ಧ್ರುವ ಸರ್ಜಾ (Dhruva Sarja) ನಟನೆಯ ‘ಕೆಡಿ’ ಸಿನಿಮಾದ ಹಾಡು ಬಿಡುಗಡೆ ಆಗಿದೆ. ನೋರಾ ಫತೇಹಿ ಮತ್ತು ಸಂಜಯ್ ದತ್ ಅವರುಗಳ ಹಾಡು ಇದಾಗಿದ್ದು, ಅದರಲ್ಲೂ ಹಾಡಿನಲ್ಲಿ ಮೇನ್ ಹೈಲೈಟ್ ನೋರಾ ಫತೇಹಿ. ಅದ್ಧೂರಿ ಕಾರ್ಯಕ್ರಮದಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದ್ದು ನೋರಾ ಫತೇಹಿ ಸಹ ಕಾರ್ಯಕ್ರಮದ ಅತಿಥಿಯಾಗಿ ಆಗಮಿಸಿದ್ದರು. ವಿಶೇಷೆಂದರೆ ಗ್ಲಾಮರ್ ಕ್ವೀನ್ ನೋರಾ ಫತೇಹಿ ರೇಷ್ಮೆ ಸೀರೆಯುಟ್ಟು ಕಾರ್ಯಕ್ರಮಕ್ಕೆ ಬಂದಿದ್ದರು. ಕಾರ್ಯಕ್ರಮದಲ್ಲಿ ನಟ ಪ್ರೇಮ್, ಧ್ರುವ ಸರ್ಜಾ ಇನ್ನೂ ಹಲವರ ಬಗ್ಗೆ ಮಾತನಾಡಿದರು. ವಿಡಿಯೋ ನೋಡಿ…
ಸಾಯಿ ಪಲ್ಲವಿ (Sai Pallavi), ದಕ್ಷಿಣ ಭಾರತದ ಸೂಪರ್ ಸ್ಟಾರ್ ನಟಿ. ತಮ್ಮ ಸಮಕಾಲೀನ ಇತರೆ ನಟಿಯರಿಗಿಂತಲೂ ಬಹಳ ಭಿನ್ನ ನಟಿ ಸಾಯಿ ಪಲ್ಲವಿ. ತಮ್ಮ ಸಿನಿಮಾಗಳ ಆಯ್ಕೆ, ವ್ಯಕ್ತಿತ್ವ ಇತರೆ ಕಾರಣಗಳಿಂದಾಗಿ ಸಾಯಿ ಪಲ್ಲವಿ ಭಾರಿ ದೊಡ್ಡ ಅಭಿಮಾನಿ ವರ್ಗವನ್ನು ಪಡೆದುಕೊಂಡಿದ್ದಾರೆ. ಇದೀಗ ಸಾಯಿ ಪಲ್ಲವಿ ಬಾಲಿವುಡ್ಗೆ ಸಹ ಹಾರಿದ್ದಾರೆ. ಅಲ್ಲಿ ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಇದೀಗ ಮೂರನೇ ಸಿನಿಮಾ ನಟನೆಯ ಅವಕಾಶ ಪಡೆದುಕೊಂಡಿದ್ದು, ಇದು ಒಂದು ರೀತಿ ಅವರ ಡ್ರೀಮ್ ಪ್ರಾಜೆಕ್ಟ್ ಸಹ ಹೌದೆನ್ನಬಹುದು.
ಭಾರತೀಯ ಚಿತ್ರರಂಗದ ಖ್ಯಾತ ತಾರೆ ಮಧುಬಾಲ ಜೀವನ ಆಧರಿಸಿದ ಸಿನಿಮಾ ಬಾಲಿವುಡ್ನಲ್ಲಿ ನಿರ್ಮಾಣ ಆಗುತ್ತಿದ್ದು, ನಟಿ ಸಾಯಿ ಪಲ್ಲವಿ, ಮಧುಬಾಲ ಅವರ ಪಾತ್ರದಲ್ಲಿ ನಟಿಸಲಿದ್ದಾರೆ. ಯಾವುದೇ ನಟಿಗಾದರೂ ಮಧುಬಾಲ ಅಂಥಹಾ ಲಿಜೆಂಡರಿ ನಟಿಯ ಪಾತ್ರದಲ್ಲಿ ನಟಿಸುವುದು ಕನಸೇ ಸರಿ. ಇದೀಗ ಸಾಯಿ ಪಲ್ಲವಿಗೆ ಆ ಅವಕಾಶ ಅರಸಿ ಬಂದಿದೆ.
ಸಿನಿಮಾದ ಮತ್ತೊಂದು ವಿಶೇಷವೆಂದರೆ ಲಿಜೆಂಡರಿ ಮಧುಬಾಲ ಜೀವನ ಆಧರಿತ ಸಿನಿಮಾ ನಿರ್ದೇಶಿಸುತ್ತಿರುವುದು ಬಾಲಿವುಡ್ ಸ್ಟಾರ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಇವರ ನಿರ್ದೇಶನದ ಸಿನಿಮಾನಲ್ಲಿ ನಟಿಸಲು ಬಾಲಿವುಡ್ನ ದೊಡ್ಡ ದೊಡ್ಡ ಸೂಪರ್ ಸ್ಟಾರ್ ನಟ-ನಟಿಯರೇ ತುದಿಗಾಲಲ್ಲಿ ಕಾಯುತ್ತಾರೆ ಅಂಥಹುದರಲ್ಲಿ ಸಂಜಯ್ ಲೀಲಾ ಬನ್ಸಾಲಿ ದೊಡ್ಡ ಪ್ರಾಜೆಕ್ಟ್ಗೆ ಮತ್ತು ಅಷ್ಟೇ ದೊಡ್ಡ ಪಾತ್ರಕ್ಕೆ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದು ಸಾಮಾನ್ಯ ವಿಷಯವಲ್ಲ. ಈ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಮತ್ತು ಅನಿತ್ ಪಡ್ಡಾ ಹೆಸರು ಸಹ ಕೇಳಿ ಬಂದಿತ್ತಂತೆ. ಆದರೆ ಸಾಯಿ ಪಲ್ಲವಿಯೇ ಈ ಪಾತ್ರಕ್ಕೆ ಫೈನಲ್ ಆಗಿದ್ದಾರೆ ಎನ್ನಲಾಗುತ್ತಿದೆ.
