ಪಾಟ್ನಾ, ಮಾರ್ಚ್ 14: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಆಗಮನಕ್ಕೂ ಮೊದಲು ಬೇಗುಸರೈನಲ್ಲಿರುವ ಹೆಲಿಪ್ಯಾಡ್‌ನೊಳಗೆ ನುಗ್ಗಿದ ಗೂಳಿ ಕೆಲಕಾಲ ಆತಂಕ ಸೃಷ್ಟಿಸಿತು. ಸಮೃದ್ಧಿ ಯಾತ್ರೆಯ ಭಾಗವಾಗಿ ಸಿಎಂ ಭೇಟಿಗೆ ಸಿದ್ಧತೆ ನಡೆಸುತ್ತಿದ್ದಾಗ ನಡೆದ ಈ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಹೆಲಿಪ್ಯಾಡ್ಗೆ ನುಗ್ಗಿದ ಗೂಳಿ ಪೊಲೀಸರನ್ನು ಅಟ್ಟಿಸಿಕೊಂಡು ಹೋಗಿದೆ. ಇದರಿಂದ ಹೆದರಿದ ಪೊಲೀಸರು ಜೀವ ಉಳಿಸಿಕೊಳ್ಳಲು ಮೈದಾನದಿಂದ ಹೊರಗೆ ಓಡಿದ್ದಾರೆ. ಮುಖ್ಯಮಂತ್ರಿ ಆಗಮನಕ್ಕೂ ಮುನ್ನ ಸ್ಥಳವನ್ನು ಸುರಕ್ಷಿತಗೊಳಿಸಲಾಗಿತ್ತು.
ಹೆಲಿಪ್ಯಾಡ್ ಪ್ರದೇಶವು ಬಿದಿರಿನ ಬ್ಯಾರಿಕೇಡ್‌ಗಳಿಂದ ಸುತ್ತುವರೆದಿತ್ತು. ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆದರೂ ಹೇಗೋ ಗೂಳಿ ಎಂಟ್ರಿ ಕೊಟ್ಟಿದೆ. ಈ ಘಟನೆಯ ಸಮಯದಲ್ಲಿ ಯಾರಿಗೂ ಗಾಯವಾಗದಿದ್ದರೂ, ಅನಿರೀಕ್ಷಿತವಾಗಿ ಒಳಗೆ ನುಗ್ಗಿದ ಗೂಳಿ ಹೆಲಿಪ್ಯಾಡ್‌ನಲ್ಲಿನ ಭದ್ರತಾ ವ್ಯವಸ್ಥೆಗಳ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಮನಗರ, (ಮಾರ್ಚ್ 14): ಇದೇ ಮಾರ್ಚ್ 6ರಂದು ಸಿಎಂ ಸಿದ್ದರಾಮಯ್ಯ ಮಂಡಿಸಿದ 2026ನೇ ಸಾಲಿನ ರಾಜ್ಯ ಬಜೆಟ್ ಗೆ ಆಡಳಿತರೂಢ ಪಕ್ಷದ ಶಾಸಕ ಇಕ್ಬಾಲ್ ಹುಸೇನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಹೌದು…ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರು ಮಾತನಾಡಿ ರಾಜ್ಯ ಬಜೆಟ್ ನನಗೆ ಸಮಾಧಾನ ತಂದಿಲ್ಲ. ಮುಖ್ಯಮಮಂತ್ರಿಯವರ ಮೇಲಿನ ಭರವಸೆ ಹುಸಿಯಾಗಿದೆ ಎಂದು ಸಿದ್ದರಾಮಯ್ಯ ಮೇಲೆ ಅಸಮಾಧಾನ ಹೊರಹಾಕಿದ್ದು, ಈ ಸಂಬಂಧ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇನ್ನು ಬಜೆಟ್ ಬಗ್ಗೆ ಅಸಮಾಧಾನಗೊಂಡಿರುವುದ್ಯಾಕೆ ಎನ್ನುವುದಕ್ಕೆ ಇಕ್ಬಾಲ್ ಹುಸೇನ್ ಕಾರಣ ನೀಡಿದ್ದು, ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡದಿದ್ದರಿಂದ ಅಸಮಾಧಾನಗೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ರಾಮನಗರದಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಾಸಕ ಇಕ್ಬಾಲ್ ಹುಸೇನ್, ನನ್ನ ಕ್ಷೇತ್ರದ ಬಗ್ಗೆ ಮಾತನಾಡಿದ್ದೇನೆ. ಯಾರು ಏನಾದರೂ ಹೇಳಲಿ. ನಾನು ಸಿಎಂ ಹಾಗೂ ಡಿಸಿಎಂ ಇಬ್ಬರ ಜೊತೆಗೂ ಚರ್ಚೆ ಮಾಡಿದ್ದೇನೆ. ನನ್ನ ಕ್ಷೇತ್ರದ ಬಗ್ಗೆ ತೋಡಿಕೊಂಡ ನೋವಿಗೆ ಪ್ರತಿಫಲ ಸಿಕ್ಕಿಲ್ಲ. ಹಾಗಾಗಿ ನಾನು ಮಾತನಾಡಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
2026 ರ ಐಪಿಎಲ್ಗೆ (IPL 2026) ದಿನಗಣನೆ ಆರಂಭವಾಗಿದೆ. ಲೀಗ್‌ನ 19 ನೇ ಸೀಸನ್ ಮಾರ್ಚ್ 28 ರಿಂದ ಪ್ರಾರಂಭವಾಗಲಿದೆ. ಈ ಸೀಸನ್‌ಗಾಗಿ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಬಿಸಿಸಿಐ ಆರಂಭಿಕ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಏತನ್ಮಧ್ಯೆ, ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಶಿಬಿರದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಸೀಸನ್ ಆರಂಭಕ್ಕೂ ಮುನ್ನ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಮಾಜಿ ನಾಯಕ ರೋಹಿತ್ ಶರ್ಮಾಗೆ (Rohit Sharma) ಎಚ್ಚರಿಕೆ ನೀಡಿದ್ದಾರೆ ಎಂಬ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸೋಶಿಯಲ್ ಮೀಡಿಯಾ ಪೋಸ್ಟ್ ಗಾಳಿಯಂತೆ ಹಬ್ಬವುದನ್ನು ಗಮನಿಸಿದ ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿ ಈ ಪೋಸ್ಟ್ಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವ ಕೆಲಸ ಮಾಡಿದೆ.
ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ವಾರ್ನಿಂಗ್?
