Category Archives: Blog

Your blog category

ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

ತುಪ್ಪದ ಟ್ಯಾಂಕರ್ ಪಲ್ಟಿ, ತಿರುಪತಿ ಲಡ್ಡು ತಯಾರಿಕೆಗೆ ಅಡಚಣೆಯಾಗುತ್ತಾ? ಆಡಳಿತ ಹೇಳಿದ್ದೇನು?

ತಿರುಮಲ, ಮಾರ್ಚ್​ 10: ಕಡಪ ಜಿಲ್ಲೆಯಲ್ಲಿ ತಿರುಮಲ ತಿರುಪತಿ(Tirupati) ದೇವಸ್ಥಾನಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿಯಾಗಿತ್ತು. ಇದರಿಂದಾಗಿ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಲಡ್ಡು ತಯಾರಿಕೆಗೆ ಅಡಣೆಯುಂಟಾಗಿದೆ ಎನ್ನುವ ಸುದ್ದಿ ಹರಡಿತ್ತು. ಇದೀಗ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ಸುಳ್ಳು ಸುದ್ದಿಯನ್ನು ನಂಬಬೇಡಿ, ಶ್ರೀವಾರಿ ಲಡ್ಡು ಪ್ರಸಾದ ತಯಾರಿಸಲು ಹಸುವಿನ ತುಪ್ಪದ ಕೊರತೆ ಇಲ್ಲ ಎಂದು ಹೇಳಿದೆ.

ಟ್ಯಾಂಕರ್ ದೇವಾಲಯಕ್ಕೆ ಮೀಸಲಾದ ತುಪ್ಪವನ್ನು ಸಾಗಿಸುತ್ತಿತ್ತು ಮತ್ತು ಅದರ ಸೋರಿಕೆಯಿಂದಾಗಿ ಪ್ರಸಿದ್ಧ ಪ್ರಸಾದ ತಯಾರಿಕೆಯ ಮೇಲೆ ಪರಿಣಾಮ ಬೀರಿದೆ ಎಂದು ಹೇಳುವ ಪೋಸ್ಟ್‌ಗಳ ನಂತರ ಈ ಸ್ಪಷ್ಟೀಕರಣ ಬಂದಿದೆ. ಲಡ್ಡು ತಯಾರಿಕೆ ಮತ್ತು ವಿತರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಸಲು ಸಾಕಷ್ಟು ಹಸುವಿನ ತುಪ್ಪದ ದಾಸ್ತಾನು ಲಭ್ಯವಿದೆ ಎಂದು ಹೇಳಿದೆ.

ಶ್ರೀವಾರಿ ಲಡ್ಡು ಪ್ರಸಾದವನ್ನು ತಯಾರಿಸಲು ಅಗತ್ಯವಿರುವ ತುಪ್ಪವನ್ನು ಮೂರು ಹಂತದ ಖರೀದಿ ವ್ಯವಸ್ಥೆಯ ಮೂಲಕ ಸುರಕ್ಷಿತಗೊಳಿಸಲಾಗುತ್ತದೆ, ಇದರ ಅಡಿಯಲ್ಲಿ ಮೂರು ಪ್ರತ್ಯೇಕ ಸಂಸ್ಥೆಗಳಿಂದ ಸರಬರಾಜುಗಳನ್ನು ಪಡೆಯಲಾಗುತ್ತದೆ ಎಂದು ಟಿಟಿಡಿ ತಿಳಿಸಿದೆ.

ಮತ್ತಷ್ಟು ಓದಿ: ತಿರುಪತಿಗೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ, ತುಂಬಿಸಿಕೊಳ್ಳಲು ಮುಗಿಬಿದ್ದ ಜನ

ಅನಿರೀಕ್ಷಿತ ಅಡಚಣೆಯು ಒಬ್ಬ ಪೂರೈಕೆದಾರರ ಮೇಲೆ ಪರಿಣಾಮ ಬೀರಿದರೂ ಪೂರೈಕೆ ಸರಪಳಿ ಸ್ಥಿರವಾಗಿರುವುದನ್ನು ಈ ವ್ಯವಸ್ಥೆಯು ಖಚಿತಪಡಿಸುತ್ತದೆ ಎಂದು ಟ್ರಸ್ಟ್ ಹೇಳಿದೆ. ಜನರು ಟಿನ್, ಬಕೆಟ್, ಬಾಟಲಿ ಮತ್ತು ಡ್ರಮ್‌ಗಳನ್ನು ಬಳಸಿ ತುಂಬಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.ಸರಿಸುಮಾರು 21,000 ಲೀಟರ್ ತುಪ್ಪದಲ್ಲಿ ಕೇವಲ 500 ಲೀಟರ್ ಮಾತ್ರ ಉಳಿದಿತ್ತು.

ಪೊಲೀಸರು ಬರುವ ಮೊದಲೇ ಹೆಚ್ಚಿನ ಪ್ರಮಾಣದ ತುಪ್ಪವನ್ನು ತೆಗೆದುಕೊಂಡು ಹೋಗಲಾಗಿತ್ತು.ಕಡಪ ಜಿಲ್ಲೆಯ ಜಮ್ಮಲಮಡುಗು ಕ್ಷೇತ್ರದ ಕೊಂಡಾಪುರಂ ಮಂಡಲದ ಚಿತ್ರಾವತಿ ಸೇತುವೆಯ ಬಳಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಹೋಗುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ತೆಲುಗು ರಾಜ್ಯಗಳಲ್ಲಿ ಪವನ್ ಕಲ್ಯಾಣ್ ಚಿತ್ರಕ್ಕೆ ಹೊಡೆತ ಕೊಟ್ಟ ‘ಧುರಂಧರ್ 2’

‘ಟಾಕ್ಸಿಕ್’ vs ‘ಧುರಂಧರ್ 2’ ಎಂಬ ಟಾಕ್ ಜೋರಾಗಿತ್ತು. ಆದರೆ, ಯಶ್ ಅವರು ತಮ್ಮ ಚಿತ್ರವನ್ನು ಮುಂದಕ್ಕೆ ಹಾಕಿಕೊಳ್ಳುವ ಮೂಲಕ ಕ್ಲ್ಯಾಶ್ ತಪ್ಪಿಸಿದರು. ಹೀಗಾಗಿ, ‘ಧುರಂಧರ್ 2’ ಸೋಲೋ ರಿಲೀಸ್ ಕಾಣಲಿದೆ ಎನ್ನುವಾಗಲೇ ಪವನ್ ಕಲ್ಯಾಣ್ ಅವರ ‘ಉಸ್ತಾದ ಭಗತ್ ಸಿಂಗ್’ ಸಿನಿಮಾ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ತೆಲುಗು ಭಾಗದಲ್ಲೇ ‘ಧುರಂಧರ್ 2’ ಸಿನಿಮಾ ಹೊಡೆತ ಕೊಡೋ ಸಾಧ್ಯತೆ ಇದೆ ಎಂದು ವರದಿ ಆಗಿದೆ.

