Category Archives: Blog

Your blog category

ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ವಿಶ್ವಗುರು ಬಸವಣ್ಣ-ಅಕ್ಕಮಹಾದೇವಿ ಬಗ್ಗೆ ಅಶ್ಲೀಲ ಮಾತು: ಸಿಡಿದೆದ್ದ ಅನುಯಾಯಿಗಳು

ವಿಜಯಪುರ, ಮಾರ್ಚ್​ 12: ಜಗತ್ತಿಗೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣ (Basavanna) ಹಾಗೂ ವೈರಾಗ್ಯಮೂರ್ತಿ, ವಚನಗಾರ್ತಿ ಅಕ್ಕಮಹಾದೇವಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕವಾದ ಹಾಗೂ ಅಶ್ಲೀಲ ಪದಗಳ ಸಹಿತ ಬರವಣಿಗೆ ಪೋಸ್ಟ್ ಮಾಡಿ ಹರಿಬಿಡಲಾಗಿದೆ. ಫೇಸ್ಬುಕ್​​ನಲ್ಲಿ ಹರಿ ಬಿಟ್ಟವರ ವಿರುದ್ದ ಬಸವ ಅನುಯಾಯಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ.

ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ನಿಂದನೆ ಪೋಸ್ಟ್​​

ಬಸವ ಜನ್ಮಭೂಮಿ ವಿಜಯಪುರ ಜಿಲ್ಲೆಯಲ್ಲಿ ಬಸವಾದಿ ಶರಣರ ಅನುಯಾಯಿಗಳ ಆಕ್ರೋಶಗೊಂಡಿದ್ಧಾರೆ. ನ್ಯಾಯಬೇಕೆಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿ ಘೋಷಣೆ ಕೂಗಿ ಆಕ್ರೋಶದ ಕಿಡಿ ಹೊತ್ತಿಸಿದ್ದಾರೆ. ಇಷ್ಟೆಕ್ಕೆಲ್ಲಾ ಕಾರಣ ಸೋಷಿಯಲ್ ಮೀಡಿಯಾದಲ್ಲಿ ವಿಶ್ವಗುರು ಬಸವಣ್ಣ ಹಾಗೂ ಮಹಾಶರಣೆ ಅಕ್ಕಮಹಾದೇವಿ ಅವರ ಕುರಿತು ನಿಂದನಾತ್ಮಕ ಹಾಗೂ ಅಶ್ಲೀಲ ಶಬ್ದಗಳ ಬಳಕೆ ಮಾಡಿ ಹರಿಬಿಟ್ಟಿರುವ ಪೋಸ್ಟ್.

ಇದನ್ನೂ ಓದಿ: ಬಬಲಾದಿ ಕಾಲಜ್ಞಾನ ನಿಜವಾಯಿತೇ?: ಯುದ್ಧ ಆಯಿತು, ಮುಂದೆ ಪ್ರವಾಹ, ಭಾರತಕ್ಕೆ ಗಡಿ ಆತಂಕ!

ರಮಾಕಾಂತ ಎಂ ಎಂಬ ಹೆಸರಿನ ಖಾತೆಯ ಫೇಸ್ಬುಕ್​​ನಲ್ಲಿ ಈ ಪೋಸ್ಟ್​​ ಹರಿಬಿಡಲಾಗಿದೆ. ಇದಕ್ಕೆ ಬಸವ ಅನುಯಾಯಿಗಳು ತೀವ್ರವಾಗಿ ವಿರೋಧಿಸಿ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡಿದ್ದಾರೆ. ಬಸವಣ್ಣ ಹಾಗೂ ಅಕ್ಕಮಹಾದೇವಿಯವರಿಗೆ ಉದ್ದೇಶ ಪೂರ್ವಕವಾಗಿ ಅವಮಾನ ಮಾಡಿದ್ದಾರೆ. ಜೊತೆಗೆ ರಮಾಕಾಂತ ಎಂ ಎಂಬುವವರ ವಿರುದ್ದ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ಧಾರೆ.

ರಮಾಕಾಂತ ಎಂ ಎಂಬುವರ ಫೆಸ್​​ಬುಕ್​ನಲ್ಲಿ ಬಸವಣ್ಣನವರ ಹಾಗೂ ಅಕ್ಕಮಹಾದೇವಿಯರ ಕುರಿತು ಹಾಕಿರುವ ಆಕ್ಷೇಪಾರ್ಹ ಪೋಸ್ಟ್​​ ಎಲ್ಲೆಡೆ ವೈರಲ್ ಆಗಿದೆ. ಪೋಸ್ಟ್ ಖಂಡಿಸಿ ಕೆಲ ಬಸವವಾದಿ ಶರಣ ಅನುಯಾಯಿಗಳು ಪೋಸ್ಟ್ ವಿರುದ್ದ ಕಮೆಂಟ್​ ಹಾಕಿ ವಿರೋಧಿಸಿದ್ದಾರೆ. ಸದ್ಯ ಪೋಸ್ಟ್ ಹಾಕಿದ್ದವರ ಕುರಿತು ಬಸವನಬಾಗೇವಾಡಿ ಪೊಲೀಸರು ತನಿಖೆ ನಡೆಸಿದ್ದಾರೆ. ನಕಲಿ ಖಾತೆ ಮೂಲಕ ಈ ಪೋಸ್ಟ್​​ ಹಾಕಿರುವ ಸಂಶಯವೂ ವ್ಯಕ್ತವಾಗಿದೆ. ಉದ್ದೇಶಪೂರ್ವಕವಾಗಿ ಸಮಾಜದಲ್ಲಿ ಗಲಭೆ, ಗಲಾಟೆ ಆಗಬೇಕೆಂಬ ದುರುದ್ದೇಶದಿಂದ ಈ ಪೋಸ್ಟ್ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಗ್ರ ಹೋರಾಟದ ಎಚ್ಚರಿಕೆ

ಒಟ್ಟಿನಲ್ಲಿ ಬಸವಣ್ಣ ಹಾಗೂ ಅಕ್ಕಮಹಾದೇವಿ ಕುರಿತು ಅವಹೇಳಕಾರಿಯಾಗಿ, ನಿಂದನಾತ್ಮಕವಾಗಿ ಪೋಸ್ಟ್ ಮಾಡಿರುವ ರಮಾಕಾಂತ ಎಂ ಹಾಗೂ ಆತನನ್ನ ಬೆಂಬಲಿಸಿದ್ದರೆ ಅವರೆಲ್ಲರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಬಂಧಿಸಬೇಕು. ಇಲ್ಲವಾದರೆ ಬಸವಾದಿ ಶರಣರ ಅನುಯಾಯಿಗಳು ಬಸವ ಭಕ್ತರು ಉಗ್ರ ಹೋರಾಟ ಪ್ರತಿಭಟನೆ ನಡೆಸುತ್ತೇವೆಂದು ಬಸವ ಅನುಯಾಯಿ ಪ್ರಭಗೌಡ ಪಾಟೀಲ್​​​ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದಂತೆ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗಳಿಗೆ ಬೆಂಕಿ

ಬಸವಾದಿ ಶರಣರ ಅನುಯಾಯಿಗಳು ನೀಡಿರುವ ಮನವಿ ಪತ್ರವನ್ನು ಸ್ವೀಕಾರ ಮಾಡಿರುವ ಜಿಲ್ಲಾಡಳಿತ ಸೂಕ್ತ ಕ್ರಮದ ಭರವಸೆ ನೀಡಿದೆ. ಘಟನೆ ಕುರಿತು ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮಾಹಿತಿ ನೀಡಿ ಪೋಸ್ಟ್ ಮಾಡಿದವನ ಪತ್ತೆ ಹಾಗೂ ಬಂಧನಕ್ಕೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಹಬ್ಬ ಮುಗಿದ ಮೂರೇ ದಿನಕ್ಕೆ ದೇಗುಲಕ್ಕೆ ಕನ್ನ: 4 ಕೆಜಿ ಬೆಳ್ಳಿ, 30 ಗ್ರಾಂ ಚಿನ್ನಾಭರಣ ದೋಚಿ ಪರಾರಿ

ಚಾಮರಾಜನಗರ, ಮಾರ್ಚ್​ 12: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ನಿರಂತರವಾಗಿ ದುಷ್ಕರ್ಮಿಗಳು ಕಳ್ಳತನ ಎಸಗುತ್ತಿದ್ದಾರೆ. ಇತ್ತೀಚೆಗೆ ಗುಂಡ್ಲುಪೇಟೆ ತಾಲೂಕಿನ ಆರು ದೇವಸ್ಥಾನಗಳಲ್ಲಿ ಕಳ್ಳತನವಾಗಿತ್ತು (Temple Theft). ಆ ಘಟನೆ ಮಾಸುವ ಮುನ್ನವೇ ಇದೀಗ ಕಳ್ಳರು ಮತ್ತೆ ಕೈಚಳಕ ತೋರಿಸಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಹಬ್ಬ ಮುಗಿದ ಮೂರೇ ದಿನಕ್ಕೆ ದೇವಸ್ಥಾನದ ಬಾಗಿಲೂ ಮೀಟಿ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.

