Category Archives: Blog

Your blog category

ಬಜೆಟ್‌ನಲ್ಲಿ ಕಾಲೇಜು ಚುನಾವಣೆ ಘೋಷಣೆ ಮಾಡಿದ್ದೇ ತಡ ಮಂಗಳೂರು ಕಾಲೇಜು ವಿದ್ಯಾರ್ಥಿಗಳ ನಡುವೆ ಬಿಗ್​​ ಫೈಟ್

ಬಜೆಟ್‌ನಲ್ಲಿ ಕಾಲೇಜು ಚುನಾವಣೆ ಘೋಷಣೆ ಮಾಡಿದ್ದೇ ತಡ ಮಂಗಳೂರು ಕಾಲೇಜು ವಿದ್ಯಾರ್ಥಿಗಳ ನಡುವೆ ಬಿಗ್​​ ಫೈಟ್

ಮಂಗಳೂರು, ಮಾ.11: ಈ ಹಿಂದೆ ಕಾಲೇಜು ಚುನಾವಣೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳ ನಡುವೆ ದೊಡ್ಡ ಜಗಳಗಳು ನಡೆಯುತ್ತಿತ್ತು. ಇದೀಗ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ.

ಬಜೆಟ್‌ನಲ್ಲಿ ಚುನಾವಣೆ ಮತ್ತು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಘೋಷಣೆಯನ್ನು ಸ್ವಾಗತಿಸಿ NSUI ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಜಯಘೋಷಗಳನ್ನು ಕೂಗಿದ್ದಾರೆ. ಇದು ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಅಟ್ಟಹಾಸ ಎಂದು ABVP ಆಕ್ರೋಶ ವ್ಯಕ್ತಪಡಿಸಿದೆ.

ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಲಾಯಿತು. ವಿದ್ಯಾರ್ಥಿಗಳ ವಾಗ್ವಾದಕ್ಕೆ ಪ್ರಾಂಶುಪಾಲರು ತತ್ತರಿಸಿ ಹೋದರು.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ಸಿಕ್ಕ ಚಿನ್ನದ ನಿಧಿ ಯಾರ ಕಾಲದ್ದು ಗೊತ್ತಾ? ಇದರ ಬೆಲೆ ಕೇಳಿದ್ರೆ ಶಾಕ್​​​ ಆಗುವುದು ಗ್ಯಾರಂಟಿ!

“ಸಿಹಿ ಹಂಚಲು ಮಾತ್ರ ಅನುಮತಿ ನೀಡಿದ್ದೆವು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ” ಎಂಬ ಪ್ರಾಂಶುಪಾಲರ ಹೇಳಿಕೆ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಘಟನೆ ಸಂಬಂಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ (VC) ವರದಿ ನೀಡುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಆರಂಭವಾಗುವ ಮೊದಲೇ ಕ್ಯಾಂಪಸ್‌ನಲ್ಲಿ ಈ ಮಟ್ಟದ ಕಿತ್ತಾಟ ಶುರುವಾಗಿರುವುದು ಪೋಷಕರಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಹೋಳಿ ಆಚರಿಸಲು ಮನೆಗೆ ಬಂದಿದ್ದ ಮಗಳು 13ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಗೇಟರ್​ ನೋಯ್ಡಾ, ಮಾರ್ಚ್​ 11: ಹೋಳಿ ಆಚರಣೆಗೆಂದು ಮನೆಗೆ ಬಂದಿದ್ದ ಯುವತಿ ಅಪಾರ್ಟ್​ಮೆಂಟ್​ನ 13ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 25 ವರ್ಷದ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಸ್ರಖ್ ಪೊಲೀಸ್ ಠಾಣೆ ಪ್ರದೇಶದ ಗೌರ್ ಸೌಂದರ್ಯಂ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ವಸತಿ ಸಮುಚ್ಚಯದ ನಿವಾಸಿಗಳಲ್ಲಿ ಭಯಭೀತಿ ಮೂಡಿಸಿದೆ. ಮೃತ ಯುವತಿಯನ್ನು ಶಿವಿಕಾ ಥಕ್ರಲ್ ಎಂದು ಗುರುತಿಸಲಾಗಿದ್ದು, ಈಕೆ ವಿನಯ್ ಥಕ್ರಲ್ ಅವರ ಪುತ್ರಿಯಾಗಿದ್ದು, ಗೌರ್ ಸೌಂದರ್ಯಂ ಸೊಸೈಟಿಯ ಶರೋನ್ ಟವರ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದಳು.

ಮಾರ್ಚ್ 10, 2026 ರಂದು ಯುವತಿಯೊಬ್ಬಳು ಬಹುಮಹಡಿ ಕಟ್ಟಡದಿಂದ ಹಾರಿದ ಬಗ್ಗೆ ಮಾಹಿತಿ ಬಂದಿತ್ತು, ನಂತರ ಪೊಲೀಸರ ತಂಡ ಸ್ಥಳಕ್ಕೆ ಧಾವಿಸಿತು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯಲ್ಲಿ, ಶಿವಿಕಾ 13 ನೇ ಮಹಡಿಯಲ್ಲಿರುವ ತನ್ನ ಫ್ಲಾಟ್‌ನ ಬಾಲ್ಕನಿಯಿಂದ ಹಾರಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಶಿವಿಕಾ ಪಂಜಾಬ್‌ನ ಮೊಹಾಲಿಯಲ್ಲಿ ಎಂಬಿಎ ಓದುತ್ತಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಗ್ರೇಟರ್ ನೋಯ್ಡಾ ವೆಸ್ಟ್‌ನಲ್ಲಿರುವ ತಮ್ಮ ಮನೆಗೆ ಹೋಳಿ ಹಬ್ಬ ಆಚರಿಸಲು ಬಂದಿದ್ದಳು.