2026 ರ ಐಪಿಎಲ್ ಆರಂಭಕ್ಕೂ ಮುನ್ನ, ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಮಾಜಿ ನಾಯಕ ರೋಹಿತ್ ಶರ್ಮಾಗೆ ಎಚ್ಚರಿಕೆ ನೀಡಿದ್ದಾರೆ ಎಂಬ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಡಿದೆ. ವೈರಲ್ ಆಗಿರುವ ಪೋಸ್ಟ್‌ನಲ್ಲಿ, ಐಪಿಎಲ್‌ನಲ್ಲಿ ರನ್ ಬರ ಎದುರಿಸುತ್ತಿರುವ ರೋಹಿತ್ ಶರ್ಮಾಗೆ ಹಾರ್ದಿಕ್ ಪಾಂಡ್ಯ ಎಚ್ಚರಿಕೆ ನೀಡಿದ್ದು, ಈ ಬಾರಿ ರನ್ ಗಳಿಸದಿದ್ದರೆ ಅವರನ್ನು ತಂಡದಲ್ಲಿ ಆಡಿಸಲು ಸಾಧ್ಯವಿಲ್ಲ ಎಂದು ಮುಂಬೈ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಮಾತ್ರವಲ್ಲದೆ ರೋಹಿತ್ ಅವರ ಪ್ರದರ್ಶನದ ಬಗ್ಗೆ ಮ್ಯಾನೇಜ್‌ಮೆಂಟ್ ಕೂಡ ಅಸಮಾಧಾನಗೊಂಡಿದೆ ಎಂದು ಬರೆಯಲಾಗಿದೆ.
ಆಕ್ಸಿಜನ್ ಎಂಬ ಹೆಸರಿನ ಖಾತೆಯಿಂದ ಈ ಪೋಸ್ಟ್ ಪ್ರಕಟವಾಗಿದ್ದು, ಕೆಲವೇ ನಿಮಿಷಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ತಲ್ಲಣ ಸೃಷ್ಟಿಸಿದೆ. ಇತ್ತ ಈ ಪೋಸ್ಟ್ ನೋಡಿದ ರೋಹಿತ್ ಅಭಿಮಾನಿಗಳು ಪಾಂಡ್ಯ ವಿರುದ್ಧ ಕಿಡಿಕಾರಲು ಶುರು ಮಾಡಿದ್ದಾರೆ. ಪಾಂಡ್ಯ ಮೇಲೆ ನಿಂದನೆಗಳ ಸುರಿಮಳೆಗೈಯಲಾರಂಭಿಸಿದ್ದಾರೆ. ಈ ಪೋಸ್ಟ್ ನೋಡಿ ಕೂಡಲೇ ಎಚ್ಚೆತ್ತುಕೊಂಡಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ, ಹಾರ್ದಿಕ್ ಪಾಂಡ್ಯರ GIF ಅನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ‘ಹಾಗೆನಾದರೂ ಇದೆಯಾ’ ಎಂದು ಹಾರ್ದಿಕ್ರನ್ನು ತಮಾಷೆಯಾಗಿ ಪ್ರಶಸ್ತಿದೆ. ಇದರ ಜೊತೆಗೆ ತಮಾಷೆಯ ಎಮೋಜಿಯನ್ನು ಹಂಚಿಕೊಂಡಿದೆ. ಅಂದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಪೋಸ್ಟ್‌ನಲ್ಲಿ ನಿಜಾಂಶವಿಲ್ಲ. ಇದೆಲ್ಲ ಶುದ್ಧ ಕಟ್ಟುಕತೆ ಎಂದು ಮುಂಬೈ ಇಂಡಿಯನ್ಸ್ ಖಚಿತ ಪಡಿಸಿದೆ.
ವಾಸ್ತವವಾಗಿ 2013 ರಿಂದ ಯಾವುದೇ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮಾ 500 ರನ್ ಗಳಿಸಿಲ್ಲ. ಕಳೆದ ಆವೃತ್ತಿಯಲ್ಲಿ 15 ಪಂದ್ಯಗಳನ್ನಾಡಿದ್ದ ರೋಹಿತ್ 418 ರನ್ ಕಲೆಹಾಕಿದ್ದರು. ಆದಾಗ್ಯೂ ರೋಹಿತ್ ಹಾಗೂ ಹಾರ್ದಿಕ್ ನಡುವೆ ಮನಸ್ತಾಪವಿದೆ ಎಂಬ ಸುಳ್ಳು ಸುದ್ದಿಯನ್ನು ಹುಟ್ಟುಹಾಕಲಾಗಿದೆ. ಇವರಿಬ್ಬರು ಮುಂಬೈ ತಂಡದ ಬೆನ್ನೆಲುಬಾಗಿದ್ದಾರೆ. ರೋಹಿತ್ ನಾಯಕತ್ವದಲ್ಲೇ ಮುಂಬೈ ಐದು ಬಾರಿ ಚಾಂಪಿಯನ್ ಆಗಿದೆ. ಹೀಗಿರುವಾಗ ರೋಹಿತ್ ಶರ್ಮಾ ಬಗ್ಗೆ ಯಾರು ಈ ರೀತಿಯಾಗಿ ಮಾತನಾಡಲು ಸಾಧ್ಯವೆ ಇಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನವದೆಹಲಿ, ಮಾರ್ಚ್ 14: ಎಲ್ಪಿಜಿ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ, ದೇಶದಲ್ಲಿ ಬೇಕಾದಷ್ಟು ಎಲ್ಪಿಜಿ (LPG Cylinder Booking) ಸಂಗ್ರಹವಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಆದರೂ ಗ್ರಾಹಕರಿಗೆ ಆ್ಯಪ್ ಮೂಲಕ, ಎಸ್ಎಂಎಸ್ ಅಥವಾ ಆನ್‌ಲೈನ್ ಮೂಲಕ ಸಿಲಿಂಡರ್ ಬುಕ್ ಮಾಡಲು ಸಾಧ್ಯವಾಗುತ್ತಿಲ್ಲ. ಗ್ಯಾಸ್ ಬುಕ್ ಮಾಡಲಾಗದೆ ಜನರು ಪರದಾಡುತ್ತಿದ್ದಾರೆ. ಫೋನ್, ಮಿಸ್ಡ್ ಕಾಲ್, ಆ್ಯಪ್, ವಾಟ್ಸಾಪ್ ಮೂಲಕ ನೀವು ಹೇಗೆ ಸುಲಭವಾಗಿ ಎಲ್ಪಿಜಿ ಸಿಲಿಂಡರ್ ಬುಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ಜಾಗತಿಕ ಯುದ್ಧದ ಪರಿಣಾಮವಾಗಿ ಎಲ್ಲೆಡೆ ಇಂಧನ ಹಾಗೂ ಗ್ಯಾಸ್ ಕೊರತೆ ಎದುರಾಗಿದೆ ಎಂಬ ಸುದ್ದಿಗಳು ಹರಡಿರುವುದರಿಂದ ಅನೇಕ ಮನೆಗಳಲ್ಲಿ ಸಾಮಾನ್ಯಕ್ಕಿಂತ ಮುಂಚಿತವಾಗಿ LPG ಸಿಲಿಂಡರ್‌ಗಳನ್ನು ಬುಕ್ ಮಾಡಲಾಗುತ್ತಿದೆ. ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧಿಕಾರಿಗಳು LPG ಬುಕಿಂಗ್‌ಗಳ ನಡುವಿನ ಕನಿಷ್ಠ ಅಂತರವನ್ನು 21 ದಿನಗಳಿಂದ 25 ದಿನಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದಾರೆ. ಗ್ರಾಮೀಣ ಗ್ರಾಹಕರಿಗೆ ಲಾಕ್-ಇನ್ ಅವಧಿ ಅಥವಾ ಬುಕಿಂಗ್ ಅನ್ನು ಹಿಂದಿನ 25 ದಿನಗಳಿಗೆ ಹೋಲಿಸಿದರೆ 45 ದಿನಗಳಿಗೆ ಹೆಚ್ಚಿಸಲಾಗಿದೆ.