ಮಧುಬಾಲ ಪಾತ್ರದಲ್ಲಿ ನಟಿಸುತ್ತಿರುವ ಸಾಯಿ ಪಲ್ಲವಿ, ಇದೇ ಸಮಯದಲ್ಲಿ ಕನ್ನಡದ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನ ಆಧರಿಸಿದ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಒಟ್ಟಿಗೆ ಇಬ್ಬರು ದಿಗ್ಗಜರು ಜೀವನ ಆಧರಿತ ಸಿನಿಮಾನಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಇವುಗಳ ಜೊತೆಗೆ ಸಾಯಿ ಪಲ್ಲವಿ ಈಗಾಗಲೇ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗೆ ‘ಏಕ್ ದಿನ್’ ಹೆಸರಿನ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಅದರ ಜೊತೆಗೆ ರಣ್ಬೀರ್ ಕಪೂರ್-ಯಶ್ ನಟನೆಯ ‘ರಾಮಾಯಣ’ ಸಿನಿಮಾನಲ್ಲಿ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ.
ಯಾದಗಿರಿ, ಮಾರ್ಚ್ 14: ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಭೀಕರ ಯುದ್ಧದ ಪರಿಣಾಮ ಗಲ್ಫ್ ರಾಷ್ಟ್ರಗಳ ಮೇಲಷ್ಟೇ ಅಲ್ಲ, ಯಾದಗಿರಿ (Yadagiri) ಜಿಲ್ಲೆಯ ವ್ಯಾಪಾರ ವಹಿವಾಟಿನ ಮೇಲೂ ಬೀರಲು ಆರಂಭಿಸಿದೆ. ಮೊಟ್ಟೆ ಉದ್ಯಮ, ಅಕ್ಕಿ ರಫ್ತು ಹಾಗೂ ಹೋಟೆಲ್ ಉದ್ಯಮಕ್ಕೂ ಯುದ್ಧದ ಎಫೆಕ್ಟ್ ತಟ್ಟಿದ್ದು, ಉದ್ಯಮಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೊಟ್ಟೆ ದರ ಕುಸಿತ
ಯಾದಗಿರಿ ಜಿಲ್ಲೆಯಿಂದ ಗಲ್ಫ್ ರಾಷ್ಟ್ರಗಳಿಗೆ ಲಕ್ಷಾಂತರ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿತ್ತು. ಕತಾರ್, ಕುವೈತ್, ಸೌದಿ ಅರೇಬಿಯಾ ಹಾಗೂ ದುಬೈ ಸೇರಿದಂತೆ ಹಲವು ದೇಶಗಳಿಗೆ ವ್ಯಾಪಾರಸ್ಥರು ಕೋಳಿ ಫಾರ್ಮ್‌ಗಳಿಂದ ಮೊಟ್ಟೆ ಖರೀದಿಸಿ ವಿದೇಶಕ್ಕೆ ಕಳುಹಿಸುತ್ತಿದ್ದರು. ಆದರೆ ಯುದ್ಧದ ಪರಿಣಾಮ ರಫ್ತು ಸಂಪೂರ್ಣ ಬಂದ್ ಆಗಿರುವ ಹಿನ್ನೆಲೆ ಮೊಟ್ಟೆ ಮಾರುಕಟ್ಟೆಯಲ್ಲಿ ದರ ಕುಸಿತ ಕಂಡಿದೆ. ಮೊದಲು 6 ರೂಪಾಯಿಗೆ ಒಂದು ಮಾರಾಟವಾಗುತ್ತಿದ್ದ ಮೊಟ್ಟೆ ಈಗ ಕೇವಲ 4 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ವ್ಯಾಪಾರಸ್ಥರು ಸ್ಥಳೀಯ ಮಾರುಕಟ್ಟೆಯಲ್ಲೇ ಕಡಿಮೆ ದರಕ್ಕೆ ಮೊಟ್ಟೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನೊಂದೆಡೆ ಯುದ್ಧದ ಪರಿಣಾಮ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಕೊರತೆ ಕೂಡ ಎದುರಾಗಿದೆ. ಯಾದಗಿರಿ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗುರುಮೂರ್ತಿ ಖಾನಾವಳಿ ಸಿಲಿಂಡರ್ ಸಿಗದೆ ಬಂದ್ ಆಗಿದೆ. ಕಳೆದ ಎರಡು ದಿನಗಳಿಂದ ಖಾನಾವಳಿಯ ಶೆಟರ್ ಹಾಕಿದ್ದು, ದಿನಕ್ಕೆ ಸುಮಾರು 300ಕ್ಕೂ ಹೆಚ್ಚು ಜನ ಊಟ ಮಾಡುತ್ತಿದ್ದ ಹೋಟೆಲ್ ಈಗ ಸ್ಥಗಿತಗೊಂಡಿದೆ. ದುಪ್ಪಟ್ಟು ಹಣ ಕೊಡ್ತೀವಿ ಅಂದ್ರೂ ಸಿಲಿಂಡರ್ ಸಿಗ್ತಿಲ್ಲ ಎಂದು ಮಾಲೀಕರು ಹೇಳುತ್ತಿದ್ದಾರೆ. ಇದರ ಪರಿಣಾಮ ಕೆಲಸ ಮಾಡುವ ಕಾರ್ಮಿಕರಿಗೆ ಸಂಬಳ ನೀಡುವುದೂ ಕಷ್ಟವಾಗಿದೆ ಎನ್ನುತ್ತಿದ್ದಾರೆ.
