Headlines

ನ್ಯೂಝಿಲೆಂಡ್ ಟಿ20 ತಂಡದಿಂದ 8 ಆಟಗಾರರು ಔಟ್!

ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ನ್ಯೂಝಿಲೆಂಡ್ ತಂಡ ಟಿ20 ಸರಣಿಗಾಗಿ ಸಜ್ಜಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಸರಣಿಗಾಗಿ ನ್ಯೂಝಿಲೆಂಡ್ ತಂಡವನ್ನು ಪ್ರಕಟಿಸಲಾಗಿದ್ದು, ಈ ತಂಡದಲ್ಲಿ ಪ್ರಮುಖ ಆಟಗಾರರು ಕಾಣಿಸಿಕೊಂಡಿಲ್ಲ ಎಂಬುದು ವಿಶೇಷ. ಅಂದರೆ ವಿಶ್ವಕಪ್​ನಲ್ಲಿ ಕಣಕ್ಕಿಳಿದಿದ್ದ 8 ಆಟಗಾರರು ಈ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು ನಾಯಕ ಮಿಚೆಲ್ ಸ್ಯಾಂಟ್ನರ್ ಮೂರು ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ. ಇನ್ನುಳಿದ ಎರಡು ಮ್ಯಾಚ್​ಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ ಮೂವರು ಹೊಸ ಆಟಗಾರರಿಗೆ ಅವಕಾಶ…

Read More

ಬಜೆಟ್‌ನಲ್ಲಿ ಕಾಲೇಜು ಚುನಾವಣೆ ಘೋಷಣೆ ಮಾಡಿದ್ದೇ ತಡ ಮಂಗಳೂರು ಕಾಲೇಜು ವಿದ್ಯಾರ್ಥಿಗಳ ನಡುವೆ ಬಿಗ್​​ ಫೈಟ್

ಮಂಗಳೂರು, ಮಾ.11: ಈ ಹಿಂದೆ ಕಾಲೇಜು ಚುನಾವಣೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳ ನಡುವೆ ದೊಡ್ಡ ಜಗಳಗಳು ನಡೆಯುತ್ತಿತ್ತು. ಇದೀಗ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟೇ, ಇನ್ನು ಅದು ಅಧಿಕೃತವಾಗಿ ಜಾರಿಗೆ ಬಂದಿಲ್ಲ. ಅಷ್ಟರಲ್ಲೇ ಮಂಗಳೂರಿನ ಪ್ರತಿಷ್ಠಿತ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಕಿಚ್ಚು ಭುಗಿಲೆದ್ದಿದೆ. ಕಾಂಗ್ರೆಸ್ ಬೆಂಬಲಿತ NSUI ಮತ್ತು ಬಿಜೆಪಿ ಬೆಂಬಲಿತ ABVP ಕಾರ್ಯಕರ್ತರ ನಡುವಿನ ಜಿದ್ದಾಜಿದ್ದಿನಿಂದ ಕಾಲೇಜು ಆವರಣ ರಣರಂಗವಾಗಿ ಮಾರ್ಪಟ್ಟಿದೆ. ಬಜೆಟ್‌ನಲ್ಲಿ ಚುನಾವಣೆ…

Read More

ಹೋಳಿ ಆಚರಿಸಲು ಮನೆಗೆ ಬಂದಿದ್ದ ಮಗಳು 13ನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ಗೇಟರ್​ ನೋಯ್ಡಾ, ಮಾರ್ಚ್​ 11: ಹೋಳಿ ಆಚರಣೆಗೆಂದು ಮನೆಗೆ ಬಂದಿದ್ದ ಯುವತಿ ಅಪಾರ್ಟ್​ಮೆಂಟ್​ನ 13ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿರುವ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. 25 ವರ್ಷದ ಎಂಬಿಎ ವಿದ್ಯಾರ್ಥಿನಿ ಆತ್ಮಹತ್ಯೆ(Suicide) ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಸ್ರಖ್ ಪೊಲೀಸ್ ಠಾಣೆ ಪ್ರದೇಶದ ಗೌರ್ ಸೌಂದರ್ಯಂ ಸೊಸೈಟಿಯಲ್ಲಿ ಈ ಘಟನೆ ನಡೆದಿದ್ದು, ವಸತಿ ಸಮುಚ್ಚಯದ ನಿವಾಸಿಗಳಲ್ಲಿ ಭಯಭೀತಿ ಮೂಡಿಸಿದೆ. ಮೃತ ಯುವತಿಯನ್ನು ಶಿವಿಕಾ ಥಕ್ರಲ್ ಎಂದು ಗುರುತಿಸಲಾಗಿದ್ದು, ಈಕೆ ವಿನಯ್ ಥಕ್ರಲ್ ಅವರ ಪುತ್ರಿಯಾಗಿದ್ದು, ಗೌರ್…

