Category Archives: Blog

Your blog category

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ ದಿನಗಳಲ್ಲಿ ಮಹತ್ವದ ಬದಲಾವಣೆ

ಎಲ್‌ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಹೊಸ ಮಾರ್ಗಸೂಚಿ: ಸಿಲಿಂಡರ್ ಬುಕಿಂಗ್ ದಿನಗಳಲ್ಲಿ ಮಹತ್ವದ ಬದಲಾವಣೆ

ನವದೆಹಲಿ ಮಾ.9: ದೇಶದಲ್ಲಿ ಎಲ್‌ಪಿಜಿ (LPG) ಸಿಲಿಂಡರ್‌ಗಳ ಕೃತಕ ಅಭಾವ ಮತ್ತು ಕಾಳಸಂತೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಈಗ ಕಠಿಣ ಕ್ರಮಗಳಿಗೆ ಮುಂದಾಗಿದೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನು (Hoarding) ಮಾಡುವುದನ್ನು ತಡೆಯಲು, ಎರಡು ಬುಕ್ಕಿಂಗ್‌ಗಳ ನಡುವಿನ ಅವಧಿಯನ್ನು 21 ದಿನಗಳಿಂದ 25 ದಿನಗಳಿಗೆ ಹೆಚ್ಚಿಸಲಾಗಿದೆ.

ಈ ಹಿಂದೆ 55 ದಿನಗಳಿಗೊಮ್ಮೆ ಸಿಲಿಂಡರ್ ಬುಕ್ ಮಾಡುತ್ತಿದ್ದವರು, ಈಗ ಯುದ್ಧದ ಭೀತಿಯಿಂದ ಕೇವಲ 15 ದಿನಗಳಲ್ಲೇ ಬುಕ್ಕಿಂಗ್ ಮಾಡುತ್ತಿರುವುದು ಕಂಡುಬಂದಿದೆ. ಇದನ್ನು ನಿಯಂತ್ರಿಸಲು ಹೊಸ ನಿಯಮ ಜಾರಿಗೆ ತರಲಾಗಿದೆ. ವಾಣಿಜ್ಯ ಬಳಕೆಯ (Commercial) ಸಿಲಿಂಡರ್‌ಗಳಿಗಿಂತ ಮನೆ ಬಳಕೆಯ (Domestic) ಗ್ರಾಹಕರಿಗೆ ಮೊದಲ ಆದ್ಯತೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ. “ಮನೆ ಬಳಕೆಯ ಗ್ರಾಹಕರ ಹಿತವೇ ನಮಗೆ ಮುಖ್ಯ” ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಹೆಣ್ಮಕ್ಕಳಿಗೆ ಸರ್ಕಾರದಿಂದ ಬಂಪರ್ ಪ್ಯಾಕೇಜ್: ಜನನದಿಂದ ಪದವಿಯವರೆಗೆ ಸಿಗಲಿದೆ 25 ಸಾವಿರ ರೂ.

ಇಲ್ಲಿದೆ ಪೋಸ್ಟ್​​:

ದೇಶೀಯ ರಿಫೈನರಿಗಳಿಗೆ ಎಲ್‌ಪಿಜಿ ಉತ್ಪಾದನೆಯನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸುವಂತೆ ಸರ್ಕಾರ ಆದೇಶಿಸಿದೆ. ಗ್ಯಾಸ್ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಲು ಹೊಸ ದೇಶಗಳೊಂದಿಗೆ ಸರ್ಕಾರ ಮಾತುಕತೆ ನಡೆಸುತ್ತಿದೆ. ಅಲ್ಜೀರಿಯಾ, ಆಸ್ಟ್ರೇಲಿಯಾ, ಕೆನಡಾ ಮತ್ತು ನಾರ್ವೆ ದೇಶಗಳು ಭಾರತಕ್ಕೆ ಎಲ್‌ಪಿಜಿ ಮಾರಾಟ ಮಾಡಲು ಮುಂದೆ ಬಂದಿವೆ ಎಂದು ಮೂಲಗಳು ತಿಳಿಸಿವೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಟೂರ್ನಮೆಂಟ್ ತಂಡ ಪ್ರಕಟಿಸಿದ ಐಸಿಸಿ

2026 ರ ಟಿ20 ವಿಶ್ವಕಪ್ (ICC T20 World Cup 2026) ಮುಗಿದ ಒಂದು ದಿನದ ನಂತರ ಎಂದಿನಂತೆ ಐಸಿಸಿ ಟೂರ್ನಮೆಂಟ್‌ನ ಅತ್ಯುತ್ತಮ ತಂಡವನ್ನು (Team of the Tournament) ಪ್ರಕಟಿಸಿದೆ. ಈ ತಂಡದಲ್ಲಿ ಭಾರತದ 4 ಆಟಗಾರರು ಸ್ಥಾನ ಪಡೆದಿದ್ದಾರೆ. ಆದಾಗ್ಯೂ ಫೈನಲ್​ನಲ್ಲಿ ಟೀಂ ಇಂಡಿಯಾ ವಿರುದ್ಧ ಸೋತ ರನ್ನರ್ ಅಪ್ ನ್ಯೂಜಿಲೆಂಡ್‌ ತಂಡದ ಯಾವುದೇ ಆಟಗಾರನಿಗೆ ಈ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ. ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ವೇಗದ ಶತಕ ಬಾರಿಸಿದ ಫಿನ್ ಅಲೆನ್ ಕೂಡ ಈ ತಂಡಕ್ಕೆ ಆಯ್ಕೆಯಾಗಿಲ್ಲ. ಆಶ್ಚರ್ಯಕರ ಸಂಗತಿಯೆಂದರೆ ಜಿಂಬಾಬ್ವೆಯ ಯುವ ಓಪನರ್ ಬ್ರಿಯಾನ್ ಬೆನೆಟ್ ಕೂಡ ತಂಡದಲ್ಲಿ ಸ್ಥಾನ ಪಡೆದಿಲ್ಲ. ಹಾಗಿದ್ದರೆ, ಈಗ ಈ ತಂಡದಲ್ಲಿ ಯಾವ 11 ಆಟಗಾರರು ಸ್ಥಾನ ಪಡೆದಿದ್ದಾರೆ ಎಂಬುದನ್ನು ನೋಡುವುದಾದರೆ..

ಐಸಿಸಿ ಟೂರ್ನಮೆಂಟ್ ತಂಡ ಪ್ರಕಟ

ಐಸಿಸಿ ಆಯ್ಕೆ ಮಾಡಿರುವ ಟಿ20 ವಿಶ್ವಕಪ್ ತಂಡದಲ್ಲಿ ಆರಂಭಿಕ ಆಟಗಾರರಾಗಿ ಪಾಕಿಸ್ತಾನದ ಆರಂಭಿಕ ಸಾಹಿಬ್‌ಜಾದಾ ಫರ್ಹಾನ್ ಮತ್ತು ಭಾರತದ ಆರಂಭಿಕ ಸಂಜು ಸ್ಯಾಮ್ಸನ್ ಆಯ್ಕೆಯಾಗಿದ್ದಾರೆ. ಇವರಿಬ್ಬರು ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ಮತ್ತೊಬ್ಬ ಭಾರತೀಯ ಆಟಗಾರ ಇಶಾನ್ ಕಿಶನ್ ಸ್ಥಾನ ಪಡೆದಿದ್ದರೆ, ದಕ್ಷಿಣ ಆಫ್ರಿಕಾ ತಂಡದ ನಾಯಕ ಐಡೆನ್ ಮಾರ್ಕ್ರಾಮ್​ಗೆ ನಂತರದ ಸಿಕ್ಕಿದೆ. ಇದರ ಜೊತೆಗೆ ಐಸಿಸಿಯ ಈ ತಂಡದ ನಾಯಕತ್ವವೂ ಮಾರ್ಕ್ರಾಮ್ ಪಾಲಾಗಿದೆ.

