Headlines

ತಪ್ಪು ನನ್ನದೇ.. ಟಿ20 ವಿಶ್ವಕಪ್ ಗೆದ್ದು ಅಕ್ಷರ್ ಪಟೇಲ್ ಬಳಿ ಕ್ಷಮೆಯಾಚಿಸಿದ ಸೂರ್ಯ

ಕಳೆದ ಭಾನುವಾರ ನಡೆದ 2026 ರ ಟಿ20 ವಿಶ್ವಕಪ್ (T20 World Cup) ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಈ ಗೆಲುವಿನ ನಂತರ ಭಾರತದಲ್ಲಿ ಭಾರಿ ಸಂಭ್ರಮಾಚರಣೆ ನಡೆಯಿತು. ಇದೀಗ ವಿಶ್ವಕಪ್ ಮುಗಿದ ನಾಲ್ಕು ದಿನಗಳ ನಂತರ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ತಂಡದ ಉಪನಾಯಕ ಅಕ್ಷರ್ ಪಟೇಲ್ (Axar Patel) ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ತಾನು…

Read More

ಪುಟ್ಟ ಬಾಲಕಿಯ ಕೈಯಲ್ಲೇ ಮೊಬೈಲ್ ಸ್ಫೋಟ; ಇಲ್ಲಿದೆ ವಿಡಿಯೋ

ನವದೆಹಲಿ, ಮಾರ್ಚ್ 12: ಕಳೆದ ಕೆಲವು ವರ್ಷಗಳಿಂದ ಪ್ರಪಂಚದಾದ್ಯಂತ ಮೊಬೈಲ್ ಫೋನ್ ಸ್ಫೋಟಗೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಚಾರ್ಜ್ ಮಾಡುವಾಗ ಅಥವಾ ಬಳಸುತ್ತಿರುವಾಗಲೇ ಮೊಬೈಲ್ ಅತಿಯಾಗಿ ಬಿಸಿಯಾಗುವುದು ಅಥವಾ ಸ್ಫೋಟಗೊಳ್ಳುವ ಘಟನೆಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ಚೀನಾದಲ್ಲಿ ಅಂತಹ ಒಂದು ಘಟನೆ ನಡೆದಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವೀಡಿಯೊದಲ್ಲಿ (Viral Video) ಬಾಲಕಿಯೊಬ್ಬಳು ಫೋನ್ ಹಿಡಿದಿದ್ದಾಗ ಮೊಬೈಲ್ ಸ್ಫೋಟವಾಗಿದೆ. ಅದೃಷ್ಟವಶಾತ್ ಆಕೆ ತೀವ್ರ ಗಾಯಗಳಿಂದ ಪಾರಾಗಿದ್ದಾಳೆ. ಆಕೆಯ ಮನೆಯೊಳಗೆ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಇನ್ನಷ್ಟು…

Read More

ಸಿಬಿಎಫ್​​ಸಿ ಹೊಸ ನಿಯಮ: ನಿರ್ಮಾಪಕರಿಗೆ ತಂದಿದೆ ತಲೆನೋವು

ಸಿಬಿಎಫ್​​ಸಿ (CBFC) ಯಿಂದ ಇತ್ತೀಚೆಗೆ ಕೆಲವು ನಿರ್ಮಾಪಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ನಿರ್ಮಾಪಕರು ಇತ್ತೀಚೆಗಿನ ದಿನಗಳಲ್ಲಿ ಸಿಬಿಎಫ್​​ಸಿ ಬಗ್ಗೆ ಅಸಮಾಧಾನ ಸಹ ಹೊರಹಾಕಿದ್ದಾರೆ. ಕೆಲವರು ಕೇಸುಗಳನ್ನು ಸಹ ದಾಖಲಿಸಿದ್ದಿದೆ. ಇದೀಗ ಸಿಬಿಎಫ್​​ಸಿ ಹೊರ ನಿಯಮವೊಂದನ್ನು ಜಾರಿ ಮಾಡಿದ್ದು, ಈ ನಿಯಮ ನಿರ್ಮಾಪಕರಿಗೆ ಇನ್ನಷ್ಟು ತಲೆನೋವು ತರಲಿದೆ. ಆದರೆ ಇದೊಂದು ಉಪಯುಕ್ತ ನಿಯಮವಾಗಿದ್ದು, ನಿರ್ಮಾಪಕರುಗಳು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಬೇಕಿದೆ. ಸಿಬಿಎಫ್​​ಸಿಯ ನಿಯಮದ ಪ್ರಕಾರ, ಈ ಭಾನುವಾರದ (ಮಾರ್ಚ್ 15) ಪ್ರಮಾಣ ಪತ್ರಕ್ಕೆ ಸಲ್ಲಿಕೆ ಆಗುವ ಎಲ್ಲ…