ಭಾರತ್ ಗ್ಯಾಸ್ ಬುಕಿಂಗ್:
ಭಾರತ್ ಗ್ಯಾಸ್ ಗ್ರಾಹಕರು IVRS, SMS, WhatsApp, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ LPG ಸಿಲಿಂಡರ್ ರೀಫಿಲ್ಲಿಂಗ್ ಬುಕ್ ಮಾಡಬಹುದು.
IVRS ಬುಕಿಂಗ್: ರೀ-ಫಿಲ್ಲಿಂಗ್ ವಿನಂತಿಗಾಗಿ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345 ಗೆ ಕರೆ ಮಾಡಿ.
SMS ಬುಕಿಂಗ್: ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7715012345 ಅಥವಾ 7718012345ಗೆ LPG ಎಂದು ಸಂದೇಶವನ್ನು ಕಳುಹಿಸಿ.
WhatsApp ಬುಕಿಂಗ್: ನಿಮ್ಮ ಕಾಂಟ್ಯಾಕ್ಟ್ನಲ್ಲಿ 1800224344 (BPCL ಸ್ಮಾರ್ಟ್‌ಲೈನ್) ಅನ್ನು ಸೇವ್ ಮಾಡಿಕೊಳ್ಳಿ. ಬುಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಲು Hi ಅಥವಾ Book ಎಂದು ಮೆಸೇಜ್ ಕಳುಹಿಸಿ.
ಮೊಬೈಲ್ ಅಪ್ಲಿಕೇಶನ್: ಪ್ಲೇ ಸ್ಟೋರ್‌ನಿಂದ ಭಾರತ್‌ಗ್ಯಾಸ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ. ನಂತರ ರೀಫಿಲ್ ಸಿಲಿಂಡರ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಇತರ ಅಪ್ಲಿಕೇಶನ್‌ಗಳು: UMANG ಅಪ್ಲಿಕೇಶನ್ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.
ಆನ್‌ಲೈನ್ ಸೇವೆಗಳು: ಗ್ರಾಹಕರು ಹಲೋ BPCL ಮೊಬೈಲ್ ಅಪ್ಲಿಕೇಶನ್ ಅಥವಾ ಅಧಿಕೃತ ಭಾರತ್ ಗ್ಯಾಸ್ ಮೂಲಕ ರೀಫಿಲ್ಲಿಂಗ್ ವಿನಂತಿಗಳನ್ನು ಸಲ್ಲಿಸಬಹುದು.
ಹುಬ್ಬಳ್ಳಿ, ಮಾರ್ಚ್ 14: ರಾಜ್ಯದಲ್ಲಿ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ (gas cylinder) ಪೂರೈಕೆಗೆ ಸಮಸ್ಯೆಯಾಗಿಲ್ಲ. ವಾಣಿಜ್ಯ ಸಿಲಿಂಡರ್ ಅಭಾವವಿದ್ದು, ಹೋಟೆಲ್ ಮಾಲೀಕರು ದೊಡ್ಡಮಟದಲ್ಲಿ ಪರದಾಡುತ್ತಿದ್ದಾರೆ. ಆದರೆ ಗೃಹ ಬಳಕೆ ಸಿಲಿಂಡರ್ ಬುಕ್ ಮಾಡಲು ಸರ್ವರ್ ಸಮಸ್ಯೆಯಾಗುತ್ತಿದ್ದು, ಸಿಲಿಂಡರ್ ಬುಕ್ ಮಾಡಲು ಗ್ರಾಹಕರು ಪರದಾಡುತ್ತಿದ್ದಾರೆ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಮುಂದೆ ತಮಗೆ ಎಲ್ಲಿ ಸಿಲಿಂಡರ್ ಸಿಗೋದಿಲ್ವೋ ಅನ್ನೋ ಆತಂಕದಿಂದ ಗ್ಯಾಸ್ ಏಜೆನ್ಸಿಗಳ ಮುಂದೆ ಖಾಲಿ ಸಿಲಿಂಡರ್ ತಗೆದುಕೊಂಡು ಬರ್ತಿದ್ದು, ಹೊಸ ಸಿಲಿಂಡರ್ಗಾಗಿ ಬೇಡಿಕೆ ಇಡ್ತಿದ್ದಾರೆ. ಇದೇ ಕಾರಣಕ್ಕೆ ಅನೇಕರು ಇಂದು ಹುಬ್ಬಳ್ಳಿಯಲ್ಲಿ ಗ್ಯಾಸ್ ಏಜೆನ್ಸಿಗೆ ಮುತ್ತಿಗೆ ಹಾಕಿದರು. ತಮಗೆ ಸಿಲಿಂಡರ್ ಬೇಕು ಅಂತ ಏಜನ್ಸಿ ಸಿಬ್ಬಂದಿ ವಿರುದ್ದ ವಾಗ್ವಾದ ನಡೆಸಿದರು.
ಸಿಬ್ಬಂದಿ ಹರಸಾಹಸ
ಹುಬ್ಬಳ್ಳಿ ನಗರದ ಕಾರವಾರ ರಸ್ತೆಯಲ್ಲಿರುವ ಇಂಡೇನ್ ಗ್ಯಾಸ್ ಏಜೆನ್ಸಿ ಮುಂದೆ ಇಂದು ಮುಂಜಾನೆ ಬಾಗಿಲು ತಗೆಯುವ ಮೊದಲೇ ಅನೇಕರು ಏಜೆನ್ಸಿ ಮುಂದೆ ಸರದಿ ಸಾಲಿನಲ್ಲಿ ನಿಂತಿದ್ದರು. ತಾವು ಅಷ್ಟೇ ಅಲ್ಲದೇ ಸಿಲಿಂಡರ್‌ಗಳನ್ನು ಕೂಡ ಸರದಿ ಸಾಲಿನಲ್ಲಿ ಇಟ್ಟಿದ್ದರು. ತಾವು ಖಾಲಿ ಸಿಲಿಂಡರ್ ತಂದಿದ್ದೇವೆ. ತಮಗೆ ಖಾಲಿ ಸಿಲಿಂಡರ್ ಪಡೆದು, ತುಂಬಿರೋ ಸಿಲಿಂಡರ್ ಕೊಡಿ ಅಂತ ಕೇಳುತ್ತಿದ್ದರು. ಆದರೆ ನೀವು ಸಿಲಿಂಡರ್ ಬುಕ್ ಮಾಡಬೇಕು. ನಾವು ನಿಮ್ಮ ಮನೆಗೆ ಸಿಲಿಂಡರ್ ತಂದು ಕೊಡ್ತೇವೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದರು ಜನರು ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಸಿಲಿಂಡರ್ ಸಿಗದೇ ಇದ್ದಿದ್ದಕ್ಕೆ ಗ್ರಾಹಕರು ಸಿಬ್ಬಂದಿಯನ್ನು ತರಾಟೆಗೆ ತಗೆದುಕೊಂಡರು. ಗ್ರಾಹಕರನ್ನು ಸಮಾಧಾನ ಮಾಡಲು ಸಿಬ್ಬಂದಿ ಹರಸಾಹಸ ಪಡಬೇಕಾಯಿತು.