ಕುಟುಂಬ ಸದಸ್ಯರ ಪ್ರಕಾರ, ಘಟನೆಯ ಹಿಂದಿನ ಎಲ್ಲವೂ ಸಾಮಾನ್ಯವಾಗಿತ್ತು, ಸೋಮವಾರ ರಾತ್ರಿ, ಎಲ್ಲಾ ಕುಟುಂಬ ಸದಸ್ಯರು ಒಟ್ಟಿಗೆ ಊಟ ಮಾಡಿ ನಂತರ ಮಲಗಲು ತಮ್ಮ ಕೋಣೆಗಳಿಗೆ ಹೋದರು. ರಾತ್ರಿಯಲ್ಲಿ ಯಾವುದೇ ಅಸಾಮಾನ್ಯ ಬೆಳವಣಿಗೆಗಳು ನಡೆದ ಬಗ್ಗೆ ಕುಟುಂಬಕ್ಕೆ ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ಮಂಗಳವಾರ ಬೆಳಿಗ್ಗೆ, ಶಿವಿಕಾ ಕಟ್ಟಡದಿಂದ ಹಾರಿದ್ದಾರೆಂದು ಸೊಸೈಟಿಯ ಭದ್ರತಾ ಸಿಬ್ಬಂದಿಯಿಂದ ಕುಟುಂಬಕ್ಕೆ ಮಾಹಿತಿ ಸಿಕ್ಕಿತ್ತು.

ಮತ್ತಷ್ಟು ಓದಿ: ಗೆಳೆಯನಿಂದ ಕಿರುಕುಳ, ಆತ್ಮಹತ್ಯೆಗೆ ಪ್ರಚೋದನೆ, ನೇಣು ಬಿಗಿದುಕೊಂಡು ವೈದ್ಯಕೀಯ ವಿದ್ಯಾರ್ಥಿನಿ ಸಾವಿಗೆ ಶರಣು

ಘಟನಾ ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಪ್ರಕರಣವು ಆತ್ಮಹತ್ಯೆಯಂತೆ ಕಂಡುಬರುತ್ತಿದೆ. ಕುಟುಂಬವು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ, ಮತ್ತು ಆತ್ಮಹತ್ಯೆಗೆ ಸಂಬಂಧಿಕರು ಸಹ ಯಾವುದೇ ಸ್ಪಷ್ಟ ಕಾರಣವನ್ನು ಸೂಚಿಸಲು ಸಾಧ್ಯವಾಗಿಲ್ಲ.

ಗ್ರೇಟರ್ ನೋಯ್ಡಾ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದರಿಂದ ಮುಂದಿನ ಕಾನೂನು ಕ್ರಮಗಳು ನಡೆಯುತ್ತಿವೆ, ಇದು ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಸ್ಪಷ್ಟತೆಯನ್ನು ನೀಡುವ ನಿರೀಕ್ಷೆಯಿದೆ.

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

 

Source link

Kalashtami 2026: ಇಂದು ಕಾಲಾಷ್ಟಮಿ; ಈ ದಿನದ ವಿಶೇಷತೆ ಮತ್ತು ಮಹತ್ವ ತಿಳಿಯಿರಿ

ಕಾಲಾಷ್ಟಮಿಯು ಕಾಲ ಭೈರವನಿಗೆ ಅರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಇದನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮಾರ್ಚ್ 11ರಂದು ಈ ಕಾಲಾಷ್ಟಮಿ ದಿನವನ್ನಾಗಿ ಆಚರಿಸುತ್ತಾರೆ. ಶಿವನ ಉಗ್ರ ರೂಪವಾದ ಕಾಲ ಭೈರವನ ಆರಾಧನೆಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಕಾಲ ಭೈರವನನ್ನು ಪೂಜಿಸುವುದರಿಂದ ಭಯ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಮಾಡುವ ಉಪವಾಸ ಮತ್ತು ಪೂಜೆಯು ಶನಿ ಮತ್ತು ರಾಹುವಿನ ದುಷ್ಟ ಪ್ರಭಾವಗಳನ್ನು ಕಡಿಮೆ ಮಾಡಲು ಸಹಕಾರಿ ಎಂದು ಪರಿಗಣಿಸಲಾಗಿದೆ.

ಪಂಚಾಂಗದ ಪ್ರಕಾರ ಚೈತ್ರ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಲ್ಲಿ ಉಪವಾಸ ಮಾಡಲಾಗುತ್ತದೆ. ಕಾಲಾಷ್ಟಮಿಯಂದು ಕಾಲಭೈರವ ದೇವರನ್ನು ರಾತ್ರಿಯಲ್ಲಿ ಪೂಜಿಸಲಾಗುತ್ತದೆ. ಈ ರಾತ್ರಿಯ ಶುಭ ಸಮಯ ರಾತ್ರಿ 11:35 ರಿಂದ 12:23 ರವರೆಗೆ. ಈ ದಿನದಂದು ಅಪರೂಪದ ಶಿವವಾಸ ಯೋಗವೂ ಸಂಭವಿಸುತ್ತಿದೆ.

ಕಾಲಭೈರವನನ್ನು ನ್ಯಾಯದ ದೇವರು ಎಂದೂ ಪರಿಗಣಿಸಲಾಗುತ್ತದೆ. ಆದ್ದರಿಂದ, ಅವನನ್ನು ಪೂಜಿಸುವುದರಿಂದ ಭಕ್ತರಿಗೆ ರಕ್ಷಣೆ ಮತ್ತು ಆಶೀರ್ವಾದಗಳು ದೊರೆಯುತ್ತವೆ. ಈ ದಿನದಂದು ಉಪವಾಸ ಮತ್ತು ದಾನ ನೀಡುವುದು ಸಹ ವಿಶೇಷ ಮಹತ್ವವನ್ನು ಹೊಂದಿದೆ. ನಾಳೆ ಕಲಷ್ಟಮಿಯಾಗಿರುವುದರಿಂದ, ನೀವು ಕಾಲಭೈರವನನ್ನು ಪೂಜಿಸಿ ಅವರ ಆಶೀರ್ವಾದವನ್ನು ಪಡೆಯಬಹುದು. ಇಂದು ಕಪ್ಪು ನಾಯಿಗೆ ಆಹಾರ ನೀಡಿ, ಏಕೆಂದರೆ ಹಿಂದೂಗಳು ಕಪ್ಪು ನಾಯಿಯನ್ನು ಭೈರವನ ವಾಹನವೆಂದು ಪರಿಗಣಿಸುತ್ತಾರೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಮಂತ್ರಗಳನ್ನು ಪಠಿಸುವ ನಿಯಮಗಳು:

ಕಲಷ್ಟಮಿಯಂದು ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸುವಾಗ, ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗಿರಬೇಕು. ಸ್ನಾನ ಮಾಡಿ ಮತ್ತು ಸ್ವಚ್ಛವಾದ ಬಟ್ಟೆಗಳನ್ನು ಧರಿಸಿ. ಮಂತ್ರವನ್ನು ಶಾಂತವಾಗಿ ಮತ್ತು ಏಕಾಗ್ರತೆಯಿಂದ ಪಠಿಸಿ. ಮಂತ್ರಗಳನ್ನು ಸರಿಯಾಗಿ ಉಚ್ಚರಿಸುವುದು ಮುಖ್ಯ. ಉಚ್ಚಾರಣೆಯ ಬಗ್ಗೆ ನಿಮಗೆ ಯಾವುದೇ ಸಂದೇಹಗಳಿದ್ದರೆ, ಜ್ಞಾನವುಳ್ಳ ವ್ಯಕ್ತಿಯಿಂದ ಮಾರ್ಗದರ್ಶನ ಪಡೆಯಿರಿ. ನಿಮ್ಮ ಭಕ್ತಿ ಮತ್ತು ಸಮಯವನ್ನು ಅವಲಂಬಿಸಿ, ನೀವು ಮಂತ್ರಗಳನ್ನು ನಿರ್ದಿಷ್ಟ ಸಂಖ್ಯೆಯ ಬಾರಿ ಪಠಿಸಬಹುದು (ಉದಾ. 108 ಬಾರಿ). ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳುವುದು ಶುಭವೆಂದು ಪರಿಗಣಿಸಲಾಗುತ್ತದೆ. ನೀವು ಹೆಚ್ಚು ಬಾರಿ ಪಠಿಸುತ್ತಿದ್ದರೆ, ನೀವು ರುದ್ರಾಕ್ಷ ಅಥವಾ ತುಳಸಿ ಮಣಿಗಳನ್ನು ಬಳಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

ಚಿತ್ರರಂಗದಲ್ಲಿ (Movie Industry) ಒಬ್ಬರನ್ನು ಇನ್ನೊಬ್ಬರ ಜೊತೆ ಹೋಲಿಸಿ ನೋಡುವುದು ಸಾಮಾನ್ಯ. ಆದರೆ ಈ ಹೋಲಿಕೆಯ ಸಂದರ್ಭದಲ್ಲಿ ನಟರನ್ನು ತುಚ್ಛೀಕರಿಸಿ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಪದ್ಮಶ್ರೀ ಪುರಸ್ಕೃತ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು, ಘನತೆ ಮರೆತು, ತಮಿಳಿನ ಸೂಪರ್ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಬಗ್ಗೆ ತೀರ ಕೀಳಾಗಿ ಮಾತನಾಡಿದ್ದಾರೆ. ತೆಲುಗಿನ ಹಿರಿಯ ನಟರೊಬ್ಬರನ್ನು ಹೊಗಳಲೆಂದು ತಮಿಳಿನ ಲಿಜೆಂಡರಿ ನಟರೊಬ್ಬರ ಬಗ್ಗೆ ಕೀಳಾಗಿ ಮಾತನಾಡಿರುವುದರನ್ನು ನೆಟ್ಟಗರು ತೀವ್ರವಾಗಿ ಟೀಕಿಸಿದ್ದಾರೆ.

ಟಾಲಿವುಡ್‌ನ ಹಿರಿಯ ನಟ ‘ನಟಕಿರೀಟಿ’ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ರಾಜೇಂದ್ರ ಪ್ರಸಾದ್ ಆಗಾಗ್ಗೆ ತಮ್ಮ ಮಾತುಗಳಿಂದ ವಿವಾದಕ್ಕೆ ಈಡಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಲಾಪ್ರಪೂರ್ಣ ಕಾಂತಾರಾವ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾಡಿದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ಸಿನಿಮಾ ಪ್ರೇಮಿಗಳು ರಾಜೇಂದ್ರ ಪ್ರಸಾದ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ತೆಲುಗು ಚಿತ್ರರಂಗದ ದಿವಂಗತ ನಟ ಕಾಂತಾರಾವ್ ಅವರ ನಟನಾ ಕೌಶಲ್ಯ ಮತ್ತು ಅವರ ಜನಪದ ಚಿತ್ರಗಳ ವೈಭವವನ್ನು ಕೊಂಡಾಡುವ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಕಾಂತಾರಾವ್ ಅವರ ನಟನೆಯನ್ನು ನೋಡಿ ಎಂಜಿಆರ್ ಭಯಪಡುತ್ತಿದ್ದರು ಮತ್ತು ‘ಕಾಂತಾರಾವ್ ನಟನೆ ನೋಡಿ ಭಯದಿಂದ ಎಂಜಿಆರ್ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು’ ಎಂದು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ‘ಈ ಕಾಂತಾರಾವ್ ಯಾರು? ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದಾನಲ್ಲ’ ಎಂದು ಎಂಜಿಆರ್ ನಡುಗುತ್ತಿದ್ದರು ಎಂದು ಅವರು ಹಗುರವಾಗಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಹಲವು ಬಾರಿ ಅವರು ಎಂಜಿಆರ್ ಬಗ್ಗೆ ಕೀಳಾಗಿ ಮತ್ತು ಏಕವಚನ ಬಳಸಿ ಮಾತನಾಡಿದ್ದಾರೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

ರಾಜೇಂದ್ರ ಪ್ರಸಾದ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳು ಹಾಗೂ ತೆಲುಗು ಅಭಿಮಾನಿಗಳು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಒಬ್ಬ ಸಾಧಕ ನಟನನ್ನು ಹೊಗಳುವ ಭರದಲ್ಲಿ ಕೋಟ್ಯಂತರ ಜನರು ಆರಾಧಿಸುವ ಮತ್ತೊಬ್ಬ ದಿಗ್ಗಜ ನಟ ಹಾಗೂ ಜನನಾಯಕನನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಸಂಸ್ಕಾರಹೀನ ಪದಗಳನ್ನು ಬಳಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