ನಡೆದಿದ್ದೇನು?

ಚಾಮರಾಜನಗರ ಜಿಲ್ಲೆಯಲ್ಲಿ ಕಳ್ಳರ ಕೈಚಳಕ ಮುಂದುವರೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಗ್ರಾಮದಲ್ಲಿ ಬುಧವಾರ ತಡರಾತ್ರಿ ಬಸವೇಶ್ವರ ಮತ್ತು ಮಾರಮ್ಮ ದೇವಸ್ಥಾನದ ಬಾಗಿಲುಗಳನ್ನು ಮೀಟಿ ಕಳ್ಳತನ ಮಾಡಲಾಗಿದೆ. ಹಬ್ಬ ಮುಗಿದು ಮೂರೇ ದಿನಕ್ಕೆ ದೇಗುಲದಲ್ಲಿದ್ದ 4 ಕೆ.ಜಿ ಬೆಳ್ಳಿ ಮತ್ತು 30 ಗ್ರಾಂ ಚಿನ್ನಾಭರಣ ದೋಚಿ ಕಳ್ಳರು ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಮಂತ್ರಾಲಯಕ್ಕೆ ಹೋಗುವುದು ಅವರ ಕನಸಾಗಿತ್ತು: ಹರಕೆ ತೀರಿಸಿ ರಾಯರ ದರ್ಶನ ಪಡೆಯಲು ಹೋದ ವ್ಯಕ್ತಿ ನಾಪತ್ತೆ

ಕಳ್ಳರು ದೋಚುವ ಮುಂಚೆ ಮೊದಲು ಸಿಸಿಟಿವಿ ಕ್ಯಾಮೆರಾದ ಹಾರ್ಡಿಸ್ಕ್ ಎಗರಿಸಿದ್ದಾರೆ. ಕಳ್ಳತನ ಸುಳಿವಿಲ್ಲದಂತೆ ಖದೀಮರು ಕೃತ್ಯವೆಸಗಿದ್ದಾರೆ. ಸದ್ಯ ಗ್ರಾಮಸ್ಥರು ಕೃತ್ಯ ಪೂರ್ವ ನಿಯೋಜಿತ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಭೇಟಿ ನೀಡಿದ್ದು, ಜೊತೆಗೆ ಡಾಗ್ ಸ್ಕೋಡ್, ಬೆಳರಚ್ಚು ತಜ್ಞರಿಂದ ತೀವ್ರ ಪರಿಶೀಲನೆ ಮಾಡಲಾಗಿದೆ.

ಬೀದರ್ ಜಿಲ್ಲೆಯಲ್ಲಿ ವಿವಿಧ ಕಡೆ ಕಳ್ಳತನ

ಬೀದರ್ ಜಿಲ್ಲೆಯಲ್ಲಿ ವಿವಿಧ ಕಡೆ ಕಳ್ಳತನ ಪ್ರಕರಣಗಳು ನಡೆದಿವೆ. ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಇತ್ತೀಚೆಗೆ ಸರಣಿ ಕಳ್ಳತನ ನಡೆದಿವೆ. ಚಿಟಗುಪ್ಪಾ ತಾಲೂಕಿನ ಮಂಗಲಗಿ, ಮುಸ್ತರಿವಾಡಿ ಹಾಗೂ ಮುತ್ತಂಗಿ ಗ್ರಾಮಗಳಲ್ಲಿ ಕಳ್ಳರು ಕೈಚಳಕ ತೋರಿದ್ದರು. ಮಂಗಲಗಿ ಗ್ರಾಮದ ಲಕ್ಷ್ಮೀ ದೇವಸ್ಥಾನ ಹಾಗೂ ಮುಸ್ತರಿವಾಡಿಯ ಭವಾನಿ ದೇವಸ್ಥಾನಗಳಲ್ಲಿ ಕಳ್ಳರು ನುಗ್ಗಿ ದೇವಿಯ ಕೊರಳಲ್ಲಿದ್ದ ತಾಳಿ ಕದ್ದು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಈಡೇರಲಿಲ್ಲ ಚಂಗಡಿ ಗ್ರಾಮಸ್ಥರ ಕನಸು: ಕಲ್ಲು-ಮುಳ್ಳಿನ ಹಾದಿ, 23 ಕಿಮೀ ಕಾಡಿನಲ್ಲಿ ಜನರ ನಿತ್ಯ ದರ್ಶನ

ಇದೇ ವೇಳೆ ಮುತ್ತಂಗಿ ಗ್ರಾಮದ ಡಿಸಿಸಿ ಬ್ಯಾಂಕ್ ಶಾಖೆಯ ಕೀ ಮುರಿದು ಬ್ಯಾಂಕ್ ದರೋಡೆಗೆ ಕಳ್ಳರು ಯತ್ನಿಸಿದ್ದರು. ಆದರೆ ಯತ್ನ ವಿಫಲವಾಗಿತ್ತು. ಮಂಗಲಗಿ ಗ್ರಾಮದಲ್ಲಿ ಮೂರು ಮನೆಗಳು ಹಾಗೂ ಒಂದು ಕಿರಾಣಿ ಅಂಗಡಿಯಲ್ಲಿ ಕೂಡ ಕಳ್ಳತನ ನಡೆದಿತ್ತು. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಕಳ್ಳರು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನ ಮಾಡಿದ್ದಾರೆ. ಈ ಕುರಿತಾಗಿ ಮನ್ನಾಏಖೆಳ್ಳಿ ಹಾಗೂ ಚಿಟಗುಪ್ಪಾ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಚೆನ್ನೈನ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರ

ಚೆನ್ನೈ, ಮಾರ್ಚ್ 12: ತಮಿಳುನಾಡಿನ ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಬಂದಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಅಪಹರಿಸಿದ ಗ್ಯಾಂಗ್ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಚೆನ್ನೈನಲ್ಲಿ ಬೆಳಕಿಗೆ ಬಂದಿದೆ. ಅತ್ಯಾಚಾರಕ್ಕೊಳಗಾದ ಯುವತಿ ಅಭಿರಾಮಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಆರಂಭವಾಗಿದೆ.

ಆ ವಿದ್ಯಾರ್ಥಿನಿ ಫೆಬ್ರವರಿ 14ರಂದು ತಿರುಚ್ಚಿಯಿಂದ ಪ್ರಾಜೆಕ್ಟ್‌ಗಾಗಿ ಚೆನ್ನೈಗೆ ಬಂದಿದ್ದರು. ಬಂದ ಕೆಲವೇ ದಿನಗಳಲ್ಲಿ, ಕೆಲವು ವ್ಯಕ್ತಿಗಳು ಆಕೆಯ ಫೋಟೋವನ್ನು ಮಾರ್ಫ್ ಮಾಡಿ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಬಳಿಕ, 4 ಜನರ ತಂಡ ಆಕೆಯನ್ನು ಅಡ್ಯಾರ್‌ನ ಖಾಸಗಿ ಹಾಸ್ಟೆಲ್‌ನಿಂದ ಅಪಹರಿಸಿದ್ದರು. ಅವರು ಆ ವಿದ್ಯಾರ್ಥಿನಿಯ ಮುಖಕ್ಕೆ ನಿದ್ರಾಜನಕ ಪುಡಿಯನ್ನು ಹಚ್ಚಿ, ಪ್ರಜ್ಞೆ ತಪ್ಪಿಸಿ ಒಂದು ಗಂಟೆಯ ನಂತರ ಬೇರೆ ಸ್ಥಳದಲ್ಲಿ ಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಮಲಗಿದ್ದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ, ಎಸೆದು ಹೋದ ಪಾಪಿಗಳು

ಕಾಲೇಜು ವಿದ್ಯಾರ್ಥಿನಿಯ ದೂರಿನ ನಂತರ ಅಭಿರಾಮಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯ ನಂತರ, ವಿದ್ಯಾರ್ಥಿನಿ ತನ್ನ ಆರೋಗ್ಯದಲ್ಲಿ ಬದಲಾವಣೆಗಳನ್ನು ಗಮನಿಸಿದರು. ಮಾರ್ಚ್ 10ರ ಸಂಜೆ ಚಿಕಿತ್ಸೆಗಾಗಿ ಅಡ್ಯಾರ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲ್ಪಟ್ಟರು. ಆಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಆ ಗ್ಯಾಂಗ್ ಆಕೆಯನ್ನು ಮತ್ತೆ ಕಾರಿನಲ್ಲಿ ಅಪಹರಿಸಿತು. ಪೊಲೀಸರಿಗೆ ಮಾಹಿತಿ ನೀಡಿದರೆ ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಬಳಿಕ ಅವರು ಆಕೆಯ ಮೇಲೆ ಅತ್ಯಾಚಾರ ನಡೆಸಿದರು.

ಇದನ್ನೂ ಓದಿ: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಕೇಸ್​​: ತನಿಖೆ ವೇಳೆ ಸಿಸಿಟಿವಿ ರಹಸ್ಯ ಬಯಲು

ಸೋಮವಾರ ಸಂಜೆ ಕೊಟ್ಟೂರುಪುರಂ ಪೊಲೀಸ್ ವ್ಯಾಪ್ತಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಗ್ಯಾಂಗ್ ಒಂದು ಆಕೆಯನ್ನು ಕಾರಿನಲ್ಲಿ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ದೂರು ನೀಡಿದ ಯುವತಿ ತಾನು ಪ್ರಜ್ಞೆ ಕಳೆದುಕೊಂಡು ಸುಮಾರು 1 ಗಂಟೆಯ ನಂತರ ಬಿಟ್ಟು ಹೋಗಿರುವುದಾಗಿ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ವಿರುದ್ಧದ ಅಪರಾಧ (CAWC) ವಿಭಾಗವು ದೂರಿನ ತನಿಖೆ ನಡೆಸುತ್ತಿದೆ. “ಮಹಿಳೆ ಅಪಹರಣಕ್ಕೊಳಗಾಗಿರುವುದಾಗಿ ಹೇಳಿರುವ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ನಾವು ಪರಿಶೀಲಿಸುತ್ತಿದ್ದೇವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಕ್ಷಪಾತ ಮಾಡಿಲ್ಲ, ಸದನಕ್ಕಿಂತ ವಿಪಕ್ಷ ನಾಯಕ ಮೇಲಲ್ಲ; ರಾಹುಲ್ ಗಾಂಧಿಗೆ ಸ್ಪೀಕರ್ ಓಂ ಬಿರ್ಲಾ ತಿರುಗೇಟು

ನವದೆಹಲಿ, ಮಾರ್ಚ್ 12: ಪ್ರತಿಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಸದನದಲ್ಲಿ ಸೋತ ನಂತರ ಇಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ತಮ್ಮ ಕರ್ತವ್ಯವನ್ನು ಪುನರಾರಂಭಿಸಿದ್ದಾರೆ. ನಾನು ಯಾವುದೇ ಪಕ್ಷಪಾತ ಮಾಡಿಲ್ಲ ಎಂದಿರುವ ಓಂ ಬಿರ್ಲಾ, ಪ್ರತಿ ಸಂಸದರಿಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಸಿಗುವಂತೆ ನೋಡಿಕೊಳ್ಳಲು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ. ವಿರೋಧ ಪಕ್ಷದ ನಾಯಕರು ಸದನಕ್ಕಿಂತಲೂ ಎಂದು ರಾಹುಲ್ ಗಾಂಧಿಯನ್ನು ಟೀಕಿಸಿದ್ದಾರೆ.

ನಿನ್ನೆ ವಿಪಕ್ಷದ ಅವಿಶ್ವಾಸ ನಿರ್ಣಯವು ಲೋಕಸಭೆಯಲ್ಲಿ ಸೋತಿತ್ತು. ಇದಾದ ಒಂದು ದಿನದ ನಂತರ, ಸ್ಪೀಕರ್ ಓಂ ಬಿರ್ಲಾ ಇಂದು (ಮಾರ್ಚ್ 12) ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅಥವಾ ಇತರ ಸದಸ್ಯರನ್ನು ಸದನದಲ್ಲಿ ಮಾತನಾಡದಂತೆ ತಡೆಯಲಾಗಿದೆ ಎಂಬ ಆರೋಪಗಳನ್ನು ನಿರಾಕರಿಸಿದ್ದಾರೆ. “ಪ್ರತಿಯೊಬ್ಬ ಸಂಸದರಿಗೂ ನಿಯಮಗಳ ಪ್ರಕಾರ ಮಾತನಾಡುವ ಹಕ್ಕಿದೆ. ನಾನು ಆ ಅವಕಾಶ ನೀಡಿದ್ದೇನೆ” ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ಫೆ. 4ರಂದು ಅಧಿವೇಶನದಲ್ಲಿ ನಡೆದಿದ್ದೇನು? ಕಾಂಗ್ರೆಸ್ ಮಹಿಳಾ ಸಂಸದರ 2 ವಿಡಿಯೋ ರಿಲೀಸ್ ಮಾಡಿದ ಬಿಜೆಪಿ

ಫೆಬ್ರವರಿ 13ರಂದು ಕೊನೆಗೊಂಡ ಬಜೆಟ್ ಅಧಿವೇಶನದ ಮೊದಲ ಭಾಗದಲ್ಲಿ ಅವಿಶ್ವಾಸ ನಿರ್ಣಯಕ್ಕೆ ನೋಟಿಸ್ ನೀಡಿದ ನಂತರ ಇಂದು ಓಂ ಬಿರ್ಲಾ ಮೊದಲ ಬಾರಿಗೆ ಸದನಕ್ಕೆ ಬಂದರು. ಅಧಿವೇಶನದ ಎರಡನೇ ಭಾಗ ಮಾರ್ಚ್ 9ರಂದು ಪ್ರಾರಂಭವಾಯಿತು.