ಹುಬ್ಬಳ್ಳಿಯಲ್ಲಿ ವಾಣಿಜ್ಯ ಸಿಲಿಂಡರ್ ಸಿಗದೇ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ. ಆದರೆ ಎಲ್ಲಿಯೂ ಕೂಡ ಗೃಹ ಬಳಕೆ ಸಿಲಿಂಡರ್ಗೆ ಸಮಸ್ಯೆಯಾಗಿಲ್ಲ. ಸಿಲಿಂಡರ್ ಬುಕ್ ಆದವರ ಮನೆಗೆ ಸಿಲಿಂಡರ್ ಡೆಲಿವರಿ ಆಗುತ್ತಿದೆ. ಆದರೆ ಕಳೆದ ಎರಡ್ಮೂರು ದಿನಗಳಿಂದ ಸಿಲಿಂಡರ್ ಬುಕ್ಗೆ ಹೆಚ್ಚಿನ ಜನರು ಮುಂದಾಗಿದ್ದರಿಂದ ಬುಕ್ಕಿಂಗ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಹಗಲು ಹೊತ್ತಲ್ಲಿ ಬುಕ್ ಮಾಡಲು ಮುಂದಾದವರಿಗೆ ಶಾಕ್ ಆಗ್ತಿದ್ದು, ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದು ಜನರ ಆತಂಕವನ್ನು ಹೆಚ್ಚಿಸುತ್ತಿದೆ. ಹೀಗಾಗಿ ಗ್ಯಾಸ್ ಏಜೆನ್ಸಿಗಳ ಅಂಗಡಿಗಳಿಗೆ ತಮ್ಮ ಖಾಲಿ ಸಿಲಿಂಡರ್ ಸಮೇತ ಬರ್ತಿರೋ ಜನರು, ತಮಗೆ ಸಿಲಿಂಡರ್ ಕೊಡಿ ಅಂತ ಪಟ್ಟು ಹಿಡಿಯುತ್ತಿದ್ದಾರೆ. ಆದರೆ ಬುಕ್ ಮಾಡಿದವರಿಗೆ ಮಾತ್ರ ಸಿಲಿಂಡರ್ ಕೊಡ್ತೇವೆ ಅಂತ ಸಿಬ್ಬಂದಿ ಹೇಳ್ತಿದ್ದಾರೆ. ಇದು ಗ್ರಾಹಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗುತ್ತಿದೆ.
ಮಿಸ್ ಕಾಲ್ ಕೊಟ್ಟರು ಸಿಲಿಂಡರ್ ಬುಕ್ ಆಗ್ತಿಲ್ಲ. ಮತ್ತೊಂದೆಡೆ ವಾಟ್ಸಪ್, ಅಮೆಜಾನ್ನಿಂದ ಕೂಡ ಸಿಲಿಂಡರ್ ಬುಕ್ ಆಗುತ್ತಿಲ್ಲ. ಇದೀಗ ಹಬ್ಬ ಬಂದಿದೆ. ತಮಗೆ ಗ್ಯಾಸ್ ಸಿಲಿಂಡರ್ ನೀಡಬೇಕು ಅಂತ ಗ್ರಾಹಕರು ಪಟ್ಟು ಹಿಡದಿದ್ದರೆ, ಗ್ಯಾಸ್ ಏಜೆನ್ಸಿ ಸಿಬ್ಬಂದಿ ಕೇಳಿದರೆ ಸಿಲಿಂಡರ್ ಅಭಾವವಿಲ್ಲ. ಬುಕ್ ಮಾಡಿದ ಪ್ರತಿಯೊಬ್ಬರಿಗೂ ಸಿಲಿಂಡರ್ ನೀಡ್ತಿದ್ದೇವೆ. ಆದರೆ ಸರ್ವರ್ ಡೌನ್ನಿಂದ ಸಿಲಿಂಡರ್ ಬುಕ್ ಆಗೋದು ವಿಳಂಬವಾಗುತ್ತಿದೆ. ಹೀಗಾಗಿ ಜನರು ಆತಂಕಕ್ಕೊಳಗಾಗಿದ್ದಾರೆ ಅಂತ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳ್ತಿದ್ದಾರೆ. ಆದರೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ, ಏಜೆನ್ಸಿಯವರು ಜನರಿಂದ ಸ್ಥಳದಲ್ಲಿಯೇ ಹಣ ಪಡೆದು, ಅನೇಕರಿಗೆ ಸಿಲಿಂಡರ್ ಕೊಟ್ಟು ಕಳುಹಿಸಿದ್ದಾರೆ.
ಸದ್ಯ ಗೃಹ ಬಳಕೆ ಸಿಲಿಂಡರ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸರ್ವರ್ ಡೌನ್ನಿಂದ ಬುಕ್ ಆಗದೇ ಇರೋದರಿಂದ ಗ್ರಾಹಕರು ಮತ್ತು ಏಜೆನ್ಸಿ ಸಿಬ್ಬಂದಿ ನಡುವೆ ವಾಗ್ವಾದಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಲಿಂಡರ್ ಬುಕ್ ಮಾಡಲು ಆಗುತ್ತಿರುವ ಸರ್ವರ್ ಸಮಸ್ಯೆಯನ್ನು ಬಗೆಹರಿಸುವ ಕೆಲಸ ಮಾಡಬೇಕಿದೆ.