Read More

Kalashtami 2026: ಇಂದು ಕಾಲಾಷ್ಟಮಿ; ಈ ದಿನದ ವಿಶೇಷತೆ ಮತ್ತು ಮಹತ್ವ ತಿಳಿಯಿರಿ

ಕಾಲಾಷ್ಟಮಿಯು ಕಾಲ ಭೈರವನಿಗೆ ಅರ್ಪಿತವಾದ ಒಂದು ಪ್ರಮುಖ ಹಿಂದೂ ಹಬ್ಬವಾಗಿದೆ. ಇದನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಎಂಟನೇ ದಿನದಂದು ಆಚರಿಸಲಾಗುತ್ತದೆ. ಈ ತಿಂಗಳಿನಲ್ಲಿ ಮಾರ್ಚ್ 11ರಂದು ಈ ಕಾಲಾಷ್ಟಮಿ ದಿನವನ್ನಾಗಿ ಆಚರಿಸುತ್ತಾರೆ. ಶಿವನ ಉಗ್ರ ರೂಪವಾದ ಕಾಲ ಭೈರವನ ಆರಾಧನೆಗೆ ಈ ದಿನ ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಕಾಲ ಭೈರವನನ್ನು ಪೂಜಿಸುವುದರಿಂದ ಭಯ ಮತ್ತು ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಮಾಡುವ ಉಪವಾಸ ಮತ್ತು ಪೂಜೆಯು ಶನಿ ಮತ್ತು…

Read More

ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

ಚಿತ್ರರಂಗದಲ್ಲಿ (Movie Industry) ಒಬ್ಬರನ್ನು ಇನ್ನೊಬ್ಬರ ಜೊತೆ ಹೋಲಿಸಿ ನೋಡುವುದು ಸಾಮಾನ್ಯ. ಆದರೆ ಈ ಹೋಲಿಕೆಯ ಸಂದರ್ಭದಲ್ಲಿ ನಟರನ್ನು ತುಚ್ಛೀಕರಿಸಿ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಪದ್ಮಶ್ರೀ ಪುರಸ್ಕೃತ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು, ಘನತೆ ಮರೆತು, ತಮಿಳಿನ ಸೂಪರ್ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಬಗ್ಗೆ ತೀರ ಕೀಳಾಗಿ ಮಾತನಾಡಿದ್ದಾರೆ. ತೆಲುಗಿನ ಹಿರಿಯ ನಟರೊಬ್ಬರನ್ನು ಹೊಗಳಲೆಂದು ತಮಿಳಿನ ಲಿಜೆಂಡರಿ ನಟರೊಬ್ಬರ ಬಗ್ಗೆ ಕೀಳಾಗಿ ಮಾತನಾಡಿರುವುದರನ್ನು ನೆಟ್ಟಗರು ತೀವ್ರವಾಗಿ ಟೀಕಿಸಿದ್ದಾರೆ. ಟಾಲಿವುಡ್‌ನ ಹಿರಿಯ…