‘ಧುರಂಧರ್ 2’ ಚಿತ್ರದ ದೊಡ್ಡ ಬಲ ಎಂದರೆ, ‘ಧುರಂಧರ್’ ಚಿತ್ರಕ್ಕೆ ಸಿಕ್ಕ ಪ್​ರತಿಕ್ರಿಯೆ ಮೊದಲ ಭಾಗ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿತ್ತು. ಆದರೆ, ಸೀಕ್ವೆಲ್ ಹಿಂದಿ ಜೊತೆ ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಇದು ‘ಉಸ್ತಾದ್ ಭಗತ್ ಸಿಂಗ್​​’ ಚಿತ್ರಕ್ಕೆ ಸಾಕಷ್ಟು ಹೊಡೆತ ಕೊಡೋ ಸಾಧ್ಯತೆ ಇದೆ. ಈ ಸಿನಿಮಾ ರಿಮೇಕ್. ಅಲ್ಲದೆ, ಹೆಚ್ಚು ಹೈಪ್ ಇಲ್ಲ. ಇದು ಚಿತ್ರಕ್ಕೆ ಹಿನ್ನಡೆ ಆಗುವ ಸಾಧ್ಯತೆ ಇದೆ.

‘ಧುರಂಧರ್ 2’ ತೆಲುಗು ರಾಜ್ಯಗಳ ಅಡ್ವಾನ್ಸ್ ಬುಕಿಂಗ್​​ನಲ್ಲಿ ಮುಂದಿದೆ. ಸದ್ಯ ಪೇಯ್ಡ್ ಶೋಗಳನ್ನು ಮಾರ್ಚ್ 18ಕ್ಕೆ ಹಲವು ಶೋಗಳನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ ಬಹುತೇಕವು ಫಿಲ್ಲಿಂಗ್ ಫಾಸ್ಟ್ ಹಂತದಲ್ಲಿ ಇದೆ. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಆ ರೀತಿ ಅಲ್ಲ. ಇದು ತಮಳಿನ ದಳಪತಿ ವಿಜಯ್ ಅವರ ‘ತೇರಿ’ ಚಿತ್ರದ ರಿಮೇಕ್.

ಇದನ್ನೂ ಓದಿ: ‘ಧುರಂಧರ್ 2’ ಟಿಕೆಟ್ ಬೆಲೆ, ಯಾವ ನಗರದಲ್ಲಿ ಹೆಚ್ಚು? ಎಲ್ಲಿ ಕಡಿಮೆ?

‘ಉಸ್ತಾದ್ ಭಗತ್ ಸಿಂಗ್’ ರಿಮೇಕ್ ಮತ್ತು ಈ ಸಿನಿಮಾ ಪೂರ್ಣಗೊಳ್ಳಲು ಸಾಕಷ್ಟು ಸಮಯ ಹಿಡಿದಿದೆ. ಈ ಕಾರಣದಿಂದ ಚಿತ್ರಕ್ಕೆ ತೊಂದರೆ ಆಗುತ್ತಿದೆ. ಅಲ್ಲದೆ, ಈ ಮೊದಲು ರಿಲೀಸ್ ಆದ ಪವನ್ ಕಲ್ಯಾಣ್ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಗಮನ ಸೆಳೆಯಲು ವಿಫಲವಾಗಿವೆ. ಈ ಕಾರಣದಿಂದಲೂ ಚಿತ್ರಕ್ಕೆ ಹೆಚ್ಚಿನ ಹೈಪ್ ಸಿಗುತ್ತಿಲ್ಲ. ಆದರೆ, ‘ಧುರಂಧರ್ 2’ ಹಾಗಲ್ಲ. ದಕ್ಷಿಣದಲ್ಲೂ ಈ ಸಿನಿಮಾ ಪಾರುಪತ್ಯ ಸಾಧಿಸಿದೆ. ‘ಧುರಂಧರ್ 2’ ಚಿತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರಕ್ಕೆ, ರಣವೀರ್ ಸಿಂಗ್ ನಾಯಕ. ಆದಿತ್ಯ ಧಾರ್ ಅವರ ನಿರ್ದೇಶನ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹೊಳಪು ಕಳೆದುಕೊಂಡ ಸೂರ್ಯ? ಕೈಕೊಟ್ಟ ಮತ್ತೊಬ್ಬ ಸ್ಟಾರ್ ನಿರ್ದೇಶಕ

ತಮಿಳಿನ ಸ್ಟಾರ್ ನಟರುಗಳಲ್ಲಿ ಸೂರ್ಯ (Suriya) ಸಹ ಒಬ್ಬರು. ದೊಡ್ಡ ಸಂಖ್ಯೆಯ ಅಭಿಮಾನಿಗಳು ಅವರಿಗಿದ್ದಾರೆ. ಆದರೆ ತಮಿಳಿನಿಂದ ಮೊದಲಿನಿಂದಲೂ ನಟನೆ, ಒಳ್ಳೆಯ ಕತೆಗಳ ಆಯ್ಕೆ ಮಾಡಿಕೊಳ್ಳುವ ನಟರಿಗಿಂತಲೂ ಮಾಸ್ ನಟರನ್ನು ಬೆಳೆಸುವುದೇ ಹೆಚ್ಚು. ಸ್ವತಃ ಕಮಲ್ ಹಾಸನ್ ಸಹ ಹಲವು ಸೋಲುಗಳನ್ನು ತಮಿಳಿನಲ್ಲಿ ಕಂಡಿದ್ದಾರೆ. ಇದೀಗ ಸೂರ್ಯ ಸಹ ಇದೇ ಹಾದಿಯಲ್ಲಿದ್ದಾರೆ. ಸೂರ್ಯ ಅವರಿಗೆ ಸತತ ಹಿನ್ನಡೆಗಳು ಎದುರಾಗುತ್ತಿವೆ. ಒಟ್ಟು ಮೂರು ಮಂದಿ ಸ್ಟಾರ್ ನಿರ್ದೇಶಕರು ಸೂರ್ಯ ಜೊತೆ ಕೆಲಸ ಮಾಡುವುದಾಗಿ ಒಪ್ಪಿಕೊಂಡು ಈಗ ಹಿಂದೆ ಸರಿದಿದ್ದಾರೆ.

