ಪಿಎಂ ಕಿಸಾನ್ ಸ್ಕೀಮ್; ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ; ನಿಮಗೆ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?
ನವದೆಹಲಿ, ಮಾರ್ಚ್ 13: ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ನ ಗುವಾಹಟಿಯಲ್ಲಿ ಇಂದು ಪಿಎಂ ಕಿಸಾನ್ ಸ್ಕೀಮ್ನಡಿ ((PM Kisan scheme) 22ನೇ ಕಂತಿನ ಹಣ ಬಿಡುಗಡೆ ಮಾಡಿದ್ದಾರೆ. 9.32 ಕೋಟಿ ರೈತರ ಬ್ಯಾಂಕ್ ಖಾತೆಗಳಿಗೆ ತಲಾ 2,000 ರೂನಂತೆ ಒಟ್ಟು 18,640 ಕೋಟಿ ರೂ ಹಾಕಲಾಗಿದೆ. ಕಳೆದ ಬಾರಿಗಿಂತ ಈ ಸಲ ಫಲಾನುಭವಿಗಳ ಸಂಖ್ಯೆ 4 ಲಕ್ಷದಷ್ಟು ಕಡಿಮೆ ಆಗಿದೆ. ಇಕೆವೈಸಿ ಆಗಿಲ್ಲದಿರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಲಕ್ಷಾಂತರ ಮಂದಿಗೆ ಯೋಜನೆಯ ಲಾಭ ಕೈತಪ್ಪಿದೆ. 21ನೇ…