Headlines

Chanakya Niti: ಜೀವನದಲ್ಲಿ ಸಂತೋಷವಾಗಿರಬೇಕೆಂದರೆ ಚಾಣಕ್ಯರ ಈ ತತ್ವಗಳನ್ನು ಅನುಸರಿಸಿ

ಜೀವನದಲ್ಲಿ (life) ಹ್ಯಾಪಿ ಆಗಿರ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ಆದರೆ ಇಂದಿನ ಈ ಬ್ಯುಸಿ ಜೀವನಶೈಲಿಯ ಕಾರಣ ಹೆಚ್ಚಿನವರು ಒತ್ತಡದಲ್ಲಿಯೇ ಜೀವನವನ್ನು ನಡೆಸುತ್ತಿದ್ದಾರೆ. ಹೌದು ಹೆಚ್ಚಿನವರಿಗೆ ಇಂದು ಸಂತೋಷವನ್ನು ಕಂಡುಕೊಳ್ಳುವುದೇ ಬಹುದೊಡ್ಡ ಸವಾಲಾಗಿದೆ. ನೀವು ಕೂಡ ಇದೇ ರೀತಿ ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ಬಯಸುತ್ತಿದ್ದೀರಾ? ಹಾಗಿದ್ರೆ ಚಾಣಕ್ಯರು ಹೇಳಿರುವ ಈ ಮಾತುಗಳನ್ನು ತಪ್ಪದೆ ಪಾಲಿಸಿ. ಇದರಿಂದ ನೀವು ಖಂಡಿತವಾಗಿ ಜೀವನದಲ್ಲಿ ಖುಷಿ ಖುಷಿಯಾಗಿರಬಹುದು. ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಗೊತ್ತಾ? ಹಿಂದಿನ ಘಟನೆಗಳ ಬಗ್ಗೆ ವಿಷಾದಿಸಬೇಡಿ:…

Read More

ಮಾರ್ಚ್ 17ರೊಳಗೆ ಇರಾನ್‌ನಿಂದ 92,700 ಮೆಟ್ರಿಕ್ ಟನ್ ಎಲ್‌ಪಿಜಿ ಬರಲಿದೆ; ಕೇಂದ್ರ ಸರ್ಕಾರ ಭರವಸೆ

ನವದೆಹಲಿ, ಮಾರ್ಚ್ 14: ದೇಶದಲ್ಲಿ ಎಲ್​ಪಿಜಿ ಸಂಗ್ರಹದಲ್ಲಿ ಯಾವುದೇ ಕೊರತೆಯಿಲ್ಲ. ಪಶ್ಚಿಮ ಏಷ್ಯಾದ ಸಂಘರ್ಷ ಹೆಚ್ಚುತ್ತಿರುವ ಮಧ್ಯೆ ದೇಶದಲ್ಲಿ ಕಚ್ಚಾ ತೈಲ, ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ (LPG Shortage) ಸಾಕಷ್ಟು ಪೂರೈಕೆ ಭಾರತದಲ್ಲಿ ಲಭ್ಯವಿದೆ. ಜನರು ವಿನಾಕಾರಣ ಆತಂಕಕ್ಕೊಳಗಾಗಿ ಬುಕಿಂಗ್ ಮಾಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಭಾರತವು ವಿಶ್ವದ ಎರಡನೇ ಅತಿದೊಡ್ಡ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಖರೀದಿದಾರ ರಾಷ್ಟ್ರವಾಗಿದ್ದು, ಇದರಲ್ಲಿ ಶೇ. 90ರಷ್ಟು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಬರುತ್ತದೆ. ಪರ್ಷಿಯನ್ ಕೊಲ್ಲಿಯಲ್ಲಿ ಎಲ್ಲಾ…

Read More

ಹುಷಾರ್..! ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ ಸಿಲಿಂಡರ್ ಬಳಸುವವರಿಗೆ ಖಡಕ್ ಎಚ್ಚರಿಕೆ