ವಿರೋಧ ಪಕ್ಷಕ್ಕೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಸದನವು ಸ್ಥಾಪಿತ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ. ಸದಸ್ಯರು ಸದನವನ್ನು ಉದ್ದೇಶಿಸಿ ಮಾತನಾಡುವ ಮೊದಲು ಸ್ಪೀಕರ್​ರಿಂದ ಅನುಮತಿ ಪಡೆಯಬೇಕು. ಲೋಕಸಭೆಯ ನಿಯಮಗಳಿಗಿಂತ ಯಾರೂ ಮೇಲಲ್ಲ ಎಂದು ಅವರು ಒತ್ತಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾಸ್‌ ಉಳಿತಾಯ ಮಾಡಲು ಈ ಸಿಂಪಲ್‌ ಸಲಹೆ ಅನುಸರಿಸಿ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಕಾರಣದಿಂದಾಗಿ ಜಾಗತಿಕ ಅನಿಲ ಸರಬರಾಜಿನಲ್ಲಿ ಅಡಚಣೆ ಉಂಟಾಗಿದ್ದು,  ಭಾರತದಲ್ಲಿ ಕಮರ್ಷಿಯಲ್‌ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ಇದರ ಪರಿಣಾಮ ದೇಶದ ಹಲವು ನಗರಗಳಲ್ಲಿ ವಾಣಿಜ್ಯ ಸಿಲಿಂಡರ್‌‌ (Gas cylinder) ಅಲಭ್ಯತೆಯಿಂದಾಗಿ  ಹೊಟೇಲ್‌ ಉದ್ಯಮಗಳಿಗೆ ಪೆಟ್ಟು ಬಿದ್ದಿದೆ. ಅಷ್ಟೇ ಅಲ್ಲದೆ ಜನರು ಸಹ ಕಮರ್ಷಿಯಲ್‌ ಗ್ಯಾಸ್‌ ಸಿಗದೆ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮನೆಯಲ್ಲಿ ಉಪಯೋಗಿಸುತ್ತಿರುವಂತಹ ಗ್ಯಾಸ್‌ ಬೇಗ ಖಾಲಿಯಾಗಬಾರದು, ಹೆಚ್ಚು ಸಮಯದವರೆಗೆ ಬಾಳಿಕೆ ಬರಬೇಕು ಅಂತಾದ್ರೆ, ಅಡುಗೆ ಮಾಡುವ ಸಂದರ್ಭದಲ್ಲಿ ಈ ಕೆಲವೊಂದು ಸಲಹೆಗಳನ್ನು ಪಾಲಿಸಿ. ಈ ಮೂಲಕ ಗ್ಯಾಸ್‌ ವ್ಯರ್ಥವಾಗದಂತೆ ನೋಡಿಕೊಳ್ಳಬಹುದು.

ಗ್ಯಾಸ್‌ ಉಳಿತಾಯ ಮಾಡುವುದು ಹೇಗೆ?

ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ: ಹೆಚ್ಚಿನ ಉರಿಯಲ್ಲಿ ಆಹಾರ ವೇಗವಾಗಿ ಬೇಯುತ್ತದೆ ಎಂದು ಜನರು ಸಾಮಾನ್ಯವಾಗಿ ಭಾವಿಸುತ್ತಾರೆ, ಆದರೆ ಹೆಚ್ಚಿನ ಶಾಖವು ಆಹಾರವನ್ನು ಬೇಗನೆ ಸುಡಬಹುದು ಮತ್ತು ಅನಿಲ ಬಳಕೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ, ಬೇಳೆ, ತರಕಾರಿಗಳು ಹಾಗೂ ಅನ್ನ ಬೇಯಿಸುವ ಸಂದರ್ಭದಲ್ಲಿ  ಮಧ್ಯಮ ಉರಿಯಲ್ಲಿ ಅವುಗಳನ್ನು ಬೇಯಿಸುವುದು ಉತ್ತಮ. ಇದರಿಂದ ಆಹಾರ ಸರಿಯಾಗಿ ಬೇಯುತ್ತದೆ ಜೊತೆಗೆ ಇದು ಅನಿಲವನ್ನು ಉಳಿಸುತ್ತದೆ.

ಅಡುಗೆ ಮಾಡುವಾಗ ಯಾವಾಗಲೂ ಮುಚ್ಚಳವನ್ನು ಮುಚ್ಚಿ: ಗ್ಯಾಸ್‌ ಬೇಗ ಖಾಲಿಯಾಗಬಾರದೆಂದರೆ ಅಡುಗೆ ಮಾಡುವಾಗ ಪ್ಯಾನ್ ಅನ್ನು ಯಾವಾಗಲೂ ಮುಚ್ಚಿಡಬೇಕು. ಮುಚ್ಚಳ ಮುಚ್ಚದೆ ಆಹಾರವನ್ನು ಬೇಯಿಸಿದಾಗ, ಶಾಖವು ಉಗಿಯೊಂದಿಗೆ ಹೊರಹೋಗುತ್ತದೆ ಮತ್ತು ಇದರಿಂದಾಗಿ ಆಹಾರ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದೇ ಮುಚ್ಚಳ ಮುಚ್ಚುವುದರಿಂದ, ಪಾತ್ರೆಯ ಆ ಮುಚ್ಚಳವು ಉಗಿಯನ್ನು ಒಳಗೆ ಇಡುತ್ತದೆ, ಇದು ಆಹಾರವನ್ನು ವೇಗವಾಗಿ ಬೇಯಿಸುತ್ತದೆ ಮತ್ತು ಸುಮಾರು 20-25% ಅನಿಲವನ್ನು ಉಳಿಸುತ್ತದೆ.

ಸರಿಯಾದ ಗಾತ್ರದ ಪಾತ್ರೆ ಬಳಸಿ: ನೀವು ಚಿಕ್ಕ ಗ್ಯಾಸ್ ಬರ್ನರ್‌ನಲ್ಲಿ ಅಡುಗೆ ಮಾಡುತ್ತೀರಿ ಎಂದಾದರೆ  ಅದಕ್ಕೆ ತಕ್ಕಂತೆ ಚಿಕ್ಕ ಪಾತ್ರೆಯನ್ನೇ ಬಳಸಿ. ಸಣ್ಣ ಬರ್ನರ್ ಮೇಲೆ ದೊಡ್ಡ ಪಾತ್ರೆಯನ್ನು ಇಡುವುದರಿಂದ ಹೆಚ್ಚಿನ ಅನಿಲ ಖರ್ಚಾಗುತ್ತದೆ.

ಅಡುಗೆಗೆ ಪ್ರೆಶರ್ ಕುಕ್ಕರ್ ಬಳಸಿ: ಪ್ರೆಶರ್ ಕುಕ್ಕರ್‌ಗಳನ್ನು ಅನಿಲ ಉಳಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗುತ್ತದೆ. ಕುಕ್ಕರ್‌ನಲ್ಲಿ ಆಹಾರ ಬೇಗನೆ ಬೇಯುತ್ತದೆ. ಆದ್ದರಿಂದ ಅನ್ನ, ಬೇಳೆ, ತರಕಾರಿಗಳನ್ನು ಆದಷ್ಟು ಕುಕ್ಕರ್‌ನಲ್ಲಿಯೇ ಬೇಯಿಸಿ.

ಅನಿಲ ಹಚ್ಚುವ ಮೊದಲು ತಯಾರಿ ಮಾಡಿ: ಅನೇಕ ಬಾರಿ, ಜನರು ಗ್ಯಾಸ್ ಸ್ಟೌವ್ ಹಚ್ಚಿ ನಂತರ ತರಕಾರಿಗಳನ್ನು ಕತ್ತರಿಸಲು ಅಥವಾ ಬೇಕಾಗಿರುವ ಮಸಾಲೆಗಳನ್ನು ತಯಾರಿಸಲು ಪ್ರಾರಂಭಿಸುತ್ತಾರೆ, ಇದರಿಂದಾಗಿ ಗ್ಯಾಸ್ ಅನಗತ್ಯವಾಗಿ ಉರಿಯುತ್ತದೆ. ಆದ್ದರಿಂದ ಅಡುಗೆ ಮಾಡಲು ಬೇಕಾದ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಿ. ಇದು ಅಡುಗೆಯನ್ನು ವೇಗಗೊಳಿಸುತ್ತದೆ ಮತ್ತು ಅನಿಲವನ್ನು ಉಳಿಸುತ್ತದೆ.

ಇದನ್ನೂ ಓದಿ: ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಖಾಲಿಯಾಗಿದೆ ಎಂಬುದನ್ನು ತಿಳಿಯಲು ಟ್ರಿಕ್ಸ್‌ ಪಾಲಿಸಿ

ಅಡುಗೆಗೂ ಮುನ್ನ ಕಾಳುಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ: ನೀವು ಬೇಳೆ,  ಅಥವಾ ಯಾವುದೇ ದ್ವಿದಳ ಧಾನ್ಯ ಕಾಳುಗಳನ್ನು ಬೇಯಿಸುತ್ತಿದ್ದೀರಿ ಎಂದಾದ್ರೆ ಅಡುಗೆ ಮಾಡುವ ಮೊದಲು ಅವುಗಳನ್ನು ಕನಿಷ್ಠ ಅರ್ಧ ಗಂಟೆಗಳ ಕಾಲ  ಬೆಚ್ಚಗಿನ ನೀರಿನಲ್ಲಿ ನೆನೆಸಿಡಿ. ಇದು ಧಾನ್ಯಗಳನ್ನು ಮೃದುಗೊಳಿಸುತ್ತದೆ ಮತ್ತು ಕುಕ್ಕರ್‌ನಲ್ಲಿ ವೇಗವಾಗಿ ಬೇಯಿಸಲು ಸಹಾಯ ಮಾಡುತ್ತದೆ. ಈ ಸರಳ ಅಭ್ಯಾಸವು  ಗ್ಯಾಸ್‌ ಉಳಿಸಲು ಸಹ ಸಹಕಾರಿ.