ದುನಿಯಾ ವಿಜಯ್, ರಚಿತಾ ರಾಮ್, ರಾಜ್ ಬಿ ಶೆಟ್ಟಿ ಇನ್ನೂ ಕೆಲವು ಪ್ರಮುಖ ಕಲಾವಿದರು ನಟಿಸಿರುವ ‘ಲ್ಯಾಂಡ್ಲಾರ್ಡ್’ ಸಿನಿಮಾ ಒಟಿಟಿಗೆ ಬರುತ್ತಿದೆ. ಆದರೆ ಈ ವಾರ ಅಲ್ಲ ಬದಲಿಗೆ ಮುಂದಿನ ವಾರ ಮಾರ್ಚ್ 15ಕ್ಕೆ ಸಿನಿಮಾ ಜೀ5ನಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
ಮಹಿಳೆ ಮತ್ತು ಒಂದು ನಾಯಿಯ ಕತೆಯನ್ನು ಒಳಗೊಂಡ ಹಾಸ್ಯಮಯ ಸಾಮಾಜಿಕ ಸಿನಿಮಾ ‘ಪೊನ್ನುಂ-ಪೋರಾಟಂ’. ಮಲಯಾಳಂನ ಈ ಸಿನಿಮಾ ಈ ವಾರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ. ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳನ್ನು ಹಾಸ್ಯಮಯವಾಗಿ ತೋರಿಸುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.
ಭರ್ತ ಮಹಾಶಯುಲಕು ವಿಜ್ಞಪ್ತಿ ಇದು ಕಳೆದ ಸಂಕ್ರಾಂತಿಗೆ ಬಿಡುಗಡೆ ಆಗಿದ್ದ ಸಿನಿಮಾ. ಹಲವು ದೊಡ್ಡ ಸಿನಿಮಾಗಳ ಜೊತೆಗೆ ಬಿಡುಗಡೆ ಆದ ಈ ಹಾಸ್ಯಮಯ ಆಕ್ಷನ್ ಸಿನಿಮಾ ಸಂಕ್ರಾಂತಿಯ ಇತರೆ ಸಿನಿಮಾಗಳ ಅಬ್ಬರದಲ್ಲಿ ಕಳೆದು ಹೋಯ್ತು. ಇದೀಗ ಈ ಸಿನಿಮಾ ಒಟಿಟಿಗೆ ಬಂದಿದ್ದು ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ. ಸಿನಿಮಾನಲ್ಲಿ ರವಿತೇಜ ಮತ್ತು ಆಶಿಕಾ ರಂಗನಾಥ್ ನಟಿಸಿದ್ದಾರೆ.
ಟಿವಿಎಫ್ ಅವರ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದಾಗಿದೆ ಆಸ್ಪಿರೆಂಟ್. ಇದೀಗ ಇದರ ಮೂರನೇ ಸೀಸನ್ ಬಿಡುಗಡೆ ಆಗಿದೆ. ಯುಪಿಎಸ್ಸಿ ಓದುವ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಓದಿಸುವ ಇನ್ಸ್ಟಿಟ್ಯೂಟ್ ಅದರ ರಾಜಕೀಯ ಇನ್ನಿತರೆ ವಿಷಯಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.
ತೆಲುಗು ನಟ ವಿಶ್ವಕ್ ಸೇನ್ ನಟಿಸಿರುವ ‘ಫಂಕಿ’ ಸಿನಿಮಾ ಕಳೆದ ತಿಂಗಳಷ್ಟೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿತ್ತು. ಅನುದೀಪ್ ನಿರ್ದೇಶನ ಮಾಡಿದ್ದ ಈ ಸಿನಿಮಾ ಕಾಮಿಡಿ ಸಿನಿಮಾ ಆಗಿದ್ದು, ಚಿತ್ರಮಂದಲ್ಲಿ ಸಾಮಾನ್ಯ ಪ್ರದರ್ಶನವನ್ನಷ್ಟೆ ಕಂಡಿತ್ತು. ಇದೀಗ ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗಿದೆ.
ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಯಶಸ್ಸು ಗಳಿಸಿದ್ದ ತಮಿಳು ಸಿನಿಮಾ ‘ಪೂಕಿ’ ಇದೀಗ ಒಟಿಟಿಗೆ ಬಂದಿದೆ. ಪ್ರೇಮಿಗಳಿಬ್ಬರೂ ರೋಡ್ ರೇಜ್ ಘಟನೆಯೊಂದರಲ್ಲಿ ಜಗಳ ಮಾಡಿಕೊಂಡು ದೂರಾಗುತ್ತಾರೆ. ಬಳಿಕ ಇಬ್ಬರೂ ಒಬ್ಬರನ್ನೊಬ್ಬರು ಮತ್ತೆ ಹೇಗೆ ಮರಳಿ ಸಂಧಿಸುತ್ತಾರೆ ಎಂಬುದು ಸಿನಿಮಾದ ಕತೆ. ಸಿನಿಮಾವನ್ನು ಜೀ5ನಲ್ಲಿ ವೀಕ್ಷಿಸಬಹುದಾಗಿದೆ.
ತಾಜ್ ಮಹಲ್ನ ಇತಿಹಾಸವನ್ನು ಕೆದಕುವ ಕತೆಯನ್ನು ಒಳಗೊಂಡಿರುವ ಸಿನಿಮಾ ‘ದಿ ತಾಜ್ ಸ್ಟೋರಿ’. ತುಷಾರ್ ನಿರ್ದೇಶಿಸಿರುವ ಈ ಸಿನಿಮಾನಲ್ಲಿ ಪರೇಶ್ ರಾವಲ್ ನಟಿಸಿದ್ದಾರೆ. ತಾಜ್ ಮಹಲ್, ಹಿಂದೂ ದೇವಾಲಯ ಆಗಿತ್ತು ಎಂದು ಪರೇಶ್ ರಾವಲ್ ಪಾತ್ರ ನ್ಯಾಯಾಲಯದಲ್ಲಿ ವಾದ ಮಾಡುವುದೇ ಈ ಸಿನಿಮಾದ ಕತೆ. ಈ ಸಿನಿಮಾ ಲಯನ್ಸ್ಗೇಟ್ ಒಟಿಟಿಯಲ್ಲಿ ಬಿಡುಗಡೆ ಆಗಿದೆ.