ಆಲ್​ರೌಂಡರ್​ಗಳ ಕೋಟಾದಲ್ಲಿ ಭಾರತದ ಸ್ಟಾರ್ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದರೆ, ಅವರ ಜೊತೆಗೆ ಇಂಗ್ಲೆಂಡ್ ಸ್ಪಿನ್ ಆಲ್‌ರೌಂಡರ್ ವಿಲ್ ಜಾಕ್ಸ್ ಕೂಡ ಈ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಹಾಗೆಯೇ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ಕೂಡ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಲುಂಗಿ ಎನ್‌ಗಿಡಿ, ಆದಿಲ್ ರಶೀದ್ ಮತ್ತು ಬ್ಲೆಸಿಂಗ್ ಮುಜರಬಾನಿ ಸ್ಥಾನ ಪಡೆದಿದ್ದಾರೆ. ಇವರಲ್ಲದೆ, ಅಮೆರಿಕದ ಶಾಡ್ಲಿ ವ್ಯಾನ್ ಸ್ಕೈಕ್ವಿಕ್ ಅವರನ್ನು ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.

ಐಸಿಸಿ ಟಿ20 ವಿಶ್ವಕಪ್ ತಂಡ: ಸಾಹಿಬ್ಜಾದಾ ಫರ್ಹಾನ್ (ಪಾಕಿಸ್ತಾನ), ಸಂಜು ಸ್ಯಾಮ್ಸನ್ (ಭಾರತ), ಇಶಾನ್ ಕಿಶನ್ (ಭಾರತ), ಐಡೆನ್ ಮಾರ್ಕ್ರಾಮ್ (ದಕ್ಷಿಣ ಆಫ್ರಿಕಾ), ಹಾರ್ದಿಕ್ ಪಾಂಡ್ಯ (ಭಾರತ), ವಿಲ್ ಜಾಕ್ಸ್ (ಇಂಗ್ಲೆಂಡ್), ಜೇಸನ್ ಹೋಲ್ಡರ್, ಜಸ್ಪ್ರೀತ್ ಬುಮ್ರಾ (ಭಾರತ), ಲುಂಗಿ ಎನ್ಗಿಡಿ (ದಕ್ಷಿಣ ಆಫ್ರಿಕಾ), ಆದಿಲ್ ರಶೀದ್ (ಇಂಗ್ಲೆಂಡ್) ಮತ್ತು ಬ್ಲೆಸ್ಸಿಂಗ್ ಮುಜರಬಾನಿ (ಜಿಂಬಾಬ್ವೆ).

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಪಿ ನಿಯಂತ್ರಣದಲ್ಲಿಡಲು ಈ ಅಭ್ಯಾಸಗಳನ್ನು ತಪ್ಪದೆ ಅಳವಡಿಸಿಕೊಳ್ಳಿ! ಯಾವುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಹೈ ಬ್ಲಡ್ ಪ್ರೆಶರ್ (ಬಿಪಿ) ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಹಿಂದೆ ಈ ಸಮಸ್ಯೆ ಹಿರಿಯರಲ್ಲಿ ಮಾತ್ರ ಕಂಡುಬರುತ್ತಿತ್ತು. ಆದರೆ ಈಗ ಯುವಕರಲ್ಲೂ ಇದು ಸಾಮಾನ್ಯವಾಗಿದೆ. ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು, ಒತ್ತಡ, ದೈಹಿಕ ಚಟುವಟಿಕೆಗಳ ಕೊರತೆ, ಹೆಚ್ಚು ಉಪ್ಪಿನ ಸೇವನೆ ಹಾಗೂ ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಬಿಪಿ (Blood Pressure) ಹೆಚ್ಚಾಗಲು ಪ್ರಮುಖ ಕಾರಣಗಳೆಂದು ವೈದ್ಯರು ಹೇಳುತ್ತಾರೆ. ಅದರಲ್ಲಿಯೂ ಬಿಪಿ ದೀರ್ಘಕಾಲದ ವರೆಗೆ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೆ ಹೃದಯ, ಮೂತ್ರಪಿಂಡ ಮತ್ತು ಮೆದುಳಿಗೆ ಸಂಬಂಧಿಸಿದ ಹಲವು ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಕಾರಣವಾಗಬಹುದು. ಆದ್ದರಿಂದ ಸಮಯಕ್ಕೆ ಸರಿಯಾಗಿ ಇದನ್ನು ನಿಯಂತ್ರಣದಲ್ಲಿ ಇಡುವುದು ಅತ್ಯಂತ ಮುಖ್ಯವಾಗಿದೆ. ಜೀವನಶೈಲಿಯಲ್ಲಿ ಕೆಲವು ಉತ್ತಮ ಬದಲಾವಣೆಗಳನ್ನು ಅಳವಡಿಸಿಕೊಂಡರೆ ಬಿಪಿಯನ್ನು ಸಮತೋಲನದಲ್ಲಿ ಇಡಲು ಸಹಾಯವಾಗುತ್ತದೆ.

ಬಿಪಿ ನಿಯಂತ್ರಣಕ್ಕೆ ಯಾವ ಅಭ್ಯಾಸಗಳನ್ನು ಪಾಲಿಸಬೇಕು?

ರಾಜೀವ್ ಗಾಂಧಿ ಆಸ್ಪತ್ರೆಯ ಕಾರ್ಡಿಯಾಲಜಿ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ಬಿಪಿಯನ್ನು ನಿಯಂತ್ರಣದಲ್ಲಿಡಲು ದೈನಂದಿನ ಜೀವನದಲ್ಲಿ ಕೆಲವು ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಮೊದಲು ಸಮತೋಲನಯುತ ಮತ್ತು ಪೌಷ್ಟಿಕ ಆಹಾರ ಸೇವನೆಗೆ ಆದ್ಯತೆ ನೀಡಬೇಕು. ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಕಡಿಮೆ ಮಾಡುವುದು ಮತ್ತು ತಾಜಾ ಹಣ್ಣು, ತರಕಾರಿಗಳ ಸೇವನೆ ಮಾಡುವುದು ಆರೋಗ್ಯಕರವಾಗಿದ್ದು ಇವುಗಳ ಜೊತೆಗೆ ನಿಯಮಿತ ದೈಹಿಕ ಚಟುವಟಿಕೆ ಕೂಡ ಬಿಪಿಯನ್ನು ನಿಯಂತ್ರಿಸಲು ಸಹಕಾರಿಯಾಗಿದೆ. ಪ್ರತಿದಿನ ಕನಿಷ್ಠ 30 ನಿಮಿಷಗಳಷ್ಟು ನಡೆಯುವುದು, ಲಘು ವ್ಯಾಯಾಮ ಅಥವಾ ಯೋಗಾಭ್ಯಾಸ ಮಾಡುವುದು ಆರೋಗ್ಯಕ್ಕೆ ಉಪಯುಕ್ತವಾಗುತ್ತದೆ.

ಇದನ್ನೂ ಓದಿ: ಸಣ್ಣ ವಯಸ್ಸಿನಲ್ಲಿ ಬಿಪಿ ಬರುವುದಕ್ಕೆ ನಿಮ್ಮ ಈ ಅಭ್ಯಾಸಗಳೇ ಕಾರಣ! ಇಂದೇ ಬದಲಾಯಿಸಿಕೊಳ್ಳಿ

ಇದೆಲ್ಲದರ ಜೊತೆಗೆ ಒತ್ತಡವನ್ನು ಕಡಿಮೆ ಮಾಡುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಹೆಚ್ಚಿನ ಒತ್ತಡ ಬಿಪಿ ಏರಿಕೆಗೆ ಕಾರಣವಾಗಬಹುದು. ಅಷ್ಟೇಅಲ್ಲ, ಒಳ್ಳೆಯ ನಿದ್ರೆ ಕೂಡ ಅವಶ್ಯಕ, ಏಕೆಂದರೆ ನಿದ್ರೆಯ ಕೊರತೆಯಿಂದ ದೇಹದ ಸಮತೋಲನ ಕೆಡಬಹುದು. ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮತ್ತು ದೇಹವನ್ನು ಸದಾ ಚುರುಕಾಗಿಡುವುದು ಕೂಡ ಬಿಪಿ ನಿಯಂತ್ರಣಕ್ಕೆ ಸಹಕಾರಿ. ಈ ಅಭ್ಯಾಸಗಳನ್ನು ನಿಯಮಿತವಾಗಿ ಅನುಸರಿಸಿದರೆ ಬಿಪಿಯನ್ನು ಸಮತೋಲನದಲ್ಲಿಡಲು ಸಾಧ್ಯವಾಗುತ್ತದೆ.