ಅಕ್ಕಿ ರಫ್ತುಗೂ ಬಿತ್ತು ಬ್ರೇಕ್
ಇನ್ನೊಂದು ಕಡೆ ಯುದ್ಧದ ಪರಿಣಾಮ ಯಾದಗಿರಿಯ ಅಕ್ಕಿ ಉದ್ಯಮಕ್ಕೂ ತಟ್ಟಿದೆ. ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿದ್ದ ಸೋನಾ ಮಸೂರಿ ಅಕ್ಕಿ ವ್ಯಾಪಾರ ಸ್ಥಗಿತಗೊಂಡ ಹಿನ್ನೆಲೆ ಜಿಲ್ಲೆಯ ಹಲವು ರೈಸ್ ಮಿಲ್‌ಗಳು ಬಂದ್ ಆಗಿವೆ. ಜಿಲ್ಲೆಯಲ್ಲಿ ಒಟ್ಟು 28 ರೈಸ್ ಮಿಲ್‌ಗಳಿಂದ ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಕ್ವಿಂಟಲ್ ಅಕ್ಕಿ ಗುಜರಾತ್ ಹಾಗೂ ಮಹಾರಾಷ್ಟ್ರ ಮೂಲಕ ಗಲ್ಫ್ ರಾಷ್ಟ್ರಗಳಿಗೆ ರಫ್ತು ಆಗುತ್ತಿತ್ತು. ಆದರೆ ಕಳೆದ ನಾಲ್ಕೈದು ದಿನಗಳಿಂದ ಮಿಲ್‌ಗಳು ಬಂದ್ ಆಗಿದ್ದು, ಕಾರ್ಮಿಕರು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೊತೆಗೆ ವಿದ್ಯುತ್ ಬಿಲ್, ಬ್ಯಾಂಕ್ ಸಾಲ ಹಾಗೂ ರೈತರಿಗೆ ನೀಡಬೇಕಾದ ಹಣ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.
ಒಟ್ಟಿನಲ್ಲಿ ಇರಾನ್ ಮತ್ತು ಇಸ್ರೇಲ್ ಯುದ್ಧದ ಪರಿಣಾಮ ದೂರದ ಯಾದಗಿರಿ ಜಿಲ್ಲೆಯ ವ್ಯಾಪಾರ ವಹಿವಾಟಿನ ಮೇಲೂ ದೊಡ್ಡ ಹೊಡೆತ ಬಿದ್ದಿದ್ದು, ಮೊಟ್ಟೆ ಉದ್ಯಮ, ಹೋಟೆಲ್ ಉದ್ಯಮ ಹಾಗೂ ಅಕ್ಕಿ ರಫ್ತು ಕ್ಷೇತ್ರದಲ್ಲಿ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಉದ್ಯಮಿಗಳು ಮತ್ತಷ್ಟು ನಷ್ಟ ಅನುಭವಿಸುವ ಭೀತಿ ಎದುರಾಗಿದೆ.
ನವದೆಹಲಿ, ಮಾರ್ಚ್ 14: ಇರಾನ್- ಇಸ್ರೇಲ್ ನಡುವೆ ದಾಳಿ-ಪ್ರತಿದಾಳಿಗಳು ನಡೆಯುತ್ತಲೇ ಇವೆ. ನಿನ್ನೆ (ಮಾರ್ಚ್ 13) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಮಾತನಾಡಿರುವ ವಿಡಿಯೋವೊಂದು ಅವರು ಸುರಕ್ಷಿತವಾಗಿದ್ದಾರಾ ಎಂಬ ಬಗ್ಗೆ ಅನುಮಾನ ಹುಟ್ಟುಹಾಕಿದೆ. ನೆತನ್ಯಾಹು ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಹಲವು ದಿನಗಳಿಂದ ಅವರು ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಇದೀಗ ಇದ್ದಕ್ಕಿದ್ದಂತೆ ವಿಡಿಯೋ ಸಂದೇಶ ಹರಿಬಿಟ್ಟಿದ್ದು ಒಂದು ಅನುಮಾನವಾದರೆ ಆ ವಿಡಿಯೋದಲ್ಲಿ ನೆತನ್ಯಾಹು ಕೈಯಲ್ಲಿ 6 ಬೆರಳಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಡಿಯೋ ಎಐ (ಕೃತಕ ಬುದ್ಧಿಮತ್ತೆ)ಯದ್ದು ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಆ ವಿಡಿಯೋದಲ್ಲಿ ನೆತನ್ಯಾಹು ಅವರ ಒಂದು ಕೈಯಲ್ಲಿ 6 ಬೆರಳುಗಳು ಇರುವಂತೆ ಕಾಣುತ್ತಿದೆ. ಹೀಗಾಗಿ, ಇದು ಎಐನಿಂದ ಎಡಿಟ್ ಮಾಡಲಾದ ವಿಡಿಯೋ ಎಂಬ ಅನುಮಾನವನ್ನು ಹುಟ್ಟುಹಾಕಿತು. ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ನೆತನ್ಯಾಹು ಶುಕ್ರವಾರ ವಿಡಿಯೋವನ್ನು ಹಂಚಿಕೊಂಡಿದ್ದರು. ಇಸ್ರೇಲ್ ಮತ್ತು ಇರಾನ್ ಯುದ್ಧದ ಕುರಿತು ಅವರು ಹೇಳಿಕೆಗಳನ್ನು ನೀಡಿದ್ದರು. ಫೆಬ್ರವರಿ 28ರಂದು ಸಂಘರ್ಷದ ಮೊದಲ ದಿನ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲೊ ಅಲಿ ಖಮೇನಿಯನ್ನು ದಾಳಿಯಲ್ಲಿ ಕೊಲ್ಲಲಾಗಿತ್ತು.
Last time I checked, humans usually dont have 6 fingers…. AI does.