ಬಿಳಿ ಬಟ್ಟೆಗಳು (White Clothes) ತುಂಬಾನೇ ಸ್ಟೈಲಿಶ್ ಆಗಿ ಕಾಣುವ ಕಾರಣ ಪ್ರತಿಯೊಬ್ಬರೂ ಈ ಬಣ್ಣದ ಬಟ್ಟೆಯನ್ನೇ ಧರಿಸಲು ಇಷ್ಟಪಡುತ್ತಾರೆ. ಬಿಳಿ ಬಣ್ಣದ ಬಟ್ಟೆಗಳು ಸುಂದರವಾಗಿ ಕಾಣಿಸುವಂತೆ ಮಾಡುವುದು ನಿಜ. ಅದೇ ರೀತಿ ಈ ಬಟ್ಟೆಗಳು ಬೇಗನೆ ಮಾಸುಕಾಗುತ್ತವೆ. ಹೌದು ಬೆವರು, ಧೂಳು, ಕಲೆ ಸಂಗ್ರಹಣೆಯಿಂದ ಹಾಗೂ ಸರಿಯಾದ ರೀತಿಯಲ್ಲಿ ತೊಳೆಯದಿರುವ ಕಾರಣ ಬಿಳಿ ಬಟ್ಟೆಗಳು ಬೇಗನೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ವಾಸ್ತವವಾಗಿ, ನಾವು ಮಾಡುವ ಸಣ್ಣ ತಪ್ಪುಗಳೇ ಬಿಳಿ ಬಟ್ಟೆಗಳು ಹೊಳಪನ್ನು ಕಸಿದುಕೊಳ್ಳಲು ಮುಖ್ಯ ಕಾರಣ. ಹೀಗಿರುವಾಗ ಬಿಳಿ ಬಟ್ಟೆಯನ್ನು ಒಗೆಯುವಾಗ ಕೆಲವು ಸರಳ ನಿಯಮಗಳನ್ನು ಅಳವಡಿಸಿಕೊಂಡರೆ, ಅವು ದೀರ್ಘಕಾಲದವರೆಗೆ ಹೊಸದರಂತೆ ಕಾಣುವಂತೆ ಮಾಡಬಹುದು.
ಬಿಳಿ ಬಟ್ಟೆಯನ್ನು ಒಗೆಯುವಾಗ ಪಾಲಿಸಬೇಕಾದ ಸಲಹೆಗಳು:
ಯಾವಾಗಲೂ ಬಿಳಿ ಬಟ್ಟೆಗಳನ್ನು ಪ್ರತ್ಯೇಕವಾಗಿ ಒಗೆಯಿರಿ: ಅನೇಕ ಜನರು ಆತುರದಲ್ಲಿ ಬಿಳಿ ಬಟ್ಟೆಗಳನ್ನು ಇತರ ಬಣ್ಣದ ಬಟ್ಟೆಗಳೊಂದಿಗೆ ವಾಷಿಂಗ್ ಮಷೀನ್‌ನಲ್ಲಿ ಹಾಕಿ ಬಿಡುತ್ತಾರೆ, ಇಲ್ಲವೇ ಬೇರೆ ಬಟ್ಟೆಗಳೊಂದಿಯೇ ಬಿಳಿ ಬಣ್ಣದ ಬಟ್ಟೆಯನ್ನೂ ಒಗೆಯುತ್ತಾರೆ. ಈ ರೀತಿ ಮಾಡುವುದರಿಂದ ಇತರೆ ಬಟ್ಟೆಗಳ ಬಣ್ಣವು ಬಿಳಿ ಬಟ್ಟೆಗೆ ತಾಕುತ್ತವೆ. ಈ ತಪ್ಪಿನ ಕಾರಣದಿಂದ ಕ್ರಮೇಣ ಬಿಳಿ ಬಟ್ಟೆಗಳು ಮಸುಕಾಗಿ ಕಾಣಲು ಪ್ರಾರಂಭಿಸುತ್ತವೆ. ಆದ್ದರಿಂದ, ಬಿಳಿ ಬಟ್ಟೆಗಳನ್ನು ಯಾವಾಗಲೂ ಪ್ರತ್ಯೇಕವಾಗಿಯೇ ಒಗೆಯಬೇಕು. ಹೀಗೆ ಮಾಡುವುದರಿಂದ ಬಿಳಿ ಬಟ್ಟೆಯ ಬಣ್ಣ ಮಾಸುವುದಿಲ್ಲ.
ಸರಿಯಾದ ಡಿಟರ್ಜೆಂಟ್ ಬಳಸಿ: ಬಿಳಿ ಬಟ್ಟೆಗಳಿಗೆ ವಿಶೇಷ ಡಿಟರ್ಜೆಂಟ್ ಬಳಸಬೇಕು. ನಿಮ್ಮ ಬಟ್ಟೆಗಳು ಹಳದಿ ಬಣ್ಣಕ್ಕೆ ತಿರುಗಬಾರದು ಎಂದು ನೀವು ಬಯಸಿದರೆ, ಡಿಟರ್ಜೆಂಟ್ ಜೊತೆಗೆ ತೊಳೆಯುವಾಗ ಸ್ವಲ್ಪ ಅಡಿಗೆ ಸೋಡಾ ಅಥವಾ ಬಿಳಿ ವಿನೆಗರ್ ಅನ್ನು ಕೂಡ ಸೇರಿಸಬಹುದು. ಈ ನೈಸರ್ಗಿಕ ಪದಾರ್ಥಗಳು ಬಿಳಿ ಬಟ್ಟೆಗಳ ಕೊಲೆಗಳನ್ನು ಬುಡದಿಂದ ತೆಗೆದು ಹಾಕಿ ಬಟ್ಟೆ ಸ್ವಚ್ಛವಾಗಿ ಮತ್ತು ಹೊಸದರಂತೆ ಕಾಣಿಸಲು ಸಹಾಯ ಮಾಡುತ್ತದೆ.
ಕಲೆಗಳನ್ನು ಮೊದಲೇ ತೆಗೆದು ಹಾಕಿ: ಬಿಳಿ ಉಡುಪಿನ ಮೇಲೆ ಕಲೆ ಆದ್ರೆ, ಆ ಕಲೆಗಳನ್ನು ಮೊದಲೇ ತೆಗೆದುಹಾಕಬೇಕು. ಹೌದು ಉಡುಪನ್ನು ನೇರವಾಗಿ ವಾಷಿಂಗ್ ಮಷೀನ್‌ಗೆ ಹಾಕುವ ಮೊದಲು ಕಲೆ ಇರುವ ಜಾಗಕ್ಕೆ ಸ್ವಲ್ಪ ಡಿಟರ್ಜೆಂಟ್ ಅಥವಾ ಸ್ಟೇನ್ ರಿಮೂವರ್ ಹಚ್ಚಿ ಕೆಲವು ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ಅದನ್ನು ಬ್ರಷ್ ಸಹಾಯದಿಂದ ಉಜ್ಜಿ ಕಲೆ ತೆಗೆಯಿರಿ. ಹೀಗೆ ಮಾಡುವುದರಿಂದ ಕಲೆ ಸುಲಭವಾಗಿ ನಿವಾರಣೆಯಾಗುತ್ತದೆ ಮತ್ತು ಬಟ್ಟೆಯ ಬಣ್ಣವೂ ಮಾಸುವುದಿಲ್ಲ.
