Headlines

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ ದಿನಗಳಲ್ಲಿ ಮಹತ್ವದ ಬದಲಾವಣೆ

ನವದೆಹಲಿ ಮಾ.9: ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮಗಳಿಗೆ ಮುಂದಾಗಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು (Hoarding) ಮಾಡುವುದನ್ನು ತಡೆಯಲು, ಎರಡು ಬುಕ್ಕಿಂಗ್‌ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದವರು, ಈಗ ಯುದ್ಧದ ಭೀತಿಯಿಂದ ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿರುವುದು…

Read More

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

2026 ರ ಟಿ20 ವಿಶ್ವಕಪ್ (ICC T20 World Cup 2026) ಮುಗಿದ ಒಂದು ದಿನದ ನಂತರ ಎಂದಿನಂತೆ ಐಸಿಸಿ ಟೂರ್ನಮೆಂಟ್‌ನ ಅತ್ಯುತ್ತಮ ತಂಡವನ್ನು (Team of the Tournament) ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ 4 ಆಟಗಾರರು ಸ್ಥಾನ ಪಡೆದಿದ್ದಾರೆ. ಆದಾಗ್ಯೂ ಫೈನಲ್​ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡದ ಯಾವುದೇ ಆಟಗಾರನಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಫಿನ್ ಅಲೆನ್…

Read More

ಬಿಪಿ ನಿಯಂತ್ರಣದಲ್ಲಿಡಲು ಈ ಅಭ್ಯಾಸಗಳನ್ನು ತಪ್ಪದೆ ಅಳವಡಿಸಿಕೊಳ್ಳಿ! ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (ಬಿಪಿ) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಯುವಕರಲ್ಲೂ ಇದು ಸಾಮಾನ್ಯವಾಗಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಹೆಚ್ಚು ಉಪ್ಪಿನ ಸೇವನೆ ಹಾಗೂ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಬಿಪಿ (Blood Pressure) ಹೆಚ್ಚಾಗಲು ಪ್ರಮುಖ ಕಾರಣಗಳೆಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಬಿಪಿ ದೀರ್ಘಕಾಲದ ವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಹೃದಯ, ಮೂತ್ರಪಿಂಡ ಮತ್ತು ಮೆದುಳಿಗೆ ಸಂಬಂಧಿಸಿದ…

Read More

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?

ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ…

Read More

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾ (Team India) ಹಲವು ದಾಖಲೆಗಳೊಂದಿಗೆ ಚುಟುಕು ಸಮರಕ್ಕೆ ವಿದಾಯ ಹೇಳಿದೆ. ಕಳೆದೊಂದು ತಿಂಗಳಿಂದ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಇದೀಗ ವಿಶ್ರಾಂತಿ ಜಾರಿದೆ. ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯವನ್ನು ಮುಗಿಸಿ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ ಆಟಗಾರರು ಇದೀಗ ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಖುಷಿಯನ್ನು ಇನ್ನು ಕೆಲವು ದಿನ ಆಚರಿಸಲಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರ ಕಥೆಯಾದರೆ,…

Read More

ರಾಯಚೂರಿನಲ್ಲಿ ಘೋರ ದುರಂತ: ದಂಪತಿಯನ್ನು ಬಲಿಪಡೆದ ಕನಸಿನ ಮನೆ!

ರಾಯಚೂರು, (ಮಾರ್ಚ್ 09): ಕನಸಿನ ಮನೆಯಲ್ಲೇ ದಂಪತಿ (Couple) ದುರಂತ ಸಾವು ಕಂಡಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಹೌದು…ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ಗಂಡ ಹೆಂಡತಿ ದುರಂತ ಸಾವುಕಂಡಿದ್ದಾರೆ. ದ್ಯಾವಪ್ಪ ಸುಗೂರು(35), ಶಿವಮ್ಮ(33) ಮೃತ ದಂಪತಿ. ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದೆ….