ನೆತನ್ಯಾಹು ಅವರ ವಿಡಿಯೋದಲ್ಲಿ ಇಸ್ರೇಲ್ ಪ್ರಧಾನಿಯ ಬಲಗೈಯಲ್ಲಿ 6 ಬೆರಳುಗಳನ್ನು ಹೊಂದಿರುವಂತೆ ತೋರುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ‘ಕ್ಲಾಸಿಕ್ AI ಫಿಂಗರ್ ಗ್ಲಿಚ್’, ‘ಅವರ ಕೈಯನ್ನು ಹತ್ತಿರದಿಂದ ನೋಡಿ’ ಎಂಬಂತಹ ಕ್ಯಾಪ್ಷನ್ ಹಾಕಿರುವ ನೆಟ್ಟಿಗರು ಅದು AI ಎಡಿಟೆಡ್ ವಿಡಿಯೋ ಎಂಬ ಅನುಮಾನ ಹೊರಹಾಕಿದ್ದಾರೆ. ಇನ್ನೂ ಕೆಲವರು ಈ ಯುದ್ಧದಲ್ಲಿ ನೆತನ್ಯಾಹು ಸತ್ತಿದ್ದಾರೆ ಎಂದು ಕೂಡ ಕಮೆಂಟ್ ಹಾಕಿದ್ದಾರೆ.
אתמול במסיבת העיתונאים עמדתי על היעדים הברורים של המערכה: פגיעה במשטר הטרור באיראן, המשך המאבק מול שלוחותיו, והבטחת ביטחונה ועתידה של ישראל.
אנחנו לא מחכים. אנחנו יוזמים, אנחנו תוקפים ואנחנו עושים זאת בעוצמה.
— Benjamin Netanyahu – בנימין נתניהו (@netanyahu) March 13, 2026
ಇನ್ನು ಕೆಲವರು ಇದು ಆಪ್ಟಿಕಲ್ ಭ್ರಮೆ ಎಂದು ಕಮೆಂಟ್ ಹಾಕುವ ಮೂಲಕ ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಸೋಷಿಯಲ್ ಮೀಡಿಯಾದಲ್ಲಿ ನೆತನ್ಯಾಹು ಅವರ ಈ ವಿಡಿಯೋ ಬಗ್ಗೆ ಚರ್ಚೆಗಳು ಮುಂದುವರೆದಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರೇಮ್ (Prem) ನಿರ್ದೇಶಿಸಿ, ಧ್ರುವ ಸರ್ಜಾ, ರಿಷ್ಮಾ ನಾಣಯ್ಯ ನಟಿಸಿರುವ ‘ಕೆಡಿ’ ಸಿನಿಮಾದ ಹಾಡು ಇಂದು (ಮಾರ್ಚ್ 14) ಅದ್ಧೂರಿಯಾಗಿ ಬಿಡುಗಡೆ ಆಗಿದೆ. ನೋರಾ ಫತೇಹಿ ಸಖತ್ ಆಗಿ ಡ್ಯಾನ್ಸ್ ಮಾಡಿರುವ ‘ಸೆರಗು ಸರ್ಸು’ ಹಾಡು ಇಂದು ಬಿಡುಗಡೆ ಆಗಿದೆ. ಹಾಡಿನ ಬಿಡುಗಡೆ ಅದ್ಧೂರಿಯಾಗಿ ನಡೆದಿದ್ದು, ಸಿನಿಮಾದ ನಟರು, ಪ್ರಮುಖ ತಂತ್ರಜ್ಞರು ಭಾಗಿ ಆಗಿದ್ದರು. ನಟಿ ರಕ್ಷಿತಾ ಮಾತನಾಡಿ, ತಮ್ಮ ಸಿನಿಮಾ ಪಯಣ ನೆನಪಿಸಿಕೊಂಡ ಜೊತೆಗೆ ಅರ್ಜುನ್ ಜನ್ಯ, ಇನ್ನೂ ಕೆಲವರ ಸಹಕಾರ ನೆನಪು ಮಾಡಿಕೊಂಡರು. ನೋರಾ ಫತೇಹಿಯನ್ನು ಸಹ ರಕ್ಷಿತಾ ಸಖತ್ ಆಗಿ ಕೊಂಡಾಡಿದ್ದಾರೆ ವಿಡಿಯೋ ನೋಡಿ…
ಢಾಕಾದಲ್ಲಿ ನಡೆದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ಸರಣಿಯಲ್ಲಿ ಸಮಬಲ ಸಾಧಿಸಿತು. ಈ ಪಂದ್ಯ ಈ ಫಲಿತಾಂಶದಿಂದ ಸದ್ದು ಮಾಡುವುದಕ್ಕಿಂತ ಪಂದ್ಯದ ಸಮಯದಲ್ಲಿ ನಡೆದ ರನೌಟ್ನಿಂದ ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿತು. ಬಾಂಗ್ಲಾದೇಶ ಬೌಲರ್ಗೆ ಸಹಾಯ ಮಾಡಲು ಹೋಗಿ ರನೌಟ್ಗೆ ಬಲಿಯಾಗಿದ್ದ ಪಾಕಿಸ್ತಾನ ತಂಡದ ಸಲ್ಮಾನ್ ಅಲಿ ಆಘಾ (Salman Agha ) ಮೈದಾನದಲ್ಲಿಯೇ ತಮ್ಮ ಆಕ್ರೋಶ ಹೊರಹಾಕಿದ್ದರು. ಜೊತೆಗೆ ತಮ್ಮ ಹೆಲ್ಮೆಟ್, ಬ್ಯಾಟ್ ಮತ್ತು ಕೈ ಗ್ಲೌಸ್ಗಳನ್ನು ನೆಲಕ್ಕೆ ಬಿಸಾಡಿ ಐಸಿಸಿ (ICC) ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದರು. ಹೀಗಾಗಿ ಸಲ್ಮಾನ್ ಆಘಾಗೆ ಐಸಿಸಿಯಿಂದ ಶಿಕ್ಷೆ ಖಚಿತವಾಗಿತ್ತು. ಅದರಂತೆ ಪಂದ್ಯ ಮುಗಿದ ಒಂದು ದಿನದ ಬಳಿಕ ಐಸಿಸಿ ಸಲ್ಮಾನ್ ಆಘಾಕ್ಕೆ ಶಿಕ್ಷೆ ವಿಧಿಸಿದೆ.
