಿಶ್ವವಿದ್ಯಾಲಯ ಸಮಯಕ್ಕೆ ಸರಿಯಾಗಿ ಕಾರ್ಯಾರಂಭ ಮಾಡಿದರೆ, ಅಮರಾವತಿ ದೇಶದ ಮೊದಲ AI ವಿಶ್ವವಿದ್ಯಾಲಯದ ಹೆಗ್ಗಳಿಕೆಯನ್ನು ಪಡೆದು ಇತಿಹಾಸ ಸೃಷ್ಟಿಸಲಿದೆ. ಇದರಿಂದ ಆಂಧ್ರಪ್ರದೇಶ ರಾಜ್ಯವು ತಂತ್ರಜ್ಞಾನ ಮತ್ತು ನವೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದ್ದು, ಯುವಕರಿಗೆ ಹೊಸ ಉದ್ಯೋಗಾವಕಾಶಗಳು ಹಾಗೂ ಜಾಗತಿಕ ಮಟ್ಟದ ಕಲಿಕೆ ಅವಕಾಶಗಳು ದೊರೆಯಲಿವೆ. ಭಾರತದ ಡಿಜಿಟಲ್ ಭವಿಷ್ಯ ನಿರ್ಮಾಣದಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಲಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Source link

ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ: ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಕುಟುಂಬದ ಪ್ರಾಣ – Kannada News | Kapu Shirva Vehicle Blaze: Quick Thinking Driver Averts Tragedy, Five Escape

ಉಡುಪಿ, ಫೆ.10: ಕಾಪು ತಾಲೂಕಿನ ಶಿರ್ವ ಎಂಬಲ್ಲಿ ಮಧ್ಯರಾತ್ರಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಚಾಲಕ ಸೇರಿದಂತೆ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಗಳೂರಿನಿಂದ ಶಿರ್ವ ಕಡೆ ಬರುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಪ್ರಯಾಣಿಕರು ಕಾರಿನಿಂದ ಇಳಿಯುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಕಾರು ನಡು ರಸ್ತೆಯಲ್ಲಿ ಸುಟ್ಟು ಕರಕಲಾಗಿದೆ. ಬೆಂಕಿಯೂ ಎಂಜಿನ್ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಹೊಗೆ ಬಂದಿದೆ. ಇದನ್ನು ನೋಡಿ ಚಾಲಕ ಕಾರನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿದ್ದಾನೆ. ಕಾರಿನಿಂದ ಎಲ್ಲರೂ ಇಳಿಯುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೈಪ್ ಮೂಲಕ ಬೆಂಕಿ ನಂದಿಸಲು ಸ್ಥಳೀಯರ ಪ್ರಯತ್ನ ಮಾಡಿದ್ದಾರೆ. ಚಾಲಕನ ಸಮಯಪ್ರಜ್ಞೆಯಿಂದ ಕುಟುಂಬದ ಜೀವ ಉಳಿದಿದೆ. ಇನ್ನು ಕಾರಿನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನು ತಿಳಿದು ಬಂದಿಲ್ಲ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಸಿಎಂ ಕುರ್ಚಿ ಕಿತ್ತಾಟ: ಡಿಕೆ ಶಿವಕುಮಾರ್ ಕದ್ದು ಮುಚ್ಚಿ ಮಾತಿಗೆ ಸಿದ್ದರಾಮಯ್ಯ ಗರಂ – Kannada News | Karnataka Power Tussle Reaches Delhi: CM Siddaramaiah Angry On DCM DK Shivakumar