ಈ ಹಿಂದೆ ಕೂಡ ರಾಜೇಂದ್ರ ಪ್ರಸಾದ್ ಅವರು ಹಾಸ್ಯ ನಟರಾದ ಬ್ರಹ್ಮಾನಂದಂ ಮತ್ತು ಅಲಿ ಅವರ ಬಗ್ಗೆ ಸಾರ್ವಜನಿಕವಾಗಿ ಕೀಳಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು, ಅದರ ಬಳಿಕ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಕೀಳಾಗಿ ಮಾತನಾಡಿದ್ದು ಸುದ್ದಿ ಆಗಿತ್ತು. ರಾಜೇಂದ್ರ ಪ್ರಸಾದ್ ಕ್ಷಮೆ ಕೇಳಬೇಕು ಎಂದು ತಮಿಳು ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದು, ರಾಜೇಂದ್ರ ಪ್ರಸಾದ್ ಪ್ರತಿಕ್ರಿಯೆ ಹೇಗಿರುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಮುಂಬೈ, ಮಾರ್ಚ್ 11: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕರ್ನಾಟಕ ಸೇರಿ ಭಾರತದ ಹಲವೆಡೆ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವ ತಲೆದೋರಿದೆ. ಈ ಹೊತ್ತಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ತರವಾದ ಘೋಷಣೆ ಮಾಡಿದ್ದು, ಜಾಮ್ ನಗರದಲ್ಲಿನ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್​​ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದೆ. ಜಾಮ್ ನಗರದಲ್ಲಿ ಇರುವ ಈ ಘಟಕ ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿದ್ದು,  KG- D6 ಬ್ಲಾಕ್​​ನಲ್ಲಿ ಉತ್ಪಾದನೆ ಆದ ಅನಿಲವನ್ನು ಆದ್ಯತೆ ವಲಯಗಳಿಗೆ ಪೂರೈಕೆಮಾಡಲಾಗುವುದು. ರಾಷ್ಟ್ರೀಯ ಇಂಧನ ಆದ್ಯತೆಗಳು ಹಾಗೂ ಸರ್ಕಾರಿ ಮಾರ್ಗದರ್ಶನದ ಅನ್ವಯ ಆದ್ಯತಾ ವಲಯಗಳಿಗೆ ಪೂರೈಕೆ ಬೆಂಬಲ ನೀಡುವುದಕ್ಕಾಗಿ ಈ ಮಹತ್ವದ ಘೋಷಣೆ ಮಾಡಿರೋದಾಗಿ ಕಂಪನಿ ತಿಳಿಸಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ವಿಪರೀತದ ಏರಿಳಿತ ಕಾಣುತ್ತಿರುವ ಸಂದರ್ಭದಲ್ಲಿ, ಭಾರತೀಯ ಕುಟುಂಬಗಳಿಗೆ ಅಗತ್ಯವಾದ ಇಂಧನವನ್ನು ಅಡೆತಡೆಯೇ ಇಲ್ಲದೆ ಪೂರೈಕೆ ಮಾಡುತ್ತೇವೆ ಎಂದು ಈ ಮೂಲಕ ಖಾತ್ರಿ ಪಡಿಸುತ್ತೇವೆ. ಇದೀಗ ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಮುಕೇಶ್ ಅಂಬಾನಿ ನೇತೃತ್ವದ ಕಂಪನಿ ತಿಳಿಸಿದೆ. ಹಗಲು-ರಾತ್ರಿ ನಮ್ಮ ತಂಡ ಸಂಸ್ಕರಣಾಗಾರದಿಂದ ಗರಿಷ್ಠ ಪ್ರಮಾಣದ ಉತ್ಪಾದನೆಗಾಗಿ ಶ್ರಮಿಸುತ್ತಿದೆ. ಮತ್ತು ಎಲ್​​ಪಿಜಿ ಉತ್ಪಾದನೆ ವಿಸ್ತರಣೆಗೆ ಪ್ರಯತ್ನಿಸುತ್ತಿದೆ. ಈ ಶ್ರಮದ ಹಿಂದಿನ ಉದ್ದೇಶ ಏನೆಂದರೆ, ದೇಶೀಯ ಮಾರುಕಟ್ಟೆಗೆ ಸ್ಥಿರವಾದ ಹಾಗೂ ವಿಶ್ವಾಸಾರ್ಹ ಅನಿಲ ಪೂರೈಕೆ ಮಾಡುವುದಾಗಿದೆ.

ಇದನ್ನೂ ಓದಿ: ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ರಾಜೀನಾಮೆ; ರಾಹುಲ್ ಭಾಟಿಯಾ ಹಂಗಾಮಿ ಮುಖ್ಯಸ್ಥ

ರಿಲಯನ್ಸ್​​ಗೆ ಕೋಟ್ಯಂತರ ಭಾರತೀಯ ಕುಟುಂಬಗಳ ಯೋಗಕ್ಷೇಮ ಹಾಗೂ ಭಾರತೀಯ ಇಂಧನ ಭದ್ರತೆ ಯಾವಾಗಲೂ ಮೊದಲು. ನಾವು ಭಾರತ ಸರ್ಕಾರದ ಜೊತೆಗೆ ನಿಕಟವಾಗಿ ಕೆಲಸ ಮಾಡುತ್ತಿದ್ದೇವೆ. ಮತ್ತು ರಾಷ್ಟ್ರೀಯ ಮಾರ್ಗದರ್ಶಿ ಸೂತ್ರಗಳಿಗೆ ಮತ್ತು ವಿತರಣೆ ಆದ್ಯತೆಗಳಿಗೆ ಸಂಪೂರ್ಣ ಬದ್ಧರಾಗಿದ್ದೇವೆ. ಇಂಧನ ಪೂರೈಕೆ ಯಾವ ವಲಯಕ್ಕೆ ಹಾಗೂ ಸಮುದಾಯಕ್ಕೆ ಬಹಳ ಅಗತ್ಯ ಆಗಿರುತ್ತದೋ ಅವರಿಗೆ ತಲುಪಿಸುವುದನ್ನು ಖಾತ್ರಿ ಪಡಿಸುತ್ತೇವೆ ಎಂದು ಕಂಪನಿ ಹೇಳಿದೆ. ನಾವು ದೇಶದೊಂದಿಗೆ ದೃಢವಾಗಿ ನಿಲ್ಲುತ್ತೇವೆ ಮತ್ತು ಭಾರತದ ಇಂಧನ ಭದ್ರತೆಗೆ ಹಾಗೂ ದೇಶಕ್ಕೆ ಬೇಕಾದ ಅಗತ್ಯ ಇಂಧನ ಪೂರೈಕೆ ವಿಶ್ವಾಸಾರ್ಹತೆ ಉಳಿಯುವುದಕ್ಕೆ ಏನೆಲ್ಲ ಮಾಡುವುದಕ್ಕೆ ಸಾಧ್ಯವೋ ಆ ಎಲ್ಲವನ್ನೂ ಮಾಡುವುದಕ್ಕೆ ಬದ್ಧರಾಗಿದ್ದೇವೆ ಎಂದು ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ, ಓಡಿಹೋಗಲು ಗಾಡಿಯಲ್ಲಿ ಪೆಟ್ರೋಲ್ ಇಲ್ಲದೆ ಸಿಕ್ಕಾಕ್ಕೊಂಡ

