Headlines

ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ ಮುನ್ನವೇ ಕಾಂಗ್ರೆಸ್​​ ಪಾಳೆಯದಲ್ಲಿ ಕೋಲಾಹಲ

ದಾವಣಗೆರೆ, ಮಾರ್ಚ್​ 10: ದಾವಣಗೆರೆ ವಿಧಾನಸಭಾ ಉಪಚುನಾವಣೆಗೂ (Davangere By-election)  ಮೊದಲೇ ಕಾಂಗ್ರೆಸ್ (Congress)​ ಪಾಳೆಯದಲ್ಲಿ ವಿಘ್ನ ಶುರುವಾಗಿದೆ. ಹಿರಿಯ ಶಾಸಕ ಶಾಮನೂರ ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರ ಖಾಲಿ ಆಗಿದೆ. ಇನ್ನೇನು ಉಪ ಚುನಾವಣೆ ಘೋಷಣೆ ಆಗಲಿದೆ. ಇದು ಕಾಂಗ್ರೆಸ್​​ಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ 10 ಜನ ಸಚಿವರ ತಂಡ ಕೂಡ ಮಾಡಲಾಗಿದೆ. ಅಖಾಡ ಸಜ್ಜಾಗುವ ಮೊದಲೇ ಜಮೀರ್ ಮತ್ತು ಮಲ್ಲಿಕಾರ್ಜುನ ನಡುವೆ ಪೈಟ್ ಶುರುವಾಗಿದೆ. ರಾಜ್ಯ ಕಾಂಗ್ರೆಸ್​ನಲ್ಲಿ ಹತ್ತಾರು ಕಿತ್ತಾಟಗಳ ಮಧ್ಯೆ ಉಪಚುನಾವಣೆ…

Read More

ಎಲ್​ಪಿಜಿ ಪೂರೈಕೆ ಬಿಕ್ಕಟ್ಟು ಬಗೆಹರಿಸಲು ಸರ್ಕಾರದಿಂದ ಸಮಿತಿ ರಚನೆ

ನವದೆಹಲಿ, ಮಾರ್ಚ್ 10: ಚೆನ್ನೈ, ಪುಣೆ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ್ಯಂತದ ಹೋಟೆಲ್‌ಗಳಲ್ಲಿ ಎಲ್‌ಪಿಜಿ (LPG Supply) ಸಿಲಿಂಡರ್‌ಗಳ ಕೊರತೆ ಹೆಚ್ಚಾಗಿದೆ. ಈ ಸಮಸ್ಯೆಯನ್ನು ಪರಿಹರಿಸಲು ಸರ್ಕಾರ ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ. ಸರ್ಕಾರವು ತೈಲ ಮಾರುಕಟ್ಟೆ ಕಂಪನಿಗಳಿಗೆ ರೆಸ್ಟೋರೆಂಟ್ ಸಂಘಗಳೊಂದಿಗೆ ಈ ಸಮಸ್ಯೆಯನ್ನು ಚರ್ಚಿಸಲು ನಿರ್ದೇಶಿಸಿದೆ. ತೈಲ ಮಾರುಕಟ್ಟೆ ಕಂಪನಿಗಳು ಎಲ್‌ಪಿಜಿ ಪೂರೈಕೆಯ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ವಿವಿಧ ರೆಸ್ಟೋರೆಂಟ್ ಸಂಘಗಳೊಂದಿಗೆ ಮಾತನಾಡಲಿವೆ. “ಹೋಟೆಲ್ ಮತ್ತು ರೆಸ್ಟೋರೆಂಟ್​​ನವರ ಕುಂದುಕೊರತೆಗಳನ್ನು ಆಲಿಸಲು ಸರ್ಕಾರವು ಐಒಸಿ,…

Read More

‘ಧುರಂಧರ್ 2’ ನೋಡಲು ಹೋದವರಿಗೆ ರಶ್ಮಿಕಾ ಮಂದಣ್ಣ ಕಾಣಲಿದ್ದಾರೆ: ಹೇಗೆ?