ಆಘಾಗೆ 1 ಡಿಮೆರಿಂಟ್ ಅಂಕ
ಸಲ್ಮಾನ್ ಆಘಾ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.2 ಅನ್ನು ಉಲ್ಲಂಘಿಸಿರುವುದು ಖಚಿತವಾಗಿದ್ದು, ಪಂದ್ಯದ ಮರುದಿನ, ಐಸಿಸಿ ಸಲ್ಮಾನ್ ಆಘಾಗೆ ಶಿಕ್ಷೆ ವಿಧಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಸಿಸಿ, ಪಂದ್ಯದ ನಂತರ ಸಲ್ಮಾನ್ ಆಘಾ, ಮ್ಯಾಚ್ ರೆಫ್ರಿ ನೀಮೂರ್ ರಶೀದ್ ರಾಹುಲ್ ಅವರ ಮುಂದೆ ವಿಚಾರಣೆಗೆ ಹಾಜರಾಗಿದ್ದು, ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಆದಾಗ್ಯೂ, ಐಸಿಸಿ ಆಘಾ ಅವರ ಪಂದ್ಯ ಶುಲ್ಕವನ್ನು ಕಡಿತಗೊಳಿಸದಿರುವುದು ಅಚ್ಚರಿಯ ಸಂಗತಿಯಾಗಿದೆ. ವಾಸ್ತವವಾಗಿ ಈ ರೀತಿಯ ನಿಯಮ ಉಲ್ಲಂಘಿಸುವವರಿಗೆ ಡಿಮೆರಿಂಟ್ ಅಂಕವನ್ನು ನೀಡುವುದರ ಜೊತೆಗೆ ಇಂತಿಷ್ಟು ಪಂದ್ಯ ಶುಲ್ಕವನ್ನು ಸಹ ದಂಡವಾಗಿ ಕಟ್ಟಿಸಲಾಗುತ್ತದೆ. ಆದರೆ ಆಘಾ ವಿಚಾರದಲ್ಲಿ ಅದು ಸಂಭವಿಸಿಲ್ಲ. ಹೀಗಾಗಿ ಆಘಾ ದಂಡದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ವಿವಾದ?
ವಾಸ್ತವವಾಗಿ ಎರಡನೇ ಏಕದಿನ ಪಂದ್ಯದ ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್ ವಿಚಿತ್ರ ರನೌಟ್ಗೆ ಸಾಕ್ಷಿಯಾಯಿತು. ಬಾಂಗ್ಲಾದೇಶದ ಬೌಲರ್ ಮೆಹದಿ ಹಸನ್ ಎಸೆದ ಈ ಓವರ್‌ನ ನಾಲ್ಕನೇ ಚೆಂಡನ್ನು ರಿಜ್ವಾನ್ ನೇರವಾಗಿ ಬೌಲರ್ ಕಡೆಗೆ ಆಡಿದರು. ಇತ್ತ ನಾನ್-ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಸಲ್ಮಾನ್ ಆಘಾ ರನ್ಗಾಗಿ ತಮ್ಮ ಕ್ರೀಸ್‌ನಿಂದ ಹೊರಬಂದರಾದರೂ ಅಲ್ಲಿ ರನ್ ಇಲ್ಲದಿರುವುದನ್ನು ಗಮನಿಸಿ ಅಲ್ಲಿಯೇ ನಿಂತರು. ಅಷ್ಟರಲ್ಲಿ ರಿಜ್ವಾನ್ ಬಾರಿಸಿದ ಚೆಂಡು ಕೂಡ ಆಘಾ ಕಡೆಗೆ ಬಂತು. ಹೀಗಾಗಿ ಆಘಾ ಚೆಂಡನ್ನು ಹಿಡಿದು ಬೌಲರ್ ಮೆಹದಿ ಹಸನ್ಗೆ ರವಾನಿಸಲು ಪ್ರಯತ್ನಿಸಿದರು.
ಈ ಹಂತದಲ್ಲಿ ಚಾಣಾಕ್ಷತೆ ತೋರಿದ ಮೆಹದಿ ಹಸನ್ ಚೆಂಡನ್ನು ಹಿಡಿದು, ನೇರವಾಗಿ ಸ್ಟಂಪ್ಗೆ ಎಸೆದರು. ಇದೆಲ್ಲ ನಡೆಯುವಾಗ ಕ್ರೀಸ್‌ನಿಂದ ಹೊರಗೆ ನಿಂತಿದ್ದ ಆಘಾ, ಕ್ರೀಸ್ ಒಳಗೆ ಬರುವ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಚೆಂಡನ್ನು ಸ್ಟಂಪ್ಗೆ ಎಸೆದ ಕೂಡಲೇ ಮೆಹದಿ ಹಸನ್ ಔಟ್ಗಾಗಿ ಅಂಪೈರ್ ಬಳಿ ಮನವಿ ಮಾಡಲಾರಂಬಿಸಿದರು. ಇದನ್ನು ನೋಡಿ ಕಕ್ಕಾಬಿಕ್ಕಿಯಾದ ಆಘಾ, ಹಸನ್ ಜೊತೆಗೆ ವಾದಿಸಲು ಪ್ರಾರಂಭಿಸಿದರು. ಇತ್ತ ಫಿಲ್ಡ್ ಅಂಪೈರ್ ಮೂರನೇ ಅಂಪೈರ್ ಬಳಿ ಮರುಪರಿಶೀಲನೆಗೆ ಮನವಿ ಮಾಡಿದರು. ಎಲ್ಲವನ್ನು ಕುಲಂಕುಶವಾಗಿ ಪರಿಶೀಲಿಸಿದ ಅಂಪೈರ್, ಸಲ್ಮಾನ್ ಆಘಾ ಔಟೆಂದು ತೀರ್ಪು ನೀಡಿದರು. ಇದರಿಂದ ಇನ್ನಷ್ಟು ಕೆರಳಿದ ಆಘಾ, ತಮ್ಮ ಹೆಲ್ಮೆಟ್ ಮತ್ತು ಕೈಗವಸುಗಳನ್ನು ತೆಗೆದು ನೆಲದ ಮೇಲೆ ಎಸೆದು ಆಕ್ರೋಶ ಹೊರಹಾಕಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೊಪ್ಪಳ, ಮಾರ್ಚ್ 14: ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ಮೂರು ಜೋಡಿಗಳು ಮುನಿಸು ಮರೆತು ನ್ಯಾಯಾಲಯದಲ್ಲಿ ಮತ್ತೆ ಒಂದಾದ ಘಟನೆ ಗಂಗಾವತಿ ಒಂದನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ನಲ್ಲಿ ನಡೆದಿದೆ. ಒಂದಾದ ಜೋಡಿಗಳಿಗೆ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್, ಗುಂಡಪ್ಪ ಬಸವಣ್ಣೆಪ್ಪ ಹಳ್ಳಾಕಾಯಿ, ನಾಗೇಶ ಪಾಟೀಲ್ ಮೇಘಾ ಸೋಮಣ್ಣವರ ಸಮ್ಮುಖದಲ್ಲಿ ಮರು ಮದುವೆ ಮಾಡಿಸಲಾಗಿದೆ.
ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾದ ಹೊಸ ಹಾಡೊಂದು ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ. ಪ್ರೇಮ್ ನಿರ್ದೇಶನದ ಸಿನಿಮಾ ಎಂದರೆ ಹಾಡುಗಳು ಪಕ್ಕಾ ಸೂಪರ್ ಹಿಟ್ ಎಂಬುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ‘ಕೆಡಿ’ ಸಿನಿಮಾದ ಹಾಡೊಂದು ಬಿಡುಗಡೆ ಆಗಿದ್ದು, ಹಿಟ್ ಎನಿಸಿಕೊಂಡಿದೆ. ಇಂದು (ಮಾರ್ಚ್ 14) ‘ಕೆಡಿ’ಯ ಹೊಸ ಹಾಡು ಬಿಡುಗಡೆ ಆಗಿದೆ.
‘ಸೆರಗ ಸರ್ಸೆ’ ಎಂಬ ಈ ಹಾಡಿನ ಪ್ರೋಮೊ ಕೆಲ ದಿನಗಳ ಹಿಂದೆ ಪ್ರೇಮ್ ಹಂಚಿಕೊಂಡಿದ್ದರು. 26 ಸೆಕೆಂಡಿನ ಆ ಪ್ರೋಮೊನಲ್ಲಿ ನೋರಾ ಹಾಕಿರುವ ಸ್ಟೆಪ್ಪು ನೋಡಿಯೇ ಹಲವರು ಹಾಡಿನ ಬಿಡುಗಡೆಗೆ ಕಾಯುತ್ತಿದ್ದರು. ಅದರಂತೆ ಇಂದು ಅದ್ಧೂರಿಯಾಗಿ ಹಾಡು ಬಿಡುಗಡೆ ಆಗಿದೆ. ಪ್ರೇಮ್ ಅವರು ಹಾಡು ಬಿಡುಗಡೆಗೆ ವಿಶೇಷ ಕಾರ್ಯಕ್ರಮವನ್ನು ಸಹ ಆಯೋಜಿಸಿ, ಅದ್ಧೂರಿಯಾಗಿ ಹಾಡು ಬಿಡುಗಡೆ ಮಾಡಿದ್ದಾರೆ.
ಈಗ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಪ್ರೋಮೊನಲ್ಲಿ ಇದ್ದಿದ್ದ ನೋರಾ, ಸೆರಗು ಸರಿಸುತ್ತಿರುವ ಸ್ಟೆಪ್ಪಿನ ಜೊತೆಗೆ ಸಂಜಯ್ ದತ್ ಅವರ ಒಂದು ಹುಕ್ ಸ್ಟೆಪ್ಪಿದೆ. ಬಿಟ್ಟರೆ ಕೇವಲ ಹಾಡಿನ ಸ್ಕ್ರೀನ್ ಶಾಟ್ಗಳನ್ನೇ ಪ್ರದರ್ಶಿಸಿ ಹಾಡು ಬಿಡುಗಡೆ ಮಾಡಲಾಗಿದೆ.
ಪ್ರೇಮ್ ಅವರು ಸಾಹಿತ್ಯ ಬರೆದಿರುವ ‘ಸೆರಗ ಸರ್ಸೆ’ ಹಾಡು ಸಾಕಷ್ಟು ದ್ವಂದ್ವಾರ್ಥಗಳನ್ನು ಒಳಗೊಂಡಿದೆ. ಎಣ್ಣೆ ಅಂಗಡಿ ಯುವತಿ ಎಣ್ಣೆಯ ಬಗ್ಗೆ ಡಬಲ್ ಮೀನಿಂಗ್ ಅಲ್ಲಿ ಹೇಳುತ್ತಿರುವ ಸಾಹಿತ್ಯವನ್ನು ಒಳಗೊಂಡಿರುವ ಹಾಡು ಇದಾಗಿದ್ದು, ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಂಜಯ್ ದತ್ ಅವರಿಗೆ ‘ಖಳನಾಯಕ್’ ಎಂಬ ಕ್ಯಾಚಿ ಲೈನನ್ನೂ ಸಹ ಪ್ರೇಮ್ ಸೇರಿಸಿದ್ದಾರೆ.
‘ಕೆಡಿ’ ಸಿನಿಮಾನಲ್ಲಿ ಧ್ರುವ ಸರ್ಜಾ ಜೊತೆಗೆ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾನಲ್ಲಿ ಸಂಜಯ್ ದತ್, ವಿ ರವಿಚಂದ್ರನ್, ರಮೇಶ್ ಅರವಿಂದ್, ಜಿಸು ಸೇನ್ ಗುಪ್ತ ಇನ್ನೂ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಪ್ರೇಮ್ ನಿರ್ದೇಶಿಸಿರುವ ಈ ಸಿನಿಮಾವನ್ನು ಕೆವಿಎನ್ ನಿರ್ಮಾಣ ಮಾಡಿದೆ.
ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾ (Team India) ಸುಮಾರು ಮೂರು ತಿಂಗಳ ಕಾಲ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನಾಡುವುದಿಲ್ಲ. ಈ ಸಮಯದಲ್ಲಿ ಐಪಿಎಲ್ನಲ್ಲಿ (IPL 2026) ನಿರತವಾಗುವ ಭಾರತ ತಂಡ, ಆ ಬಳಿಕ ಜೂನ್ ತಿಂಗಳಲ್ಲಿ ಕಣಕ್ಕಿಳಿಯಲಿದೆ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯೊಂದಿಗೆ ಟೀಂ ಇಂಡಿಯಾದ ಅಭಿಯಾನ ಶುರುವಾಗಲಿದೆ. ಇದೆಲ್ಲದರ ನಡುವೆ ಹಲವಾರು ಕ್ರಿಕೆಟ್ ಮಂಡಳಿಗಳು ಟೀಂ ಇಂಡಿಯಾದ ಮುಂಬರುವ ವಿದೇಶ ಪ್ರವಾಸಗಳ ಸಮಯದಲ್ಲಿ ಹೆಚ್ಚಿನ ಏಕದಿನ ಪಂದ್ಯಗಳನ್ನು ಆಡುವಂತೆ ಬಿಸಿಸಿಐ (BCCI) ಬಳಿ ವಿನಂತಿಸುತ್ತಿವೆ ಎಂದು ವರದಿಯಾಗಿದೆ.
ರೋಹಿತ್, ಕೊಹ್ಲಿಯ ಕ್ರೇಜ್
ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ಟೀಂ ಇಂಡಿಯಾ ಈಗಾಗಲೇ ಕಾರ್ಯನಿರತ ವೇಳಾಪಟ್ಟಿಯ ಹೊರತಾಗಿಯೂ, ಶ್ರೀಲಂಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ಐರ್ಲೆಂಡ್‌ನಂತಹ ದೇಶಗಳ ಕ್ರಿಕೆಟ್ ಮಂಡಳಿಗಳು ಬಿಸಿಸಿಐ ಅನ್ನು ಸಂಪರ್ಕಿಸಿ ಈ ಪ್ರವಾಸಗಳಲ್ಲಿ ಏಕದಿನ ಸರಣಿಗಳನ್ನು ಆಡಲು ಪ್ರಸ್ತಾಪಿಸಿವೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಕ್ರೇಜ್ ಎಂದು ವರದಿಯಾಗಿದೆ. ಎಲ್ಲರಿಗೂ ತಿಳಿದಿರುವಂತೆ ಇವರಿಬ್ಬರು ಪ್ರಸ್ತುತ ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಹೀಗಾಗಿ ಇವರಿಬ್ಬರ ಆಟವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿರುತ್ತಾರೆ.
ಅಲ್ಲದೆ 2027 ರ ಏಕದಿನ ವಿಶ್ವಕಪ್ ಬಳಿಕ ಇವರಿಬ್ಬರು ಈ ಮಾದರಿಗೂ ನಿವೃತ್ತಿ ಘೋಷಿಸಬಹುದು. ಆದ್ದರಿಂದ, ವಿಶ್ವಕಪ್‌ಗೆ ಮೊದಲು ಟೀಂ ಇಂಡಿಯಾ ಪ್ರವಾಸ ಮಾಡುತ್ತಿರುವ ದೇಶಗಳ ಅಭಿಮಾನಿಗಳು ಈ ಇಬ್ಬರು ದಿಗ್ಗಜರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಹೊಂದಿರುತ್ತಾರೆ. ಹೀಗಾಗಿ ಇದರ ಲಾಭ ಪಡೆಯಲು ಮುಂದಾಗಿರುವ ವಿದೇಶಿ ಮಂಡಳಿಗಳು ಬಿಸಿಸಿಐ ಬಳಿ ಅಧಿಕ ಏಕದಿನ ಪಂದ್ಯಗಳನ್ನಾಡುವಂತೆ ಮನವಿ ಮಾಡಿವೆ. ಇತ್ತ ಬಿಸಿಸಿಐ ಕೂಡ ವಿದೇಶಿ ಮಂಡಳಿಗಳ ಮನವಿಗೆ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ. ಏಕೆಂದರೆ 2027 ರಲ್ಲಿ ಏಕದಿನ ವಿಶ್ವಕಪ್ ಇರುವ ಕಾರಣ, ಹೆಚ್ಚಿನ ಪಂದ್ಯಗಳನ್ನಾಡುವುದು ತಂಡದ ಅಭ್ಯಾಸಕ್ಕೆ ನೆರವಾಗಲಿದೆ.
ಈ ವಿದೇಶಿ ಪ್ರವಾಸಗಳಲ್ಲಿ ಏಕದಿನ ಸರಣಿ
ಐಪಿಎಲ್ ನಂತರ, ಟೀಂ ಇಂಡಿಯಾ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ. ನಂತರ ಜುಲೈನಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು ಅಲ್ಲಿ 3 ಏಕದಿನ ಮತ್ತು 5 ಟಿ 20 ಪಂದ್ಯಗಳನ್ನು ಆಡಲಿದೆ. ಇದರ ಜೊತೆಗೆ ಇನ್ನೂ ಎರಡು ಏಕದಿನ ಪಂದ್ಯಗಳನ್ನು ಸೇರಿಸುವ ಸಾಧ್ಯತೆಯಿದೆ. ಈ ಪ್ರವಾಸದಲ್ಲಿ ಐರ್ಲೆಂಡ್ ವಿರುದ್ಧವೂ ಸರಣಿಯನ್ನು ಆಡಲಾಗುತ್ತದೆ. ಆದರೆ ಈ ಪ್ರವಾಸದಲ್ಲಿ ಮೂರು ಏಕದಿನ ಪಂದ್ಯಗಳನ್ನು ಆಡಲಾಗುತ್ತದೆಯೇ ಅಥವಾ ಮೂರು ಟಿ 20 ಪಂದ್ಯಗಳನ್ನು ಆಡಲಾಗುತ್ತದೆಯೇ ಎಂದು ನಿರ್ಧರಿಸಬೇಕಾಗಿದೆ.