ಬೆಂಗಳೂರು, (ಫೆಬ್ರವರಿ 10): ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಗುಸುಗುಸು ಜೋರಾಗಿದೆ. ಬಜೆಟ್​​​ಗೈ ಮುನ್ನವೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೆಹಲಿಯಲ್ಲಿ ಠಿಕಾಣಿ ಹೂಡಿದ್ದು, ಸಿಎಂ ಹುದ್ದೆಗಾಗಿ ಹೈಕಮಾಂಡ್ ನಾಯಕರ ಮನವೊಲಿಕೆಗೆ ಕಸರತ್ತು ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಶತಾಯಗತಾಯ ಸಿಎಂ ಪಟ್ಟಕ್ಕೇರಲೇಬೇಕೆಂಬ ಹಠಕ್ಕೆ ಬಿದ್ದಿರುವ ಡಿಕೆಶಿ, ಈ ಬಾರಿ ನೇರವಾಗಿ ಸೋನಿಯಾ ಗಾಂಧಿ ಅವರನ್ನೇ ಭೇಟಿಯಾಗಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಡಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಡಿಕೆ ಶಿವಕುಮಾರ್ ಅವರ ಈ ಕದ್ದುಮುಚ್ಚಿ ತಂತ್ರಗಾರಿಕೆಗೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ಮತ್ತೆ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿ ಕಿತ್ತಾಟ ಮುನ್ನೆಲೆಗೆ ಬಂದಿದ್ದು, ಇದು ಯಾವ ಸ್ವರೂಪ ಪಡೆದುಕೊಳ್ಳುತ್ತೋ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನೇಣು ಬಿಗಿದ ಸ್ಥಿತಿಯಲ್ಲಿ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ‘ಚಿನ್ನು ಪಾಪು’ ಶವ ಪತ್ತೆ – Kannada News | Social Media Influencer Chinu Pappu’s Mysterious Death in Kasaragod Under Police Probe

ಮಂಗಳೂರು, ಫೆಬ್ರವರಿ 10: ನಿಗೂಢ ರೀತಿಯಲ್ಲಿ ಪ್ರಖ್ಯಾತ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ಮೃತಪಟ್ಟಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ‘ಚಿನ್ನು ಪಾಪು’ ಎಂದೇ ಪ್ರಖ್ಯಾತರಾಗಿದ್ದ ರೇಷ್ಮಾ, ಉಳಿಯತ್ತಡ್ಕದಲ್ಲಿರುವ ತಮ್ಮ ಬಾಡಿಗೆ ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಕ್ಕಪಕ್ಕದವರು ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿಯೇ ಅವರು ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ.

ಕಳೆದ ಐದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರೇಷ್ಮಾ, 4 ವರ್ಷ ವಯಸ್ಸಿನ ಮಗುವನ್ನು ಕೂಡ ಹೊಂದಿದ್ದಾರೆ. ಗಂಡನಿಂದ ಇತ್ತೀಚೆಗೆ ವಿಚ್ಛೇದನ ಪಡೆದಿದ್ದ ಇವರು, ಬಳಿಕ ಕಾಸರಗೋಡಿನಲ್ಲಿ ಒಬ್ಬಳೇ ವಾಸ ಮಾಡುತ್ತಿದ್ದರು. ಅವರ ನಾಲ್ಕು ವರ್ಷದ ಮಗು ರೇಷ್ಮಾಪೋಷಕರೊಂದಿಗೆ ಆಡುವೂರಿನಲ್ಲಿ ವಾಸಿಸುತ್ತಿದೆ ಎನ್ನಲಾಗಿದ್ದು, ಇವರ ಮನೆಗೆ ಹೊಸ ಬಾಯ್ ಫ್ರೆಂಡ್ ಒಬ್ಬ ಬಂದು ಹೋಗುತ್ತಿದ್ದ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ರೇಷ್ಮಾ ಮೊಬೈಲ್​​ನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಎಲ್ಲ ಆಯಾಮದಲ್ಲೂ ಪೊಲೀಸರ ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ಬೆಳ್ತಂಗಡಿಯಲ್ಲಿ ವಿದ್ಯಾರ್ಥಿನಿ ಕಿಡ್ನ್ಯಾಪ್​​ ಯತ್ನ ಕೇಸ್​​ಗೆ ಬಿಗ್​​ ಟ್ವಿಸ್ಟ್​​; ಇಲ್ಲಿದೆ ಅಸಲಿ ಕಹಾನಿ

ಚಿನ್ನು ಪಪ್ಪು ಅಲಿಯಾಸ್ ರೇಷ್ಮಾ ಯಾರು?