ಚಾಲ್ತಿಯಲ್ಲಿರುವ ನಿರ್ದೇಶಕರುಗಳಲ್ಲಿ ಒಬ್ಬರಾದ ಲೋಕೇಶ್ ಕನಗರಾಜ್ ಅವರು ಸೂರ್ಯ ಕೈಬಿಟ್ಟಿದ್ದಾಗಿದೆ. ಸೂರ್ಯ ಜೊತೆಗೆ ‘ವಡಕೈ’ ಹೆಸರಿನ ಸೂಪರ್ ಹೀರೋ ಸಿನಿಮಾವನ್ನು ಮಾಡುವುದಾಗಿ ಲೋಕೇಶ್ ಹೇಳಿದ್ದರು. ಆದರೆ ಅದೇ ಕತೆಯನ್ನು ಈಗ ಬಾಲಿವುಡ್ ಹೀರೋ ಆಮಿರ್ ಖಾನ್ ಜೊತೆಗೆ ಮಾಡುತ್ತಿದ್ದಾರೆ ಲೋಕೇಶ್ ಕನಗರಾಜ್. ಸ್ವತಃ ಸೂರ್ಯ ಅವರು ಈ ಬೆಳವಣಿಗೆ ಬಗ್ಗೆ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.

ಅದಾದ ಬಳಿಕ ಭಾರತದ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರು ಎನಿಸಿಕೊಳ್ಳುವ ವೆಟ್ರಿಮಾರನ್ ಸಹ ಇದೀಗ ಸೂರ್ಯಗೆ ಕೈಕೊಟ್ಟಂತಿದ್ದಾರೆ. ಸೂರ್ಯ ಜೊತೆಗೆ ‘ವಡಿವಾಸಲ್’ ಹೆಸರಿನ ಸಿನಿಮಾವನ್ನು ವೆಟ್ರಿಮಾರನ್ ಘೋಷಿಸಿದ್ದರು. ಆ ಸಿನಿಮಾ ಇದೇ ವರ್ಷ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಈಗ ಆಗಿರುವ ಬೆಳವಣಿಗೆ ನೋಡಿದರೆ ಆ ಸಿನಿಮಾ ನಿಂತೇ ಹೋಯ್ತು ಎನಿಸುತ್ತಿದೆ. ಏಕೆಂದರೆ ವೆಟ್ರಿಮಾರನ್ ಬೇರೆ ಸ್ಟಾರ್ ನಟರುಗಳೊಟ್ಟಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಸಲ್ಮಾನ್ ಖಾನ್ ಚಿತ್ರಕ್ಕೆ ಸಮಂತಾ ಎಂಟ್ರಿ? ರಾಜ್ ಮತ್ತು ಡಿಕೆ ಸಿನಿಮಾಗೆ ಹೆಚ್ಚಿದ ಹೈಪ್

ವೆಟ್ರಿಮಾರನ್ ಅವರು ಪ್ರಸ್ತುತ ‘ಅರಸನ್’ ಹೆಸರಿನ ಸಿನಿಮಾ ನಿರ್ದೇಶಿಸುತ್ತಿದ್ದು, ಸಿನಿಮಾನಲ್ಲಿ ಸಿಂಭು ನಾಯಕ. ಆ ಸಿನಿಮಾದ ಬಳಿಕ ‘ವಡಿವಾಸಲ್’ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು, ‘ಅರಸನ್’ ಸಿನಿಮಾದ ಬಳಿಕ ‘ವಡ ಚೆನ್ನೈ 2’ ಮತ್ತು ಕಮಲ್ ಹಾಸನ್ ಅವರೊಟ್ಟಿಗೆ ಹೊಸ ಸಿನಿಮಾನಲ್ಲಿ ವೆಟ್ರಿಮಾರನ್ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

ಸೂರ್ಯ ಅವರೊಟ್ಟಿಗೆ ನಿರ್ದೇಶಕ ಬಾಲ ಸಹ ಹೊಸ ಸಿನಿಮಾ ಘೋಷಿಸಿದ್ದರು. ಆದರೆ ಆ ಸಿನಿಮಾವನ್ನು ಸಹ ನಿಲ್ಲಿಸಬೇಕಾಯ್ತು. ಇನ್ನು ‘ಕಂಗುವ’ ಸಿನಿಮಾದ ಎರಡನೇ ಭಾಗ ಬರಲಿದೆ ಎನ್ನಲಾಗಿತ್ತು. ‘ಕಂಗುವ’ ಫ್ಲಾಪ್ ಆದ ಕಾರಣ ಅದೂ ಸಹ ನಿಂತು ಹೋಗಿದೆ. ಪ್ರಸ್ತುತ ಸೂರ್ಯ ಅವರು ‘ಕರುಪ್ಪು’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ‘ವಿಶ್ವನಾಥ್ ಆಂಡ್ ಸನ್ಸ್’ ಸಿನಿಮಾನಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಚಿನ್ನದ ಸರ ಕಸಿದು ಪರಾರಿಯಾಗಲು ಯತ್ನಿಸಿದ ಕಳ್ಳ; ಬೈಕ್ ಸ್ಟಾರ್ಟ್ ಆಗದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದ ಖದೀಮ!

ವೆಣ್ಣಪ್ಪುವಾ (ಶ್ರೀಲಂಕಾ): ವೆಣ್ಣಪ್ಪುವಾದ ತಂಬರವಿಲ ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು, ಆಕೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದೆ.

ಯುವತಿಯ ಹಿಂದಿನಿಂದಲೇ ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿ ಆಕೆಯ ಸರವನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಯುವತಿಯ ಬೈಕ್ ನಿಯಂತ್ರಣ ತಪ್ಪಿ ಬಿದ್ದಿದೆ. ಬಿದ್ದ ಅವಕಾಶವನ್ನು ಬಳಸಿಕೊಂಡ ಆರೋಪಿಯು ಯುವತಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಈ ವೇಳೆ ಆತನ ಬೈಕ್ ಸ್ಟಾರ್ಟ್ ಕಾರಣ, ಸ್ಥಳದಲ್ಲಿದ್ದವರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ತರಗತಿಯಲ್ಲೇ ಮಲಗಿ ವಿದ್ಯಾರ್ಥಿನಿಯಿಂದ ಮಸಾಜ್ ಮಾಡಿಸಿಕೊಂಡ ಶಿಕ್ಷಕಿ; ವಿಡಿಯೋ ವೈರಲ್

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಹ್ವಾನ ಇಲ್ಲದೇ ಮದುವೆ, ರಿಸೆಪ್ಷನ್ ಊಟಕ್ಕೆ ಹೋಗಿ ಸಿಕ್ಕಿಬಿದ್ದರೆ ಶಿಕ್ಷೆ ಏನು ಗೊತ್ತೇ? ಕೇಳಿದ್ರೆ ಶಾಕ್ ಆಗ್ತೀರಿ!