ಇದರ ನಂತರ ಭಾರತ ತಂಡ ಶ್ರೀಲಂಕಾ ಪ್ರವಾಸ ಮಾಡಲಿದ್ದು, ಅಲ್ಲಿ ಟಿ20 ಸರಣಿ ಬದಲಿಗೆ 3 ಏಕದಿನ ಪಂದ್ಯಗಳನ್ನು ಆಡಬೇಕೆಂದು ಲಂಕಾ ಮಂಡಳಿ ವಿನಂತಿಸಿದೆ. ಪರಿಣಾಮವಾಗಿ, ಶ್ರೀಲಂಕಾದ ವೀಕ್ಷಕರಿಗೆ ವಿರಾಟ್ ಮತ್ತು ರೋಹಿತ್ ಅವರನ್ನು ಕೊನೆಯ ಬಾರಿಗೆ ನೋಡುವ ಅವಕಾಶ ಸಿಗಬಹುದು. ಈ ಸರಣಿಯಿಂದ ಸಂಗ್ರಹವಾದ ಹಣವನ್ನು ಶ್ರೀಲಂಕಾದಲ್ಲಿ ಚಂಡಮಾರುತದಿಂದ ತೊಂದರೆಗೊಳಗಾದ ಜನರಿಗೆ ದೇಣಿಗೆ ನೀಡಲಾಗುವುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 14: ಇನ್ನೊಂದು ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇಂದು ಕೊಲ್ಕತ್ತಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ (PM Modi in West Bengal) 18,680 ಕೋಟಿ ರೂ. ಮೌಲ್ಯದ ಸಂಪರ್ಕ ಯೋಜನೆಗಳನ್ನು ಅನಾವರಣಗೊಳಿಸಿದರು. ಭಾರತದ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬಂಗಾಳದಲ್ಲಿ ಬರೆಯಲಾಗುತ್ತಿದೆ ಎಂದು ಹೇಳಿದರು. ಈ ವೇಳೆ ಪ್ರಧಾನಿ ಮೋದಿ ಟಿಎಂಸಿ ಸರ್ಕಾರವನ್ನು ಟೀಕಿಸಿದರು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ ಅವರು, “ಈ ದಬ್ಬಾಳಿಕೆಯ ಸರ್ಕಾರ ಎಷ್ಟೇ ಪ್ರಯತ್ನಿಸಿದರೂ, ಬದಲಾವಣೆಯ ಬಿರುಗಾಳಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಮೊದಲು ಕಾಂಗ್ರೆಸ್, ನಂತರ ಕಮ್ಯುನಿಸ್ಟರು ಮತ್ತು ಈಗ ಟಿಎಂಸಿ, ಈ ಪಕ್ಷಗಳು ಒಂದರ ನಂತರ ಒಂದರಂತೆ ಬಂದು ತಮ್ಮ ಜೇಬುಗಳನ್ನು ತುಂಬಿಸಿಕೊಂಡವು. ಆದರೆ ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲೇ ಇಲ್ಲ. ನಾವು ಅಧಿಕಾರಕ್ಕೆ ಬಂದ ನಂತರ ದೌರ್ಜನ್ಯದ ಆರೋಪ ಹೊತ್ತಿರುವ ಟಿಎಂಸಿ ನಾಯಕರನ್ನು ಬಿಡುವುದಿಲ್ಲ” ಎಂದಿದ್ದಾರೆ.
आज कोलकाता की धरती से पश्चिम बंगाल और पूर्वी भारत के विकास का नया अध्याय लिखा जा रहा है।
सड़क, रेलवे और पोर्ट इंफ्रास्ट्रक्चर से जुड़ी 18,000 करोड़ रुपये से अधिक की परियोजनाओं का शिलान्यास और लोकार्पण हुआ है।
ಟಿಎಂಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅಗೌರವ ತೋರಿದೆ. ಕೆಲವೇ ದಿನಗಳ ಹಿಂದೆ, ನಮ್ಮ ದೇಶದ ರಾಷ್ಟ್ರಪತಿ, ಆದಿವಾಸಿ ಸಮುದಾಯದ ಮಗಳಾದ ದ್ರೌಪದಿ ಮುರ್ಮು ಅವರು ಬಂಗಾಳಕ್ಕೆ ಬಂದಿದ್ದರು. ಅವರು ಸಂತಾಲ್ ಆದಿವಾಸಿ ಸಂಪ್ರದಾಯದ ಪವಿತ್ರ ಉತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ದುರಹಂಕಾರದಲ್ಲಿ ಮುಳುಗಿರುವ ಈ ನಿರ್ದಯ ಸರ್ಕಾರವು ಆ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಅವ್ಯವಸ್ಥೆಗೊಳಪಡಿಸಿತು” ಎಂದು ಪ್ರಧಾನಿ ಮೋದಿ ಹೇಳಿದರು.
#WATCH | Kolkata, West Bengal: Prime Minister Narendra Modi says, “Change in Bengal is now written on the walls and etched in the hearts of Bengal’s people as well. Now, the end of the ruthless government from Bengal is inevitable…”
“ಕೇಂದ್ರ ಸರ್ಕಾರ ಪ್ರಾರಂಭಿಸಿದ ಹಲವಾರು ಕಲ್ಯಾಣ ಯೋಜನೆಗಳನ್ನು ತಡೆಯುವ ಮೂಲಕ ತೃಣಮೂಲ ಕಾಂಗ್ರೆಸ್ ಬಂಗಾಳ ರಾಜ್ಯದಲ್ಲಿ ಅಭಿವೃದ್ಧಿಯನ್ನು ತಡೆಯುತ್ತಿದೆ. ಟಿಎಂಸಿ ತಾನೂ ಕೆಲಸ ಮಾಡುವುದಿಲ್ಲ, ಇತರರಿಗೂ ಕೆಲಸ ಮಾಡಲು ಬಿಡುವುದಿಲ್ಲ. ಜನರಿಗೆ ಪ್ರಯೋಜನಕಾರಿಯಾಗುವ ಯೋಜನೆಗಳನ್ನು ರಾಜ್ಯ ಸರ್ಕಾರ ನಿಲ್ಲಿಸುತ್ತಿದೆ” ಎಂದು ಪ್ರಧಾನಿ ಮೋದಿ ಆರೋಪಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