ಈ ಕೆಟ್ಟ ಅಭ್ಯಾಸಗಳಿಂದ ದೂರವಿರಿ

ಬಿಪಿ ನಿಯಂತ್ರಣಕ್ಕೆ ಕೆಲವು ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದೂ ಅಗತ್ಯ. ಹೆಚ್ಚು ಉಪ್ಪು ಹಾಗೂ ಪ್ರೊಸೆಸ್ಡ್ ಆಹಾರ ಸೇವನೆ ಬಿಪಿ ಹೆಚ್ಚಿಸಲು ಕಾರಣವಾಗಬಹುದು. ಆದ್ದರಿಂದ ಇವುಗಳನ್ನು ಕಡಿಮೆ ಮಾಡುವುದು ಉತ್ತಮ. ಧೂಮಪಾನ ಮತ್ತು ಮದ್ಯಪಾನ ಕೂಡ ಬ್ಲಡ್ ಪ್ರೆಶರ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ದೀರ್ಘಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದು ಹಾಗೂ ದೈಹಿಕ ಚಟುವಟಿಕೆಗಳ ಕೊರತೆಯೂ ಅಪಾಯವನ್ನು ಹೆಚ್ಚಿಸಬಹುದು. ರಾತ್ರಿ ತಡವಾಗಿ ಮಲಗುವುದು ಮತ್ತು ಸರಿಯಾಗಿ ನಿದ್ರೆ ಮಾಡದಿರುವುದು ಕೂಡ ಬಿಪಿ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಈ ರೀತಿಯ ಅಭ್ಯಾಸಗಳಿಂದ ದೂರವಿರುವುದು ಬಹಳ ಮುಖ್ಯ. ಇದರ ಜೊತೆಗೆ ಸಮತೋಲನ ಆಹಾರ ಮತ್ತು ಸರಿಯಾದ ದಿನಚರಿಯನ್ನು ಪಾಲಿಸಬೇಕಾಗುತ್ತದೆ ಯಾರಿಗಾದರೂ ಈಗಾಗಲೇ ಬಿಪಿ ಸಮಸ್ಯೆ ಇದ್ದರೆ, ವೈದ್ಯರ ಸಲಹೆಯಂತೆ ಔಷಧಿಗಳನ್ನು ಸೇವಿಸುವುದು ಅವಶ್ಯಕ. ಮಾನಸಿಕ ಶಾಂತಿ ಮತ್ತು ಸಕಾರಾತ್ಮಕ ಚಿಂತನೆಯೂ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಮೆರಿಕದ ಮುಂದಿನ ದಾಳಿ ಯಾರ ಮೇಲೆ? ವೆನಿಜುವೆಲಾ, ಕ್ಯೂಬಾ, ಇರಾನ್​ನಲ್ಲಿ ಒಂದೇ ಪ್ಯಾಟರ್ನ್; ಇದೆಯಾ ಚೀನಾ ಲಿಂಕ್?

ನವದೆಹಲಿ, ಜೂನ್ 9: ಅಮೆರಿಕ ಇರಾನ್ ಮೇಲೆ ಯಾಕೆ ಯುದ್ಧ ಮಾಡುತ್ತಿದೆ? ಇರಾನ್ ಪರಮಾಣು ಶಸ್ತ್ರಾಸ್ತ್ರ ತಯಾರಿಸುತ್ತಿದೆ ಎನ್ನುವ ಕಾರಣವೊಡ್ಡಿ ದಾಳಿ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುವ ಸಂಗತಿ. ಆದರೆ, ಇರಾನ್ ತನ್ನ ಪರಮಾಣು ಯೋಜನೆಯನ್ನು ಕೈಬಿಡುತ್ತೇನೆ ಎಂದು ಹಲವು ಬಾರಿ ವಾಗ್ದಾನ ಕೊಟ್ಟಿದೆ. ಆ ನಿಟ್ಟಿನಲ್ಲಿ ಇಂಟರ್ನ್ಯಾನಲ್ ಏಜೆನ್ಸಿಗಳಿಗೆ ಸಹಕಾರ ಕೂಡ ಕೊಟ್ಟಿದೆ. ಆದರೂ ಕೂಡ ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ಎರಗಿದೆ. ಮೇಲ್ನೋಟಕ್ಕೆ ಕಾಣುವ ಮತ್ತೊಂದು ಕಾರಣವೆಂದರೆ, ಇರಾನ್ ಅನೇಕ ಭಯೋತ್ಪಾದಕ ಸಂಘಟನೆಗಳ ಬೆಂಬಲಿಗ ಎನ್ನುವುದು. ಆದರೆ, ತೆರೆಯ ಮರೆಯಲ್ಲಿ ಇರಾನ್ ಮೇಲೆ ಅಮೆರಿಕ ಎರಗಿ ಹೋಗಲು ಬೇರೊಂದು ಕಾರಣ ಇದೆ.

ವೆನಿಜುವೆಲಾ ಮಾದರಿ ಪ್ರಯೋಗದಲ್ಲಿ ಅಮೆರಿಕ…

ಅಮೆರಿಕದ ಸೇನೆ ಇತ್ತೀಚೆಗಷ್ಟೇ ವೆನಿಜುವೆಲಾದಲ್ಲಿ ಕ್ಷಿಪ್ರವಾಗಿ ಕಾರ್ಯಾಚರಣೆ ನಡೆಸಿ ಅಧ್ಯಕ್ಷರನ್ನೇ ಬದಲಾಯಿಸಿಬಿಟ್ಟಿತು. ಜನಸಾಮಾನ್ಯರಿಗೆ ಹಾನಿಯಾಗದೆಯೇ ನಡೆದ ಆಪರೇಷನ್ ಅದು. ಅದೇ ಮಾದರಿಯಲ್ಲಿ ಕ್ಯೂಬಾ ಮತ್ತು ಇರಾನ್​ನಲ್ಲೂ ಅಮೆರಿಕ ಮಾಡಹೊರಟಿದೆ. ಇರಾನ್ ಅಧ್ಯಕ್ಷ ಆಯತೊಲ್ಲ ಖಮೇನಿ ಅವರನ್ನು ಆರಂಭದಲ್ಲೇ ಕೊಂದು ಹಾಕಿತು. ಸರ್ವೋಚ್ಚ ನಾಯಕ ಸಾವನ್ನಪ್ಪಿದರೆ ಇರಾನ್ ಶರಣಾಗಬಹುದು ಎನ್ನುವ ಅಮೆರಿಕದ ಎಣಿಕೆ ತಪ್ಪಾಗಿದ್ದು ಹೌದು. ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯಾಲಯದ ಮಾಜಿ ನಿರ್ದೇಶಕಿಯಾದ ತಾರಾ ಕರ್ತಾ ಅವರ ಪ್ರಕಾರ ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್​ನಲ್ಲಿ ಒಂದು ಕಾಮನ್ ಫ್ಯಾಕ್ಟರ್ ಇದೆ. ಅದು ಚೀನಾದ ಲಿಂಕ್.

ಇದನ್ನೂ ಓದಿ: ಕಾಣದಂತೆ ಇದ್ದ ಖರ್ಗ್ ದ್ವೀಪದ ಮೇಲೆ ಅಮೆರಿಕದ ಕಣ್ಣು; ಏನದರ ಮಹತ್ವ?