ಮದುವೆ (Weeding), ಗೃಹಪ್ರವೇಶ ಸೇರಿದಂತೆ ವಿವಿಧ ಶುಭ ಸಮಾರಂಭಗಳಿಗೆ ಸಾಮಾನ್ಯವಾಗಿ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ಆಹ್ವಾನಿಸುವುದು ಸಂಪ್ರದಾಯ. ಆದರೆ ಕೆಲವರು ಆಹ್ವಾನವಿಲ್ಲದೆ ಇಂತಹ ಕಾರ್ಯಕ್ರಮಗಳಿಗೆ ಹೋಗಿ ಊಟ ಮಾಡುವುದು ಕೂಡ ಇರುತ್ತದೆ. ವಿಶೇಷವಾಗಿ ನಗರಗಳಲ್ಲಿ ಇಂಥ ‘(Gatecrashing) ಗೇಟ್ ಕ್ರ್ಯಾಶಿಂಗ್ (ಆಹ್ವಾನವಿಲ್ಲದೆ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು)’ ನಡೆಯತ್ತದೆ. ‘ಅತಿಥಿ ದೇವೋ ಭವ (ಅತಿಥಿಗಳನ್ನೇ ದೇವರು ಎಂದು ಪರಿಗಣಿಸುವ)’ ಎಂಬ ದೇಶ ನಮ್ಮದಾಗಿರುವ ಕಾರಣ ಇದು ದೊಡ್ಡದಲ್ಲ ಬಿಡಿ. ಸಮಾರಂಭಕ್ಕೆ ಬಂದವರಿಗೆ ಉಪಚಾರ ಮಾಡಿ ಕಳುಹಿಸಲಾಗುತ್ತದೆ.

ಆದರೆ, ಈಗ ಕಾಲ ಬದಲಾಗುತ್ತಿದೆ. ಈ ದುಬಾರಿ ದುನಿಯಾದಲ್ಲಿ ಕರೆಯದೇ ಬಂದವರನ್ನು ಸ್ವಾಗತಿಸಿ ಊಟ ಹಾಕಲೇಬೇಕೆಂದೇನಿಲ್ಲವಲ್ಲ! ಅದು ಹಾಗಿರಲಿ. ಆಹ್ವಾನವಿಲ್ಲದೆ ಮದುವೆ ಅಥವಾ ಇತರ ಖಾಸಗಿ ಸಮಾರಂಭಗಳಿಗೆ ಹೋಗಿ ಊಟ ಮಾಡುವುದು ಕಾನೂನುಬಾಹಿರ ಆಗಬಹುದು ಎಂಬ ಕಲ್ಪನೆಯೂ ಅನೇಕರಿಗೆ ಇರಲಿಕ್ಕಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲ ಕಾರ್ಯಕ್ರಮಗಳ ಆಯೋಜಕರು ಆಹ್ವಾನಿಸದೇ ಊಟಕ್ಕೆ ಬರುವವರನ್ನು ತಡೆಯಲು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ‘ತೆಲುಗು’ ಬೋರ್ಡ್ ಒಂದು ಇದೀಗ ವೈರಲ್ ಆಗುತ್ತಿದೆ.

ಸಮಾರಂಭವೊಂದರ ಹಾಲ್​ನ ಹೊರಭಾಗದಲ್ಲಿ ಹಾಕಲಾಗಿರುವ ಬೋರ್ಡ್ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡುತ್ತಿದೆ.

ವೈರಲ್ ಆಗುತ್ತಿರುವ ತೆಲುಗು ಬೋರ್ಡ್ ಇಲ್ಲಿ ನೋಡಿ

ಬೋರ್ಡ್​​ನಲ್ಲಿ ಬರೆದಿರುವುದು ಏನು?

ಸಮಾರಂಭಕ್ಕೆ ಸಂಬಂಧಿಸದವರು ಒಳಗೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅಂಥವರಿಗೆ ಸೆಕ್ಷನ್ 441 ರ ಅಡಿಯಲ್ಲಿ 3 ತಿಂಗಳು ಜೈಲು ಶಿಕ್ಷೆ ಮತ್ತು 5,000 ರೂ. ದಂಡ ವಿಧಿಸಲಾಗುತ್ತದೆ ಎಂದು ಎಂದು ಆ ಬೋರ್ಡ್‌ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಲಾಗಿದೆ.

ಸೆಕ್ಷನ್ 441 ಎಂದರೇನು?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 441 (ಈಗ ಭಾರತೀಯ ನ್ಯಾಯ ಸಂಹಿತಾ ಅಥವಾ BNS ಎಂದು ಬದಲಾಗಿದ್ದು, ಸೆಕ್ಷನ್ 329 ಆಗಿದೆ) ಕ್ರಿಮಿನಲ್ ಅತಿಕ್ರಮಣಕ್ಕೆ ಸಂಬಂಧಿಸಿದೆ. ಅಂದರೆ, ಯಾರಾದರೂ ವ್ಯಕ್ತಿಯ ಖಾಸಗಿ ಆಸ್ತಿ ಅಥವಾ ಅವರು ಕಾರ್ಯಕ್ರಮ ನಡೆಸುತ್ತಿರುವ ಸ್ಥಳಕ್ಕೆ ಅವರ ಅನುಮತಿಯಿಲ್ಲದೆ ಪ್ರವೇಶಿಸಿದರೆ ಅದು ಅಪರಾಧವಾಗುತ್ತದೆ.

ಈ ನಿಯಮದ ಅಡಿಯಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಮೂರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡೂ ವಿಧಿಸಬಹುದಾಗಿದೆ ಎಂದು ಕಾನೂನು ಹೇಳುತ್ತದೆ. ಕೆಲ ಸಂದರ್ಭಗಳಲ್ಲಿ ಆಯೋಜಕರು ದಂಡ ವಿಧಿಸುವ ಬಗ್ಗೆ ಕೂಡಾ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ

ಹೀಗಾಗಿ, ಆಹ್ವಾನಿಸದ ಮದುವೆ ಅಥವಾ ಸಮಾರಂಭಗಳಿಗೆ ಹೋಗಿ ಊಟ ಮಾಡುವ ಮುನ್ನ ಅದರ ಕಾನೂನು ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ ಎಂಬ ಚರ್ಚೆ ಈಗ ಶುರುವಾಗಿದೆ. ಒಟ್ಟಿನಲ್ಲಿ, ಮೋಜಿಗಾಗಿ ಅಥವಾ ಉಚಿತ ಊಟಕ್ಕಾಗಿ ‘ಗೇಟ್ ಕ್ರ್ಯಾಶಿಂಗ್’ ಮಾಡುವವರು ಇಂತಹ ಕಾನೂನು ನಿಯಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಉತ್ತಮ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೈಸೂರು ರೇಷ್ಮೆ ಸೀರೆ ಇನ್ನು ಆನ್​ಲೈನಲ್ಲಿ ಸಿಗೋದು ಅನುಮಾನ! ಕಾರಣ ಇಲ್ಲಿದೆ