ವೆನ್ನಪ್ಪುವಾ, ಮಾರ್ಚ್​ 11: ಬೈಕ್​​ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಕಳ್ಳನೊಬ್ಬ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ವೆನ್ನಪ್ಪುವಾದ ಥಂಬರವಿಲಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆಯನ್ನು ಸೆರೆಹಿಡಿದಿದೆ.ಆರೋಪಿಯು ಬೈಕ್​ನಲ್ಲಿ ಬಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಆಕೆಯನ್ನು ಬೀಳಿಸಿ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಬೈಕ್​​ನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಸಾರ್ವಜನಿಕರ ಕೈಗೆ ಸಿಕ್ಕಿ ಒದೆ ತಿಂದಿದ್ದಾನೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿಗೆ (Serial) ದೊಡ್ಡ ವೀಕ್ಷಕರ ಬಳಗ ಇದೆ. ವೀಕ್ಷಕರಿಗೆ ಹೆಚ್ಚು ಇಷ್ಟ ಆಗಿದ್ದು, ಈ ಸೀರಿಯಲ್​ನ ನಿನಾದ್ ಹರಿತ್ಸ ಮಾಡುತ್ತಿರುವ ಸೂರ್ಯ ಪಾತ್ರ. ಅವರ ಸ್ಮೈಲ್, ಸ್ಟೈಲ್, ಡೈಲಾಗ್ ಎಲ್ಲರಿಗೂ ಇಷ್ಟ ಆಗಿದೆ. ಒಂದು ಸೀರಿಯಲ್ 800 ಪ್ರಸಾರ ಕಾಣುತ್ತದೆ ಎಂದರೆ ಅದು ಸಣ್ಣ ವಿಷಯ ಅಲ್ಲವೇ ಅಲ್ಲ. ನಿನಾದ್ ಅವರು ಈ ಜರ್ನಿಯನ್ನು ನೆನೆದಿದ್ದಾರೆ.

‘ಆಸೆ’ ಧಾರಾವಾಹಿಯಲ್ಲಿ ಹಲವು ಭಾವನೆಗಳನ್ನು ಬೆರೆಸಲಾಗಿದೆ. ಇಲ್ಲಿ ಮಧ್ಯಮ ವರ್ಗದವರ ಒದ್ದಾಟ ಇದೆ, ಅಪ್ಪ-ಮಗನ ಬಾಂಧವ್ಯ, ಅರೇಂಜ್ ಮ್ಯಾರೇಜ್ ಬಳಿಕ ಎದುರಾಗಬಹುದಾದ ತೊಂದರೆ, ಅಮ್ಮ-ಮಗನ ಮುನಿಸು, ಹೀಗೆ ಹಲವು ವಿಷಯಗಳನ್ನು ಹೇಳುವ ಪ್ರಯತ್ನ ಆಗುತ್ತಿದೆ. ಸೂರ್ಯ ಅವರು ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅವರು ಧಾರಾವಾಹಿ ಬಗ್ಗೆ ಮಾತನಾಡಿದ್ದಾರೆ.

‘ಆಸೆ ರಿಮೇಕ್ ಧಾರಾವಾಹಿ. ಇದು ಮರಾಠಿ, ಗುಜರಾತಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಪ್ರಸಾರ ಆಗುತ್ತಿದೆ. ಆದರೆ, ಕನ್ನಡದಲ್ಲಿ ನನ್ನ ಪಾತ್ರವನ್ನು ವಿಶೇಷವಾಗಿ ಡಿಸೈನ್ ಮಾಡಲಾಗಿದೆ. ಇದಕ್ಕೆ ನಮ್ಮ ನಿರ್ದೇಶಕರು ಕಾರಣ. ಮೃಗಶಿರ ಶ್ರೀಕಾಂತ್ ಅವರ ಬರವಣಿಗೆ ಧಾರಾವಾಹಿಗೆ ಮತ್ತೊಂದು ಬಲ. ಅವರಿಲ್ಲ ಎಂದರೆ, ಸೂರ್ಯ ಇಲ್ಲ. ಇವರಿಂದ ಸೂರ್ಯ ಪಾತ್ರ ಉದಯಿಸಿದೆ’ ಎಂದಿದ್ದಾರೆ ಅವರು.

‘ಮಂಡ್ಯ ರಮೇಶ್ ಜೊತೆ ನಟಿಸೋ ಅವಕಾಶ ನನಗೆ ಸಿಕ್ಕಿದೆ. ಅವರು ನಮ್ಮ ಜೊತೆ ಗೆಳೆಯರಂತೆ ವರ್ತಿಸುತ್ತಾರೆ. ಜೋಕ್ ಮಾಡಿಕೊಂಡು ಇರ್ತಾರೆ. ಅವರ ಜೊತೆ ಒಳ್ಳೆಯ ಬಾಂಡ್ ಇದೆ. ಅವರು ಅಂತ ಅಲ್ಲ, ಧಾರಾವಾಹಿಯ ಎಲ್ಲಾ ಕಲಾವಿದರ ಜೊತೆ ಒಳ್ಳೆಯ ಬಾಂಡ್ ಇದೆ. ನಾವು ಖುಷಿಯಿಂದ ಕೆಲಸ ಮಾಡುತ್ತಿದ್ದೇವೆ’ ಎಂದು ಸೂರ್ಯ ಹೇಳಿದ್ದಾರೆ.