ಬೆಂಗಳೂರು, (ಮಾರ್ಚ್ 14): ಇಸ್ರೆಲ್-ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧದ (War) ಭಾರತದ (India) ಮೇಲೂ ಪರಿಣಾಮ ಬೀರುತ್ತಿದೆ. ಗಲ್ಫ್ ರಾಷ್ಟ್ರಗಳಿಂದ ಬರುತ್ತಿದ್ದ ವಸ್ತುಗಳು ನಿಂತುಕೊಂಡಿವೆ. ಅದರಲ್ಲೂ ಮುಖ್ಯವಾಗಿ ಕಚ್ಚಾ ತೈಲ ಆಮದು ಕಡಿಮೆಯಾಗಿದೆ. ಇದರಿಂದ ಗ್ಯಾಸ್ ಸಿಲಿಂಡರ್ (LPG cylinders) ಅಭಾವ ಉಂಟಾಗಿದೆ. ಕರ್ನಾಟದಲ್ಲೂ (Karnataka) ಸಹ ಕಮರ್ಷಿಯಲ್ ಸಿಲಿಂಡರ್ ಸರಬರಾಜು ಸ್ಥಗಿತಗೊಂಡಿರುವ ಬೆನ್ನಲ್ಲೇ ಹೋಟೆಲ್ ಉದ್ಯಮ ಕಂಗಾಲಾಗಿದೆ. ಇನ್ನು ಹೋಟೆಲ್, ರೆಸ್ಟೋರೆಂಟ್ ಉದ್ಯಮವನ್ನ ನಂಬಿಕೊಂಡ ವ್ಯಾಪಾರ ವಹಿವಾಟಿಗೂ ತೀವ್ರ ಹೊಡೆತ ಬಿದ್ದಿದ್ದು, ಕೆಲ ಕಡೆ…

Read More

ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ

ಧಾರವಾಡ, ಮಾರ್ಚ್​​ 14: ರಾಜ್ಯದಲ್ಲಿ ಬಿಸಿಲು ಹೆಚ್ಚಳವಾಗಿದೆ. ಜನರು ಸೆಕೆಗೆ ಬೇಸತ್ತಿದ್ದಾರೆ. ಈ ಮಧ್ಯೆ ವಿದ್ಯಾಕಾಶಿ ಧಾರವಾಡಲ್ಲಿ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಆ ಮೂಲಕ ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ವರುಣ ತಂಪೆರೆದಿದೆ. ಗುಡುಗು ಸಹಿತ ಮಳೆಯಿಂದ ಜನರ ಮೊಗದಲ್ಲಿ ಹರ್ಷ ಮೂಡಿದೆ. ಆದರೆ ಗಾಳಿ ಜೋರಾಗಿ ಬೀಸುತ್ತಿರುವುದರಿಂದ ಮಾವಿನ ಬೆಳೆಗೆ ಈ ಬಾರಿಯೂ ಮಳೆ ಕಂಟಕವಾಗಿದೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತೊರೆದ ಅನುಭವಿ

ಐಪಿಎಲ್ 2026 ಕ್ಕೆ ಎಲ್ಲಾ ತಂಡಗಳು ಬಹುತೇಕ ಸಿದ್ಧವಾಗಿವೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ಅಭ್ಯಾಸ ಶಿಬಿರಗಳನ್ನು ನಡೆಸುತ್ತಿವೆ. ಇದೆಲ್ಲದರ ನಡುವೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಮಾಜಿ ಅನುಭವಿ ಆಟಗಾರ ಹೊರನಡೆದಿದ್ದಾರೆ. ಲೀಗ್ ಪ್ರಾರಂಭವಾಗಲು ಕೇವಲ 14 ದಿನಗಳಿರುವಾಗ ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಈ ಆವೃತ್ತಿಯಲ್ಲಿ ದೆಹಲಿ ಕ್ಯಾಪಿಟಲ್ಸ್‌ನ ಭಾಗವಾಗುವುದಿಲ್ಲ ಎಂದು ಘೋಷಿಸಿದ್ದಾರೆ. ಕಳೆದ ವರ್ಷವಷ್ಟೇ ದೆಹಲಿ ತಂಡದ ಮಾರ್ಗದರ್ಶಕರಾಗಿ ಆಯ್ಕೆಯಾಗಿದ್ದ ಕೆವಿನ್ ಪೀಟರ್ಸನ್ ಮಾರ್ಚ್ 14 ರಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಈ ಘೋಷಣೆ…