ಬೆಂಗಳೂರು, ಮಾರ್ಚ್ 10: ಸರ್ಕಾರಿ ಸ್ವಾಮ್ಯದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (KSIC) ತಯಾರಿಸುವ ಪ್ರಸಿದ್ಧ ಮೈಸೂರು ಸಿಲ್ಕ್ ಸೀರೆಗಳಿಗೆ (Mysore Silk Sarees) ಇತ್ತೀಚಿನ ದಿನಗಳಲ್ಲಿ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಇದರಿಂದಾಗಿ ಪೂರೈಕೆಯೇ ಸವಾಲಾಗಿ ಪರಿಣಮಿಸಿದ್ದು, ಸೀರೆಗಳ ಆನ್​ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಗಮ ಚಿಂತನೆ ನಡೆಸಿದೆ. ಕೆಎಸ್‌ಐಸಿ ಸೀರೆ ಮಳಿಗೆಗಳ ಹೊರಗೆ ಜನರು ಉದ್ದನೆಯ ಸಾಲಿನಲ್ಲಿ ನಿಂತಿದ್ದ ದೃಶ್ಯಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಈ ಕುರಿತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದು, ಕೆಎಸ್‌ಐಸಿ ಪ್ರತಿದಿನ ಸರಾಸರಿ 350 ರಿಂದ 400 ಸೀರೆಗಳನ್ನು ತಯಾರಿಸುತ್ತಿದೆ ಎಂದು ತಿಳಿಸಿದ್ದಾರೆ. ಆನ್‌ಲೈನ್ ಮಾರಾಟ ಆರಂಭವಾದ ನಂತರ ದೇಶದ ವಿವಿಧ ಭಾಗಗಳ ಗ್ರಾಹಕರು ಸುಲಭವಾಗಿ ಮೈಸೂರು ಸಿಲ್ಕ್ ಸೀರೆಗಳನ್ನು ಖರೀದಿಸುವುದು ಸಾಧ್ಯವಾಯಿತು. ಆದರೆ ಈಗ ರಾಜ್ಯದ ಜನರು, ವಿಶೇಷವಾಗಿ ಸ್ಥಳೀಯ ಗ್ರಾಹಕರು, ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡುತ್ತಿರುವುದರಿಂದ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸುವುದು ಸವಾಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಕಾರಣದಿಂದಾಗಿ, ಕೆಲವು ಸಮಯದವರೆಗೆ ಆನ್‌ಲೈನ್ ಆರ್ಡರ್‌ಗಳನ್ನು ಸ್ಥಗಿತಗೊಳಿಸುವುದು ಅಥವಾ ಮಿತಿಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ನೇರವಾಗಿ ಮಳಿಗೆಗಳಿಗೆ ಬರುವ ಗ್ರಾಹಕರಿಗೆ ಆದ್ಯತೆ ನೀಡುವುದಕ್ಕಾಗಿ ಈ ಕ್ರಮದ ಬಗ್ಗೆ ಕೆಎಸ್‌ಐಸಿ ಚಿಂತನೆ ನಡೆಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ರೇಷ್ಮೆ ಸೀರೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

ಕಳೆದ ಮೂರು ಹಣಕಾಸು ವರ್ಷಗಳಲ್ಲಿ ಕೆಎಸ್‌ಐಸಿ ಉತ್ತಮ ವ್ಯವಹಾರ ಸಾಧನೆ ಮಾಡಿದೆ. ಈ ಅವಧಿಯಲ್ಲಿ 3.1 ಲಕ್ಷಕ್ಕೂ ಹೆಚ್ಚು ಸೀರೆಗಳನ್ನು ತಯಾರಿಸಿದ್ದು, ಅವುಗಳಲ್ಲಿ ಸುಮಾರು 3.09 ಲಕ್ಷ ಸೀರೆಗಳನ್ನು ಮಾರಾಟ ಮಾಡಲಾಗಿದೆ.

ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ

ರೇಷ್ಮೆ ಸೀರೆ ಉತ್ಪಾದನೆ ಹೆಚ್ಚಿಸಲು ಕೆಎಸ್‌ಐಸಿ ಈಗಾಗಲೇ 30 ಹೊಸ ಎಲೆಕ್ಟ್ರಾನಿಕ್ ಜಾಕ್ವಾರ್ಡ್ ಲೂಮ್‌ಗಳನ್ನು ಸೇರಿಸಿದ್ದು, ಇದರಿಂದ ಸೀರೆಗಳ ಉತ್ಪಾದನೆ ಸ್ವಲ್ಪ ಮಟ್ಟಿಗೆ ಹೆಚ್ಚುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್! ಜಿಐ ಟ್ಯಾಗ್ ಇರುವ ಸೀರೆ ಖರೀದಿಗೆ ಸೂರ್ಯೋದಯಕ್ಕೂ ಮುನ್ನ ಮಹಿಳೆಯರ ಸರದಿ ಸಾಲು!

ಮೈಸೂರು ರೇಷ್ಮೆ ಸೀರೆಗಳನ್ನು ಖರೀದಿಸಲು ಗ್ರಾಹಕರು ಮುಂಜಾನೆಯೇ ಕೆಎಸ್‌ಐಸಿ ಅಂಗಡಿಗಳ ಮುಂದೆ ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋಗಳೂ ವೈರಲ್ ಆಗಿದ್ದವು.

ಒಟ್ಟಾರೆಯಾಗಿ, ಮೈಸೂರು ಸಿಲ್ಕ್ ಸೀರೆಗಳಿಗೆ ಹೆಚ್ಚುತ್ತಿರುವ ಬೇಡಿಕೆಯ ನಡುವೆಯೇ ಪೂರೈಕೆಯನ್ನು ಸಮತೋಲನಗೊಳಿಸಲು ಕೆಎಸ್‌ಐಸಿ ಹೊಸ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರಿಗೆ ಜಿಬಿಎಯಿಂದ ಭರ್ಜರಿ ಶಾಕ್​​: ಹೆಚ್ಚುವರಿ ತೆರಿಗೆಗೆ ಬಿಜೆಪಿಗರು ಕೆಂಡ; ವಿಧಾನ ಸಭೆಯಲ್ಲೂ ಬಿಸಿ ಬಿಸಿ ಚರ್ಚೆ