ಬರ್ನರ್  ಸ್ವಚ್ಛಗೊಳಿಸಿ: ಬರ್ನರ್ ಜ್ವಾಲೆಯು ಹಳದಿ ಅಥವಾ ಕಿತ್ತಳೆ ಬಣ್ಣದಲ್ಲಿ ಕಾಣಿಸಿಕೊಂಡರೆ, ಬರ್ನರ್ ರಂಧ್ರಗಳು ಮುಚ್ಚಿಹೋಗಿವೆ ಮತ್ತು ಅನಿಲ ಸರಿಯಾಗಿ ಉರಿಯದೆ ಅನಿಲ ವ್ಯರ್ಥವಾಗುತ್ತಿದೆ ಎಂದರ್ಥ. ಹಾಗಾಗಿ ನೀಲಿ ಜ್ವಾಲೆಗಾಗಿ, ಬರ್ನರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

BCCI Awards: ಗಿಲ್​ ವರ್ಷದ ಕ್ರಿಕೆಟಿಗ; ದ್ರಾವಿಡ್, ಮಿಥಾಲಿಗೆ ಜೀವಮಾನ ಸಾಧನೆ ಪ್ರಶಸ್ತಿ

2023 ರಲ್ಲಿ ಟಿ20 ವಿಶ್ವಕಪ್ (T20 World Cup) ಗೆದ್ದಿದ್ದ ಟೀಂ ಇಂಡಿಯಾ ಬಿಸಿಸಿಐನಿಂದ (BCCI) 125 ಕೋಟಿ ರೂ. ಬಹುಮಾನ ಪಡೆಯುವುದರ ಜೊತೆಗೆ ಮುಂಬೈನಲ್ಲಿ ವಿಕ್ಟರಿ ಪೆರೇಡ್‌ ಮಾಡಿತ್ತು. ಈ ಬಾರಿಯೂ ಚಾಂಪಿಯನ್ ಆದ ಭಾರತ ತಂಡಕ್ಕೆ ಬಿಸಿಸಿಐನಿಂದ 131 ಕೋಟಿ ರೂ. ಬಹುಮಾನ ಸಿಕ್ಕಿದೆ.ಆದರೆ ವಿಕ್ಟರಿ ಪೆರೇಡ್‌ ಮಾಡಲು ಅವಕಾಶ ಸಿಕ್ಕಿಲ್ಲ. ಹಾಗೆಯೇ ಆಟಗಾರರನ್ನು ಬಿಸಿಸಿಐನಿಂದ ಸನ್ಮಾನಿಸಲಾಗಿಲ್ಲ. ಇದೀಗ ಅದಕ್ಕೆ ವೇದಿಕೆ ಸಜ್ಜಾಗಿದ್ದು, ಬಿಸಿಸಿಐ ತನ್ನ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಾಂಪಿಯನ್ ತಂಡವನ್ನು ಗೌರವಿಸಲಿದೆ. ಹಾಗೆಯೇ ಈ ಪ್ರಶಸ್ತಿ ಸಮಾರಂಭದಲ್ಲಿ ವರ್ಷದ ಕ್ರಿಕೆಟಿಗ, ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಈ ಇತರ ಪ್ರಶಸ್ತಿಗಳಿಗೆ ಭಾಜನರಾಗಿರುವ ಆಟಗಾರರನ್ನು ಗೌರವಿಸಲಾಗುತ್ತದೆ.

ಗಿಲ್ ವರ್ಷದ ಅತ್ಯುತ್ತಮ ಕ್ರಿಕೆಟಿಗ

ಅದರಂತೆ ಈ ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾರತ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕ ಶುಭಮನ್ ಗಿಲ್ ಭಾಜನರಾಗಿದ್ದಾರೆ. ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಕಳೆದ ವರ್ಷ ಸ್ಮರಣೀಯ ಪ್ರದರ್ಶನ ನೀಡಿದ ಗಿಲ್​ಗೆ ವರ್ಷದ ಅತ್ಯುತ್ತಮ ಕ್ರಿಕೆಟಿಗ ಪ್ರಶಸ್ತಿಯನ್ನು ನೀಡಲಾಗುವುದು. ನಾಯಕನಾದ ನಂತರ ಗಿಲ್, ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಚೊಚ್ಚಲ ಸರಣಿಯಲ್ಲಿ ನಾಲ್ಕು ಶತಕಗಳು ಸೇರಿದಂತೆ ದಾಖಲೆಯ 754 ರನ್ ಕಲೆಹಾಕಿದ್ದರು. ಹಾಗೆಯೇ ಏಕದಿನ ತಂಡದ ನಾಯಕನಾಗಿ ಕಳೆದ ವರ್ಷ ನಡೆದಿದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು. ಆದಾಗ್ಯೂ ಕಳೆದ ವರ್ಷ ಟಿ20 ಸ್ವರೂಪದಲ್ಲಿ ಗಿಲ್ ಪ್ರದರ್ಶನ ವಿಶೇಷವಾಗಿರಲಿಲ್ಲ. ಆದರೆ ಉಳಿದೆರಡು ಸ್ವರೂಪಗಳಲ್ಲಿ ಮಿಂಚಿದ್ದ ಗಿಲ್, ಕಳೆದ ಅವರು ಮೂರು ಸ್ವರೂಪಗಳಲ್ಲಿ 42 ಇನ್ನಿಂಗ್ಸ್‌ಗಳಲ್ಲಿ 49 ಸರಾಸರಿಯಲ್ಲಿ ಒಟ್ಟು 1764 ರನ್ ಬಾರಿಸಿದ್ದರು. ಇದರಲ್ಲಿ ಏಳು ಶತಕಗಳು ಮತ್ತು ಮೂರು ಅರ್ಧಶತಕಗಳು ಸೇರಿದ್ದವು.

ದ್ರಾವಿಡ್ ಹಾಗೂ ಮಿಥಾಲಿ ರಾಜ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಭಾರತದ ಮಾಜಿ ಮುಖ್ಯ ಕೋಚ್, ಕನ್ನಡಿಗ ರಾಹುಲ್ ದ್ರಾವಿಡ್ ಕರ್ನಲ್ ಸಿಕೆ ನಾಯುಡು ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ವಿಶ್ವ ಕ್ರಿಕೆಟ್​ನ ಅಗ್ರಗಣ್ಯ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ರಾಹುಲ್ ದ್ರಾವಿಡ್, ತರಬೇತುದಾರರಾಗಿಯೂ ಭಾರತ ಕ್ರಿಕೆಟ್​ಗೆ ಸ್ಮರಣೀಯ ಕೊಡುಗೆಗಳನ್ನು ನೀಡಿದ್ದಾರೆ. ದ್ರಾವಿಡ್ ತಮ್ಮ ತರಬೇತಿಯಡಿಯಲ್ಲಿ, ಭಾರತ 19 ವರ್ಷದೊಳಗಿನವರ ತಂಡವನ್ನು 2018 ರ ವಿಶ್ವಕಪ್​ನಲ್ಲಿ ಚಾಂಪಿಯನ್ ಮಾಡಿದರು. ಆ ನಂತರ 2021 ರಲ್ಲಿ ರವಿಶಾಸ್ತ್ರಿ ಬದಲಿಗೆ ಭಾರತದ ಹಿರಿಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದ ದ್ರಾವಿಡ್, ತಮ್ಮ ಕೋಚಿಂಗ್​ನಲ್ಲಿ ತಂಡವನ್ನು 2023 ರ ಏಕದಿನ ವಿಶ್ವಕಪ್ ಫೈನಲ್​ಗೇರಿಸಿದ್ದರು. ಬಳಿಕ 2024 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ತಂಡವನ್ನು ಚಾಂಪಿಯನ್ ಕೂಡ ಮಾಡಿದ್ದರು.