ಕಾಸರಗೋಡಿನ ಆಡುವೂರು ನಿವಾಸಿಯಾಗಿದ್ದ 24 ವರ್ಷದ ಚಿನ್ನು ಪಪ್ಪು, ಇನ್‌ಸ್ಟಾಗ್ರಾಮ್‌ನಲ್ಲಿ 2.06 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​​ ಹೊಂದಿರುವ ಯುವ ಇನ್‌ಫ್ಲ್ಯೂಯೆನ್ಸರ್‌ ಆಗಿದ್ದರು.  ಇನ್‌ಸ್ಟಾಗ್ರಾಮ್‌ನಲ್ಲಿ ಗ್ರಾಮೀಣ ಬದುಕು, ಆಹಾರ, ಅನಾವೃತ ಸ್ಥಳಗಳು ಹಾಗೂ ತುಳು ಸಂಸ್ಕೃತಿ ಕುರಿತ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ವಾರದ ಹಿಂದೆ ಇವರು ಹಂಚಿಕೊಂಡಿದ್ದ ಪೋಸ್ಟ್‌ಗೆ ಸುಮಾರು 6,000 ಲೈಕ್‌ಗಳು ಬಂದಿದ್ದವು.

ರೇಷ್ಮಾ ಸಾವಿಗೆ ಸಂತಾಪ

ಕಾರು ಮತ್ತು ತಂತ್ರಜ್ಞಾನ ಸಂಬಂಧಿತ ವಿಷಯಗಳನ್ನು ಹಂಚಿಕೊಳ್ಳುವ ಕಂಟೆಂಟ್ ಕ್ರಿಯೇಟರ್ ಗೋಪಿಕೃಷ್ಣ ಸೇರಿದಂತೆ ಹಲವರು, ಸದಾ ನಗುವ ಮುಖದ ಚಿನ್ನು ಪಪ್ಪು ಇಷ್ಟೊಂದು ಬೇಗ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆಂಬುದು ನಂಬಲಾಗುತ್ತಿಲ್ಲ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On – 2:38 pm, Tue, 10 February 26

Source link

ಕಾಡಿನಿಂದ ನಾಡಿಗೆ ಬಂದ್ವು ಮೂರು ಕಾಡಾನೆಗಳು!

ರಾಮನಗರ, ಫೆಬ್ರವರಿ 10: ತಾಲೂಕಿನ ಗೋಪಳ್ಳಿ ಗ್ರಾಮದ ಬಳಿ ಮೂರು ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಅರಣ್ಯದಿಂದ ನಾಡಿಗೆ ಬಂದ ಈ ಗಜಪಡೆಯು ಗ್ರಾಮಸ್ಥರ ಗಮನ ಸೆಳೆದಿದೆ. ಈ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನಲ್ಲಿ ಸಂಭವಿಸಿದ್ದು, ಸ್ಥಳೀಯರಲ್ಲಿ ಕುತೂಹಲ ಮತ್ತು ಎಚ್ಚರಿಕೆ ಮೂಡಿಸಿದೆ. ಆನೆಗಳು ಗೋಪಳ್ಳಿ ಗ್ರಾಮಕ್ಕೆ ಪ್ರವೇಶಿಸಿದ್ದರಿಂದ, ಸ್ಥಳೀಯರು ಪರಿಸ್ಥಿತಿಯನ್ನು ಗಮನಿಸುತ್ತಿರುವುದು ಕಂಡುಬಂದಿದೆ. ಆನೆಗಳ ಚಲನವಲನಗಳ ಕುರಿತು ನಿರಂತರ ಕಾರ್ಯಾಚರಣೆ ನಡೆಯುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಗ್ರಾಮಸ್ಥರು ಈ ಆನೆಗಳನ್ನು ಚಿತ್ರೀಕರಿಸುತ್ತಿರುವುದು ಕಂಡುಬಂದಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅಳೆಯಲಾಗುತ್ತಿದೆ. ಆನೆಗಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸೆನ್ಸಾರ್ ಮಂಡಳಿ ವಿರುದ್ಧದ ಅರ್ಜಿ ಹಿಂಪಡೆದ ‘ಜನ ನಾಯಗನ್’; ಮುಂದಿನ ನಡೆ ಏನು? – Kannada News | Jana Nayagan Release Delay: Vijay Film’s Censor and Court Battle Updates