ನೀರಿನ ತಾಪಮಾನಕ್ಕೆ ವಿಶೇಷ ಗಮನ ಕೊಡಿ: ವಿಶೇಷವಾಗಿ ಬಟ್ಟೆ ಒಗೆಯುವಾಗ ನೀರಿನ ತಾಪಮಾನವನ್ನು ನೋಡುವುದು ಬಹಳ ಮುಖ್ಯ. ಬಿಳಿ ಬಟ್ಟೆಗಳನ್ನು ತೊಳೆಯಲು ಸ್ವಲ್ಪ ಬೆಚ್ಚಗಿನ ನೀರನ್ನು ಉಪಯೋಗಿಸುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ, ಏಕೆಂದರೆ ಇದು ಬೆವರು, ಕೊಳಕು ಮತ್ತು ಎಣ್ಣೆಯ ಕಲೆಗಳನ್ನು ಸುಲಭವಾಗಿ ತೆಗೆದುಹಾಕುತ್ತದೆ. ಆದರೆ ಬಿಳಿ ಬಣ್ಣದ ರೇಷ್ಮೆ ಅಥವಾ ಸೂಕ್ಷ್ಮ ಬಟ್ಟೆಗಳಿಗೆ ತಣ್ಣೀರನ್ನು ಮಾತ್ರ ಬಳಸಬೇಕು.
ಬಿಸಿಲಿನಲ್ಲಿಯೇ ಬಟ್ಟೆಗಳನ್ನು ಒಣಗಿಸಿ: ಬಿಳಿ ಬಟ್ಟೆಗಳನ್ನು ಯಾವಾಗಲೂ ಸೂರ್ಯನ ನೇರ ಬೆಳಕಿನಲ್ಲಿಯೇ ಒಣಗಿಸಬೇಕು. ಸೂರ್ಯನ ಬೆಳಕು ನೈಸರ್ಗಿಕ ಬ್ಲೀಚ್ ರೀತಿಯಲ್ಲಿ ಕಾರಣ, ಬಿಳಿ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿದರೆ, ಅವುಗಳ ಬಿಳುಪು ಮತ್ತು ಹೊಳಪು ದೀರ್ಘಕಾಲ ಉಳಿಯುತ್ತದೆ.
ಚಿಕ್ಕಮಗಳೂರು, (ಮಾರ್ಚ್ 14): ತಂದೆ ತಾಯಿಯರ ಅಂತಿಮ ಸಂಸ್ಕಾರವನ್ನು ಗಂಡು ಮಕ್ಕಳು ಮಾಡುವುದು ಸಾಮಾನ್ಯ. ತಂದೆಯ ಚಿತೆಗೆ ಮೊದಲು ಆತನ ಹಿರಿಯ ಮಗನೇ ಅಗ್ನಿ ಸ್ಪರ್ಶಮಾಡಬೇಕೆಂದು ಹಿಂದೂ ಸಂಪ್ರದಾಯದಲ್ಲಿ ಹೇಳಲಾಗಿದೆ. ಆದ್ರೆ, ಚಿಕ್ಕಮಗಳೂರಿನಲ್ಲಿ ಸಹೋದರಿಯರೇ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ. ಹೌದು…ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ವಿಶ್ವನಾಥ್ ಎನ್ನುವರು ಮೃತಪಟ್ಟಿದ್ದು, ಇವರಿಗೆ ಗಂಡು ಮಕ್ಕಳು ಇಲ್ಲ. ಹೀಗಾಗಿ ಇವರ ಅಂತ್ಯಕ್ರಿಯೆಯನ್ನು ಇಬ್ಬರು ಪುತ್ರಿಯರು ಸೇರಿಕೊಂಡು ನೆರವೇರಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಭಾವಸಾರ ಕ್ಷತ್ರಿಯ ಸಮಾಜದಂತೆ ತಂದೆಯ ಅಂತಿಮ ವಿಧಿವಿಧಾನ ನೆರವೇರಿಸಿ ಅಗ್ನಿ ಸ್ಪರ್ಷ ಮಾಡಿದರು. ಇನ್ನು ಇವರ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಹೆಣ್ಣು ಮಕ್ಕಳು ತಂದೆಯ ಅಂತ್ಯಸಂಸ್ಕಾರವನ್ನು ತಾವೇ ನೆರವೇರಿಸುವ ಮೂಲಕ ಲಿಂಗಸಮಾನತೆಯ ಸಂದೇಶವನ್ನು ಸಾರಿದ್ದಾರೆ.
ಭಾರತ ಕ್ರಿಕೆಟ್‌ನ ಮೂವರು ದಿಗ್ಗಜ ಆಟಗಾರರಿಗೆ ಬಿಸಿಸಿಐ ಜೀವಮಾನ ಸಾಧನೆ ಪ್ರಶಸ್ತಿ (BCCI Lifetime Achievement Award) ಘೋಷಿಸಿದೆ. ಈ ಪ್ರಶಸ್ತಿಗೆ ಭಾಜನರಾದವರಲ್ಲಿ ಇಬ್ಬರು ಕನ್ನಡಿಗರು ಸೇರಿದ್ದರೆ, ಮತ್ತೊಬ್ಬರು ಭಾರತ ಮಹಿಳಾ ತಂಡದ ಮಾಜಿ ನಾಯಕಿಯಾಗಿದ್ದಾರೆ. ವಾಸ್ತವವಾಗಿ ಬಿಸಿಸಿಐ ಮಾರ್ಚ್ 15 ರಂದು ನವದೆಹಲಿಯಲ್ಲಿ ನಮನ್ ವಾರ್ಷಿಕ ಪ್ರಶಸ್ತಿ ಸಮಾರಂಭವನ್ನು ಆಯೋಜಿಸಲಿದ್ದು, ಈ ಸಮಾರಂಭದಲ್ಲಿ 2024-25 ರ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗೌರವಿಸಲಿದೆ. ಹೆಚ್ಚುವರಿಯಾಗಿ, ಬಿಸಿಸಿಐ ಮೂವರು ಭಾರತೀಯ ಕ್ರಿಕೆಟ್ ದಂತಕಥೆಗಳಿಗೆ ಬಿಸಿಸಿಐನ ಅತ್ಯುನ್ನತ ಗೌರವವಾದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲು ನಿರ್ಧರಿಸಿದೆ.
ಈ ಮೂವರಿಗೆ ಜೀವಮಾನ ಸಾಧನೆ ಪ್ರಶಸ್ತಿ
ಬಿಸಿಸಿಐ, 1983 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಕನ್ನಡಿಗ ರೋಜರ್ ಬಿನ್ನಿ ಹಾಗೂ ಮತ್ತೊಬ್ಬ ಕನ್ನಡಿಗ ರಾಹುಲ್ ದ್ರಾವಿಡ್ ಅವರಿಗೆ ಕರ್ನಲ್ ಸಿ.ಕೆ. ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡುವುದಾಗಿ ಘೋಷಿಸಿದೆ. ಇವರಿಬ್ಬರ ಜೊತೆಗೆ ಮಹಿಳಾ ಕ್ರಿಕೆಟ್ ದಂತಕಥೆ ಮಿಥಾಲಿ ರಾಜ್ ಅವರಿಗೆ ಬಿಸಿಸಿಐ ಮಹಿಳಾ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಿದೆ. ಬಿಸಿಸಿಐ ಈ ಪ್ರಶಸ್ತಿಯೊಂದಿಗೆ ನಗದು ಬಹುಮಾನವನ್ನೂ ನೀಡಲಿದ್ದು, ವರದಿಗಳ ಪ್ರಕಾರ ಈ ಮೂವರು ಪ್ರಶಸ್ತಿ ವಿಜೇತರಿಗೆ ತಲಾ 25 ಲಕ್ಷ ರೂ. ನಗದು ಬಹುಮಾನ ನೀಡಲಿದೆ.