ಬೆಂಗಳೂರು, ಮಾರ್ಚ್​ 10: ತೆರಿಗೆ ವಸೂಲಿ ವಿಚಾರದಲ್ಲಿನ ಗ್ರೇಟರ್​​ ಬೆಂಗಳೂರು ಪ್ರಾಧಿಕಾರದ ನಡೆಯೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಡ್ರೋನ್ ಸರ್ವೆ ಮೂಲಕ ಹೆಚ್ಚುವರಿ ತೆರಿಗೆ ವಸೂಲಿಗೆ ಜಿಬಿಎ ಮುಂದಾಗಿದ್ದು, ಕಟ್ಟಡದ ಬಾಲ್ಕನಿ, ಕಿಟಿಕಿ ಮೇಲಿನ ಸಜ್ಜೆ, ವಾಟರ್ ಟ್ಯಾಂಕ್ ಸ್ಟ್ಯಾಂಡ್, ಕಾರ್ ಪಾರ್ಕಿಂಗ್, ಪೋರ್ಟಿಕೋ, ಮನೆ ಮುಂದಿನ ತಾತ್ಕಾಲಿಕ ಗಜಿಬೋ ಸೇರಿ ಮನೆಯ ಪೂರಕ ಕಟ್ಟಡಕ್ಕೂ ತೆರಿಗೆ ವಿಧಿಸಲಾಗಿದೆ. ಇದುವರೆಗೂ ಅಂದಾಜು 46 ಸಾವಿರ ಮನೆ ಮಾಲಿಕರಿಂದ ಟ್ಯಾಕ್ಸ್​​ ಸಂಗ್ರಹಕ್ಕೆ ಜಿಬಿಎ ಮುಂದಾಗಿದ್ದು, 5 ಲಕ್ಷದಿಂದ 18 ಲಕ್ಷದವರೆಗೂ ಹೆಚ್ಚವರಿ ತೆರಿಗೆ ವಸೂಲಿಗೆ ಮೆಸೇಜ್ ಮೂಲಕ ನೋಟಿಸ್ ನೀಡಿದೆ.

ಮೆಸೇಜ್ ಓಪನ್ ಮಾಡಿದ್ರೆ ನೋಟಿಸ್ ಸ್ವೀಕರಿಸಲಾಗಿದೆ ಎಂದೇ ಭಾವಿಸಿ ಕ್ರಮಕ್ಕೆ ಮುಂದಾಗಲಿರುವ ಜಿಬಿಎ ಹೆಚ್ಚುವರಿ ತೆರಿಗೆ ಪ್ರಶ್ನೆ ಮಾಡಿದವರ ಮನೆಯನ್ನೇ ಹರಾಜಿಗೆ ಮುಂದಾಗಿದೆ. 17 ಮನೆಗಳ ಹರಾಜು ಪ್ರಕ್ರಿಯೆಗೆ ಅಂತಿಮ ನೋಟಿಸ್ ನೀಡಲಾಗಿದ್ದು, ಐದು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 46 ಸಾವಿರ ಜನರಿಗೆ ನೋಟಿಸ್ ನೀಡಲಾಗಿರುವ ಜಿಬಿಎ ಕ್ರಮವನ್ನು ಜಯನಗರ ಶಾಸಕ ಸಿ.ಕೆ. ರಾಮಮೂರ್ತಿ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಜಿಬಿಎಯ 5 ಪಾಲಿಕೆಗಳ ಚುನಾವಣೆ; ವಾರ್ಡ್ ವಾರು ಅಂತಿಮ ಮೀಸಲಾತಿ ಪ್ರಕಟ

ಜಿವಿಎ ನಡೆ ಬಗ್ಗೆ ವಿಧಾನಸಭೆಯಲ್ಲೂ ಚರ್ಚೆ

ಡ್ರೋನ್​​ ಸರ್ವೆ ನಡೆಸಿ ಬೆಂಗಳೂರಿನಲ್ಲಿ ಮನೆಗಳಿಗೆ ಬಾಕಿ ಹೆಚ್ಚುವರಿ ತೆರಿಗೆ, ದಂಡ ವಿಧಿಸಲಾಗುತ್ತಿದೆ. ಒಂದು ಮನೆಗೆ 7-8 ಲಕ್ಷ, 30 ಲಕ್ಷದವರೆಗೆ ತೆರಿಗೆ, ದಂಡ ಹಾಕ್ತಿದ್ದಾರೆ ಎಂದು ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಪ್ರಸ್ತಾಪಿಸಿದ್ದಾರೆ. ರಾಮಮೂರ್ತಿ ಹೇಳಿಕೆಗೆ ಧ್ವನಿಗೂಡಿಸಿದ ಶಾಸಕರ ಸುರೇಶ್ ಕುಮಾರ್,​​ ಇದು ಆಸ್ತಿ ತೆರಿಗೆ ಭಯೋತ್ಪಾದನೆ. ಇದನ್ನ ಹಿಂಪಡೆಯಿರಿ ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಶಾಸಕರ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತರಿಸಿದ್ದು, ನಾವು ಡ್ರೋನ್​ ಸರ್ವೇ ನಡೆಸಿ  ಯಾವುದೇ ನೋಟಿಸ್ ಕೊಡ್ತಿಲ್ಲ. ಆದ್ರೆ ಡ್ರೋನ್​ ಮೂಲಕ ಮನೆಗಳ ಸರ್ವೆ ಕಾರ್ಯ ನಡೆಯುತ್ತಿದೆ. ಮೊದಲು ಸೆಲ್ಫ್ ಅಸೆಸ್‌ಮೆಂಟ್ ಸ್ಕೀಂ ತಂದವನು ನಾನು. ಒನ್ ಟೈಮ್ ಸೆಟ್ಲ್​ಮೆಂಟ್ ಸ್ಕೀಂ ಕೂಡಾ ಕೊಡುತ್ತಿದ್ದೇವೆ. ಈ ಬಗ್ಗೆ ಯಾರಿಗಾದ್ರೂ ಸಮಸ್ಯೆ ಇದ್ರೆ ಅರ್ಜಿ ಕೊಡಲಿ. ಸಮಸ್ಯೆ ಇದ್ದವರಿಗೆ ಸರಿಪಡಿಸ್ತೇವೆಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Source link

