ದೇಹದಲ್ಲಿ ಪದೇಪದೇ ದದ್ದುಗಳು ಕಂಡುಬರುತ್ತಿದ್ದರೆ ನಿರ್ಲಕ್ಷಿಸಬೇಡಿ! ಇದು ಈ ರೋಗ ಬರುವ ಮುನ್ಸೂಚನೆ
ಅನೇಕರಿಗೆ ದೇಹದ ಮೇಲೆ ಪದೇಪದೇ ದದ್ದುಗಳು (Skin Rashes) ಅಥವಾ ಚರ್ಮದ ಮೇಲೆ ಕೆಂಪು ಕಲೆಗಳು ಕಾಣಿಸುವ ಸಮಸ್ಯೆ ಉಂಟಾಗುತ್ತದೆ. ಇದನ್ನು ಸಾಮಾನ್ಯ ಅಲರ್ಜಿ ಅಥವಾ ಹವಾಮಾನ ಪರಿಣಾಮ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ, ಏಕೆಂದರೆ ಇದು ಕೆಲವೊಮ್ಮೆ ದೇಹದಲ್ಲಿನ ಬೇರೆ ಬೇರೆ ರೀತಿಯ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು ಎಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ದದ್ದುಗಳು ಸಣ್ಣ ಕೆಂಪು ಚುಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು. ಕೆಲವರಿಗೆ ಇದರ ಜೊತೆಗೆ ಉರಿ, ಚರ್ಮದ ಊತ ಅಥವಾ ಸ್ವಲ್ಪ ನೋವು ಕಾಣಿಸಬಹುದು. ಕೆಲ…