ರಾಜ್ಯದ ಪ್ರತಿಷ್ಠಿತ ಮಠದಲ್ಲಿ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ: ಕೋಟ್ಯಂತರ ರೂ ಅವ್ಯವಹಾರ ಆರೋಪ
ದಾವಣಗೆರೆ, ಮಾರ್ಚ್ 12: ಹರಿಹರದ ಪಂಚಮಸಾಲಿ ಮಠ (harihara panchamasali peetha) ರಾಜ್ಯದ ಪ್ರತಿಷ್ಠಿತ ಮಠ. ಈ ಮಠಕ್ಕೆ ಕೋಟ್ಯಂತರ ಭಕ್ತರಿದ್ದಾರೆ. ನಿತ್ಯ ದಾಸೋಹ ಕೂಡ ಶುರುವಾಗಿದೆ. ರಾಜ್ಯದ ಬಹುತೇಕ ಕಡೆ ಈ ಮಠದ ಆಸ್ತಿ ಇದೆ. ಇಂತಹ ಮಠದಲ್ಲಿ ಇದೀಗ ಲೆಕ್ಕ ಪತ್ರ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಕೋಟ್ಯಂತರ ರೂ ಅವ್ಯವಹಾರ ನಡೆದಿದೆ. ಮಾತಿನ ಚಕಮಕಿ ವೇಳೆ ನೂಕಾಟ ತಳ್ಳಾಟ ಕೂಡ ನಡೆದಿದೆ. ಮೇಲಾಗಿ ಸರ್ಕಾರದಿಂದ ಬಂದ ಹಣವಾದರೂ ಎಲ್ಲಿ ಎಂಬ ಹತ್ತು ಹಲವಾರು ಪ್ರಶ್ನೆಗೆ…