Read More

ಎಲ್​ಪಿಜಿ ಕೊರತೆ: ರಿಲಯನ್ಸ್‌ನಿಂದ ಜಾಮ್‌ನಗರದಲ್ಲಿ ಅನಿಲ ಉತ್ಪಾದನೆ ಹೆಚ್ಚಳದ ಬಗ್ಗೆ ಘೋಷಣೆ

ಮುಂಬೈ, ಮಾರ್ಚ್ 11: ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮವಾಗಿ ಕರ್ನಾಟಕ ಸೇರಿ ಭಾರತದ ಹಲವೆಡೆ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವ ತಲೆದೋರಿದೆ. ಈ ಹೊತ್ತಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ತರವಾದ ಘೋಷಣೆ ಮಾಡಿದ್ದು, ಜಾಮ್ ನಗರದಲ್ಲಿನ ಸಂಸ್ಕರಣಾಗಾರ ಹಾಗೂ ಪೆಟ್ರೋಕೆಮಿಕಲ್ಸ್ ಸಮುಚ್ಚಯದಿಂದ ಎಲ್​​ಪಿಜಿ ಉತ್ಪಾದನೆಯನ್ನು ಸ್ವಯಂಪ್ರೇರಿತವಾಗಿ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಸುವುದಕ್ಕೆ ನಿರ್ಧಾರ ಕೈಗೊಂಡಿರೋದಾಗಿ ತಿಳಿಸಿದೆ. ಜಾಮ್ ನಗರದಲ್ಲಿ ಇರುವ ಈ ಘಟಕ ವಿಶ್ವದಲ್ಲಿಯೇ ಅತಿದೊಡ್ಡ ಸಂಯೋಜಿತ ಸಂಸ್ಕರಣೆ ಹಬ್ ಎಂಬ ದಾಖಲೆಗೆ ಪಾತ್ರವಾಗಿದೆ ಎಂದು ಕಂಪನಿಯ ಹೇಳಿದ್ದು,  KG- D6 ಬ್ಲಾಕ್​​ನಲ್ಲಿ…

Read More

Video: ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ, ಓಡಿಹೋಗಲು ಗಾಡಿಯಲ್ಲಿ ಪೆಟ್ರೋಲ್ ಇಲ್ಲದೆ ಸಿಕ್ಕಾಕ್ಕೊಂಡ

ವೆನ್ನಪ್ಪುವಾ, ಮಾರ್ಚ್​ 11: ಬೈಕ್​​ನಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಕಳ್ಳನೊಬ್ಬ ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರ ದೋಚಿರುವ ಘಟನೆ ಶ್ರೀಲಂಕಾದಲ್ಲಿ ನಡೆದಿದೆ. ವೆನ್ನಪ್ಪುವಾದ ಥಂಬರವಿಲಾ ಪ್ರದೇಶದಲ್ಲಿ ಘಟನೆ ನಡೆದಿದ್ದು, ಸಿಸಿಟಿವಿಯಲ್ಲಿ ಘಟನೆಯನ್ನು ಸೆರೆಹಿಡಿದಿದೆ.ಆರೋಪಿಯು ಬೈಕ್​ನಲ್ಲಿ ಬಂದು ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಆಕೆಯನ್ನು ಬೀಳಿಸಿ ಸರ ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಬೈಕ್​​ನಲ್ಲಿ ಪೆಟ್ರೋಲ್ ಇಲ್ಲದ ಕಾರಣ ಸಾರ್ವಜನಿಕರ ಕೈಗೆ ಸಿಕ್ಕಿ ಒದೆ ತಿಂದಿದ್ದಾನೆ.     ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  Source link

Read More

‘ಆಸೆ’ ಧಾರಾವಾಹಿಯಲ್ಲಿ ಭಾವನೆಗಳ ಪಯಣ; ಸೂರ್ಯ ಪಾತ್ರಧಾರಿ ನಿನಾದ್ ಏನಂತಾರೆ?

ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ‘ಆಸೆ’ ಧಾರಾವಾಹಿಗೆ (Serial) ದೊಡ್ಡ ವೀಕ್ಷಕರ ಬಳಗ ಇದೆ. ವೀಕ್ಷಕರಿಗೆ ಹೆಚ್ಚು ಇಷ್ಟ ಆಗಿದ್ದು, ಈ ಸೀರಿಯಲ್​ನ ನಿನಾದ್ ಹರಿತ್ಸ ಮಾಡುತ್ತಿರುವ ಸೂರ್ಯ ಪಾತ್ರ. ಅವರ ಸ್ಮೈಲ್, ಸ್ಟೈಲ್, ಡೈಲಾಗ್ ಎಲ್ಲರಿಗೂ ಇಷ್ಟ ಆಗಿದೆ. ಒಂದು ಸೀರಿಯಲ್ 800 ಪ್ರಸಾರ ಕಾಣುತ್ತದೆ ಎಂದರೆ ಅದು ಸಣ್ಣ ವಿಷಯ ಅಲ್ಲವೇ ಅಲ್ಲ. ನಿನಾದ್ ಅವರು ಈ ಜರ್ನಿಯನ್ನು ನೆನೆದಿದ್ದಾರೆ. ‘ಆಸೆ’ ಧಾರಾವಾಹಿಯಲ್ಲಿ ಹಲವು ಭಾವನೆಗಳನ್ನು ಬೆರೆಸಲಾಗಿದೆ. ಇಲ್ಲಿ ಮಧ್ಯಮ ವರ್ಗದವರ ಒದ್ದಾಟ ಇದೆ,…

Read More

ಭಾರತ ತಂಡ ಸೂರ್ಯಕುಮಾರ್, ಜಯ್ ಶಾ ಅವರ ಕುಟುಂಬ ಸ್ವತ್ತಲ್ಲ!

ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಗೌತಮ್ ಗಂಭೀರ್ ಹಾಗೂ ಐಸಿಸಿ ಅಧ್ಯಕ್ಷ ಜಯ್ ಶಾ ಟ್ರೋಫಿಯನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಿದಕ್ಕೆ ಭಾರತದ ಮಾಜಿ ಕ್ರಿಕೆಟಿಗ ಕೀರ್ತಿ ಆಝಾದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನ್ಯೂಝಿಲೆಂಡ್​ ವಿರುದ್ಧದ ಗೆಲುವಿನ ಐಸಿಸಿ ಅಧ್ಯಕ್ಷ ಜಯ್​ ಶಾ, ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೋಚ್ ಗೌತಮ್ ಗಂಭೀರ್ ಟ್ರೋಫಿಯೊಂದಿಗೆ ಅಹಮದಾಬಾದ್‌ನ ಹನುಮಾನ್ ಟೆಕ್ರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ನಡೆಗೆ ಆಕ್ರೋಶ ಹೊರಹಾಕಿರುವ ಕೀರ್ತಿ…

Read More

ವೇತನ‌ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ: ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?

ಹುಬ್ಬಳ್ಳಿ, ಮಾರ್ಚ್​​ 11: ಕಳೆದ ಫೆಬ್ರವರಿ ತಿಂಗಳ ವೇತನ ಇನ್ನೂ ಪಾವತಿ ಆಗದ ಹಿನ್ನೆಲೆ ಪೊಲೀಸ್ ಸಿಬ್ಬಂದಿ ಪರದಾಟ ನಡೆಸಬೇಕಾದ ಪ್ರಸಂಗ ಉದ್ಭವಿಸಿದೆ. ತಿಂಗಳ ಆರಂಭದಲ್ಲಿಯೇ ಜಮೆ ಆಗುತ್ತಿದ್ದ ವೇತನ‌ ಇಲ್ಲಿಯವರೆಗೂ ಜಮೆ ಆಗಿಲ್ಲ. ಹೀಗಾಗಿ ಸಾವಿರಾರು ಮಂದಿ ಪೊಲೀಸ್​​ ಸಿಬ್ಬಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಳ ವಿಳಂಬದಿಂದ ಮನೆ ಬಾಡಿಗೆ, ಬ್ಯಾಂಕ್ ಸಾಲದ ಕಂತುಗಳು, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ಮತ್ತು ಎಸ್‌ಪಿ ವ್ಯಾಪ್ತಿಯಲ್ಲಿರುವ 3,200 ಸಿಬ್ಬಂದಿಗೂ ಇನ್ನೂ…

Read More