ಚೀನಾದ ಯುಆನ್ ಕರೆನ್ಸಿ ಲಿಂಕ್

ವೆನಿಜುವೆಲಾ, ಕ್ಯೂಬಾ ಮತ್ತು ಇರಾನ್ ದೇಶಗಳು ತಮ್ಮ ತೈಲ ಮತ್ತು ಸರಕುಗಳ ರಫ್ತನ್ನು ಅಮೆರಿಕದ ಡಾಲರ್ ಕರೆನ್ಸಿ ಬದಲು ಚೀನಾದ ಯುಆನ್ ಕರೆನ್ಸಿಯಲ್ಲಿ ಮಾಡುತ್ತಿದ್ದವು ಎಂದು ತಾರಾ ಕರ್ತಾ ಅವರು ಎನ್​ಡಿಟಿವಿಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ವೆನಿಜುವೆಲಾ ಮತ್ತು ಇರಾನ್ ದೇಶಗಳು ಚೀನಾಗೆ ಕಡಿಮೆ ಬೆಲೆಯಲ್ಲಿ ತೈಲ ಪೂರೈಕೆ ಮಾಡುತ್ತಿದ್ದವು. ವೆನಿಜುವೆಲಾ ಅಧ್ಯಕ್ಷ ಮಡುರೊ ಅವರಂತೂ ಡಾಲರ್ ಕರೆನ್ಸಿ ವಹಿವಾಟು ತ್ಯಜಿಸಿ ತಮ್ಮ ದೇಶವನ್ನು ಅಮೆರಿಕದಿಂದ ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಹೇಳುತ್ತಿದ್ದರು. ಅಮೆರಿಕವು ನಿಷೇಧ ಹಾಕಿದಾಗ ಚೀನಾಗೆ ತೈಲವನ್ನು ಮತ್ತಷ್ಟು ಕಡಿಮೆ ಬೆಲೆಗೆ ಮಾರುತ್ತಿತ್ತು ವೆನಿಜುವೆಲಾ.

ಇರಾನ್ ದೇಶ ಕೂಡ ಚೀನಾದೊಂದಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಯುಆನ್ ಕರೆನ್ಸಿಯಲ್ಲೇ ವಹಿವಾಟು ನಡೆಸುತ್ತದೆ. ಅಮೆರಿಕದ ನಿಷೇಧ ಕ್ರಮವನ್ನು ಬೈಪಾಸ್ ಮಾಡಲು ಇರಾನ್ ದೇಶವು ಮಲೇಷ್ಯಾ ಮೂಲಕ ಚೀನಾಗೆ ತೈಲ ಸಾಗಿಸುತ್ತದೆ. ಅಲ್ಲಿ ಯುಆನ್ ಕರೆನ್ಸಿ ಬಳಕೆ ಆಗುತ್ತದೆ. ಅಮೆರಿಕ ಕಣ್ಣಿಟ್ಟಿರುವ ಕ್ಯೂಬಾ ದೇಶ ಕೂಡ ಚೀನೀ ಕರೆನ್ಸಿಯಲ್ಲಿ ವ್ಯವಹರಿಸುತ್ತದೆ.

ಚೀನಾಗೆ ತೈಲ ದಕ್ಕದಂತೆ ಮಾಡುವುದು ಅಮೆರಿಕದ ಚಿತಾವಣಿಯಾ?

ತಾರಾ ಕರ್ತಾ ಪ್ರಕಾರ ಅಮೆರಿಕವು ತೈಲ ಸಂಪನ್ಮೂಲದ ಲಭ್ಯತೆ ಖಾತ್ರಿಪಡಿಸಿಕೊಳ್ಳುವ ಪ್ರಯತ್ನಕ್ಕಿಂತ ಹೆಚ್ಚಾಗಿ, ಚೀನಾಗೆ ತೈಲ ದಕ್ಕಬಾರದು ಎನ್ನುವ ಉದ್ದೇಶ ಇರಬಹುದು. ಇದರ ಜೊತೆಗೆ ಪ್ರಬಲ ಕಾರಣ ಯುಆನ್ ಕರೆನ್ಸಿ ಬಲಗೊಳ್ಳುತ್ತಿರುವುದು.

ಇದನ್ನೂ ಓದಿ: ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ವಿಶ್ವದಲ್ಲಿ ಸದ್ಯ ಅಮೆರಿಕದ ಡಾಲರ್ ಕರೆನ್ಸಿ ಅತಿ ಪ್ರಬಲವಾದುದು. ಡೀಫಾಲ್ಟ್ ಅಂತಾರಾಷ್ಟ್ರೀಯ ಕರೆನ್ಸಿಯಾಗಿದೆ. ಎಲ್ಲಾ ದೇಶಗಳು ಡಾಲರ್ ಖರೀದಿ ಮಾಡುವುದು ಅನಿವಾರ್ಯವಾಗಿದ್ದು, ಅದನ್ನು ಅಮೆರಿಕದ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೂ ಅನಿವಾರ್ಯವಾಗಿದೆ. ಹೀಗಾಗಿ, ಅಮೆರಿಕ ಜಗತ್ತಿನ ದೊಡ್ಡಣ್ಣನಾಗಲು ಡಾಲರ್ ಪ್ರಮುಖ ಕಾರಣ ಎನ್ನುತ್ತಾರೆ ತಜ್ಞರು. ಈಗ ಡಾಲರ್​ಗೆ ಸೆಡ್ಡು ಹೊಡೆಯುವಂತೆ ಚೀನಾದ ಯುಆನ್ ಕರೆನ್ಸಿ ಬೆಳೆಯುತ್ತಿರುವುದು ಅಮೆರಿಕವನ್ನು ತಲ್ಲಣಗೊಳಿಸುತ್ತಿರಬಹುದು. ತಾರಾ ಅವರು ಶಂಕಿಸಿರುವುದು ಇದನ್ನೇ.

ಯುಆರ್ ಕರೆನ್ಸಿಯಲ್ಲಿ ವಹಿವಾಟು ನಡೆಸುತ್ತಿರುವ ದೇಶಗಳು ಅಮೆರಿಕದ ಹಿಟ್​ಲಿಸ್ಟ್​ನಲ್ಲಿ ಇರಬಹುದಾ? ಬ್ರೆಜಿಲ್, ಅರ್ಜೆಂಟೀನಾ ಇಂಡೋನೇಷ್ಯಾ, ಮಯನ್ಮಾರ್, ಪಾಕಿಸ್ತಾನ ಮೊದಲಾದ ಕೆಲ ದೇಶಗಳು ಚೀನಾದೊಂದಿಗಿನ ವ್ಯವಹಾರವನ್ನು ಯುಆನ್​ನಲ್ಲಿ ಡೀಲ್ ಮಾಡುತ್ತವೆ. ಇವುಗಳಲ್ಲೊಂದು ದೇಶವು ಅಮೆರಿಕದ ಮುಂದಿನ ಟಾರ್ಗೆಟ್ ಆಗಬಹುದಾ?

ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಮತ್ತೆ ಕಣಕ್ಕಿಳಿಯುವುದು ಯಾವಾಗ?

ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಗೆದ್ದಿರುವ ಟೀಂ ಇಂಡಿಯಾ (Team India) ಹಲವು ದಾಖಲೆಗಳೊಂದಿಗೆ ಚುಟುಕು ಸಮರಕ್ಕೆ ವಿದಾಯ ಹೇಳಿದೆ. ಕಳೆದೊಂದು ತಿಂಗಳಿಂದ ಟಿ20 ವಿಶ್ವಕಪ್​ನಲ್ಲಿ ಭಾಗವಹಿಸಿದ್ದ ಟೀಂ ಇಂಡಿಯಾ ಇದೀಗ ವಿಶ್ರಾಂತಿ ಜಾರಿದೆ. ಅಹಮದಾಬಾದ್‌ನಲ್ಲಿ ಫೈನಲ್ ಪಂದ್ಯವನ್ನು ಮುಗಿಸಿ ತಂಡದೊಂದಿಗೆ ಸಂಭ್ರಮಾಚರಣೆಯಲ್ಲಿ ತೊಡಗಿದ ಆಟಗಾರರು ಇದೀಗ ತಮ್ಮ ತಮ್ಮ ಮನೆಗಳತ್ತ ಮುಖಮಾಡಿದ್ದಾರೆ. ಟಿ20 ವಿಶ್ವಕಪ್​ ಗೆದ್ದ ಖುಷಿಯನ್ನು ಇನ್ನು ಕೆಲವು ದಿನ ಆಚರಿಸಲಿದ್ದಾರೆ. ಇದು ಟೀಂ ಇಂಡಿಯಾ ಆಟಗಾರರ ಕಥೆಯಾದರೆ, ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸದೊಂದು ಪ್ರಶ್ನೆ ಮೂಡಿದೆ. ಅದೆನೇಂದರೆ ಟೀಂ ಇಂಡಿಯಾ ಮತ್ತೆ ಅಖಾಡಕ್ಕಿಳಿಯುವುದು ಯಾವಾಗ ಎಂಬುದು?