BCCI Awards: ಕನ್ನಡಿಗ ರಾಹುಲ್ ದ್ರಾವಿಡ್​ಗೆ ಜೀವಮಾನ ಸಾಧನೆ ಪ್ರಶಸ್ತಿ

ಇತರ ಪ್ರಶಸ್ತಿಗಳ ಪಟ್ಟಿ

ದ್ರಾವಿಡ್ ಜೊತೆಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಕೂಡ ಜೀವಮಾನ ಸಾಧನೆ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ ಎಂದು ವರದಿಯಾಗಿದೆ. ಇದರ ಜೊತೆಗೆ ದೇಶೀಯ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಆಲ್-ರೌಂಡರ್‌ಗಾಗಿ ನೀಡುವ ಲಾಲಾ ಅಮರನಾಥ್ ಪ್ರಶಸ್ತಿಗೆ ಮುಂಬೈನ ಆಯುಷ್ ಮ್ಹಾತ್ರೆ ಭಾಜನರಾಗಿದ್ದಾರೆ. ಹಾಗೆಯೇ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಅನ್ನು ದೇಶೀಯ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸಂಘವೆಂದು ಗೌರವಿಸಲಾಗುವುದು.

ಈ ಸಮಾರಂಭಕ್ಕೆ 2026 ರ ಟಿ20 ವಿಶ್ವಕಪ್ ವಿಜೇತರ ಜೊತೆಗೆ, 2025 ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದ ತಂಡವನ್ನು ಸಹ ಆಹ್ವಾನಿಸಲಾಗುವುದು. ಹಿರಿಯ ಮಹಿಳಾ ತಂಡ ಮತ್ತು 2025 ರಲ್ಲಿ ಐಸಿಸಿ ಟ್ರೋಫಿಗಳನ್ನು ಗೆದ್ದ ಭಾರತದ ಅಂಡರ್ -19 ಬಾಲಕರ ಮತ್ತು ಬಾಲಕಿಯರ ತಂಡಗಳನ್ನು ಸಹ ಆಹ್ವಾನಿಸಲಾಗುವುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪುರಾತತ್ವ ತಜ್ಞರು

ಗದಗ, (ಮಾರ್ಚ್ 12): ಐತಿಹಾಸಿಕ ದೇವಾಲಯಗಳ ಸರ್ಗ, ಶಿಲ್ಪಕಲೆಗಳ ಬೀಡು, ಕಲ್ಯಾಣ ಚಾಲುಕ್ಯರ ನಾಡು ಗದಗ (Gadag) ಜಿಲ್ಲೆಯ ಲಕ್ಕುಂಡಿಯಲ್ಲಿ ನಿಧಿ (Lakkundi Gold Treasure) ಸಿಕ್ಕ ಬಳಿಕ ಲಕ್ಕುಂಡಿ ರಾಷ್ಟ್ರಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. ಇಲ್ಲಿ ಸಿಕ್ಕ ನಿಧಿಗೆ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರ ಕಾಲದ ಇತಿಹಾಸ ಇದೆ. ಈ ಆಭರಣಗಳು ಅದ್ಭುತವಾದ ಕಸೂರಿ ನೋಡಿದ್ರೆ ಮೈ ರೋಮಾಂಚನವಾಗುತ್ತೆ. ಅಪರೂಪದ ನೀಲಮಣಿ ಲಕ್ಕುಂಡಿ ಗತವೈಭವ ಸಾರುತ್ತಿದೆ. ಆ್ಯಂಟಿಕ್ ಆಭರಣಗಳ ಅಂದಾಜು ಮೌಲ್ಯ 8 ಕೋಟಿಯಾಗಿದೆ. ಹೀಗಾಗಿ ನಿಧಿ ಸಿಕ್ಕ ಪ್ರಜ್ವಲ್ ಕುಟುಂಬ ಈಗ 8 ಕೋಟಿ ರೂಪಾಯಿಯಲ್ಲಿ ಪಾಲು ಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದೆ. ಇನ್ನು ಈ ಬಗ್ಗೆ ಪುರಾತತ್ವ ತಜ್ಞರು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಊಟ ಕೊಟ್ಟು ಹಸಿವು ನೀಗಿಸಿದ ಗ್ರಾಹಕರು

ದೆಹಲಿ, ಮಾರ್ಚ್ 12: ದುಡಿಮೆ ಅನಿವಾರ್ಯ, ಉದ್ಯೋಗ ಯಾವುದಾದರೆ ದುಡಿದು ತಿನ್ನುವುದು ಮುಖ್ಯ ಎನ್ನುತ್ತಾ ಕೆಲಸ ಮಾಡುತ್ತಾರೆ. ಫುಡ್ ಡೆಲಿವರಿ ಬಾಯ್ (delivery boy) ಆಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಕೆಲವೇ ಕೆಲವು ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಆರ್ಡರ್ ಮಾಡಿದ ಫುಡ್ ಬರುವುದರ ಹಿಂದೆ ಆಹಾರ ವಿತರಕರ ಶ್ರಮವಿರುತ್ತದೆ. ಸ್ವಲ್ಪ ಲೇಟ್ ಆದರೂ ರೇಗಾಡುತ್ತೇವೆ, ಆದರೆ ಕಷ್ಟವನ್ನು ಅರಿತುಕೊಳ್ಳುವ ಪ್ರಯತ್ನ ಯಾರು ಮಾಡಲ್ಲ. ಇದೀಗ ಫುಡ್ ಡೆಲಿವರಿ ಮಾಡಲು ಹೋದ ಡೆಲಿವರಿ ಬಾಯ್ ಗ್ರಾಹಕರ ಒಳ್ಳೆತನಕ್ಕೆ ಕರಗಿ ಹೋಗಿದ್ದಾನೆ. ದೆಹಲಿಯಲ್ಲಿ ಆರ್ಡರ್ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಅಲ್ಲಿನ ಗ್ರಾಹಕರು ಊಟಕ್ಕೆ ಕರೆದಿದ್ದು, ಈ ವ್ಯಕ್ತಿ ಗ್ರಾಹಕರ ಒಳ್ಳೆತನ ಕಂಡು ಕಣ್ಣೀರು ಹಾಕಿದ್ದಾನೆ. ಈ ಹೃದಯ ಸ್ಪರ್ಶಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸದ್ಯ ವೈರಲ್ ಆಗಿದೆ.

ಆದಿತ್ಯ (Aditya) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಆಹಾರ ತಲುಪಿಸಲು ಹೋದ ಡೆಲಿವರಿ ಬಾಯ್‌ಗೆ ಗ್ರಾಹಕರು ಊಟಕ್ಕೆ ಮಾಡಲು ಕರೆದಿದ್ದಾರೆ. ತಟ್ಟೆಯಲ್ಲಿ ಬಡಿಸಿದ ಊಟವನ್ನು ನೋಡಿ ಆಹಾರ ವಿತರಕ ಭಾವುಕನಾಗಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಕಣ್ಣೀರು ಒರೆಸುತ್ತಾ ಕೆಲಸದ ನಡುವೆ ನನಗೆ ಹಸಿವಾಗಿದೆ ಎಂದು ತಿಳಿದೇ ಇರಲಿಲ್ಲ. ಸರ್ ನಾನು ಮನೆಯಿಂದ ಹೊರಟಾಗ ಒಂದು ಕಪ್ ಚಹಾ ಕುಡಿದಿದ್ದೆ ಅಷ್ಟೇ. ನನಗೆ ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ. ಅವರಿಗಾಗಿ ದುಡಿಯಲೇಬೇಕು ಎಂದು ತನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕುವ ದೃಶ್ಯವನ್ನು ನೀವಿಲ್ಲಿ ನೋಡಬಹುದು.