‘ಧುರಂಧರ್ 2’ (Dhurandhar 2) ಸಿನಿಮಾ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ. ಮಾರ್ಚ್ 19 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ಇಂದ ಹಿಂದೆ ಸರಿದ ಬಳಿಕವಂತೂ ಸಿನಿಮಾಕ್ಕೆ ತಡೆಯೇ ಇಲ್ಲದಾಗಿದೆ. ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್​​ಗಳು ಬಿಸಿ ದೋಸೆಯಂತೆ ಮಾರಾಟವಾಗುತ್ತಿವೆ. ಇದೀಗ ಈ ಸಿನಿಮಾಕ್ಕೆ ಇರುವ ಜನಪ್ರಿಯತೆ, ಪ್ರೇಕ್ಷಕರಲ್ಲಿ ಇರುವ ಕಾತರತೆಯನ್ನು ಬಳಸಿಕೊಳ್ಳಲು ನಿರ್ಮಾಣ ಸಂಸ್ಥೆ ಮುಂದಾಗಿದೆ. ಇದೇ ಕಾರಣಕ್ಕೆ ‘ಧುರಂಧರ್ 2’ ಸಿನಿಮಾ ನೋಡಲು ಹೋದವರಿಗೆ ರಶ್ಮಿಕಾ ಮಂದಣ್ಣ…

Read More

ಕುರ್ಚಿ ಕಾದಾಟದ ನಡುವೆಯೂ ಡಿಕೆಶಿ ಗುಣಗಾನ ಮಾಡಿದ ಸಿದ್ದರಾಮಯ್ಯ: ಕಾರಣ ಇಲ್ಲಿದೆ

ಬೆಂಗಳೂರು, ಮಾರ್ಚ್​​ 10: ಕರ್ನಾಟಕದ ಸಿಎಂ ಕುರ್ಚಿ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ಅವರ ನಡುವಿನ ತಿಕ್ಕಾಟ ಎಲ್ಲರಿಗೂ ಗೊತ್ತಿರುವ ವಿಷಯ. ಹೀಗಿದ್ದರೂ ಉಭಯ ನಾಯಕರು ಇಲ್ಲಿಯವರೆಗೂ ಎಲ್ಲಿಯೂ ಒಬ್ಬರ ವಿರುದ್ಧ ಮತ್ತೊಬ್ಬರು ಬಹಿರಂಗ ಸಮರ ಸಾರಿಲ್ಲ. ಮೊನ್ನೆ ಮೊನ್ನೆಯಷ್ಟೇ ನಮ್ಮಿಬ್ಬರದ್ದು ಹಾಲು-ಜೇನಿನ ಸಂಬಂಧ ಎಂದು ಸಿದ್ದರಾಮಯ್ಯ ಹೇಳಿದ್ದಿದ್ದು ಹಲವರ ಹುಬ್ಬೇರಿಸಿತ್ತು. ಈ ನಡುವೆ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್​ 6 ವರ್ಷ ಪೂರ್ಣಗೊಳಿಸಿದ ಹಿನ್ನೆಲೆ ಎಕ್ಸ್​ ಖಾತೆಯ ಮೂಲಕ ಮುಖ್ಯಮಂತ್ರಿಗಳು…

Read More

ಅಶ್ಲೀಲ ಸಂದೇಶ ಕೇಸ್: ಮುಚ್ಚಿದ ಕೊಠಡಿಯಲ್ಲಿ ವಿಚಾರಣೆಗೆ ಹಾಜರಾದ ರಮ್ಯಾ

ಖ್ಯಾತ ನಟಿ ರಮ್ಯಾ ದಿವ್ಯ ಸ್ಪಂದನಾ (Ramya Divya Spandana) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶ ಕಳಿಸಿದ 11 ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ರಮ್ಯಾ ಅವರು ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಇಂದು (ಮಾರ್ಚ್ 10) ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆಗೆ ಹಾಜರಾದ ರಮ್ಯಾ (Ramya) ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ. ವೃತ್ತಿ ಜೀವನ ಮತ್ತು ರಾಜಕೀಯ ಜೀವನದ…

Read More

ಹೊಸ ಬಟ್ಟೆ ತರಲು ಹೋಗಿದ್ದ ವಿದ್ಯಾರ್ಥಿ ದುರಂತ ಅಂತ್ಯ: ಚೀಲದಲ್ಲಿ ತುಂಬಿ ಕೆರೆಗೆಸೆದ ಸ್ನೇಹಿತರು