ಟೀಂ ಇಂಡಿಯಾಗೆ 96 ದಿನಗಳ ವಿಶ್ರಾಂತಿ

ಟಿ20 ವಿಶ್ವಕಪ್ ಗೆದ್ದುಕೊಂಡಿರುವ ಟೀಂ ಇಂಡಿಯಾ 96 ದಿನಗಳ ಕಾಲ ಕ್ರಿಕೆಟ್‌ನಿಂದ ದೂರವಿರಲಿದೆ. ಆ ಬಳಿಕ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿ ಆಡಲಿದೆ. ಜೂನ್ 6 ರಂದು ನ್ಯೂ ಚಂಡೀಗಢದಲ್ಲಿ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಇದರ ನಂತರ ಟೀಂ ಇಂಡಿಯಾ, ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಆಡಲಿದ್ದಾರೆ. ಈ ಸರಣಿಗೂ ಮೊದಲು ಭಾರತೀಯ ತಂಡವನ್ನು ನೋಡಲಾಗುವುದಿಲ್ಲವಾದರೂ, ಟೀಂ ಇಂಡಿಯಾ ಆಟಗಾರರು ಖಂಡಿತವಾಗಿಯೂ ಮೈದಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾರ್ಚ್ 28 ರಿಂದ ಪ್ರಾರಂಭವಾಗುವ ಐಪಿಎಲ್‌ನಲ್ಲಿ ಭಾರತೀಯ ಆಟಗಾರರು ತಮ್ಮ ತಮ್ಮ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಈ ಪಂದ್ಯಾವಳಿಯ ಫೈನಲ್ ಪಂದ್ಯವು ಮೇ 31 ರಂದು ನಡೆಯಲಿದೆ.

ಟಿ20 ವಿಶ್ವಕಪ್ ಗೆದ್ದು ನಿವೃತ್ತಿಯ ಬಗ್ಗೆ ಮೌನ ಮುರಿದ ಸೂರ್ಯಕುಮಾರ್ ಯಾದವ್

2026 ರಲ್ಲಿ ಟೀಂ ಇಂಡಿಯಾ ವೇಳಾಪಟ್ಟಿ

  • ಅಫ್ಘಾನಿಸ್ತಾನ ವಿರುದ್ಧದ ಸರಣಿಯ ನಂತರ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ.
  • ಜುಲೈನಲ್ಲಿ ನಡೆಯಲಿರುವ ಈ ಪ್ರವಾಸದಲ್ಲಿ 5 ಟಿ20 ಮತ್ತು 3 ಏಕದಿನ ಪಂದ್ಯಗಳು ನಡೆಯಲಿವೆ.
  • ಆಗಸ್ಟ್‌ನಲ್ಲಿ ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
  • ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.
  • ಅಕ್ಟೋಬರ್-ನವೆಂಬರ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ 2 ಟೆಸ್ಟ್, 3 ಏಕದಿನ ಮತ್ತು 5 ಟಿ20 ಪಂದ್ಯಗಳನ್ನು ಆಡಲಿದೆ.
  • ಶ್ರೀಲಂಕಾ ತಂಡ ಡಿಸೆಂಬರ್‌ನಲ್ಲಿ ಭಾರತಕ್ಕೆ ಬರಲಿದ್ದು, ಇದರಲ್ಲಿ 3 ಏಕದಿನ ಪಂದ್ಯಗಳು ಮತ್ತು 3 ಟಿ20 ಪಂದ್ಯಗಳನ್ನು ಆಡಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರಿನಲ್ಲಿ ಘೋರ ದುರಂತ: ದಂಪತಿಯನ್ನು ಬಲಿಪಡೆದ ಕನಸಿನ ಮನೆ!

ರಾಯಚೂರು, (ಮಾರ್ಚ್ 09): ಕನಸಿನ ಮನೆಯಲ್ಲೇ ದಂಪತಿ (Couple) ದುರಂತ ಸಾವು ಕಂಡಿರುವ ಘಟನೆ ರಾಯಚೂರಿನ (Raichur) ಲಿಂಗಸುಗೂರು ತಾಲೂಕಿನ ಯಲಗಟ್ಟ ಗ್ರಾಮದಲ್ಲಿ ನಡೆದಿದೆ. ಹೌದು…ನಿರ್ಮಾಣ ಹಂತದ ಮನೆಯ ಮೆಟ್ಟಿಲು ಕುಸಿದು ಗಂಡ ಹೆಂಡತಿ ದುರಂತ ಸಾವುಕಂಡಿದ್ದಾರೆ. ದ್ಯಾವಪ್ಪ ಸುಗೂರು(35), ಶಿವಮ್ಮ(33) ಮೃತ ದಂಪತಿ. ತಮಗೊಂದು ಸೂರು ಬೇಕೆಂದು ಈ ದಂಪತಿ ಕನಸು ಕಂಡಿದ್ದು, ಅದರಂತೆ ಮನೆ ನಿರ್ಮಿಸಲು ಹಗಲಿರುಳು ಪರಿಶ್ರಮಿಸುತ್ತಿದ್ದ ಈ ಜೋಡಿ ಮೇಲೆ ಮೆಟ್ಟಿಲು ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ಸಾವನ್ನಪ್ಪಿದೆ.

ದ್ಯಾವಪ್ಪ ಹಾಗೂ ಶಿವಮ್ಮ ದಂಪತಿ ಮನೆ ಕಟ್ಟುವ ಕನಸು ಕಂಡಿದ್ದು, ಅದರಂತೆ ಹಣ ಹೊಂದಿಸಿ ಮನೆ ನಿರ್ಮಾಣ ಮಾಡಲು ಶುರು ಮಾಡಿದ್ದರು. ಸ್ವತಃ ತಾವೇ ಮನೆ ನಿರ್ಮಿಸಿಕೊಳ್ಳುತ್ತಿದ್ದು, ಅರ್ಧ ಮನೆ ಸಹ ಕಟ್ಟಲಾಗಿತ್ತು. ಆದರೆ, ಇಂದು (ಮಾರ್ಚ್ 09) ಮನೆ ಗೋಡೆ ಪ್ಲಾಸ್ಟರಿಂಗ್ ಮಾಡುತ್ತಿದ್ದ ವೇಳೆ ದಂಪತಿ ಮೇಲೆ ಏಕಾಏಕಿ ಮೆಟ್ಟಿಲುಗಳ ಪಿಲ್ಲರ್ ಕುಸಿದು ಬಿದ್ದಿದೆ. ಪರಿಣಾಮ ಅವಶೇಷಗಳಡಿ ಸಿಲುಕಿ ದಂಪತಿ ದ್ಯಾವಪ್ಪ, ಶಿವಮ್ಮ ಕನಸಿನ ಮನೆಯಲ್ಲೇ ದುರಂತ ಅಂತ್ಯಕಂಡಿದ್ದಾರೆ.

ಇದನ್ನೂ ಓದಿ: ಮಗುವಿನ ಕತ್ತು ಹಿಸುಕಿ ದಂಪತಿ ಆತ್ಮಹತ್ಯೆ: ಪವಾಡಸದೃಶ ರೀತಿಯಲ್ಲಿ ಬದುಕುಳಿದ 2 ವರ್ಷ ಪಾಪು

ಮಾಹಿತಿ ತಿಳಿದು ಸ್ಥಳಕ್ಕೆ ಹಟ್ಟಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ದಂಪತಿಯ ಮೃತದೇಹವನ್ನು ಲಿಂಗಸೂಗೂರು ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಬಗ್ಗೆ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಬೇಗನೆ ವಯಸ್ಸಾದವರಂತೆ ಕಾಣಲು ಈ ಅಭ್ಯಾಸಗಳೇ ಬಹು ಮುಖ್ಯ ಕಾರಣ ಎನ್ನುತ್ತಾರೆ ಚಾಣಕ್ಯ