Read More

‘ಗಬ್ಬರ್ ಸಿಂಗ್’ ನೆನಪಿಸುತ್ತಿದೆ ‘ಉಸ್ತಾದ್ ಭಗತ್ ಸಿಂಗ್’: ಟ್ರೈಲರ್ ಬಿಡುಗಡೆ

ನಟ, ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ (Pawan Kalyan) ನಟನೆಯ ಮತ್ತೊಂದು ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಅದುವೇ ‘ಉಸ್ತಾದ್ ಭಗತ್ ಸಿಂಗ್’. ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಪವನ್ ಕಲ್ಯಾಣ್ ಮತ್ತೊಮ್ಮೆ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪವನ್ ಕಲ್ಯಾಣ್ ಅವರಿಗೆ ದೊಡ್ಡ ಹಿಟ್ ನೀಡಿದ ‘ಗಬ್ಬರ್ ಸಿಂಗ್’ ಸಿನಿಮಾದ ಹಾಸ್ಯಮಯ ಪೊಲೀಸ್ ಪಾತ್ರಧಾರಿ ಪಾತ್ರವೇ ‘ಉಸ್ತಾದ್ ಭಗತ್ ಸಿಂಗ್’ನಲ್ಲಿಯೂ ಇರಲಿದೆ ಎಂಬುದನ್ನು ಟ್ರೈಲರ್ ಸ್ಪಷ್ಟವಾಗಿ ಹೇಳುತ್ತಿದೆ. ಪವನ್ ಕಲ್ಯಾಣ್ ಮತ್ತು ಹರೀಶ್ ಶಂಕರ್ ‘ಗಬ್ಬರ್…

Read More

ಚಿನ್ನದಾಸೆಗೆ ವೃದ್ಧೆಯನ್ನೇ ಹತ್ಯೆಗೈದು ಕಥೆ ಕಟ್ಟಿದ್ದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಅರೆಸ್ಟ್

ತುಮಕೂರು, ಮಾರ್ಚ್​​ 14: ಆ ಕೊಲೆ ಇಡಿ ಊರನ್ನೇ ಬೆಚ್ಚಿಬೀಳಿಸಿತ್ತು. ಒಂಟಿಯಾಗಿ ವಾಸವಿದ್ದ ವೃದ್ಧೆಯ ಸಾವು (kill) ಹತ್ತಾರು ಅನುಮಾನ ಹುಟ್ಟುಹಾಕಿತ್ತು. ಮನೆ ಬಾಗಿಲು ತೆಗೆದ ಪೊಲೀಸರಿಗೆ ಶವದ ಸುತ್ತ ಚೆಲ್ಲಿದ ಖಾರದ ಪುಡಿ, ಮದ್ಯದ ಬಾಟಲ್​​ಗಳು ದರೋಡೆಕೋರರ ಕಥೆ ಹೇಳುತ್ತಿದ್ದರೆ, ಹಂತಕ ಬಿಟ್ಟು ಹೋಗಿದ್ದ ಅದೊಂದು ಕ್ಲ್ಯೂ ಪರಿಚಯಸ್ಥನಿಂದಲೇ ನಡೆದ ಕೃತ್ಯ ಎನ್ನುವುದು ಬಯಲು ಮಾಡಿತ್ತು. ನಡೆದದ್ದೇನು? ಮಾರ್ಚ್​​ 10ರಂದು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಉಜ್ಜಿನಿ ಗ್ರಾಮದಲ್ಲಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು….