‘ನನ್ನದು ಮಧ್ಯಮ ವರ್ಗ. ನನ್ನ ಜೀವನದಲ್ಲಿ ಏನೋ ನಡೆದಿರುತ್ತದೆ. ನಂತರ ಅದೇ ದೃಶ್ಯವನ್ನು ಧಾರಾವಾಹಿಯಲ್ಲೂ ನೀಡುತ್ತಾರೆ. ನನಗೆ ನಿಜಕ್ಕೂ ಅಚ್ಚರಿ ಎನಿಸಿ ಬಿಡುತ್ತದೆ. ಧಾರಾವಾಹಿ ಜನರಿಗೆ ಹತ್ತಿರವಾಗಲು ಇದೇ ಕಾರಣ. ಸ್ಟೋರಿ ರೈಟರ್​​ಗೆ ಎಲ್ಲ ಕೊಡುಗೆ ಕೊಡುತ್ತೇನೆ’ ಎನ್ನುತ್ತಾರೆ ಅವರು.

ಕಲಾವಿದ ಪಾತ್ರವನ್ನು ಮನಸ್ಸಿಗೆ ತೆಗೆದುಕೊಳ್ಳದೆ, ಕೇವಲ ನಟನೆಗೆ ಸೀಮಿತ ಮಾಡಿಕೊಳ್ಳಬೇಕು ಎಂಬುದು ನಿನಾದ್ ಅವರ ಟಿಪ್ಸ್. ಅದನ್ನು ಮನಸ್ಸಿಗೆ ತೆಗೆದುಕೊಂಡರೆ ಅದು ವೈಯಕ್ತಿಕ ಜೀವನದ ಮೇಲೆ ಪ್ರಭಾವ ಬೀರುತ್ತದೆ, ಇದರಿಂದ ವೈಯಕ್ತಿಕ ಜೀವನಕ್ಕೆ ತೊಂದರೆ ಆಗುತ್ತದೆ ಎಂದು ಅವರು ಬಲವಾಗಿ ನಂಬಿದ್ದಾರೆ.

ಧಾರಾವಾಹಿ ಹಾಗೂ ಸಿನಿಮಾ ಶೂಟ್​​​ನಲ್ಲಿ ಸಾಕಷ್ಟು ವ್ಯತ್ಯಾಸ ಇರುತ್ತದೆ. ಸಿನಿಮಾಗಳಲ್ಲಿ ಒಂದು ನಿಗದಿತ ಸಮಯದಲ್ಲಿ ಶೂಟ್ ಮಾಡಲಾಗುತ್ತದೆ. ಆದರೆ, ಧಾರಾವಾಹಿಯಲ್ಲಿ ಹಾಗಾಗೋದಿಲ್ಲ. ನಿನಾದ್​​ಗೂ ಅದೇ ರೀತಿಯ ತೊಂದರೆ ಎದುರಾಗುತ್ತಿದೆ. ವೈಯಕ್ತಿಕವಾಗಿ ಏನಾದರೂ ಪ್ಲ್ಯಾನ್ ಮಾಡಿಕೊಂಡಾಗಲೇ ಶೂಟಿಂಗ್ ಇರುತ್ತದೆ. ಆದರೂ ಕೆಲಸವನ್ನು ಇಷ್ಟಪಟ್ಟು ಮಾಡುತ್ತಿರುವುದರಿಂದ, ಅವರು ಕಷ್ಟಪಟ್ಟಾದರೂ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನವನ್ನು ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ: ‘ಕರ್ಣ ಧಾರಾವಾಹಿಯಿಂದ ಹೊರ ನಡೆದ ನಾಗಾಭರಣ; ಅಭಿಜಿತ್ ಆಗಮನ

ಇತ್ತೀಚೆಗೆ ಬಂದ ‘ಮಾರಿಗಲ್ಲು ವೆಬ್’ ವೆಬ್ ಸರಣಿಯಲ್ಲಿ ನಿನಾದ್ ನಟಿಸಿದ್ದಾರೆ. ಒಂದು ಬದಲಾವಣೆ ಇರಲಿ ಎಂಬ ಕಾರಣಕ್ಕೆ ಅವರು ಇದರ ಭಾಗ ಆಗಿದ್ದರು. ಈಗ ಅವರು ಸಿನಿಮಾ ಮಾಡುವ ಆಸಕ್ತಿ ತೋರಿಸುತ್ತಿದ್ದಾರೆ. ವೃತ್ತಿ ಜೀವನಕ್ಕೆ ಬೆಂಬವಾಗಿ ನಿಂತ ಪತ್ನಿ ರಮ್ಯಾಗೂ ಅವರು ಧನ್ಯವಾದ ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯೂಝಿಲೆಂಡ್​ ವಿರುದ್ಧದ ಗೆಲುವಿನ ಐಸಿಸಿ ಅಧ್ಯಕ್ಷ ಜಯ್​ ಶಾ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಈ ನಡೆಗೆ ಆಕ್ರೋಶ ಹೊರಹಾಕಿರುವ ಕೀರ್ತಿ ಆಝಾದ್, ಭಾರತ ತಂಡ ಎಂಬುದು ಸೂರ್ಯ ಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ. ಅವರಿಗೆ ಇಷ್ಟ ಬಂದಂತೆ ನಡೆದುಕೊಳ್ಳಲು. ಟೀಮ್ ಇಂಡಿಯಾ ಇಡೀ ಭಾರತವನ್ನು ಪ್ರತಿನಿಧಿಸುತ್ತದೆ. ಕೇವಲ ಒಂದು ಧರ್ಮವನ್ನಲ್ಲ ಎಂದು ಕಿಡಿಕಾರಿದ್ದಾರೆ.

1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ನಾವು ವಿಶ್ವಕಪ್ ಗೆದ್ದಾಗ, ನಮ್ಮ ತಂಡದಲ್ಲಿ ಹಿಂದೂ, ಮುಸ್ಲಿಂ, ಸಿಖ್ ಮತ್ತು ಕ್ರಿಶ್ಚಿಯನ್ ಆಟಗಾರರು ಇದ್ದರು. ನಾವು ಟ್ರೋಫಿಯನ್ನು ನಮ್ಮ ಧಾರ್ಮಿಕ ಜನ್ಮಸ್ಥಳವಾದ ನಮ್ಮ ಮಾತೃಭೂಮಿ  ಹಿಂದೂಸ್ತಾನ್‌ಗೆ ತಂದಿದ್ದೆವು.