ಪ್ರತಿಯೊಬ್ಬರಿಗೂ ಸಹ ವಯಸ್ಸಾಗುತ್ತದೆ ನಿಜ, ಆದ್ರೆ ಕೆಲವೊಬ್ಬರೂ ಮಾತ್ರ ತಮ್ಮ ಸಣ್ಣ ವಯಸ್ಸಿನಲ್ಲಿಯೇ ವಯಸ್ಸಾದ ವ್ಯಕ್ತಿಗಳಂತೆ ಕಾಣುತ್ತಾರೆ. ಹೌದು 25, 30 ವರ್ಷ ಆಗಿದ್ರೂ ಅವರು ಮಾತ್ರ 40 ರ ಹರೆಯದವರಂತೆ ಕಾಣಿಸುತ್ತಾರೆ. ಈ ಅಕಾಲಿಕ ವಯಸ್ಸಾಗುವಿಕೆಗೆ (premature aging) ವ್ಯಕ್ತಿಯ ಕೆಲವೊಂದು ಕೆಟ್ಟ ಅಭ್ಯಾಸಗಳೇ ಮುಖ್ಯ ಕಾರಣ ಎಂದು ಎಚ್ಚರಿಸಿದ್ದಾರೆ ಆಚಾರ್ಯ ಚಾಣಕ್ಯ. ಈ ಅಭ್ಯಾಸಗಳನ್ನು ತ್ಯಜಿಸುವ ಮೂಲಕ ಖಂಡಿತವಾಗಿಯೂ ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಯಬಹುದು ಎಂದಿದ್ದಾರೆ. ಚಾಣಕ್ಯರು ಹೇಳಿರುವಂತೆ ಯಾವ ಅಭ್ಯಾಸಗಳಿಂದ ವ್ಯಕ್ತಿ ಬಹು ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ ಎಂಬುದನ್ನು ನೋಡೋಣ ಬನ್ನಿ.

ಈ ಅಭ್ಯಾಸಗಳೇ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ:

ಅತಿಯಾದ ಪ್ರಯಾಣ: ಚಾಣಕ್ಯ ನೀತಿಯ ಪ್ರಕಾರ, ಹೆಚ್ಚು ಪ್ರಯಾಣಿಸುವ ವ್ಯಕ್ತಿಯು ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ. ಸರಿಯಾದ ದಿನಚರಿಯ ಕೊರತೆಯೇ ಇದಕ್ಕೆ ಮುಖ್ಯ ಕಾರಣ ಎಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ. ಪ್ರಯಾಣದ ಸಮಯದಲ್ಲಿ, ವ್ಯಕ್ತಿಯ ಜೀವನಶೈಲ್ಲಿ ಏರುಪೇರುಗಳಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ದೇಹವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಇದರಿಂದಾಗಿ ಆ ವ್ಯಕ್ತಿಯು ವಯಸ್ಸಾದವನಂತೆ ಕಾಣಿಸುತ್ತಾನೆ.

 ಬಂಧನ ಅಥವಾ ಯಾವಾಗಲೂ ಕೋಣೆಯೊಳಗೆಯೇ ಇರುವುದು: ಜೈಲಿನಲ್ಲಿ ವಾಸಿಸುವ ವ್ಯಕ್ತಿ ಬೇಗನೆ ವಯಸ್ಸಾದವನಂತೆ ಕಾಣಿಸುತ್ತಾನೆ. ಬಂಧನದಲ್ಲಿ ವಾಸಿಸುವುದರಿಂದ ಅಥವಾ ಒಬ್ಬ ವ್ಯಕ್ತಿ ಯಾವಾಗಲೂ ಬಂಧನದಲ್ಲಿರುವಂತೆ  ಮನೆಯೊಳಗೆಯೇ ಇರುವುದರಿಂದ ಆತನಿಗೆ ತನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ಬಹಿರಂಗವಾಗಿ ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಇದು ಕೂಡ ಅಕಾಲಿಕ ವಯಸ್ಸಾಗುವಿಕೆಗೆ ಕಾರಣ ಎಂದಿದ್ದಾರೆ ಚಾಣಕ್ಯ.

ನಕಾರಾತ್ಮಕತೆ: ಚಾಣಕ್ಯ ನೀತಿಯ ಪ್ರಕಾರ, ಯಾವಾಗಲೂ ನಕಾರಾತ್ಮಕವಾಗಿ ಯೋಚಿಸುವ ಜನರು ಬೇಗನೆ ವಯಸ್ಸಾದವರಂತೆ ಕಾಣಿಸುತ್ತಾರೆ. ಏಕೆಂದರೆ ಅಂತಹ ಜನರು ಜೀವನವನ್ನು ಪೂರ್ಣವಾಗಿ ಬದುಕುವ ಬದಲು ಎಲ್ಲದರಲ್ಲೂ ನಕಾರಾತ್ಮಕತೆಯನ್ನು ಹುಡುಕುತ್ತಾರೆ. ಇದರಿಂದಾಗಿ ಅವರು ಸಂತೋಷವಾಗಿ ಜೀವನ ನಡೆಸಲೂ ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:  ಜೀವನದಲ್ಲಿ ವಿಚಾರಗಳು ಎಂದಿಗೂ ಅತಿಯಾಗಬಾರದು ಎನ್ನುತ್ತಾರೆ ಚಾಣಕ್ಯ

ವ್ಯಸನಗಳು: ವ್ಯಸನಗಳು ನಿಮ್ಮ ಜೀವನವನ್ನು ಹಾಳುಮಾಡುತ್ತವೆ. ಮಾದಕ ದ್ರವ್ಯ ಸೇವನೆ, ಜೂಜಾಟ ಮತ್ತು ಅನೈತಿಕ ಸಂಬಂಧಗಳು ನಮ್ಮನ್ನು ಹಾಳುಮಾಡುತ್ತವೆ. ಇವು ನಿಮ್ಮಲ್ಲಿದ್ದರೆ, ಅವುಗಳನ್ನು ಬಿಟ್ಟುಬಿಡಿ. ಇಲ್ಲದಿದ್ದರೆ, ನಿಮ್ಮ ಎಲ್ಲಾ ಗೌರವವು ಒಂದು ಕ್ಷಣದಲ್ಲಿ ಕಳೆದುಹೋಗುತ್ತದೆ. ಪರಿಣಾಮವಾಗಿ ಉಂಟಾಗುವ ಖಿನ್ನತೆಯು ಅಕಾಲಿಕ ವಯಸ್ಸಾಗುವಿಕೆಗೆ ಕಾರಣವಾಗುತ್ತದೆ.

ಚಿಂತೆ:  ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ ಹಿಂದೆ ನಡೆದ ಘಟನೆಗಳಿಗೆ  ನಾವು ಎಂದಿಗೂ ವಿಷಾದಿಸಬಾರದು ಮತ್ತು ಭವಿಷ್ಯದ ಬಗ್ಗೆ ಚಿಂತಿಸಬಾರದು. ಯಾವಾಗಲೂ ವರ್ತಮಾನದಲ್ಲಿ ಬದುಕಬೇಕು. ನೀವು ನಿಮ್ಮ ಜೀವನವನ್ನು ಸಂತೋಷದಿಂದ ಬದುಕಲು ಬಯಸಿದರೆ, ಯಾವಾಗಲೂ ವರ್ತಮಾನದಲ್ಲಿ ಜೀವಿಸಬೇಕು. ಹಿಂದೆ ಆದ ಘಟನೆಗಳ ಬಗ್ಗೆ ಚಿಂತಿಸುತ್ತಾ ಕುಳಿತರೆ ಜೀವನದಲ್ಲಿ ನೆಮ್ಮದಿಯೂ ಇರೋದಿಲ್ಲ, ಇದು ಅಕಾಲಿಕ ವಯಸ್ಸಾಗುವಿಕೆಗೂ ಕಾರಣವಾಗುತ್ತದೆ ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಣಬೀರ್, ಸಾಯಿ ಪಲ್ಲವಿ ‘ರಾಮಾಯಣ’ ಫೋಟೋ ಫೇಕ್; ಅಸಲಿ ವಿಷಯ ಬಿಚ್ಚಿಟ್ಟ ನಟ