‘ಜನ ನಾಯಗನ್’ ಸಿನಿಮಾ (Jana Nayagan Movie) ರಿಲೀಸ್ ಆಗಲು ಸಾಕಷ್ಟು ಅಡಚಣೆ ಉಂಟಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್​​​ನಲ್ಲಿ ಕೆವಿಎನ್ ಸಂಸ್ಥೆ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ಈಗ ಅರ್ಜಿಯನ್ನು ಕೆವಿಎನ್ ಸಂಸ್ಥೆ ಹಿಂದಕ್ಕೆ ಪಡೆದಿದೆ. ಈ ಮೂಲಕ ತಂಡದ ಮುಂದಿನ ನಡೆ ಏನು ಎಂಬ ಕುತೂಹಲ ಮೂಡಿದೆ. ಸಿನಿಮಾ ಶೀಘ್ರವೇ ತೆರೆಗೆ ಬರುತ್ತದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

ಜನವರಿ 9ರಂದು ವಿಜಯ್ ನಟನೆಯ ‘ಜನ ನಾಯಗನ್’ ರಿಲೀಸ್ ಆಗಬೇಕಿತ್ತು. ಹೀಗಾಗಿ ಸೆನ್ಸಾರ್ ಪ್ರಮಾಣ ಪತ್ರಕ್ಕಾಗಿ ಡಿಸೆಂಬರ್​​ನಲ್ಲೇ ಅರ್ಜಿ ಸಲ್ಲಿಕೆ ಮಾಡಿತ್ತು. ಆದರೆ, ತಂಡಕ್ಕೆ ಸೆನ್ಸಾರ್ ಪ್ರಮಾಣಪತ್ರ ಸಿಕ್ಕಿರಲಿಲ್ಲ. ಸಿನಿಮಾ ರಿಲೀಸ್​​ಗೆ ಕೆಲವೇ ದಿನ ಬಾಕಿ ಇರುವಾಗ ನಿರ್ಮಾಣ ಸಂಸ್ಥೆ ಕೆವಿಎನ್ ಮದ್ರಾಸ್ ಹೈಕೋರ್ಟ್​​ನಲ್ಲಿ ತುರ್ತು ಅರ್ಜಿ ಸಲ್ಲಿಕೆ ಮಾಡಿತ್ತು.

ಜನವರಿ 9ರಂದು ‘ಸೆನ್ಸಾರ್ ಪ್ರಮಾಣ ಪತ್ರ ನೀಡಿ’ ಎಂದು ಕೋರ್ಟ್​ ಸೆನ್ಸಾರ್ ಮಂಡಳಿಗೆ ಆದೇಶ ನೀಡಿತ್ತು. ಅದೇ ದಿನ ಸಂಜೆ ಮುಖ್ಯ ನ್ಯಾಯಮೂರ್ತಿ ಎಂಎಂ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಅರುಲ್ ಮುರುಗನ್ ಅವರು ಈ ಆದೇಶಕ್ಕೆ ತಡೆ ನೀಡಿದರು.

ಈಗ ಪ್ರಕರಣ ಕೋರ್ಟ್​​ನಲ್ಲೇ ಇದ್ದು ತಿಂಗಳಾಗಿದೆ. ಆದರೆ, ಈವರೆಗೆ ಆದೇಶ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಕೆವಿಎನ್ ಹಿಂಪಡೆದಿದೆ. ಅಲ್ಲದೆ, ಈ ವಿಷಯವಾಗಿ ತಂಡ ಪರಿಷ್ಕರಣಾ ಸಮಿತಿ ಮೆಟ್ಟಿಲು ಹತ್ತಲಿದೆ. ಅಲ್ಲಿ ಸಿನಿಮಾ ವೀಕ್ಷಣೆ ಆದ ಬಳಿಕ ಸಿನಿಮಾ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಇದೆ.

ಇದನ್ನೂ ಓದಿ: ಕೊನೆಗೂ ಮಂಡಿಯೂರಿದ ‘ಜನ ನಾಯಗನ್’; ರಿಲೀಸ್ ಮತ್ತಷ್ಟು ವಿಳಂಬ?

