ಬೆಂಗಳೂರು: ಆರ್ಥಿಕ ಸುಳಿಯೊಳಗೆ ಸಿಲುಕಿದ 58 ವರ್ಷ ಇತಿಹಾಸವಿರುವ ಶಾಲೆ; ಬಂದ್ಗೆ ನಿರ್ಧಾರ
ಬೆಂಗಳೂರು, ಮಾರ್ಚ್ 13: ಸುಮಾರು 350 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಯನ್ನ (East West Academy school) ಮುಚ್ಚುವುದಕ್ಕೆ ಆಡಳಿತ ಮಂಡಳಿ ನಿರ್ಧಾರ ಮಾಡಿದೆ. ತೀವ್ರ ಆರ್ಥಿಕ ಸಂಕಷ್ಟವೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ಹೀಗಾಗಿ ಮಕ್ಕಳ ಭವಿಷ್ಯವೇ ಅತಂತ್ರವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೋಷಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ ಅತಂತ್ರ: ಪೋಷಕರು ಆಕ್ರೋಶ ರಾಜಾಜಿನಗರ ಮಾರುತಿ ಎಕ್ಸ್ಟೆನ್ಷನ್ನಲ್ಲಿರುವ 58 ವರ್ಷಗಳ ಇತಿಹಾಸವಿರುವ ಈಸ್ಟ್ ವೆಸ್ಟ್ ಅಕಾಡೆಮಿ ಶಾಲೆಗೆ ಇಂದು ಪೋಷಕರು ದೌಡಾಯಿಸಿದ್ದರು. ಏಕೆಂದರೆ…