ಇದೀಗ ಏಕೆ ಟ್ರೋಫಿಯನ್ನು ದೇವಸ್ಥಾನಕ್ಕೆ ಎತ್ತಕೊಂಡು ಹೋಗಿದ್ದಾರೆ? ಅದೇ ಯಾಕೆ ಮಸೀದಿಗೆ ಅಥವಾ ಚರ್ಚ್​ ಇಲ್ಲಾ ಗುರುದ್ವಾರಗೆ ತೆಗೆದುಕೊಂಡು ಹೋಗಿಲ್ಲ. ಈ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಇದರ ಬದಲಾಗಿ ಸೂರ್ಯ ಕುಮಾರ್ ಯಾದವ್ ಅಥವಾ ಜಯ್ ಶಾ ಅವರ ಕುಟುಂಬವಲ್ಲ!

ಇದೇ ವಿಶ್ವಕಪ್ ತಂಡದಲ್ಲಿದ್ದ ಮೊಹಮ್ಮದ್ ಸಿರಾಜ್ ಟ್ರೋಫಿಯನ್ನು ಮಸೀದಿಗೆ ಎತ್ತುಕೊಂಡು ಹೋಗಿಲ್ಲ. ಅದರಲ್ಲೂ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿ ಪಡೆದ ಸಂಜು ಸ್ಯಾಮ್ಸನ್​​ ಚರ್ಚ್​ಗೆ ತೆಗೆದುಕೊಂಡು ಹೋಗಲಿಲ್ಲ.

ಈ ಟ್ರೋಫಿಯು 1.4 ಬಿಲಿಯನ್ ಭಾರತೀಯರಿಗೆ ಸೇರಿದೆ. ಇದು ಒಂದು ಧರ್ಮದ ವಿಜಯೋತ್ಸವವಲ್ಲ! ಎಂದು ಕೀರ್ತಿ ಆಝಾದ್ ಆಕ್ರೋಶವನ್ನು ಹೊರಹಾಕಿದ್ದಾರೆ. ಇದೀಗ ಕೀರ್ತಿ ಆಝಾದ್ ಅವರ ಈ ಅಭಿಪ್ರಾಯಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ.

Source link

ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?

ಹುಬ್ಬಳ್ಳಿ, ಮಾರ್ಚ್​​ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ‌ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್​​ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ ವೇತನ ಬಂದಿಲ್ಲ ಎನ್ನಲಾಗಿದೆ.

ಬಿ.ವೈ. ವಿಜಯೇಂದ್ರ ಕಿಡಿ

ವಿಜಯೇಂದ್ರ ಪೋಸ್ಟ್​​

ಪೊಲೀಸ್​​ ಸಿಬ್ಬಂದಿಗೆ ಸರ್ಕಾರ ಇನ್ನೂ ವೇತನ ಪಾವತಿಸದಿರುವ ವಿಚಾರವಾಗಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. ಈ ಬಗ್ಗೆ ಎಕ್ಸ್​​ ಪೋಸ್ಟ್​​ ಮಾಡಿರುವ ಅವರು, ಈ ಬಾರಿ 4.48 ಲಕ್ಷ ಕೋಟಿ ರೂ ಗಾತ್ರದ ಅತಿ ದೊಡ್ಡ ಬಜೆಟ್ ಮಂಡಿಸಿ ರಾಜ್ಯದ ಆರ್ಥಿಕತೆ ಸದೃಢವಾಗಿದೆ ಎನ್ನುವ ಮರೀಚಿಕೆಯಲ್ಲಿ ವಿಹರಿಸುತ್ತಿದ್ದೀರಿ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಆದರೆ ಬಜೆಟ್ ಪುಸ್ತಕದಲ್ಲಿ ನೀವು ಬರೆದುಕೊಂಡ ಅಂಕಿ-ಸಂಖ್ಯೆಗಳ ಆಚೆಗೆ, ವಾಸ್ತವ ಜಗತ್ತಿನ ಕಟುಸತ್ಯವನ್ನು ಮಾಧ್ಯಮ ವರದಿ ಬಯಲು ಮಾಡಿದೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಯುವ ಪೊಲೀಸ್ ಸಿಬ್ಬಂದಿಗಳಿಗೆ ಹಿಂದಿನ ತಿಂಗಳ ವೇತನ ನೀಡಲು ನಿಮ್ಮ ಕಾಂಗ್ರೆಸ್​​ ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದರೆ ನಿಮ್ಮ ಬಜೆಟ್ ಎಷ್ಟು ಅವಾಸ್ತವಿಕವಾಗಿದೆ ಎಂದು ಬೇರೆ ಹೇಳಬೇಕೇ? ಪೊಲೀಸ್ ಸಿಬ್ಬಂದಿಗೆ ವೇತನ ನೀಡಲು ನಿಮ್ಮ ಸರ್ಕಾರದ ಬಳಿ ಹಣವಿಲ್ಲ, ಆದರೂ ನಿಮ್ಮ ಒಣ ಪ್ರತಿಷ್ಠೆಯ ಮಾತುಗಳಿಗೆ ಬರವಿಲ್ಲದಿರುವುದು ನಾಚಿಕೆಗೇಡಿನ ಸಂಗತಿಯಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿಗೂ EMI?; ಜಿಬಿಎಯಿಂದ ಬೆಂಗಳೂರಿಗರಿಗೆ ಸಿಗುತ್ತಾ ಗುಡ್​​ ನ್ಯೂಸ್​?