Video: ಬಲೆ ಭಾರವಾಗ್ತಿದೆ ದೊಡ್ಡ ಮೀನಿರಬಹುದು ಎಂದು ಎಳೆದವರಿಗೆ ಸಿಕ್ಕಿದ್ದು ಹೆಬ್ಬಾವು

ತೆಲಂಗಾಣ, ಮಾರ್ಚ್​ 10: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದೆ. ತೇಕುಲಪಲ್ಲಿ ಮಂಡಲದ ರೋಲ್ಲಪಾಡು ಗ್ರಾಮದ ಕೊಳದಲ್ಲಿ ಮೀನುಗಾರಿಕೆಗೆ ಇಟ್ಟಿದ್ದ ಬಲೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಸಿಲುಕಿ ಸಾವನ್ನಪ್ಪಿದೆ.ಪ್ರತಿದಿನದಂತೆ, ಸ್ಥಳೀಯ ಮೀನುಗಾರರು ಮೀನು ಹಿಡಿಯಲು ಕೊಳದಲ್ಲಿ ಬಲೆ ಬೀಸಿದ್ದರು. ಮರುದಿನ ಬೆಳಿಗ್ಗೆ, ಕೊಳಕ್ಕೆ ಹೋಗಿ ಬಲೆ ಎಳೆಯುತ್ತಿದ್ದಾಗ, ಒಂದು ದೊಡ್ಡ ಭಾರವಾದ ವಸ್ತು ಸಿಕ್ಕಿಹಾಕಿಕೊಂಡಿದೆ ಎಂದು ಭಾವಿಸಿದ್ದರು. ಇದು ಮೀನುಗಾರರನ್ನು ಆಶ್ಚರ್ಯಗೊಳಿಸಿತು. ಏನಾಯಿತು ಎಂದು ನೋಡಲು ಅವರು ಬಲೆಯನ್ನು ದಡಕ್ಕೆ ಎಳೆದಾಗ, ಸುಮಾರು 12 ಅಡಿ ಉದ್ದ ಮತ್ತು ಸುಮಾರು 50 ಕೆಜಿ ತೂಕದ ಹೆಬ್ಬಾವು ಅದರಲ್ಲಿ ಸಿಲುಕಿಕೊಂಡಿರುವುದು ಕಂಡುಬಂದಿದೆ.

ಆದರೆ, ಹೆಬ್ಬಾವು ಈಗಾಗಲೇ ಸತ್ತಿದ್ದರಿಂದ, ಮೀನುಗಾರರು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ತಲುಪಿದ ಅರಣ್ಯ ಅಧಿಕಾರಿಗಳು ಅದರ ಸಾವಿನ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಹೆಬ್ಬಾವು ಕೊಳದಲ್ಲಿ ಮೀನು ತಿನ್ನುವಾಗ ಬಲೆಗೆ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IDBI Bank Recruitment: ಪದವೀಧರರಿಗೆ ಸುವರ್ಣಾವಕಾಶ; IDBI ಬ್ಯಾಂಕ್‌ನಲ್ಲಿ ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ

ಬೆಂಗಳೂರು: ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ (IDBI) ದೇಶಾದ್ಯಂತ ಇರುವ ತನ್ನ ವಿವಿಧ ಶಾಖೆಗಳಲ್ಲಿ ಖಾಲಿ ಇರುವ 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘O’) ಮತ್ತು ಅಸಿಸ್ಟೆಂಟ್ ಮ್ಯಾನೇಜರ್ (ಗ್ರೇಡ್ ‘A’) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೈಕಿ 1100 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹಾಗೂ 200 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ದೇಶದ ಪ್ರಮುಖ ನಗರಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ 75 ಹುದ್ದೆಗಳು ಲಭ್ಯವಿವೆ.  ಆಸಕ್ತ ಅಭ್ಯರ್ಥಿಗಳು ಮಾರ್ಚ್ 19 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.

ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ ಮತ್ತು ದಾಖಲೆಗಳ ಪರಿಶೀಲನೆಯನ್ನು ಒಳಗೊಂಡಿರುತ್ತದೆ. ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಕನಿಷ್ಠ ಶೇ. 60 ಅಂಕಗಳೊಂದಿಗೆ (SC/ST/ದಿವ್ಯಾಂಗರಿಗೆ 55%) ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು. ಇನ್ನು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಪದವಿಯೊಂದಿಗೆ ಬ್ಯಾಂಕಿಂಗ್ ವಲಯದಲ್ಲಿ ಕನಿಷ್ಠ ಎರಡು ವರ್ಷಗಳ ಕೆಲಸದ ಅನುಭವ ಕಡ್ಡಾಯವಾಗಿದೆ.

ಇದನ್ನೂ ಓದಿ: ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರಿಗೆ ಸುವರ್ಣಾವಕಾಶ: 10th ಪಾಸಾಗಿದ್ರೆ ಸಾಕು!

ಮಾರ್ಚ್ 1, 2026 ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳು 20 ರಿಂದ 25 ವರ್ಷ ವಯಸ್ಸಿನವರಾಗಿರಬೇಕು (ಮೀಸಲಾತಿ ಅನ್ವಯ ವಯೋಮಿತಿ ಸಡಿಲಿಕೆ ಇದೆ). ಆಯ್ಕೆಯಾದವರಿಗೆ ವಾರ್ಷಿಕ ರೂ. 6.14 ಲಕ್ಷದಿಂದ ರೂ. 6.50 ಲಕ್ಷದವರೆಗೆ ವೇತನ ಸಿಗಲಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 1050 ಮತ್ತು ಮೀಸಲು ಅಭ್ಯರ್ಥಿಗಳಿಗೆ ರೂ. 250 ಅರ್ಜಿ ಶುಲ್ಕ ನಿಗದಿಪಡಿಸಲಾಗಿದ್ದು, ಏಪ್ರಿಲ್ 12 ರಂದು ಆನ್‌ಲೈನ್ ಪರೀಕ್ಷೆಗಳು ನಡೆಯಲಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಕೆಲಸ ಮಾಡಲು ಅವಕಾಶವಿದ್ದು, ಉದ್ಯೋಗಾಕಾಂಕ್ಷಿಗಳು ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.

ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲಿಂಕ್​ ಕ್ಲಿಕ್​ ಮಾಡಿ: (Advertisement-Grade-O-2-year-exp-March072026)

ಅಧಿಕೃತ ವೆಬ್​ಸೈಟ್​​ ಲಿಂಕ್​ ಇಲ್ಲಿದೆ: idbi-bank-careers-current-openings.aspx

 

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಂ ಕಿಸಾನ್ ಯೋಜನೆ; ಮಾ. 13ಕ್ಕೆ ಸಿಗುತ್ತಾ 22ನೇ ಕಂತಿನ ಹಣ? ಇಲ್ಲಿದೆ ಈ ಸ್ಕೀಮ್​ನ ವಿವರ

ನವದೆಹಲಿ, ಮಾರ್ಚ್ 10: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ (PM Kisan scheme) 9-10 ಕೋಟಿ ರೈತರು ಸರ್ಕಾರದಿಂದ ವರ್ಷಕ್ಕೆ 6,000 ರೂ ಸಹಾಯಧನ ಪಡೆಯುತ್ತಿದ್ದಾರೆ. ವರ್ಷಕ್ಕೆ ಮೂರು ಕಂತುಗಳಲ್ಲಿ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಾಕಲಾಗುತ್ತದೆ. 2018-19ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 21 ಕಂತುಗಳನ್ನು ರೈತರಿಗೆ ನೀಡಲಾಗಿದೆ. ಈಗ 22ನೇ ಕಂತಿನ ನಿರೀಕ್ಷೆಯಲ್ಲಿ ರೈತರಿದ್ದಾರೆ.

