ಗಂಭೀರ ಲೋಪ ಎಸಗಿದ ಮಲಯಾಳಂ ಸಿನಿಮಾ, ತನಿಖೆ ಆರಂಭಿಸಿದ ಸಿಎಬಿಎಫ್ಸಿ – Kannada News | Mollywood Times movie allegedly broke CBFC rules
ಸಿನಿಮಾಗಳು (Cinema), ಭಾರತದ ಸಿನಿಮಾಟೊಗ್ರಫಿ ಕಾಯ್ದೆಯಡಿಯೇ ಪ್ರದರ್ಶನ ಕಾಣಬೇಕು. ಅದರಲ್ಲೂ ಸಿಬಿಎಫ್ಸಿ ನೀಡಿದ ಪ್ರಮಾಣ ಪತ್ರದ ಹೊರತಾಗಿ ಹಾಗೂ ಸಿಬಿಎಫ್ಸಿ ಸೂಚಿಸಿದ ರೀತಿಯಲ್ಲಿಯೇ ಸಿನಿಮಾಗಳು ಪ್ರದರ್ಶನ ಕಾಣಬೇಕು ಎಂಬುದು ಕಡ್ಡಾಯ ನಿಯಮ. ಸಿಬಿಎಫ್ಸಿ ಸೂಚಿಸಿದ ಕಡೆ, ಕಟ್ ಮಾಡಬೇಕು, ಮ್ಯೂಟ್ ಮಾಡಬೇಕು, ಒಂದೊಮ್ಮೆ ಸಿಬಿಎಫ್ಸಿ, ಸಿನಿಮಾವನ್ನು ಬಿಡುಗಡೆ ಮಾಡಬಾರದು ಎಂದರೆ ಬಿಡುಗಡೆ ಮಾಡುವಂತಿಲ್ಲ. ಸಿಬಿಎಫ್ಸಿಯನ್ನು ನಿಯಮವನ್ನು ಮೀರಿ ಯಾರೂ ಸಿನಿಮಾ ಪ್ರದರ್ಶಿಸುವಂತಿಲ್ಲ. ಆದರೆ ಇದೀಗ ಮಲಯಾಳಂ ಸಿನಿಮಾ ಒಂದು ಈ ದುಸ್ಸಾಹಸ ಮಾಡಿದೆ. ‘ಪ್ರೇಮಲು’, ‘ಲೋಕ’ ಖ್ಯಾತಿಯ…