Read More

ಫೆಬ್ರುವರಿ 2026ರಲ್ಲಿ ರೀಟೇಲ್ ಹಣದುಬ್ಬರ ಶೇ. 3.21ಕ್ಕೆ ಏರಿಕೆ; ಆರ್​ಬಿಐ ಮಿತಿಯಲ್ಲಿ ಬೆಲೆ ಏರಿಕೆ

ನವದೆಹಲಿ, ಮಾರ್ಚ್ 12: ಭಾರತದ ರೀಟೇಲ್ ಹಣದುಬ್ಬರ (Retail Inflation) ಫೆಬ್ರುವರಿಯಲ್ಲಿ ಶೇ. 3.21ರಷ್ಟಿರುವುದು ದಾಖಲಾಗಿದೆ. ಜನವರಿಯಲ್ಲಿ ಹಣದುಬ್ಬರ ಶೇ. 2.74ರಷ್ಟಿತ್ತು. ಫೆಬ್ರುವರಿಯಲ್ಲಿ ಸ್ವಲ್ಪ ಮಟ್ಟಿಗೆ ಬೆಲೆ ಏರಿಕೆ ಆಗಿದೆ. ಶೇ. 3.2 ದರವು ಆರ್​ಬಿಐನ ಶೇ. 4ರ ಹಣದುಬ್ಬರ ಮಿತಿಯ ಗುರಿಯೊಳಗೆಯೇ ಇದೆ. ಗ್ರಾಮೀಣ ಭಾಗದಲ್ಲಿ ಫೆಬ್ರುವರಿಯಲ್ಲಿ ಹಣದುಬ್ಬರ ಶೇ. 3.37 ಇದ್ದರೆ, ನಗರ ಭಾಗದಲ್ಲಿ ಅದು ಶೇ. 3.02ರಷ್ಟಿದೆ. ಗ್ರಾಹಕ ಆಹಾರ ಬೆಲೆ ಅನುಸೂಚಿ ಆಧಾರಿತವಾದ ಹಣದುಬ್ಬರವು ಜನವರಿಯಲ್ಲಿ ಶೇ. 2.13ರಷ್ಟಿತ್ತು. ಫೆಬ್ರುವರಿಯಲ್ಲಿ ಅದು…

Read More

ಹೃದಯ ವಿದ್ರಾವಕ ಘಟನೆ: ಮದುವೆಗೆ ಹೊರಡಬೇಕೆನ್ನುವಷ್ಟರಲ್ಲಿ ಸಂಪ್​ಗೆ ಮಗು ಬಿದ್ದು ಸಾವು

ನೆಲಮಂಗಲ, ಮಾರ್ಚ್​ 12: ಸಂಪ್​ಗೆ ಬಿದ್ದು ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಅಣ್ಣಯ್ಯ ಮತ್ತು ಋತು ದಂಪತಿಯ ಎರಡೂವರೆ ವರ್ಷದ ಚಿರಾಗ್ ಮೃತ ಮಗು. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಮೃತ ಮಗುವನ್ನು ನೆಲಮಂಗಲ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಡೆದಿದ್ದೇನು? ಬೆಂಗಳೂರು ಉತ್ತರ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ಯಾಡರಹಳ್ಳಿಯ ನಿವಾಸಿಗಳಾದ ಅಣ್ಣಯ್ಯ ಮತ್ತು ಋತು ದಂಪತಿ ನಿನ್ನೆ ಮದುವೆ ಹಿನ್ನೆಲೆ…

Read More

IPL 2026: 6 ಉದ್ಘಾಟನಾ ಪಂದ್ಯಗಳನ್ನಾಡಿರುವ ಆರ್​ಸಿಬಿ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು?

19ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಬಿಸಿಸಿಐ ನಿನ್ನೆಯಷ್ಟೆ ಈ ಮಿಲಿಯನ್ ಡಾಲರ್ ಟೂರ್ನಿಯ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ. 15 ದಿನಗಳ ಕಾಲ ನಡೆಯಲಿರುವ ಈ 20 ಪಂದ್ಯಗಳಲ್ಲಿ ಹಾಲಿ ಚಾಂಪಿಯನ್ ಆರ್​ಸಿಬಿ 4 ಪಂದ್ಯಗಳನ್ನು ಆಡಲಿದೆ. ಅದರಲ್ಲಿ ಉದ್ಘಾಟನಾ ಪಂದ್ಯವೂ ಸೇರಿದೆ. ಹಾಗಿದ್ದರೆ, ಆರ್​ಸಿಬಿ ಇದುವರೆಗೆ ಎಷ್ಟು ಉದ್ಘಾಟನಾ ಪಂದ್ಯಗಳನ್ನಾಡಿದೆ? ಅದರಲ್ಲಿ ತಂಡದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡುವುದಾದರೆ.. ಆರ್​ಸಿಬಿ ಹಾಲಿ ಚಾಂಪಿಯನ್ ಆಗಿರುವ ಕಾರಣ ಉದ್ಘಾಟನಾ ಪಂದ್ಯವನ್ನು…

Read More

ವಿಚ್ಛೇದನದ ಬಗ್ಗೆ ವಿಜಯ್ ಮಾತು: ಹಳೆ ವಿಡಿಯೋ ವೈರಲ್ ಮಾಡಿ ಟ್ರೋಲ್

ದಳಪತಿ ವಿಜಯ್ (Thalapathy Vijay) ಪತ್ನಿ ವಿಚ್ಛೇದನಕ್ಕಾಗಿ ಅರ್ಜಿ ಹಾಕಿದ್ದು, ನಟ ವಿಜಯ್​​ಗೆ ನಟಿಯೊಬ್ಬರೊಟ್ಟಿಗೆ ಸಂಬಂಧ ಇದೆ, ಇದೇ ಆಧಾರದ ಮೇಲೆ ತಮಗೆ ಜೀವನಾಂಶದ ಜೊತೆಗೆ ವಿಚ್ಛೇದನ ಕೊಡಿಸಬೇಕು ಎಂದು ನ್ಯಾಯಾಲಯದಲ್ಲಿ ಕೇಳಿಕೊಂಡಿದ್ದಾರೆ. ಅದರ ಬೆನ್ನಲ್ಲೆ, ವಿಜಯ್ ಸಹ ನಟಿ ತ್ರಿಷಾ ಜೊತೆಗೆ ಬಹಿರಂಗವಾಗಿ ಕಾಣಿಸಿಕೊಂಡಿದ್ದು, ತಮ್ಮ ವಿಚ್ಛೇದನ ವಿಷಯವನ್ನು ಖಾತ್ರಿ ಪಡಿಸಿದ್ದಾರೆ. ವಿಜಯ್ ವಿಚ್ಛೇದನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಟಾಪಿಕ್ ಆಗಿದೆ. ಹೀಗಿರುವಾಗಲೇ ವಿಜಯ್ ಅವರ ಹಳೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್…

Read More

ಭಾರತೀಯರ ಸುರಕ್ಷತೆ ಕುರಿತು ಸಚಿವರಿಂದ ಇರಾನ್ ಜೊತೆ 3 ಬಾರಿ ಮಾತುಕತೆ; ವಿದೇಶಾಂಗ ಸಚಿವಾಲಯ ಮಾಹಿತಿ