ಹುಬ್ಬಳ್ಳಿ-ಧಾರವಾಡ, ಬಳ್ಳಾರಿ, ವಿಜಯನಗರ, ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸಾವಿರಾರು ಪೊಲೀಸರು ಸಂಬಳವಿಲ್ಲದೆ ಕಂಗಾಲಾಗಿದ್ದಾರೆ. ಸುಳ್ಳು ಪ್ರಚಾರಕ್ಕೆ ಕೋಟಿ ಕೋಟಿ ಸುರಿಯುವ ಈ ಕಾಂಗ್ರೆಸ್ ಸರ್ಕಾರಕ್ಕೆ, ಹಗಲಿರುಳು ಶ್ರಮಿಸುವ ನಮ್ಮ ರಕ್ಷಕರಿಗೆ ವೇತನ ನೀಡಲು ಹಣವಿಲ್ಲ. ಇದು ಕೇವಲ ತಾಂತ್ರಿಕ ವಿಳಂಬವಲ್ಲ, ರಾಜ್ಯದ ಆರ್ಥಿಕ ದಿವಾಳಿತನದ ಮತ್ತೊಂದು ಸಾಕ್ಷಿ. ಒಂದು ಕಡೆ ದಾಖಲೆ ಮೊತ್ತದ ಬಜೆಟ್ ಘೋಷಣೆ, ಮತ್ತೊಂದು ಕಡೆ ಸಂಬಳಕ್ಕಾಗಿ ಪೊಲೀಸರ ಪರದಾಟ . ಈ ವೈರುಧ್ಯವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ. ಬಜೆಟ್ ನಲ್ಲಿ ಅಂಕಿ-ಅಂಶಗಳ ಮೂಲಕ ಜನರನ್ನು ಮರಳು ಮಾಡುವ ನಿಮ್ಮ ಅನಗತ್ಯ, ಅವಾಸ್ತವಿಕ ಸರ್ಕಸ್ ಬಯಲಾಗಿದೆ. ಕಾಗದದ ಮೇಲಿನ ಘೋಷಿತ ಅಂಕಿ-ಅಂಶಗಳಿಗಿಂತ, ಜನರ ಸ್ವಾಭಿಮಾನದ ಬದುಕು ಮುಖ್ಯ. ನಿಮ್ಮ ವೈಫಲ್ಯಗಳಿಗೆ ಕಾರಣ ಏನೇ ಇರಲಿ, ಈ ಕೂಡಲೇ ರಾಜ್ಯದ ಪೊಲೀಸ್ ಸಿಬ್ಬಂದಿಯ ಬಾಕಿ ವೇತನ ಬಿಡುಗಡೆ ಮಾಡಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

13 ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂಕೋರ್ಟ್​ ಅನುಮತಿ

ನವದೆಹಲಿ, ಮಾರ್ಚ್​ 11: ಕಳೆದ ಹದಿಮೂರು ವರ್ಷಗಳಿಂದ ಕೋಮಾ(Coma)ದಲ್ಲಿರುವ ಹರೀಶ್ ರಾಣಾ ದಯಾಮರಣ( Euthanasia)Supreme Court passive euthanasia verdict, India passive euthanasia ruling, Supreme Court end of life decision, right to die case India, Harish Rana 13 years coma verdict,
ಕ್ಕೆ ಸುಪ್ರೀಂಕೋರ್ಟ್​ ಇಂದು(ಮಾರ್ಚ್​ 11) ಅನುಮತಿ ನೀಡಿದೆ. ಚಲಿಸಲು ಅಥವಾ ಮಾತನಾಡಲು ಸಾಧ್ಯವಾಗದೆ ಜೀವಂತ ಶವದಂತಾಗಿದ್ದಾನೆ. ಆತನ ವೃದ್ಧ ಪೋಷಕರು, ಅವರ ಚೇತರಿಕೆಯ ಭರವಸೆಯನ್ನು ತ್ಯಜಿಸಿ, ತಮ್ಮ ಮಗನ ದಯಾಮರಣಕ್ಕೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಅಂತೂ ಅಸ್ತು ಎಂದಿದೆ.

ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ, ಆಗಸ್ಟ್ 20, 2013 ರಂದು ತಮ್ಮ ಪಿಜಿ ವಸತಿಗೃಹದ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ, ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.

ಹರೀಶ್ ಅವರ ಪೋಷಕರು, ಇತರ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದಾರೆ, ದೆಹಲಿಯಲ್ಲಿರುವ ತಮ್ಮ ಮನೆಯನ್ನು ಮಾರಿ, ಏಮ್ಸ್‌ನಲ್ಲಿ ಅವರ ಹಾಸಿಗೆಯ ಪಕ್ಕದಲ್ಲಿಯೇ ಇರಲು ಗಾಜಿಯಾಬಾದ್‌ಗೆ ಸ್ಥಳಾಂತರಗೊಂಡರು. ವರ್ಷಗಳಲ್ಲಿ, ತಮ್ಮ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ಅವರು ದಯಾಮರಣಕ್ಕೆ ಕಾನೂನು ಅನುಮತಿಯನ್ನು ಕೋರಿದ್ದರು.

ಮತ್ತಷ್ಟು ಓದಿ: ಹಾಲಿಗೆ ಆಲ್ಕೋಹಾಲ್ ಬೆರೆಸಿದ ಅಜ್ಜಿ;ಕೋಮಾಗೆ ಜಾರಿದ 4 ತಿಂಗಳ ಮೊಮ್ಮಗು

ಏಮ್ಸ್ ಸಲ್ಲಿಸಿದ ವೈದ್ಯಕೀಯ ಮೌಲ್ಯಮಾಪನದ ಪ್ರಕಾರ, ರಾಣಾ ಅವರ ಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ವರದಿಯು ಅತ್ಯಂತ ದುಃಖಕರವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಗಮನಿಸಿದ್ದಾರೆ. ಇದು ನಮಗೆ ಕಷ್ಟಕರವಾದ ನಿರ್ಧಾರ, ಆದರೆ ಈ ಹುಡುಗ ಇಷ್ಟೊಂದು ಯಾತನೆಯಲ್ಲಿ ಉಳಿಯಲು ನಾವು ಬಿಡುವುದಿಲ್ಲ, ಇಂದು ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದರು.

ದಯಾಮರಣವನ್ನು ಮೊದಲು ಸುಪ್ರೀಂ ಕೋರ್ಟ್ 2011 ರ ಅರುಣಾ ಶಾನ್‌ಬಾಗ್ ಪ್ರಕರಣದಲ್ಲಿ ಗುರುತಿಸಿತು ಮತ್ತು ನಂತರ 2018 ರಲ್ಲಿ ಕಾಮನ್ ಕಾಸ್ vs ಯೂನಿಯನ್ ಆಫ್ ಇಂಡಿಯಾ ತೀರ್ಪಿನ ಅಡಿಯಲ್ಲಿ ಕಾನೂನುಬದ್ಧಗೊಳಿಸಲಾಯಿತು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link