ರಾಯಚೂರು, (ಮಾರ್ಚ್ 10): ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಿನ್ನೆಲೆಯಲ್ಲಿ ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ರಾಯಚೂರು (Raichur)  ಜಿಲ್ಲೆ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ 15 ವರ್ಷದ ಕಾರ್ತಿಕ್ ಸಾವನ್ನಪ್ಪಿದ ಯುವಕ. ಬಟ್ಟೆ ಖರೀದಿಸಿ ವಾಪಸ್ ಬರುವ ವೇಳೆ ನೀರು ಕುಡಿಯಲೆಂದು ಹೋದಾಗ ಕಾರ್ತಿಕ್ ವಿದ್ಯುತ್​ ತಗುಲಿ ಸಾವನ್ನಪ್ಪಿದ್ದು, ಇದರಿಂದ ಆತಂಕಗೊಂಡ ಜೊತೆಗಿದ್ದ ಸ್ನೇಹಿತರು, ತಮ್ಮ ಮೇಲೆ ಬರುತ್ತೆಂಬ ಭಯಕ್ಕೆ ಕಾರ್ತಿಕನ ಶವವನ್ನು ಗೋಣಿಚೀಲದಲ್ಲಿ ತುಂಬಿ ಕಲ್ಲು…

Read More

ಅಶ್ಲೀಲ ಕಮೆಂಟ್ ಕೇಸು, ನ್ಯಾಯಾಲಯಕ್ಕೆ ಬಂದ ನಟಿ ರಮ್ಯಾ: ವಿಡಿಯೋ

ನಟಿ ರಮ್ಯಾ (Ramya) ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಸಂದೇಶದವರ ವಿರುದ್ಧ ನಟಿ ರಮ್ಯಾ ಕಾನೂನು ಸಮರ ಮುಂದುವರೆದಿದೆ. ಈಗಾಗಲೇ 11 ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಆಗಿದೆ. ಸೈಬರ್ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿರುವ ಹಿನ್ನೆಲೆಯಲ್ಲಿ ರಮ್ಯಾ ಅವರು ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಇಂದು (ಮಾರ್ಚ್ 10) ನ್ಯಾಯಾಲಯದಲ್ಲಿ ಸಾಕ್ಷ್ಯ ವಿಚಾರಣೆಗೆ ಹಾಜರಾದ ರಮ್ಯಾ (Ramya) ಅವರು ಫಿರ್ಯಾದಿ ಹೇಳಿಕೆ ದಾಖಲಿಸಿದ್ದಾರೆ. ಮುಚ್ಚಿದ ಕೋಣೆಯಲ್ಲಿ ಈ ವಿಚಾರಣೆ ನಡೆದಿದೆ….

Read More

ಮಲಯಾಳಂ ನಿರ್ದೇಶಕನ ಕಡೆ ವಾಲಿದ ಪ್ರಭಾಸ್, ಹೊಂಬಾಳೆಯದ್ದೇ ಪ್ಲ್ಯಾನ್

ಪ್ರಭಾಸ್ (Prabhas), ಭಾರತದ ಟಾಪ್ ಪ್ಯಾನ್ ಇಂಡಿಯಾ ನಟ. ಆದರೆ ಇದೇ ಅವರಿಗೆ ಒಂದು ರೀತಿ ಶಾಪವೂ ಆದಂತಿದೆ. ಪ್ರಭಾಸ್​ ಸ್ವತಃ ರೊಮ್ಯಾಂಟಿಕ್, ಭಾವುಕ, ಸ್ಲೋ ಸಿನಿಮಾಗಳನ್ನು ಇಷ್ಟಪಡುವ ನಟ. ಆದರೆ ಸ್ಟಾರ್ ಆಗಿರುವ ಕಾರಣ ಅಭಿಮಾನಿಗಳಿಗೆ ಬೇಕಾದ ಮಾಸ್ ಮಸಾಲ ಪ್ಯಾಕೇಜ್ ಸಿನಿಮಾಗಳಲ್ಲಿ ಅವರು ನಟಿಸಲೇ ಬೇಕು. ಫೈಟ್ಸ್, ಡೈಲಾಗ್, ಹಾಡುಗಳು, ರೊಮ್ಯಾನ್ಸ್ ಇಲ್ಲದ ಪ್ರಭಾಸ್ ಸಿನಿಮಾಗಳನ್ನು ಚೆನ್ನಾಗಿದ್ದರೂ ಪ್ರೇಕ್ಷಕರು ಒಪ್ಪುವ ಸ್ಥಿತಿಯಲ್ಲಿಲ್ಲ. ‘ರಾಧೆ-ಶ್ಯಾಮ್’ ಇದಕ್ಕೆ ಉದಾಹರಣೆ. ಆದರೆ ಇದೀಗ ಪ್ರಭಾಸ್ ಮತ್ತೊಮ್ಮೆ ಧೈರ್ಯ ಮಾಡಿದ್ದು,…