ವಿಮರ್ಷೆ ಸಮಿತಿಗೆ ಸಿನಿಮಾ ಸಲ್ಲಿಕೆ ಆದ ಬಳಿಕ 15 ದಿನಗಳಲ್ಲಿ ಸಿನಿಮಾ ರಿವ್ಯೂ ಆಗಿ ಸೆನ್ಸಾರ್ ಪ್ರಮಾಣಪತ್ರ ನೀಡಬೇಕು. ಹೀಗಾಗಿ, ಫೆಬ್ರವರಿ 25ರವೇಳೆಗೆ ಸಿನಿಮಾ ಪ್ರಮಾಣ ಪತ್ರ ಕೈ ಸೇರಿದರೆ ಆ ಬಳಿಕ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಮಧ್ಯೆ ತಂಡಕ್ಕೆ ಮತ್ತೊಂದು ಭಯ ಕೂಡ ಇದೆ. ತಮಿಳುನಾಡಲ್ಲಿ ಶೀಘ್ರವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಅದರ ದಿನಾಂಕ ಘೋಷಣೆ ಆದರೆ, ‘ಜನ ನಾಯಗನ್’ ರಿಲೀಸ್ ಮತ್ತಷ್ಟು ವಿಳಂಬ ಆಗಲಿದೆ. ವಿಜಯ್ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಿಕ್ಲು ಶಿವ ಕೊಲೆ ಪ್ರಕರಣ: ಜಾಮೀನು ಅರ್ಜಿ ವಜಾ, ಬಿಜೆಪಿ ಶಾಸಕನಿಗೆ ಬಂಧನದ ಭೀತಿ – Kannada News | Biklu Shiva Murder Case: BJP MLA Byrathi Basavaraj Bail Plea Rejected By Karnataka High Court

ಬೆಂಗಳೂರು (ಫೆಬ್ರವರಿ.10): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ (Biklu Shiva Murder Case) ಸಂಬಂಧಿಸಿದಂತೆ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ( BJP MLA Byrathi Basavaraj) ಜಾಮೀನು ಅರ್ಜಿ ವಜಾಗೊಂಡಿದೆ. ರೌಡಿಶೀಟರ್ ಶಿವಪ್ರಕಾಶ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯಾಗಿರುವ ಬೈರತಿ ಬಸವರಾಜ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು‌ ಅರ್ಜಿಯನ್ನ ಇಂದು (ಫೆಬ್ರವರಿ 10) ಹೈಕೋರ್ಟ್​​ ವಜಾ‌ಗೊಳಿಸಿ ಆದೇಶ ಹೊರಡಿಸಿದ್ದು, ಹಲವು ದಿನಗಳಿಂದ ತಲೆಮರೆಸಿಕೊಂಡಿರುವ ಬೈರತಿ ಬಸವರಾಜ್​​ಗೆ ಬಂಧನದ ಭೀತಿ ಎದುರಾಗಿದೆ. ಇದೀಗ ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಯಾವುದೇ ಸಂದರ್ಭದಲ್ಲೂ ಬಂಧನವಾಗಬಹುದು.

Source link

ಚಿಕ್ಕಬಳ್ಳಾಪುರ: ಚಿಂತಾಮಣಿಯಲ್ಲಿ ಚಿನ್ನದ ಅಂಗಡಿ ಬೀಗ ಒಡೆದು ಕಳ್ಳತನ – Kannada News | Gold Jewellery Shop Burglary in Chintamani: Thieves Break Lock, Steal Gold and Silver Ornaments in Chikkaballapur

ಚಿಕ್ಕಬಳ್ಳಾಪುರ, ಫೆಬ್ರವರಿ 10: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿರುವ ಶಿವ ಜ್ಯುವೆಲರ್ಸ್ ಚಿನ್ನದ ಅಂಗಡಿಯಲ್ಲಿ ದೊಡ್ಡ ಪ್ರಮಾಣದ ಕಳ್ಳತನ ನಡೆದಿದೆ. ಕಳ್ಳರು ಅಂಗಡಿಯ ಶಟರ್ಸ್ ಬೀಗ ಒಡೆದು ಒಳನುಗ್ಗಿದ್ದು, ಅಲ್ಲಿ ಸಂಗ್ರಹಿಸಿದ್ದ ಬೆಳ್ಳಿ ಮತ್ತು ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಕೂಡಲೇ ಚಿಂತಾಮಣಿ ನಗರ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು, ಪ್ರಾಥಮಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಕಳ್ಳತನದ ಪ್ರಮಾಣ ಮತ್ತು ದರೋಡೆಯಾದ ಆಭರಣಗಳ ನಿಖರ ಮೌಲ್ಯ ಇನ್ನಷ್ಟೇ ತಿಳಿದುಬರಬೇಕಿದೆ. ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ಹಾಗೂ ಸಾಕ್ಷ್ಯಾಧಾರಗಳ ಸಂಗ್ರಹ ಕಾರ್ಯ ನಡೆಯುತ್ತಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BESCOM Power Cut: ಫೆಬ್ರವರಿ 11, 12ರಂದು ಬೆಸ್ಕಾಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ಪವರ್ ಕಟ್ – Kannada News | BESCOM Power Cut on Feb 11 and 12: Electricity Outage in Several Areas for Maintenance Works