Read More

IPL 2026: ಆರ್​ಸಿಬಿಯ ಸಾರ್ವಕಾಲಿಕ ಪ್ಲೇಯಿಂಗ್ 11 ಹೆಸರಿಸಿದ ಡಿಕೆ; ಕೊಹ್ಲಿಗಿಲ್ಲ ನಾಯಕತ್ವ

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಮೊದಲ 20 ಪಂದ್ಯಗಳ ವೇಳಾಪಟ್ಟಿಯ ಪ್ರಕಾರ, ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್​ ಹೈದರಾಬಾದ್ (RCB vs SRH) ನಡುವೆ ನಡೆಯಲಿದೆ. ಮೊದಲ ಪಂದ್ಯಕ್ಕೆ ಆರ್​ಸಿಬಿಯ ಪ್ಲೇಯಿಂಗ್ 11 ಹೇಗಿರಲಿದೆ ಎಂಬ ಕುತೂಹದ ನಡುವೆ ತಂಡದ ಮಾಜಿ ಆಟಗಾರ ಹಾಗೂ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್ (Dinesh Karthik) ಆರ್​ಸಿಬಿಯ ಸಾರ್ವಕಾಲಿಕ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ….

Read More

ಮುಂಗಡ ತೆರಿಗೆ ಪಾವತಿಯ ಇ-ಮೇಲ್ ಬರುತ್ತಿದೆಯಾ? ಆದಾಯ ತೆರಿಗೆ ಇಲಾಖೆಯ ಸ್ಪಷ್ಟೀಕರಣ ಇಲ್ಲಿದೆ

ನವದೆಹಲಿ, ಮಾರ್ಚ್ 14: ಕಳೆದೆರಡು ದಿನಗಳಿಂದ ಅನೇಕ ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ತೆರಿಗೆದಾರರಿಗೆ ಮುಂಗಡ ತೆರಿಗೆಯ ಬಗ್ಗೆ ಆದಾಯ ತೆರಿಗೆ (Income Tax) ಇಲಾಖೆಯಿಂದ ಇಮೇಲ್‌ಗಳು ಬರುತ್ತಿವೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಈ ಬಗ್ಗೆ ಚರ್ಚೆಯೂ ಶುರುವಾಗಿದೆ. ಹೀಗಾಗಿ, ಮುಂಗಡ ತೆರಿಗೆ ಇ-ಅಭಿಯಾನದ ಅಡಿಯಲ್ಲಿ ಕಳುಹಿಸಲಾದ ಇ-ಮೇಲ್‌ಗಳ ಕುರಿತು ಆದಾಯ ತೆರಿಗೆ ಇಲಾಖೆ ಸ್ಪಷ್ಟೀಕರಣವನ್ನು ನೀಡಿದೆ. ‘ಮಹತ್ವದ ವಹಿವಾಟುಗಳ’ ಬಗ್ಗೆ ನಕಲಿ ಮುಂಗಡ ತೆರಿಗೆ ಪಾವತಿಯ ಇ-ಮೇಲ್​ಗಳು ಕೆಲವರಿಗೆ ಬರುತ್ತಿವೆ. ಅವುಗಳನ್ನು ನಿರ್ಲಕ್ಷಿಸಲು ಆದಾಯ ತೆರಿಗೆ…

Read More

ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ

ನೆಲಮಂಗಲ, ಮಾರ್ಚ್​​ 14: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ರಾಷ್ಟ್ರಪಕ್ಷಿ 6 ನವಿಲುಗಳು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಬಿಲಾಲ್ ನಗರದ ತೋಟದ ಶೆಡ್ ಬಳಿ ಒಂದೇ ಜಾಗದಲ್ಲಿ ಆರು ನವಿಲುಗಳ ಕಳೇಬರ ಪತ್ತೆಯಾಗಿದೆ. ನವಿಲುಗಳಿಗೆ ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ ವ್ಯಕ್ತವಾಗಿದೆ. ನೆಲಮಂಗಲ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆ​ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More