Read More

ಮದುವೆ ಮಂಟಪದಲ್ಲೂ ಭಾರತದ ಟಿ20 ಕ್ರಿಕೆಟ್ ಗೆಲುವಿನ ಸಂಭ್ರಮ

ಉತ್ತರಕಾಶಿ, ಮಾರ್ಚ್ 10: ಉತ್ತರಕಾಶಿಯ ಮಂಡಿಯಾಸರಿ ಗ್ರಾಮದಲ್ಲಿ ನಡೆದ ಮದುವೆಯು ತನ್ನ ವಿಶೇಷತೆಗಳಿಂದ ಗಮನಸೆಳೆಯಿತು. ಮದುವೆಗೆ (Wedding) ಬಂದಿದ್ದ ಅತಿಥಿಗಳು ಮಂಟಪದಲ್ಲೇ ನ್ಯೂಜಿಲೆಂಡ್ ವಿರುದ್ಧ ಭಾರತದ T20 ಫೈನಲ್ ವಿಜಯವನ್ನು ಆಚರಿಸಿದರು. ಈ ಸಮಾರಂಭವು ಸಂತೋಷ, ದೇಶಭಕ್ತಿ ಮತ್ತು ಸಾಮಾಜಿಕ ಬದಲಾವಣೆಯನ್ನು ಪ್ರತಿಬಿಂಬಿಸಿತು. ಮದುವೆಗೆ ಬಂದಿದ್ದ ಅತಿಥಿಗಳು, ಕುಟುಂಬಸ್ಥರು ಮದುವೆಯನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ ಕ್ರಿಕೆಟ್ ಪಂದ್ಯವನ್ನೂ ಎಂಜಾಯ್ ಮಾಡಿದರು. ಭಾನುವಾರ ನಡೆದ ಅಂಕಿತ್ ರಾವತ್ ಅವರ ವಿವಾಹವು ಕೇವಲ ಎರಡು ಕುಟುಂಬಗಳ ನಡುವಿನ ಸಂಭ್ರಮಕ್ಕಿಂತ ಹೆಚ್ಚಾಗಿತ್ತು. ಇದು…

Read More

ಮಗುವಿನ ಮುಖ ನೋಡುವ ಮೊದಲೇ ಕಣ್ಮುಚ್ಚಿದ ಮಹಿಳೆ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು?

ಚಿತ್ರದುರ್ಗ, ಮಾರ್ಚ್​ 10: ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆಯೋರ್ವರು ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಹೆರಿಗೆ ವೇಳೆ ವೈದ್ಯರು ಮತ್ತು ಸಿಬ್ಬಂದಿ ನಿರ್ಲಕ್ಷದಿಂದಾಗಿಯೇ  ಸಾವಾಗಿರೋದಾಗಿ ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ. ಶಿಲ್ಪಾ(28) ಮೃತ ದುರ್ದೈವಿಯಾಗಿದ್ದು, ಮಗುವಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಐಸಿಯುಗೆ ದಾಖಲಿಸುವುದಾಗಿ ಹೇಳಿ ಶಿಲ್ಪಾರ ಮೃತದೇಹವನ್ನು ಶವಾಗಾರಕ್ಕೆ ಶಿಫ್ಟ್​​ ಮಾಡಲಾಗಿದೆ. ಮಗುವಿನ ಆರೋಗ್ಯದ ಮಾಹಿತಿ ಕೂಡ ತಮಗೆ ನೀಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಶಿಲ್ಪಾರನ್ನು ನಿನ್ನೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಡರಾತ್ರಿ ಹೆಣ್ಣು ಮಗುವಿಗೆ…

Read More