ಬೆಂಗಳೂರು, ಫೆಬ್ರವರಿ 10: ಕೆಪಿಟಿಸಿಲ್ ತುರ್ತು ನಿರ್ವಹಣೆ ಮತ್ತು ಇತರ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಫೆಬ್ರವರಿ 11 ಹಾಗೂ 12 ರಂದು ಪವರ್ ಕಟ್ (Power Cut) ಇರಲಿದೆ. ಈ ಬಗ್ಗೆ ಪ್ರಕಟಣೆ ಮೂಲಕ ಬೆಸ್ಕಾಂ ಮಾಹಿತಿ ನೀಡಿದೆ.

ಚಿತ್ರದುರ್ಗ ಜಿಲ್ಲೆಯ ತಳಕು ಬೆಸ್ಕಾಂ ಉಪ ವಿಭಾಗದ ‘ತಳಕು 66/11’ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಫೆಬ್ರವರಿ 11ರ ಬುಧವಾರ ಕೆಪಿಟಿಸಿಎಲ್ ವತಿಯಿಂದ 4ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾಗಿ, ಬೇಡರಡ್ಡಿ-ಹಳ್ಳಿ, ತಿಮ್ಮಪ್ಪಯನಹಳ್ಳಿ, ಎನ್.ದೇವರಹಳ್ಳಿ, ತಳಕು, ಮೊನ್ನೆಕೋಟೆ, ದೇವರೆಡ್ಡಿಹಳ್ಳಿ, ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5ಗಂಟೆಯವರೆಗೂ ನಿರಂತರ ಜ್ಯೋತಿ, ಕೃಷಿ ಬಳಕೆಯ ವಿದ್ಯುತ್‌ ಪೂರೈಕೆ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ರೈತರು, ಸಾರ್ವಜನಿಕರು ಸಹಕರಿಸಬೇಕೆಂದು ಎಇಇ ಎನ್​​ಜಿ ಮಮತಾ ಹಾಗೂ ಎಂಜಿನಿಯರ್ ವೆಂಕಟೇಶ್ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

ಫೆಬ್ರವರಿ 12ಕ್ಕೆ ತುಮಕೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ತುಮಕೂರಿನಲ್ಲಿ ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗ ವ್ಯಾಪ್ತಿಯಲ್ಲಿ ತ್ರೈಮಾಸಿಕ ಕಾಮಗಾರಿ ಕೈಗೊಂಡಿರುವುದರಿಂದ ಫೆ.12ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ 66/11 ಕೆವಿ ಅಂಕಸಂದ್ರ ಉಪಸ್ಥಾವರದಿಂದ ವಿದ್ಯುತ್‌ ಸರಬರಾಜಾಗುವ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್

ಕೆಪಿಟಿಸಿಎಲ್ ವತಿಯಿಂದ ಜಾಲಹಳ್ಳಿ ವಿಭಾಗದ 66/11 ಕೆವಿ ಎಂಇಐ ಉಪಕೇಂದ್ರದಲ್ಲಿ ತುರ್ತು ನಿರ್ವ ಹಣಾ ಕಾರ್ಯ ಹಮ್ಮಿಕೊಂಡಿರುವ ಕಾರಣ ಈ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್​ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ

ಎಜಿಬಿಜಿ-ಲೇಔಟ್, ಭೈರವೇಶ್ವರ ಹೋಟೆಲ್, ಕಾವೇರಿ ಲೇಔಟ್, ಬೋನ್‌ವಿಲ್ ಏರಿಯಾ ಚಿಕ್ಕಸಂದ್ರ ಐರ್ ಲೇಔಟ್, ಗಣೇಶ ಸಾ ಮಿಲ್, ಕೆಂಪೇಗೌಡ ನಗರ, ಬೃಂದಾವನ ಲೇಔಟ್, ಕಲ್ಯಾಣನಗರ ಬಾಗಲಗುಂಟೆ, ಸೌರ ಲೇಔಟ್, ಮೀನಾಕ್ಷಿ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಪವರ್ ಕಟ್ ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link