ಬಹುನಿರೀಕ್ಷಿತ ‘ರಾಮಾಯಣ’ (Ramayana) ಸಿನಿಮಾದ ಶೂಟಿಂಗ್ ಸೆಟ್‌ನಿಂದ ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ (Sai Pallavi) ಅವರ ಫೋಟೋಗಳು ಸೋರಿಕೆಯಾಗಿವೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಈ ಫೋಟೋಗಳು ಅಸಲಿಯಲ್ಲ, ಬದಲಾಗಿ ಇವು ಕೃತಕ ಬುದ್ಧಿಮತ್ತೆ (AI) ಬಳಸಿ ಸೃಷ್ಟಿಸಿದ ನಕಲಿ ಚಿತ್ರಗಳು ಎಂಬುದು ಈಗ ದೃಢಪಟ್ಟಿದೆ. ಈ ಮೊದಲು ಶೂಟಿಂಗ್ ಸೆಟ್​​ನಿಂದ ನಿಜವಾಗಿಯೂ ಒಂದು ಫೋಟೋ ಲೀಕ್ ಆಗಿತ್ತು. ಆದರೆ ಈ ಬಾರಿ ವೈರಲ್ ಆಗಿರುವ ಫೋಟೋ ನಿಜವಲ್ಲ ಎಂದು ನಟ ಆಶಿಶ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ರಾಜಪೋಷಾಕಿನಲ್ಲಿ ಮಿಂಚುತ್ತಿರುವ ಕೆಲವು ಫೋಟೋಗಳು ಹರಿದಾಡಿದ್ದವು. ಇದು ಸಿನಿಮಾದಲ್ಲಿ ಬರುವ ವಿವಾಹದ ದೃಶ್ಯದ ಫೋಟೋಗಳು ಎಂದು ಹಲವರು ನಂಬಿದ್ದರು. ಆದರೆ, ಫೋಟೋಗಳ ಉತ್ತಮ ಗುಣಮಟ್ಟವನ್ನು ಕಂಡು ಅನೇಕರು ಅನುಮಾನ ವ್ಯಕ್ತಪಡಿಸಿದ್ದರು. ಲೀಕ್ ಆದ ಫೋಟೋ ಇಷ್ಟು ಕ್ಲಿಯರ್ ಆಗಿರಲ್ಲ ಎಂದು ಕಮೆಂಟ್ ಮಾಡಿದರು.

ಈ ಗೊಂದಲಕ್ಕೆ ತೆರೆ ಎಳೆದವರು ಖ್ಯಾತ ಟಿವಿ ನಟ ಆಶಿಶ್ ಶರ್ಮಾ. 2015-16ರಲ್ಲಿ ಸ್ಟಾರ್ ಪ್ಲಸ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸೀತಾ ಕೆ ರಾಮ್’ ಧಾರಾವಾಹಿಯಲ್ಲಿ ಶ್ರೀರಾಮನ ಪಾತ್ರ ಮಾಡಿದ್ದ ಆಶಿಶ್ ಅವರು ವೈರಲ್ ಆಗಿರುವ ಫೋಟೋಗಳು ತಮ್ಮ ಹಳೆಯ ಧಾರಾವಾಹಿಯ ದೃಶ್ಯಗಳೇ ಎಂದು ಸ್ಪಷ್ಟಪಡಿಸಿದ್ದಾರೆ. ‘ಇಲ್ಲಿದೆ ನೋಡಿ ಮತ್ತೊಂದು ಒರಿಜಿನಲ್ ಲೀಕ್ಡ್ ಫೋಟೋ. ಎಐ ತಂತ್ರಜ್ಞಾನಕ್ಕೆ ನನ್ನ ಕೂದಲನ್ನು ಬದಲಾಯಿಸಲು ಸಾಧ್ಯವಾಗಿಲ್ಲ’ ಎಂದು ಆಶಿಶ್ ವ್ಯಂಗ್ಯವಾಗಿ ಟ್ವೀಟ್ ಮಾಡುವ ಮೂಲಕ, ತಮ್ಮ ಮುಖಕ್ಕೆ ರಣಬೀರ್ ಮುಖವನ್ನು ಫೇಸ್-ಸ್ವಾಪ್ ಮಾಡಿರುವುದನ್ನು ಸಾಕ್ಷಿ ಸಮೇತ ತೋರಿಸಿದ್ದಾರೆ.

‘ರಾಮಾಯಣ’ ಸಿನಿಮಾಗೆ ನಿತೇಶ್ ತಿವಾರಿ ಅವರು ನಿರ್ದೇಶನ ಮಾಡುತ್ತಿದ್ದಾರೆ. ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ರಾಕಿಂಗ್ ಸ್ಟಾರ್ ಯಶ್ (ರಾವಣ), ಸನ್ನಿ ಡಿಯೋಲ್ (ಹನುಮಂತ) ಅವರು ಪ್ರಮುಖ ಪಾತ್ರಗಳನ್ನು ಮಾಡುತ್ತಿದ್ದಾರೆ. ಇದು ಭಾರತದ ಅತ್ಯಂತ ದುಬಾರಿ ಸಿನಿಮಾ ಎಂದು ಹೇಳಲಾಗುತ್ತಿದೆ. ಆಸ್ಕರ್ ಪ್ರಶಸ್ತಿ ವಿಜೇತ ‘ಪ್ರೈಮ್ ಫೋಕಸ್’ ಸಂಸ್ಥೆಯು ಇದರ ವಿಎಫ್‌ಎಕ್ಸ್ ಜವಾಬ್ದಾರಿ ಹೊತ್ತಿದೆ.

ಇದನ್ನೂ ಓದಿ: ಯಶ್ ನಟನೆಯ ‘ರಾಮಾಯಣ’ ಸಿನಿಮಾಗೆ ಹಾಲಿವುಡ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಸಾಥ್?

ಈ ಸಿನಿಮಾ ಎರಡು ಪಾರ್ಟ್​​ಗಳಲ್ಲಿ ಬಿಡುಗಡೆ ಆಗಲಿದೆ. ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತೆರೆಕಾಣುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಲೀಕ್ ಆಗಿರುವ ಫೋಟೋಗಳನ್ನು ನೋಡಿ ಸಂಭ್ರಮಿಸಿದ್ದ ಅಭಿಮಾನಿಗಳಿಗೆ ಇದು ಕೇವಲ ಫ್ಯಾನ್-ಮೇಡ್ ಎಡಿಟ್ ಎಂಬ ವಿಷಯ ಸ್ವಲ್ಪ ನಿರಾಸೆ ಮೂಡಿಸಿದೆ. ಚಿತ್ರತಂಡ ಅಧಿಕೃತವಾಗಿ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಜ್ಜಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೋರಿ, ಶೆಡ್​, ಸೆಲೆಬ್ರಿಟಿ, ರಾಜಕೀಯ ; ‘ಬಾಸ್’ ಸಿನಿಮಾದಲ್ಲಿ ದರ್ಶನ್ ಕಥೆ?

ಯಾವುದಾದರೂ ಒಂದು ಸೆನ್ಸೇಷನ್ ಘಟನೆ ನಡೆಯಿತು ಎಂದರೆ ಅದನ್ನು ಆಧರಿಸಿ ಸಿನಿಮಾ ಮಾಡಲು ಎಲ್ಲರೂ ಮುಂದಾಗುತ್ತಾರೆ. ಸಿನಿಮಾ ಘೋಷಣೆ ಕೂಡ ಮಾಡುತ್ತಾರೆ. ಆದರೆ, ನೈಜ ಘಟನೆ ಆಧಾರಿತ ಸಿನಿಮಾ ಆಗಿರುವುದರಿಂದ ಅದಕ್ಕೆ ಎದುರಾಗುವ ಅಡೆತಡೆಗಳು ಹಲವು. ಈಗ ರೇಣುಕಾಸ್ವಾಮಿ ಕೊಲೆ ಕೇಸ್​​​ನ ಆಧರಿಸಿ ಸಿನಿಮಾ ಸಿದ್ಧವಾಯಿತೇ ಎನ್ನುವ ಪ್ರಶ್ನೆ ಮೂಡಿದೆ. ಈ ರೀತಿ ಸಿದ್ಧವಾದ ಚಿತ್ರಕ್ಕೆ ‘ಬಾಸ್’ (Boss Movie) ಎಂಬ ಟೈಟಲ್ ಇಟ್ಟಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