ಕೆಲ ವರದಿಗಳ ಪ್ರಕಾರ ಹೋಳಿ ಹಬ್ಬಕ್ಕೆ (ಮಾ. 4) ಮುನ್ನವೇ ರೈತರ ಖಾತೆಗಳಿಗೆ ಒಂದು ಕಂತಿನ ಹಣವಾದ 2,000 ರೂ ಹಾಕುವ ನಿರೀಕ್ಷೆ ಇತ್ತು. ಆದರೆ, ಬಿಡುಗಡೆಯಾಗಿಲ್ಲ. ಕೆಲ ವರದಿಗಳು ಯುಗಾದಿ ಹಬ್ಬದ ಒಳಗೆ ಹಣ ಬಿಡುಗಡೆಯಾಗಬಹುದು ಎನ್ನುತ್ತಿವೆ. ಮತ್ತೂ ಕೆಲ ವರದಿಗಳು ಈ ವಾರವೇ ಕಂತಿನ ಹಣ ಸಿಗಬಹುದು ಎನ್ನುತ್ತಿವೆ.

ಮಾರ್ಚ್ 13, ಶುಕ್ರವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಮ್ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆಗಲೇ ಅವರು ಪಿಎಂ ಕಿಸಾನ್ 22ನೇ ಕಂತಿನ ಬಿಡುಗಡೆ ಪ್ರಕಟಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ: ವಾಹನ ಸವಾರರಿಗೆ ಗುಡ್​​ ನ್ಯೂಸ್​​ ನೀಡಿದ ಕೇಂದ್ರ: ಪೆಟ್ರೋಲ್, ಡೀಸೆಲ್ ದರ ಏರಿಕೆ ಬಗ್ಗೆ ಆತಂಕ ಬೇಡ

ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ವರ್ಷಕ್ಕೆ 6,000 ರೂ ಅನ್ನು ಸರ್ಕಾರ ಸಹಾಯಧನವಾಗಿ ನೀಡುತ್ತದೆ. ವರ್ಷದಲ್ಲಿ ಮೂರು ಕಂತುಗಳಲ್ಲಿ ಈ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ಹಾಕಲಾಗುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಸಿಗುತ್ತದೆ.

ಈ ಯೋಜನೆಗೆ ನೊಂದಾಯಿಸುವವರು ರೈತರಾಗಿರಬೇಕು, ಕೃಷಿ ಜಮೀನು ಹೊಂದಿರಬೇಕು. ಗ್ರಾಮದ ಸಮೀಪ ಇರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಜಮೀನಿನ ಪಹಣಿ ದಾಖಲೆ, ಆಧಾರ್, ಬ್ಯಾಂಕ್ ಅಕೌಂಟ್ ದಾಖಲೆಗಳನ್ನು ಕೊಟ್ಟು ಯೋಜನೆಗೆ ನೊಂದಾಯಿಸಬಹುದು. ಆನ್​ಲೈನ್​ನಲ್ಲಿ ಪಿಎಂ ಕಿಸಾನ್ ವೆಬ್​ಸೈಟ್​ಗೆ ಹೋಗಿ ಅಲ್ಲಿಯೂ ನೊಂದಾಯಿಸಬಹುದು. ಬ್ಯಾಂಕ್ ಖಾತೆಯು ಆಧಾರ್​ಗೆ ಜೋಡಿತವಾಗಿರಬೇಕು.

ಈ ರೈತರು ಯೋಜನೆಗೆ ಅರ್ಹರಿರುವುದಿಲ್ಲ…

ಕೃಷಿ ಭೂಮಿ ಹೊಂದಿದ್ದರೂ ಕೆಲ ರೈತರು ಈ ಯೋಜನೆಗೆ ಅರ್ಹರಿರುವುದಿಲ್ಲ. ಆದಾಯ ತೆರಿಗೆ ಪಾವತಿಸುತ್ತಿರುವವರು, ಅಥವಾ ಕುಟುಂಬದ ಬೇರೊಬ್ಬ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿದ್ದಾಗ್ಯೂ ಯೋಜನೆಗೆ ಅರ್ಹರಾಗಿರುವುದಿಲ್ಲ.

ಇದನ್ನೂ ಓದಿ: ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್​​​ನಲ್ಲಿ ಮಹತ್ವದ ಬದಲಾವಣೆ

ಹಾಗೆಯೇ, ಕುಟುಂಬದಲ್ಲಿ ಯಾರಾದರೂ ಸದಸ್ಯರು ಶಾಸಕ, ಸಂಸದ, ಜಿಪಂ ಸದಸ್ಯ ಇತ್ಯಾದಿ ಆಗಿರಕೂಡದು. ವೈದ್ಯ, ವಕೀಲ, ಎಂಜಿನಿಯರ್ ಇತ್ಯಾದಿ ವೃತ್ತಿಪರರಾಗಿರಕೂಡದು. ಸರ್ಕಾರಿ ನೌಕರರು ಆಗಿರಕೂಡದು. ತಿಂಗಳಿಗೆ 10,000 ರೂಗಿಂತ ಹೆಚ್ಚು ಸರ್ಕಾರಿ ಪಿಂಚಣಿ ಪಡೆಯುವವರು ಇರಕೂಡದು.

ಗಮನಿಸಬೇಕಾದ ಇನ್ನೂ ಕೆಲ ಸಂಗತಿಗಳೆಂದರೆ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯ ಫಲ ಪಡೆಯುವಂತಿಲ್ಲ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರವೇ ಇದು ಸಿಗುವುದು. ಮತ್ತೊಂದು ಸಂಗತಿ ಎಂದರೆ, 2019ರ ನಂತರ ಅಪ್ಪ ಬದುಕಿರುವಾಗಲೇ ಅವರ ಜಮೀನನ್ನು ತಮ್ಮ ಹೆಸರಿಗೆ ಮಗ ಬರೆಸಿಕೊಂಡಿದ್ದರೆ ಆಗಲೂ ಪಿಎಂ ಕಿಸಾನ್ ಯೋಜನೆಗೆ ಅರ್ಹರಾಗಿರುವುದಿಲ್ಲ.

ಹೆಚ್ಚಿನ ವಿವರಗಳಿಗೆ ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ: pmkisan.gov.in/

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link