ಇದನ್ನೂ ಓದಿ: ನೀವು ಲಿಫ್ಟ್ ಬಳಸಬಾರದು: ಭಾರವಾದ ಪಾರ್ಸೆಲ್ ಹೊತ್ತು 6ನೇ ಮಹಡಿಗೆ ಮೆಟ್ಟಿಲ ಮೂಲಕ ಸಾಗಿದ ಡೆಲಿವರಿ ಬಾಯ್

ಈ ವಿಡಿಯೋ ಎಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ವಿಡಿಯೋ ಏಕೆ ಮಾಡಬೇಕು, ಬೇರೆಯವರ ಬಡತನ ಬಳಸಿಕೊಂಡು ವೀಕ್ಷಣೆಗಳನ್ನು ಪಡೆದುಕೊಳ್ಳುತ್ತೀರಿ. ನಾಚಿಕೆ ಗೇಡಿನ ವಿಷಯ ಎಂದು ಖಾರವಾಗಿ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇನ್ನೊಬ್ಬರ ಹಸಿವು ನೀಗಿಸುವ ಕೆಲಸ ಒಳ್ಳೆಯದೇ, ಆದರೆ ವಿಡಿಯೋ ಮಾಡುವ ಅವಶ್ಯಕತೆ ಇರಲಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮನೆಯಲ್ಲೇ ಅಡುಗೆ ಮಾಡಿಕೊಳ್ಳಿ, ತಿನ್ನಿ, ಕೆಲಸ ಮಾಡಿ: ಎಲ್​ಪಿಜಿ ಸಮಸ್ಯೆಗೆ ಎಚ್​ಸಿಎಲ್​ನಿಂದ ವರ್ಕ್ ಫ್ರಂ ಹೋಮ್ ಪರಿಹಾರ

ನವದೆಹಲಿ, ಮಾರ್ಚ್ 12: ಅಡುಗೆ ಅನಿಲದ ಕೊರತೆ ಭಾರತಾದ್ಯಂತ ಕಾಡುತ್ತಿದೆ. ಅದರಲ್ಲೂ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್​ಗಳು (LPG cylinder) ದುಬಾರಿಯಾಗಿರುವುದು ಮಾತ್ರವಲ್ಲ, ಅವು ಸಿಗುವುದೇ ದುಸ್ತರವಾಗಿದೆ. ಬೆಂಗಳೂರಿನ ಅನೇಕ ಹೋಟೆಲ್​ಗಳು ಈ ಬಿಕ್ಕಟ್ಟು ಬಗೆಹರಿಯುವವರೆಗೂ ಬಾಗಿಲು ಬಂದ್ ಮಾಡಲು ನಿರ್ಧರಿಸಿವೆ. ಕಾರ್ಪೊರೇಟ್ ಸಂಸ್ಥೆಗಳೂ ಕೂಡ ಈ ಬಿಸಿ ತಾಕಿಸಿಕೊಂಡಿವೆ. ಉದ್ಯೋಗಿಗಳಿಗೆ ದಿನವೂ ಅಡುಗೆ ಮಾಡಿಕೊಡಬೇಕಾದ ಕಾರ್ಪೊರೇಟ್ ಕಂಪನಿಗಳ ಕೆಫೆಟೇರಿಯಾಗಳಿಗೆ ಕಮರ್ಷಿಯಲ್ ಗ್ಯಾಸ್ ಸಿಗುವುದು ಕಷ್ಟವಾಗಿದೆ. ಹೀಗಾಗಿ, ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕಲ್ಪಿಸಲು ಯೋಜಿಸಿವೆ. ವರದಿಗಳ ಪ್ರಕಾರ ಎಚ್​ಸಿಎಲ್​ಟೆಕ್ (HCLTech) ಕಂಪನಿಯು ಎರಡು ದಿನದ ಮಟ್ಟಿಗೆ ವರ್ಕ್ ಫ್ರಂ ಹೋಮ್ ಕೊಟ್ಟಿವೆ.

ಇಂದು ಮತ್ತು ನಾಳೆ, ಮಾರ್ಚ್ 12 ಮತ್ತು 13ರಂದು ಎಚ್​ಸಿಎಲ್​ಟೆಕ್​ನ ಚೆನ್ನೈ ಕಚೇರಿಯಲ್ಲಿರುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಲಾಗಿದೆ ಎಂದು ಮಿಂಟ್ ಪತ್ರಿಕೆಯ ವರದಿ ಮಾಡಿದೆ.

ಇದನ್ನೂ ಓದಿ: ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಎಚ್​ಸಿಎಲ್​ಟೆಕ್​ನಂತಹ ಕಂಪನಿಗಳು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ಅವಕಾಶ ಕೊಟ್ಟರೆ, ಇತರ ಹಲವು ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಸೇಫ್ಟಿ ಪ್ರೋಟೋಕಾಲ್​ಗಳನ್ನು ಅಳವಡಿಸಿವೆ. ಇಂಟರ್ನಲ್ ವಾರ್ ರೂಮ್​ಗಳನ್ನು ಸ್ಥಾಪಿಸಿ ಪರಿಸ್ಥಿತಿಯನ್ನು ಲೈವ್ ಆಗಿ ನಿಭಾಯಿಸುವ ಪ್ರಯತ್ನ ಮಾಡುತ್ತಿವೆ.

ಇನ್​ಫೋಸಿಸ್ ಸಂಸ್ಥೆ ಬೆಂಗಳೂರಿನಲ್ಲಿರುವ ತಮ್ಮ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಎಲ್​ಪಿಜಿ ಕೊರತೆಯಿಂದ ಕೆಫೆಟೇರಿಯಾದಲ್ಲಿ ಆಹಾರದ ಕೊರತೆ ಇರುವ ವಿಚಾರವನ್ನು ಮನದಟ್ಟು ಮಾಡಿದೆ. ಲೈವ್ ಫೂಡ್ ಕೌಂಟರ್​ಗಳನ್ನು ನಿಲ್ಲಿಸಲಾಗಿದೆ. ಮನೆಯಿಂದಲೇ ಅಡುಗೆ ಮಾಡಿಕೊಂಡು ಪಾರ್ಸಲ್ ತರಬೇಕೆಂದು ಕಂಪನಿ ತಿಳಿಸಿದೆ. ಚೆನ್ನೈನಲ್ಲಿರುವ ಇನ್ಫೋಸಿಸ್ ಕಚೇರಿಯ ಉದ್ಯೋಗಿಗಳಿಗೂ ಇದೇ ಸಲಹೆ ನೀಡಲಾಗಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಯುದ್ಧ ನಿಲ್ಲಿಸಲು ಇರಾನ್​ನ 3 ಷರತ್ತುಗಳು; ಭಾರತದ ಆರ್ಥಿಕತೆ ಮೇಲೇನು ಪರಿಣಾಮ? ಇಲ್ಲಿದೆ ಸಾಧ್ಯಾಸಾಧ್ಯತೆ

ಅಡುಗೆ ಅನಿಲದ ಪೂರೈಕೆಯಲ್ಲಿ ಸದ್ಯ ಯಾವ ಸಮಸ್ಯೆಯೂ ಇಲ್ಲ ಎಂದು ಸರ್ಕಾರ ಹೇಳಿದರೂ ದೇಶದ ಹೆಚ್ಚಿನ ಕಡೆ ಎಲ್​ಪಿಜಿ ಸಿಲಿಂಡರ್ ಸರಬರಾಜಿಗೆ ಧಕ್ಕೆಯಾಗಿದೆ. ಕಮರ್ಷಿಯಲ್ ಗ್ಯಾಸ್ ಮತ್ತು ಗೃಹಬಳಕೆ ಎಲ್​ಪಿಜಿ ಎರಡೂ ಕೂಡ ಅಡುಗೆ ಅನಿಲಗಳೇ ಆಗಿವೆ. ಗೃಹಬಳಕೆ ಗ್ಯಾಸ್ ಕೂಡ ಸಿಗುವುದು ದುಸ್ತರವೆನಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಯುವತಿಯರನ್ನು ಮನೆಯೊಳಗೆ ಕಳಿಸಿ , ಅತ್ಯಾಚಾರ ನಾಟಕವಾಡಿಸಿ ಹಣ ವಸೂಲಿ ಮಾಡುತ್ತಿದ್ದ ವ್ಯಕ್ತಿ ಮದುವೆ ದಿನವೇ ಅರೆಸ್ಟ್