ನವದೆಹಲಿ, ಮಾರ್ಚ್ 12: ಭಾರತೀಯ ಹಡಗುಗಳ ಸುರಕ್ಷಿತ ಸಾಗಣೆ, ಇಂಧನ ಭದ್ರತೆ ಕುರಿತು ವಿದೇಶಾಂಗ ಸಚಿವ ಎಸ್. ಜೈಶಂಕರ್ (S Jaishankar) ಇರಾನಿನ ವಿದೇಶಾಂಗ ಸಚಿವರೊಂದಿಗೆ ಮೂರು ಕರೆಗಳನ್ನು ನಡೆಸಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನಿನ ಸಚಿವರು ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮೂರು ಸುತ್ತಿನ ಮಾತುಕತೆ ನಡೆಸಿದ್ದಾರೆ. ಭಾರತಕ್ಕೆ ಹೋಗುವ ಹಡಗುಗಳ ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ….

Read More

‘ಧುರಂಧರ್ 2’ ಬಿಡುಗಡೆಗೆ ಮುಂಚೆ ಮರು ಬಿಡುಗಡೆ ಆಯ್ತು ‘ಧುರಂಧರ್’

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಮಾರ್ಚ್ 19ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಮಾರ್ಚ್ 18ರಂದು ಸಿನಿಮಾದ ಪ್ರೀಮಿಯರ್ ಶೋ ಆಯೋಜನೆಗೊಳ್ಳಲಿದೆ. ಸಿನಿಮಾದ ಬಿಡುಗಡೆಗೆ ಇನ್ನೂ ಒಂದು ವಾರ ಇರುವಾಗಲೇ ಇದೇ ಸಿನಿಮಾದ ಮೊದಲ ಭಾಗ ‘ಧುರಂಧರ್’ ಮರು ಬಿಡುಗಡೆ ಆಗಿದೆ. 2025ರ ಡಿಸೆಂಬರ್​​ನಲ್ಲಿ ಬಿಡುಗಡೆ ಆಗಿ ಬ್ಲಾಕ್ ಬಸ್ಟರ್ ಆಗಿದ್ದ ‘ಧುರಂಧರ್’ ಸಿನಿಮಾ ಇದೀಗ ಮಾರ್ಚ್ 12 ರಂದು ಮರು ಬಿಡುಗಡೆ ಆಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ….

Read More

ಪೆಟ್ರೋಲ್, ಎಲ್​ಪಿಜಿ ಕೊರತೆ ಇಲ್ಲ: ಸಂಸತ್​ನಲ್ಲಿ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ

ನವದೆಹಲಿ, ಮಾರ್ಚ್ 12: ದೇಶದಲ್ಲಿ ಪೆಟ್ರೋಲ್, ಡೀಸಲ್, ಸೀಮೆ ಎಣ್ಣೆ ಅಥವಾ ಎಲ್​ಪಿಜಿ ಲಭ್ಯತೆಯಲ್ಲಿ ಯಾವುದೇ ಕೊರತೆ ಆಗಿಲ್ಲ. ಇಂಧನ ಲಭ್ಯತೆ ಸಾಕಷ್ಟಿದೆ. ಇಂಧನ ಸರಬರಾಜು ಸರಪಳಿ ಸರಾಗವಾಗಿ ಇದೆ ಎಂದು ಸರ್ಕಾರ ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಂಸತ್​ನಲ್ಲಿ ಗುರುವಾರ ಮಾತನಾಡಿದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri), ಭಾರತದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದ್ದು ಯಾವುದೇ ರೀತಿಯಲ್ಲಿ ಆತಂಕಪಡಬೇಕಾದ ಪರಿಸ್ಥಿತಿ ಇಲ್ಲ ಎಂದು ಹೇಳಿದ್ದಾರೆ. ಪೆಟ್ರೋಲ್ ಆಗಲೀ, ಡೀಸಲ್…

Read More