ಭಾರತಕ್ಕೆ ಮೊದಲ ವಿಶ್ವಕಪ್
ಮೇಲೆ ಹೇಳಿದಂತೆ ರೋಜರ್ ಬಿನ್ನಿ 1983 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಭಾರತದ ಮೊದಲ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿನ್ನಿ ಬೌಲಿಂಗ್ ವಿಭಾಗದ ಪ್ರಮುಖ ಅಸ್ತ್ರವಾಗಿದ್ದರು. ಹಾಗೆಯೇ 1985 ರ ವಿಶ್ವ ಚಾಂಪಿಯನ್‌ಶಿಪ್ ಆಫ್ ಕ್ರಿಕೆಟ್‌ನಲ್ಲಿಯೂ ಬಿನ್ನಿ ತಂಡದ ಭಾಗವಾಗಿದ್ದರು. ವೃತ್ತಿಜೀವನಕ್ಕೆ ವಿದಾಯ ಹೇಳಿದ ನಂತರ ಬಿನ್ನಿ ತರಬೇತಿ, ಆಯ್ಕೆ ಮತ್ತು ಆಡಳಿತಾತ್ಮಕ ಪಾತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 2000 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೆ ಅವರು ತರಬೇತುದಾರರಾಗಿದ್ದರು. ಹಾಗೆಯೇ ಅವರು 2012 ರಿಂದ 2016 ರವರೆಗೆ ರಾಷ್ಟ್ರೀಯ ಆಯ್ಕೆದಾರರಾಗಿಯೂ ಸೇವೆ ಸಲ್ಲಿಸಿದ್ದರು. ಇತ್ತೀಚಿನ ವರ್ಷಗಳಲ್ಲಿ, ಅವರು 2022 ರಿಂದ 2025 ರವರೆಗೆ ಬಿಸಿಸಿಐನ 36 ನೇ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ರಾಹುಲ್ ದ್ರಾವಿಡ್ ಕೊಡುಗೆ ಅಪಾರ
‘ದಿ ವಾಲ್’ ಎಂದೇ ಖ್ಯಾತಿ ಪಡೆದ ರಾಹುಲ್ ದ್ರಾವಿಡ್, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,000 ಕ್ಕೂ ಹೆಚ್ಚು ರನ್ ಗಳಿಸಿದ್ದು, ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದ ಬ್ಯಾಟಿಂಗ್‌ನ ಬೆನ್ನೆಲುಬಾಗಿದ್ದವರು. ಹಾಗೆಯೇ ನಾಯಕನಾಗಿ ಭಾರತವನ್ನು ಅನೇಕ ಸ್ಮರಣೀಯ ವಿಜಯಗಳಿಗೆ ಕರೆದೊಯ್ದವರು. ನಿವೃತ್ತಿಯ ನಂತರ, ದ್ರಾವಿಡ್ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್ ಮುಖ್ಯಸ್ಥರಾಗಿ ಯುವ ಆಟಗಾರರಿಗೆ ತರಬೇತಿ ನೀಡಿದರು. 2018 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡಕ್ಕೂ ಅವರು ತರಬೇತಿ ನೀಡಿದರು. ಭಾರತೀಯ ಪುರುಷರ ತಂಡದ ಮುಖ್ಯ ತರಬೇತುದಾರರಾಗಿ, ಅವರು 2024 ರ ಟಿ20 ವಿಶ್ವಕಪ್‌ನಲ್ಲಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
ಮಿಥಾಲಿ ರಾಜ್ ಅವರನ್ನು ಮಹಿಳಾ ಕ್ರಿಕೆಟ್‌ನ ಐಕಾನ್ ಎಂದು ಪರಿಗಣಿಸಲಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ಏಕದಿನದಲ್ಲಿ 7805 ರನ್ ಕಲೆಹಾಕಿರುವ ಮಿಥಾಲಿ ಈ ಮಾದರಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಆಟಗಾರ್ತಿ ಎಂಬ ದಾಖಲೆ ಬರೆದಿದ್ದಾರೆ. ನಾಯಕಿಯಾಗಿ, ಅವರು ಭಾರತವನ್ನು ಎರಡು ವಿಶ್ವಕಪ್ ಫೈನಲ್‌ಗಳಿಗೆ ಮುನ್ನಡೆಸಿದರಾದರೂ ತಂಡವನ್ನು ಚಾಂಪಿಯನ್ ಮಾಡಲು ಸಾಧ್ಯವಾಗಿರಲಿಲ್ಲ. ಆದಾಗ್ಯೂ ಬಲಿಷ್ಠ ಭಾರತ ಮಹಿಳಾ ತಂಡವನ್ನು ನಿರ್ಮಿಸುವಲ್ಲಿ ಮಿಥಾಲಿ ಪಾತ್ರ ಅಪಾರವಾಗಿದೆ. ಹೀಗಾಗಿ ಮಹಿಳಾ ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದ ಮಿಥಾಲಿಗೆ ಅರ್ಹ ಗೌರವ ಧಕ್ಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನೀವು ರಸ್ತೆಯಲ್ಲಿ ಹೋಗುವಾಗ ಮಾಡುವ ಒಂದು ತಪ್ಪಿನಿಂದ ಎಂಥಾ ದೊಡ್ಡ ಅಪಘಾತ ಸಂಭವಿಸಬಹುದು. ಸಿಮೆಂಟ್ ಮಿಕ್ಸರ್ ಟ್ರಕ್ ಒಂದು ಬರುವಾಗ ಪಕ್ಕದಲ್ಲಿ ಬರುತ್ತಿದ್ದ ಬೈಕ್ ಸವಾರ ನಿಧಾನವಾಗಿ ಎಡಕ್ಕೆ ಚಲಿಸಿದ್ದಾನೆ. ಆಗ ಟ್ರಕ್ ಚಾಲಕ ಗೊತ್ತಾಗದೇ ಬೈಕ್ ಮೇಲೆ ವಾಹನ ಹತ್ತಿಸಿದ್ದಾರೆ. ದೊಡ್ಡ ವಾಹನಗಳು ಬ್ಲೈಂಡ್ ಸ್ಪಾಟ್ಗಳನ್ನು ಹೊಂದಿರುತ್ತವೆ. ಹಾಗಾಗಿ ನೀವು ಮಾಡುವ ಒಂದು ಸಣ್ಣ ತಪ್ಪು ದೊಡ್ಡ ಸಮಸ್ಯೆಯನ್ನೇ ತಂದೊಡ್ಡಬಹುದು.