‘ನೈಜ ಘಟನೆಯಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಲಾಗಿದೆ’ ಎಂದ ಸಾಲುಗಳ ಮೂಲಕ ‘ಬಾಸ್’ ಟೀಸರ್ ಆರಂಭ ಆಗುತ್ತದೆ. ‘ನನ್ನ ಹೆಂಡ್ತಿ ಪ್ರೆಗ್ನೆಂಟ್, ನನ್ನ ಬಿಟ್ಬಿಡಿ’ ಎಂದು ಪುರಷನೋರ್ವ ಬೇಡಿಕೊಳ್ಳುತ್ತಾನೆ. ಆದರೆ, ಆತನ ಸಾಯಿಸಲಾಗುತ್ತದೆ. ನಂತರ ಮೋರಿ ಪಕ್ಕ ಹೆಣ ಸಿಕ್ಕಿದೆ ಎಂದು ಪೊಲೀಸರು ವಾಕಿ ಟಾಕಿಯಲ್ಲಿ ಮಾತನಾಡೋದು ಕೇಳಿಸುತ್ತದೆ. ಈ ಪ್ರಕರಣದಲ್ಲಿ ಸೆಲೆಬ್ರಿಟಿ ಒಬ್ಬನ ಬಂಧನ ಕೂಡ ಆಗುತ್ತದೆ. ಆತ ತಾನು ಮುಗ್ಧ ಎಂದು ಹೇಳುತ್ತಾನೆ. ಹೀರೋನ ರಾಜಕೀಯ ಎಂಟ್ರಿ ಬಗ್ಗೆಯೂ ಚರ್ಚೆ ನಡೆಯುತ್ತದೆ.

ಟೀಸರ್ ನೋಡಿದ ಪ್ರತಿಯೊಬ್ಬನಿಗೂ ರೇಣುಕಾ ಸ್ವಾಮಿ ಕೊಲೆ ಪ್ರಕರಣ ನೆನಪಿಗೆ ಬರುತ್ತದೆ. ಈ ಪ್ರಕರಣವನ್ನೇ ಆಧರಿಸಿ ಸಿನಿಮಾ ಮಡಾಲಾಯಿತೇ ಎಂಬ ಪ್ರಶ್ನೆ ಮೂಡಿದೆ. ‘ಸಮಾಜದಲ್ಲಿ ನಡೆದ ಅನೇಕ ಘಟನೆಗಳನ್ನ ಪ್ರೇರಣೆ ಆಗಿ ತೆಗೆದುಕೊಂಡು ಕಾಲ್ಪನಿಕವಾಗಿ ಈ ಸಿನಿಮಾ ಮಾಡಿದ್ದೇನೆ. 2024 ಹಾಗೂ 2025ರ ನಡುವೆ ನಡೆದ ಘಟನೆಗಳನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಒಬ್ಬ ಸೆಲೆಬ್ರಿಟಿ ಕೊಲೆ ಮಾಡಿದ ಮೇಲೆ ರಾಜಕೀಯಕ್ಕೆ ಹೇಗೆ ಬಲಿ ಆಗ್ತಾರೆ ಅನ್ನೋದೇ ಕಥೆ’ ಎಂದು ನಿರ್ದೇಶಕ ಸಿನಿಮಾದ ನಿರ್ದೇಶಕ ಲವ ಹೇಳಿದ್ದಾರೆ. ತನುಷ್ ಶಿವಣ್ಣ ಅವರು ಚಿತ್ರದಲ್ಲಿ ಸೆಲೆಬ್ರಿಟಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ತನಿಖಾಧಿಕಾರಿಗಳಿಂದ ನಡೆದಿದೆ ದೊಡ್ಡ ಎಡವಟ್ಟು?

ಸದ್ಯ ರೇಣುಕಾಸ್ವಾಮಿ ಪ್ರಕರಣ ಕೋರ್ಟ್​​​ನಲ್ಲಿದೆ. ಹೀಗಿರುವಾಗಲೇ ಅದೇ ಪ್ರಕರಣ ಹೋಲುವಂತೆ ಸಿನಿಮಾ ಮಾಡೋದು ಚರ್ಚೆಗೆ ಗ್ರಾಸವಾಗಿದೆ. ಈ ಚಿತ್ರಕ್ಕೆ ಅಡ್ಡಿಆತಂಕಗಳು ಕೂಡ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರೇಯಸಿಯೊಂದಿಗೆ ಸ್ಟೇಜ್ ಮೇಲೆ ಮಲಗಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್

ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಪ್ರಸ್ತುತ ಟೀಂ ಇಂಡಿಯಾದ ಲವರ್ ಬಾಯ್ ಎಂದರೆ ತಪ್ಪಾಗಲಾರದು. ಮಗು ಮಾಡಿಕೊಂಡ ಬಳಿಕ ನತಾಶಾ ಜೊತೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಹಾರ್ದಿಕ್ ಪಾಂಡ್ಯ, ಆ ಬಳಿಕ ವಿಚ್ಛೇದನ ಪಡೆದಿದ್ದರು. ನಂತರ ಕೆಲವೇ ದಿನಗಳಲ್ಲಿ ಹೊಸ ಪ್ರೇಯಸಿಯನ್ನು ಹುಡುಕಿಕೊಂಡಿದ್ದ ಪಾಂಡ್ಯ, ಅವರೊಂದಿಗೆ ಹೊಸಜೀವನ ನಡೆಸಲು ಶುರು ಮಾಡಿದ್ದರು. ಆದಾಗ್ಯೂ ಪಾಂಡ್ಯ, ಹೊಸ ಪ್ರೇಯಸಿ ಮಹಿಕಾ ಶರ್ಮಾ ಅವರ ಬಗ್ಗೆ ಇದುವರೆಗೆ ಏನನ್ನು ಹೇಳಿರಲಿಲ್ಲ. ಆದರೆ ವಿಶ್ವಕಪ್ ಫೈನಲ್‌ನಲ್ಲಿ ಪಾಂಡ್ಯ, ಅಧಿಕೃತವಾಗಿ ಮಹಿಕಾ ನನ್ನ ಮಡದಿ ಎಂಬುದನ್ನು ಬಹಿರಂಗಪಡಿಸಿದರು.

ಇದೆಲ್ಲದರ ನಡುವೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಇದರಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆದ ಬಳಿಕ ಪ್ರಶಸ್ತಿ ಪ್ರಸ್ತುತಿಗಾಗಿ ಹಾಕಲಾಗಿದ್ದ ಸ್ಟೇಜ್ ಮೇಲೆಯೇ ಹಾರ್ದಿಕ್ ಪಾಂಡ್ಯ ಹಾಗೂ ಮಹಿಕಾ ಮಲಗಿದ್ದರು. 12 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಹಾರ್ದಿಕ್ ಹಾಗೂ ಮಹಿಕಾ ಸ್ಟೇಜ್ ಮೇಲೆಯೇ ಮಲಗಿ ಮಾತನಾಡುವುದನ್ನು ಕಾಣಬಹುದು.

ಇದಕ್ಕೂ ಮೊದಲು ಟೀಂ ಇಂಡಿಯಾ ಗೆಲುವು ಸಾಧಿಸುತ್ತಿದ್ದಂತೆ ಮೈದಾನಕ್ಕೆ ಓಡೋಡಿ ಬಂದಿದ್ದ ಮಹಿಕಾ, ಹಾರ್ದಿಕ್​ರನ್ನು ಬಿಗಿದಪ್ಪಿ ಅವರ ಕೆನ್ನೆಗೆ ಸಿಹಿ ಮುತ್ತು ನೀಡಿದರು. ಇಬ್ಬರೂ ತ್ರಿವಣ ಧ್ವಜಗಳನ್ನು ಸುತ್ತಿಕೊಂಡು ಒಟ್ಟಿಗೆ ನೃತ್ಯ ಮಾಡಿದರು. ಪಂದ್ಯದ ನಂತರ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಹಾರ್ದಿಕ್, ‘ಮಹಿಕಾ ನನ್ನ ಪಾಲಿನ ಅದೃಷ್ಟ. ಅವರು ತಮ್ಮ ಜೀವನದಲ್ಲಿ ಬಂದಾಗಿನಿಂದ, ನನಗೆ ಎಲ್ಲವೂ ಒಳ್ಳೇಯದ್ದೆ ಆಗಿದೆ. ನನ್ನ ಯಶಸ್ಸು ಮುಂದುವರೆದಿದೆ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link