ಭೋಪಾಲ್, ಮಾರ್ಚ್​ 12: ಯುವತಿಯರನ್ನು ಯಾರ್ಯಾರದ್ದೋ ಮನೆಗೆ ಕಳುಹಿಸಿ, ಅತ್ಯಾಚಾರದ ನಾಟಕವಾಡಿಸಿ, ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಜನರನ್ನು ಬೆದರಿಸಿ ಅವರಿಂದ ಸುಲಿಗೆ ಮಾಡುವ ಗ್ಯಾಂಗ್ ಕಟ್ಟಿದ್ದ ಆಕಾಶ್ ನೀಲಕಂಠ್ ಎಂಬಾತನನ್ನು ಆತನ ಮದುವೆ(Marriage) ದಿನವೇ ಬಂಧಿಸಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ನಲ್ಲಿ ನಡೆದಿದೆ. ಈ ದಂಧೆಯ ಹಿಂದಿನ ಮಾಸ್ಟರ್ ಮೈಂಡ್ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ಅಲಿಯಾಸ್ ಆಕಾಶ್ ನೀಲಕಂಠ, ಈತ ಇಲ್ಲೀಗಲ್ ಗ್ಯಾಂಗ್ ಎಂಬ ಗ್ಯಾಂಗ್ ಅನ್ನು ಕಟ್ಟಿಕೊಂಡಿದ್ದ, ಆತನ ಮದುವೆ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಈ ಗ್ಯಾಂಗ್‌ನಲ್ಲಿ ಸುಮಾರು 15 ಯುವಕರು ಮತ್ತು ಒಬ್ಬ ಯುವತಿಯಿದ್ದರು ಎಂದು ವರದಿಯಾಗಿದೆ. ಅವರು ಮೊದಲು ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ನಂತರ ಅವರನ್ನು ಬಲೆಗೆ ಬೀಳಿಸಲು ಸಂಚು ರೂಪಿಸುತ್ತಿದ್ದರು. ನಂತರ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಸಿಕ ಒತ್ತಡವನ್ನು ಸೃಷ್ಟಿಸುತ್ತಿದ್ದರು ಮತ್ತು ನಂತರ ಅವರ ಬಳಿ ದೊಡ್ಡ ಮೊತ್ತದ ಹಣಬೇಡಿಕೆ ಇಡುತ್ತಿದ್ದರು.

ಈ ಗ್ಯಾಂಗ್‌ ಇತ್ತೀಚೆಗೆ ಕೊಹೆಫಿಜಾ ಪೊಲೀಸ್ ಠಾಣೆ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯೊಬ್ಬರನ್ನು ಗುರಿಯಾಗಿಸಿಕೊಂಡಿತ್ತು, ಈ ಗ್ಯಾಂಗ್, ಯೋಜನೆಯ ಭಾಗವಾಗಿ, ರಾತ್ರಿಯಲ್ಲಿ ಯುವತಿಯನ್ನು ಅವರ ಮನೆಗೆ ಕಳುಹಿಸಿದೆ ಎಂದು ಆರೋಪಿಸಲಾಗಿದೆ. ಮನೆ ಮಾಲೀಕ ಬಾಗಿಲು ತೆರೆದ ತಕ್ಷಣ, ಯುವತಿ ಮನೆಗೆ ಪ್ರವೇಶಿಸಿ ಕೂಗಾಡಲು ಪ್ರಾರಂಭಿಸಿದಳು. ಸ್ವಲ್ಪ ಸಮಯದ ನಂತರ, 10 ರಿಂದ 15 ಯುವಕರು ಬಂದಿದ್ದರು. ಅವರು ಆತ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆಂದು ಆರೋಪಿಸಿದ್ದರು ಮತ್ತು ಅವರ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ್ದರು.

ಮತ್ತಷ್ಟು ಓದಿ: ಈಕೆಗೆ ಅನುಕಂಪ ತೋರಿಸಿದ್ದೇ ತಪ್ಪಾಯಿತು: ಮದುವೆ ಹಾಲ್​​ನಲ್ಲಿ 120 ಗ್ರಾಂ ಚಿನ್ನಾಭರಣ ಕದ್ದ ಬುರ್ಖಾಧಾರಿ ಕಳ್ಳಿ

ನಂತರ ಆರೋಪಿಗಳು ಆತನನ್ನು ಬಲವಂತವಾಗಿ ವಾಹನದಲ್ಲಿ ಕೂರಿಸಿ, ಒಂದು ಕೋಣೆಗೆ ಕರೆದೊಯ್ದು ಸುಮಾರು ಐದು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಈ ಸಮಯದಲ್ಲಿ, ಅವರನ್ನು ಪದೇ ಪದೇ ಥಳಿಸಲಾಗಿತು ಮಾನಸಿಕವಾಗಿ ಬೆದರಿಸಿ ಎಂಟು ಲಕ್ಷ ರೂಪಾಯಿಗಳಿಗೆ ಬೇಡಿಕೆ ಇಟ್ಟರು.
ಭಯ ಮತ್ತು ಒತ್ತಡದಲ್ಲಿ, ಆ ವ್ಯಕ್ತಿ ತನ್ನ ಸಹೋದರನಿಗೆ ಕರೆ ಮಾಡಿದ್ದರು. ನಂತರ, ಮೊದಲ ಕಂತಾಗಿ 50,000 ರೂಪಾಯಿಗಳನ್ನು ಆರೋಪಿಯ ಖಾತೆಗೆ ವರ್ಗಾಯಿಸಲಾಯಿತು.

ಉಳಿದ 750,000 ರೂಪಾಯಿಗಳನ್ನು ನಂತರ ಪಾವತಿಸಲಾಗುವುದು ಎಂದು ಒಪ್ಪಂದವಾಯಿತು. ಹಣವನ್ನು ಪಡೆದ ನಂತರ, ಆರೋಪಿ ಆ ವ್ಯಕ್ತಿಯನ್ನು ಬಿಡುಗಡೆ ಮಾಡಿದ್ದರು. ಬಿಡುಗಡೆಯಾದ ನಂತರ, ಆ ವ್ಯಕ್ತಿ ನೇರವಾಗಿ ಕೊಹೆಫಿಜಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದರು.
ಪೊಲೀಸ್ ತನಿಖೆಯಲ್ಲಿ ಪ್ರಮುಖ ಆರೋಪಿ ಆಕಾಶ್ ಅಲಿಯಾಸ್ ಭೂರಾ ಹಡ್ಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆಯ ವೆಚ್ಚಕ್ಕೆ ಹಣದ ಅಗತ್ಯವಿತ್ತು ಎಂದು ತಿಳಿದುಬಂದಿದೆ.

ಆದ್ದರಿಂದ, ಅವನು ಮತ್ತು ಅವನ ಸಹಚರರು ಈ ಸಂಚು ರೂಪಿಸಿದ್ದರು. ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ತನಿಖೆ ಆರಂಭಿಸಿ ಬುಧವಾರ ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದರು. ಆತನ ವಿವಾಹ ಮೆರವಣಿಗೆಗೆ ಸಿದ್ಧತೆಗಳು ನಡೆಯುತ್ತಿರುವಾಗ, ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ವಿವಾಹ ಸಮಾರಂಭದಲ್ಲೇ ಆತನನ್ನು ಬಂಧಿಸಿದ್ದಾರೆ.ಆತನ ಇಬ್ಬರು ಸಹಚರರಾದ ಆಕಾಶ್ ಉಪಾಧ್ಯಾಯ ಮತ್ತು ರಾಮ್ ಠಾಕೂರ್ ಅವರನ್ನು ಸಹ ಬಂಧಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link