Read More

Chanakya Niti: ಬೇಗನೆ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಬಹು ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರಿಗೂ ಸಹ ವಯಸ್ಸಾಗುತ್ತದೆ ನಿಜ, ಆದ್ರೆ ಕೆಲವೊಬ್ಬರೂ ಮಾತ್ರ ತಮ್ಮ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದ ವ್ಯಕ್ತಿಗಳಂತೆ ಕಾಣುತ್ತಾರೆ. ಹೌದು 25, 30 ವರ್ಷ ಆಗಿದ್ರೂ ಅವರು ಮಾತ್ರ 40 ರ ಹರೆಯದವರಂತೆ ಕಾಣಿಸುತ್ತಾರೆ. ಈ ಅಕಾಲಿಕ ವಯಸ್ಸಾಗುವಿಕೆಗೆ (premature aging) ವ್ಯಕ್ತಿಯ ಕೆಲವೊಂದು ಕೆಟ್ಟ ಅಭ್ಯಾಸಗಳೇ ಮುಖ್ಯ ಕಾರಣ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ. ಈ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಖಂಡಿತವಾಗಿಯೂ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯಬಹುದು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ಅಭ್ಯಾಸಗಳಿಂದ ವ್ಯಕ್ತಿ ಬಹು ಬೇಗನೆ…

Read More

ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಶೂಟಿಂಗ್ ಸೆಟ್‌ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ (Sai Pallavi) ಅವರ ಫೋಟೋಗಳು ಸೋರಿಕೆಯಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಈ ಫೋಟೋಗಳು ಅಸಲಿಯಲ್ಲ, ಬದಲಾಗಿ ಇವು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ಚಿತ್ರಗಳು ಎಂಬುದು ಈಗ ದೃಢಪಟ್ಟಿದೆ. ಈ ಮೊದಲು ಶೂಟಿಂಗ್ ಸೆಟ್​​ನಿಂದ ನಿಜವಾಗಿಯೂ ಒಂದು ಫೋಟೋ ಲೀಕ್ ಆಗಿತ್ತು. ಆದರೆ ಈ ಬಾರಿ ವೈರಲ್ ಆಗಿರುವ ಫೋಟೋ ನಿಜವಲ್ಲ ಎಂದು…

Read More

ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಯಾವುದಾದರೂ ಒಂದು ಸೆನ್ಸೇಷನ್ ಘಟನೆ ನಡೆಯಿತು ಎಂದರೆ ಅದನ್ನು ಆಧರಿಸಿ ಸಿನಿಮಾ ಮಾಡಲು ಎಲ್ಲರೂ ಮುಂದಾಗುತ್ತಾರೆ. ಸಿನಿಮಾ ಘೋಷಣೆ ಕೂಡ ಮಾಡುತ್ತಾರೆ. ಆದರೆ, ನೈಜ ಘಟನೆ ಆಧಾರಿತ ಸಿನಿಮಾ ಆಗಿರುವುದರಿಂದ ಅದಕ್ಕೆ ಎದುರಾಗುವ ಅಡೆತಡೆಗಳು ಹಲವು. ಈಗ ರೇಣುಕಾಸ್ವಾಮಿ ಕೊಲೆ ಕೇಸ್​​​ನ ಆಧರಿಸಿ ಸಿನಿಮಾ ಸಿದ್ಧವಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ರೀತಿ ಸಿದ್ಧವಾದ ಚಿತ್ರಕ್ಕೆ ‘ಬಾಸ್’ (Boss Movie) ಎಂಬ ಟೈಟಲ್ ಇಟ್ಟಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಲಾಗಿದೆ’…

Read More

ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ಟೀಂ ಇಂಡಿಯಾದ ಲವರ್ ಬಾಯ್ ಎಂದರೆ ತಪ್ಪಾಗಲಾರದು. ಮಗು ಮಾಡಿಕೊಂಡ ಬಳಿಕ ನತಾಶಾ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕೆಲವೇ ದಿನಗಳಲ್ಲಿ ಹೊಸ ಪ್ರೇಯಸಿಯನ್ನು ಹುಡುಕಿಕೊಂಡಿದ್ದ ಪಾಂಡ್ಯ, ಅವರೊಂದಿಗೆ ಹೊಸಜೀವನ ನಡೆಸಲು ಶುರು ಮಾಡಿದ್ದರು. ಆದಾಗ್ಯೂ ಪಾಂಡ್ಯ, ಹೊಸ ಪ್ರೇಯಸಿ ಮಹಿಕಾ ಶರ್ಮಾ ಅವರ ಬಗ್ಗೆ ಇದುವರೆಗೆ ಏನನ್ನು ಹೇಳಿರಲಿಲ್ಲ. ಆದರೆ ವಿಶ್ವಕಪ್ ಫೈನಲ್‌ನಲ್ಲಿ ಪಾಂಡ್ಯ, ಅಧಿಕೃತವಾಗಿ ಮಹಿಕಾ ನನ್ನ…

Read More